ಕಠಿಣ ಪದ, ಪಾರಿಭಾಷಿಕ ಪದ, ಬೆಡಗಿನ ಅರ್ಥವಿರುವ ಪ್ರಯೋಗ ಮತ್ತು ಕೆಲವು ಸಂದರ್ಭವಿವರಣೆಗಳು ಎಲ್ಲವನ್ನೂ ಇಲ್ಲಿ ಒಂದೇ ಸಾಮಾನ್ಯ ಅಕಾರಾದಿಯಲ್ಲಿ ನೀಡಲಾಗಿದೆ. ಈ ಸಂಕಲನದ ವಚನವೊಂದರ ಸಂದರ್ಭಕ್ಕೆ ಸೂಕ್ತವಾದ ಅರ್ಥವನ್ನು ಮೊದಲು ನೀಡಲಾಗಿದೆ. ಇತರ ಸಂಭವನೀಯ ಅರ್ಥಗಳನ್ನು, ಬೆಡಗಿನ ಅರ್ಥಗಳೂ ಒಳಗೊಂಡಂತೆ ನಂತರ ನೀಡಲಾಗಿದೆ. ನಮೂದು ಪದಗಳು ೧೩ ಪಾಯಿಂಟ್ದಪ್ಪ ಅಕ್ಷರಗಳಲ್ಲಿ ಮತ್ತು ವಿವರಣೆಯು ೧೨ ಪಾಯಿಂಟ್‌ಅಕ್ಷರಗಳಲ್ಲಿವೆ. ಅರ್ಧವಿರಾಮ [;] ಚಿಹ್ನೆಯು ಪದವೊಂದರ ಭಿನ್ನ ಅರ್ಥಗಳನ್ನು ಪ್ರತ್ಯೇಕಿಸುತ್ತದೆ. ಪ್ರಶ್ನಾರ್ಥಕ ಚಿಹ್ನೆಯು [?] ಊಹೆಯನ್ನು ಮತ್ತು ಕೇವಲ ಅದೊಂದೇ ಚಿಹ್ನೆ ಇದ್ದಾಗ ಅರ್ಥ ತಿಳಿದಿಲ್ಲವೆಂಬುದನ್ನೂ ಸೂಚಿಸುತ್ತದೆ. = ಚಿಹ್ನೆಯು ಸಮಾನಾರ್ಥಕ ರೂಪವನ್ನು ಸೂಚಿಸುತ್ತದೆ.

ಅಂಕ ವೀರ; ಹೋರಾಟದ ಕಣ; ಸೈನಿಕ; ತೊಡೆ

ಅಂಕಕಾರ ವೀರ

ಅಂಕುರ ಮೊಳಕೆ

ಅಂಗ ದೇಹ; ಶಿವನ ಅಂಶವಾಗಿರುವ ಆತ್ಮ

ಅಂಗನೆ ಹೆಣ್ಣು: ಪರಾಶಕ್ತಿ, ಚಿಚ್ಛಕ್ತಿ

ಅಂಗಭೋಗ ದೇವತಾ ವಿಗ್ರಹಕ್ಕೆ ಪರಿಮಳ ದ್ರವ್ಯಗಳನ್ನು ಲೇಪಿಸುವುದು

ಅಂಗವಿಡಿದವ ದೇಹಭಾವವುಳ್ಳವನು

ಅಂಡಿಸು ಆಸರೆಗಾಗಿ ಸಮೀಪಿಸು; ಹಿಂದೆಗೆ, ಹಿಮ್ಮೆಟ್ಟು

ಅಂತರೀಯ ಜ್ಞಾನ ಒಳಗಿನ ಅಂತರಂಗದ ಜ್ಞಾನ

ಅಂತರ್ಯಾಮಿ ಅಂತರಂಗದ ಭಾವ, ವಿಚಾರಗಳನ್ನು ನಿಯಂತ್ರಿಸುವ ಶಕ್ತಿ, ಆತ್ಮ

ಅಂತು ಹಾಗೆ; ಅಂತ್ಯ

ಅಂತುವ ರಹಸ್ಯ

ಅಂದಣ ಪಲ್ಲಕ್ಕಿ

ಅಂದಮಂದದರಂದ?

ಅಂಬ ಮಾಡಿ ಬಾಣವನ್ನು ಮಾಡಿ

ಅಂಬಿನ ಹಿಳಿಕು ಬಾಣದ ಹಿಂಭಾಗ

ಅಂಬು ಬಾಣ; ನೀರು; ಜ್ಞಾನ

ಅಂಬುಜ ತಾವರೆ

ಅಕ್ಕ ಅನಾದಿ

ಅಕ್ಕೆ ಅಳಲು

ಅಗಡ ಅಕಟ ಭಯಂಕರ; ಅಗಡು-ಕ್ರೌರ್ಯ, ಕಾಮುಕತೆ; ತುಂಟತನ; ಹಂಗು; ನಿಂದನೆ

ಅಗಲು ದೇಹ; ಊಟದ ತಟ್ಟೆ; ಬೇರ್ಪಡು

ಅಗಿವುತ್ತಿದೆ ಹೆದರುತ್ತಿದೆ; ಸಂತೋಷಿಸುತ್ತಿದೆ; ಜಿಗಿಯುತ್ತಿದೆ, ಕೂಗುತ್ತಿದೆ

ಅಗ್ಘವಣಿ ಅರ್ಘ್ಯಪಾದ್ಯ, ನೀರು, ಪವಿತ್ರವಾದ ನೀರು

ಅಗ್ನಿಸ್ತಂಭ ಮಂತ್ರದ ಬಲದಿಂದ ಬೆಂಕಿಯ ಕಾವು ತಟ್ಟದಂತೆ ತಡೆಯುವ ಶಕ್ತಿ

ಅಘಟದಿಂದ ದೇಹವಿಲ್ಲದೆ

ಅಘಟಿತಘಟಿತ ಅಸಂಭವವನ್ನೂ ಸಂಭವ ಮಾಡಿದಾತ

ಅಚ್ಚ ಪ್ರಸಾದ ಭಾವ ಸೋಂಕದ ಮುನ್ನವೆ ಲಿಂಗ ಸೋಂಕಿ ಬಂದ ಪ್ರಸಾದ ಆದಯ್ಯ

ಅಚ್ಚುಗ=ಅಚ್ಚಗ ಕಳವಳ; ತಳಮಳ

ಅಚ್ಚುಗವಾಗಿ ಪ್ರಿಯವಾಗಿ

ಅಜಕೋಟಿ ಕಲ್ಪ ಬ್ರಹ್ಮನ ಕೋಟಿವರ್ಷಗಳ ಕಾಲಮಾನ

ಅಜಾತ ಹುಟ್ಟಿಲ್ಲದವನು

ಅಟ್ಟೆ ೧) ಪಾದರಕ್ಷೆಯ ತಳಭಾಗದ ಹಲ್ಲೆ ೨) ಮುಮಡ ೩) ಅಜ್ಞಾನ

ಅಟ್ಟೆನೆಂದಡೆ ಅಡುಗೆಮಾಡಿದೆನೆಂದರೆ

ಅಡಕದೆ ವಶವಾಗದೆ

ಅಡಸಿ ಆಕ್ರಮಿಸಿ, ಅಡಗಿ, ನಾಟಿ, ಚುಚ್ಚಿ

ಅಡಿಗರಟ ತೆಂಗಿನ ತಳದ ಚಿಪ್ಪು

ಅಡಿಗೂಂಟ ಅಡಿಗಲ್ಲು; ಚಪ್ಪಲಿ ಹೊಲೆಯಲು ಬಳಸುವ ಗೂಟದ ಆಕಾರದ ಸಾಧನ

ಅಡಿವೆಜ್ಜೆ ಪಾದ

ಅಡ್ಡಣಿಗೆ ಊಟದ ತಟ್ಟೆಯನ್ನಿಟ್ಟುಕೊಳ್ಳುವ ಮೂರು ಕಾಲಿನ ಮಣೆ

ಅಣಲು ದವಡೆ; ಬೆಂಕಿ

ಅಣಿ ಹಾಸು ಮತ್ತು ಹೊಕ್ಕುಗಳ ಜೋಡಣೆ

ಅತಿಗಳೆದ ಮೀರದ, ಕಡೆಗಣಿಸಿದ

ಅತೀತ ಮೀರಿದ

ಅತ್ತೆ ಶರಣನ ಹೆಂಡತಿಯಾದ ಜ್ಞಾನಶಕ್ತಿಯ ತಾಯಿ ಪರಾಶಕ್ತಿ

ಅತ್ಯತಿಷ್ಠದ್ದಶಾಂಗುಲ ಅರಿಯುವ, ಕಲ್ಪಿಸಿಕೊಳ್ಳುವ, ಕಾಣುವ ಎಲ್ಲದರಿಂದ ಹತ್ತಂಗುಲ ಮೀರಿ ನಿಂತವನು, ದೇವರು

ಅದ್ವಯ ಎರಡಿಲ್ಲದ್ದು, ಏಕ, ಅಖಂಡವಾಗಿರುವುದು

ಅಧರ ತುಟಿ, ಬಾಯಿ

ಅಧವೆ ವಿಧವೆ

ಅನಂಗಸಂಗಿ ಕಾಮನ ಸಂಗದಲ್ಲಿರುವವರು

ಅನಲ ಬೆಂಕಿ

ಅನು ಜೊತೆ, ಸ್ನೇಹ, ಪ್ರೀತಿ, ರೀತಿ

ಅನುಭಾವ ತಾನು ಅದೇ ಆಗಿ ಅನುಭವಿಸುತ್ತಿರುವ ವ್ಯಕ್ತಿ ಮತ್ತು ಅನುಭವದ ವಸ್ತುಗಳ ನಡುವೆ ಭೇದವಿಲ್ಲದಿರುವುದು ಸಮಾನ ಅನುಭವಿಗಳ ನಡುವಿನ ಸಂವಾದ, ಶಿವನೊಡನೆ ಒಂದಾಗುವುದು, ಲಿಂಗಾಂಗಸಾಮರಸ್ಯ

ಅನ್ನಕ್ಕ ವರೆಗೆ, ತನಕ

ಅನ್ನಬರ ಅಲ್ಲಿಯವರೆಗೆ, ಆ ತನಕ

ಅಪೇಯ ಕುಡಿಯಲು ಅನರ್ಹವಾದದ್ದು

ಅಪ್ಪು ನೀರು; ಅಪ್ಪಿಕೋ; ಮನಸ್ಸು

ಅಪ್ಪು ಬರತಿತ್ತು ಮನಸ್ಸು ಒಣಗಿತ್ತು, ನೀರು ಒಣಗಿತ್ತು

ಅಪ್ರಮಾಣು ಪ್ರಮಾಣರಹಿತ

ಅಭಿಸಂದಿ ಸೇರಿಕೆ, ಮೇಳ

ಅಭಿನವ ಹೊಸತಾದ

ಅಮಳ ಮಲಿನತೆಯಿಲ್ಲದ, ಶುದ್ಧವಾದ

ಅಮೃತಗಣ ಛಂಧಸ್ಸಿನಲ್ಲಿ ಜಗಣವನ್ನು ಹೊರತುಪಡಿಸಿ ಉಳಿದ ನಾಲ್ಕು ಮಾತ್ರೆಯ ಗಣಗಳು

ಅರಗಿನ ಕಂಭ ಶರಣನ ಭಾವವೆಂಬ ಸ್ತಂಭ

ಅರಗಿನ ಬೊಂಬೆ ನಿರ್ಭಾವ ಸ್ವರೂಪದ ಪರಬ್ರಹ್ಮ; ಮಲತ್ರಯಗಳಿಂದ ಕೂಡಿದ ದೇಹ

ಅರತ ಮೋಹ; ಬತ್ತಿದ; ನೊಂದ

ಅರತಿತ್ತು ಒಣಗಿತ್ತು

ಅರತುದು ಬತ್ತಿತು, ಇಂಗಿತು

ಅರಲುಗೊಂಡ ಕೆರೆ ಕೆಸರಾದ, ಒಣಗಿದ ಕೆರೆ

ಅರವಟಿಗೆ ದಾರಿಗರಿಗೆ ನೀರು, ಮಜ್ಜಿಗೆಗಳನ್ನು ನೀಡುವ ಛತ್ರ

ಅರಿ ಕತ್ತರಿಸು; ತಿಳಿ; ರಸಬಿಡುವಂತೆ ಹಿಂಡು

ಅರಿಕೆ ತಿಳಿವಳಿಕೆ; ಬಯಕೆ

ಅರಿವ ಕತ್ತರಿಸುವ

ಅರಿವರತು ಅರಿವು ಬತ್ತಿಹೋಗಿ

ಅರಿಷಡ್ವರ್ಗ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ

ಅರೆ ಅರ್ಧ; ತೇಯು; ಬಂಡೆಗಲ್ಲು; ಒಣಗು

