(ಕ್ರಿ. ಶ. ೧೮೬೮-೧೯೪೩) (ರಕ್ತದ ವರ್ಗೀಕರಣ)

ಕಾರ್ಲ್ ಲ್ಯಾಂಡ್ ಸ್ಟೀನರ್ ೧೮೬೮ರಲ್ಲಿ ವಿಯೆನ್ನಾದ ಯೆಹೂದಿ ಕುಟುಂಬವೊಂದರಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ ಈತ ತಾಯಿಯ ಪ್ರೇರಣೆಯಿಂದ ವೈದ್ಯಶಾಸ್ತ್ರದ ವ್ಯಾಸಂಗ ಮಾಡಿದರು. ವಿಯೆನ್ನಾ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಪಡೆದು ವೂರ್ಜಬರ್ಗ್, ಮ್ಯೂನಿಕ್ ಮತ್ತು ಜೂರಿಕ್ ಗಳಲ್ಲಿನ ಲ್ಯಾಬೊರೋಟರಿಗಳಲ್ಲಿ ಕಾರ್ಯ ಮಾಡುತ್ತ ತರಬೇತಿಯನ್ನು ಪಡೆದರು. ವಿಯೆನ್ನಾದ ಆರೋಗ್ಯ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗಲೇ ಅವರ ಗಮನ ರಕ್ತದ ಅಧ್ಯಯನದ ಮೇಲೆ ಕೇಂದ್ರೀಕರಣಗೊಂಡಿತು.

ಎಲ್ಲ ವ್ಯಕ್ತಿಗಳ ರಕ್ತದ ಬಣ್ಣ ಒಂದೇ ಆಗಿರುತ್ತದೆಯಾದರೂ ರಕ್ತದ ವರ್ಗೀಕರಣ ಮಾಡದೆ ಒಬ್ಬರ ರಕ್ತವನ್ನು ಇನ್ಬೊಬ್ಬರ ರಕ್ತದೊಂದಿಗೆ ಸೇರಿಸಲಾಗದೆಂಬುದು ಈಗ ಎಲ್ಲರಿಗೂ ತಿಳಿದ ಸಂಗತಿ. ರಕ್ತರಸ ಮತ್ತು ರಕ್ತಕಣಗಳ (ಬ್ಲಡ್ ಕಾರ್ಪಸಲ್) ಮೇಲ್ಮೈಯಲ್ಲಿನ ಪ್ರೋಟೀನ್ ಅಂಶಗಳಿಗೆ ತಕ್ಕಂತೆ ಜನರ ರಕ್ತ ನಾಲ್ಕು ಗುಂಪುಗಳಾಗಿ ವಿಂಗಡಿಸಲ್ಪಟ್ಟಿರುತ್ತದೆ. ಈ ಆಧಾರದ ಮೇಲೆ ರಕ್ತದ ವರ್ಗೀಕರಣ ಸೂತ್ರವನ್ನು ಲ್ಯಾಂಡ್ ಸ್ಟೀನರ್ ಕಂಡುಹಿಡಿದರು. ಜನರ ರಕ್ತವನ್ನು ಎ, ಬಿ, ಎಬಿ ಮತ್ತು ಒ ಎಂಬ ನಾಲ್ಕು ಬೇರೆ ಬೇರೆ ಗುಂಪುಗಳಾಗಿ ಆತ ವರ್ಗೀಕರಿಸಿದರು. ಈ ಸಂಶೋಧನೆ ರಕ್ತಪೂರಣ ಕಾರ್ಯ ಸುರಕ್ಷಿತವಾಗಿ ನಡೆಯುವಂತೆ ಮಾಡಿತು.

ರಕ್ತದಲ್ಲಿನ “ಆರ್ ಎಚ್ ” ಅಂಶವನ್ನು ಪಡೆದಿದ್ದ ಪಕ್ಷದಲ್ಲಿ ಮತ್ತು ತಾಯಿಯ ರಕ್ತದಲ್ಲಿ ಆ ಅಂಶ ಇರದಿದ್ದ ಪಕ್ಷದಲ್ಲಿ, ಅದು ತಾಯಿಯ ದೇಹದಲ್ಲಿ ಪ್ರತಿಕ್ರಿಯೆ ಉಂಟು ಮಾಡಿ ತೊಂದರೆಗೆ ಕಾರಣವಾಗುತ್ತದೆ. ಆದುದರಿಂದ ಸ್ತ್ರೀ ಗರ್ಭ ತಳೆದಾಗ ಮತ್ತು ರಕ್ತಪೂರಣ ಕಾಲದಲ್ಲಿ ” ಆರ್ ಎಚ್‌ ” ಅಂಶದ ತಿಳಿವಳಿಕೆ ಇರಬೇಕಾದ್ದು ಅತ್ಯವಶ್ಯವೆಂದು ಸ್ಟೀನರ್ ಸೂಚಿಸಿದರು.

ಕಾರ್ಲ್ ಲ್ಯಾಂಡ್ ಸ್ಟೀನರ್ ೧೯೪೩ರಲ್ಲಿ ನಿಧನ ಹೊಂದಿದರು