Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಲೋಕೇಶದಾಸ್

ನಾಲ್ಕು ದಶಕಗಳಿಂದ ಕಥಾಕೀರ್ತನ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಎಲ್.ಎಸ್.ಲೋಕೇಶ ದಾಸ್ (ಶ್ರೀಶ ವಿಠಲದಾಸರು) ಅವರು ಭದ್ರಗಿರಿ ಅಚ್ಯುತದಾಸರಲ್ಲಿ ಶಿಷ್ಯವೃತ್ತಿ ಮಾಡಿದವರು.
ಹರಿಕಥೆ ಪ್ರಚಾರ ಮಂಡಳಿಯ ಮೂಲಕ ನಾಡಿನಾದ್ಯಂತ ಕಥಾ ಕೀರ್ತನವನ್ನು ಪ್ರಚುರಗೊಳಿಸಿದ ಲೋಕೇಶದಾಸರು ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತಿನ ಪದಾಧಿಕಾರಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ.
ತಿರುಪತಿ ತಿರುಮಲ ದೇವಸ್ಥಾನದ ಧರ್ಮಪ್ರಚಾರ ಪರಿಷತ್ತಿನ ಗೌರವ ಕೀರ್ತನಕಾರನಾಗಿ ದುಡಿದಿರುವ ಲೋಕೇಶದಾಸರು ಆಕಾಶವಾಣಿ, ದೂರದರ್ಶನಗಳ ಮೂಲಕವೂ ಹರಿಕಥೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಲವು ವಿದ್ಯಾ ಸಂಸ್ಥೆಗಳಲ್ಲಿ ಕಥಾ ಕೀರ್ತನ ಗೌರವ ಉಪನ್ಯಾಸಕರಾಗಿಯೂ ಕೆಲಸ ಮಾಡುತ್ತಿರುವ ಲೋಕೇಶದಾಸರು ಕಥಾ ಕೀರ್ತನೆಯ ಪ್ರಚಾರ, ಕಲಿಕಾ ಕೇಂದ್ರಗಳ ಸ್ಥಾಪನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.