ನಕ್ಕುಬಚ್ಚನೆ ನಗೆಯ ವೇಷ

ನಚ್ಚುವೆ ನಂಬುವೆ

ನಟನೆಯನೇನುವ ನಟನೆಯನ್ನೇನನ್ನೂ

ನಡೆಗೆಟ್ಟ ನಡೆ ಇಲ್ಲವಾದ, ನಿಶ್ಚಲವಾದ

ನಡೆವ ಸತಿ ಕ್ರಿಯಾಶಕ್ತಿ

ನಡೆವೆಣ ನಡೆಯುವ ಹೆಣ

ನನೆ ಮೊಗ್ಗು

ನನ್ನಿ ನಿಜ

ನರವಿಂಧ್ಯ ಜನರಿಂದ ತುಂಬಿದ ಅರಣ್ಯ; ಜನರಿರುವ ಸ್ಥಾನ

ನಲ್ಲೊ ಒಳ್ಳೆಯದೊ

ನವಖಂಡ ಒಂಬತ್ತು ಖಂಡಗಳ ಭೂಪ್ರದೇಶ; ಒಂಬತ್ತು ತುಂಡು

ನವಚಿತ್ರ ಪತ್ರದ ವೃಕ್ಷ ವಿವೇಕವೆಂಬ ಮರ, ಹೊಸ ಎಲೆಗಳಿರುವ ಮರ

ನವರತ್ನದ ಖಂಡಿತ ಹಾರ ನವಲಿಂಗ ಪ್ರಯುಕ್ತವಾದ ಜ್ಞಾನರತ್ನ, ಅಪರಿಪೂರ್ಣವಾದ ಮನುಷ್ಯ ದೇಹ

ನಳನ ಹೊಳಪಿನ, ಚೆಲುವಿನ

ನಾಡಕೀಡೆ ನಾಡಿನ ಕ್ರಿಮಿ

ನಾಣ ನಾಚಿಕೆಯ

ನಾದ ಬಿಂದು ಕಳೆ ಶಿವನು ನಾದ, ಶಕ್ತಿಯು ಬಿಂದು, ಅವರಿಬ್ಬರ ಸಂಯೋಗವು ಕಳೆ ಆಕಾರ, ಉಕಾರ ಮತ್ತು ಮಕಾರಗಳು ಇದರ ಧ್ವನಿ ಸಂಕೇತಗಳು

ನಾದವ ನುಡಿಸಿದ ರಾವಳ ಸಂಗೀತ ನುಡಿಸಿದ ರಾವಣ

ನಾದಿನಿ ಮಾಯೆ

ನಾರಿ ಬಿಲ್ಲಿನ ಹಗ್ಗ

ನಾರಿವಾಳ ತೆಂಗಿನಕಾಯಿ

ನಾಲ್ಕು ೧) ಪುರುಷಾರ್ಥ-ಧರ್ಮ, ಅರ್ಥ, ಕಾಮ, ಮೋಕ್ಷ ೨) ಚಕ್ರಗಳು-ಕಾಲ, ಕರ್ಮ, ನಾದ, ಬಿಂದು ೩) ಪೂರ್ವಾಶ್ರಯಗಳು   ಲಿಂಗ, ಲಾಂಛನ, ಪ್ರಸಾದ, ಪಾದೋದಕ ೪) ಲಿಂಗಗಳು ಗುರು, ಶಿವ, ಜಂಗಮ, ಪ್ರಾಣಲಿಂಗಗಳು

ನಾವಿದ ನಾಪಿತ, ಕ್ಷೌರಿಕ

ನಿಃಕರಿಸು ನಿರಾಕರಿಸು

ನಿಃಕರ್ಮಿ ಕರ್ಮರಹಿತ

ನಿಃಕಲ ಸಕಲಕ್ಕೆ ವಿರುದ್ಧವಾದದ್ದು, ಪರಿಪೂರ್ಣತೆ

ನಿಃಕ್ರೀ ಕ್ರಿಯಾರಹಿತ

ನಿಃಪತಿ ನಿಷ್ಪತ್ತಿ, ಸಿದ್ಧಿ, ಪರಿಪೂರ್ಣತೆ

ನಿಗಳ ಆನೆಯನ್ನು ಕಟ್ಟುವ ಸರಪಳಿ

ನಿಗುಚಿ ಹರಡಿ

ನಿಚ್ಚಕ್ಕೆ ನಿತ್ಯಕ್ಕೆ, ಸತ್ಯಕ್ಕೆ

ನಿಚ್ಚಣಿಕೆ ಏಣಿ

ನಿತ್ಯಭಂಡಾರ ನಿತ್ಯ ದಾಸೋಹ, ಭೋಜನ

ನಿಧಾನ ಸಂಪತ್ತು, ನಿಕ್ಷೇಪ

ನಿನ್ನರಿಕೆಯ ನಿನ್ನನ್ನು ಅರಿಯದಿರುವ

ನಿಬ್ಬಣ ಮದುವೆಯ ನಂಟರ ಮೆರವಣಿಗೆ;     ನಿಜೋಪದೇಶ

ನಿಬ್ಬಣಿಗರು ಮದುವೆಯ ನಿಬ್ಬಣದಲ್ಲಿರುವವರು; ವಿಶ್ವ

ನಿರಾಕುಳ ನಿಶ್ಚಿಂತೆ, ಕುಳವಿಲ್ಲದ; ವ್ಯಾಕುಳರಹಿತ, ಪರಮಾತ್ಮ

ನಿರಾಭಾರಿ ಸಂಸಾರಾಭಿಮಾನವಿಲ್ಲದವನು

ನಿರಾಮಯ ನಿಷ್ಕಲಂಕ; ನಿರೋಗಿ

ನಿರಾಲಂಬ ಯಾವುದೇ ಅವಲಂಬನೆಗಳಿಲ್ಲದ ಸ್ಥಿತಿ

ನಿರಾಳ ವ್ಯಾಕುಲತೆ ಇಲ್ಲದ; ಪರಬ್ರಹ್ಮ

ನಿರಾಳವೆಂಬ ಶಿಶು ಮಹಾಜ್ಞಾನತತ್ವ

ನಿರಿ ಸೀರೆಯ ನಿರಿಗೆ

ನಿರಿಗೆಯಾಗು ಸುವ್ಯವಸ್ಥೆಗೊಳ್ಳು

ನಿರುತ ಮಗ್ನನಾದವನು, ತೊಡಗಿದವನು; ಸತ್ಯ, ದಿಟ

ನಿರೂಪ ರೂಪವಿಲ್ಲದ್ದು, ಅಮೂರ್ತ; ಒಕ್ಕಣೆ, ಆಜ್ಞೆ

ನಿರ್ಬಂಧ ಪರಿಮಿತಿ, ಬಂಧನ, ಬಂಧರಹಿತ ಸ್ಥಿತಿ

ನಿರ್ಬುದ್ಧಿ ಬುದ್ಧಿ ಇಲ್ಲದ

ನಿರ್ವಯಲು ಬಯಲು, ಶೂನ್ಯ

ನಿರ್ವಾಣ ೧)ಬತ್ತಲೆ ೨) ವಾಣಿ ಇಲ್ಲದ, ಮೌನ

ನಿಷ್ಪತ್ತಿ ನಿಲುಕಡೆ, ಲಿಂಗಾಂಗಸಾಮರಸ್ಯ ಮುಕ್ತಿ

ನಿಸ್ಸರ ಸ್ವರವಿಲ್ಲದ

ನಿಸ್ಸೀಮ ಗಡಿ, ಮಿತಿ ಇಲ್ಲದವನು

ನೀರಲಾದ ನಿರ್ಮಿತಂಗಳು ಕೇವಲ ಮಾನಸಿಕವಾದ ಪರಿಕಲ್ಪನೆಗಳು; ಜಲಬುದ್ಬುದವಾದ ಪಿಂಡ

ನೀಲಗಿರಿ ಅಜ್ಞಾನಾಹಂಕಾರ

ನುಡಿಗೆಟ್ಟ ನುಡಿ ಇಲ್ಲವಾದ, ಮೌನವಾದ

ನುಲಿ ಹಗ್ಗ

ನೆಮ್ಮು ನಂಬು, ಅವಲಂಬನೆಯನ್ನು ಪಡೆ

ನೆಮ್ಮುಗೆ ನಂಬಿಕೆ

ನೆಯಿ ತುಪ್ಪ

ನೆರವಿ ಜನಸಮೂಹ

ನೆರಹಿ ಒಟ್ಟುಗೂಡಿಸಿ

ನೆರಿಗೆ ನಿರಿಗೆ, ಸುವ್ಯವಸ್ಥೆ

ನೆರೆ ಕೂಡು

ನೆಲದ ಬೊಂಬೆ ದೇಹ ನೆಳಲು ನೆರಳು; ಮರವೆ; ಮನಸ್ಸು; ಮಾಯೆ

ನೇಣಿಲ್ಲದೆ ಹಗ್ಗವಿಲ್ಲದೆ

ನೇಹವಿಲ್ಲದ ಮಾಟ ಸ್ನೇಹವಿಲ್ಲದೆ ಕಾರ್ಯವನ್ನು ಮಾಡುವ ಪರಿ

ನೊರಜು ಸಣ್ಣ ಸೊಳ್ಳೆ; ಬೆಣಚುಕಲ್ಲು

ನೋಂತು ನೋಂಪಿಯನ್ನು ಮಾಡಿ, ಹರಕೆಯ ಪೂಜೆಯನ್ನು ಮಾಡಿ

ನೋನು ವ್ರತವನ್ನು ಮಾಡು

ಪಂಕ ಕೆಸರು

ಪಂಚಮುಖ ಶಿವನ ಐದು ಮುಖಗಳು, ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಮತ್ತು ಈಶಾನ

ಪಂಚಾಚಾರ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಭೃತ್ಯಾಚಾರಗಳು

ಪಂಜರ ಪಂಜರ; ದೇಹಭಾವ

ಪಕ್ಕ ರೆಕ್ಕೆ

ಪಕ್ವವಾಹನ್ನಕ್ಕ ಮಾಗುವವರೆಗೆ

ಪಟಂತರ ತೆರೆಯ ಆಚೆ, ತೆರೆಯ ಅಂತರ

ಪಟ್ಟಣ ರಾಣಿ ಇಚ್ಛಾಶಕ್ತಿ

ಪಡಿಕೈದು ಪ್ರತಿ ಆಯುಧ

ಪಡಿಪದಾರ್ಥ ಸಕಲಪದಾರ್ಥಗಳು

ಪಡಿಪುಚ್ಚ ಪ್ರತಿಪ್ರಶ್ನೆ

ಪತಿಕರಿಸು ಪ್ರತಿಕರಿಸು, ತಿರಸ್ಕರಿಸು

ಪನ್ನಗ ಹಾವು

ಪರಟೆ ಚಿಪ್ಪು

ಪರದಳವಿಭಾಡರು ಶತ್ರು ಸೈನ್ಯವನ್ನು ನಾಶಮಾಡುವವರು

ಪರಮಹಂಸ ಪರಮ ಆತ್ಮ

ಪರವಶ ಅನ್ಯಕ್ಕೆ, ಅನ್ಯರಿಗೆ, ವಶವಾಗು

ಪರಾಕಿ ಸ್ತುತಿಪಾಠಕ

ಪರಿಣಾಮ ಕಾಶ್ಮೀರ ಶೈವದ ಪರಿಭಾಷೆ ಮತ್ತೆ ರ್ಪೂವಸ್ಥಿತಿಗೆ ಹಿಂದಿರುಗುವುದು ಸಾಧ್ಯವೇ ಇಲ್ಲದ ಪರಿವರ್ತನೆ

ಪರಿತೋಷ ಸಂತೋಷ

ಪರಿಭ್ರಮಣದ ಅಲೆದಾಡುವ

ಪರಿಯಹ ಬಗೆಯದಾಗುವ

ಪರಿಯಾಣ ಹರಿವಾಣ, ತಟ್ಟೆ

ಪರುಷ ಲೋಹವನ್ನು ಚಿನ್ನವಾಗಿಸಬಲ್ಲ ಸ್ಪರ್ಶಮಣಿ

ಪರುಷದ ಪುತ್ಥಳಿ ಕಬ್ಬಿಣವನ್ನು ಚಿನ್ನವಾಗಿಸುವ ಸ್ಪರ್ಶಮಣಿಯ ಬೊಂಬೆ

ಪಲ್ಲವ ಚಿಗುರು

ಪವಣಿಕೆ ಪೋಣಿಸುವಿಕೆ

ಪವನ ಪವಣ=ಪ್ರಮಾಣ, ಪವನ ಗಾಳಿ

ಪಶ್ಚಿಮ ಸುಶುಮ್ನಾದ್ವಾರ, ಪಶ್ಚಿಮಚಕ್ರ, ಶಿರಸ್ಸಿನ ಹಿಂಭಾಗ

ಪಸರ ಅಂಗಡಿ, ಸಂಗ್ರಹ, ಬಯಲಂಗಡಿ ಪಳುಕದ ಭಾಂಡ ಸ್ಫಟಿಕದ ಪಾತ್ರೆ

ಪಾಕ ನೇಮಿ ಇಂಥ ಅಡುಗೆಯನ್ನೇ

ಪಾತಾಳದಗ್ಘವಣಿ ಪಾತಾಳದ ನೀರು

ಪಾದೋದಕ ಗುರುವಿನ ಪಾದವನ್ನು ತೊಳೆದ ತೀರ್ಥ

ಪಾಷಾಣ ಕಲ್ಲು

ಪಿಂಡಿಗೆ ಪೀಠ, ಲಿಂಗದ ಪೀಠ

ಪಿಪೀಲಿಕ ಇರುವೆ

ಪೂರ್ವಗತಿ ಮಧ್ಯಗತಿ ಉತ್ತರಗತಿ ಭೂತ, ವರ್ತಮಾನ ಭವಿಷ್ಯ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಿದೆ

ಪೆರತನರಿಯದೆ ಬೇರೆ ಇನ್ನೊಂದನ್ನು ತಿಳಿಯದೆ

ಪೆರತಾರನರಿಯದವರು ಬೇರೆ ಯಾರನ್ನೂ ಅರಿಯದವರು

ಪೆರತೇನೂ ಬೇರೇನೂ

ಪೇಯ ಕುಡಿಯಬಹುದಾದದ್ದು

ಪ್ರಣವ ಓಂಕಾರ

ಪ್ರಥಮ ಭಿತ್ತಿ ಸ್ಥೂಲ ಶರೀರ

ಪ್ರಥಮ ಭಿತ್ತಿಯ ಚಿತ್ರ ಇಷ್ಟಲಿಂಗ

ಪ್ರಮಾಣ ಪ್ರತ್ಯಕ್ಷ, ಅನುಭವ, ಉಪಮಾನ (ಹೋಲಿಕೆ, ಶಬ್ದ ಭಾಷೆ, ಅರ್ಥಾಪತ್ರಿ, ಅನುಪಲಬ್ಧಿ, ಐತಿಹ್ಯ, ಸ್ವಾನುಭವ ಇವು         ಎಂಟು ಪ್ರಮಾಣಗಳು)

ಪ್ರಸಾದ ಸಂತೋಷ, ಅದಕ್ಕೆ ಕಾರಣವಾಗುವ ಎಲ್ಲವೂ; ಲಿಂಗಕ್ಕೆ ಅರ್ಪಿಸಿದ ಪದಾರ್ಥ

ಘಣಾಮಣಿ ಆದಿಶೇಷನ ಹೆಡೆಯ ಮಣಿ

ಬಂಡು ಮಕರಂದ

ಬಕುತಿ ಭಕ್ತಿ

ಬಕ್ಕಟ ಬರಿಯ

ಬಗದಳ ಬಾಯಿ ಹುಣ್ಣು

ಬಗರಿಗೆ ನದಿಯ ಬಳಿ ನೀರಿಗಾಗಿ ತೋಡಿದ ಕುಳಿ

ಬಚ್ಚಣೆ ವತ್ಸಲೆ, ಕರುವಿನ ಮೇಲೆ ಪ್ರೀತಿಯುಳ್ಳ ಹಸು; ಬಣ್ಣದ ಮಾತು; ವೇಷ

ಬಜಾವಣೆ ವಾದನ

ಬಟ್ಟೆ ದಾರಿ; ವಸ್ತ್ರ

ಬೆಣ್ಣೆ ಪರಿಪೂರ್ಣ ಶಿವತತ್ವ; ಪರಿಪೂರ್ಣ ವಿವೇಕ

ಬೆಣ್ಣೆಯನಿಕ್ಕು ಅರಿವಿನ ಬಗ್ಗೆ ಮಾತನಾಡು

ಬತ್ತೀಸ ರಾಗ ಮೂವತ್ತೆರಡು ರಾಗಗಳು

ಬಪ್ಪಂತೆ ಬರುವಂತೆ

ಬಯ್ಕೆ ನಿಕ್ಷೇಪ, ನಿಧಿ, ಆಕಾಂಕ್ಷೆ

ಬಯ್ಚಿಡು ಮುಚ್ಚಿಡು, ಅವಿಸಿಡು

ಬರಬರ ಬರಬರುತ್ತಾ

ಬರಲುಗೊಂಡ ಸಸಿ ಬೋಳಾದ ಗಿಡ

ಬರು ಸಠಗ ಬಲು ಮೋಸಗಾರ

ಬರುದೊರೆ ಹೋಹುದು ಪೂರ್ಣವಾಗಿ ವ್ಯರ್ಥವಾಗುವುದು

ಬರುದೊರೆವೋಗು ಬತ್ತಿಹೋದತೊರೆಯಂತೆ ಆಗು

ಬರುಬ ನಿಸ್ಸಹಾಯಕ

ಬರುಸೂರೆವೋಗು ಅತ್ಯಂತವಾಗಿ ನಾಶವಾಗು, ಸೂರೆಹೋಗು

ಬಲುಗೈ ಶಕ್ತಿ; ಪರಾಕ್ರಮಿ

ಬಲುಹಿಂದ ಬಲವಂತ, ಒತ್ತಾಯದಿಂದ

ಬಲ್ಲಿತ್ತು ದೃಢ, ಶಕ್ತಿವಂತ

ಬಲ್ಲಿದ ಉಳ್ಳವನು

ಬಲ್ಲೆತ್ತು ಬಲಿಷ್ಠವಾದ ಎತ್ತು

ಬಲ್ಲೆವೈಸೆ ಬಲ್ಲೆವಷ್ಟೆ

ಬಹುಕುಳ ಅನೇಕ ಅಳತೆಯ [?]

