ಡಾ. ಗದ್ದಗಿಮಠ ಅವರು ಹಲವಾರು ಅನುಭವಪೂರ್ಣ ವಿಮರ್ಶಾತ್ಮಕ ಈ ಲೇಖನಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕೆಲವು ಲೇಖನಗಳನ್ನು ಮಾತ್ರ ಸಂಗ್ರಹಿಸಿ ಮೈಸೂರು ವಿಶ್ವವಿದ್ಯಾಲಯ ಸಮಗ್ರ ಲೇಖನಗಳ ಸಂಪುಟವನ್ನು ಪ್ರಕಟಿಸಿದ್ದು ಒಬ್ಬ ಧೀಮಂತ ಸಾಹಿತಿಗಳಿಗೆ ಕೊಡಬೇಕಾಗಿರುವ ಗೌರವಸೂಚನೆಯ ದ್ಯೋತಕವಾಗಿರುತ್ತದೆ. ಇಂತಹ ಕಾರ್ಯ ನಿಜವಾಗಿಯೂ ಸ್ತುತ್ಯಾರ್ಹವಾದುದು. ಅಲ್ಲದೆ ಇನ್ನೂ ಹಲವಾರು ಲೇಖನಗಳು ಅಪ್ರಕಟವಾಗಿಯೇ ಉಳಿದಿರುತ್ತವೆ. ಅವು ಈ ಕೆಳಗಿನಂತಿವೆ.

೧. ನತ್ತು ಮತ್ತು ಮೂಗುತಿ .

೨. ಜಾನಪದ ಭಾವಗೀತೆಗಳು.

೩. ಶಿಶುನಾಳ ಶರೀಫರು.

೪. ಬಾಡುಗಳ್ಳ ಬ್ರಾಹ್ಮಣರು.

೫. ಅಳಿದುಳಿದ ಪುಲಿಗೆರೆ-ಐತಿಹಾಸಿಕ ಲೇಖನ.

೬. ಕರ್ನಾಟಕ ಜನಪದ ಕಲೆ-ಕಲಾತ್ಮಕವಾದ ಲೇಖನ.

೭. ಕನ್ನಡ ಲಾಲಿ ಜೋಗಳಗಳು-ಸುಪ್ರಸಿದ್ಧ ಲೇಖನ.

೮. ಶಿರಿಯಾಳ ಚಂಗಳೆ-ಗಮನಾರ್ಹ ಲೇಖನ.

೯. ಕನ್ನಡ ಬಯಲಾಟ-ಅತ್ಯುತ್ತಮ ಲೇಖನ.

೧೦. ಅನುಭವ ಸಾಹಿತ್ಯ-ಆಧ್ಯಾತ್ಮಿಕ ಲೇಖನ.

೧೧. ಕನ್ನಡ ಹಾಡುಗಬ್ಬಗಳು- ಪ್ರಮುಖವಾದ ಲೇಖನ.

೧೨. ಮಲೆನಾಡಿನ ಹಾಡುಗಳು-ಮಹತ್ವದ ಲೇಖನ.

೧೩. ದುರಗಮುರಗಿಯವರು-ಅಪೂರ್ವ ಲೇಖನ.

೧೪.ಗೊಂದಲಿಗರು-ವಿಚಾರಪೂರ್ಣ ಲೇಖನ.

ಅಲ್ಲದೇ ಅನೇಕ ಬಿಡಿಹಾಡುಗಳನ್ನು ಸಂಗ್ರಹಸಿದ್ದಾರೆ. ಇವೆಲ್ಲವುಗಳು ಪ್ರಕಟಣೆಗಾಗಿ ಸಿದ್ಧಗೊಂಡಿರುತ್ತವೆ. ಉದಾರಭಾವವುಳ್ಳವರಾದ ಪ್ರಕಟಣೆಕಾರರು ಇವುಗಳನ್ನು ಸಾಹಿತ್ಯಭಿಮಾನದಿಂದ ಕೈಗೆತ್ತಿಕೊಂಡು ಪ್ರಕಟಣೆಗೈದು ಅಳಿದು ಹೋಗದಂತೆ ಶಾಶ್ವತವಾಗಿ ಉಳಿಯುವಂತೆ ಮಾಡಬೇಕಾಗಿರುವುದು ಅತ್ಯವಶ್ಯ.

