ಭೌಗೋಳಿಕತೆ

ಬ್ರಿಟಿಷರ ಆಳ್ವಿಕೆಯಲ್ಲಿ ಕೂಡ್ಲಿಗಿ, ಹರಪನಹಳ್ಳಿ ತಾಲ್ಲೂಕುಗಳಲ್ಲಿ ದಟ್ಟ ಅರಣ್ಯ ಗಳಿದ್ದವು. ತೋಳ, ನರಿ, ಚಿರತೆ, ಕರಡಿಗಳು ಅಧಿಕವಾಗಿ ಅರಣ್ಯದಲ್ಲಿ ವಾಸಿಸುತ್ತಿದ್ದವು. ಕೆರೆ, ಬೆಟ್ಟಗುಡ್ಡ, ಅರಣ್ಯ ಸಮೃದ್ಧವಾಗಿದ್ದರೂ, ಸಂಡೂರು ಪರಿಸರ ಮಾತ್ರ ಬಹುದೊಡ್ಡ ಅರಣ್ಯ ಸಂಪತ್ತನ್ನು ಹೊಂದಿತ್ತು. ರಾಮದುರ್ಗದಲ್ಲಿ ಮಿಲಿಟರಿ ವಸತಿ ಹಾಗೂ ಚಿಕ್ಕ ಆಸ್ಪತ್ರೆಯನ್ನು ನಿರ್ಮಿಸಲಾಗಿತ್ತು. ಸಂಡೂರು ತಂಪು ಜಾಸ್ತಿ. ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಮಳೆ ಬೀಳುವುದು ಸಂಡೂರಿನ ರಾಮದುರ್ಗ (೩೯ಇಂಚು) ಪರಿಸರದಲ್ಲಿ. ೧೮೦೪ರಲ್ಲಿ ೧೦೦ಕ್ಕೂ ಹೆಚ್ಚು ಕೆರೆಗಳು ತುಂಬಿದ್ದವು. ೧೮೫೧ರಲ್ಲಿ ಜಿಲ್ಲೆಯಲ್ಲಿ (ಅತಿವೃಷ್ಟಿ) ಸೈಕ್ಲೊನ್ ಬಂದು ನಿರ್ವಸತಿಯಾಗಿದ್ದ ಜನವಲಸೆ ಹೋದರು. ಕೆಲವು ಭಾಗಗಳಲ್ಲಿ ರಸ್ತೆ, ನೀರಾವರಿ ಕೆಲಸಗಳನ್ನು ನಿರ್ವಹಿಸಿದ್ದರು.

ಚರಿತ್ರೆ

ರಾಮಾಯಣ ಸಂಪ್ರದಾಯ ಖ್ಯಾತಿಯ ಕುರುಹುಗಳು, ವಿಜಯನಗರ ಸಾಮ್ರಾಜ್ಯದ ಕುರುಹುಗಳು ಬಳ್ಳಾರಿ ಜಿಲ್ಲೆಯಲ್ಲಿ ಕಂಡುಬಂದಿವೆ. ಪಶ್ಚಿಮ ಚಾಲುಕ್ಯರು ಮತ್ತು ಹೊಯ್ಸಳ ಬಲ್ಲಾಳನ ಬಗ್ಗೆ ಶಾಸನಗಳಿವೆ. ಜಿಲ್ಲೆಯ ಇತಿಹಾಸ ಕ್ರಿ.ಶ. ೧೪ನೇ ಶತಮಾನಕ್ಕೆ ಮುಂಚೆ ಮಸಕಾಗಿದೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಎಂಬ ಹಳ್ಳಿಯ ಬಳಿ ೧೩೩೬ರಲ್ಲಿ ಸ್ಥಾಪನೆ ಆಯಿತು. ಇದನ್ನು ಕಿಂಗ್‌ಡಮ್, ಎಂಪೈರ್, ದ ಸಿಟಿ ಆಫ್ ವಿಕ್ಟರಿ ಎಂದು ಬ್ರಿಟಿಷರು ಕರೆದಿರುವರು. ೧೫೬೫ರ ತಾಳಿಕೋಟೆ ನಂತರ ಇಸ್ಲಾಂ ಪ್ರಭಾವ ಷಾಹಿರಾಜ್ಯಗಳಾಗಿ ವಿಂಗಡಣೆ ಆದ ಪರಿಣಾಮ ದೊಡ್ಡದು. ಪಾಳೆಯಗಾರರ ಸಣ್ಣಪುಟ್ಟ ರಾಜ್ಯಗಳು ಏಳಿಗೆಯಾದವು. ಉತ್ತರದ ಔರಂಗಜೇಬ್‌ನ ನಂತರ ಪೂರ್ಣವಾಗಿ ಮರಾಠರು, ಹೈದರಾಲಿ, ಟಿಪ್ಪು, ನಿಜಾಂ ಪ್ರಾಂತ್ಯಗಳು ಕೆಲವು ಸ್ಥಳೀಯ ಪಾಳೆಯಗಾರರು ಆಡಳಿತದಲ್ಲಿ ದ್ದರು. ಬ್ರಿಟಿಷ್ ದತ್ತಿ ಕಂಪನಿ ಆಡಳಿತಕ್ಕೆ ಬಳ್ಳಾರಿ ಜಿಲ್ಲೆ ಒಳಗಾಗಿತ್ತು. ೧೭೯೨ರಲ್ಲಿ ಟಿಪ್ಪುವಿನ ರಾಜ್ಯ ವಿಭಾಗಗೊಂಡಿತು. ಬಳ್ಳಾರಿಯ ಕೆಲವು ಭಾಗಗಳು ನಿಜಾಮನಿಗೆ ಹೋದವು. ೧೭೯೯ರಲ್ಲಿ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸೋತಾಗ ನಿಜಾಮ ಇನ್ನಷ್ಟು ವಿಶ್ರಾಂತವಾಗಿ ರಾಜ್ಯ ವಿಸ್ತರಿಸಿದ. ೧೮೦೦ರಲ್ಲಿ ಎಲ್ಲವು ಬ್ರಿಟಿಷರ ಅಧೀನಕ್ಕೆ ಹೋದವು. ಮೇಜರ್ (ನಂತರ ಸರ್ ಥಾಮಸ್) ಮನ್ರೊ ಮೊದಲ ಕಲೆಕ್ಟರ್ ಆಗಿ ಕಡಪಾ, ಬಳ್ಳಾರಿ, ಅನಂತಪುರ, ಕರ್ನೂಲುಗಳನ್ನು ಒಟ್ಟುಗೂಡಿಸಿ ಆಡಳಿತ ನಡೆಸಿದ್ದ. ಈತ ಮೊದಲಬಾರಿಗೆ ಎಂಟು ಜನ ಪಾಳೆಯಗಾರರ ಅಧಿಕಾರಗಳನ್ನು ಮೊಟಕುಗೊಳಿಸಿದ. ಅವರಿಗೆ ವಿಶ್ರಾಂತಿ ವೇತನವನ್ನು ಕೊಟ್ಟ. ೧೮೦೮ರಲ್ಲಿ ಕಡಪಾ ಮತ್ತು ಬಳ್ಳಾರಿ ಎಂದು ಎರಡು ಜಿಲ್ಲೆಗಳಾದವು. ೧೮೮೨ರಲ್ಲಿ ಬಳ್ಳಾರಿಯಲ್ಲಿದ್ದ ಅನಂತಪುರ ಪ್ರತ್ಯೇಕ ಜಿಲ್ಲೆಯಾಯಿತು. ೧೯೦೬ರಲ್ಲಿ ಕರ್ನೂಲು ಪ್ರತ್ಯೇಕ ಜಿಲ್ಲೆಯಾಗಿ ಬಳ್ಳಾರಿಯಿಂದ ಬೇರ್ಪಟ್ಟಿತು. ಅಂದು ಬಳ್ಳಾರಿ ಜಿಲ್ಲೆಯಲ್ಲಿ ೧೦ ಪಟ್ಟಣ, ೦೮ ತಾಲ್ಲೂಕು, ೦೭ ಮುನ್ಸಿಪಾಲಿಟಿ ಮತ್ತು ೯೨೯ ಗ್ರಾಮಗಳಿದ್ದವು.