ಅರ್ತಿ ಪ್ರೀತಿ, ಬಯಕೆ

ಅರ್ತಿಗಾರಿಕೆ ನೋವನ್ನುಂಟುಮಾಡುವಂತಹ; ಮೋಸಗಾರಿಕೆ, ಆಸೆಬುರುಕತನ

ಅರ್ಪಿತ ಒಪ್ಪಿಸಿದ್ದು

ಅಲಗು ಕತ್ತಿ

ಅವಗವಿಸು ಅವಗ್ರಹಿಸು, ಅರಿತುಕೋ

ಅವಗಹಿಸು ಅರಿತುಕೊಳ್ಳು, ಸ್ವೀಕರಿಸು

ಅವದಿರ ಅವರ

ಅವಧರಿಸಿಕೊಂಡಿಪ್ಪವರಿಗೆ ತಾಳಿಕೊಂಡಿರುವವರಿಗೆ

ಅವಧಾನಿಸು ಗಮನಿಸಿ ನೋಡು

ಅವಧಿ ಜ್ಞಾನ ತಕ್ಕ ಕಾಲದಲ್ಲಿ ಒದಗುವ ಜ್ಞಾನ

ಅವಧೂತ ವ್ಯವಸ್ಥಿತ ಧರ್ಮದ ಕಟ್ಟುಪಾಡುಗಳಿಗೆ ಒಳಪಡದ, ದತ್ತಾತ್ರೇಯನನ್ನು ಆರಾಧಿಸುವ ಪಂಥ

ಅವಿತತ ವಿಸ್ತಾರ

ಅವಿತಥ ಸುಳ್ಳಲ್ಲದ್ದು, ವ್ಯರ್ಥವಲ್ಲದ್ದು

ಅವಿರತ ನಿರಂತರ

ಅವುಡು ದವಡೆ

ಅಶನ ಅನ್ನ, ಆಹಾರ

ಅಷ್ಟತನು ಭೂಮಿ, ನೀರು, ಬೆಂಕಿ, ಗಾಳಿ,     ಆಕಾಶ, ಚಂದ್ರ, ಸೂರ್ಯ, ಆತ್ಮ, ಈ ಎಂಟು ತನುಗಳಿಂದ ಆದ ಮೂರ್ತಿ ಅಷ್ಟತನುಮೂರ್ತಿ

ಅಷ್ಟಮದ ಕುಲ, ಛಲ, ಧನ, ರೂಪ, ಯೌವನ, ವಿದ್ಯೆ, ರಾಜ, ತಪೋ ಮದಗಳು

ಅಷ್ಟಮಲ ಹೊನ್ನು, ಹೆಣ್ಣು, ಮಣ್ಣು, ಅನ್ನ, ನೀರು, ವಸ್ತ್ರ, ವಾಹನ, ಆಭರಣ ಇವುಗಳ ಮೇಲಿನ ಆಕಾಂಕ್ಷೆಯಿಂದ ಉಂಟಾಗುವ ಮನಸ್ಸಿನ ಮಾಲಿನ್ಯ,

ಅಷ್ಟವಿಧಾರ್ಚನೆ ನೀರು, ಗಂಧ, ಅಕ್ಷತೆ, ಪತ್ರಪುಷ್ಟ, ಧೂಪ, ದೀಪ, ನೈವೇದ್ಯ, ತಾಂಬೂಲಗಳ ಸಮರ್ಪಣೆ

ಅಷ್ಟಾಂಗಯೋಗ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಸಮಾಧಿ

ಅಷ್ಟಾದಶಪುರಾಣ ಬ್ರಹ್ಮ, ಬ್ರಹ್ಮಾಂಡ, ಬ್ರಹ್ಮವೈವರ್ತ, ಮಾರ್ಕಂಡೇಯ, ಭವಿಷ್ಯ, ವಾಮನ; ನಾರದೀಯ, ಗರುಡ, ಪದ್ಮ, ವರಾಹ, ವಿಷ್ಣು, ಭಾಗವತ; ಶಿವ, ಲಿಂಗ, ಸ್ಕಂದ, ಅಗ್ನಿ; ಮತ್ಸ್ಯ; ಕೂರ್ಮ ಪುರಾಣಗಳು.