ಡಾ. ಗದ್ದಗಿಮಠ ಅವರು The Kayaka system of education ಎಂಬ ಲೇಖನವನ್ನು ಇಂಗ್ಲೀಷಿನಲ್ಲಿ ಬರೆದಿದ್ದಾರೆ. ಈ ಲೇಖನವು Studies in educAtion & culture in honour of Dr. D.C. Pawate Daimond Jublee celebration on 7the nov, 1959 ಪತ್ರಿಕೆಯಲ್ಲಿ ಪ್ರಕಟವಾಗಿದೆ. ಜಾನಪದ ಸಾಹಿತ್ಯಾವಲೋಕನ ಎಂಬ ಇನ್ನೊಂದು ಲೇಖನವು ೧೯೫೮ ಏಪ್ರಿಲ್‌೨೨ ರ ಸಂಯುಕ್ತ ಕರ್ನಾಟಕ ಪತ್ರಿಕೆಯ ರಜತ ಮಹೋತ್ಸವ ಸಂಚಿಕೆಯಲ್ಲಿ ಪ್ರಕಟವಾಗಿದೆ. ಅನುಭವ ಸಾಹಿತ್ಯ ಲೇಖನವು ಪ್ರಬುದ್ಧ ಕರ್ನಾಟಕ ಪತ್ರಿಕೆ (೪೨-೩) ಯಲ್ಲಿ ಪ್ರಕಟವಾಗಿದೆ. ಬದಾಮಿ ಗುಹೆಗಳ ಬಗ್ಗೆಯೂ ಲೇಖನ ಬರೆದಿದ್ದಾರೆ. ಕರ್ನಾಟಕದ ದುರಗ ಮುರಗಿಯವರು ಈ ಲೇಖನವು ಧಾರವಾಡದ ಜೀವನ ಶಿಕ್ಷಣ ಮಾಸಪತ್ರಿಕೆಯಲ್ಲಿ ಬೆಳಕು ಕಂಡಿದೆ. ಕನ್ನಡದ ಲಾಲಿಜೋಗುಳಗಳು ಲೇಖನವು ಕರ್ಮವೀರ ಪತ್ರಿಕೆಯ ೧೯೬೦ ರ ದೀಪಾವಳಿ ಸಂಚಿಕೆಯಲ್ಲಿ ಪ್ರಕಟವಾಗಿದೆ. ಹಂಪೆಯ ಹರೀಹರನ ಷಟ್ಪದಿಕಾವ್ಯ ಎಂಬ ಲೇಖನವು ಶರಣ ಸಾಹಿತ್ಯ ೨೧-೪ ಸಂಚಿಕೆಯಲ್ಲಿ ಮತ್ತು ಜಯಕರ್ನಾಟಕ ಪತ್ರಿಕೆಯ ೨೬-೮೦ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ಕರ್ನಾಟಕದ ಗೊಂದಲಿಗರು ಲೇಖನವು ಜಯಕರ್ನಾಟಕ ಪತ್ರಿಕೆಯ ೩೩-೯ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ಈ ಮೊದಲಾದ ಲೇಖನಗಳೊಂದಿಗೆ ಒಟ್ಟು ೬೩ ಕವನಗಳನ್ನು ಗದ್ದಗಿಮಠ ಅವರು ರಚಿಸಿದ್ದಾರೆ. ಈ ೬೩ ಕವನಗಳು ಕರ್ನಾಟಕ ವಿಶ್ವವಿದ್ಯಾಲಯದ ಮೆನುಸ್ಕ್ರಿಪ್ಟ ೧೧೪೭ ಪುಟಸಂಖ್ಯೆ ೨೦೦೪ ಎಕ್ಸರ್ ಸೈಜ್‌ನಲ್ಲಿರುತ್ತವೆ.