ಜನಸಂಖ್ಯೆ ವಿವರ

೧೮೭೧ – ೯,೧೧,೭೫೫

ಅಂದು ಹಿಂದೂಗಳು ಶೇಕಡ ೮೯ ಮುಸ್ಲಿಮರು ಶೇಕಡ ೧೦ ಇದ್ದರು.

೧೮೮೧ – ೭,೨೬,೨೭೫
೧೮೯೧ – ೮,೮೦,೯೫೦
೧೯೦೧ – ೯,೪೭,೨೧೪

 

ಕ್ರ.ಸಂ.

ತಾಲ್ಲೂಕು

ಪಟ್ಟಣ

ಗ್ರಾಮ

ಜನಸಂಖ್ಯೆ (೧೯೦೧)

ಓದುವ/ ಬರೆಯುವವರು

೧. ಆದೋನಿ ೧೯೧ ೧,೭೮.೭೮೪ ೬೮೮೪
೨. ಆಲೂರು ೧೦೬ ೯೮,೫೬೮ ೩೬೬೬
೩. ಬಳ್ಳಾರಿ ೧೫೬ ೧,೯೩,೪೦೧ ೧೧೮೯೭
೪. ರಾಯದುರ್ಗ ೭೧ ೮೨,೭೮೯ ೨೫೫೫
೫. ಹೊಸಪೇಟೆ ೧೨೧ ೧,೦೧,೯೪೭ ೪೯೩೯
೬. ಹಡಗಲಿ ೮೭ ೯೨,೦೯೪ ೪೧೯೩
೭. ಕೂಡ್ಲಿಗಿ ೧೧೬ ೧,೦೩,೯೮೫ ೪೯೩೭
೮. ಹರಪನಹಳ್ಳಿ ೮೧ ೯೫,೬೪೬ ೩೯೮೧
  ಒಟ್ಟು ೧೦ ೯೨೯ ,೪೭,೨೧೪ ೪೩,೦೫೨

ಬಳ್ಳಾರಿ ಕೇಂದ್ರ ಸ್ಥಳವಾಗಿತ್ತು. ಅದೋನಿ ಉಪವಿಭಾಗ, ಎಂಟು ಒಕ್ಕೂಟ ತಾಲ್ಲೂಕುಗಳಿದ್ದವು. ಹೊಸಪೇಟೆ, ಎಮ್ಮಿಗನೂರು, ರಾಯದುರ್ಗ, ಕಂಪ್ಲಿ, ಹರಪನಹಳ್ಳಿ, ಕೋಸಗಿ, ಕೊಟ್ಟೂರು ಮತ್ತು ಸಿರುಗುಪ್ಪ. ಅಂದು ಬಳ್ಳಾರಿ ಜಿಲ್ಲೆಯಲ್ಲಿ ತೆಲುಗು ಭಾಷಿಕರ ಸಂಖ್ಯೆ ಜಾಸ್ತಿ. ಬೇಡರು ಅಥವಾ ಬೋಯಾ (ಶಿಕಾರಿ-ಪಾಳೆಯಗಾರರು) ಹೈದರಾಲಿ ಸೈನ್ಯದಲ್ಲಿದ್ದರು. ಬೇಡರದು ಪ್ರಬಲವಾದ ಸಮುದಾಯ. ೧೯ನೇ ಶತಮಾನದ ಆರಂಭದಲ್ಲಿ ಇವರ ಸಂಖ್ಯೆ ಜಿಲ್ಲೆಯಲ್ಲಿ ೧,೨೧,೦೦೦ ಇತ್ತು. ನಂತರ ಮಾದಿಗರು (ಚರ್ಮಹದ ಮಾಡುವುದು-ಚಪ್ಪಲಿ ಹೊಲಿಯುವರು) ೭೭,೦೦೦, ಕಾಪು (ಕೃಷಿವರ್ಗ) ೪೮,೦೦೦, ಕುರುಬರು (ಕುರಿ ಕಾಯುವವರು) ೯೭,೦೦೦, ಶಿವ ಮತ್ತು ಲಿಂಗವನ್ನು ಪೂಜಿಸುವ ಲಿಂಗಾಯಿತರು ೯೬,೦೦೦ ಇತ್ತು. ಇವರು ೨/೩ರಷ್ಟು ಜಿಲ್ಲೆ(ಬಳ್ಳಾರಿ) ಯಲ್ಲಿದ್ದರು. ಕುರಿ ಕಾಯುವವರು, ನೇಕಾರರು ಬಹಳಷ್ಟು ಮಂದಿ ಇದ್ದರು. ಕ್ರಿಶ್ಚಿಯನ್ ಮಿಷನ್ ಇಲ್ಲಿದ್ದು, ೫೦೬೬ ಜನ ಕ್ರಿಶ್ಚಿಯನ್ನರಿದ್ದರು. ಇತರ ೩,೭೦೦ ಸ್ಥಳೀಯ ರೋಮನ್ ಕ್ಯಾಥೋಲಿಕರಿದ್ದರು.

ಕ್ರೈಸ್ತ ಮಿಷನರಿಗಳು

ಕ್ರಿ.ಶ. ೧೭೭೫ರಲ್ಲಿ ಫಾದರ್ ಜೊಚಿಮ್ ಡಿಸೋಜಾ ಗೋವಾದಿಂದ  ಬಳ್ಳಾರಿಗೆ ಬಂದರು. ೧೮೨೯ರಲ್ಲಿ ತೀರಿದ. ಸ್ಥಳೀಯರು ಈತನನ್ನು ಅಧಿಕನಾಂದ ಎಂದು ಗೌರವ ಹಾಗೂ ಪೂಜ್ಯಭಾವದಿಂದ ಕರೆದಿದ್ದರು. ೧೮೩೭ರವರೆಗೆ ಬಳ್ಳಾರಿ ಮಿಷನ್ ಗೋವಾ ಪಾದ್ರಿಗಳ ನೇತೃತ್ವದಲ್ಲಿ ನಡೆಯಿತು. ೧೮೩೭ರಲ್ಲಿ ಚಾಪ್ಲಿನ್ ಎಂಬುವನನ್ನು ಸರ್ಕಾರ ರೋಮನ್ ಕ್ಯಾಥೋಲಿಕ್ ಬಳ್ಳಾರಿ ಪಂಗಡಕ್ಕೆ (ವಿಭಾಗ) ಕಳುಹಿಸಿದ್ದರು. ರೋಮನ್ ಕ್ಯಾಥೋಲಿಕ್ ಚರ್ಚ್‌ಗಳನ್ನು ಚಾಪ್ಲಿನ್ ತೆರೆದನು. ಗೋವಾ ವ್ಯಾಪ್ತಿಯಲ್ಲಿ ಹಿಂದಿನಿಂದ ಬಂದ ಉನ್ನತ ಶ್ರೇಣಿ ವ್ಯವಸ್ಥೆಯನ್ನು ರದ್ದುಪಡಿಸಿದರು. ಇದು ೧೮೮೬ರಲ್ಲಿ ೧೩ನೇ ಪೊಪ್‌ಲಿಯೋನ ಆದೇಶದಂತೆ ಆಯಿತು. ರೋಮನ್ ಕ್ಯಾಥೋಲಿಕ್ ಮಿಷನ್‌ಗೆ ಚಾಪ್ಲಿನ್ ಅವರು ೪ ಜನ ಫಾದರ್‌ಗಳನ್ನು ನೇಮಿಸುತ್ತಾನೆ. ಸೈಂಟ್ ಜೊಸೆಫ್ ಲಂಡನ್, ಪ್ರೊಟೆಸ್ಟೆಂಟ್ ಮಿಷನ್ ಜಿಲ್ಲೆಯಲ್ಲಿ ಲಂಡನ್ ಮಿಷನರಿ ಸೊಸೈಟಿ ಸ್ಥಾಪಿಸಿದರು. ೧೮೧೦ರಲ್ಲಿ ಇದು ಸ್ಥಾಪಿಸಿದ್ದು, ೫ ಜನ ಮಿಷನರಿಗಳಿದ್ದರು. ವಿಶೇಷವೆಂದರೆ ಒಬ್ಬ ಮಹಿಳೆಯು ಸಹಾ ಇದ್ದಳು (ಫ್ರಾನ್ಸಿಸ್ ಗ್ಯಾಸೆಟಿಯರ್, ಪು. ೪೩೪).

ಕೃಷಿ

ಬಳ್ಳಾರಿ ಜಿಲ್ಲೆಯಲ್ಲಿ ಕೆಂಪು ಮಣ್ಣು, ಕಪ್ಪು ಮಿಶ್ರಿತ ಮಣ್ಣು ಹೆಚ್ಚಾಗಿತ್ತು. ಬಳ್ಳಾರಿ, ಆಲೂರು, ಆದೋನಿ ಮತ್ತು ರಾಯದುರ್ಗಗಳಲ್ಲಿ ಕೆಂಪುಮಣ್ಣು, ಗ್ರಾನೈಟ್ ಕಲ್ಲುಗಳು, ಮರಳು ಮಣ್ಣು, ಫಲವತ್ತಾದ ಎರೆಮಣ್ಣು ಪಶ್ಚಿಮ ತಾಲ್ಲೂಕುಗಳಲ್ಲಿತ್ತು. ಭೂಮಿಯ ನಾಲ್ಕು ಅಡಿ ಒಳಗೆ ಒಳ್ಳೆಯ ಮಣ್ಣು ಇದೆ ಎಂದು ಬ್ರಿಟಿಷ್ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಒಣಭೂಮಿ

ಇಲ್ಲಿ ನೈಋತ್ಯ ಮಳೆ ಜೂನ್‌ನಲ್ಲಿ ಬಂದರೆ ನವಣೆ, ಹತ್ತಿ ಬೆಳೆಯುತ್ತಿದ್ದರು. ಆಗಸ್ಟ್ -ನವೆಂಬರ್‌ನಲ್ಲಿ ತೆಗೆಯುತ್ತಿದ್ದರು. ನೀರಾವರಿ ಭೂಮಿಯಲ್ಲಿ ಭತ್ತ, ಮೇ-ಜನವರಿ ಮತ್ತು ಕಬ್ಬು ಮಾರ್ಚ್‌ನಲ್ಲಿ ಬೆಳೆಯುತ್ತಿದ್ದರು. ದಖನ್ ಪ್ರಸ್ಥಭೂಮಿಯಲ್ಲಿರುವ ಬಳ್ಳಾರಿ ಬೇರೆ ಬೇರೆ ಕೃಷಿ ವಲಯಗಳಲ್ಲಿ ಪ್ರಗತಿ ಸಾಧಿಸಿತ್ತು. ಮಡಿಕೆ, ಕುಂಟೆ, ಕೂರಿಗೆ, ಕಟ್ಟಿಗೆ-ಕಬ್ಬಿಣದಿಂದ ಮಾಡಿದ ಉಪಕರಣಗಳನ್ನು ಬೇಸಾಯಕ್ಕೆ ಬಳಸುತ್ತಿದ್ದರು.

ಈ ಜಿಲ್ಲೆಯಲ್ಲಿ ಅಂದು ಜಮೀನ್ದಾರಿಗಳಿರಲಿಲ್ಲ. ಶೇಕಡ ೫ರಷ್ಟು ಮಾತ್ರ ಇನಾಂಭೂಮಿ ಇತ್ತು. ಒಟ್ಟು ಭೂಮಿ ೫೭೧೪ ಚದರ ಮೈಲು (೫೬೯೭) ಇತ್ತು. ಗ್ರಾಮಲೆಕ್ಕಿಗರು ಗ್ರಾಮದ ಕಂದಾಯ, ಬೆಳೆ ವಿವರಗಳನ್ನು ನೋಡಿಕೊಳ್ಳುತ್ತಿದ್ದರು. ೧೯೦೩-೦೪ರಲ್ಲಿ ಆಹಾರ ಧಾನ್ಯಗಳಲ್ಲಿ ಜೋಳ, ನವಣೆಯನ್ನು ೧/೩ ಭಾಗ ಬೆಳೆದ ಬಗ್ಗೆ ವರದಿಯಾಗಿದೆ. ಕೂಡ್ಲಿಗಿ, ಹರಪನಹಳ್ಳಿ, ಹಡಗಲಿ ಕಡೆ ಎಣ್ಣೆ ಬೀಜಗಳನ್ನು ಬೆಳೆಯುತ್ತಿದರು. ಹೊಸಪೇಟೆ ಯಲ್ಲಿ ಕಬ್ಬು ಬೆಳೆಯುತ್ತಿದ್ದರು. ಶೇಕಡ ೫ರಷ್ಟು ಕಬ್ಬು ಬೆಳೆ ಇತ್ತು. ೧೮೮೮ರಲ್ಲಿ ಭೂಅಭಿವೃದ್ದಿಗಾಗಿ ಸಾಲ ಕಾಯಿದೆ ಜಾರಿಗೆ ತಂದಾಗ ಅದನ್ನು ಕೊಡಲು ೬ ೧/೨ ಲಕ್ಷ ರೂ. ಸರ್ಕಾರ ವಿನಿಯೋಗಿಸಿತ್ತು.

ಪಶುಪಾಲನೆ

ದನಕರು, ಮೇಕೆ, ಕುರಿ : ತುಂಗಭದ್ರಾ ನದಿ ದಂಡೆಯ ಮೇಲೆ ದನಗಳ ಜಾತ್ರೆ ನಡೆಯುತ್ತಿತ್ತು (ಮೈಲಾರ-ಕುರುವತ್ತಿ). ಉತ್ತಮ ತಳಿಯ ಎಮ್ಮೆಗಳು ಅಂದು ನಿಜಾಮನ ಸಂಸ್ಥಾನದಲ್ಲಿ ದ್ದವು. ಈ ತಳಿ ಬಳ್ಳಾರಿ ಜಿಲ್ಲೆಯಲ್ಲಿ  ಕಂಪ್ಲಿ ಹತ್ತಿರ ಇದ್ದವು. ಹಾಗೆಯೇ ಎರಡು ವಿಧವಾದ ಕುರಿ ತಳಿಗಳು ಇದ್ದವು. ಕಪ್ಪು-ಬಿಳಿ-ಕಂದು ಬಣ್ಣದ ಕುರಿಗಳಿದ್ದವು. ರಾಯದುರ್ಗ, ಕೂಡ್ಲಿಗಿ, ಹರಪನಹಳ್ಳಿಗಳಲ್ಲಿ ಕುರಿ ಎಣ್ಣೆಯಿಂದ ಕಂಬಳಿ ನೆಯ್ಗೆ ಮಾಡುತ್ತಿದ್ದರು. ಮೇಕೆ ಹಾಲು ಬಹುಪಯೋಗಕ್ಕೆ ಬರುತ್ತಿತ್ತು. ಕೃಷಿ ಚಟುವಟಿಕೆಗಳಲ್ಲಿ ಈ ಭಾಗದ ರೈತರು ಪಶುಪಾಲನೆಗೂ ಆದ್ಯತೆ ನೀಡಿದ್ದು ವಾಸ್ತವ ಸಂಗತಿ. ೧೮೭೧ರಲ್ಲಿ ಪಶುಗಳ ಸಾಗಾಣಿಕೆ ಕಾಯಿಗೆ ಬರುತ್ತದೆ.

ನೀರಾವರಿ

೧೯೦೩-೦೪ರಲ್ಲಿ ಸು. ೯೦ ಚದರ ಮೈಲಿ ಪ್ರದೇಶದಲ್ಲಿ ನೀರಾವರಿ ಕೃಷಿ ನಡೆದಿತ್ತು. ಶೇಕಡ ೨ರಷ್ಟು ನೀರಾವರಿ ಬೇಸಾಯ ನಡೆದಿತ್ತು. ಸರ್ಕಾರದ ಕಾಲುವೆ, ಕೆರೆ, ಬಾವಿಗಳು, ತುಂಗಭದ್ರಾ ನದಿಯಿಂದ ಕಾಲುವೆಗಳ ಮೂಲಕ ನೀರು ಹರಿಯುತ್ತಿತ್ತು. ಸು. ೧೦ ದೊಡ್ಡ ಕೆರೆಗಳಿದ್ದವು. ಇವುಗಳನ್ನು ವಿಜಯನಗರದ ಅರಸರು ಕಟ್ಟಿಸಿದ್ದರು. ಆಂಗ್ಲ ಇಂಜಿನಿಯರು ಗಳು ಇವುಗಳ ಜೀರ್ಣೋದ್ಧಾರ ಕಾರ್ಯ ಮಾಡಿಸಿದ್ದಾರೆ. ಕ್ರಿ.ಶ. ೧೫೨೧ರ ಶಾಸನ(೧೪೪೩) ವು ಶ್ರೀ ಕೃಷ್ಣದೇವರಾಯ ವಿಜಯನಗರದಲ್ಲಿ ಆಳ್ವಿಕೆ ಮಾಡುತ್ತಿದ್ದ ಕಾಲ. ಈತ ದೊಡ್ಡ ಕೆರೆಯನ್ನು ಕಟ್ಟಿಸಿರುತ್ತಾನೆ. ಇಂದಿಗೂ ಇರುವ ಬಸವಣ್ಣ, ತುರ್ತಾ, ರಾಯ ಕಾಲುವೆಗಳು ಅಂದಿನ ವಿಜಯನಗರದರಸರ ಕಾಣಿಕೆಗಳಾಗಿವೆ.

೧೯೦೩-೦೪ರಲ್ಲಿ ೧೭,೦೦೦ ಎಕರೆ ನೀರಾವರಿ ಭೂಮಿ ಇತ್ತು. ೧೨,೫೦೦ ಎಕರೆ ನೀರಾವರಿ ಪ್ರದೇಶವು ಹೊಸಪೇಟೆ ತಾಲ್ಲೂಕಿನಲ್ಲಿ, ಹಗರಿ ಮತ್ತು ಚಿನ್ನಹಗರಿ ನದಿ ಪರಿಸರದಲ್ಲಿ ರಾಯದುರ್ಗ ಮತ್ತು ಕೂಡ್ಲಿಗಿ ತಾಲ್ಲೂಕುಗಳಲ್ಲಿ ನೀರಾವರಿ ಆಗುತ್ತಿತ್ತು. ತುಂಗಭದ್ರಾ ಅಣೆಕಟ್ಟಿನಿಂದ ಬಳ್ಳಾರಿ ಜಿಲ್ಲೆಗಷ್ಟೇ ಅಲ್ಲದೆ, ಆಂಧ್ರದ ಕಣೆಕಲ್ಲು ಕೆರೆ, ರಾಯದುರ್ಗ ಕೆರೆಗಳಿಗೆ ಇಲ್ಲಿಂದ ನೀರು ಹೋಗುತ್ತಿತ್ತು. ದರೋಜಿ ಕೆರೆಗೆ ನೀರು, ಹಗರಿ ನದಿಗೆ ೨,೩೦೦ ಎಕರೆ, ದರೋಜಿ ಕೆರೆಯನ್ನು ಸ್ಥಳೀಯ ಪಾಳೆಯಗಾರರು ಕಟ್ಟಿಸಿದರೆಂದು ತಿಳಿಸುತ್ತಾರೆ. ಇದು ೨ ೧/೨ ಮೈಲು ಉದ್ದ, ೬೦ ಅಡಿ (ಅರವತ್ತು) ಎತ್ತರ ಇದೆ. ೧೮೦೦ ಎಕರೆ ಭೂಮಿಗೆ ನೀರು ಇದರಿಂದ ಲಭ್ಯವಾಗುತ್ತದೆ. ಕೂಡ್ಲಿಗಿ ಮತ್ತು ರಾಯದುರ್ಗ ತಾಲ್ಲೂಕುಗಳಲ್ಲಿ ಬಾವಿಯಿಂದ ಏತನೀರಾವರಿ ಕಾರ್ಯಗಳು ನಡೆಯುತ್ತಿದ್ದವು. ೧೯.೦೩. ೧೯೨೦ರಲ್ಲಿ ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಕಾಲುವೆಗಳಲ್ಲಿ ಆಧುನೀಕರಣ-ಜೀರ್ಣೋ ದ್ಧಾರ ಮಾಡಲು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿತ್ತು. ಅದಕ್ಕೆ ವಿರೋಧಗಳು ಹುಟ್ಟಿಕೊಂಡವು.

ಅರಣ್ಯ

ನಲ್ಲಮಲೈ ಅರಣ್ಯದ ಸೆರಗು ಅಲ್ಪಸ್ವಲ್ಪ ಬಳ್ಳಾರಿ ಪ್ರದೇಶ ಅರಣ್ಯದ ಸೆರಗಿಗೆ ಸೇರುತ್ತದೆ. ಕೂಡ್ಲಿಗಿ ತಾಲ್ಲೂಕಿನಲ್ಲಿ ಕಾಯ್ದಿಟ್ಟ ಅರಣ್ಯ ಜಾಸ್ತಿಯಿದೆ. ಸಂಡೂರು ಬೆಟ್ಟಗಳ ಸು.೪೦,೦೦೦ ಎಕರೆಗೆ ಸಂಡೂರು ರಾಜ ರೂ. ೧೦,೦೦೦ ವಾರ್ಷಿಕ ತೆರಿಗೆ ಕೊಡುತ್ತಿದ್ದ. ಉರಿಯಲು ಕಟ್ಟಿಗೆ, ರೈಲುಮಾರ್ಗ, ಇತರ ಕಾರ್ಖಾನೆ, ಉದ್ದಿಮೆಗಳಿಗೆ ಕಟ್ಟಿಗೆಯನ್ನು ಬಳಸುತ್ತಿದ್ದರು. ಬ್ರಿಟಿಷ್ ಸರ್ಕಾರ ಅರಣ್ಯ ಕಾಯಿದೆ ಜಾರಿಗೆ ತಂದು ಕೆಲವು ನೀತಿ-ನಿರ್ಬಂಧಗಳನ್ನು ವಿಧಿಸಿತು. ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳನ್ನು ಮೇಯಿಸಲು, ಕಟ್ಟಿಗೆ ಬಳಸದಂತೆ, ವನ್ಯಜೀವಿಗಳನ್ನು ಕೊಲ್ಲದಂತೆ ಹಲವು ಕಾಯಿದೆಗಳನ್ನು ಜಾರಿಗೆ ತಂದಿತ್ತು.

ಖನಿಜ ಸಂಪತ್ತು

ಖನಿಜ ನಿಕ್ಷೇಪ ಈ ಜಿಲ್ಲೆಯಲ್ಲಿ ಜಾಸ್ತಿ. ಕಬ್ಬಿಣವನ್ನು ಹೊಸಪೇಟೆ, ಕೂಡ್ಲಿಗಿಯಲ್ಲಿ ಸ್ಥಳೀಯ ತಯಾರಿಕಾ ಘಟಕಗಳಿಂದ ಉತ್ಪಾದಿಸುತ್ತಿದ್ದರು. ಇಂದು ಸಂಡೂರು, ತೋರಣ ಗಲ್ಲು, ಜಿಂದಾಲ್ ಉಕ್ಕು ಕಾರ್ಖಾನೆ, ಮರಿಯಮ್ಮನಹಳ್ಳಿ ಹತ್ತಿರ ಬಿಎಂಎಂ ಕಾರ್ಖಾನೆ, ವ್ಯಾಸನಕೆರೆ ಸ್ಮಯೋರ್ ಕಾರ್ಖಾನೆಗಳಂತೆ ಇನ್ನು ಹಲವು ಕಬ್ಬಿಣವನ್ನು ಉತ್ಪಾದಿಸುವಲ್ಲಿ ಮುಂದಾಗಿವೆ.

ಕರಕುಶಲ ಕಲೆ ತಯಾರಿಕ ಘಟಕಗಳು

ಅಂದು ಹತ್ತಿ, ರೇಷ್ಮೆ, ನೇಯ್ಗೆ ಕೇಂದ್ರಗಳು ಜಿಲ್ಲೆಯಲ್ಲಿದ್ದವು. ನೇಕಾರಿಕೆ ಕೇಂದ್ರ ಗಳೆಂದರೆ ಕಂಪ್ಲಿ, ಹಂಪಸಾಗರ, ರಾಯದುರ್ಗ, ಉಜ್ಜನಿ ಮತ್ತು ತಾಯಕನಹಳ್ಳಿ. ಮತ್ತಿತರ ಕಡೆ ನಿಜಾಂ ಪ್ರಾಂತ್ಯ ಮದ್ರಾಸ್ ಅಧಿಪತ್ಯದಲ್ಲಿದ್ದವು. ಆದೋನಿಯಲ್ಲಿ ಹತ್ತಿ ಮೂಲಕ ರಗ್ಗುಗಳನ್ನು ತಯಾರಿಸುತ್ತಿದ್ದರು. ವುಲ್ಲನ್ ಬೆಡ್‌ಶಿಟ್‌ಗಳು ಹರಪನಹಳ್ಳಿ-ಕೂಡ್ಲಿಗಿಯಲ್ಲಿ ತಯಾರಾಗುತ್ತಿದ್ದವು. ಕುರುಬರು ಸ್ಥಳೀಯವಾಗಿ ಕಂಬಳಿ ನೇಯುತ್ತಿದ್ದರು. ಹತ್ತಿ ಗಿರಣಿ ಮಿಲ್‌ಗಳು ಬಳ್ಳಾರಿಯಲ್ಲಿ ಎರಡು, ಆದೋನಿಯಲ್ಲು ಐದು ಇದ್ದವು. ೧೯೦೪ರಲ್ಲಿ ೬೬೦ ಜನ ಕೆಲಸ ಮಾಡುತ್ತಿದ್ದರು. ೧೮೯೪ರಲ್ಲಿ ಬಳ್ಳಾರಿಯಲ್ಲಿ ಸ್ಪಿನ್ನಿಂಗ್ ಮಿಲ್ ಸ್ಥಾಪನೆ ಆಯಿತು. ೧೯೦೩-೦೪ರಲ್ಲಿ ೫೨೦ ಜನ ಇದರಲ್ಲಿ ಕೆಲಸ ಮಾಡುತ್ತಿದ್ದರು. ಸ್ಪಿನ್ನಿಂಗ್ ೧೭,೮೦೦ ರಷ್ಟು ಉತ್ಪಾದಿಸಿ ೬೫೦ ಟನ್‌ಗಳಾಗುತ್ತಿತ್ತು. ಅದಕ್ಕೆ ೪ ೧/೨ ಲಕ್ಷ ಬೆಲೆ ಇತ್ತು. ೧೯೦೪ರಲ್ಲಿ ಶೇಕಡ ೪೫ರಷ್ಟು ಕೆಲಸಗಾರರು ರಾಯದುರ್ಗದಲ್ಲಿದ್ದರು. ಜಿಲ್ಲೆಯಲ್ಲಿ ೪೫,೦೦೦ದಷ್ಟು ಚರ್ಮ ಹದಮಾಡಿ ಚಪ್ಪಲಿ ಹೊಲಿಯುತ್ತಿದ್ದರು. ಇದರ ಬೆಲೆ ೪೦,೦೦೦  ರೂ. ಇತ್ತು. ಮದ್ಯವನ್ನು ತಯಾರಿಸುವ ಡಿಸ್ಟಲರಿ ಬಳ್ಳಾರಿಯಲ್ಲಿದ್ದು ೩೨,೦೦೦ ಗ್ಯಾಲನ್ ಸ್ಪಿರಿಟ್ ಉತ್ಪಾದಿಸುತ್ತಿದ್ದು, ಇದರ ಬೆಲೆ ರೂ. ೩೭,೦೦೦ ಇತ್ತು.

ವಾಣಿಜ್ಯ

ಮದ್ರಾಸ್ ಅಧಿಪತ್ಯದ ಬಳ್ಳಾರಿಗೆ ಬಾಂಬೆ ಹಾಗೂ ನಿಜಾಮ ಪ್ರಾಂತದ ಸಂಪರ್ಕವಿತ್ತು. ಜೊತೆಗೆ ಮೈಸೂರು ಮಹಾರಾಜರು ವ್ಯಾಪಾರ ವಹಿವಾಟುಗಳನ್ನು ಇಟ್ಟುಕೊಂಡಿದ್ದರು. ಬಾಂಬೆ ಪ್ರಾಂತ್ಯದಲ್ಲಿ ಅಕ್ಕಿ, ಅರಿಶಿಣ, ಮೆಣಸಿನಕಾಯಿ, ಸಂಬಾರ ಪದಾರ್ಥಗಳು ಇಲ್ಲಿಗೆ ಮಾರಾಟಕ್ಕೆ ಬರುತ್ತಿದ್ದವು. ಹುಬ್ಬಳ್ಳಿಯಲ್ಲಿ ಕಬ್ಬಿಣ ತಯಾರಿಕ ಘಟಕಗಳಿದ್ದು ಬಳ್ಳಾರಿಗೆ ತಂದು ಮಾರುತ್ತಿದ್ದರು. ಹತ್ತಿ, ರೇಷ್ಮೆ ಸೀರೆ, ರಗ್ಗು, ಬೆಲ್ಲ ಉತ್ಪಾದಿಸಿ ರಫ್ತು ಮಾಡುತ್ತಿದ್ದರು. ವಿಶೇಷವಾಗಿ ದನಗಳು, ಅಕ್ಕಿ, ಮರದ ಮುಟ್ಟು, ತೆಂಗಿನಕಾಯಿಗಳನ್ನು ಮೈಸೂರಿನಿಂದ ಪಡೆಯುತ್ತಿದ್ದರು. ರಗ್ಗುಗಳು (ಬ್ಯಾಂಕೆಟ್ಸ್), ಎಣ್ಣೆ ಬೀಜ ಮತ್ತು ಹತ್ತಿ ರಫ್ತು ಮಾಡುತ್ತಿ ದ್ದರು. ಹೈದರಾಬಾದ್ ನಿಜಾಮನಿಗೆ ಬಳ್ಳಾರಿ ಜಿಲ್ಲೆಯಿಂದ ಜೋಳ, ನವಣೆ, ಬೆಲ್ಲ, ಹತ್ತಿ, ರೇಷ್ಮೆ ಬಟ್ಟೆಗಳು, ಕಚ್ಛಾಹತ್ತಿ, ಕಳುಹಿಸುತ್ತಿದ್ದರು. ವಸ್ತುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದರು. ವ್ಯಾಪಾರಕ್ಕೆ ಬಳ್ಳಾರಿ ಕೇಂದ್ರವಾಗಿದ್ದರೂ ಆದೋನಿ, ಹೊಸಪೇಟೆ, ಮೈಲಾರ, ಕುರುವತ್ತಿ ಜಾತ್ರೆಗಳು ಸಾಧಾರಣ ವ್ಯಾಪಾರ ಕೇಂದ್ರಗಳಾಗಿದ್ದವು. ಈ ಜಿಲ್ಲೆ ಯೊಂದಿಗೆ ಹಿಂದಿನಿಂದ ದಾವಣಗೆರೆ, ಚಿತ್ರದುರ್ಗ ವ್ಯಾಪಾರ-ವಹಿವಾಟು ಇಟ್ಟುಕೊಂಡಿ ದ್ದಿತು. ಬಳ್ಳಾರಿಯಲ್ಲಿ ಮಾರ್ವಾಡಿಗಳು ಸರ್ಕಾರದ ಅಧೀನದಲ್ಲಿ ವ್ಯಾಪಾರ ಲೇವಾದೇವಿ ನಡೆಸುತ್ತಿದ್ದರು.