ಅಷ್ಟಾದಶವರ್ಣ ಹದಿನೆಂಟು ಜಾತಿ

ಅಸಗ ಅಗಸ

ಅಸಿ ಕತ್ತಿ

ಅಸಿಯ ನಡು ಕತ್ತಿಯಂತೆ ತೆಳ್ಳನೆಯ ನಡು

ಅಸು ಪ್ರಾಣ

ಅಹಂಗಾದರೆ ಹಾಗಾದರೆ

ಅಳಗ ಒಂದು ಜಾತಿಯ ಕುದುರೆ (?)

ಅಳತದ ಕೋಲು ಅಳತೆಗೋಲು, ಗಜಕಡ್ಡಿ

ಅಳವಡು ಸರಿಹೊಂದು

ಅಳವು ಶಕ್ತಿ, ಸಾಮರ್ಥ್ಯ

ಅಳಿ ದುಂಬಿ

ಅಳಿಕಾವೃದ್ಧೆ ಅಂಜುಬುರುಕಿಯಾದ ಮುದುಕಿ

ಅಳಿಕುಲ ದುಂಬಿಯ ಕುಲ

ಅಳಿಮನ ದುರ್ಬಲ ಮನಸ್ಸು

ಅಳಿಯ ಆತ್ಮ, ಶರಣ

ಅಳಿಯೆ ಸಾಯುವುದಿಲ್ಲ

ಅಳಿಸಂಕುಲ ದುಂಬಿಗಳ ಸಮೂಹ

ಆಗುಚೇಗೆ ಲಾಭ ನಷ್ಟ

ಆಣೆ ಆಜ್ಞೆ

ಆತ್ಮತ್ರಯ ಜೀವಾತ್ಮ, ಅಂತರಾತ್ಮ, ಪರಮಾತ್ಮ

ಆದಿ ನಾದ; ಮೂಲಜ್ಞಾನ; ಶಿವಲಿಂಗ; ಅಕಲ; ತನು

ಆದಿಯ ಹೆಂಡತಿ ಜ್ಞಾನಶಕ್ತಿ, ದೇಹಭಾವ

ಆದ್ಯರು ಮೊದಲಿಗರು, ಪುರಾತನ ಶರಣರು, ಪ್ರಭು ಮೊದಲಾದ ಅಮರಗಣಗಳು

ಆನೆ ಆನೆ; ಅಹಂಕಾರ

ಆಪಾದಮಸ್ತಕ ಪಾದದಿಂದ ತಲೆಯವರೆಗೆ

ಆಪ್ಯಾಯನ ತೃಪ್ತಿ, ಹಸಿವು, ಪ್ರಸಾದದ ಏಳು ಬಗೆಗಳಲ್ಲಿ ಒಂದು

ಆಯ ಅಳತೆ, ಸಮತೋಲ

ಆಯತ ಬಂದದ್ದು, ಗುರುವಿನಿಂದ ಬಂದದ್ದು ಆಯತಲಿಂಗ, ಇಷ್ಟಲಿಂಗ

ಆರಂಬ ವ್ಯವಸಾಯ

ಆರಡಿತನ ಆಯಾಸಗೊಳ್ಳುವುದು, ಸೊರೆಹೊಡೆವುದು

ಆರಲುಗೊಂಡು ಗಂಟಲೊಣಗಿ, ಬಾಯಾರಿ

ಆರವೆ ತೋಪು, ಗಿಡ

ಆರಿಕೆ ಹಂಬಲ, ಬಾಯಾರಿಕೆ

