ರಕ್ಕಸಿ ಮಾಯೆ

ರಜ ಧೂಳು

ರಸವರತಿತ್ತು ರಸ ಬತ್ತಿತ್ತು

ರಾಯಕಂಪಣ ರಾಜನ ಮನೆಗೆ ಹೇರುವ ಹುಲ್ಲಿನ ಹೊರೆ

ರಾವಳ ರಾವಣ

ರಾವುತಿಕೆ ಕುದುರೆಯ ಸವಾರಿ

ರಾಶಿವಾಳ ಜೀವರಾಶಿಯನ್ನು ಕಾಪಾಡುವಾತ

ರಿತು ಋತು

ರೂಹಿಲ್ಲದ ಚೋಹ ರೂಪವಿಲ್ಲದ ವೇಷ, ಪಾತ್ರ

ಲಂದಣಗಿತ್ತಿ ಅಡುಗೆ ಮಾಡಿ ಬದುಕು ಸಾಗಿಸುವಾಕೆ; ವೇಶ್ಯೆ (?)

ಲದ್ದೆ ಹೊರೆ; ತಲೆಯ ಮೇಲೆ ಹೊರಬಲ್ಲ ಹುಲ್ಲಿನ ಹೊರೆ

ಲಾಕುಳ ಸನ್ಯಾಸಿಯ ಕೈಯ ದಂಡ; ಶೈವದ ಒಂದು ಪ್ರಭೇದ

ಲಾಗ ಕೌಶಲ್ಯ

ಲಾಗು ಲಾಘವ, ಕೌಶಲ

ಲಾಳಿ ಮಗ್ಗದಲ್ಲಿ ಹೊಕ್ಕಿನ ದಾರವನ್ನು ಸೇರಿಸುವ ಸಾಧನ

ಲಿಂಗ ಇಡೀ ಸೃಷ್ಟಿ ಚೈತನ್ಯ; ಶಿವನ ಸಂಕೇತವಾದ ಲಿಂಗ

ಲಿಂಗಾಂಗ ಸಾಮರಸ್ಯ ದೈವ ಮತ್ತು ಮನುಷ್ಯವ್ಯಕ್ತಿಗಳ ಸಾಮರಸ್ಯ ಅಂಗ ಗುಣಗಳನ್ನು ಬಿಟ್ಟು ಲಿಂಗಗುಣಗಳನ್ನು ಹೊಂದಿದವರಾಗುವುದು

ಲೀಢ ಲೇಪ

ಲೀಯ ಲೀನ, ಕರಗು

ಲೆಂಕ ಅರಸನಿಗಾಗಿ ಜೀವಕೊಡುವ ಪಣತೊಟ್ಟ ಸೇವಕ

ಲೆಪ್ಪ ಅರಗು

ಲೋಗರು ಜನರು, ಸಾಮಾನ್ಯರು

ಲೋಯಿಸರ ನಾಗದಾಳಿ ಜಾತಿಗೆ ಸೇರಿದ ಸಸ್ಯ

ವಚನಾನುಭವೋ ವಚೋ ನ ಮಾತಿನ ಅನುಭವ ಮಾತಲ್ಲ, ವಚನದ ಅನುಭವ ಹೇಳಲಾಗದು

ವಂಕ ದಾರಿ; ಪಕ್ಕ; ಅಗಸೆ, ಹೆಬ್ಬಾಗಿಲು

ವರ್ಣಕ ಕಾವ್ಯದ ಒಂದು ಪ್ರಭೇದ; ಷಟ್ಪದಿ ಮೊದಲಾದ ಹಾಡುಗಬ್ಬಗಳು

ವರ್ತನ ವರ್ತನೆ, ಅಭ್ಯಾಸ

ವರ್ಮ ರಹಸ್ಯ

ವಸ್ತು ದೇಹ, ಪರಮಾತ್ಮ

ವಸ್ತುಕ ಮಾರ್ಗ ಕಾವ್ಯದ ಒಂದು ಪ್ರಭೇದ; ಚಂಪೂ ಕಾವ್ಯ

ವಾಕ್ಕು ಮಾತು

ವಾಙ್ಮನಾತೀತ ಮಾತು ಮನಸ್ಸುಗಳಿಗೆ ಅತೀತ

ವಾಣಿ ನಾಲ್ಕು ಬಗೆಯ ವಾಣಿಗಳು, ಪರಾ, ಪಶ್ಯಂತೀ, ಮಧ್ಯಮಾ, ವಾಕ್‌, ವೈಖರೀ

ವಾಯ ಮೋಸ, ಕಪಟ, ನೆಪ, ವ್ಯರ್ಥ

ವಾರಾಸಿ ಸಮುದ್ರ

ವಾರಿ ನೀರು

ವಾರಿಕಲ್ಲು ಆನೆಕಲ್ಲು, ನೀರ್ಗಲ್ಲು

ವಾರಿಧಿ ಸಮುದ್ರ

ವಿಗಡ ಸಾಹಸ, ಧೈರ್ಯ

ವಿಡಂಗ ಔಷಧೀ ಸಸ್ಯ

ವಿರಾಟ್ಟುರುಷ ಪುರುಷಾಕೃತಿಯಲ್ಲಿರುವ ಇಡೀ ಸೃಷ್ಟಿ

ವಿರಿಂಚಿ ಬ್ರಹ್ಮ

ವಿಶ್ವಗೋಧ ವಿಶ್ವವೆಂಬ ಗೋ ಸಮೂಹವನ್ನು ಕಾಪಾಡುವಾತ

ವಿಷಯ ದೇಹದ ಸುಖ, ಕಾಮನೆ

ವಿಸ್ಮೃತಿ ಮರೆವು

ವಿಹಂಗ ಹಕ್ಕಿ, ಹದ್ದು

ವೆಗ್ಗಳ ಹಿರಿಮೆ, ಶ್ರೇಷ್ಠತೆ, ಶ್ರೇಷ್ಠ ವ್ಯಕ್ತಿ

ವೇಧಿಸು ಭೇದಿಸು

ವೇಶಿ ವೇಶ್ಯೆ, ವೇಷಗಾರ

ವೈಶಿಕ ಕಪಟ ಕೃತ್ಯ, ಮೋಸ

ವ್ಯಾಕುಳ ಚಿಂತೆ

ಶಬುದ ಶಬ್ದ

ಶಬ್ದ ಸಾರಾಯ ಶರಣರ ಅನುಭವದ ತಿರುಳು

ಶರಣಸತಿ ಲಿಂಗಪತಿ ಶರಣನು ಸತಿ, ಲಿಂಗವು ಪತಿ ಎಂಬ ಭಾವ, ಲಿಂಗಾಂಗ ಸಾಮರಸ್ಯ

ಶರಧಿ ಸಮುದ್ರ

ಶಸ್ತ್ರದ ಫಲ?

ಶಾಲ್ಯನ್ನ ಉತ್ತಮವಾದ ಬತ್ತದಿಂದ ಮಾಡಿದ ಅನ್ನ

ಶಿಖಿ ಜುಟ್ಟು, ಜ್ವಾಲೆ

ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದದ ಮೂರು ಬಗೆಗಳು, ಗುರು, ಲಿಂಗ, ಜಂಗಮ ಪ್ರಸಾದಗಳು

ಶುನಿ ನಾಯಿ

ಶ್ರವ ಕಠಿಣವಾದ ಅಭ್ಯಾಸ, ಶ್ರಮ, ವ್ಯಾಯಾಮ

ಶ್ರುತ ದೃಷ್ಟ ಅನುಮಾನ ಕೇಳಿದ್ದು, ಕಂಡದ್ದು, ಊಹಿಸಿದ್ದು, ತಿಳಿವಳಿಕೆಯ ಮೂರು ದಾರಿಗಳು

ಶ್ವಪಚ ನಾಯಿಯನ್ನು ತಿನ್ನುವಾತ

ಷಟ್ಸ್ಥಲಗಳು ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ

ಷಡುವರ್ಣ ಶ್ವೇತ, ಪೀತ, ಹರಿತ, ಕಪೋತ, ಮಾಂಜಿಷ್ಟ, ಗೌರ

ಷೋಡಶೋಪಚಾರ ಅರ್ಘ್ಯ, ಪಾದ್ಯ, ಆಚಮನ, ಪತ್ರಪುಷ್ಟ, ಗಂಧ, ಅಕ್ಷತೆ, ರುದ್ರಾಕ್ಷಮಾಲಾ, ಛತ್ರ, ಚಾಮರ, ವ್ಯಜನ, ಗೀತ, ವಾದ್ಯ, ನರ್ತನ, ಪ್ರದಕ್ಷಿಣ, ನಮಸ್ಕಾರ ಸ್ತೋತ್ರ

ಸಂಕುಳ ಸಮೂಹ

ಸಂಗಿಗ ಸಂಗವನ್ನು ಹೊಂದಿರುವವನು

ಸಂಚ ಸಮೂಹ, ರಹಸ್ಯ, ಸಂಗ್ರಹ

ಸಂಚದ ತಲೆ ಸುಜ್ಞಾನ

ಸಂಚದ ನೋಟ ಮೂಲ ಜ್ಞಾನದೃಷ್ಟಿ

ಸಂಚಲ ಚಪಲತೆ; ಚಲನೆ

ಸಂಚಿತ ಪ್ರಾರಬ್ಧ ಆಗಾಮಿ ಕರ್ಮದ ಮೂರು ಬಗೆಗಳು, ಹಿಂದಿನಿಂದ ಬಂದದ್ದು, ವಿಧಿಯ ಕಾರಣದಿಂದ ಒದಗಿದ್ದು, ತನ್ನ ಕ್ರಿಯೆಗಳಿಂದ ಉಂಟಾದದ್ದು

ಸಂಚುವ ರಹಸ್ಯವ

ಸಂತ-ಶಾಂತ

ಸಂತವಿಡು ಸಂತೋಷಪಡಿಸು

ಸಂಪಲಿ ಸಂಬಲಿ, ಕುಂಟಲಗಿತ್ತಿ

ಸಂಪುಟ ಕರಡಿಗೆ

ಸಂಬೋಳಿ ಸಂಬಾಳಿಸಿಕೊಳ್ಳಿ (?) ಅಸ್ಪೃಶ್ಯರು ದಾರಿಯಲ್ಲಿ ತಾವು ಬರುತ್ತಿರುವುದನ್ನು ಸೂಚಿಸಲು ಗಟ್ಟಿಯಾಗಿ ಕೂಗಬೇಕಾಗಿದ್ದ ಎಚ್ಚರಿಕೆ ನುಡಿ

ಸಂಸ್ಕೃತಿ ನೆನಪು

ಸಿಂಗಿ ಘೋರವಾದ ವಿಷ

ಸಕಟಿಂಗೆ ಶಕಟಕ್ಕೆ, ಬಂಡಿಗೆ

ಸತಿ ಕ್ರಿಯಾಶಕ್ತಿ

ಸತುವಿಲ್ಲದೆ ಸತ್ವವಿಲ್ಲದೆ, ಶಕ್ತಿಯಿಲ್ಲದೆ

ಸತ್ತಿಗೆ ಛತ್ರಿ

ಸನಕ ಬ್ರಹ್ಮನ ಒಬ್ಬ ಮಗ

ಸನ್ನಿಹಿತ = ಸನ್ನಿಹಿತ, ಸಮೀಪ, ಕಾಯಕ್ಕಿಂತ ಪ್ರಾಣವೂ ಪ್ರಾಣಕ್ಕಿಂತ ಭಾವವೂ ಸೂಕ್ಷ್ಯತರ ಈ ಭಾವವು ನಿಃಕಲ ಲಿಂಗವಾದರೆ ಅದೇ ಸನ್ನಹಿತ

ಸಪ್ತಧಾತು ರಸ, ರುಧಿರ, ಮಾಂಸ, ಮಜ್ಜೆ, ಮೇಧಸ್ಸು, ಅಸ್ಥಿ, ಶುಕ್ಲ

ಸಬ ಶವ

ಸಮಯ ಧರ್ಮ

ಸಯ ವಶ, ಅಧೀನ, ಯೋಗ್ಯ ಅರ್ಹ, ಐಕ್ಯ, ಲೀನ

ಸಯದಾನ ಸಯಿದಾನ ಪ್ರಸಾದ

ಸರ ಕದನಾಭ್ಯಾಸ; ಮಾಲೆ; ಸ್ವರ; ಧ್ವನಿ; ಸಾಲು; ಉಸಿರು;

ಸರಗೈ ಸ್ವರವನ್ನು ಹಾಡು

ಸರವರ ಸರೋವರ

ಸರವಿ ಹುಲ್ಲಿನ ಹಗ್ಗ

ಸರಿ ಬೆಸುಗೆ?

ಸರಿಗೆ ನೂಲು, ಎಳೆ, ದಾರ

ಸರಿಸ ಕಟ್ಟುಪಾಡು, ನಿಯಮ; ನೇರ, ಸರಿಯಾದದ್ದು

ಸರಿ ಹರಿದ ತುಂಡಾದ

ಸಲಗೆ ಅಳತೆಯ ಪಾತ್ರೆ

ಸಲಿಲ ನೀರು

ಸವಣ ಶ್ರಮಣ, ಜೈನ ಯತಿ

ಸಸಿನ ನೇರ, ಒಪ್ಪಿಗೆ

ಸಾಜ ಸಹಜ

ಸಾಮೀಪ್ಯ, ಸಾಯುಜ್ಯ, ಸಾರೂಪ್ಯ,

ಸಾಲೋಕ್ಯ ಮೋಕ್ಷದ ನಾಲ್ಕು ವಿಧಗಳು

ಸಾರಾಯ ತಿರುಳು; ಸಾರಾಂಶ; ನಿಜತತ್ವ

ಸಾವನ್ನಕ್ಕರ ಸಾಯುವವರೆಗೆ

ಸಿಕ್ಕು ಸಿಗು, ತೊಡಕು?

ಸಿಡಿಹು ?

ಸಿದಿಕೆ ಚಟ್ಟ

ಸಿನೆ ಶೂನ್ಯ, ಪೂರ್ಣ

ಸೀಮೆ ಮಿತಿ

ಸುಖದಡಗಿಂಗೆ ಸುಖ ಮರೆಯಾದುದಕ್ಕೆ

ಸುಗಡಿ ವಿಲಾಸಿನಿ, ವೇಶ್ಯೆ

ಸುಯಿದಾನ ಲಕ್ಷ್ಯ, ಎಚ್ಚರ

ಸುರಾಳ ಸಗುಣ

ಸುಷುಪ್ತಿ ಗಾಢನಿದ್ರೆ

ಸೂಡು ಧರಿಸು; ತೊಡು; ಸುಡು; ಕಂತೆ

ಸೂತಕ ಮೈಲಿಗೆ, ಜಾತಿ, ಜನನ, ಪ್ರೇತ,     ರಜಸ್‌, ಉಚ್ಛಿಷ್ಟ ಇವು ಭೌತಿಕವಾದ ಸೂತಕಗಳು, ಕುಲ, ಛಲ, ತನು, ಮನ, ನೆನಹು, ಭಾವ ಇವು ಅಂತರಂಗಕ್ಕೆ        ಸಂಬಂಧಿಸಿದ ಸೂತಕಗಳು

ಸೂರ್ಯ ಸೂರ್ಯ ಮೂಗಿನ ಬಲಹೊರಳೆಗೆ ಸಂಬಂಧಿಸಿದ ಪಿಂಗಳ      ನಾಡಿ, ಸೂರ್ಯನಾಡಿ

ಸೆಜ್ಜೆ ಕರಡಿಗೆ

ಸೆಲದಿ ಜೇಡರ ಹುಳು

ಸೈವೆರಗಾಗು ಅತಿಯಾಗಿ ಅಚ್ಚರಿಪಡು

ಸೊಡರು ದೀಪ, ದೀಪದ ಬತ್ತಿ

ಸೊಣಗ ನಾಯಿ

ಸೊಮ್ಮು ಐಶ್ವರ್ಯ

ಸೋರೆ ಏಕತಾರಿಯ ಬುರುಡೆ

ಸ್ತೌತ್ಯ ಹೊಗಳಿಕೆ

ಸ್ಥಳ ಐಕ್ಯ ಮತ್ತು ವೈವಿಧ್ಯಗಳನ್ನು ವಿವರಿಸುವ ಪರಿಭಾಷೆ, ಇರುವುದು ಒಂದೇ ಸ್ಥಲ. ತನ್ನ ಶಕ್ತಿಯ ಪ್ರಭೆಯಿಂದ ಅಂಗ ಮತ್ತು ಲಿಂಗಸ್ಥಲವೆಂದು ಎರಡಾಯಿತು; ಅಂಗಸ್ಥಲವು ತ್ಯಾಗಾಂಗ, ಭೋಗಾಂಗ ಮತ್ತು ಯೋಗಾಂಗವೆಂದು; ಲಿಂಗಸ್ಥಲವು ಇಷ್ಟ, ಭಾವ ಮತ್ತು ಪ್ರಾಣಲಿಂಗವೆಂದು; ತ್ಯಾಗಾಂಗದಲ್ಲಿ ಭಕ್ತ, ಮಾಹೇಶ್ವರವೆಂಬ,  ಭೋಗಾಂಗದಲ್ಲಿ ಪ್ರಸಾದಿ ಮತ್ತು ಪ್ರಾಣಲಿಂಗಿಯೆಂಬ, ಯೋಗಾಂಗದಲ್ಲಿ ಶರಣ ಮತ್ತು ಐಕ್ಯವೆಂಬ; ಇಷ್ಟಲಿಂಗವು ಆಚಾರ ಮತ್ತು ಗುರುಲಿಂಗವೆಂಬ, ಪ್ರಾಣಲಿಂಗವು ಶಿವ ಮತ್ತು ಜಂಗಮಲಿಂಗವೆಂಬ, ಭಾವಲಿಂಗವು ಪ್ರಸಾದ ಮತ್ತು ಮಹಾಲಿಂಗವೆಂಬ ವಿಭಾಗಗಳನ್ನು ವಿವರಿಸಲಾಗಿದೆ.

ಸ್ವಯ ತನ್ನದು; ಜಂಗಮಲಿಂಗದ ಮೂರು ವಿಧಗಳಲ್ಲಿ ಒಂದು ಉಳಿದೆರಡು ಚರ ಮತ್ತು ಪರ. ಸ್ವಯ ನಿತ್ಯ, ಶಾಶ್ವತ; ತಾದಾತ್ಮ್ಯ; ಸ್ವಯಂಪೂರ್ಣ; ತನ್ನತನ, ಸ್ವಂತಿಕೆ

ಸ್ವಯವಳಿದ ತಾನು ಎಂಬುದಿಲ್ಲದ

ಸ್ವಾಯತ ತನ್ನದಾದದ್ದು; ಪ್ರಾಣಲಿಂಗ ಮತ್ತು ಅದರ ಅನುಭವ

ಸ್ನೇಹ ಗೆಳೆತನ; ಜಿಡ್ಡು, ತೇವ

ಹಂಗನೂಲು ಹಸಿಯ ನೂಲು, ಜನಿವಾರ

ಹಂಚುಹರಿ ಪಾಲಾಗಿ, ಭಾಗವಾಗಿ ಹೋಗು

ಹಂಜರ ಪಂಜರ

ಹಂದೆ ಹೇಡಿ

ಹಂಸೆ ಹಂಸ

ಹಕ್ಕೆ ನೆಲೆ, ಆಶ್ರಯ, ಹಕ್ಕಿ

ಹಗರಣ ನಾಟಕ, ಗೊಂದಲ

ಹಗಹ ಧಾನ್ಯವನ್ನು ತುಂಬಿಡುವ ಹಗೇವು

ಹಗೆಯ ಹಗೇವು

ಹಡೆದಲ್ಲಿ ಪಡೆದಲ್ಲಿ

ಹಣವಡ್ಡ ಏಳು ಆಣೆ

ಹತ್ತೆ ಸಮೀಪ

ಹದಿರು ಚಮತ್ಕಾರ, ಚಮತ್ಕಾರದ ಮಾತು

ಹದುಳ ಕ್ಷೇಮ

ಹದುಳಿಗ ಸುಖಿ, ಸಮಾಧಾನಿ

ಹನ್ನಿಬರು ಹನ್ನೆರಡು ಜನ

ಹಪ್ಪು ಮಾಂಸದ ಚೂರು, ಬಾಡಿನ ತುಂಡು

ಹಮ್ಮದಂಬೋದರು ಅಹಂಕಾರಪಟ್ಟರು,      ಅಹಂಕಾರಿಗಳಾದರು (?)

ಹಯನು ಹಾಲು ನೀಡುವ ಹಸು

ಹರಗುಲ ಹರಿಗೋಲಿನ

ಹರಣ ಪ್ರಾಣ

ಹರದ ವ್ಯಾಪಾರಿ

ಹರವಸ ಪರವಶ

ಹರವಿ ಮಣ್ಣಿನ ಪಾತ್ರೆ, ಮಡಕೆ

ಹರಿಗೆ ಗುರಾಣಿ

ಹರಿನುಡಿ ಸತತವಾದ ಮಾತು

ಹರಿಬ ಕಾರಣ

ಹರಿವಾಣ ತಟ್ಟೆ

ಹರಿಹಂಚು ಚೂರುಚೂರಾಗು, ಛಿದ್ರವಾಗು

ಹರುಗುಲ ಹರಿಗೋಲು, ತೆಪ್ಪ

ಹರುಹು ಸ್ಥಿತಿ, ಸ್ವರೂಪ

ಹರೆ ಚರ್ಮದ ವಾದ್ಯ; ಹರೆಯ; ಹರಿದು       ತುಂಡಾಗು; ಚದುರು, ಬಯಲಾಗು

ಹಲರು ಹಲವರು

ಹಲ್ಲಣ ಕುದುರೆಯ ಜೀನು

ಹವಣು ಅಳತೆ; ರೀತಿ; ಶಕ್ತಿ; ಕಟ್ಟಳೆ; ಸಾಮರ್ಥ್ಯ; ಪ್ರಮಾಣ; ಪ್ರಯತ್ನ; ಒದಗು; ವಿವರಿಸು

ಹವಿ ಹವಿಸ್ಸು

ಹಸರ ಮಾರಾಟದ ಸಾಮಗ್ರಿಗಳು

ಹಸರದವನು ಮಾರಾಟಗಾರ

ಹಸುಬೆ ಚೀಲ

ಹಳಚು ಕೂಡು; ಎದುರಿಸು; ರಭಸದಿಂದ      ತಾಗು; ಕಳಚು

ಹಳವಿಗೆ ಬಾವುಟ

ಹಳು ಕಾಡು, ಅಡವಿ

ಹಾಗ ದುಡ್ಡು, ನಾಣ್ಯವೊಂದರ ನಾಲ್ಕನೆಯ ಒಂದು ಭಾಗ

ಹಾರಿ ಬಯಸಿ

ಹಾವಚೆ ಪಾಚಿ, ಹಲ್ಲಿನ ಪಾಚಿ

ಹಾವನ್ನಕ್ಕ ಹಾಯುವವರೆಗೆ

ಹಾವಸೆ ಪಾಚಿ

ಹಾವಸೆಗಲ್ಲು ಪಾಚಿಕಲ್ಲು

ಹಾವುತಲೊಮ್ಮೆ ಒಮ್ಮೆ ಹಾಯುತ್ತ

ಹಾವುದಕ್ಕೆ ಹಾಯುವುದಕ್ಕೆ ಹಾಹೆ ಕಣ್ಣು ಗುಡ್ಡೆ, ಗೊಂಬೆ

ಹಿಂದಣ ಹುಟ್ಟರತುಹೋಗು ಪೂರ್ವದ ಸ್ಥಿತಿ ಒಣಗಿ ಇಲ್ಲವಾಗು

ಹಿಡಿವಡೆ ಹಿಡಿಯುವುದಾದರೆ, ಹಿಡಿಯುವಲ್ಲಿ; ಬಂಧನವನ್ನು ಹೊಂದು, ಸೆರೆಯಾಗು

ಹಿದಿಕೆ ಹುಲ್ಲಿನ ಬಣವೆ

ಹೀಲಿ (?)

ಹುಗದು ಸರಿಹೋಗದು

ಹುಗಿಲು ರಂಧ್ರ, ಸೀಳು

ಹುಡುಕು ನೀರು ಬಿಸಿ ನೀರು

ಹುದಿ ಮುಳುಗು, ಸೇರು, ಕೂಡು

ಹುದುಗು ಸಮಪಾಲು

ಹುದುವಾಳಿಗೆ ಕೂಡಿ ಬಾಳುವಿಕೆ

ಹುಯ್ಯಲ ಕೂಗು, ಗೋಳು

ಹುಲುಗಿಳಿ ಸಾಮಾನ್ಯ ಗಿಳಿ

ಹುಲುಮೊರಡಿ ಕಿರಿ ಬೆಟ್ಟ, ಗುಡ್ಡ

ಹುಲ್ಲಸರವಿ ಹುಲ್ಲಿನಲ್ಲಿ ಹೊಸೆದ ಹಗ್ಗ

ಹುಲ್ಲೆ ಹೆಣ್ಣು ಜಿಂಕೆ

ಹುಳುವಟ್ಟೆ ಹುಳು ಹಿಡಿದ ದೇಹ

ಹುಳ್ಳಿ ಸಣ್ಣ ಕಟ್ಟಿಗೆ, ಪುರಲೆ

ಹೂಣಿ ಹೂಳಿ, ಬಲವಾಗಿ ನಟ್ಟು, ಶಪಥಮಾಡಿ, ಎದುರಿಸಿ ಹೋರಾಡಿ

ಹೂಳಿಹೆನು ಹೂಳಿದ್ದೇನೆ

ಹೆರೆಸಾರಿ ಪಕ್ಕಕ್ಕೆ ಸರಿದು, ದೂರ ಸರಿದು

ಹೆಕ್ಕಳ ಹಿಗ್ಗು, ಸಂತೋಷ

ಹೆಡಗೈ ಕೈಯ ಹಿಂಭಾಗ

ಹೇಕಣ್ಣು ದೊಡ್ಡಕಣ್ಣು

ಹೇಳಿಗೆ ಬುಟ್ಟಿ, ಹಾವಿನ ಬುಟ್ಟಿ

ಹೊಂದೊಡಿಗೆ ಚಿನ್ನದ ತೊಡಿಗೆ

ಹೊಡವಡು ಸಾಷ್ಟಾಂಗ ನಮಸ್ಕರಿಸು

ಹೊಡೆಗಿಚ್ಚು ದಳ್ಳುರಿ

ಹೊತ್ತು ಹೋಗದ ಮುನ್ನ ಸಮಯ ಮೀರುವ ಮುನ್ನ, ಹೊತ್ತುಕೊಂಡು ಹೋಗುವ ಮುನ್ನ

ಹೊದಕುಳಿ ದುಃಖ, ತಾಪ

ಹೊರಸು ಪಾರಿವಾಳ, ಬೆಳುವ

ಹೊರಹಂಚೆ ಹೊರಗಿನ ವೇಷ; ಬಾಹ್ಯ ತೋರಿಕೆ

ಹೊಲಬು ಆಶ್ರಯ, ರೀತಿ, ಸ್ಪಷ್ಟತೆ, ದಾರಿ

ಹೊಲಬುದಪ್ಪದೆ ದಾರಿ-ರೀತಿ-ಮಾರ್ಗ, ತಪ್ಪದೆ

ಹೊಳಲ ಸುಂಕಿಗ ನಗರದ ಸುಂಕಿಗ

ಹೊಳಲು ಪಟ್ಟಣ

ಹೋಟೆ ಪೊಟರೆ, ಡೊಗರು, ಹೊದರು

ಹೋರು ಹೋರಾಡು

ಹೋಹ ಹೋಗುವ

ಹೋಹವನ ಹೋಗುವವನ

ಹೋಹಾತ ಹೋಗುವಾತ