ಅವಿರಳ ವಿಗಳಿತ ಮದಜಲ
ಲವೋಗ್ರಕರಟೋಪಕರಟಿ ಮಥನಂ ಕಂಠೀ
ರವನಿರ್ಪುದು ನಾಮದಿನಮಿ
ತವಿಕ್ರಮಂ ಜ್ವರಗತಕ್ರಮಂ ಗಿರಿತಟದೊ  ೪೦೪

ಅಂತಾ ಸಿಂಹಂ ಮಱುಗುತ್ತಂಬಟ್ಟು ಗೊಂಕರಕೞ್ತೆಯಂ ಬಯಸಿ  ಬಾಯೊಱೆತು ತನ ಗನುಚರನಪ್ಪುದೊಂದು ನರಿಗೆ ಪೇೞ್ವುದುಮಿದಾವ ಗಹನಮೀಗಳೆ ತರ್ಪೆನೆಂದಾ ನರಿ ಪೇೞ್ದು ಪೋಗಿಯಗಸರ ಪೊೞೆಯೊಳಾಡುತಿರ್ಪ ಕೞ್ತೆಯಂ ಕಂಡು ಸಾರ್ದು ಭಾವಾ ! ನಿನ್ನೋಡಲ್ ಬಡವಾದುದೇಂ ಕಾರಣಮೆಂದೊಡೇನಂ ಪೇೞ್ವೆನೀಯಸಗನೂರ ಸೀರೆಯೆಲ್ಲಮನೆನ್ನ ಬೆನ್ನೊಳೊಟ್ಟಿಕೊಂಡು ಮತ್ತಲಿತ್ತಲುಮಾಹಾರಾರ್ಥಕ್ಕೆ ಪೋಗಲೀಯನದಱ*ಂದೊಡಲುಂ ಬಡವಾದುದೆಂಬುದುಂ ಆ ಜಂಬುಕನಿಂತೆಂದಂ : ಎಲೆ ಪಾಪಕರ್ಮ ನಿನಗಿನಿತು ದುಃಖಮುಳ್ಳೊಡೆ ಮುನ್ನಮೆ ಎನಗಱ*ಪಿದೆಯಿಲ್ಲ. ಎನ್ನ ತಂಗಿಯರಪ್ಪ ಗರ್ದಭೆಯರಿರ್ವರ್ ನಿನ್ನಂತೆ ಭಾರಾಕ್ರಾಂತೆಯಾಗಿರ್ದಳ್ಕಿ ಚಿಂತಿಸುತ್ತಿರ್ದೊಡವರನೊಡಗೊಂಡೆಯ್ದಿ ಎನ್ನಿರ್ಪ ಕಾಡಿನೊಳಿರಿಸೆ ನಿಶ್ಚಿಂತರಾಗಿರ್ದ ರಾಸಭೀವಿಲಾಸಿನಿಯರ್ ತಮಗೊರ್ವ ಪುರುಷನಂ ತರವೇೞ್ಕುಮೆಂದೆನ್ನಂ ತುತಿಸುತ್ತಿರ್ದಪರ್. ನಿನಗಂ ಮನೋರಥಸಿದ್ಧಿಯಕ್ಕುಂ. ಬೇಗಂ ಬಾಯೆನಲೊಡಂ,

ರಾಗಿಸಿ ರಾಸಭನಿರದತಿ
ವೇಗದಿನಾ ನರಿಯ ಪಿಂದುಪಿಂದನೆ ಬಂದಂ
ಮೇಗಪ್ಪಪಾಯಮಂ ಕಡು
ರಾಗಿಗಳೇಂ ಕಂಡರೊಳರೆ ಭೂಮಂಡಲದೊಳ್ ೪೦೫

ಕಥೆಯುಂಟು. ಅದೇನೆಂದರೆ, ೪೦೪. ಸದಾ ಸುರಿಯುತ್ತಿರುವ ಮದಜಲದಿಂದ ಕೂಡಿದ ಆನೆಗಳನ್ನು ಸಂಹರಿಸಿದ ಅಮಿತವಿಕ್ರಮನೆಂಬ ಸಿಂಹವು ಒಂದು ಗಿರಿತಟದಲ್ಲಿ ರೋಗಗ್ರಸ್ತನಾಗಿ ವಾಸಮಾಡಿಕೊಂಡಿತ್ತು. ವ|| ಆ ಸಿಂಹಕ್ಕೆ ಮರುಜ್ವರ ಬಂದು ಗೊಂಕರ ಕತ್ತೆಯನ್ನು ಬಯಸಿ ಬಾಯ್ನೀರಿಟ್ಟು ತನ್ನ ಅನುಚರನಾದ ಒಂದು ನರಿಗೆ ಹೇಳಿತು. ಆ ನರಿಯು ಇದು ಎಂಥ ಮಹಾಕಾರ್ಯ, ಈಗಲೇ ತರುವೆನು ಎಂದು ಹೇಳಿ ಹೋಗಿ ಅಗಸರ ಹೊಳೆಯಲ್ಲಿ ಆಡುತ್ತಿದ್ದ ಕತ್ತೆಯನ್ನು ಕಂಡು ಮೆಲ್ಲನೆ ಸಮೀಪಿಸಿ, ಭಾವಾ ! ನಿನ್ನ ಶರೀರವು ಬಡವಾಗಲು ಏನು ಕಾರಣ ಎಂದು ಕೇಳಿತು. ಅದಕ್ಕೆ ಕತ್ತೆಯು, ಏನನ್ನು ಹೇಳಲಿ, ಈ ಅಗಸನು ಊರ ಬಟ್ಟೆಗಳನ್ನೆಲ್ಲ ನನ್ನ ಬೆನ್ನ ಮೇಲೆ ಕಟ್ಟಿ ಅತ್ತಿತ್ತ ಆಹಾರಕ್ಕೂ ಹೋಗಲು ಬಿಡುವುದಿಲ್ಲ. ಅದರಿಂದ ಒಡಲು ಬಡವಾಗಿದೆ ಎಂದಿತು. ಅದಕ್ಕೆ ಆ ಜಂಬುಕನು, ಎಲೈ ಪಾಪಕರ್ಮ ! ನಿನಗಿಷ್ಟು ದುಃಖವಾಗಿದ್ದರೆ ಮೊದಲೇ ನನಗೆ ಯಾಕೆ ತಿಳಿಸಲಿಲ್ಲ. ನನ್ನ ತಂಗಿಯಂದಿರಾದ ಇಬ್ಬರು ಗರ್ದಭೆಯರೂ ನಿನ್ನಂತೆ ಭಾರಕ್ರಾಂತೆಯರಾಗಿದ್ದು ಅಳುಕಿ ಚಿಂತಿಸುತ್ತಿರಲು ಅವರನ್ನು ಕರೆದುಕೊಂಡು ಹೋಗಿ ನಾನಿರುವ ಕಾಡಿನಲ್ಲಿ ಇಡಲು ನಿಶ್ಚಿಂತರಾಗಿರುವರು. ಆದರೆ ಆ ರಾಸಭವಿಲಾಸಿನಿಯರು ತಮಗೊಬ್ಬ ಪುರುಷನನ್ನು ತರಬೇಕು ಎಂದು ನನ್ನನ್ನು ಸ್ತುತಿಸುತ್ತಿರುವರು. ನಿನಗೂ ಮನೋರಥಸಿದ್ಧಿಯಾಗುವುದು; ಬೇಗನೆ ಬಾ ಎಂದಿತು. ೪೦೫. ರಾಸಭನು ಸಂತೋಷದಿಂದ ಅತಿವೇಗವಾಗಿ ಆ ನರಿಯ ಹಿಂದೆ ಹಿಂದೆಯೇ ಬಂದಿತು. ಮುಂದೆ ಅಂತು ಪೋಪುದುಮಾ ನರಿ ಹರಿಯಿರ್ದ ಗುಹಾದ್ವಾರಮಂ ಗರ್ದಭೆಯರೊಳಗಿರ್ದರ್ ಪುಗೆನಲೊಡಂ ಪುಗುವ ಕೞ್ತೆಯಂ ಕಂಡು ಸಿಂಹಂ ಜವಂಗುಂದಿದ ಕಾರಣದಿಂ ಲಂಘನಾಸಕ್ತನಾಗಿ ಲಂಘಿಸಲಾಱದೆ ರಭಸಂಗೆಯ್ದೆಯ್ತರ್ಪುದುಂ ಕೞ್ತೆ ಬೆರ್ಚುತೋಡುತಿರ್ಪುದಂ ಕಂಡು ಸೃಗಾಲಂ ಕರಂ ಮುಳಿದು ಸಿಂಹನಲ್ಲಿಗೆ ಬಂದೇಂ ಗಡ ಕೞ್ತೆಯಂ ಮೊದಲಾಗಿ ಪಿಡಿಯಲಾರ್ತೆಯಿಲ್ಲ ನೀನೆಂತು ಬರ್ದಪೆಯೆಂದು ನುಡಿಯೆ ಹರಿ ಕರಮೆ ಸಿದ್ಧಿಗಾಗಿ ಗುಹೆಯಂ ಪೊಕ್ಕುದಂ ಕೊಲ್ವು ದಾವ ಗಹನಮೆಂದನವಧಾನದಿಂ ಪಾಯ್ದ ಕಾರಣದಿಂ ತಪ್ಪಿದುದು.ಇನ್ನದಂ ಕೊಂಡು ಬಾ ಕಂಡಾಗಲೆ ಬಿಡಾಲನಿಲಿಯಂ ಕೊಲ್ವಂತಶ್ರಮದೊಳೆ ಕೊಂದಪೆನೆಂದೊಡೆ ಮತ್ತೆ ನರಿ ಪರಿದಾ ಕೞ್ತೆಯಂ ಕಂಡೇಂ ಭಾವ! ನೀಂ ಕಳ್ಳರಂ ಕಂಡ ಬೆಳ್ಳಾಳಂತೆ ಬೆದಱ*ಯೆನಗಂ ಪೇೞದೆ ಪೆಱಗಂ ನೋಡದೋಡಿ ಬಂದೆಯದೇಂ ಕಾರಣಮೆನೆ ರಾಸಭನಿಂತೆಂದ: ಆಗುಹೆಯನಾಂ ಪುಗಲೊಡನೊಂದು ರೂಪು ಮೊಳಿದು ಪರಿತಂದು ಮೇಲ್ವಾಯಲೊಡಂ ಭಯಂಬಟ್ಟು ಬಂದೆನೆನೆ ಸೃಗಾಲನೆಂದಂ: ಗಾಳುಗಳಪ್ಪ ಗರ್ದಭೆಯರ್ ವಿರೋಕಾಮಿಗಳಪ್ಪುದೞ*ಂ ಕಾತರಿಸಿ ಮೇಲೆ ಮೇಲೆ ಬೀೞಲೊಡಂ ಬಂದೆ ನಿನ್ನ ಗಂಡುತನದ ಪುರುಳಂ ಕಂಡೆನ್ನ ತಂಗಿಯರ್ ಕರುಳಂ ಪಿಡಿದು ನಗೆಯೊಳ್ ಪೊರಳುತ್ತಮಿರ್ದರ್. ನೀನಂಜಲ್ವೇಡ. ಬಂದವಱೊಳ್ ಸುರತಸುಖವನನುಭವಿಸುತ್ತುಮಿರ್ದಪೆ ಬಾಯೆಂಬುದುಮಾ ಕೞ್ತೆ ಮಿೞ್ತುವಿನ ಬೆನ್ನೊಳ್ ಪೋಪಂತೆ ನರಿಯ ಬೆನ್ನೊಳ್ ಪೋಗಿ ಸಂಭವಿಸುವ ಅಪಾಯವನ್ನು ಕಾಮಿಗಳು ಕಾಣಬಲ್ಲರೇ ವ|| ಹಾಗೆ ಹೋಗಲು ಆ ನರಿಯು ಸಿಂಹವಿದ್ದ ಗುಹಾದ್ವಾರವನ್ನು ತೋರಿಸಿ ಗರ್ದಭೆಯರು ಒಳಗಿರುವರು ಒಳಕ್ಕೆ ಹೋಗು ಎನ್ನಲು ಹೋಗುತ್ತಿದ್ದ ಕತ್ತೆಯನ್ನು ಕಂಡು ಸಿಂಹವು ಶಕ್ತಿಗುಂದಿದ ಕಾರಣದಿಂದ ಲಂಘನಾಸಕ್ತನಾಗಿಯೂ ಲಂಘೀಸಲಾರದೆ ರಭಸದಿಂದ ಬರುತ್ತಿರಲು ಕತ್ತೆಯು ಬೆದರಿ ಓಡುತ್ತಿರುವುದನ್ನು ಕಂಡು ನರಿಯು ಕೋಪಿಸಿ ಸಿಂಹದ ಬಳಿಗೆ ಬಂದು, ಎನಯ್ಯಾ! ಕತ್ತೆಯನ್ನು ಹಿಡಿಯುವ ಸಾಮರ್ಥ್ಯ ನಿನ್ನಲ್ಲಿಲ್ಲ; ನೀನುಹೇಗೆ ಜೀವಿಸಬಲ್ಲೆ ಎಂದಿತು. ಸಿಂಹಕ್ಕೆ ತುಂಬ ಅವಮಾನವಾಗಿ ಗುಹೆಯನ್ನು ಹೊಕ್ಕ ಪ್ರಾಣಿಯನ್ನು ಕೊಲ್ಲುವುದು ಎನು ಮಹಾ! ಅವಧಾನದಿಂದ ಹಾರಿದ ಕಾರಣ ಕತ್ತೆ ತಪ್ಪಿಸಿಕೊಂಡು ಹೋಯಿತು. ಇನ್ನೊಮ್ಮೆ ಅದನ್ನು ಕರೆದುಕೊಂಡು ಬಾ; ನೋಡಿದ ಕೊಡಲೇ ಬೆಕ್ಕು ಇಲಿಯನ್ನು ಕೊಲ್ಲುವಂತೆ ನಿರಾಯಾಸವಾಗಿ ಕೊಲ್ಲವೆನು ಎಂದಿತು ಬಳಕ ನರಿಯು ಕತ್ತೆಯ ಬಳಿಗೆ ಹೋಗಿ ಎನಯ್ಯಾಭಾವ! ನೀನು ಕಳ್ಳರನ್ನು ಕಂಡ ಹೇಡಿಯಂತೆ ಹೆದರಿ ನನಗೂ ಹೇಳದೆ ಹಿಂದಕ್ಕೆ ನೋಡದೆ ಓಡಿ ಬಂದೆಯೇಕೆ ಎಂದು ಕೇಳಿತು. ಅದಕ್ಕೆ ರಾಸಭನು ಆ ಗುಹೆಯನ್ನು ನಾನು ಪ್ರವೇಶಿಸಲು ಒಂದು ರೂಪವು ಆರ್ಭಟಿಸಿ ಮೇಲೆ ಹಾಯಬೇಕೆಂದು ಬರಲು ಭಯಪಟ್ಟು ಓಡಿಬಂದೆನು ಎಂದಿತು. ಅದಕ್ಕೆ ನರಿಯು, ಕಾತರರಾಗಿದ್ದ ಗರ್ದಭೆಯರು ವಿರೋಧಕಾಮಿಯರಾದುದರಿಂದ ಕಾತರಿಸಿ ಮೇಲೆ ಮೇಲೆ ಬೀಳಲು ನೀನು ಹೆದರಿ ಓಡಿ ಬಂದೆ; ನಿನ್ನ ಗಂಡುತನದ ಹುರುಳನ್ನು ಕಂಡು ನನ್ನ ತಂಗಿಯರು ಕರುಳನ್ನು ಹಿಡಿದು ನಗೆಯಿಂದ ಹೊರಳುತ್ತಿದ್ದಾರೆ; ನೀನು ಅಂಜಬೇಡ; ಬಂದು ಅವರೊಡನೆ

ಸುರತಸುಖಕಾಂಕ್ಷೆಯಿಂ ರಾ
ಗರಸಾಂಧಂ ರಾಸಭಂ ಮಹಾದ್ರಿಗುಹಾಭ್ಯಂ
ತರಮಂ ಪೊಕ್ಕುದು ಮನ್ಮಥ
ಶರಪರವಶನಪ್ಪ ದೇಹಿ ಪುಗದೆಡೆಯುಂಟೇ  ೪೦೬

ಅಂತು ಪೊಕ್ಕುದನಾ ಸಿಂಹಂ ಪಾಯ್ದು ಗಂಟಲನೊಡೆಯೊತ್ತಿಕೊಂದು ತಿನಲಿರ್ದುದಂ ನರಿ ಕಂಡೀ ಬೂತುವಿದೆಲ್ಲಮಂ ತಾನೆ ತಿಂಗುಮೆಂತಱ*ಯಲಕ್ಕುಂ ಬೞ*ಕ್ಕೇಗೆಯ್ವೇನೀಗಳೆ ವಂಚಿಸಿಯೆನಗಪ್ಪನಿತಂ ಕಳೆದುಕೊಳ್ವೆನೆಂದು ಸಿಂಹದ ಸಮೀಪಕ್ಕೆ ಬಂದು ದೇವಾ! ನೀವೀಗಳ್ ಪಲವು ದೆವಸಂ ದೇವತಾರಾಧನಂಗೆಯ್ದುದಿಲ್ಲಿಂದು ಇಷ್ಟದೇವತಾ ಸಮಾರಾಧನಂಗೆಯ್ದು ರಾಸಭಮಂ ವ್ಯಾನಿರ್ಹರಣಾರ್ಥಂ ದಿವ್ಯೌಷಧಮೆಂದು ಬಗೆದಾರೋಗಿಸಿಮೆಂಬುದುಂ, ಮೃಗೇಂದ್ರನಂತೆಗೆಯ್ವೆಂ ಆಂ ದೇವತಾನಮಸ್ಕಾರಂಗೆಯ್ದು ಬರ್ಪನ್ನೆವರಂ ನೀನಿದನಗಲದಿರೆಂಬುದುಂ ಮಹಾಪ್ರಸಾದಮೆಂದುಮಾ ಸಿಂಹಂ ಪೋಗಲೊಡಂ ಗರ್ದಭನೆರ್ದೆಯುಮಂ ಕಿವಿಯುಮಂ ತಿಂದು ತುಡುಗುಣಿತೊೞ*ನಂತೆ ಬಾಯಂ ತೊಡೆದುಕೊಂಡು ತಾನಲ್ಲದಂತಿರ್ಪುದುಮಾ ಮೃಗಾರಾಜಂ ಬಂದು ಈಗರ್ದಭನೆರ್ದೆಯುಂ ಕಿವಿಯುಮೆಲ್ಲಿರ್ದುವೆನೆ ಜಂಬುಕನಿಂತೆಂದುದು;

ಶ್ಲೋ|| ಕುತೋರ್ಧಂ ಹೃದಯಂ ಕರ್ಣಃ ಕಾಮಾಂಧಸ್ಯ ಮೃಗಾಪ
ತದ್ದೂರಪರಿನಷ್ಟೋಪಿ ಯೋಯಂ ಮೌರ್ಖ್ಯಾದಿಹಾಗತಃ ||೧೯೨||

ಟೀ|| ಕಾಮಾಂಧನಪ್ಪವಂಗೆ ಕಾರ್ಯಮೆಂಬುದಿಲ್ಲ. ಹೃದಯವೂ ಕಿವಿಯೂ ಇಲ್ಲ. ಅದೆಲ್ಲಂ ಮುನ್ನವೆ ಕೆಟ್ಟಡೆಯುಂ ಮತ್ತೆಯುಂ ಮೂರ್ಖತನದೆ ಬಂದುದು. ಅಂತುಮಲ್ಲದೆ ನಿಮಗೇಂ ಮೂರ್ಖತನವೆಡೆಗೊಂಡುದಕ್ಕುಮದಲ್ಲದೆ ಕೞ್ತೆ ನಿಮ್ಮ ಕಯ್ಯೊಳ್ ಮುನ್ನಂ ಬರ್ದುಂಕಿ ಪೋದುದು. ಮತ್ತೆನ್ನ ಮಾತಂ ನಂಬಿ ಬಂದು