ಗಂಗಾದೇವಿ ಶಿವನ ಹೆಂಡತಿ; ಜ್ಞಾನಶಕ್ತಿ; ಪರಾಶಕ್ತಿ

ಗಂಗೆ ಗೌರಿ ಆದಿಶಕ್ತಿ-ಪರಾಶಕ್ತಿ

ಗಂಡ ಗಂಡ; ಗುರು;ಲಿಂಗಪತಿ;ಪ್ರಾಣಧರ್ಮ

ಗಂಪ ಬುಟ್ಟಿ

ಗಡಿಗೆ ಬಟ್ಟಲು ಗಳಿಗೆ ಬಟ್ಟಲು, ಮರಳು ಅಥವ ನೀರಿನ ಸಹಾಯದಿಂದ ವೇಳೆಯನ್ನು ಅಳೆಯುವ ಸಾಧನ

ಗಡಿವಾಡ ಸುಂಕದ ಕಟ್ಟೆ

ಗಣಾಚಾರ ಪಂಚಾಚಾರಗಳಲ್ಲಿ ಒಂದು ಶಿವನಿಂದೆಯನ್ನು ಸಹಸದಿರುವುದು       

ಗಣಿಮಿಣಿ ದೊಂಬರ ಆಟದ ಕೋಲು (?)

ಗನ್ನ ಮೋಸ, ತಂತ್ರ

ಗಮನ ಚಲನೆ: ಲಕ್ಷ್ಯ

ಗರಿ ಬಾಣದ ಹಿಳಕು, ಗರಿ

ಗಸಣಿ ಘರ್ಷಣೆ; ಗೋಜು, ಗೊಡವೆ

ಗಳೆ ಗಳು, ಕೋಲು

ಗಾಣ ಗಾಳ

ಗಾರಾಗು ಬೊಕ್ಕೆಯೇಳು

ಗಾರು ಒರಟು; ದಿಗಿಲು; ಹಿಂಸೆ

ಗಾವಳಿ ಗದ್ದಲ

ಗಾವಿಲರು ಹಳ್ಳಿಗರು, ಅಶಿಕ್ಷಿತರು

ಗಾವುದಿ ದಡ್ಡತನ, ಹೆಡ್ಡ

ಗಿಣ್ಣಿಲು ಗಿಚಿಡಿ, ಸಣ್ಣ ಬಟ್ಟಲು

ಗುಂಗಿ ಹುಳು; ಅತಿಸೂಕ್ಷ್ಮ ಮಾಯೆ

ಗುಂಟ ಗೂಟ

ಗುಜ್ಜ ಹೊಲೆಯ ಗಿಡ್ಡ ಹೊಲೆಯ

ಗುಡಿಗಟ್ಟು ಬಾವುಟ ಹಾರಿಸು, ಗಡಿಯನ್ನು ಗುರುತಿಸು, ಗುಡಿಯನ್ನು ಕಟ್ಟು

ಗುಡುಗೂರಿ ಗೊರಗೊರ ಸದ್ದು ಗಂಟಲಲ್ಲಿ     ಹುಟ್ಟಿ; ಗೊರಲು ರೋಗ

ಗುತ್ತಗೆ ಗುತ್ತಿಗೆ; ಆಸ್ತಿಯ ಮಾಲಿಕನೊಂದಿಗೆ ಗುತ್ತಿಗೆ ಕರಾರು

ಗುದಿಯಿಕ್ಕಿದಂತೆ ಗುಂಪುಕಟ್ಟಿದಂತೆ

ಗುರಿಯನೆಚ್ಚಡೆ ಗುರಿಯನ್ನು ಹೊಡೆದಾಗ

ಗುರಿಯನೆಚ್ಚಲ್ಲಿ ಗುರಿಗೆ ಹೊಡೆದಲ್ಲಿ

ಗುರು ಚರ ತಾನು ಬೇಡದೆ ಅನ್ಯರಿಗೆ ಹೇಳಿ ಈಸಿಕೊಂಬವನು

ಗುರು ಲಿಂಗ ಜಂಗಮ ಪರಸ್ಪರ ಭೇದ ಭಿನ್ನವಿಲ್ಲದ ತತ್ವಗಳು

ಗುರು ಮಾರ್ಗದಶಕ ದೀಕ್ಷೆಯನ್ನು ನೀಡುವ ವ್ಯಕ್ತಿ ಪರಮಾತ್ಮ ಪ್ರತಿವ್ಯಕ್ತಿಯ ಅಂತರಂಗದಲ್ಲೂ ಇರುವ ತತ್ವ

ಗುಸುಟು ಗೂಷ್ಟು, ಬೂಷ್ಟು, ಘರ್ಷಣೆ; ಪಿಸುಮಾತು; ಗೊಣಗು

ಗೊಜಡು ಗೊಂದಲ, ಅಸ್ಪಷ್ಟ ಗೊಣಗಾಟ

ಗೊತ್ತಿಗೆ ಗುರುತಾದ ಜಾಗ, ಸಂಧಿಸುವ ಸ್ಥಳ

ಗೊತ್ತು ಇರುವ ಗೊತ್ತಾದ ಜಾಗ; ವಿಧಿ, ನಿಬಂಧನೆ; ಯೋನಿ

ಗೊರಜೆ ಜೊಂಡು ಸಸ್ಯ; ಒಂದು ಬಗೆಯ ಚಿಪ್ಪಿನ ಪ್ರಾಣಿ

ಗೋಟಿಗೊಳಾಗು ಕಾಟಕ್ಕೆ ಒಳಗಾಗು, ಮೂಲೆಗುಂಪಾಗು

ಗೋರಿಗೊಳಗಾಗು ಬಲೆಗೆ ಒಳಗಾಗು, ಹಾಡಿನಿಂದ ಮರುಳುಗೊಂಡು ಬಲೆಗೆ ಸಿಕ್ಕಿಬೀಳು

ಗೋವತ್ಸ ಹಸುವಿನ ಕರು

ಘಟ ದೇಹ

ಘಟಸರ್ಪ ಮಡಕೆಯೊಳಗಿನ ಹಾವು; ಮಡಕೆಯೊಳಗಿನ ಹಾವನ್ನು ಹಿಡಿಯುವುದು ಒಂದು ಬಗೆಯ ದಿಬ್ಯ

ಘಟಿತ ಆದ, ಸಂಭವಿಸಿದ; ಸಂಬಂಧವನ್ನು ಹೊಂದಿರುವ

ಘಟ್ಟಿವಾಳ ಗಂಧವನ್ನು ತೇಯುವಾತ

ಘನ ದೊಡ್ಡದು ಮಹತ್ತಾದದ್ದು ಭೌತಿಕವಾದದ್ದು ಲಿಂಗ, ಪರಮಾತ್ಮ

ಘುಟಿಕಾಸಿದ್ಧಿ ಎಂಟು ಪ್ರಮುಖ ಸಿದ್ಧಿಗಳಲ್ಲಿ ಒಂದು; ಪಾದರಸದ ಗುಳಿಗೆಗಳನ್ನು ತಯಾರಿಸಿ, ನುಂಗುವ ಮೂಲಕ ವಜ್ರಕಾಯವನ್ನು ಪಡೆಯುವ ಸಿದ್ಧಿ; ಮಾದಕವಸ್ತು ಸೇವನೆಯ ಮೂಲಕ ಪಡೆದ ಸಿದ್ಧಿ (?)