ಕ್ಷಾಮ

ಬಳ್ಳಾರಿ ಸದಾ ಬರಗಾಲಕ್ಕೆ ತುತ್ತಾದ ಪ್ರದೇಶ. ಬ್ರಿಟಿಷರ ಅವಧಿಯಲ್ಲಿ ಕ್ಷಾಮ ಬಂದು ಅನೇಕ ಅನಾಹುತಗಳಾಗಿದ್ದವು.

ಬರಗಾಲ ಕ್ಷಾಮ

೧೮೦೨-೪ ೧೮೩೩ ಇದಕ್ಕಾಗಿ ಬ್ರಿಟಿಷ್ ಸರ್ಕಾರ ಪರಿಹಾರ
೧೮೦೫-೭ ೧೮೫೪ ಕಾರ್ಯಗಳನ್ನು ಕೈಗೊಂಡಿದ್ದಿತು.
೧೮೨೪ ೧೮೬೬ ನಷ್ಟವಾದ ಬಗ್ಗೆ, ಭೂಕಂದಾಯ,
೧೮೮೪-೫ ೧೮೭೬-೮ ತೆರಿಗೆಯನ್ನು ಮನ್ನಾ ಮಾಡಿತ್ತು. ೧೯೬
೧೯೦೦ ೧೮೯೧-೨ ಲಕ್ಷಗಳಷ್ಟು ಸರ್ಕಾರ ವ್ಯಯ ಮಾಡಿತ್ತು.
೧೮೯೬-೭

ಬಹಳ ಕೆಟ್ಟ ವರ್ಷಗಳೆಂದರೆ ೧೮೫೪, ೧೮೬೬, ೧೮೭೬-೭೮ ಮತ್ತು ೧೮೯೬-೯೭. ಈ ಕ್ಷಾಮದಿಂದ ೧೮೭೬-೭೮ರಲ್ಲಿ ಬಳ್ಳಾರಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಸಾಕಷ್ಟು ನಷ್ಟ ಅನುಭವಿಸಿದವು. ನೂರಕ್ಕೆ ಐದು ಜನ ಸುಖವನ್ನು ಅನುಭವಿಸಿದರೆ ೯೫ ಜನ ರೋಗಗಳಿಂದ, ಬಡತನದಿಂದ ನರಳುತ್ತಿದ್ದರು. ೧೮೭೧ರ ಜನಸಂಖ್ಯೆಗೆ ಹೋಲಿಸಿದರೆ ಕ್ಷಾಮದಿಂದ ೧೮೯೧ ಕ್ಕೆ ಜನಸಂಖ್ಯೆ ಪ್ರಮಾಣ ಇಳಿಮುಖವಾಯಿತು. ಎತ್ತಿನ ಗಾಡಿಗಳ ವೂಲಕ ಜನ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಆಹಾರ, ಕಾಳು, ಧಾನ್ಯಕ್ಕಾಗಿ ವಲಸೆ ಹೋಗುತ್ತಿದ್ದರು.

ಕ್ರಿ.ಶ. ೧೮೯೬-೯೭ರಲ್ಲಿ ಸಂಭವಿಸಿದ ಕ್ಷಾಮ ರಾಯದುರ್ಗ ಮತ್ತು ಹರಪನಹಳ್ಳಿ ತಾಲ್ಲೂಕುಗಳಲ್ಲಿ ಸಾಕಷ್ಟು ಪರಿಣಾಮ ಬೀರಿತ್ತು. ೧೮೯೭ ಜುಲೈನಲ್ಲಿ ೧೮,೦೦೦ ಜನ ಪರಿಹಾರ ಸ್ವೀಕರಿಸಿ ಆಹಾರ ಧಾನ್ಯ ಪಡೆದರು. ಮತ್ತು ೭೮,೦೦೦ ಜನರಿಗೆ ಪರಿಹಾರ ಕೆಲಸ ದೊರೆಯಿತು. ಕಾಲರಾ ಮತ್ತು ಭಯಾನಕ ರೋಗಗಳಿಗಿಂತಲೂ ಬಡತನದಿಂದ ನರಳಿ ಸತ್ತದ್ದು ಹೆಚ್ಚು. ದಿ. ೧೧.೦೬.೧೯೨೦ರಲ್ಲಿ ಕ್ಷಾಮ ಪರಿಹಾರ ಕಾರ್ಯಕ್ರಮದಲ್ಲಿ ೧೯೨೦-೨೧ರಲ್ಲಿ ಸಂಡೂರು ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಯ ಬೋರ್ಡ್ ಕೊಟ್ಟ ಪರಿಹಾರ ಗಳನ್ನು ಅವಲೋಕಿಸಿ ದಾಖಲಿಸಿದರು.