ಆರು ಜ್ಞಾನಗಳು; ಮತಿ, ಶ್ರುತಿ, ಖಂಡ, ಕೇವಲ, ಜ್ಯೋತಿ, ಮಹಾಜ್ಯೋತಿ: ದರ್ಶನಗಳು: ಶೈವ, ಶಾಕ್ರ, ವೈಷ್ಣವ, ಸೌರ, ಗಾಣಪತ್ಯ, ಮಾಯಾವಾದಿ; ಸಾಂಖ್ಯ, ಯೋಗ, ವೈಶೇಷಿಕ, ನ್ಯಾಯ, ಪೂರ್ವಮೀಮಾಂಸೆ, ಉತ್ತರಮೀಮಾಂಸೆ ದರ್ಶನಗಳು; ಭಕ್ತಿವಿಧಗಳು: ಶ್ರದ್ಧೆ ನಿಷ್ಠೆ, ಅವಧಾನ, ಅನುಭವ, ಆನಂದ, ಸಮರಸ, ಪಂಥ ಭೇದಗಳು: ಯೋಗಿ, ಜೋಗಿ, ಶ್ರಾವಕ, ಸಂನ್ಯಾಸಿ, ಪಾಶುಪತಿ, ಕಾಳಾಮುಖಿ; ಭ್ರಮೆಗಳು: ಜಾತಿ, ವರ್ಣ, ಆಶ್ರಮ, ಕುಲ, ಗೋತ್ರ, ನಾಮ ಭ್ರಮೆಗಳು; ಮುಖಗಳು, ಭೂಮಿ, ಜಲ, ಜ್ಯೋತಿ, ವಾಯು, ಆಕಾಶ, ಆತ್ಮಪ್ರಾಣ; ಲಿಂಗಗಳು ಆಚಾರ, ಗುರು, ಶಿವ, ಜಂಗಮ, ಪ್ರಸಾದ, ಮಹಾಲಿಂಗಗಳು; ವ್ರತಗಳು: ಗುರು, ಲಿಂಗ, ಚರ, ಪ್ರಸಾದ, ಪಾದೋದಕ, ಭಾಕ್ತಿಕ ವ್ರತಗಳು:  ಶೈವಗಳು ಆದಿ, ಮಹಾ, ಅನು, ಅಂತರ, ಅಂತ್ಯ, ಪ್ರವರ ಶೈವಗಳು; ಸ್ಥಲಗುಣಗಳು; ಭಕ್ತನ ಕ್ರೀ, ಮಾಹೇಶ್ವರನನಿಶ್ಚಯ, ಪ್ರಸಾದಿಯ ನಿಷ್ಠೆ, ಪ್ರಾಣ ಲಿಂಗಿಯ ಯೋಗ, ಶರಣನ ನಿಬ್ಬೆರಗು ಮತ್ತು ಐಕ್ಯನ ನಿರ್ಲೇಪ ಗುಣಗಳು

ಆರೂಢ ಜೀವನ್ಮುಕ್ತ, ಒಂದು ಪಂಥ

ಆಲೇಖ ಬರವಣಿಗೆ, ಲೇಖನಿ

ಆಲಿ ಕಣ್ಣುಗುಡ್ಡೆ; ಕಣ್ಣು; ಆಲಿಕಲ್ಲು

ಆವಿಗೆ ಕುಂಬಾರನ ಒಲೆ, ಕುಲುಮೆ

ಆವು ಹಸು

ಆವುಗೆ ಕುಂಬಾರನ ಒಲೆ, ಕುಲುಮೆ

ಆಳವಾಡಿ ಶಕ್ತಿಗುಂದಿಸಿ? ತಿರಸ್ಕಾರಯೋಗ್ಯನನಾಗಿ ಮಾಡಿ?

