ತಿಲಕಾಶೋಕತಮಾಲಕೇಸರ ಕಪಿತ್ಥಾಶ್ವಶ್ಥ ಪುನ್ನಾಗ ಭೃಂ-
ಗಲವಂಗಾರ್ಜುನಭೂರ್ಜಜಂಬು ಬದರೀ ಹಿಂತಾಲ ಜಂಬೀರಮಂ
ಜುಲ ಕಾಂಜೀರ ಕರಂಜ ನಿಂಬ ವಟ ರಂಭಾ ಚೂತ ನಾರಂಗ ಸಂ-
ಕುಲದಿಂ ರಮ್ಯಮೆನಿಪ್ಪ ರಮ್ಯವನದೊಳ್ ನಾನಾಫಲಕೀರ್ಣದೊಳ್  ೩೯೩

ಮದರಹಿತನ ನಿಹಿತಪಿತಾ-
ಮದಧೂಳಿಪಯೋದ ನಿಪುಣ *?* ನಗಧರ ರಾಜ್ಯಾ-
ಸ್ಪದದೊಳ್ ಸುಖದಿಂದಿರ್ಪಂ
ಮುದಿತಮನಂ ಕೃಷ್ಣವದನನೆಂಬ ಕಪೀಂದ್ರ  ೩೯೪

೩೯೧. ಸಿರಿವಂತನಾಗಬೇಕೆಂಬ ಅರಸನು ಬೇರೆಯವರಿಂದುಂಟಾಗುವ ವಿವಿಧ ಅಪಾಯಗಳಿಗೆ ಒಳಗಾಗದೆ ನಿಪುಣತೆಯಿಂದ ಮಾಯಾತ್ಮಕನಂತೆ ವಂಚಿಸಬೇಕು. ೩೯೨. ಅದರಿಂದ ನೀತಿಜ್ಞನೂ ಅಸಾಮಾನ್ಯನೂ ಎನಿಸಿದ ದುರ್ಗಸಿಂಹನೆಂಬ ವಿಭು ನೃಪರಿಗೆ ಹಿತವಾದ ವಂಚನೆಯ ತಂತ್ರವನ್ನು ವಿರಚಿಸಿದ್ದನು. ಅದೇನೆಂದರೆ ಶ್ಲೋ|| ಯಾವನಾದರೂ ತನಗಾದ ಪ್ರಯೋಜನವನ್ನು ತಿಳಿಯದೆ ಬಿಡುವವನು ಮೊಸಳೆಯನ್ನು ಕಪಿ ವಂಚಿಸಿದ ಹಾಗೆ ಎಲ್ಲರಿಂದಲೂ ವಂಚಿತನಾಗುವನು. ಆ ಕಥಾಪ್ರಪಂಚವು ಹೀಗಿದೆ: ೩೯೩. ತಿಲಕ, ಅಶೋಕ, ಹೊಂಗೆ, ಕೇಸರ, ಬೇಲ ಅರಳಿ, ಪುನ್ನಾಗ, ಭೃಂಗ, ಲವಂಗ, ಬಿಳಿಮತ್ತಿ, ಭೂರ್ಜ, ನೇರಿಳೆ, ಬದರಿ, ಈಚಲು, ಜಂಬೀರ, ಕಾಂಜೀರಕ, ಬಕುಳ, ನಿಂಬೆ, ಆಲ, ಬಾಳೆ, ಮಾವು, ಕಿತ್ತಿಳೆ ಮೊದಲಾದ ಮರಗಳು ಹಣ್ಣುಗಳಿಂದ ತುಂಬಿ ಸುಂದರವಾದ ಒಂದು ಕಾಡಿನಲ್ಲಿ ೩೯೪. ಕೃಷ್ಣವದನನೆಂಬ ಕಪೇಂದ್ರನು ಸುಖದಿಂದ ಇದ್ದನು.

ಆಬನದುತ್ತರದಿಗ್ಭಾಗದೊಳೊಂದು ವನಮುಂಟು. ಅಲ್ಲಿ.

ಸಕಲಕಪಿಸಮಿತಿವೆರಸಹಿ
ತಕುಲಾಚಲಚಕ್ರಚಾರದಂಭೋಳಿ ಜಗ-
ತ್ಪ್ರಕಟೋದ್ಯನ್ಮಹಿಮನೆನಿಸು-
ವ ಕಕುದ್ಬಲಿಯೆನಿಪ ಪೆಸರ ಬಲಿಮುಖನಿರ್ಪಂ  ೩೯೫

ಅಂತಾ ಮರ್ಕಟಂಗಳೆರಡಕ್ಕುಂ ಏಕದ್ರವ್ಯಾಭಿಲಾಷೆಯಿಂ ಬದ್ಧವೈರಂ

ಬಳೆದು ಕಕುದ್ಬಲಿ ಮೇಲೆ ಬರೆ ಕದನಕ್ಕಳ್ಳಿ ಕೃಷ್ಣವದನನಾ ವನದ ಪಂಬಲಂ ಬಿಸುಟು ತನ್ನ ಯೂಧಮುಮಂ ಮಱೆದು ತಾನನಾಥನಾಗಿ ಪಾರಾವಾರಂಬೋಗಿ

ರಸಫಲಸ್ಪುರಿತೌದುಂ-
ಬರಮಂ ಶಾಖಾಶಿಖಾಗ್ರಚುಂಬಿತಹರಿದಂ-
ಬರಮಂ ಪತ್ರಚ ನ್ನಾ-
ರ್ಕರಶ್ಮಿಯಂ ಮುದದಿನಾ ಕಪೀಂದ್ರಂ ಕಂಡಂ  ೩೯೬

ಅಂತು ಕಂಡದನಾಶ್ರಯಿಸಿ ತತಲಂಗಳನಮೃತೋಪಮಂಗಳನಾರೋಗಿಸುತ್ತುಂ ಸುಖದಿನಿರ್ದೊಂದು ದಿವಸಂ ತನ್ನ ಕಯ್ಯಿಂದಿಂ ಬರ್ದುಂಕಿದ ಪಣ್ಣಂಭೋಮಧ್ಯದೊಳ್ ಬೀೞ್ವುದು ಮಲ್ಲಿ ಪೊಣ್ಮಿದ ಗಂಭೀರರವಮಂ ಕೇಳ್ದಾ ಚಪಲ ಕಪಿ ತನಗದುವೆ ವಿನೋದಮಾಗೆ ಮತ್ತಂ ಅತ್ತಿಯ ಪಣ್ಗಳನೀಡಾಡುತ್ತಿರ್ಪುದುಮಾ ಪಣಳಂ ಕ್ರಕಚನೆಂಬುದೊಂದು ಮೊಸಳೆ ಪ್ರತಿದಿನಮೊಲ್ದು ಮೆಲ್ದು ಕೆಲವಾನುಂ ದಿನಕ್ಕವೆರಡರ್ಕಂ ನೇಹಮಾಗೆಯಾ ನೆಗೞ್ ತನ್ನ ಮನೆಯಂ ಮಱೆದಲ್ಲಿಯೆ

ವ|| ಆ ವನದ ಉತ್ತರ ದಿಕ್ಕಿನಲ್ಲಿ ಇನ್ನೊಂದು ವನವಿತ್ತು. ೩೯೫. ಅಲ್ಲಿ ಸಕಲ ಕಪಿಸಮೂಹದಿಂದ ಕೂಡಿ ಶತ್ರುಗಳಾದ ಕುಲಾಚಲಗಳಲ್ಲಿ ಸಂಚರಿಸುವ ವಜ್ರಾಯುಧದಂತಿರುವ ಜಗತ್ತಿಗೆ ಪ್ರಕಟವಾಗುವ ಮಹಾಮಹೀಮನಾದ ಕಕುದ್ಬಲಿ ಎಂಬ ಹೆಸರಿನ ಒಬ್ಬ ಬಲೀಮುಖನಿದ್ದನು. ವ|| ಹಾಗೆ ಆ  ಮರ್ಕಟಗಳೆರಡಕ್ಕೆ ಏಕದ್ರವ್ಯಾಭಿಲಾಷೆಯಿಂದ ವೈರ ಬೆಳೆದು ಕಕುದ್ಬಲಿಯು ಮೇಲೆ ಬೀಳಲು ಕದನಕ್ಕೆ ಅಳುಕಿ ಕೃಷ್ಣವದನನು ಆ ವನದ ಹಂಬಲವನ್ನೇ ಬಿಟ್ಟು ತನ್ನ ಪರಿವಾರವನ್ನೂ ಮರೆತು ತಾನು ಅನಾಥನಾಗಿ ಸಮುದ್ರಕ್ಕೆ ಹೋಗಿ ೩೯೬. ರಸವತ್ತಾದ ಹಣ್ಣುಗಳಿಂದಲೂ ಆಕಾಶಕ್ಕೆ ಹಬ್ಬಿದ ಕೊಂಬೆಗಳಿಂದಲೂ ಸೂರ್ಯನ ಬೆಳಕನ್ನು ತಡೆಯಬಲ್ಲ ಎಲೆಗಳಿಂದಲೂ ಕೂಡಿದ ಒಂದು ಅತ್ತಿಯ ಮರವನ್ನು ಆ ಕಪೀಂದ್ರನು ಸಂತೋಷದಿಂದ ಕಂಡನು. ವ|| ಅಲ್ಲಿ ಅನೇಕ ಫಲವೃಕ್ಷಗಳನ್ನು ಕಂಡು ಅವುಗಳನ್ನು ಆಶ್ರಯಿಸಿ ಆ ಹಣ್ಣುಗಳನ್ನು ತಿನ್ನುತ್ತಿದ್ದನು. ಹಾಗೆ ಸುಖದಿಂದಿದ್ದಾಗ ಒಂದು ದಿನ ತನ್ನ ಕಯ್ಯಿಂದ ಉದುರಿ ಒಂದು ಹಣ್ಣುಕೆಳಗಿದ್ದ ಸಮುದ್ರದ ಮದ್ಯದಲ್ಲಿ ಬೀಳಲು ಅಲ್ಲಿ ಉಂಟಾದ ಗಂಬೀರ ಶಬ್ದವನ್ನು ಕೇಳಿ ಆ ಕಪಿಯು ತನಗೆ ಅದು ವಿನೋದವಾಗಿ ಕಾಣಲು ಪುನಃ ಅತ್ತಿಯ ಹಣ್ಣುಗಳನ್ನು ಉದುರಿಸುತ್ತಿರಲು ಆ ಹಣ್ಣುಗಳನ್ನು ಕ್ರಕಚನೆಂಬ ಒಂದು ಮೊಸಳೆ ಪ್ರತಿದಿನವೂ ಪ್ರೀತಿಯಿಂದ ತಿಂದಿತು. ಕೆಲವೇ ದಿನಗಳಲ್ಲಿ ಅವೆರಡಕ್ಕೂ ಸ್ನೇಹವುಂಟಾಗಲು ಆ ಮೊಸಳೆ ತನ್ನ ಮನೆಯನ್ನು.

ಸಂತಮಿರುತ್ತಿರೆ ಅದಂ ತಾಂ ಮನದೆಗೊಂಡು ಸುಕಥೆಯೆಂಬಳ್ ತನ್ನ ಗಂಡನಪ್ಪ ಕ್ರಕಚನಂ ಬರಿಸಿ ನೀನಿಂತಪ್ಪ ದುರ್ವ್ಯಸನಮಂ ಕಲ್ತೆಯೆಂದು ಬಾರಿಸಿ ಮತಮಿಂತೆಂದಳ್: ತನಗೆ ವಾನರವ್ಯಾಯಾದುದರ್ಕೆ ಕೋಡಗದೆರ್ದೆಯಂ ತಂದೀಯಲ್ವೇೞ್ಕುಮೆನಲಂತೆಗೆಯ್ವೆನೆಂದು

ಚಂಡಮಹಾಸೇನಂ ಕುಲ
ಮಂಡನನಂ ಸುತನೞ*ಯಲೊಡರಿಸಿದಂ ಭೂ-
ಮಂಡಲಮೆಲ್ಲಂ ಚಿಃ ಎನೆ
ಪೆಂಡಿರ್ಗಾಸಕ್ತರಾದರೇನಂ ಮಾಡರ್  ೩೯೭

ವನಿತಾಜನಕ್ಕೆ ಸೋಲ್ತೊಡೆ
ಜನದಪವಾದಮುಮನಾಪ್ತನಿವಹಮುಮಂ ಸ-
ಜ್ಜನದ ಗುರುಜನದ ಮುನಿಸುಮ-
ನಿನಿಸುಂ ಬಗೆವವನುಮೊಳನೆ ವಸುಧಾತಳದೊಳ್  ೩೯೮

ಅದಱ*ಂದೆನಗೆ ಇದುವೆ ಕರ್ತವ್ಯಮೆಂದು ಬಂದತ್ತಿಯ ಮರದ ಮೊದಲೊಳಿರ್ಪುದಂ ಮುಂದಿಕ್ಕಿ ಬೞ*ಕ್ಕೆ ಮುಖಮಂ ನೋಡಿ ನಿನ್ನನಿಂದು ಪಿರಿದು ಪೊೞ್ತು ಕಾಣದೆ ಚಿಂತಿಸುತಿರ್ದೆ ನೆಲ್ಲಿಗೆ ಪೋದೆಯೆನೆ ಕ್ರಕಚನೆಚಿದ: ನಿನ್ನ ಮಾೞ್ದ ಪರಮೋಪಕಾರಕ್ಕೆಂತು ಪೊೞ್ತು ನಿತಱ*ಸುವೆನೆಂದು ಚಿಂತಿ,

ಕಮಳಾಕರ ಸೌಭಾಗ್ಯಂ
ನಮೇರು ಮಂದಾರ ಪಾರಿಜಾತಾದಿ ಸುರ-
ದ್ರುಮಗಣರುಚಿರದಿನೆಸೆವುದು
ಸಮುದ್ರಮಧ್ಯದೊಳಗಿರ್ಪ್ಯದಂತರ್ದ್ವೀಪಂ  ೩೯೯

ಮರೆತು ಅಲ್ಲಯೇ ಸಂತೋಷದಿಂದ ಇರುತ್ತಿರಲು ಅದನ್ನು ತಾನು ಮನಸ್ಸಿನಲ್ಲಿ ಎಣಿಸಿ ಸುಕಥೆ ಎಂಬವಳು ತನ್ನ ಗಂಡನಾದ ಕ್ರಕಚನನ್ನು ಕರೆಯಿಸಿ ನೀನು ಇಂತಹ ದುರ್ವ್ಯಸನವನ್ನು ಕಲಿತೆ ಎಂದು ಆಕ್ಷೇಪಿಸಿ ತನಗೆ ವಾನರವ್ಯಾಯಾಗಿದೆ; ಇದಕ್ಕೊ ಕೋಡಗದ ಎದೆಯನ್ನು ತಂದುಕೊಡಬೇಕು ಎನ್ನಲು ಹಾಗೆಯೇ ಆಗಲಿ ಎಂದು ೩೯೭. ಆ ಚಂಡಮಹಾಸೇನನು ಜಗತ್ತೆಲ್ಲವೂ ಹೀಯಾಳಿಸುವಂತೆ ಕುಲಮಂಡನನಾದ ಮಗನನ್ನೇ ಅಳಿಯಲು ಉದ್ಯುಕ್ತನಾದನು. ಹೆಂಡಿರಿಗೆ ಆಸಕ್ತರಾದವರು ಏನನ್ನು ತಾನೇ ಮಾಡುವುದಿಲ್ಲ! ೩೯೮. ವನಿತಾಜನಕ್ಕೆ ಸೋತಲ್ಲಿ ಜನದ ಅಪವಾದವನ್ನೂ ಆಪ್ತಸಮೂಹವನ್ನೂ ಸಜ್ಜನರ ಗುರುಜನರ ಕೋಪವನ್ನೂ ಸ್ವಲ್ವವಾದರೂ ಎಣಿಸುವವನು ಪ್ರಪಂಚದಲ್ಲಿ ಯಾರಾದರೂ ಇರುವರೇ! ವ||ಎಂದು ಇದು ನನ್ನ ಕರ್ತವ್ಯ ಎಂದು ತಿಳಿದು ಅತ್ತಿಯ ಮರದ ಬುಡದಲ್ಲಿರಲು ಬಲೀಮುಖನು ಕಂಡು ದರಹಸಿತವದನನಾಗಿ ಬಂದು ಆತ್ತಿಯ ಹಣ್ಣುಗಳನ್ನು ಅದರ ಮುಂದೆ ಹಾಕಿ ಬಳಿಕ ಅದರ ಮುಖವನ್ನು ನೋಡಿ ನಿನ್ನನ್ನು ಇಂದು ಬಹಳ ಹೊತ್ತಿನಿಂದ ಕಾಣದೆ ಚಿಂತಿಸುತ್ತಿದ್ದೆ, ಎಲ್ಲಗೆ ಹೋದೆ ಎಂದು ಕೇಳಿದನು. ಅದಕ್ಕೆ ಕ್ರಕಚನು ನೀನು ಮಾಡಿದ ಪರಮೋಪಕಾರಕ್ಕೆ ಹೇಗೆ ಸಮಯ ಸಾಸಲೆಂದು ೩೯೯. ಸರೋವರದ ಸೌಭಾಗ್ಯದಿಂದಲೂ ಸುರಿಗೆ, ಮಂದಾರ, ಪಾರಿಜಾತ ಮೊದಲಾದ ಆ ದ್ವೀಪದೋಳ್ ರೂಪವತಿಯರಪ್ಪ ವಾನರನಾರಿಯರಿರ್ವಗಂ ತನಗಂ ಸಖಿತ್ವಮುಂಟಪ್ಪುದಱ*ಂದಿಲ್ಲಿಗೆ ಪೋಗಲ್ ತನ್ನ ಕಾಣಲೊಡಮಿದಿರಂ ಬಂದಿಂತೆಂದರ್: ನಿನ್ನಂತಪ್ಪ ಸಹಾಯನಂ ಪಡೆದು ಪುರುಷರಂ ಪಡೆಯದೆ ತನ್ನ ಜನ್ಮಂ ಬಾಲಬ್ರಹ್ಮಚಾರಿಯ ಜನ್ಮದಂತೆ ಶೂನ್ಯಮಾಗಿ ಪೋದಪ್ಪುದೆಂದು ನೊಂದು ನುಡಿದರಂತುಮಲ್ಲದೆಯುಂ ಅನೇಕವಿಭವಸಂಪನ್ನೆಯರುಂ ಚೆನ್ನೆಯರುಮಾಗಿರ್ಪರಂತುಮಲ್ಲದಾ ದ್ವೀಪದ ಫಲಂಗಳೆಲ್ಲಂ ರಸಾಯನಂಗಳವಂ ತಿಂದವರ್ಗಾಗಳೆ ನರೆತೆರೆಯುಂ ಪೋಗಿ ನವಯೌವನರಪ್ಪರದಱ*ಂದೀಗಳೆ ನಿನ್ನನೆನ್ನ ಬೆನ್ನನೇಱ*ಸಿಕೊಂಡುಯ್ವೆಂ ಕೇಳಾ ಮತ್ತಮಂತರ್ದ್ವೀಪಕ್ಕುಯ್ದು ವಾನರಕುಮಾರಿಯೊಳ್ ಕೂಡಿ ಕೃತಾರ್ಥನಪ್ಪೆನದಱ*ಂ ಬೇಗಂ ಬಂದೆನ್ನ ಬೆನ್ನನೇಱೆನಲೊಡಂ ತಜ್ಜರದ್ವಾನರಂ ಹರ್ಷೋತ್ಕರ್ಷಚಿತ್ತನಾಗಿ ಆತ್ಮಗತದೊಳಿಂತೆಂದಂ:

ಪರಿಪಕ್ವ ಫಲಪ್ರಕರಂ
ಜರೆಯಂ ಕಿಡಿಸುವುದು ವಾನರೀಸಂದೋಹಂ
ಪುರುಷರನೆ ಬಯಸುವುದು ಗಡ
ಸರಾಗದಿಂ ಬಗೆವೊಡಿನ್ನವೇಂ ಸೈಪೊಳವೇ ೪೦೦

ಎಂದು ಕಪಿ ಕಾಮಾತುರನಾಗಿ ಮುಂತಪ್ಪಪಾಯಮನೊಂದುಮಂ ಬಗೆಯದೆ

ಮೊಸಳೆಯ ಬೆನ್ನನೇಱ* ಕಪಿ ವಾರಿಯೊಳ್ ನಡೆಯುತ್ತುಮಲ್ಲಿ ಸಂ-
ಸಿ ಬಿಡದೊತ್ತಿ ಭೋರ್ಗರೆದು ತರ್ಪ ತರಂಗದ ಮೇಲೆ ಮೆಯ್ಯಗು-
ರ್ವಿಸಿ ಭರದಿಂ ಮನಂ ಬೆದಱ* ಕಟ್ಟು *ಕೞಲ್ದುದು* ಶಕ್ಯಮಲ್ಲದೊಂ-
ದೆಸಕದಿನಾವನುಂ ಪರಮದುಃಖಮನೆಯ್ದದೆ ಸೈತೆ ಪೋಕುವೆ  ೪೦೧

ದೇವವೃಕ್ಷಗಳ ಸಮೂಹದಿಂದಲೂ ಶೋಭಿಸುವ ಒಂದು ಅಂತರ್ದ್ವೀಪವು ಸಮುದ್ರಮಧ್ಯದಲ್ಲಿದೆ. ವ|| ಆ ದ್ದೀಪದಲ್ಲಿ ರೂಪವತಿಯರಾದ ವಾನರನಾರಿಯರಿಬ್ಬರಿಗೂ ತನಗೂ ಸಖಿತ್ವವುಂಟು. ಅದರಿಂದ ಅಲ್ಲಿಗೆ ಹೋಗಲು ನನ್ನನ್ನು ಸ್ವಾಗತಿಸಿ ಹೀಗೆಂದರು: ನಿನ್ನಂತಹ ಸ್ನೇಹಿತನನ್ನು ಪಡೆದು ಪುರುಷರನ್ನು ಪಡೆಯದೆ ತಮ್ಮ ಜನ್ಮವು ಬಾಲಬ್ರಹ್ಮಚಾರಿಯ ಜನ್ಮದಂತೆ ಶೂನ್ಯವಾಗಿ ಹೋಗುವುದು ಎಂದು ನೊಂದು ನುಡಿದರು : ಅಲ್ಲದೆ ಅವರು ಅನೇಕ ವೈಭವಸಂಪನ್ನೆಯರೂ ಚೆನ್ನೆಯರೂ ಆಗಿರುವರು. ಅಲ್ಲದೆ ಅ ದ್ವೀಪದಲ್ಲಿರುವ ಹಣ್ಣುಗಳೆಲ್ಲ ರಸಾಯನಗಳಾಗಿವೆ. ಅವುಗಳನ್ನು ತಿಂದವರಿಗೆ ಕೂಡಲೇ ನರೆತೆರೆಗಳೂ ಹೋಗಿ ನವಯೌವನ ಪ್ರಾಪ್ತವಾಗುವುದು. ಅದರಿಂದ ಈಗಲೇ ನಿನ್ನನ್ನು ನನ್ನ ಬೆನ್ನಿನ ಮೇಲೆ ಏರಿಸಿಕೊಂಡು ಹೋಗುವೆನು. ಬಳಿಕ ಅಂತರ್ದ್ವೀಪಕ್ಕೆ ನಿನ್ನನ್ನು ಕರೆದುಕೊಂಡು ಹೋಗಿ ವಾನರಕುಮಾರಿಯರೊಡನೆ ಕೂಡಿಸಿ ಕೃತಾರ್ಥನಾಗುವೆನು. ಅದರಿಂದ ಬೇಗನೆ ಬಂದು ನನ್ನ ಬೆನ್ನನ್ನು ಏರು ಎನ್ನಲು ಆ ಮುದಿಮಂಗನು ಹರ್ಷೋತ್ಕರ್ಷಚಿತ್ತನಾಗಿ ತನ್ನಲ್ಲೇ ಹೀಗೆಂದನು: ಪರಿಪಕ್ವಫಲಗಳು ವೃದ್ಧಾಪ್ಯವನ್ನು ಹೋಗಲಾಡಿಸುವುವು; ವಾನರೀಸಂದೋಹವು ಪುರುಷರನ್ನೇ ಬಯಸುವುದು ತಾನೇ. ಇದಕ್ಕಿಂತ ದೊಡ್ಡ ಭಾಗ್ಯವಿರುವುದೇ ವ|| ಎಂದು ಕಪಿ ಕಾಮಾತುರನಾಗಿ ಮುಂದೆ ಸಂಭವಿಸುವ ಅಪಾಯವಾವುದನ್ನೂ ಬಗೆಯದೆ ೪೦೧. ಮೋಸಳೆಯ ಬೆನ್ನನ್ನೇರಿ ಕಪಿಯು ಸಮುದ್ರದಲ್ಲಿ ಹೋಗುತ್ತಿರಲು ಅಲ್ಲಿ ಭೋರ್ಗರೆದು ಬರುವ ತರಂಗಗಳಲ್ಲಿ ಅಂಜಿ ಮನಸ್ಸಿನಲ್ಲೇ ಹೆದರಿತು. ಯಾವನಾದರೂ ಪರಮ ದುಃಖವನ್ನು ಅನುಭವಿಸದೆ