ಬಹಳದೋಲೆ ಬಳಪದಕಲ್ಲಿನ ಓಲೆ

ಬಳಿದೊತ್ತು ವಂಶಪರಂಪರೆಯಿಂದ ತೊತ್ತು ಆದವನು

ಬಳಿವಿಡಿ ಹಿಂಬಾಲಿಸು

ಬಳ್ಳಿವರಿ ಬಳ್ಳಿಯಂತೆ ಹಬ್ಬು

ಬಳ್ಳು ನರಿ

ಬಾಣದಲೆಚ್ಚಡೆ ಬಾಣದಲ್ಲಿ ಹೊಡೆದರೆ

ಬಾಣಸ ಅಡುಗೆ

ಬಾತೆ ಪ್ರಯೋಜನ, ಉಪಯೋಗ

ಬಾರ ತೆಗೆದು ಚರ್ಮವನ್ನು ಸುಲಿದು

ಬಾರಿ ಬಾಯಿ, ದವಡೆ

ಬಾವನ್ನ ಶ್ರೀಗಂಧ

ಬಾವನ್ನಕ್ಷರ ಐವತ್ತೆರಡು ಅಕ್ಷರ

ಬಾಹಂತೆ ಬರುವಂತೆ

ಬಾಹಾಗ ಬರುವಾಗ

ಬಾಳುವನ್ನಕ್ಕರ ಬಾಳುವವರೆಗೆ

ಬಿಟ್ಟಿ ಕೂಲಿಯಿಲ್ಲದ ದುಡಿಮೆ

ಬಿದ್ದು ಔತಣ

ಬಿನುಗು ಕ್ಷುದ್ರ

ಬಿನ್ನಣ ವಿಜ್ಞಾನ, ಚೆಲುವು, ಹೊರಗಿನ ತೋರಿಕೆ

ಬಿರುಬ ಒರಟ, ಒಡ್ಡ

ಬಿಲಿಯ ಹೋದರೆ ಬೆಲೆಕೊಟ್ಟು ಕೊಳ್ಳಲು ಹೋದರೆ

ಬೀಯಕ್ಕೆ ಖರ್ಚಿಗೆ

ಬೀಸರ ಕೊನೆ, ನಾಶ, ವ್ಯರ್ಥ

ಬುದ್ಧಲಿಕೆ ಚರ್ಮದ ಚೀಲ

ಬೆಂಗೋಲು ಬಾರಕೋಲು, ಬೆನ್ನೆಲುಬು

ಬೆಂತರ ಭೂತ, ಪ್ರೇತ

ಬೆಂದ ಮನ ದಗ್ಧವಾದ ಮನಸ್ಸು

ಬೆಂಬಳಿ ತರುವಾಯ, ನಂತರ, ವಂಶ

ಬೆಚ್ಚಂತೆ ಬೆಸುಗೆಯಾದಂತೆ

ಬೆಚ್ಚು ಬೆಸುಗೆಯಾಗು; ಬೆರೆಸು, ಹೊಂದಿಸು

ಬೆನ್ನ ಬಾರು ಬೆನ್ನೆಲುಬು

ಬೆಣ್ಣೆ ವಿವೇಕ; ಶಿವತತ್ವ

ಬೆವಸಾಯ ವ್ಯವಸಾಯ

ಬೆವಹಾರ ವ್ಯವಹಾರ

ಬೆವಹಾರಿ ವ್ಯವಹಾರಿ

ಬೆಸಗೊಂಡಡೆ ಬೇಡಿದರೆ

ಬೆಸಗೊಂಬಡೆ ಕೇಳುವುದಾದರೆ, ಬೆಸೆಯುವ ಎಡೆ ಅಥವ ಸ್ಥಾನ

ಬೆಸನಿ ವ್ಯಸನಿ

ಬೆಸಲಾಗು ಹೆರು, ಪ್ರಸವಿಸು

ಬೆಳುಹಾಗು ಬೆಳ್ಳಗಾಗು

ಬೆಳ್ಳ ಮೂರ್ಖ

ಬೆಳ್ಳಾರ ಬಲೆ

ಬೇಟ ಸಂಭೋಗ

ಬೊಂತೆ ಕೌದಿ

ಬೊಕ್ಕಣ ಬೊಕ್ಕಸ, ಚೀಲ

ಬೊಜಗ ವಿಟ

ಬೊಟ್ಟಿನ ಚುಕ್ಕೆಗಳಿರುವ ಮೇಕೆ (?)

ಬೊಟ್ಟುಗ ಮೈಮೇಲೆ ಚುಕ್ಕೆಗಳಿರುವ ಪ್ರಾಣಿ, ಚಿರತೆ (?)

ಬೊಬ್ಬಳಿಕೆ ನೊರೆ, ನೀರಗುಳ್ಳೆ

ಬೊಮ್ಮ ಬ್ರಹ್ಮ

ಬೋಸರಿಸು ಕೃತಕವಾದ ಗೌರವ ತೋರು, ಹೊಗಳು

ಬ್ರಹ್ಮನ ಶಿರ ಹೋಯಿತ್ತು ಬ್ರಹ್ಮನಿಗೂ ಐದು ತಲೆಗಳಿದ್ದುದರಿಂದ ತಾನೂ ಶಿವನಷ್ಟೇ ಹಿರಿಯನೆಂದು ಅಹಂಕಾರಪಟ್ಟನೆಂದೂ ಶಿವ ಅವನ ಒಂದು ತಲೆಯನ್ನು ಕತ್ತರಿಸಿದನೆಂದೂ ಆ ತಲೆ ಶಿವನ ಭಿಕ್ಷಾಪಾತ್ರೆಯಾಯಿತೆಂದೂ ಕಥೆ

ಭಂಡ ಪಾತ್ರೆ

ಭವಿ ಭವ ಅಥವ ಸಂಸಾರಕ್ಕೆ ಕಟ್ಟುಬಿದ್ದವರು ವೀರಶೈವ ತತ್ವಗಳನ್ನು ಒಪ್ಪದವರು

ಭಾಂಡ ಪಾತ್ರೆ, ಸಂಗೀತವಾದ್ಯ

ಭಾಜನ ಪಾತ್ರೆ, ಸಂಗೀತ ವಾದನ

ಭಾನು ಸೂರ್ಯ

ಭಾಳ ಹಣೆ

ಭೃತ್ಯಾಚಾರಿ ಶಿವಶರಣರ ಸೇವಕನಂತೆ ನಡೆದುಕೊಳ್ಳುವುದು

ಭೈತ್ರ ಹರಿಗೋಲು, ತೆಪ್ಪ

ಮಂಡೂಕ ಕಪ್ಪೆ

ಮಗಳು ಕ್ರಿಯಾಶಕ್ತಿ

ಮಚ್ಚು ಮೆಚ್ಚುಗೆ, ಮೋಹ

ಮಡ ಹಿಮ್ಮಡಿ

ಮಡದಿ ಚಿತ್‌ಶಕ್ತಿ

ಮಣೆಘಟ್ಟಿನ?

ಮದನ ಪಿತನ ಅಕ್ಷಿಯಾದೆ

ಉಂಗುಷ್ಠದಲ್ಲಿ ?

ಮದವಣಿಗ ಮದುವೆ ಗಂಡು; ಮಹಾಲಿಂಗ; ಲಿಂಗಭಾವ

ಮದವಳಿಗೆ ಮದುವೆ ಹೆಣ್ಣು; ಶರಣಭಾವ

ಮದಾಳಿ ರಸವನ್ನು ಹೀರಿ ಮತ್ತವಾದ ದುಂಬಿ

ಮನಕತ ಮನಸ್ಸಿನ ದುಃಖ

ಮನದ ತಿರುಳು ಸಂಕಲ್ಪ ವಿಕಲ್ಪಗಳಿರುವ ಸಂಶಯ ಸ್ಥಾನ

ಮನ ಪವನ ಬಿಂದು ಕಳೆ ನಾದ ಬಿಂದು (?)

ಮನದಳವಿಭಾಡ ಮನಸ್ಸು ಎಂಬ ಸೈನ್ಯವನ್ನು ನಾಶಮಾಡುವವ

ಮನವಿಚ್ಛಂದವಾಗದೊಂದೆಯಂದದಲಿಪ್ಪಂತಪ್ಪಾ ಮನವು ಇಚ್ಛಂದವಾಗದೆ ಒಂದೇ ಅಂದದಲ್ಲಿರುವಂತೆ ಆಗುವ

ಮನಸಿಜ ಮನ್ಮಥ

ಮರಹು ಮರೆವು

ಮರೀಚಿ ಬಿಸಿಲ್ಗುದುರೆ

ಮರುಜವಣಿ ಮರಳಿ ಪ್ರಾಣವನ್ನು ತರುವ ಸಂಜೀವಿನಿ

ಮರುಳುದಲೆಯಲ್ಲಿ ಹಿಂದಿರುಗುವ ದಾರಿಯಲ್ಲಿ

ಮರೆಯಲಹುದು ಮರೆಯಲು ಸಾಧ್ಯ, ಮರೆಯಲ್ಲಿ ಆಗುತ್ತವೆ

ಮರ್ಕಟ ಕೋತಿ

ಮಸೆದ ಕೂರಲಗು ಮಸೆದ ಚೂಪಾದ ಕತ್ತಿ

ಮಸೆದಲಗು ಮಸೆದ ಕತ್ತಿ

ಮಹಾಂತ ಪರಂಜ್ಯೋತಿ ಸ್ವರೂಪ

ಮಹಾರ್ಣವ ದೊಡ್ಡ ಸಮುದ್ರ

ಮಾಟ ಕೂಟ ಮಾತು ಕೃತಿಗಳ ಅನ್ಯೋನ್ಯ ಸಂಬಂಧ, ಭಕ್ತಿ

ಮಾಟ ಮಾಡುವ ಕ್ರಿಯೆ, ಕಾರ್ಯ

ಮೂರನೆಯ ಭಿತ್ತಿ ಸೂಕ್ಷ್ಮತನು

ಮೂರನೆಯ ಭಿತ್ತಿಯ ಚಿತ್ರ ತೃಪ್ತಿ ಲಿಂಗ

ಮೂರು ಬಗೆಯ ಜ್ಞಾನಗಳು ೧) ಉನ್ಮನಿ, ಶಾಂಭವ, ಸುಜ್ಞಾನ ೨)ಶ್ವಾನ, ಗಜ, ಕುಕ್ಕುಟ ಜ್ಞಾನ ೩) ಮೂರು ಲಿಂಗಗಳು ಇಷ್ಟ, ಪ್ರಾಣ ಮತ್ತು ಭಾವಲಿಂಗಗಳು

ಮಾಣದು ಬಿಡದು

ಮಾಣಿಸಿ ತಪ್ಪಿಸಿ

ಮಾತಿಗೆ ಮೊದಲ ಕಂಡಾತ ಮಾತಿನ ಮೂಲವಾದ ಮೌನ, ನಿಶ್ಯಬ್ದವನ್ನು ಕಂಡಾತ

ಮಾನ ಸೇರು ಇತ್ಯಾದಿಗಳಂತೆ ಅಳತೆಯ ಪಾತ್ರೆ

ಮಾನಿಸಗಳ್ಳೆ ಮನುಷ್ಯ ವಂಚಕಳು

ಮಾಬನೆ ಬಿಡುವನೆ

ಮಾಯಾಮಂಜರ ಮಾಯೆ ಎಂಬ ಬೆಕ್ಕು

ಮಾರಂಕ ಇದಿರಾಳಿ

ಮಾರಡೆ ಹಂಗು, ಆಧಾರ

ಮಾರ್ಗ ಕ್ರಿಯೆ ಹೊರಗಿನ ಆಚರಣೆಗಳು ಭಕ್ತ, ಮಾಹೇಶ್ವರ ಮತ್ತು ಪ್ರಸಾದಿ ಸ್ಥಲಗಳ ಆಚರಣೆಗಳು

ಮಾರ್ಜಾಲ ಬೆಕ್ಕು

ಮಾಡ ಹೆಣವನ್ನು ಕುಳಿತ ಸ್ಥಿತಿಯಲ್ಲಿ ಒಯ್ಯುವ ಸಿದಿಗೆ, ಚಟ್ಟ

ಮಾದು ಪಕ್ವವಾಗಿ, ಮಾಗಿ; ಕಾಂತಿಗುಂದಿ, ಮಂಕಾಗಿ; ತಪ್ಪಿಹೋಗಿ, ಕಳೆದುಕೊಂಡು; ನಿಲ್ಲಿಸಿ, ಬಿಟ್ಟು

ಮಾವ ಪುರುಷ

ಮಾಳ ಉಪ್ಪು ತಯಾರಿಸುವ ಮಡಿ; ಗಂಡುಬೆಕ್ಕು; ಬಯಲು

ಮಿಟ್ಟೆ ಮಣ್ಣಿನ ಹೆಂಟೆ

ಮಿಸುನಿ ಅಪರಂಜಿ, ಶುದ್ಧ ಚಿನ್ನ

ಮೀಂಬುಲಿಗನ ಹಕ್ಕಿ ಮೀನನ್ನು ಕೊಂದು ತಿನ್ನುವ ಹಕ್ಕಿ, ಕೊಕ್ಕರೆ

ಮೀರಿದ ಕ್ರಿಯೆ ಅಂತರಂಗದ ಕ್ರಿಯೆ ಪ್ರಾಣಲಿಂಗಿ, ಶರಣ ಮತ್ತು ಐಕ್ಯಸ್ಥಲಗಳ ಆಚರಣೆಗಳು

ಮುಂಚು ಮೀರು, ಅತಿಕ್ರಮಿಸು

ಮುಂಡಿಗೆ ಒಗಟು, ಸಮಸ್ಯೆ

ಮುಕುತಿ ಮುಕ್ತಿ

ಮಾಣಿಸಿ ತಪ್ಪಿಸಿ

ಮಾತಿಗೆ ಮೊದಲ ಕಂಡಾತ ಮಾತಿನ ಮೂಲವಾದ ಮೌನ, ನಿಶ್ಯಬ್ದವನ್ನು ಕಂಡಾತ

ಮಾನ ಸೇರು ಇತ್ಯಾದಿಗಳಂತೆ ಅಳತೆಯ ಪಾತ್ರೆ

ಮಾನಿಸಗಳ್ಳೆ ಮನುಷ್ಯ ವಂಚಕಳು

ಮಾಬನೆ ಬಿಡುವನೆ

ಮಾಯಾಮಂಜರ ಮಾಯೆ ಎಂಬ ಬೆಕ್ಕು

ಮಾರಂಕ ಇದಿರಾಳಿ

ಮಾರಡೆ ಹಂಗು, ಆಧಾರ

ಮಾರ್ಗ ಕ್ರಿಯೆ ಹೊರಗಿನ ಆಚರಣೆಗಳು ಭಕ್ತ, ಮಾಹೇಶ್ವರ ಮತ್ತು ಪ್ರಸಾದಿ ಸ್ಥಲಗಳ ಆಚರಣೆಗಳು

ಮಾರ್ಜಾಲ ಬೆಕ್ಕು

ಮಾಡ ಹೆಣವನ್ನು ಕುಳಿತ ಸ್ಥಿತಿಯಲ್ಲಿ ಒಯ್ಯುವ ಸಿದಿಗೆ, ಚಟ್ಟ

ಮಾದು ಪಕ್ವವಾಗಿ, ಮಾಗಿ; ಕಾಂತಿಗುಂದಿ, ಮಂಕಾಗಿ; ತಪ್ಪಿಹೋಗಿ, ಕಳೆದುಕೊಂಡು; ನಿಲ್ಲಿಸಿ, ಬಿಟ್ಟು

ಮಾವ ಪುರುಷ

ಮಾಳ ಉಪ್ಪು ತಯಾರಿಸುವ ಮಡಿ; ಗಂಡುಬೆಕ್ಕು; ಬಯಲು

ಮಿಟ್ಟೆ ಮಣ್ಣಿನ ಹೆಂಟೆ

ಮಿಸುನಿ ಅಪರಂಜಿ, ಶುದ್ಧ ಚಿನ್ನ

ಮೀಂಬುಲಿಗನ ಹಕ್ಕಿ ಮೀನನ್ನು ಕೊಂದು ತಿನ್ನುವ ಹಕ್ಕಿ, ಕೊಕ್ಕರೆ

ಮೀರಿದ ಕ್ರಿಯೆ ಅಂತರಂಗದ ಕ್ರಿಯೆ ಪ್ರಾಣಲಿಂಗಿ, ಶರಣ ಮತ್ತು ಐಕ್ಯಸ್ಥಲಗಳ ಆಚರಣೆಗಳು

ಮುಂಚು ಮೀರು, ಅತಿಕ್ರಮಿಸು

ಮುಂಡಿಗೆ ಒಗಟು, ಸಮಸ್ಯೆ

ಮುಕುತಿ ಮುಕ್ತಿ

ಮುಖಗುರುಹು ಮುಖದ ಗುರುತು

ಮುಚ್ಚಿಗ ಮೋಚಿ

ಮುಡಿ ಸ್ಪರ್ಶ, ಅಂತ್ಯ, ನಾಶ

ಮುಡಿವಾಳ ಲಾವಂಚದ ಜಾತಿಯ ಸುಗಂಧ ಸಸ್ಯ

ಮುಯ್ಯಾನು ತೋಳು ನೀಡು; ಬೀಗು, ಹೆಮ್ಮೆಪಡು; ಎದುರಾಗು; ಸಲುಗೆತೋರು

ಮುರುವು ಕಲಗಚ್ಚು

ಮೂಕೊರತಿ ಮೂಗು ಕತ್ತರಿಸಿಹೋದವಳು

ಮೂಕೊರೆಗೆ ಮೂಗು ಕತ್ತಿರಿಸಿಕೊಂಡವನು

ಮೂರು ೧) ಕಾಯತ್ರಯ ಸ್ಥೂಲ, ಸೂಕ್ಷ್ಮ, ಕಾರಣ ಶರೀರಗಳು ೨) ಕೋಶತ್ರಯ ಅನ್ನಮಯ ಸ್ಥೂಲತನು, ಪ್ರಾಣಮಯ ಮನೋಮಯ ವಿಜ್ಞಾನಮಯ ಸೂಕ್ಷ್ಮತನು ಮತ್ತು ಆನಂದಮಯ ಕಾರಣ ತನು ೩) ಮೂರು ಬಗೆಯ ಗುರು ದೀಕ್ಷಾ, ಶಿಕ್ಷಾ ಮತ್ತು ಮೋಕ್ಷಗುರು

ಮೂಲ ಬೇರು

ಮೂಷಕ ಇಲಿ

ಮೃಡ ಶಿವ

ಮೃತ್ತಿಕೆ ಮಣ್ಣು

ಮೇಘವರ್ಷ ಲಿಂಗಾನಂದ ಆತಂಕ

ಮೇಟಿ ತೆನೆ ಬಡಿಯುವ ಸ್ಥಳದ ನಡುವೆ ಇರುವ ಕಂಬ

ಮೇದಿನಿ ಭೂಮಿ

ಮೇರಳ ಮೇಲಿನ

ಮೇಲುದಾಯ ಮೇಲುಡುಪು, ಉತ್ತರೀಯ

ಮೇಹನಿಕ್ಕಿ ಮೇವನ್ನು ಇಕ್ಕಿ

ಮೈಗಾಹು ಮೈಕಾವಲು

ಮೈದುನ ಗಂಡನ ಸೋದರ

ಮೈಸೋಂಬತನ ಸೋಮಾರಿತನ, ಆಲಸಿಕೆ

ಮೊರಹು ಮೊರೆತ

ಮೊಳಡಂಗೆ?

ಮೊಳಪಾದ ಮೊಳಕಾಲು

ಮೋನ ಮೌನ

ಮೋಳಿಗೆ ಕಟ್ಟಿಗೆಯ ಹೊರೆ

ಯುಕುತಿ ಯುಕ್ತಿ