ರೈಲ್ವೆ

ಬಳ್ಳಾರಿ ಜಿಲ್ಲೆಯಲ್ಲಿ ಆಂಗ್ಲರ ಪೂರ್ವದಲ್ಲಿ ರೈಲ್ವೆ ಮಾರ್ಗ ಇರಲಿಲ್ಲ. ಮೊಟ್ಟಮೊದಲ ಬಾರಿಗೆ ೧೮೭೦ರಲ್ಲಿ ತುಂಗಭದ್ರಾದಿಂದ ರಾಂಪುರದವರೆಗೆ ರೈಲ್ವೆ ನಿರ್ಮಿಸಿದರು. ಸದರನ್ ಮರಾಠ ರೈಲ್ವೆ ಗುಂತಕಲ್-ಬಳ್ಳಾರಿ ನಡುವೆ ರೈಲ್ವೆ ಮಾರ್ಗ ನಿರ್ಮಿಸಿತು. ಆರಂಭದಲ್ಲಿ ಮೀಟರ್‌ಗೇಜ್ ನಿರ್ಮಿಸಿದ್ದರು. ಗುಂತಕಲ್ – ಬಳ್ಳಾರಿ – ಹೊಸಪೇಟೆ – ಧಾರವಾಡ – ಮುಂಬಯಿ ಮಾರ್ಗ ನಿರ್ಮಾಣವಾಯಿತು. ಅನಂತಪುರ ಮೂಲಕ ಬೆಂಗಳೂರಿಗೆ ಸಂಪರ್ಕ ಕಲ್ಪಿಸ ಲಾಯಿತು.  ಪೂರ್ವ ಜಿಲ್ಲೆಗಳಾದ ಕಡಪಾ, ಕರ್ನೂಲು, ಗುಂಟೂರು ಮತ್ತು ಕ್ರಿಷ್ಣದವರೆಗೂ ರೈಲ್ವೆ ಮಾರ್ಗ ನಿರ್ಮಾಣವಾಯಿತು. ಗುಂತಕಲ್ಲು, ಬಳ್ಳಾರಿ ರೈಲ್ವೆ ಲೈನ್ ೧೮೭೧ರಲ್ಲಿ ಮುಕ್ತಾಯವಾಯಿತು. ಇದು ಮದ್ರಾಸ್ ರೈಲ್ವೆ ಭಾಗವಾಗಿ ಸ್ಟಾಂಡರ್ಡ್ ಗೇಜ್‌ನಿಂದ ನಿರ್ಮಾಣವಾಯಿತು. ೧೮೮೭ರಲ್ಲಿ ಅದನ್ನು ಮೀಟರ್‌ಗೇಜಾಗಿ ಪರಿವರ್ತಿಸಲಾಯಿತು. ತರುವಾಯ ಬಳ್ಳಾರಿಯಿಂದ ರಾಯದುರ್ಗಕ್ಕೆ ಮತ್ತು ಹೊಸಪೇಟೆಯಿಂದ ಕೊಟ್ಟೂರಿಗೆ ಎರಡು ಮೀಟರ್ ಗೇಜ್ ೩೩ ಮೈಲು ಮತ್ತು ೩೮ ಮೈಲುಗಳು ಮಾರ್ಗವನ್ನು ನಿರ್ಮಿಸ ಲಾಯಿತು.

ಬಳ್ಳಾರಿಯಲ್ಲಿ ೨೭೧ ಮೈಲು ಮೆಟಲ್ಡ್ ರಸ್ತೆ, ೫೮೨ ಮೈಲು ನಾನ್‌ಮೆಟಲ್ಡ್ ರಸ್ತೆಗಳನ್ನು ಸ್ಥಳೀಯ ಬೋರ್ಡ್‌ಗಳು ನಿರ್ಮಿಸಿದ್ದವು.

೧. ಬಳ್ಳಾರಿ-ಆದೋನಿ-ರಾಯಚೂರು ಮಾರ್ಗವಾಗಿ ಸಿಕಂದರಾಬಾದ್.

೨. ಮದ್ರಾಸ್‌ನಿಂದ ಬಳ್ಳಾರಿ-ಹೊಸಪೇಟೆ ಮೂಲಕ ಬಾಂಬೆಗೇ ರಸ್ತೆ ನಿರ್ಮಾಣ.

೩. ಸಂಡೂರು ಸಂಸ್ಥಾನದ ಬೆಟ್ಟ, ಪರ್ವತ ಪ್ರದೇಶದಲ್ಲಿ ರಸ್ತೆಗಳನ್ನು ನಿರ್ಮಿಸಲಾಯಿತು.

ಉಪವಿಭಾಗ ಮತ್ತು ಸಿಬ್ಬಂದಿ

ಆಡಳಿತಾತ್ಮಕವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಮೂರು ವಿಭಾಗಗಳಿದ್ದವು.

೧. ನಾಲ್ಕು ಪಶ್ಚಿಮ ತಾಲ್ಲೂಕಗಳು : ಹೊಸಪೇಟೆ, ಹಡಗಲಿ, ಹರಪನಹಳ್ಳಿ ಮತ್ತು ಕೂಡ್ಲಿಗಿ ತಾಲ್ಲೂಕುಗಳು ಹೊಸಪೇಟೆ ಉಪವಿಭಾಗಕ್ಕೆ ಸೇರಿದ್ದವು.

೨. ಬಳ್ಳಾರಿ ಉಪವಿಭಾಗಕ್ಕೆ ಬಳ್ಳಾರಿ ಮತ್ತು ರಾಯದುರ್ಗ.

೩. ಆದೋನಿ ಉಪವಿಭಾಗಕ್ಕೆ ಆಲೂರು-ಆದೋನಿ (ಡೆಪ್ಯುಟಿ ಕಲೆಕ್ಟರ್ ಇಲ್ಲಿದ್ದ).

೪. ೮ ಜನ ತಹಶೀಲ್ದಾರರು ೮ ತಾಲ್ಲೂಕುಗಳಿದ್ದರು. ಶಿರಗುಪ್ಪವು ಡೆಪ್ಯುಟಿ ತಹಶೀಲ್ದಾರನ ಕೇಂದ್ರ ಸ್ಥಾನವಾಗಿತ್ತು. ಬಳ್ಳಾರಿ ತಾಲ್ಲೂಕು ಮತ್ತು ಎಮ್ಮಿಗನೂರು ಆದೋನಿಗೆ ಸೇರಿದ್ದಿತು. ಉಪದಂಡಾಧಿಕಾರಿಗಳ ಕೇಂದ್ರ ಸ್ಥಳಗಳಾಗಿ ಬಳ್ಳಾರಿ, ಹೊಸಪೇಟೆ, ಕೂಡ್ಲಿಗಿ ಮತ್ತು ಆದೋನಿಗಳಿದ್ದವು.

೫. ಬಳ್ಳಾರಿ ಕೇಂದ್ರ ಸ್ಥಾನದಲ್ಲಿ ಜಿಲ್ಲಾ ಅರಣ್ಯ ಅಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಸೂಪರಿಟೆಂಡೆಂಟ್‌ರ ವಸತಿಗಳಿದ್ದವು.

೬. ಶಾಲಾ ತನಿಖಾಧಿಕಾರಿಗಳ ಮುಖ್ಯವಸತಿಗಳು ಬಳ್ಳಾರಿಯಲ್ಲಿದ್ದವು. ಹಾಗೆಯೇ ಸೂಪರಿಟೆಂಡೆಂಟ್ ಇಂಜಿನಿಯರ್, ೨ನೇ ಮತ್ತು ೩ನೇ ವರ್ಗದ ಸಹಾಯಕ ಆಯುಕ್ತರು (ಎ.ಸಿ.) ಉಪ್ಪು ಮತ್ತು ಅಬಕಾರಿ ಜೊತೆಗೆ ಕಂದಾಯ ಉಪವಿಭಾಗಾಧಿಕಾರಿಗಳು ಆಯಾ ಸ್ಥಳದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು.