ಶ್ರೀಯಂ ನಿರಂತರಂ ತನ

ಗಾಯತ್ತಂ ಗೆಯ್ವ ನೃಪತಿ ಪರಕೃತ ವಿವಿಧಾ-
ಪಾಯಂಗಳ್ಗೊಳಗಾಗದೆ
ಮಾಯಾತ್ಮಕನಂತೆ ವಂಚಿಪುದು ನಿಪುಣತೆಯಿಂ  ೩೯೧

ಅದು ಕಾರಣದಿಂ ನಯಕೋ-
ವಿದನಸಮಂ ದುರ್ಗಸಿಂಹವಿಭು ವಿರಚಿಸಿದಂ
ಮದರಹಿತಂ ಗುಣವಿಹಿತಂ
ಮುದದಿಂ ವಂಚನೆಯ ತಂತ್ರಮಂ ನೃಪಹಿತಮಂ    ೩೯೨

ಅದೆಂತೆನೆ, ಶ್ಲೋ|| ಪ್ರಾಪ್ತಮರ್ಥಂ ತು ಯೋ ಮೋಹಾದಾನೀತಂ ಪ್ರತಿಮುಂಚತಿ ಸತತಂ ವಂಚ್ಯತೇ ಮೂಢೋ ಜಲಜ; ಕಪಿನಾ ಯಥಾ ||೧೮೯||

ಟೀ|| ಅವನಾನೋರ್ವಂ ಆದಂಥ ಅರ್ಥವನಱ*ಯದೆ ಬಿಟ್ಟಿಹನೊ ಅವನೆಲ್ಲರಿಂದಂ ವಂಚಿಸಿಕೊಳಲ್ಪಡುವನು ಅದು ಹೇಗೆಂದೊಡೆ ಮೊಸಳೆಯನ್ನು ಕಪಿ ವಂಚಿಸಿದ ಹಾಂಗೆ. ಆ ಕಥಾಪ್ರಪಂಚಮೆಂತೆಂದೊಡೆ.