ದಾಸನೆಂದೆನಿಸೊ ಎನ್ನ ಈಶ ಸರ್ವೇಶ
ಕೈಲಾಸವಾಸ ಘಾಸಿ ಪಡಿಸಬೇಡೆನ್ನಾ || ದಾಸ ||

ಲೇಸು ಸುಖವ ಕಾಣೇ ಇನ್ನು ಈ ಧರೆಯೊಳು
ವಾಸುದೇವನೆ ರಂಗಾ ಪೋಸಿಸೋ ಮೋಹನಾಂಗ || ದಾಸ ||

ಈಶ ಪರರ ಸೇವೆಗೈದೆವು ಹೊಟ್ಟೆಗಾಗಿ
ಮನ್ನಿಸಿ ದಯ ಮಡೋ ಪರಮಾತ್ಮ ಶ್ರೀಹರಿಯೇ || ದಾಸ ||

ಮನುಷ್ಯ ಜನ್ಮವು ವ್ಯರ್ಥವಾಯಿತಲ್ಲೊ
ಮಾನ ಮಾನವರಿಗೆ ಕೈಮುಗಿದೆವೆಲ್ಲೋ || ದಾಸ ||

ದೀನ ನಾಥನೆ ನಿನ್ನ ಧ್ಯಾನವ
ಮಾಡದೆ ಶ್ವಾನನಂದದಿ
ಮನೆ ಮನೆಗಳ ತಿರುಗುತ್ತಾ || ದಾಸ ||

ಇನ್ನಾದರು ನಿನ್ನ ದಾಸರ ಸಂಘವಿಟ್ಟು ರಕ್ಷಿಸು
ಗುರುದೇವ ಕರಮುಗಿದು ಬೇಡುವೆವು || ದಾಸ ||