ಅಂತಾ ವಾನರಂ ಕೇದಗೆಯನೇಱ*ದ ಕೊಡಗದಂತೆ ಗೂಡುಗೊಂಡು ಪಲ್ಲಂ ಗಿಡಿಗಿಱ*ದು ಮೆಲ್ಲನೆ ಮೊಸಳೆಗಂತರ್ದ್ವೀಪಮಿಲ್ಲಿಗಮಿನ್ನೆನಿತು ದೂರಮುಂಟೆಂಬುದುಂ, ಶಿಂಶುಮಾರನೆಂದುದಾ ದ್ವೀಪಮಿಲ್ಲಿಗೆ ಸಮೀಪಮಿರ್ಪುದಾಗಿಯುಮೀಗಳ್ ನಿನ್ನ ತಂಗಿಗೆ ವಾನರವ್ಯಾಯಾದುದರ್ಕೆ ಮರ್ಕುಟಂಗಳೆರ್ದೆ ಮರ್ದೆಂದು ಪೇೞ್ದರದಂ ನಮಗೆ ಪಡೆಯಲ್ ಬಾರದುದಱ*ಂ ನಿನ್ನ ತಂಗಿಯನಾರೈದು ಬೞ*ಕಂತರ್ದ್ವೀಪಕ್ಕೀಗಳೆ ಪೋಗಲಕ್ಕುಮೆಂದು ಪೇೞ್ವುದುಂ ಕೃಷ್ಣವದನನೀ ಪಾತಕನುಪಾಯಮಂ ಬಗೆದು ನಂಬಿಸಿ ತಂದನೆಂದು ಚಿಂತಿಸಿ ತಾಂ ವಂಚನೋಪಾಯ ಕುಶಲನಪ್ಪುದಱ*ಂ ಮೊಸಳೆಗಿಂತೆಂದುದೆಲೆ ಗಾವಿಲಾ !        ‘ಕೋಡಗದೆರ್ದೆ ಕೊಂಬಿನ ಮೇಲೆ’ ಎಂಬುದು ಪ್ರಸಿದ್ಧಮಿದಂ ನೀಂ ಮುನ್ನ ಕೇಳ್ದಱ*ವುದಿಲ್ಲಕ್ಕುಮೆ ಮೇಣ್ ‘ಹಿತ್ತಲ ಗಿಡು ಮರ್ದಲ್ಲ’ ಎಂದೇಳಿದಂಗೆಯ್ದೆಯಕ್ಕುಮದಲ್ಲ ದಿಂದೀ ಹದನನೆನಗಲ್ಲಿಯೆ ಪೇೞ್ದೆಯಪ್ಪೊಡೆನ್ನೆರ್ದೆಯನಾಗಳೆ ಕೊಂಡುಬರ್ಪೆನಂತುಮಲ್ಲದೆನ್ನ ಪ್ರಾಣಮುಮೆನ್ನೊಡವುಟ್ಟಿದಳಧ್ವಾನದವರಕ್ಕಿಲ್ಲಪ್ಪೊಡೆ ವಾೞ್ತೆಯೇನೆಂದು ಮಹಾಪ್ತರ್ಗಲ್ಲದೌಷಧದಾನಮಂ ಕುಡುವುದುತ್ತಮ ಪಕ್ಷಮೆಂಬುದುಂಟು ಎನ್ನತಂಗಿ ವ್ಯಾತೆ ಗಡಮದರ್ಕೌಷಧಮೆನ್ನಲ್ಲಿಯೆ ಉಂಟು ಗಡಿಂತಪ್ಪ ಸೈಪು ಸಮನಿಸಿತ್ತದಱ*ಂ ಮರ್ದಂ ಕೊಂಡು ಇರ್ದ ಪೆೞ*ರ್ದಂತೀಗಳೆ ಬಂದಪೆಂ ಮಗುೞೆನೆ ಕ್ರಕಚನಿಂತೆಂದಂ : ಅಂತಪ್ಪೊಡೆ ಸುಹೃದ್ದರ್ಶನಮೌಷಧಂ ಎಂಬುದುಂಟು. ಈಗಳಾಕೆಯನಾರೈದು ಪೋಪಮೆಂದೊಡಿದಾವ ಬುದ್ಧಿ ನೀಂ ಮರ್ದಂ ತರ್ಪೆಯೆಂಬಾಸೆಯಿಂ

ಸರಿಯಾಗುವನೆ! ವ|| ಹಾಗೆ ಆ ವಾನರನು ಕೇದಗೆಯನ್ನೇರಿದ ಕೋಡಗನಂತೆ ಗೂಡುಗೊಂಡು ಹಲ್ಲುಕಿರಿದು ಮೆಲ್ಲನೆ ಮೊಸಳೆಯೊಡನೆ ಅಂತರ್ದ್ವೀಪವು ಇಲ್ಲಿಂದ ಇನ್ನೆಷ್ಟು ದೂರವಿದೆ ಎನ್ನಲು ಆ ಮೋಸಳೆಯು ಹೇಳಿತು: ಆ ದ್ವೀಪವು ಇಲ್ಲಿಂದ ಸಮೀಪದಲ್ಲಿದ್ದರೂ ಈಗ ನಿನ್ನ ತಂಗಿಗೆ ವಾನರವ್ಯಾಯಾದುದಕ್ಕೆ ಮರ್ಕಟಗಳ ಎದೆ ಮದ್ದೆಂದು ಹೇಳಿದರು. ಅದನ್ನು ನಾವು ಪಡೆಯುವುದು ಕಷ್ಟಸಾಧ್ಯವಾದುದರಿಂದ ನಿನ್ನ ತಂಗಿಯನ್ನು ವಿಚಾರಿಸಿ ಬಳಿಕ ಅಂತರ್ದ್ವೀಪಕ್ಕೆ ಕೂಡಲೇ ಹೋಗಬಹುದು. ಕೃಷ್ಣವದನನು ಈ ಪಾತಕನ  ಉಪಾಯವನ್ನು ತಿಳಿದು ನಂಬಿಸಿ ತನ್ನನ್ನು ಕರೆದುಕೊಂಡು ಬಂದನೆಂದು ಚಿಂತಿಸಿ ತಾನೂ ವಂಚನೋಪಾಯಕುಶಲನಾದುದರಿಂದ ಮೊಸಳೆಯೊಡನೆ ಹೀಗೆಂದಿತು: ಎಲೆ ಗಾವಿಲಾ! ‘ಕೋಡಗದ ಎದೆ ಕೊಂಬಿನ ಮೇಲೆ’ ಎಂಬುದು ಪ್ರಸಿದ್ಧ. ಇದನ್ನು ನೀನು ಕೇಳಿರಲಿಕ್ಕಿಲ್ಲ. ಅಲ್ಲದೆ, ‘ಹಿತ್ತಲ ಗಿಡ ಮದ್ದಲ್ಲ’ ಎಂದು ನಿರಾಕರಿಸಬಹುದು. ಅಲ್ಲದೆ ಇಂದು ನೀನು ಈ ವಿಷಯವನ್ನು ನನಗೆ ಅಲ್ಲಿಯೇ ಹೇಳಿದ್ದರೆ ನನ್ನ ಎದೆಯನ್ನು ಆಗಲೇ ತಂದುಬಿಡುತ್ತಿದ್ದೆ. ಅಲ್ಲದೆ ನನ್ನ ಪ್ರಾಣವೂ ಅರ್ಥವೂ ನನ್ನ ಒಡಹುಟ್ಟಿದವಳ ಕಷ್ಟಕ್ಕೆ ಆಗದ ಮೇಲೆ ಏನಿದ್ದು ಏನು ಪ್ರಯೋಜನ ! ಮಹಾಪ್ತರಿಗೆ ಅಲ್ಲದ ಔಷಧದಾನವನ್ನು ಕೊಡುವುದು ಉತ್ತಮ ಪಕ್ಷವೆನಿಸುವುದು. ನನ್ನ ತಂಗಿ ವ್ಯಾತೆಯಲ್ಲವೇ; ಅದಕ್ಕೆ ಔಷಧ ನನ್ನಲ್ಲಿಯೇ ಇದೆ; ಇಂತಹ ಪುಣ್ಯ ಸಂಭವಿಸಿದುದರಿಂದ ಮದ್ದನ್ನು ಕೊಂಡು ಕೂಡಲೇ ಬರುವೆನು; ಹಿಂದಿರುಗು. ಅದಕ್ಕೆ ಕ್ರಕಚನು, ‘ಸುಹೃದ್ದರ್ಶನಮೌಷಧಂ” ಎಂದು ಹೇಳುವರು; ಈಗ ಆಕೆಯನ್ನು ವಿಚಾರಿಸಿಕೊಂಡು ಹೋಗೋಣ ಎಂದನು. ಅದಕ್ಕೆ ಕೃಷ್ಣವದನನು, ಅದು ಎಂಥ ಬುದ್ಧಿ ? ನೀನು ಮದ್ದನ್ನು ತರುವೆ ಎಂಬ ಆಸೆಯಿಂದ ಅವಳು ಜೀವವನ್ನು ಜೀವಮಂ ಪಿಡೆದಿರ್ಪಳ್ ನೀಂ ಬಱ*ದೆ ಬಂದುದನಱ*ದಾಗಳೆ ಮಱುಕಳಿಸಿ ಮನವಿಕ್ಕಿದಳಪ್ಪೊಡೆ ಬೞ*ಕ್ಕಸಾಧ್ಯಮಕ್ಕುಂ. ಅಂತುಮಲ್ಲೆದೆಯುಂ

ಶ್ಲೋ|| ಧರ್ಮಮರ್ಥಂಚ ಕಾಮಂ ಚ ತ್ರಿತಯಂ ಯೋಭಿವಾಂಛತಿ
ರಿಕ್ತಪಾಣಿರ್ನಚೇತ್ತು ಗುರುಂ ನರಪತಿಂ ಸ್ತ್ರೀಯ ||೧೯೦||

ಟೀ|| ಅವನೊರ್ವ ಧರ್ಮಾರ್ಥ ಕಾಮಮೆಂಬೀ ಮೂಱಂ ನಿಶ್ಚೈಸುವನೋ ಆತಂ ಗುರುವಿನಲ್ಲಿಗೆ ಅರಸನಲ್ಲಿಗೆ ಸ್ತ್ರೀಯರಲ್ಲಗೆ ಬಱುಗೈಯ್ಯಲ್ಲಿ ಹೋಗಲಾಗದು ಎಂಬುದು ನೀತಿಯುಂಟು. ಸಾಧಾರಣಸಂಬಂಗಳಪ್ಪರಲ್ಲಿಗೆ ಬಱ*ಗೈಯಿಂ ಪೋಗಲಾಗದೆಂಬರ್. ಅಂತು ಮಲ್ಲದಾತುರೆಯಲ್ಲಿಗೌಷಧಮಿಲ್ಲದೆಂತು ಪೋಪುದು. ಅದಲ್ಲದೆಯುಂ

ಎನ್ನೊರ್ವನೆರ್ದೆ ಮರ್ದಿಂಗೆ ನೆಱೆಗುಂ ನೆಱೆಯದಿರ್ಕುಮದನಱ*ಯಲ್ಬಾರದು. ಎನ್ನ ಪರಿಗ್ರಹಂ ವಾನರಂಗಳ್ ವಿಹಾರಿಸಲ್ ಪೋಗುತ್ತುಂ ತಮ್ಮೆರ್ದೆಗಳನಲ್ಲಿಯೆ ಮಡಂಗಿ ಪೋಪುವು. ಅದಲ್ಲಮಂ ಕೊಂಡೀಗಳೆ ಮಗುೞ್ದು ಬರ್ಪೆಂ ಬೇಗಂ ಮಗುೞೆನೆ ಶಿಂಶುಮಾರಂ ಮಾರುತ ವೇಗದಿಂ ಭೋರೆನೆ ಬಂದತ್ತಿಯ ಮರದ ಸಮೀಪಕ್ಕೆ ಸಾರಲೊಡಂ ಶಾಖಾಚರನದಱ ಶಿಖರಮಂ ಮೆಟ್ಟಿ ಮರದ ತುದಿಗೊಂಬಿಂಗೆ ಪಾಯ್ದುತೊಱಲ್ಗೊಂಬನೇಱ* ಪೆಱಗಂ ತೋಱ*ಯೇಡಿಸಿಯಾಡುತ್ತಿರ್ಪುದುಮದಂ ಕ್ರಕಚಂ ಕಂಡು ಏಂ ಗಡ ಭಾವಾ! ನೀನಿದೇಂ ನಿಂದಲ್ಲಿ ೞೋಡಗತನಂಗೆಯ್ದಾಡುತಿರ್ಪೆ. ಅತ್ತ ನಿನ್ನ ತಂಗಿಗವಸ್ತೆ ಪಿರಿದು. ತಡೆಯದೆ ಬಂದು ನಿನ್ನೆರ್ದೆಯನಾಕೆಗೆ ಕೊಂಡು ಬೞ*ಕ್ಕಾಗಳೆ ನಿನ್ನನಂತರ್ದ್ವೀಪಕುಯ್ವೆನಲ್ಲಿ ನೀನುಮಾ ವಾನರಸ್ತ್ರೀಯರೊಡಗೊಡಿ ಬೞ*ಕ್ಕೀ ಮಾರ್ಗದಿಂ ಮೆಚ್ಚಿದಂತಾಡುತ್ತಿರು ಎನೆ ಕೃಷ್ಣವದನಂ ಪೇೞ್ದಂ:

ಹಿಡಿದಿರುವಳು; ನೀನು ಬರಿದೆ ಎಂಬುದನ್ನು ತಿಳಿದ ಕೂಡಲೇ ಮರುಕಳಿಸಿ ಮನಸ್ಸಿನಲ್ಲಿ ಆಸಂಕಟವನ್ನು ಇಟ್ಟುಕೊಂಡಳೆಂದರೆ ಬಳಿಕ ಆಸಾಧ್ಯವಾದೀತು. ಅಲ್ಲದೆ, ಶ್ಲೋ|| ಧರ್ಮ ಅರ್ಥ ಕಾಮ ಎಂಬ ಈಮೂರುನ್ನು ಬಯಸುವವನು ಗುರುವಿನಲ್ಲಿಗೆ ಅರಸನಲ್ಲಗೆ ಸ್ತ್ರೀಯರಲ್ಲಿಗೆ ಬರಿಗೈಯಲ್ಲಿ ಹೋಗಬಾರದು ಎಂಬ ನೀತಿಯುಂಟು. ವ|| ಸಾಧಾರಣ ಸಂಬಂಗಳಲ್ಲಿಗೂ ಬರಿಗೈಯಿಂದ ಹೋಗಬಾರದು ಎನ್ನುವರು. ಅಲ್ಲದೆ, ಆತುರಳಾದವಳ ಬಳಿಗೆ ಔಷಯಿಲ್ಲದೆ ಹೇಗೆ ಹೋಗಲಿ? ಅಲ್ಲದೆ, ನನ್ನೋಬನ ಎದೆಯ ಮದ್ದಿಗೆ ಉಪಶಮನವಾದೀತೋ ಇಲ್ಲವೋ ಎಂದು ಹೇಳುವುದು ಅಸಾಧ್ಯ. ನನ್ನ ಕಷ್ಟವೇನೆಂದರೆ ವಾನರಗಳು ವಿಹರಿಸಲು ಹೋಗುವಾಗ ತಮ್ಮ ಎದೆಗಳನ್ನು ಅಲ್ಲಿಯೇ ಬಿಟ್ಟುಹೋಗುವುವು. ಅವೆಲ್ಲವನ್ನೂ ಕೊಂಡು ಈಗಲೇ ಹಿಂದಿರುಗಿ ಬರುವೆ. ಬೇಗನೆ ಹಿಂದಿರುಗು. ಹೀಗೆನ್ನಲು ಮೊಸಳೆಯು ಮಾರುತವೇಗದಿಂದ ಕೂಡಲೆ ಬಂದು ಅತ್ತಿಯಮರದ ಸಮೀಪಕ್ಕೆ ಬರಲು ಶಾಖಾಚರನು ಅದರ ಶಿಖರವನ್ನು ಮೆಟ್ಟಿ ಮರದ ತುದಿಕೊಂಬೆಗೆ ಹಾರಿ ಹೀಂದಕ್ಕೆ ತೋರಿಸಿ ನೀಂದಿಸಿ ಆಡುತ್ತಿರಲು ಕ್ರಕಚನು ಕಂಡು, ಎನಯ್ಯಾ ಭಾವಾ! ನೀನು ಇಲ್ಲಿ ನಿಂತು ಉದಾಸೀನಭಾವದಿಂದ ನುಡಿಯುತ್ತಿರುವೆ. ಅತ್ತ ನಿನ್ನ ತಂಗಿಯ ಅವಸ್ಥೆ ವಿಷಮವಾಗಿದೆ. ತಡಮಾಡದೆ ಬಂದು ನಿನ್ನ ಎದೆಯನ್ನು ಆಕೆಗೆ ಕೊಟ್ಟು ಬಳಿಕ ನಿನ್ನನ್ನು ಅಂತರ್ದ್ವೀಪಕ್ಕೆ ಕರೆದೊಯ್ಯುವೆನು. ಅಲ್ಲಿ ನೀನೂ ಆವಾನರಸ್ತ್ರೀಯರೊಡಗೂಡಿ ಬಳಿಕ ಇಲ್ಲಿಗೆ ಬಂದು ಮೆಚ್ಚಿದಂತೆ ಆಡುತ್ತಿರು ಎನ್ನಲು ಕೃಷ್ಣವದನನು ಹೀಗೆಂದನು.

ಕೋಡಗದೆರ್ದೆ ಮರ್ದೆಂದೆಲೆ
ಱೋಡಗ ನೀನೆನಗೆ ಪೇೞ್ದೆಯಾಗಳೆ ದೆಸೆಗೆ
ಟ್ಟೋಡಿತ್ತೆನ್ನೆರ್ದೆಯುಂ ನೀಂ
ಮಾಡೈ ನಿನ್ನೆರ್ದೆಯಿನೆನ್ನ ತಂಗಿಗೆ ಮರ್ದಂ  ೪೦೨

ಎಂಬುದು ಜಲಚರನಿವನಿನಿತಱೊಳೊಳಗನಱ*ದನಕ್ಕುಮಾದೊಡಮೇನಿನ್ನುಂ ನಂಬೆ ನುಡಿದು ನೋೞ್ಪೆನೆಂದು ಭಾವಾ! ನಿನ್ನೆರ್ದೆ ಕೆಟ್ಟೊಡೇನಾಯ್ತು ನಿನ್ನ ತಂಗಿಗೆ ಪೆಱತು ಪೆಱತು ಮರ್ದಂ ಮಾಡಲಕ್ಕುಮದೀಗಳೆನ್ನ ಪ್ರಾಣಾಪ್ತನಪ್ಪ ನಿನ್ನಂ ನೋಡವೇೞ್ಕೆಂದುಮೆನ್ನ ಪೆಂಡತಿಯರುಮಾ ವಾನರಿಯರುಂ ನಿನ್ನ ಬರವನೆ ಪಾರುತಿರ್ಪರಲ್ಲಿಗೆ ಪೋಗಲ್ವೇೞ್ಕುಂ ಬೇಗಂ ಬಾಯೆನೆ ಬಲೀಮುಖನಿಂತೆಂದಂ:

ಭವದೀಯಾನೃತಮಂ ನಂ
ಬಿ ವಿಪತ್ತಿಯನೆಯ್ದಿ ಬೞ್ದೆನಿನ್ನಾಂ ಬರ್ಪಂ
ದವಿವೇಕ ವಿಕಳ ಜಂಬುಕ
ನ ವಚನಮಂ ನಂಬಿ ಸತ್ತ ಬೆಳ್ಗತ್ತೆಯವೊ  ೪೦೩

ಎಂಬ ಬಲೀಮುಖನ ಮಾತಂ ಕೇಳ್ದು ಬೆಳ್ಗತ್ತೆಗೇನಾದುದೆನೆ ವಾನರನಿಂತೆಂದಂ :

ಶ್ಲೋ|| ಅಗತಶ್ಚ ಗತಶ್ಚೈವ ಯೋ ಗತ್ವಾ ಪುನರಾಗತಃ
ಅಕರ್ಣಹೃದಯೋ ಮೂರ್ಖಃ ಸ್ವಯಂ ತೇನ ಹತಃ ಖರಃ  ||೧೯೧||

ಟೀ|| ಕರ್ಣಹೃದಯವಿಲ್ಲದ ಮೂರ್ಖನಪ್ಪಾವುದಾನೊಂದು ಕತ್ತೆ ಬಂದು ಹೋದಂ ತಪ್ಪುದು. ಮತ್ತೆ ಬಂದು ತಾನೇ ಕೊಲಿಸಿಕೊಂಡಿತು ಎಂಬ ಕಥೆಯುಂಟದೆಂತೆನೆ :

೪೦೨. ಕೋಡಗದ ಎದೆ ಮದ್ದು ಎಂದು, ಎಲೆ ರೋಡಗ ! ನೀನು ನನಗೆ ಆಗಲೇ ಹೇಳಿದೆಯಲ್ಲವೇ. ನನ್ನ ಎದೆ ದೆಸೆಗೆಟ್ಟು ಓಡಿತು. ನೀನು ನಿನ್ನ ಎದೆಯನ್ನು  ನನ್ನ ತಂಗಿಗೆ ಮದ್ದುಮಾಡು, ವ|| ಅದಕ್ಕೆ ಆ ಜಲಚರನು ಇವನು ಇಷ್ಟರಲ್ಲೇ ಗುಟ್ಟನ್ನು ಅರಿತನು. ಆದರೂ ಇನ್ನೂ ನಂಬುವಂತೆ ಹೇಳಿ ನೋಡುವೆನು ಎಂದು ಭಾವಾ! ನಿನ್ನ ಎದೆಯು ದೆಸೆಗೆಟ್ಟರೇನಾಯಿತು; ನಿನ್ನ ತಂಗಿಗೆ ಬೇರೇನಾದರೂ ಮದ್ದನ್ನು ಮಾಡಿದರಾಯಿತು. ಅಲ್ಲದೆ ಈಗ ನನ್ನ ಪ್ರಾಣಾಪ್ತನಾದ ನಿನ್ನನ್ನು ನೋಡಬೇಕೆಂದು ನನ್ನ ಹೆಂಡತಿಯರೂ ಆ ವಾನರಿಯರೂ ನಿನ್ನ ಬರವನ್ನೇ ನಿರೀಕ್ಷಿಸುತ್ತಿರುವರು. ಅಲ್ಲಿಗೆ ಹೋಗೋಣ ಬೇಗ ಬಾ ಎನ್ನಲು ಬಲೀಮುಖನು ಹೀಗೆಂದನು: ೪೦೩. ನಿನ್ನ ಸುಳ್ಳನ್ನು ನಂಬಿ ವಿಪತ್ತನ್ನು ಹೊಂದಿ ಬದುಕಿಕೊಂಡೆ; ಇನ್ನು ನಾನು ಬಂದರೆ ಅವಿವೇಕಿಯಾದ ಜಂಬುಕನ ಮಾತನ್ನು ಕೇಳಿ ಸತ್ತ ಬೆಳ್ಗತ್ತೆಯಂತಾದೀತು. ಅದನ್ನು ಕೇಳಿ ಬೆಳ್ಗತ್ತೆಗೆ ಏನಾಯಿತು ಎಂದು ವಿಚಾರಿಸಲು ವಾನರನು ಹೀಗೆಂದನು: ಶ್ಲೋ|| ಕಿವಿ ಎದೆಗಳಿಲ್ಲದ ಮೂರ್ಖನಾದ ಕತ್ತೆಯೊಂದು ಬಂದು ಹೋದಂತಾಗುವುದು. ಅಲ್ಲದೆ ಅದು ತಾನೇ ಬಂದು ಕೊಲ್ಲಿಸಿಕೊಂಡಿತು ಎಂಬ