ಚಂದ್ರ ಚಂದ್ರ; ಮೂಗಿನ ಎಡ ಹೊರಳೆಯ ಉಸಿರಾಟದ ನಾಳ ಇಡಾಕ್ಕೆ ಸಂಬಂಧಿಸಿದ್ದು, ಚಂದ್ರನಾಡಿ

ಚಂದ್ರಗಿರಿ ಚಂದ್ರನ ಕಾಂತಿಗೆ ಸ್ರವಿಸುವ ಗಿರಿ; ಪರಮಶಾಂತಿಯಿಂದ ಕೂಡಿದ ಜ್ಞಾನ

ಚಂದ್ರಗಿರಿ ಪಟ್ಟಣ ಪರಮಶಾಂತಿಯಿಂದ      ಕೂಡಿದ ಶಿವೋಹಂ ಭಾವ ತುಂಬಿರುವ ಅಂತರಂಗ

ಚಟ್ಟಿ ಹತ್ತದೆ ತಳ ಹತ್ತದೆ, ಸೀಯದೆ

ಚತುರಾಶ್ರಮಗಳು ಕರ್ಮ, ಭಕ್ತ, ಜ್ಞಾನ,      ಲೌಕಿಕ

ಚತುರ್ವಿಧ ಅರ್ಪಿತ ಅರ್ಪಿತ, ಕಾಯಾರ್ಪಿತ, ಕರಣಾರ್ಪಿತ, ಭಾವಾರ್ಪಿತ

ಚತುರ್ವಿಧ ಸಂಬಂಧಿಗಳು ಗುರು, ಲಿಂಗ,     ಜಂಗಮ, ಪ್ರಸಾದ ಸಂಬಂಧಿಗಳು

ಚಬುಕು ಚಾಬೂಕ, ಚಾವಟಿ

ಚಮ್ಮಾವುಗೆ ಚರ್ಮದ ಪಾದುಕೆ

ಚಮ್ಮಾಳಿಗೆ ಚರ್ಮದ ಪಾದುಕೆ

ಚಾರುಚ್ಚು ಚೆನ್ನಾಗಿ ಬಿಚ್ಚು

ಚಿಕ್ಕುಟು ಚಿಕ್ಕಾಡು, ಸೊಳ್ಳೆಯ ರೀತಿಯ ಕೀಟ; ಅತಿ ಸೂಕ್ಷ್ಮವಾದ ಚಿತ್ತು

ಚಿತ್ಶಕ್ತಿ ಪರಾ, ಆದಿ, ಇಚ್ಛಾ, ಜ್ಞಾನ, ಕ್ರಿಯಾ ಎಂಬ ಐದು ವಿಧದ ಶಕ್ತಿಗಳಿಂದ ಒಡಗೂಡಿದ ಚೇತನಾತ್ಮಕ ಶಿವಶಕ್ತಿ

ಚಿತ್ತಜ ಮನ್ಮಥ

ಚಿನ್ನಗೆಯ್ಕ ಚಿನ್ನದಕೆಲಸ ಮಾಡುವವನು

ಚುಕ್ಕಿ ಮೈಮೇಲೆ ಗುರುತುಗಳುಳ್ಳ ಮೇಕೆ

ಚುಳುಕು ಅಂಗೈಯ ತಗ್ಗು, ಹಳ್ಳ

ಚೂಣಿ ಮುಂಭಾಗ, ಮುಂದಿನ ಸಾಲು

ಚೇಗು ಲಾಭ, ಸಾಮರ್ಥ್ಯ, ಮರದ ಸಾರ; ಹಾನಿ, ಕೇಡು, ಭಂಗ

ಚೇಳು ಮಿಥ್ಯೆ

ಚೇಷ್ಟೆ ವರ್ತನೆ, ಇಷ್ಟಬಂದಂತೆ ಮಾಡುವ ವರ್ತನೆ

ಚೋದ್ಯ ಅಚ್ಚರಿ

ಚೋಹ ವೇಷ, ಪಾತ್ರ

ಚೌರಾಸಿ ಲಕ್ಷ ಎಂಬತ್ತುನಾಲ್ಕು ಲಕ್ಷ

ಛೇಗೆ ಕೇಡು, ನಾಶ

ಜಂಗಮ ಚಲನಶೀಲ ಪ್ರಜ್ಞೆ; ಗುರು ಮತ್ತು ಲಿಂಗ ಪರಿಕಲ್ಪನೆಗಳಿಗೆ ಸಮನಾದ ಪರಿಕಲ್ಪನೆ ವ್ಯಕ್ತಿರೂಪದಲ್ಲಿ ಕಾಣಿಸಿಕೊಳ್ಳುವ ಪರಮಾತ್ಮ

ಜಂಘೆ ತೊಡೆ

ಜಂಪ ಗೊಂಚಲು

ಜಂಬುಕ ನರಿ

ಜಂಬೂದ್ದೀಪ ಪುರಾಣಗಳಲ್ಲಿ ಬರುವ ಏಳು ದ್ವೀಪಗಳಲ್ಲಿ ಒಂದು; ಉಳಿದ ಆರು-ಪ್ಲಕ್ಷ, ಶಾಲ್ಮಲೀ, ಕುಶ, ಕ್ರೌಂಚ, ಶಾಕ ಮತ್ತು ಪುಷ್ಕರ

ಜಂಬೂಫಲ ನೇರಿಲೆ ಹಣ್ಣು

ಜಕ್ಕವಕ್ಕಿ ಚಕ್ರವಾಕ ಪಕ್ಷಿ

ಜಗದೆರೆಯ ಜಗತ್ತಿನ ಒಡೆಯ

ಜತ್ತಿಗೆ ನೊಗವನ್ನು ಎತ್ತಿನ ಕೊರಳಿಗೆ ಕಟ್ಟುವ ಹಗ್ಗ

ಜನ್ನಿಗೆಯರ ದೇವರಿಗೆ ಮೀಸಲಿಟ್ಟ ಹಸು ಮತ್ತು ಅದರ ಹಾಲು (?)

ಜರಗು ಚಿನ್ನದ ಕಣ ಬೆರೆತ ಮಣ್ಣು

ಜಲಗ ಚಿನ್ನದ ಕಣ ಬೆರೆತ ಮಣ್ಣು, ಅದನ್ನು ತೊಳೆಯುವ ವಿಧಾನ

ಜಲಸ್ತಂಭ ನೀರಿನಲ್ಲಿದ್ದೂ ನೀರಿನಿಂದ ಬಾಧೆಯೊಳಗಾದಂತಿರುವ ವಿದ್ಯೆ

ಜವ ಯಮ

ಜವನಿಕೆ ತೆರೆ

ಜವ್ವನ ಯೌವನ

ಜಾತ ಹುಟ್ಟಿದವನು

ಜಾತಸ್ಯ ಮರಣಮ್ ಧ್ರುವಂ ಹುಟ್ಟಿದವರಿಗೆ ಸಾವು ನಿಶ್ಚಿತ

ಜಾಲಂಧ್ರ ಬೆಳಕಿಂಡಿ

ಜಾವಳಿಗ ಸಾಮಾನ್ಯ ಮನುಷ್ಯ

ಜಿಗುಡು ಜಿಗಟು, ಅಂಟು

ಜಿಗುಳುಗಂಟು ಜಾರುಗಂಟು, ಜೀರ್ಕುಣಿಕೆ

ಜಿಹ್ವೆ ನಾಲಗೆ

ಜುಗ ಯುಗ

ಜೂಬು ಯಜ್ಞಸ್ತಂಭ

ಜೂಳಿ ಕಮಂಡಲು, ಗಿಂಡಿ ಮೊದಲಾದವುಗಳ ನಳಿಕೆ

ಜ್ಞಾನ ನೋಡಿ ಆರು, ಮೂರು

ಝಂಕಿಸು ಗದರಿಸು, ಬೆದರಿಸು

ಟೊಂಬರ ಹಸನು ಮಾಡದ ಧಾನ್ಯ

ಡಂಬಕ ಮೋಸ, ಉದ್ಧಟತನ

ಡಳಹು ಅಂತರಂಗದ ಕಪಟ

ಡಾವರಿಸು ಆತಂಕಪಡು

ಡಾಳ ಕಾಂತಿ, ಹೊಳಪು

ಡಿಂಬ ದೇಹ

ಢಾಳಿಸು ಹೆರೆ, ಕೀಳು, ಹೊಳೆ

ತಂಗಿ ಮಾಯೆ

ತಂದೆ ಗುರು

ತಿಂಥಿಣಿ ಸಮೂಹ, ಗುಂಪು

ತಕ್ಕೈಸು ಆಲಿಂಗಿಸು

ತಗರ ಹೋರಟೆ ಜೂಜಾಟದ ಹೋರಟ; ತಗರ-ಹತ್ತು ಬಗೆಯ ಪಗಡೆಯಾಟಗಳಲ್ಲಿ ಒಂದು; ತಗರ-ಟಗರು; ಟಗರು ಕಾಳಗ

ತಗಹು ಮೋಸ

ತತ್ತಲಮಗ ತೊತ್ತಲು ಮಗ, ಜೀತದಾಳು

ತದುಗತ ತದ್ಗತ, ಅದರೊಳಗೆ ಒಂದಾಗು

ತದ್ರೂಪವಾಗಿ ಅದೇ ರೂಪವಾಗಿ

ತನಿರಸ ಸವಿಯಾದ ರಸ

ತಪ್ಪಲ ಬೆಟ್ಟದ ತಪ್ಪಲು, ಸೊಪ್ಪು, ತಳ

ತಪ್ಪಲಕ್ಕಿ ನೆಲದಮೇಲೆ ಬಿದ್ದ ಅಕ್ಕಿ?

ತಪ್ಪುಕ ತಪ್ಪು ಮಾಡಿದವನು, ಅಪರಾಧಿ

ತಮ ಕತ್ತಲೆ

ತಮಂಧ ಕುರುಡಾಗಿಸುವ ಕತ್ತಲು

ತಮಸೂನು ಕತ್ತಲೆಯ ಮಗ

ತರಕಟಗಾಡು ವಿಪರೀತವಾಗಿ ನೋಯಿಸು

ತರತರಂಬೋಗು ಅತಿಯಾದ ಸಂತೋಷದಿಂದ ಕಂಪಿಸು

ತರಹರ ಸಹನೆ; ಆತುರ; ಸೇರಿಕೆ, ಹೊಂದಿಕೆ

ತಲೆ ಖಂಡಿತ ಜ್ಞಾನದ ನಿಲುವು

ತಲೆಯಿಲ್ಲದ ಅಟ್ಟೆ ಜ್ಞಾನವಿಲ್ಲದ ಅಜ್ಞಾನ

ತಲೆಯಿಲ್ಲದ ಮೃಗ ತಲೆಯಿಲ್ಲದ ಜಿಂಕೆ; ಮಾಯೆ

ತಲ್ಲೀಯ ಅದರಲ್ಲೇ ಒಂದಾಗು

ತವನಿಧಿ ಅಕ್ಷಯ ನಿಧಿ

ತವರಾಜ ಒಂದು ಬಗೆಯ ಬಿಳಿಯ ಸಕ್ಕರೆ; ಪ್ರಿಯವಾದದ್ದು

ತಸ್ಕರ ಕಳ್ಳ

ತಳಿಗೆ ತಟ್ಟೆ

ತಾಯಿ ಚಿತ್‌ಶಕ್ತಿ; ಮಾಯೆ; ಶರಣ

ತಾಯಿ ತಂದೆಯಿಲ್ಲದ ಕಂದ ಸ್ವಯಂಭು; ನಿಷ್ಕಲ ಪುರಬ್ರಹ್ಮ

ತಾರಕ ಕೊಂಡ ವಾರಿ

ತಾರುಗಂಟು ಒಂದು ಬಗೆಯ ಗಂಟು

ತಾರ್ಕಣೆ ಹೊಂದಾಣಿಕೆ, ವಿವಾದ

ತಾವಡಿಸು ಆಯಾಸಗೊಳ್ಳು

ತಾಳು ತಳ

ತಾಳೋಷ್ಠ ಸಂಪುಟ ಬಾಯ ಅಂಗಳ ಮತ್ತು ತುಟಿಗಳು ಇರುವ ಪುಟ್ಟಪೆಟ್ಟಿಗೆ, ಬಾಯಿ

ತಿಕ್ಕವಟ್ಟ ಒರೆಗಲ್ಲು

ತಿಗುಡು ಮರದ ತೊಗಟೆ

ತಿಗುರು ಲೇಪನ

ತಿಟ್ಟು ತೆಗಳು, ಬೈಯಿ

ತಿತ್ತಿ ಚರ್ಮದ ಚೀಲ

ತಿತ್ತಿಗ ಗುಟುಕು (?)