ಸಾವುದಾವಕಾರಣಂ. ದೇವಾ! ನೀವಿದಂ ವಿಚಾರಿಸುವುದಿಲ್ಲಕ್ಕು  ಸುರತಸುಖವನ್ನು ಅನುಭವಿಸುತ್ತಿರಬಹುದು; ಬಾ ಎನ್ನಲು ೪೦೬. ಆ ಕತ್ತೆಯು ಮೃತ್ಯುವಿನ ಹಿಂದೆ ಹೋಗುವಂತೆ ನರಿಯ ಹಿಂದೆ ಹೋಗಿ ಸುರತಸುಖಕಾಂಕ್ಷೆಯಿಂದ ರಾಗರಸಾಂಧನಾದ ಆ ರಾಸಭವು ಮಹಾದ್ರಿಗುಹಾಭ್ಯಂತರವನ್ನು ಹೊಕ್ಕಿತು. ಮನ್ಮಥ ಶರಪರವಶನಾದ ದೇಹಿಯು ಹೋಗದ ಎಡೆಯುಂಟೇ ! ವ|| ಹಾಗೆ ಹೊಕ್ಕವನನ್ನು ಆ ಸಿಂಹವು ಮೇಲೆ ಬಿದ್ದು ಗಂಟಲನ್ನು ಒತ್ತಿಕೊಂಡು ತಿನ್ನಲಿದ್ದುದನ್ನು ನರಿಯು ಕಂಡು ಈ ಪ್ರಾಣಿ ಇದೆಲ್ಲವನ್ನೂ ತಾನೇ ತಿನ್ನುವುದೋ ಏನೋ ಎಂದು ಹೇಗೆ ತಿಳಿಯುವುದು ? ಬಳಿಕ ಏನು ಮಾಡಿಲಿ ? ಈಗಲೇ ವಂಚಿಸಿ ನನಗೆ ಬೇಕಾದಷ್ಟನ್ನು ತೆಗೆದುಕೊಳ್ಳುವೆನು ಎಂದು ಸಿಂಹದ ಸಮೀಪಕ್ಕೆ ಬಂದು, ದೇವಾ ! ನೀವು ಹಲವು ದಿವಸಗಳಿಂದ ದೇವತಾರಾಧನವನ್ನು ಮಾಡಿಲ್ಲ; ಇಂದು ಇಷ್ಟದೇವತಾ ಸಮಾರಾಧನ ಮಾಡಿ ಕತ್ತೆಯನ್ನು ವ್ಯಾನಿವಾರಣಾರ್ಥವಾಗಿ ದಿವ್ಯೌಷಧವೆಂದು ತಿಳಿದು ಆರೋಗಿಸಿರಿ ಎನ್ನಲು ಮೃಗೇಂದ್ರನು ಹಾಗೆಯೇ ಆಗಲಿ ಎಂದು ನಾನು ದೇವತಾರಾಧನೆಯನ್ನು ಮಾಡಿ ಬರುವವರೆಗೆ ನೀನು ಇದನ್ನು ಬಿಟ್ಟಿರಬೇಡ ಎಂದಿತು. ಮಹಾಪ್ರಸಾದವೆಂದು ಆ ಸಿಂಹವು ಹೋದ ಕೂಡಲೇ ಕತ್ತೆಯ ಎದೆಯನ್ನು ಕಿವಿಗಳನ್ನೂ ತಿಂದು ಕಳ್ಳತೊತ್ತಿನಂತೆ ಬಾಯನ್ನು ಒರಸಿಕೊಂಡು ತಾನಲ್ಲವೆಂಬಂತೆ ಇರಲು ಆ ಮೃಗಾರಾಜನು ಬಂದು ಈ ಕತ್ತೆಯ ಎದೆಯೂ ಕಿವಿಗಳೂ ಎಲ್ಲಿಗೆ ಹೋದುವು ಎನ್ನಲು ನರಿಯು ಹೀಗೆಂದಿತು: ಶ್ಲೋ|| ಕಾಮಾಂಧನಾದವನಿಗೆ ಕೆಲಸವೆಂಬುದಿಲ್ಲ ; ಹೃದಯವೂ ಕಿವಿಯೂ ಇಲ್ಲ. ಅವೆಲ್ಲ ಮೊದಲೇ ಕೆಟ್ಟರೂ ಪುನಃ ಮೆಂದೊಡಾ ಸಿಂಹಮಿದಱ ಶರೀರಕ್ರಮಮಿಂತುಟೆಯಕ್ಕುಮೆಂದು ನಿಶ್ಚೈಸಿ ಸಂತೋಷಂಬಟ್ಟುದು. ಆನಾ ಬೆಳ್ಗೞ್ತೆಯಂತಲ್ಲೆಂ ಅಂತುಮಲ್ಲದೆಯುಂ,

ಶ್ಲೋ||  ಫಲಾನ್ಯಮೃತಕಲ್ಪಾನಿ ತೃಪ್ತಿಂ ದಾಸ್ಯಂತಿ ಯಾನಿ ಮೇ
ತಾನಿ ಭದ್ರ ನರೋಚಂತೇ ತವಾಪ್ಯೌದುಂಬರಾಣಿ ಚ ||೧೯೩||

ಟೀ|| ಆವುವು ಕೆಲವಮೃತಸಮಾನವಪ್ಪ ಪಳಂಗಳೆನಗೆ ತೃಪ್ತಿಯನೀವುವು ಇನ್ನಾ ಫಲಂಗಳ್ ನಿನಗೆ ಸೊಗಸುವವಲ್ಲವು ಎಂದು ಭಾವಾ ! ನೀಂ ಬಂದ ಬಟ್ಟೆಯೊಳೆ ಬಿಜಯಂಗೆಯ್ಯಿಮೆನೆ ಮೊಸಳೆ ಮುಸುವಿಂದಂ ವಂಚಿಸಪ್ಪಟ್ಟು ಮನಂಗೆಟ್ಟು ಪೋಪುದುಂ ವಾನರನಿಂತೆಂದಂ :

ತನ್ನ ಬಗೆ ತೀರದನ್ನಂ
ಮುನ್ನಮೆ ಡಾಂಭಿಕನಾಗಿ ನುಡಿದನ ಬಗೆಯುಂ
ಬಿನ್ನಣಮೇಂ ತಾನುಂ ಕಿಡು-
ಗುನ್ನಿರುತಂ ಮರುತನಿರ್ದು ಕಾಯ್ವೊಡಮೆಂದುಂ  ೪೦೭

ಅದಱ*ಂದಂ ನೃಪನೀತಿಶಾಸ್ತ್ರ ನಿಪುಣಂ ತಾನಾರುಮಂ ನಂಬದಿ-
ರ್ಪುದು ಮತ್ತಂ ಮಿಗೆ ನಂಬಿ ಮೆಯ್ಮಱೆದಂ ಮೆಳ್ಪಟ್ಟುಂ ಭಯಂಬಟ್ಟು ಸಿ
ಲ್ಕಿದೊಡತ್ಯಂತ ಮನಸ್ಕನಾಗಿ ಸಲೆ ಬೇಗಂ ವಂಚಿಸಲ್ ಬಲ್ಲನ-
ಪ್ಪುದು ನಾರಾಯಣನಂತನೇಕ ವಿಧದಿಂ ವಿದ್ವಜ್ಜನೈಕಾಶ್ರಯಂ  ೪೦೮

ಇದು ವಿನಮದಮರರಾಜಮೌಳಿಮಾಣಿಕ್ಯಮಂಜರೀ ಪುಂಜರಂಜಿತ ಭಗವದ್ಭವಾನೀವಲ್ಲಭ ಚರಣ ಸರಸೀರುಹಷಟ್ಚರಣಂ ಶ್ರೀಮನ್ಮಹಾಸಂವಿಗ್ರಹಿ ದುರ್ಗಸಿಂಹವಿರಚಿತಮಪ್ಪ ಪಂಚತಂತ್ರದೊಳ್ ವಂಚನಾಪ್ರಕರಣವರ್ಣನಂ ಚತುರ್ಥಂಪ್ರಕರಣಂ ಸಮಾಪ್ತಂ.

ಮೂರ್ಖತನದಿಂದ ಬಂದಿತು. ವ|| ಅಲ್ಲದೆ ನಿಮಗೇನು ಮೂರ್ಖತನ ಆವರಿಸಿರಬೇಕು. ಅಲ್ಲದೆ ಕತ್ತೆಯು ನಿಮ್ಮ ಕಯ್ಯಿಂದ ಮೊದಲು ಬದುಕಿ ಹೋಯಿತು ಮತ್ತೆ ನನ್ನ ಮಾತನ್ನು ನಂಬಿ ಬಂದು ಯಾಕೆ ಸಾಯಬೇಕಿತ್ತು. ದೇವಾ! ನೀವು ಇದನ್ನು ವಿಚಾರಿಸುವುದಿಲ್ಲ ಎನ್ನಲು ಆ ಸಿಂಹವು ಇದರ ಶರೀರಕ್ರಮವೇ ಹೀಗಿರಬೇಕು ಎಂದು ನಿಶ್ಚಯಿಸಿ ಸಂತೋಷಪಟ್ಟಿತು. ನಾನು ಆ ದಡ್ಡ ಕತ್ತೆಯಂತಲ್ಲ. ಅಲ್ಲದೆ ಶ್ಲೋ|| ಅಮೃತಸಮಾನವಾದ ನನಗೆ ತೃಪ್ತಿಯನ್ನು ನೀಡುವ ಆ ಕೆಲವು ಫಲಗಳು ಇನ್ನು ನಿನಗೆ ರುಚಿಸುವುದಿಲ್ಲ ಎಂದು, ಭಾವಾ! ನೀವು ಬಂದು ದಾರಿಯಲ್ಲೇ ದಯಮಾಡಿಸಿರಿ ಎನ್ನಲು ಮೊಸಳೆ ಆ ಮುಸುವಿಂದ ವಂಚಿತವಾಗಿ ಮನಸ್ಸುಗೆಟ್ಟು ಹಿಂದಿರುಗಿತು. ಆಗ ವಾನರನು ಹೀಗೆಂದನು: ೪೦೭. ತನ್ನ ಹೃದಯಕ್ಕೆ ಅಸಾಧ್ಯವಾಗುವ ಮೊದಲೇ ಡಾಂಭಿಕನಾಗಿ ನುಡಿಯುವವನ ಮನಸ್ಸು ಒಳ್ಳೆಯದೇ? ಮರುತನು ಕಾಪಾಡಿದರೂ ಅವನು ಕೆಡುವುದು ಖಂಡಿತ. ೪೦೮. ಅದರಿಂದ, ನೃಪಶಾಸ್ತ್ರ ನಿಪುಣನಾದವನು ಯಾರನ್ನೂ ನಂಬದಿರಬೇಕು. ಅಲ್ಲದೆ, ನಂಬಿ ಮೆಯ್ಮರೆತು ಭ್ರಷ್ಟನಾಗಿ ಭಯಪಟ್ಟು ಸಿಕ್ಕಿ ಬಿದ್ದರೂ ಬೇಗನೆ ವಂಚಿಸಬಲ್ಲವನಾಗಿರಬೇಕು. ಇದು ವಿನಮದಮರರಾಜ ಮೌಳಿಮಾಣಿಕ್ಯ ಮಂಜರೀ ಪುಂಜರಂಜಿತವಾದ ಭಗವದ್ಭವಾನೀ ವಲ್ಲಭ ಚರಣ ಸರಸೀರುಹ ಷಟ್ಚರಣನಾದ ಶ್ರೀ ಮನ್ಮಹಾಸಂವಿಗ್ರಹಿ ದುರ್ಗಸಿಂಹ ವಿರಚಿತವಾದ ಪಂಚತಂತ್ರದಲ್ಲಿ ವಂಚನಾಪ್ರಕರಣ ವರ್ಣನ ಎಂಬ ಚತುರ್ಥ ಪ್ರಕರಣ ಸಮಾಪ್ತವಾದುದು.