ಎಂಟು ಕುಲ, ಛಲ, ಧನ, ರೂಪ, ಯೌವನ, ವಿದ್ಯಾ, ರಾಜ, ತಪೋ ಮದಗಳು; ಹೃದಯದಲ್ಲಿರುವ ಎಂಟು ದಳ ಕಮಲ ಅಹಿಂಸೆ, ಇಂದ್ರಿಯ ನಿಗ್ರಹ, ಅಹಂಕಾರ ರಹಿತ ಶಾಂತಿ, ನಿರ್ವ್ಯಾಪಾರ, ಸದ್ಭಾವ, ಬ್ರಹ್ಮಚರ್ಯ, ಸತ್ಯ, ಶಿವಜ್ಞಾನ ಸಂಪನ್ನತೆ ಇವು ಎಂಟು ದಳಗಳು

ಎಚ್ಚು ಬಾಣವನ್ನು ಎಸೆ, ಬಿಡು

ಎಡರು ಆಪತ್ತು

ಎಡೆಗೆಯ್ಯಬೇಕು ಉಣ್ಣಬೇಕು, ಉಣಲು ಬಡಿಸಬೇಕು  

ಎಡೆಗೋಲು ಅಡ್ಡಗೋಲು

ಎಡ್ಡುಗಳ್ಳತನ ಮೋಸ, ಮೂರ್ಖತನ, ಕಳ್ಳತನಗಳ ಮಿಶ್ರಣ

ಎತ್ತಾನು ಎಲ್ಲಿಯಾದರೂ

ಎನಿಸು ಎಷ್ಟು

ಎನ್ನುವನಿದಿರುವನೇನೆಂದರಿಯೆನು ನನ್ನನ್ನೂ ಇದಿರಿಗಿರುವುದನ್ನೂ ಏನೆಂದು ಅರಿಯೆನು

ಎಯಿದು ಸೇರು, ತಲುಪು

ಎರದ ಮುಳ್ಳು ಎಲ(ಗ)ಚಿಯ ಮರದ ಮುಳ್ಳು

ಎರಳೆ ಗಂಡು ಜಿಂಕೆ; ಜೀವ

ಎರೆ ದಡದ ಅಂಚಿನ ಮಣ್ಣು

ಎರೆಯ ಒಡೆಯ

ಎಲು ಎಲುಬು

ಎಲುವೆಂಬ ಹಂಜರ ಅಸ್ತಿಪಂಜರ

ಎವೆ ಹಳಚಿದಡೆ ಕಣ್ಣರೆಪ್ಪೆ ಮುಚ್ಚಿದರೆ

ಎಸಳು ಬೀಗದ ಕೈ, ಪದರ

ಎಸು ಬಾಣವನ್ನು ಎಸೆ, ಬಿಡು

ಎಸುಗೆ ಬಾಣವನ್ನು ಬಿಡುವ ಸಾಮರ್ಥ್ಯ

ಎಳಕು ಎದ್ದು ನಿಲ್ಲು, ಚಿಗುರು

ಎಳಗ ಟಗರು

ಎಳಗಂತಿ ಹೊಸತಾಗಿ ಕರುಹಾಕಿರುವ ಹಸು ಅಥವ ಎಮ್ಮೆ

ಎಳತಟೆ ಹೋರಾಟ, ಸೆಳೆತ

ಎಳೆಯಾಸೆ ಜನಿವಾರದ ಎಳೆಯ ಆಸೆ

ಏಡಿಸಿ ಕಾಡಿಸಿ, ಹೀಯಾಳಿಸಿ

ಏರಿಲ್ಲದ ಗಾಯದಗುರುತಿಲ್ಲದ

ಏಳು ವ್ಯಸನಗಳು ತನು, ಮನ, ಧನ, ರಾಜ್ಯ, ವಿಶ್ವ, ಉತ್ಸಾಹ, ಸೇವಕ ವ್ಯಸನಗಳು ಪ್ರಸಾದಗಳು ಆಪ್ಯಾಯನ, ಸಮಯ, ಪಂಚೇಂದ್ರಿಯ ವಿರಹಿತ, ಕರಣ ಚತುಷ್ಟಯ ವಿರಹಿತ ಸದ್ಭಾವ, ಸಮತೆ, ಜ್ಞಾನ ಪ್ರಸಾದಗಳು