ಆಳಾಪ ಸಂಭಾಷಣೆ, ರಾಗಾಲಾಪ

ಆಳಿಗೊಂಡು ಜೊತೆಗೂಡಿ

ಆಳಿಗೊಳಲುಬೇಡ ಕಳವಳಗೊಳ್ಳಬೇಡ

ಆಳಿಗೊಳ್ಳು ಹೀಯಾಳಿಸು, ಧಿಕ್ಕರಿಸು ಹಿಂಸಿಸು; ಮೋಡಿಗೊಳ್ಳು

ಆಳಿತನ ಉಪೇಕ್ಷೆ, ತಿರಸ್ಕಾರ

ಇಂಗಡಲು ಹಾಲಿನ ಕಡಲು

ಇಂಬನರಿಯದ ಸವಿ, ಸಂತೋಷವರಿಯದ

ಇಂಬು ಆಶ್ರಯ, ಎಡೆ

ಇಕ್ಕೆ ಗವಿ, ಪ್ರಾಣಿಯ ವಾಸಸ್ಥಾನ

ಇತ್ತರದ ಭದ್ರ ಎರಡೂ ಕಡೆಯ ರಂಗಮಂಚ

ಇದ್ದೆಸೆ ಎರಡು ದೆಸೆ

ಇನ್ನೇವೆ ಇನ್ನು ಸಹಿಸಲಾರೆ

ಇಪ್ಪತ್ತೈದು ಸಾಂಖ್ಯದ ಇಪ್ಪತ್ತೈದು ತತ್ವಗಳು

ಇಪ್ಪವರ ಇರುವವರ

ಇಪ್ಪೆಡೆ ಇರುವ ಸ್ಥ

ಇಬ್ಬರು ಮಕ್ಕಳು ಜೀವ ಮತ್ತು ಪ್ರಾಣ

ಇಮ್ಮನ ಎರಡು ಮನಸ್ಸು

ಇಮ್ಮೈಗೊಂಡಿತ್ತು ಮೈಯನ್ನು ಎರಡಾಗುವಂತೆ ಸೀಳಿತ್ತು

ಇರಪರ ಇಹ ಪರ, ಬಂಧ ಮೋಕ್ಷ

ಇರುಹು ಇರುವೆ ಇಲಿ ವಿವೇಕ

ಇಹಂಥಾ ಇರುವಂಥ

ಈರೇಳು ಭುವನಂಗಳು ಹದಿನಾಲ್ಕು ಲೋಕಗಳು; ಅತಳ, ವಿತಳ, ಸುತಳ, ಮಹೀತಳ, ತಳಾತಳ, ರಸಾತಳ, ಪಾತಾಳ, ಭೂಲೋಕ, ಭುವರ್ಲೋಕ, ಸುವರ್ಲೋಕ, ಮಹರ್ಲೋಕ, ಜನೋಲೋಕ, ತಪೋಲೋಕ, ಸತ್ಯಲೋಕಗಳು

ಈರೇಳುನೂರು ಹದಿನಾಲ್ಕು ನೂರು

ಈರೈದು ಎರಡು ಐದು, ಹತ್ತು

ಈಸು ಕೊಡಿಸು; ಕೋಲು; ಈಜು; ಇಷ್ಟು

ಈಳೆ ಹುಳಿಯಿರುವ ಹಣ್ಣು

ಉಂಕೆ ನೇಯ್ಗೆಯಲ್ಲಿ ಉದ್ದುದ್ದವಾಗಿ ಹಾಸಿದ ನೂಲು

ಉಂಗುಷ್ಠ ಕಾಲಿನ ಹೆಬ್ಬೆರಳು

ಉಂಡಿಗೆ ಮುದ್ರೆ; ಗಂಟಲು; ಹಣ್ಣುಗಳ ಪರೀಕ್ಷೆಗೆ ಮಾಡುವ ಚಿಕ್ಕ ರಂಧ್ರ

ಉಕ್ಕಡದವರು ಊರ ಹೊರಬಾಗಿಲ ಕಾವಲುಗಾರರು

ಉತ್ತರಸಾಧಕ ಮೋಕ್ಷ ಸಾಧಕ

ಉತ್ತರಾಪಥ ವಿಂಧ್ಯದ ಉತ್ತರಕ್ಕಿರುವ ಪ್ರದೇಶ; ಮೋಕ್ಷದ ದಾರಿ, ಮೋಕ್ಷ; ಮುಂದಿನ ದಾರಿ, ಭವಿಷ್ಯ

ಉತ್ತರಾಪಥದ ಕೊಡಗೂಸು ಮೋಕ್ಷಮಾರ್ಗಕ್ಕೆ ಅನುಕೂಲವಾಗುವ ಜ್ಞಾನಶಕ್ತಿ

ಉತ್ಪತ್ಯ ಉತ್ಪತ್ತಿ

ಉದಕ ನೀರು; ಮನಸ್ಸು

ಉಪಸ್ಥಲ ಹೆಣ್ಣಿನ ಗುಪ್ತಾಂಗ

ಉಪಾಧಿ ಅಡೆತಡೆ, ಬಂಧನ

ಉಪ್ಪರ ಗುಡಿ ಎತ್ತರದಲ್ಲಿ ಕಟ್ಟಿದ ಬಾವುಟ

ಉಭಯ ಕರ್ಮ ಸಂಕಲ್ಪ ಮತ್ತು ವಿಕಲ್ಪವೆಂಬ ಕರ್ಮಗಳು

ಉಭಯ ಕುಳರಹಿತ ಎರಡೂ ವಿಷಯಗಳಿಲ್ಲದ

ಉಭಯ ಎರಡು, ದ್ವಂದ್ವ ಹಲವು ಬಗೆಯ ಜೋಡಿ ಕಲ್ಪನೆಗಳನ್ನು ಸೂಚಿಸುವ ಪದ ಸುರಾಳ ನಿರಾಳ, ಭಾವ ನಿರ್ಭಾವ, ಯೋಗ ವಿಯೋಗ, ಲಿಂಗ ಜಂಗಮ, ಕ್ರೀ ನಿಃಕ್ರೀ ಸಾಕಾರ ನಿರಾಕಾರ ಇತ್ಯಾದಿ

ಉಭಯಕುಳ ವ್ಯಾಕುಳ ಮತ್ತು ನಿರಾಕುಳ

ಉಭಯಸಂಚ ಎರಡರ ರಹಸ್ಯ

ಉಮೆಯ ಕಲ್ಯಾಣ ಗಿರಿರಾಜ ಮತ್ತು ಮೇನಕೆಯರ ಮಗಳು ಉಮೆಯನ್ನು ಸಪ್ತಋಷಿಗಳು ಶಿವನಿಗಿತ್ತು ಮದುವೆಮಾಡಿದರು ಎಂಬ ಕಥೆ,

ಉರ ಎದೆ

ಉರಗ ಹಾವು

ಉರದುದ್ದ ಎದೆಯುದ್ದ, ಎದೆಯೆತ್ತರ

ಉರವಣಿಸು ಆತುರಪಡು, ಅವಸರಿಸು; ಅರ್ಭಟಿಸು; ಸಂಭ್ರಮಿಸು

ಉರಿ ಜ್ಞಾನ, ಬೆಂಕಿ

ಉರಿಯ ಚಪ್ಪರ ಬೆಂಕಿಯ ಚಪ್ಪರ; ಮಹಾಜ್ಞಾನವೆಂಬ ಮಂಟಪ

ಉರಿಯುಂಡ ಕರ್ಪುರ ಬೆಂಕಿಗೆ ಆಹಾರವಾದ ಕರ್ಪುರ; ಲಿಂಗಾಂಗ ಸಾಮರಸ್ಯದ ಸ್ಥಿತಿ

ಉಲಿ ಧ್ವನಿ

ಉಲಿವ ಉಯ್ಯಲೆ ಮಾತಿನ ಉಯ್ಯಾಲೆ; ಇಡಾ ಮತ್ತು ಪಿಂಗಳಗಳೆಂಬ ನಾಡಿಯಲ್ಲಿ ಸಂಚರಿಸುವ ಉಸಿರಿನ ಚಲನೆ

ಉಲುಹಿನ ವೃಕ್ಷ ದೇಹ

ಉಲುಹು ಧ್ವನಿ, ಶಬ್ದ

ಉಲುಹುಗೆಟ್ಟೆ ಮೌನಿಯಾದೆ

ಉಳಲಾಟಗೊಂಡು ಅಸ್ಥಿರಗೊಂಡು

ಊಡದ ಹಾಲು ಉಣ್ಣಿಸದ

ಉಣೆಯ ಊನ, ಕೊರತೆ

ಉರಕ್ಕಿ ಊರೆಣ್ಣೆ ಗ್ರಾಮದೇವತೆಯ ಪೂಜೆಗೆ ಉರಜನರಿಂದ ಸಂಗ್ರಹಿಸಿದ ಅಕ್ಕಿ, ಎಣ್ಣೆ

ಊರ್ಧ್ವ ಮೇಲಿನ; ಐದು ವಾಯುಗಳು; ಮೇಲಿನ ಏಳು ಲೋಕಗಳೂ ಭಕ್ತನ ದೇಹದ ಹೊಕ್ಕುಳು, ಹೊಟ್ಟೆ, ಹೃದಯ, ಎದೆ, ಗಂಟಲು, ಹಣೆ, ನೆತ್ತಿಗಳಲ್ಲೆ ಇವೆ ಎಂಬ ಕಲ್ಪನೆ.