ತಿರಿವಂತೆ ಭಿಕ್ಷೆ ಬೇಡುವಂತೆ

ತೀತ ಅತೀತದ ವಿರುದ್ಧಪದ; ಪರಿಮಿತ, ಬದ್ಧ

ತೀವಿ ತುಂಬಿ, ಭರ್ತಿಯಾಗಿ

ತುಂಬಿ ದುಂಬಿ ಮತ್ತು ತುಂಬಿಕೊಂಡು; ಪರಿಪೂರ್ಣತೆ; ಪರಿಪೂರ್ಣತೆಯೇ ತಾನೆಂಬ ಅಹಂಕಾರ; ಲಿಂಗ ಜ್ಞಾನ

ತುಡುಗುಣಿ ಕದ್ದು ಉಣ್ಣುವ ಪ್ರಾಣಿ, ವ್ಯಕ್ತಿ

ತುಯ್ಯಲ ಪಾಯಸ

ತುರೀಯ ನಾಲ್ಕನೆಯ ಅವಸ್ಥೆ, ಜಾಗ್ರತ, ಸ್ವಪ್ನ, ಸುಷುಪ್ತಿಗಳಾಚೆಯದು; ದೇವರೊಡನೆ ಒಂದಾದ ಸ್ಥಿತಿ

ತುರು ಹಸು, ಹುಸುಗಳ ಗುಂಪು

ತುಷ್ಟಿ ತೃಪ್ತಿ

ತೂರ್ಯಸಂಭಾಷಣೆ ನಾಲ್ಕು ಬಗೆಯ ಸಂಗೀತವಾದ್ಯಗಳ ಸಂಭಾಷಣೆ; ಏರು ದನಿಯ ಮಾತುಕತೆ

ತೆಕ್ಕೆ ಅಪ್ಪುಗೆ; ಜೋಡಣೆ

ತೆತ್ತಿಗ ಸೇವಕ, ನಂಟ, ಹಿತವನ್ನುಂಟುಮಾಡುವವ

ತೆರಣಿಯ ಹುಳು ರೇಶಿಮೆಯ ಹುಳು

ತೆರಪು ಅವಕಾಶ

ತೆವರು ಬೋರಲಾಗಿ ಮಲಗು

ತೇಜಿ ಕುದುರೆ

ತೊಂಡು ಹೋಗು ಹತೋಟಿ ಇಲ್ಲದೆ ವರ್ತಿಸು; ದಾರಿತಪ್ಪು

ತೊಡಚಿ ತೊಟ್ಟು

ತೊಡರು ಬಾವುಲಿ, ತೊಡಕು

ತೊಡೆಯ ಮೇಲಿಪ್ಪ ಗೌರಿ ಆಧಾರ ಸ್ಥಾನದಲ್ಲಿರುವ ಆದಿಶಕ್ತಿ

ತೊಟ್ಟಿಲು ದೇಹ

ತೊರೆ ಕಿರುನದಿ, ಬಿಡು

ತೊರೆಗೂರ ?

ತೋಕುಳು ?

ತೋಟಿ ತೊಳಲಾಟ

ತೋಮರ ಆಯುಧ, ಈಟಿ (?)

ತೋರುವರೊಳರು ತೋರುವವರು ಇದ್ದಾರೆ

ತ್ರಾಸು ತಕ್ಕಡಿ

ತ್ರಿಕರಣ ಕಾರ್ಯ ಸಾಧಕಗಳಾದ ಮನಸ್ಸು, ಮಾತು ದೇಹಗಳು

ತ್ರಿಕೂಟ ಇಡಾ, ಪಿಂಗಳ, ಸುಷುಮ್ನಾ ನಾಡಿಗಳ; ಗಂಗೆ, ಯಮುನೆ, ಸರಸ್ವತಿ ನದಿಗಳ; ಸೂರ್ಯ, ಚಂದ್ರ, ಅಗ್ನಿ ನೇತ್ರಗಳು ಕೂಡುವ ಸ್ಥಾನ; ಭ್ರೂಮಧ್ಯ; ಆಜ್ಞಾಚಕ್ರ; ಅ ಉ ಮಕಾರಗಳ ಸಂಗಮ.

ತ್ರಿವಿಧ ಸಾಧನಗಳು ಅರ್ಚನ, ಅರ್ಪಣ, ಅನುಭಾವ

ತ್ರಿವಿಧ ಮೂರು ಪರಿಕಲ್ಪನೆಗಳ ಗುಂಪು, ಅಚ್ಚ, ನಿಚ್ಚ, ಸಮಯ ಪ್ರಸಾದಿ; ಅರ್ಪಿತಗಳು; ಅರ್ಥ ಪ್ರಾಣ ಅಭಿಮಾನಗಳು; ತ್ರಿವಿಧ ಮಲಗಳು; ಲಿಂಗಗಳು; ಕರಣಗಳು; ಭಕ್ತಿ; ಜ್ಞಾನ, ವೈರಾಗ್ಯ ಇತ್ಯಾದಿ ಅಸಂಖ್ಯ ಮೂರು ವಿಧಗಳನ್ನು ಸಂದರ್ಭಾನುಸಾರ ಗುರುತಿಸಿಕೊಳ್ಳಬಹುದು

ತ್ರಿವಿಧ ಮಲ ಅಣವ, ಕಾರ್ಮಿಕ ಮಾಯಾ ಮಲಗಳು

ತ್ವಕ್ಕು ಚರ್ಮ

ಥಟ್ಟಾಗಿ ಗೋಣಿಯಚೀಲವಾಗಿ

ದಂಡಿಗೆ ಏಕತಾರಿಯ ಕೋಲು; ಪಲ್ಲಕ್ಕಿ, ಅಂದಣ

ದಂಬು ಅಡಂಬರ

ದಗ್ಧವಾದ ಪಟ ಸುಟ್ಟುಹೋದ ಬಟ್ಟೆ

ದಡಿಗೋಲು ದೊಣ್ಣೆ; ಬಿದಿರ ಕೋಲು

ದಶಾವಸ್ಥೆ ವಿರಹದ ಹತ್ತು ಸ್ಥಿತಿಗಳು-ಅಭಿಲಾಷ, ಚಿಂತನ, ಅನುಸ್ಪೃತಿ ಗುಣಕೀರ್ತನ, ಉದ್ವೇಗ, ವಿಲಾಪ, ಉನ್ಮಾದ ವ್ಯಾಧಿ, ಜಡತೆ ಮತ್ತು ಮರಣ

ದಸರಿದೊಡಕು ದಸರಿ=ರೇಶಿಮೆಯ ಬಟ್ಟೆ,     ಅತ್ಯಂತ ನಾಚೂಕಾದ ತೊಡಕು, ಸಮಸ್ಯೆ

ದಾಯಗಾರಿಕೆ ಪಾಲುಗಾರಿಕೆ

ದಾಸೋಹ ಗುರು, ಲಿಂಗ, ಜಂಗಮಗಳಿಗೆ ದಾಸನೆಂಬ ಭಾವನೆ; ಭೋಜನ

ದಿಂಡೆ ಒರಟು, ಹದ್ದುಮೀರಿದ, ಹೆಂಗಸು;      ದಿಬ್ಬ

ದಿಂಡೆಯತನ ಒರಟುತನ

ದಿಬ್ಯ ಬೆಂಕಿ ಮೊದಲಾದವನ್ನು ಹಿಡಿದು ಮಾಡುವ ಪ್ರಮಾಣ

ದುಡ್ಡಿಸ್ತರು ಹಣವಂತರು

ದೃಷ್ಟ ಕಂಡದ್ದು, ದೃಷ್ಟಾಂತ, ನಿದರ್ಶನ

ದೇವಾಂಗ ಮಡಿಯಾದ ರೇಶಿಮೆ ಬಟ್ಟೆ

ದೇಹಾರ ಲಿಂಗಪೂಜೆ ದೇವಾಲಯ

ದೊಡ್ಡೆ ಕೋಣ; ಕಾಡುಕೋಣ

ಧರಣಿ ಭೂಮಿ

ಧವಳಾರ ಸುಣ್ಣ ಬಳಿದ ಮನೆ; ಮಹಾನುಭಾವಾಂತರಂಗ

ಧಾರಾವರ್ತ ಧಾರಾಕಾರ; ಸಂಸಾರವೆಂಬ ಮಳೆ

ಧೇನು ಕಾಮಧೇನು