ಐಗೈಮನೆ ಐದಂಕಣದ, ಐದು ಕೈಯಳತೆಯ ಮನೆ; ಐದು ಇಂದ್ರಿಯಗಳಿಂದಾದ ದೇಹ

ಐದಕ್ಷರ ನಮಃಶಿವಾಯ ಎಂಬ ಪಂಚಾಕ್ಷರಿ ಮಂತ್ರ

ಐದರ ಗುಣ ಮನುಷ್ಯ ದೇಹದ ಪಂಚಭೂತಗುಣಗಳು ದೇಹ ಭೂಮಿ, ಶುಕ್ಲ ಶೋಣಿತ ನೀರು, ಹಸಿವು ಬೆಂಕಿ, ಜೀವಾತ್ಮ ವಾಯು, ಬ್ರಹ್ಮರಂಧ್ರ ಆಕಾಶ,

ಐದು ತತ್ತ್ವ ಪಂಚಭೂತಗಳ ತತ್ವ

ಐದು ಪಂಚೇಂದ್ರಿಯಗಳು, ಪಂಚಭೂತಗಳು

ಐದು ಮುಖದ ಅಂಗನೆ ಪಂಚಭೂತಗಳೆಂಬ ಮುಖಗಳಿರುವ ಮಾಯೆ

ಐದು ಮುಖದ ರಕ್ಕಸಿ ಪಂಚೇಂದ್ರಿಯಗಳ ಬಾಧೆಗೆ ಒಳಪಡಿಸುವ ಮಾಯಾಶಕ್ತಿ

ಐದುವ ಹೊಂದುವ

ಒಂಬತ್ತು ನಾಯಿ ಕರಣೇಂದ್ರಿಯ ಮತ್ತು       ಪಂಚೇಂದ್ರಿಯಗಳು

ಒಂಬತ್ತು ಬಾಗಿಲು ಶರೀರದ ನವದ್ವಾರಗಳು

ಒಕ್ಕು ಉಳಿದದ್ದು; ತುಳಿ; ಬೆಳೆಯಿಂದ ಕಸ ಕಡ್ಡಿಗಳನ್ನು ಬೇರ್ಪಡಿಸು

ಒಕ್ಕುಡತೆಯುದಕ ಒಂದು ಬೊಗಸೆ ನೀರು

ಒಕ್ಕುದ ಶುಭವಾದುದನ್ನು, ಒಳ್ಳೆಯದನ್ನು

ಒಕ್ಕುದು ಪ್ರಸಾದ; ಹೊರಸೂಸಿದ್ದು

ಒಚ್ಚತ ತೃಪ್ತಿಕರ; ಅತಿಶಯ; ಮೀಸಲು

ಒಚ್ಚೊತ್ತು ಕೆಲ ಹೊತ್ತು

ಒಡಮನೆ ಕೂಡುವಮನೆ, ಸೇರಿದಮನೆ

ಒಡಹುಟ್ಟಿದವ ಗುರುತತ್ವವನ್ನೊಳಗೊಂಡ ಶಿಷ್ಯ

ಒಡೆದೋಡು ಒಡೆದ ಮಣ್ಣಿನ ಪಾತ್ರೆ, ಹಂಚು

ಒಡೆಯ ದಣಿ, ಜಂಗಮ

ಒಡ್ಡದ ತಳಿಗೆ ಒಡೆದ ತಟ್ಟೆ (?)

ಒತ್ತೆ ಮುಂಗಡ

ಒಪ್ಪಚ್ಚಿ ಕೊಂಚ ಹೊತ್ತು

ಒಮ್ಮನ ಒಂದೇ ಮನಸ್ಸು

ಒರೆ ಕತ್ತಿಯನ್ನು ಇಡುವ ಒರೆ; ಉಜ್ಜು ಪರೀಕ್ಷಿಸು

ಒಲವರ ಪ್ರೀತಿ

ಒಲ್ಲಗಾಗು ಒಳಬೊಳ್ಳೆ

ಒಳ್ಳಿದ ಒಳ್ಳೆಯವನು

ಒಳ್ಳಿದಳು ಒಳ್ಳೆಯವಳು

ಓಗರ ಅನ್ನ

ಓಜೆ ವಿದ್ಯೆ; ಕ್ರಮ, ರೀತಿ

ಓಡು ಮಣ್ಣಿನ ಪಾತ್ರೆ, ಹಂಚು; ಓಡಿಹೋಗು; ಹೃದಯ, ಪ್ರಕೃತಿ; ತಲೆಬುರುಡೆ

ಓತಂತೆ ಪ್ರೀತಿಸಿದಂತೆ, ಬಚ್ಚಿಟ್ಟಂತೆ

ಓರಂತೆ ಸದಾ ಒಂದೇ ರೀತಿಯಲ್ಲಿ, ಅದೇ ರೀತಿಯಲ್ಲಿ

ಓರೆಯಾವು ಹಾಲು ಕೊಡಲೊಲ್ಲದ ಹಸು; ತುಂಟಹಸು

ಓಲೆಕಾರ ಯುದ್ಧಭೂಮಿಯಲ್ಲಿ ಸೈನಿಕರಿಗೆ ಆಯುಧಗಳನ್ನು ಸರಬರಾಜು ಮಾಡುವಾತ;

ಓಸರಿಸು ಪಕ್ಕಕ್ಕೆ ಸರಿ, ಓರೆಯಾಗು, ದೂರವಾಗು

ಕಂಗಳ ಕರುಳು ದೃಷ್ಟಿಗೋಚರವಾಗುವ ಭಿನ್ನತೆ, ಭಿನ್ನರೂಪ ವಿಷಯ

ಕಂಗಳಪಟಲ ಕಣ್ಣಿನ ಪರದೆ, ನೋಟಕ್ಕೆ ಇರುವ ಅಡ್ಡಿ

ಕಂಗಳ ಕಣ್ಣಿಲ್ಲದವನು

ಕಂಗಳೊಳಗಣ ಕತ್ತಲೆ ಜ್ಞಾನದೊಡನೆ ಬೆರೆತ ಅಜ್ಞಾನ

ಕಂಡಿಕೆ ಲಾಳದಲ್ಲಿ ಸೇರಿಸುವ ದಾರದ ಉಂಡೆ

ಕಂಥೆ ಜೋಳಿಗೆ; ಚಿಂದಿಯಾದ ಬಟ್ಟೆ

ಕಂಭ ದೇಹ; ದೃಢ ಬುದ್ಧಿ

ಕಂದಲ ಮಣ್ಣಿನ ಚಿಕ್ಕ ಪಾತ್ರೆ

ಕಕ್ಷಕುಳ ಕಂಕುಳಲ್ಲಿ ಸಿಕ್ಕಿದವರು (?)

ಕಚ್ಚುಟ ಕೌಪೀನ

ಕಟ್ಟಣೆಯ ಗೊತ್ತು ಕಟ್ಟುವ ಜಾಗ

ಕಟ್ಟಿಗೆ ಕಟ್ಟು (ಪಾಡು), ನೋಟಕ್ಕೆ ಇರುವ     ಮಾನಸಿಕ ನಿರ್ಬಂಧ

ಕಟ್ಟಿಗುಂಟ ಕಟ್ಟುವ ಗೂಟ (?)

ಕಟ್ಟುಗೊತ್ತು ಕಟ್ಟುವ ಸ್ಥಾನ

ಕಟ್ಟೋಗರ ಕಟ್ಟಿತಂದ ಓಗರ, ಬುತ್ತಿ

ಕಡಬಡ್ಡಿ ಹೆಚ್ಚಿನ ಬಡ್ಡಿ

ಕಡವರ ಚಿನ್ನ     ಕಡವಸ ಋಷಿಗಳು ಕುಳಿತುಕೊಳ್ಳಲು ಬಳಸುವ ಹಾಸು ಚರ್ಮ

ಕಡವಸದ ಸ್ವಾಮಿ ಕಂಕುಳಲ್ಲಿ ಚರ್ಮಾಸನವನ್ನು ಸುತ್ತಿಟ್ಟುಕೊಂಡಿರುವ ಸ್ವಾಮಿ; ಚಿನ್ನವನ್ನು ಮಾಡುವ ರಸವಿದ್ಯೆಯನ್ನು ತಿಳಿದಾತ (?); ಮಿಥ್ಯಾಚರ್ಮದೇಹಿ

ಕಡಸು ಇನ್ನೂ ಕರು ಹಾಕದಿರುವ ಹಸು, ಎಮ್ಮೆ

ಕಡಿಚಣ ಕತ್ತರಿ (?), ಉಗುರು ಕತ್ತರಿಸುವ     ಸಾಧನ

ಕಡೆಗೀಲು ಕಡಾಣಿ, ಬಂಡಿಯ ಗಾಲಿ ಜಾರದಂತೆ ತಡೆಹಿಡಿಯುವ ಕಬ್ಬಿಣ್ಣದ ಕೀಲು

ಕಡೆಯಾಣಿ ಶುದ್ಧಚಿನ್ನ, ಅಪರಂಜಿ; ಕಾಲಿಗೆ ಹಾಕಿಕೊಳ್ಳುವ ಚಿನ್ನದ ಆಭರಣ (?)

ಕಣ ಧಾನ್ಯವನ್ನು ಒಕ್ಕುವ ಸ್ಥಳ; ಯುದ್ಧಭೂಮಿ

ಕಣಿತೆ ಗಂಟು (?); ಹರವಿ, ಪಾತ್ರೆ

ಕಣ್ಣಕಾಡು ಅಜ್ಞಾನ ದೃಷ್ಟಿಯೊಳಗೆ ತನ್ಮಯವಾದ ಸಂಸಾರ

ಕಣ್ಣಡ ಕಣ್ಣ ಪಟ್ಟಿ; ಸಂಸಾರ

ಕಣ್ಣಿ ಪಶುಗಳ ಕೊರಳ ಹಗ್ಗ

ಕಣ್ಬೇಟ ದೃಷ್ಟಿಮೈಥುನ

ಕತ್ತಲೆ ಅಜ್ಞಾ; ಮಾಯೆ

ಕದಿರು ನೂಲು ತೆಗೆಯುವ ಸಾಧನ, ಬಣ್ಣ (?); ತೆನೆ

ಕಬಳೀಕರಿಸು ಬಾಯಿ ತುಂಬುವ ತುತ್ತುಮಾಡಿಕೊ

ಕಬ್ಬದ್ದು ಕಳ್ಳ ಹದ್ದು

ಕಬ್ಬಲಿಗ ಅಂಬಿಗ

ಕಬ್ಬಿಲ ಬಲೆ ಬೀಸಿ ಹಕ್ಕಿಗಳನ್ನು ಹಿಡಿಯುವವ; ಬೆಸ್ತ

ಕಬ್ಬುನ ಉಂಡ ನೀರಿನಂತೆ ದೇಹವನ್ನೊಳಗೊಂಡ ಮನಸ್ಸಿನಂತೆ

ಕಮಟ ನೀರಿನ ಪಾತ್ರೆ (?)

ಕರಣಂಗಳು ನಾಲ್ಕು ಅಂತಃಕರಣೇಂದ್ರಿಯಗಳು ಚಿತ್ತ, ಬುದ್ದಿ, ಅಹಂಕಾರ ಮನಸ್ಸು  ಕರಣೇಂದ್ರಿಯ ನಾಲ್ಕು ಅಂತಃಕರಣೇಂದ್ರಿಯಗಳು ಮತ್ತು ಐದು ಪಂಚೇಂದ್ರಿಯಗಳು

ಕರವಳ ಕೈಯಳತೆ (?)

ಕರಸ್ಥಲ ಅಂಗೈ

ಕರಿ ಆನೆ; ನಾನು ಎಂಬ ಅಹಂಕಾರ

ಕರಿಕೆ ಗರಿಕೆ

ಕರಿಗೊಂಡಲ್ಲಿ ಬೆಂದುಹೋದಲ್ಲಿ, ಹುರಿದುಹೋದಲ್ಲಿ

ಕರಿಗೊಳ್ಳುವುದು ಸಮರಸವಾಗು, ಲಿಂಗವೇ ಆಗುವುದು

ಕರುವಿಟ್ಟ ರೂಹು ಅಚ್ಚೊತ್ತಿದ ರೂಪು

ಕರುವಿನ ಬೊಂಬೆ ಅರಗಿನ ಬೊಂಬೆ

ಕರುವಿನ ರೂಹು ಎರಕದ ರೂಪ, ಬೊಂಬೆ

ಕರ್ಪರ ಭಿಕ್ಷಾಪಾತ್ರೆ

ಕರ್ಪು ಕಾಡಿಗೆ

ಕರ್ಮಕಾಂಡಿ ವೇದಗಳ ಕರ್ಮಕಾಂಡವನ್ನು, ಆಚರಣೆಯ ಭಾಗ, ನಂಬುವಾತ

ಕಲಕೇತ ವೇಷಧಾರಿಯಾಗಿ ಹಣ ಸಂಪಾದಿಸುವಾತ, ಮಾಯಗಾರ

ಕವಳಿಗೆ ಶಿವನ ಕೈಯ ಭಿಕ್ಷಾಪಾತ್ರೆ; ಸಾಲು; ವೀಳೆಯದೆಲೆಯ ಕಟ್ಟು

ಕವುಳಿಕ ಮೋಸಗಾರಿಕೆ, ಡಂಭಕತನ

ಕವುಳುಗೋಲು ಗರಡಿಯ ಮನೆಯಲ್ಲಿ ಅಭ್ಯಾಸಕ್ಕಾಗಿ ಉಪಯೋಗಿಸುವ ಆಯುಧ

ಕಹರು ?

ಕಳ ಹೋರಾಟದ ಅಂಕಣ, ಅಖಾಡ

ಕಳವೆ ಬತ್ತ

ಕಳಹಂಸಿ ರಾಜಹಂಸ

ಕಳೆಯರತ ದೀಪ ಬೆಳಕು ಆರಿಹೋದ ದೀಪ

ಕಳ್ಳದಮ್ಮ ಕಳ್ಳನಾಣ್ಯ, ಖೋಟಾ ನಾಣ್ಯ

ಕಾಂಬ ಕಾಣುವ

ಕಾಟಿ ಚಿರತೆ (?) ಬೇಟೆಗಾರ (?)

ಕಾಣಿ ಕಾಸು

ಕಾತಂತೆ ಹಣ್ಣುಬಿಟ್ಟಂತೆ, ತೀವ್ರಭಾವದಲ್ಲಿ ಕುದಿದಂತೆ

ಕಾತು ಹೂ ಬಿಟ್ಟು, ಫಲಭರಿತವಾಗಿ, ಕಾತರದಿಂದ ಕಾದಿದ್ದು

ಕಾಬ ಕಾಣುವ

ಕಾಬೆ ಕಾಣುವೆ

ಕಾಯಕ ದೇಹ ಶ್ರಮದ ದುಡಿಮೆ, ವೃತ್ತಿ,      ಕಸುಬು, ಜೀವನ ಮೌಲ್ಯ

ಕಾರ ಮೇಘ ಮಳೆಯ ಮೋಡ; ತನು; ಶರೀರ

ಕಾಲಸಡಗರ ಕೈಯಲಿದೆ ಸದಾಚಾರಕ್ಕೆ ಕರ್ತೃವಾದ ಲಿಂಗದ ಪ್ರವರ್ತನೆ ಕೈಯಲ್ಲಿರುವುದು

ಕಾಶಾಂಬರ ಹೊಳಪಿನ ಬಟ್ಟೆ (ಕಾಶ-ಹೊಳೆಯುವ)

ಕಾಹ ಹೇಳು ಕಾವಲು ಹೇಳು

ಕಾಹಕಾಡು ಕಾವು ಕೊಡು

ಕಾಹಿನ ಕಾವಲಿನ

ಕಾಳರಕ್ಕಸಿ ತಾಮಸ ಸ್ವರೂಪದ ಮಾಯೆ

ಕಾಳಿಕೆ ಕಲ್ಮಶ, ದೋಷ, ಕುಂದು

ಕಾಳಿಯ ಕಂಕಾಳ ಕಾಳಿಯ ಆಸ್ಥಿಪಂಜರ ಬಲಿಯ ಸಂಹಾರ ಸಂದರ್ಭದಲ್ಲಿ ವಾಮನನ ಒಂದು ಪಾದ ಆಕಾಶವನ್ನು ವ್ಯಾಪಿಸಿದಾಗ ಬ್ರಹ್ಮನು ಅಂಜಿ, ಈ ಪಾದವು ಶಿವನದಲ್ಲದಿದ್ದರೆ ಕಳಚಿ ಬೀಳಲೆಂದು ನುಡಿದು, ಕಳಚಿ ಬಿದ್ದ ಪಾದವು ಆಕಾಶದಲ್ಲಿ ನುಡಿದು, ಕಳಚಿ ಬಿದ್ದ ಪಾದವು ಆಕಾಶದಲ್ಲಿ ವಾಮನ ಸಂಹಾರ ಮಾಡಿದ. ವಾಮನನ ಬೆನ್ನೆಲುಬನ್ನು ಶಿವ ಕೈಯಲ್ಲಿ ಧರಿಸಿದ. ಸ್ಕಂದಪುರಾಣದ ಈ ಕಥೆ ಕಾಳಿಕಾಖಂಡಲ್ಲಿದ್ದು ಕಾಳಿಯ ಕಂಕಾಳವೆಂಬ ಹೆಸರು ಪಡೆದಿದೆ.

ಕಾಳುತನ ದುಷ್ಟತನ; ಅಸಂಸ್ಕೃತ ವರ್ತನೆ

ಕಾಳುಮಾತು ವ್ಯರ್ಥವಾದ ಮಾತು, ಕೆಟ್ಟಮಾತು

ಕೀಲ ರಹಸ್ಯ

ಕೀಲಿಗೆ ಬೆಸ್ತರವನು, ಮೀನುಗಾರ

ಕೀಳು ಕೆಳಮಟ್ಟ, ಹಸುವಿನ ಕರು

ಕುಂಜರ ಆನೆ

ಕುಂದಣ ಹರಳನ್ನು ಚಿನ್ನದಲ್ಲಿ ಜೋಡಿಸುವ ಕೆಲಸ; ಹರಳಿಗೆ ಹಿನ್ನೆಲೆಯಾಗಿರುವ ಚಿನ್ನ

ಕುಂಭಿನಿಯುದರ ಭೂಮಿಯ ಹೊಟ್ಟೆ;ಅಹಂಕಾರವೆಂಬ ಭಿತ್ತಿ

ಕುಕ್ಕತೆನೆ ಜೊಳ್ಳು ತೆನೆ

ಕುಕ್ಕುಟ ಕೋಳಿ

ಕುಕ್ಕುರ ನಾಯಿ

ಕುಠಾರ ಕೊಡಲಿ

ಕುಡಿತೆ ಸಣ್ಣಪಾತ್ರೆ, ಒಂದು ಬೊಗಸೆಯಷ್ಟು

ಕುತ್ತದ ಕೊಮ್ಮೆ ರೋಗದ ಬುಟ್ಟಿ, ಪಾತ್ರೆ

ಕುತ್ತರಿ ಮೇಟಿಯ ಸುತ್ತಲೂ ಒಟ್ಟಿದ ಬೆಳಸು

ಕುರುಹು ಗುರುತು, ಇಷ್ಟಲಿಂಗ

ಕುಳ ವ್ಯಾಕುಳ ಮತ್ತು ನಿರಾಕುಳ ವ್ಯಾಕುಳವು ಭವ, ಭವಿ, ಪಾಪ ಮತ್ತು ನಿರಾಕುಳವು ನಿರ್ಭವ, ಭಕ್ತ ಮತತು ನಿಷ್ಪಾಪ

ಕೂಪ ಪ್ರಿಯಕರ, ಬಾವಿ

ಕೂಪರ ಒಲಿದವರ

ಕೂರ್ತಡೆ ಪ್ರೀತಿಸಿದರೆ

ಕೃತಕ ನೆರವೇರಿಸುವ ಕಾರ್ಯ, ಮೋಸ

ಕೆಂಡದ ಗಿರಿ ಮಹದಹಂಕಾರ

ಕೆಚ್ಚು ಕೆಂಪು ಬಣ್ಣ, ಕೋಪ, ಗಿಡ ಮರಗಳ ಸಾರ

ಕೆಡೆದಿಹ ಬಿದ್ದಿರುವ

ಕೆನ್ನೆವಾರೆ ಕೆನ್ನೆಯ ಬದಿ, ಕೆನ್ನೆಯ ಉದ್ದಕ್ಕೂ

ಕೆಮ್ಮನೆ ಸುಮ್ಮನೆ

ಕೆಯ್ ಹೊಲ, ಬೆಳೆ

ಕೆರೆಯೊಳಗಣ ಕಪ್ಪೆ ಸಂಸಾರ ವಿಷಯದಲ್ಲಿ ವ್ಯವಹರಿಸುತ್ತಿರುವ ಮಾಯೆ

ಕೇಡು ಕೆಡು, ಇಲ್ಲವಾಗು, ಕೆಡುಕು

ಕೇಣಸರ ರತ್ನಗಳನ್ನು ಪೋಣಿಸುವ ಕೆಲಸ

ಕೈದು ಆಯುಧ

ಕೈ ಬೆಸಲಾಗು ಕೈಗೆ ಇಷ್ಟಲಿಂಗ ಪ್ರಾಪ್ರಿಯಾಗು

ಕೈಯಾನು ಕೈಯೊಡ್ಡು

ಕೊಂತ ಒಂದು ಬಗೆಯ ಆಯುಧ

ಕೊಂಡೆಯ ಚಾಡಿ

ಕೊಟ್ಟಣ ಬತ್ತವನ್ನು ಕುಟ್ಟುವ ಒರಳು

ಕೊಡಗೂಸು ಹದಿವಯಸಿನ ಹುಡುಗಿ; ಇಷ್ಟಲಿಂಗ; ಚಿಚ್ಛಕ್ತಿ

ಕೊನರು ಚಿಗುರು

ಕೊರಚು ಕರ್ಕಶಧ್ವನಿ, ತೊದಲು ಮಾತು

ಕೊರೆಯ ಕೂಳು ಉಳಿದ ಅನ್ನ

ಕೊಲೆ ಸ್ಥೂಲ ಸೂಕ್ಷ್ಮ ಕಾರಣ ತನುಗಳಲ್ಲಿ ಬ್ರಹ್ಮ, ವಿಷ್ಣು, ಶಿವತತ್ವಗಳು ಇಲ್ಲವಾಗುವಂತೆ ಮಾಡಿಕೊಳ್ಳುವುದು

ಕೊಲ್ಲೆ ವಕ್ರತೆ

ಕೋಡಗ ಕೋತಿ

ಕೋವೆ ಚಿನ್ನವನ್ನು ಕರಗಿಸುವ ಮೂಷೆ

ಕೋಳಿ ವೃತ್ತಿಜ್ಞಾನ

ಕೌರು ಕಮರು, ಕೆಟ್ಟವಾಸನೆ

ಕ್ರಿಯೆ ಬಾಹ್ಯದ ಮಾರ್ಗ ಮತ್ತು ಅಂತರಂಗದ ಮೀರಿದ ಕ್ರಿಯೆಗಳು

ಕ್ರೀ ಕ್ರಿಯೆ

ಕ್ರೀಭಾವವಂತರು ಕ್ರಿಯೆಯ ಭಾವವನ್ನು ಮಾತ್ರ ಹೊಂದಿರುವವರ; ಕ್ರಿಯೆ ಮತ್ತು ಭಾವನೆಗಳನ್ನು ಹೊಂದಿದವರು,

ಕ್ಷುಧೆ ಹಸಿವು

ಖಂಡಭಂಡ ಸರಕು

ಖಂಡಿತ ನಿಶ್ಚಿತ; ಅಸಂಪೂರ್ಣ

ಖಗ ಹಕ್ಕಿ

ಖಟ್ವಾಂಗ ತುದಿಯಲ್ಲಿ ತಲೆಬುರುಡೆಯಿರುವ ಶಿವನ ಗದೆ

ಖರ್ಪರ ತಲೆಬುರುಡೆ; ಚಿಪ್ಪು; ಭಿಕ್ಷಾಪಾತ್ರೆ

ಖಾರ ತೀಕ್ಷ್ಣವಾದ ರುಚಿ ಇರುವುದು, ಕಟುವಾದದ್ದು