ಹೆಸರು: ವಿಜಯಪುರ
ಊರು: ಮೈಸೂರು

 

ಪ್ರಶ್ನೆ: ನನಗೆ ೩೦ ವರ್ಷ. ನಾನು ಲ್ಯೂಕೋಫ್ಲೇಕಿಯಾ ಎಂಬ ಖಾಯಿಲೆಯಿಂದ ಬಳಲುತ್ತಿದ್ದೇನೆ. ಎಲ್ಲ ರೀತಿಯ ಚಿಕಿತ್ಸೆಯನ್ನು ಮಾಡಿಸಿದರೂ ವಾಸಿಯಾಗಲಿಲ್ಲ. ದಯವಿಟ್ಟು ರೋಗಕ್ಕೆ ಚಿಕಿತ್ಸೆ ತಿಳಿಸಿ.

ಉತ್ತರ: ಲ್ಯೂಕೋಫ್ಲೇಕಿಯಾ ಎನ್ನುವುದು ಜನನಾಂಗದಲ್ಲಿ ಮತ್ತು ಅದರ ಸುತ್ತ ಚರ್ಮದಲ್ಲಿ ಕಾಣಿಸಿಕೊಳ್ಳುವ ಒಂದು ಬದಲಾವಣೆ. ಇದು ಸಣ್ಣದಾಗಿ ಪ್ರಾರಂಭವಾಗಿ ನಂತರ ದೊಡ್ಡದಾಗಿ ಹರಡಬಹುದು. ಚರ್ಮ ಕೆಲವೆಡೆ ದಪ್ಪವಾಗಿ ಕೆಲವೆಡೆ ಸೂಕ್ಷ್ಮವಾಗಿ ಹುಣ್ಣುಗಳ ರೀತಿ ಆಗಬಹುದು. ಆಗ ನವೆಯಾಗಲು ಪ್ರಾರಂಭವಾಗಬಹುದು ಲ್ಯೂಕೋಫ್ಲೇಕಿಯಾದಿಂದ ಕೆಲವರಿಗೆ ಏನೂ ತೊಂದರೆ ಆಗದಿದ್ದರೂ ಕೆಲವರಲ್ಲಿ ಇದು “ಕ್ಯಾನ್ಸರ್”ಗೆ ತಿರುಗಬಹುದು. ಆದ್ದರಿಂದ ಚರ್ಮದ ಬಯಾಪ್ಸಿ ಮಾಡಿ, ಪರೀಕ್ಷೆ ನಡೆಸಿ ಮುಂದೆ ತೊಂದರೆಯಾಗಬಹುದೆಂಬ ಸೂಚನೆ ಕಂಡುಬಂದರೆ ಆ ಜಾಗವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಬೇಕಾಗುತ್ತದೆ.