೧೫೭೯ ಥಾಮಸ್ ಸ್ಟೀಪನ್ ಎಂಬ ಆಂಗ್ಲವ್ಯಕ್ತಿ ಮೊಟ್ಟಮೊದಲು ಭಾರತಕ್ಕೆ ಬಂದನು.
೧೬೦೦ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ.
೧೬೦೨ ಡಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ.
೧೭೯೯ ಬಳ್ಳಾರಿ ಪ್ರದೇಶ ಟಿಪ್ಪು ಸುಲ್ತಾನನಿಂದ ಬ್ರಿಟಿಷರಿಗೆ ಮತ್ತು ಬ್ರಿಟಿಷರಿಂದ ಹೈದರಾಬಾದಿನ ನಿಜಾಮನಿಗೆ ಸೇರಿತು.
೧೮೦೦ ೧೨ ಅಕ್ಟೋಬರ್ ಕಡಪಾ, ಕರ್ನೂಲು ಮತ್ತು ಬಳ್ಳಾರಿ ಪ್ರದೇಶವನ್ನು ನಿಜಾಮ ದತ್ತಿಮಂಡಲವಾಗಿ ಆಂಗ್ಲರಿಗೆ ಬಿಟ್ಟು ಕೊಟ್ಟನು. ಬಳ್ಳಾರಿ ಜಿಲ್ಲೆಯಾಗಿ ರಚನೆ, ಆಂಗ್ಲರ ರಾಜ್ಯಾಡಳಿತ ಆರಂಭ, ಸರ್. ಥಾಮಸ್ ಮನ್ರೋ ಪ್ರಥಮ ಕಲೆಕ್ಟರ್ ಆಗಿ ನೇಮಕ.
೧೮೦೧ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಸರ್ವೋಚ್ಛ ನ್ಯಾಯಾಲಯಗಳ ಸ್ಥಾಪನೆ, ಹೊಸ ಕೆರೆ ಕಟ್ಟೆ, ಆಡಳಿತ ಕಟ್ಟಡಗಳ ನಿರ್ಮಾಣಗೊಂಡವು.
೧೮೦೨ ಬಳ್ಳಾರಿ ಜಿಲ್ಲೆಯಲ್ಲಿ ಭೂಮಾಪನ ಕಾರ್ಯ ಕಲೆಕ್ಟರ್ ಮನ್ರೋನ ನೇತೃತ್ವದಲ್ಲಿ.
೧೮೦೩ ಬಳ್ಳಾರಿಯಲ್ಲಿ ಪಾಳೆಯಗಾರರ ದಂಗೆ, ಮನ್ರೋ ಗುಡೇಕೋಟೆಗೆ ಭೇಟಿ, ಕ್ಷಾಮ ಉಲ್ಬಣಗೊಂಡಿತು. ಕೆರೆ-ಕಟ್ಟೆಗಳ ರಿಪೇರಿ ಕೆಲಸ ನಡೆಯಿತು.
೧೮೦೫ ಈ ಭಾಗದ ಅರಸು, ಪಾಳೆಯಗಾರರ ಮನೆತನಗಳು ತಮ್ಮ ಮೂಲ ಸೌಲಭ್ಯಗಳಿಗಾಗಿ ಗಲಭೆ ನಡೆಸಿದ್ದು, ಬರಗಾಲ ಆರಂಭವಾಯಿತು.
೧೮೦೭ ಸರ್. ಥಾಮಸ್ ಮನ್ರೋ ಇಂಗ್ಲೆಂಡಿಗೆ ನಿರ್ಗಮನ, ಪರಿಸ್ಥಿತಿ ಹದಗೆಟ್ಟು (ಆಡಳಿತ) ಗಂಭೀರವಾಗಿತ್ತು.
೧೮೦೮ ದತ್ತಿಮಂಡಲವನ್ನು ಬಳ್ಳಾರಿ ಮತ್ತು ಕಡಪ ಎಂದು ಎರಡು ಭಾಗಗಳಾಗಿ ಮಾಡಿ, ೧೫ ತಾಲ್ಲೂಕುಗಳನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಲಾಯಿತು.
೧೮೧೦ ಮೇ ೫ ಲಂಡನ್ ಮಿಷನರಿ ಸೊಸೈಟಿಯಿಂದ ಪ್ರೊಟೆಸ್ಟೆಂಟ್ ಧರ್ಮದ ಜಾನ್ ಹ್ಯಾಂಡ್ಸನ್ ಬಳ್ಳಾರಿಗೆ ಬಂದದ್ದು.
೧೮೧೧ ನವೆಂಬರ್ ಬಳ್ಳಾರಿಯ ಕೋಟೆ ಪ್ರದೇಶದಲ್ಲಿ ಧರ್ಮಪಾಠ ಶಾಲೆ ಸ್ಥಾಪನೆ.
೧೮೧೧ ಬ್ರಿಟಿಷರು ಹಣಕಾಸು ಆಡಳಿತ ವಿಭಾಗವನ್ನು ಸ್ಥಾಪಿಸಿದರು. ರಾಯತ್ವಾರಿ ಪದ್ಧತಿಯನ್ನು ಭೂಕಂದಾಯ ಆಡಳಿತದಲ್ಲಿ ಅಳವಡಿಸಲು ಪ್ರಥಮ ಚರ್ಚೆ.
೧೮೧೪ ಬಳ್ಳಾರಿ ಜಿಲ್ಲೆಯಲ್ಲಿ ಸರ್ವೇಕಾರ್ಯ ನಡೆಯಿತು. ಸರ್ವೇ ಮಾಡಲು ಅಂದು ಫೀಜು ಇರಲಿಲ್ಲ.
೧೮೧೫ ಬ್ರಿಟಿಷರಿಂದ ವಾಣಿಜ್ಯ, ಕಾನೂನು, ಆಡಳಿತ ವಿಭಾಗಗಳ ಸ್ಥಾಪನೆ.
೧೮೧೬ ಆಂಗ್ಲ ಸರ್ಕಾರ ವಿದೇಶಾಂಗ ಆಡಳಿತ ವಿಭಾಗವನ್ನು ತೆರೆಯಿತು.
೧೮೧೮ ಕ್ರೈಸ್ತ ಧರ್ಮದ ಪ್ರಸಾರ ಸಂಸ್ಥೆ ಆರಂಭ, ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳಲ್ಲಿ ಪಿಂಡಾರಿಗಳ ದಾಂಧಲೆ.
೧೮೧೯ ಬಳ್ಳಾರಿ ಕಲೆಕ್ಟರನಿಗೆ ಕೆಲವು ಗ್ರಾಮಗಳು ಶೇ. ೨೫ ರಿಯಾಯಿತಿಯಲ್ಲಿ ತೆರಿಗೆ ನೀಡಬೇಕೆಂದು ಕಲೆಕ್ಟರ್ ಥ್ಯಾಕರೆಗೆ ಮನವಿ ಮಾಡಲಾಯಿತು.
೧೮೨೦ ಮದ್ರಾಸ್‌ನ ಗವರ್ನರ್ ಆಗಿ ಸರ್. ಥಾಮಸ್ ಮನ್ರೋನ ನೇಮಕ. ಮನ್ರೋನ ರಾಯತ್ವರಿ ಪದ್ಧತಿಯನ್ನು ಆಗಸ್ಟ್ ೩೧, ೧೮೨೦ರಲ್ಲಿ ಚಾಪ್ಲಿನ್ ಎಂಬ ಅಧಿಕಾರಿ ಜಾರಿಗೆ ತಂದನು.
೧೮೨೩ ಮದ್ರಾಸ್ ಪ್ರಾಂತ್ಯದ ಗವರ್ನರ್‌ನ ಆದೇಶದಂತೆ ಜಿಲ್ಲೆಯಲ್ಲಿ ಕಲೆಕ್ಟೊರೇಟ್ ಶಾಲೆ ಮತ್ತು ಎರಡು ತಹಶೀಲ್ದಾರಿ ಶಾಲೆಗಳನ್ನು ಸ್ಥಾಪಿಸಲಾಯಿತು.
೧೮೨೪-೩೮ ರಾಬರ್ಟ್‌ಸನ್ ಆಡಳಿತ ಗ್ರಾಮಾಧಿಕಾರಿಗಳು ಸರ್ಕಾರಿ ನಿಯಂತ್ರಣಕ್ಕೆ, ಭೀಕರ ಬರಗಾಲ.
೧೮೨೬ ಸಂಡೂರಿನ ಜಹಗೀರ್‌ದಾರ್ ಆಗಿದ್ದ ಶಿವರಾಮರಾವ್ ಘೋರ್ಪಡೆಯವರಿಗೆ ಸನ್ನದು ನೀಡಲಾಯಿತು.
೧೮೨೭ ಜುಲೈ ೬ ಕಾಲರಾ ರೋಗದಿಂದ ಸರ್. ಥಾಮಸ್ ಮನ್ರೋ ನಿಧನ.
೧೮೩೦-೩೧ ಬಳ್ಳಾರಿ ಜಿಲ್ಲೆಯಲ್ಲಿ ಭೀಕರ ಕ್ಷಾಮ.
೧೮೩೬ ಕಲೆಕ್ಟೊರೇಟ್ ಶಾಲೆ ಮತ್ತು ತಹಶೀಲ್ದಾರಿ ಶಾಲೆಗಳು ರದ್ದುಗೊಂಡವು.
೧೮೩೭ ಹಂಪೆ ವಿರೂಪಾಕ್ಷಸ್ವಾಮಿ ದೇವಸ್ಥಾನಕ್ಕೆ ರಾಬರ್ಟಸನ್‌ನಿಂದ ರಕ್ಷಣಾ ಕಾರ್ಯ ಗಳು.
೧೮೩೭ ಡಿಸೆಂಬರ್ ೨೦, ತಂಬಾಕು ಸರಬರಾಜು ಏಕಸ್ವಾಮ್ಯಕ್ಕೆ ಗುತ್ತಿಗೆದಾರರ ನೇಮಕವನ್ನು ಕಂದಾಯ ಇಲಾಖೆ ನಿರ್ಧರಿಸುವ ಬಗ್ಗೆ ಸುತ್ತೋಲೆ.
೧೮೩೮ ರಸ್ತೆಗಳ ನಿರ್ಮಾಣ.
೧೮೪೧ ಶ್ರೀ ವೆಂಕಟರಾವ್ ಘೋರ್ಪಡೆಯವರಿಗೆ ಸನ್ನದು ನೀಡಲಾಯಿತು.
೧೮೪೩ ಸಾರ್ವತ್ರಿಕ ಕೆಲಸಗಳಿಗಾಗಿ ವಿಭಾಗ ಆರಂಭ.
೧೮೪೬ ಲಂಡನ್ನಿನ ಕ್ರಿಶ್ಚಿಯನ್ ಮಿಷನರಿ ಸೊಸೈಟಿಯ ರೆವ್ಹರೆಂಡ್ ಜೆ.ಎಸ್. ವಾರ್ಡ್ಲಾ ಅವರು ವಾರ್ಡ್ಲಾ ಕಾಲೇಜನ್ನು ಸ್ಥಾಪಿಸಿದರು.
೧೮೪೭ ರೈತರ ನಿರ್ವಹಣೆಗೆ ವಿಶೇಷ ಗಮನ.
೧೮೪೮ ಮಾರ್ಚ್ ೨೮ ಕಡಪದ ಫೌಜುದಾರರು ಅದಾಲತ್ ವ್ಯವಹಾರಕ್ಕೆ ಸಂಬಂಧಿಸಿ ದಂತೆ, ಸ್ಥಳೀಯ ಭಾಷೆಯ ಪತ್ರಗಳನ್ನು ಯುರೋಪಿನ ಅಧಿಕಾರಿಗಳಿಗೂ ಕಳುಹಿಸಲು ಆದೇಶ ಹೊರಡಿಸಿದರು.
೧೮೪೮ ಸೆಪ್ಟೆಂಬರ್ ೨೧ ರಸ್ತೆಗಳ ಬೀದಿಗಳಲ್ಲಿ ತೋಪು ಮತ್ತು ಇತರ ಮರಗಳನ್ನು ಬೆಳೆಸಲು ಸರ್ಕಾರ ಕರೆ ನೀಡಿತು.
೧೮೪೮ ಅಕ್ಟೋಬರ್ ೨೯ ಭಾರತಕ್ಕೆ ಯುರೋಪಿನಿಂದ ಭೂಮಾರ್ಗವಾಗಿ ಮತ್ತು ಜಲ ಮಾರ್ಗವಾಗಿ ರಫ್ತು ಮಾಡಿದ ವಸ್ತುಗಳಿಗೆ ನಿಗದಿತ ಕರವನ್ನು ಮದ್ರಾಸ್ ಪ್ರಾಂತ್ಯದಲ್ಲಿ ಸಂದಾಯ ಮಾಡುವಂತೆ ಸುತ್ತೋಲೆ ಹೊರಡಿಸಿದರು.
೧೮೫೦ ಭೂ ಕಂದಾಯ ನಿಗದಿಗೊಳಿಸಲು ಸರ್ಕಾರದ ಮಾರ್ಗೋಪಾಯಗಳು.
೧೮೫೦ ಜನವರಿ ೧೦, ಭೂ ವ್ಯವಸಾಯ ಮತ್ತು ಭೂ ತೀರ್ಮಾನಗಳ ಬಗ್ಗೆ ಸ್ಥಳೀಯ ಬೋರ್ಡ್ ಅಧಿಕಾರಿಗಳಿಗೆ ರೆವಿನ್ಯೂ ಬೋರ್ಡ್ ಕಾರ್ಯದರ್ಶಿಗಳಿಂದ ಸುತ್ತೋಲೆ.
೧೮೫೦ ಕರಾವಳಿಯಲ್ಲಿ ವಾಣಿಜ್ಯ-ವ್ಯಾಪಾರಕ್ಕೆ ಸ್ಥಳಗಳನ್ನು ಸೂಚಿಸಲು  ಭೂಪಟ ರಚನೆ ಮಾರ್ಗೋಪಾಯಗಳು.
೧೮೫೦ ಮಾರ್ಚ್ ೨೭, ಗುಂಟೂರು ಜಿಲ್ಲೆಯ ಹಳ್ಳಿಗಳು ಮತ್ತು ತಾಲ್ಲೂಕುಗಳಲ್ಲಿ ಭೂ ಕಂದಾಯ ಮತ್ತು ಭೂಸಾಗುವಳಿಯ ಲೆಕ್ಕಪತ್ರಗಳನ್ನು ಕ್ರೂಢೀಕರಿಸಲು ನಿರ್ವಹಣೆಯ ಬಗ್ಗೆ ಸುತ್ತೋಲೆ.
೧೮೫೦ ಮಾರ್ಚ್ ೧೮, ಬಳ್ಳಾರಿ ಜಿಲ್ಲಾ ಕೋರ್ಟ್‌ನಲ್ಲಿ ನಡೆದ ನ್ಯಾಯಾಂಗ ವಿಚಾರಣಾ ಸಂದರ್ಭದಲ್ಲಿ ಸೆಷೆನ್ಸ್ ಮತ್ತು ಅದರ ಅಧೀನ ನ್ಯಾಯಾಧೀಶರ ಹಾಜರಾತಿ ಬಗ್ಗೆ ಕಂದಾಯ ಬೋರ್ಡ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
೧೮೫೦ ಫೆಬ್ರವರಿ ೨೮ ಸರ್ಕಾರವು ನಿಗದಿಪಡಿಸಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಾಗ ಮೂಲ ಯೋಜನೆಯಲ್ಲಿರುವಂತೆ ಕೈಗೊಳ್ಳದೇ ಹೋದಲ್ಲಿ ಅದರ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರದ ಆದೇಶ.
೧೮೫೦ ಮೇ, ಸಬ್ ಕಲೆಕ್ಟರುಗಳಿಗೆ ಭತ್ಯೆ ಮಂಜೂರಿನ ಬಗ್ಗೆ ವರದಿ.
೧೮೫೦ ಮೇ ೬, ಉಪ್ಪಿನ ನಷ್ಟವನ್ನು ತಪ್ಪಿಸಲು ಹೊಸ ಮಾರ್ಗೋಪಾಯಗಳು.
೧೮೫೧ ಕಂಪ್ಲಿಯಿಂದ ತಾಲ್ಲೂಕನ್ನು ವರ್ಗಾಯಿಸಿ, ಹೊಸಪೇಟೆಯನ್ನು ತಾಲ್ಲೂಕು ಕೇಂದ್ರವಾಗಿ ಮಾಡಲಾಯಿತು. ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಯಿತು.
೧೮೫೧-೫೫ ಸಾರಿಗೆ ಸಂಪರ್ಕ ವ್ಯಾಪಕವಾಗಿ ಅಭಿವೃದ್ದಿ.
೧೮೫೩ ಜನವರಿ ೨೪, ಆಯಾ ಪ್ರಾಂತ್ಯದ ವಿಭಾಗಗಳ ಎಲ್ಲೆಗಳನ್ನು ಸೈನ್ಯದ ದಂಡಾಧಿ ಕಾರಿಗಳಿಂದ ಗುರುತಿಸಲಾಯಿತು.
೧೮೫೪ ಡಿಸೆಂಬರ್ ೧೪, ಬಳ್ಳಾರಿ ಜಿಲ್ಲೆಯಲ್ಲಿ ಕ್ಷಾಮ. ಚಾರ್ಲಸ್ ವುಡ್ಸ್‌ರಿಂದ ಶಿಕ್ಷಣದ ಸುಧಾರಣೆ.
೧೮೫೫ ಮೇ, ೧೦, ಜನಸಾಮಾನ್ಯರ ಆಡುಭಾಷೆಯಲ್ಲಿಯೇ ಪ್ರಕಟಣೆಗಳಿರಬೇಕೆನ್ನುವುದು ಬ್ರಿಟಿಷರು ಅಭಿಮತ. ಪ್ರಾವಿನ್ಸಿಯಲ್ ಶಾಲೆಯನ್ನು ಬಳ್ಳಾರಿಯ ಮುನ್ಸಿಪಾಲಿಟಿ ನೋಡಿಕೊಳ್ಳುತ್ತಿತ್ತು.
೧೮೫೭ ಮಾರ್ಚ್ ೨೦, ಉಪ್ಪಿನ ಮೇಲೆ ವಿಧಿಸುತ್ತಿದ್ದ ರೋಹನ್ ತೆರಿಗೆಯಿಂದ ಉಪ್ಪಿನ ಕಳ್ಳ ಸಾಗಾಣಿಕೆ ತಪ್ಪಿಸಿದರು ಸಹ ಇದರಿಂದ ವ್ಯಾಪಾರಿಗಳಿಗಾದರು ತಪ್ಪಿಸಲು ಅದನ್ನು ಮಾರ್ಪಾಡು ಮಾಡಲಾಯಿತು.
೧೮೫೭ ಸೆಪ್ಟೆಂಬರ್ ೨೧, ಮದ್ರಾಸ್ ಅಧಿಪತ್ಯ(ಬಳ್ಳಾರಿ)ದಲ್ಲಿ ಸಿಪಾಯಿದಂಗೆ (ಸ್ವಾತಂತ್ರ್ಯ ಸಂಗ್ರಾಮ) ಪ್ರಾರಂಭವಾಯಿತು.
೧೮೫೮ ಬಳ್ಳಾರಿಯಲ್ಲಿ ರೈಲ್ವೆ ವಿಭಾಗ ಸ್ಥಾಪಿಸಿದರು. ಸ್ಮಶಾನಗಳನ್ನು ವ್ಯವಸ್ಥಿತವಾಗಿ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಮದ್ರಾಸ್ ಸರ್ಕಾರದಿಂದ ಆದೇಶ.
೧೮೫೯ ಜನವರಿ ೭ ಮದ್ರಾಸ್ ಅಧಿಪತ್ಯದಲ್ಲಿ ಎಲ್ಲ ಜಿಲ್ಲೆಗಳಿಗೂ ಡೆಪ್ಯೂಟಿ ಕಲೆಕ್ಟರ್ ಗಳನ್ನು ನೇಮಿಸಿದರು.
೧೮೬೧ ಪರಿಹಾರ ಇಲಾಖೆ ಬಳ್ಳಾರಿಯಲ್ಲಿ ಪ್ರಾರಂಭ, ಕ್ಷಾಮ ಉಲ್ಬಣಗೊಂಡಿತ್ತು.
೧೮೬೨ ಆಂಗ್ಲರ ಆಡಳಿತದಲ್ಲಿ ಶಾಸಕಾಂಗ ಅಸ್ತಿತ್ವಕ್ಕೆ ಬಂದಿದ್ದು, ವಿಭಾಗೀಯ ಅಂಚೆ ಕಚೇರಿಗಳ ಸ್ಥಾಪನೆ.
೧೮೬೨ ಆಂಗ್ಲರ ಆಡಳಿತದಲ್ಲಿ ಶಾಸಕಾಂಗದ ಅಸ್ತಿತ್ವಕ್ಕೆ ಜಿಲ್ಲೆಯಲ್ಲಿ ವಿಭಾಗೀಯ ಅಂಚೆ ಕಚೇರಿಗಳ ಸ್ಥಾಪನೆ.
೧೮೬೩ ಸರ್ಕಾರ ಷಣ್ಮುಖರಾವ್ ಅವರಿಗೆ ಸಂಡೂರನ್ನು ಜಾಹಗೀರಾಗಿ ಸನ್ನದು ನೀಡ ಲಾಯಿತು.
೧೮೬೫ ಅಕ್ಟೋಬರ್ ೨, ಪ್ರಾಥಮಿಕ ಶಾಲೆಗಳನ್ನು ಆರಂಭಿಸಿದರು.
೧೮೬೫ ಪ್ರವಾಸಿ ಮಂದಿರಗಳ ದುರಸ್ತಿ ಕಾರ್ಯಚಟುವಟಿಕೆಗಳ ಭರದಿಂದ ಸಾಗಿದವು.
೧೮೬೬ ಶ್ರೀ ತಿರುಮಲದೇವರಾಯ ಹಿಂದಿನ ಆನೆಗುಂದಿ ಮಹಾರಾಜರ ಭೂ ಪರಿಹಾರಕ್ಕೆ ಸಂಬಂಧಿಸಿದಂತೆ ಪಿಂಚಣಿಯನ್ನು ರೂ. ೧,೩೭೭-೧೧-೪ ಮಾಸಿಕವಾಗಿ ಹೊಸಪೇಟೆ ಖಜಾನೆಯಿಂದ ಕೊಡಲಾಯಿತು.
೧೮೬೭ ವೈದ್ಯಕೀಯ ಸೌಲಭ್ಯ, ಆಸ್ಪತ್ರೆಗಳ ನಿರ್ಮಾಣ.
೧೮೭೨ ಮಾರ್ಚ್ ೮, ಭೂ ಪರಿಹಾರಕ್ಕೆ ಸಂಬಂಧಿಸಿದಂತೆ ಪಿಂಚಣಿ ಮತ್ತು ಪರಿಹಾರ ಶ್ರೀ ಕೃಷ್ಣದೇವರಾಯ ಅವರ ಕುಟುಂಬ ವರ್ಗಕ್ಕೆ ನೀಡಲಾಯಿತು.
೧೮೭೩ ಪಟ್ಟಣಗಳಿಗೆ ನೀರು ಸರಬರಾಜು ಯೋಜನೆ ರೂಪಿಸಿದರು.
೧೮೭೯ ಬಳ್ಳಾರಿ ಪಟ್ಟಣದಲ್ಲಿ ಶಿಕ್ಷಕರ ತರಬೇತಿ ಶಾಲೆ ಆರಂಭ.
೧೮೮೨ ಜಿಲ್ಲೆಯ ಕಂದಾಯ ಆಡಳಿತದ ಪ್ರಮುಖ ಉಪವಿಭಾಗವಾಗಿ ಹೊಸಪೇಟೆಯನ್ನು ಮಾಡಿದರು.
೧೮೮೨ ಏಪ್ರಿಲ್ ೧ ಅಂಚೆ ಕಚೇರಿಗಳಲ್ಲಿ, ಬ್ಯಾಂಕ್‌ಗಳಲ್ಲಿ ಠೇವಣ ಇಡಲು ಆರಂಭ.
೧೮೮೪ ಬ್ರಿಟಿಷ್ ಸರ್ಕಾರ ಹಾಗೂ ಸಂಡೂರಿನ ರಾಜರ ನಡುವೆ ಅರಣ್ಯ ಗುತ್ತಿಗೆ ಸಲುವಾಗಿ ಒಪ್ಪಂದ.
೧೮೮೫ ಹೊಸಪೇಟೆ ಧಾರವಾಡ ರೈಲ್ವೆ ಮಾರ್ಗ ನಿರ್ಮಾಣ.
೧೮೯೨ ಲೋಕಲ್ ಬೋರ್ಡಿನಿಂದ ಸೇಷನಲ್ ಶಾಲೆಯನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿತು.
೧೮೯೪ ರಾಬರ್ಟ್ ಸಿವೆಲ್ ಹಂಪಿಗೆ ಭೇಟಿ, ಕಲ್ಲಿನ ರಥದ ಮೇಲಿನ ಗೋಪುರ ಶಿಥಿಲ ವಾಗಿದ್ದರಿಂದ ಸ್ಥಳಾಂತರಿಸಲಾಯಿತು.
೧೮೯೬ ಕಮಲಾಪುರ, ಕಂಪ್ಲಿಗಳಲ್ಲಿ ಟೌನ್ ಪಂಚಾಯಿತಿ ರಚನೆ.
೧೮೯೮ ಹೊಸಪೇಟೆಯಲ್ಲಿ ತಾಲ್ಲೂಕ್ ಸಬ್ ಕಲೆಕ್ಟರನ ಕಚೇರಿ ಸ್ಥಾಪನೆ.
೧೮೯೯ ಪ್ಲೇಗು ಜಿಲ್ಲೆಯಲ್ಲಿ ವ್ಯಾಪಿಸಿತು.
೧೯೦೦ ಹೊಸಪೇಟೆ ಮತ್ತು ಇತರ ತಾಲ್ಲೂಕುಗಳಲ್ಲಿ ಮುನ್ಸೀಫ್ ಕೋರ್ಟುಗಳ ಸ್ಥಾಪನೆ.
೧೯೦೧ ಜನಗಣತಿ ಕಾರ್ಯ ನಡೆಸಿತು.
೧೯೦೫ ಹೊಸಪೇಟೆ, ಕೊಟ್ಟೂರು ರೈಲ್ವೆ ಮಾರ್ಗ ನಿರ್ಮಾಣ.
೧೯೦೫ ಬಳ್ಳಾರಿಯ ರಂಗಮಂದಿರದ ಉದ್ಘಾಟನೆಗೆ ಲೋಕಮಾನ್ಯ ಬಾಲಗಂಗಾಧರ ತಿಲಕರು ಬಂದಿದ್ದು.
೧೯೦೮ ವಾರ್ಡ್ಲಾ ಹೈಸ್ಕೂಲ್ ಎಂದು ವಾಡ್ಲಾ ಕಾಲೇಜನ್ನು ಮರುನಾಮಕರಣ.
೧೯೧೦ ಹೊಸಪೇಟೆ ಕಂದಾಯ ಉಪವಿಭಾಗದ ಕೇಂದ್ರಸ್ಥಾನ, ಸಬ್‌ಕಲೆಕ್ಟರ್‌ನ ಆಡಳಿತ ದಲ್ಲಿ.
೧೯೧೩ ಏಪ್ರಿಲ್ ೧ ರಂದು ಸಬ್‌ಕಲೆಕ್ಟರ್ ಡಿ.ಜಿ.ಬ್ಲೆನ್ಸ್, ಐ.ಸಿ.ಎಸ್. ಹೊಸಪೇಟೆ ಪುರಸಭೆಯ ಅಧ್ಯಕ್ಷ.
೧೯೧೮ ಆರಕ್ಷಕ ಠಾಣೆಗಳ ಸ್ಥಾಪನೆ, ಚುನಾಯಿತ ಅಧ್ಯಕ್ಷರ ನೇಮಕ. ವೀರಶೈವ ವಿದ್ಯಾ ವರ್ಧಕ ಸಂಘ ಅಸ್ತಿತ್ವಕ್ಕೆ.
೧೯೧೯ ಖಿಲಾಫತ್ ಚಳುವಳಿಗೆ ವ್ಯಾಪಕ ಸಿದ್ಧತೆ, ಸಭೆ, ಸಮಾರಂಭ, ನಡೆಯಿತು.
೧೯೨೦ ಜಿಲ್ಲೆಯಲ್ಲಿ ಪಶು ವೈದ್ಯ ಚಿಕಿತ್ಸಾಲಯಗಳನ್ನು ಪ್ರಾರಂಭಿಸಿದರು.
೧೯೨೦-೨೨ ಅಸಹಕಾರ ಚಳುವಳಿ
೧೯೨೦ ಕನ್ನಡ ಸಾಹಿತ್ಯ ಸಮ್ಮೇಳನ ಹೊಸಪೇಟೆಯಲ್ಲಿ.
೧೯೨೧ ಗಾಂಧಿ ಸಂದರ್ಶನ, ಫಿರ್ಕಾಗಳಲ್ಲಿ ಸಂಘ-ಸಂಸ್ಥೆಗಳ ಆರಂಭ.
೧೯೨೨ ಸೆಪ್ಟೆಂಬರ್ ೮, ಸಣ್ಣ-ಕೆರೆಗಳ ದುರಸ್ಥಿ ಕಾರ್ಯವನ್ನು ಕಂದಾಯ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಗೆ ವರ್ಗಾಯಿಸಿದರು.
೧೯೨೩ ಆಗಸ್ಟ್ ೩೦ ಬಳ್ಳಾರಿ ಎಲೆಕ್ಟ್ರಿಕ್ ಸಪ್ಲೈ ಕಂಪನಿಗೆ ವಿದ್ಯುತ್ ಸರಬರಾಜು ಮಾಡಲು ಲೈಸನ್ಸ್ ನೀಡಿರುವ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಸರ್ಕಾರ ಪತ್ರ ಬರೆಯಿತು.
೧೯೨೩-೨೪ ಮೆಟ್ರಿಕ್ (ಎಸ್.ಎಸ್.ಎಲ್.ಸಿ.) ಪರೀಕ್ಷೆಯನ್ನು ಪ್ರಥಮ ತಂಡ ಎದುರಿಸಿತು.
೧೯೨೩ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ವಿಸ್ತರಿಸಿ, ಇಂಡೋಜಿನಿಯಸ್ ಮಾದರಿ ಶಾಲೆ ಗಳನ್ನು ಸ್ಥಾಪಿಸಲು ವಿಸ್ತರಿಸಲು ಮುಂದಾಯಿತು.
೧೬೨೫ ಆಗಸ್ಟ್ ೨೮ ಕನ್ನಡ ಭಾಷೆಯನ್ನು ಸರ್ಕಾರಿ ಕಚೇರಿಗಳಲ್ಲಿ ಬಳಸಲು ಆದೇಶ.
೧೯೨೬ ಪ್ರಜಾಬಂಧು ವಾರಪತ್ರಿಕೆ, ವ್ಯವಸಾಯ ಸಂಘಗಳ ಸ್ಥಾಪನೆ.
೧೯೨೭-೨೮ ಬಳ್ಳಾರಿ ಜಿಲ್ಲೆಯಲ್ಲಿ ಎರಡನೇ ದರ್ಜೆಯ ರಸ್ತೆಗಳ ಬಗ್ಗೆ ತೀವ್ರ ಪರಿಶೀಲನೆ.
೧೯೨೮-೨೯ ಬಳ್ಳಾರಿ ಪುರಸಭೆಯ ಆರ್ಥಿಕ ಪರಿಸ್ಥಿತಿ ಬಗ್ಗೆ ಪಟ್ಟಿ ಸಿದ್ಧತೆ.
೧೯೨೯ ಹೊಸಪೇಟೆಯಲ್ಲಿ ಆರೋಗ್ಯ ಮತ್ತು ಮಕ್ಕಳ ಸಪ್ತಾಹ.
೧೯೨೯ ಹಡಗಲಿಯಲ್ಲಿ ಆರೋಗ್ಯ ಮತ್ತು ಮಕ್ಕಳ ಸಪ್ತಾಹ ಆಚರಿಸಲು ಸರ್ಕಾರ ಹಣ ನೀಡಿತು.
೧೯೩೦ ಜಿಲ್ಲೆಯಲ್ಲಿ ಉಪ್ಪಿನ ಸತ್ಯಾಗ್ರಹ.
೧೯೩೦-೩೧ ಹೊಸಪೇಟೆ ಪುರಸಭೆಯ ಆಯವ್ಯಯ ಬೇಡಿಕೆ ಪಟ್ಟಿ ಸಲ್ಲಿಕೆ.
೧೯೩೧ ಕೊಟ್ಟೂರು ಪಂಚಾಯಿತಿಯ ವಿಭಾಗಗಳಲ್ಲಿ ಸ್ಥಾನಗಳನ್ನು ಕಾಯ್ದಿರಿಸುವ ಬಗ್ಗೆ ವರದಿ.
೧೯೩೧ ಹೊಸಪೇಟೆ ತಾಲ್ಲೂಕಿನ ಕಂಪ್ಲಿಯನ್ನು ನಗರಸಭೆ ಚುನಾವಣೆಗೆ ವಾರ್ಡುಗಳಾಗಿ ವಿಂಗಡಿಸಲಾಯಿತು.
೧೯೩೩ ಅಖಿಲ ಭಾರತ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಪ್ರದರ್ಶನ. ಮಲ್ಲಸಜ್ಜನ ವ್ಯಾಯಾಮ ಶಾಲೆ ಬಳ್ಳಾರಿಯಲ್ಲಿ ಆರಂಭ.
೧೯೩೪ ಮಾರ್ಚ್ ೨, ಬಳ್ಳಾರಿಗೆ ಗಾಂಧೀಜಿ ಹರಿಜನೋದ್ಧಾರಕ್ಕಾಗಿ ಭೇಟಿ
೧೯೩೫ ವಿದ್ಯುತ್ ಸರಬರಾಜು ಪ್ರಾರಂಭ, ಹೊಸಪೇಟೆ ಪುರಸಭೆ ಪ್ರೌಢಶಾಲೆ ಪ್ರಾರಂಭ.
೧೯೩೬ ಎಸ್. ನಿಜಲಿಂಗಪ್ಪ ಬಳ್ಳಾರಿಯ ಸಿಂಗಮಶೆಟ್ಟಿ, ಸುಬ್ಬರಾಯಿಡು ಇವರ ಮಹಡಿ ಯಲ್ಲಿ ಅಜಾದ್ ಕ್ಲಬ್ ಉದ್ಘಾಟಿಸಿದರು.
೧೯೩೬ ಡಿಸೆಂಬರ್ ಹಂಪಿಯಲ್ಲಿ ವಿಜಯನಗರದ ಆರನೇ ಶತಮಾನೋತ್ಸವ ಆಚರಿಸಿದ್ದು.
೧೯೩೭ ಮದ್ರಾಸ್‌ನಲ್ಲಿ ಪ್ರಥಮವಾಗಿ ಕಾಂಗ್ರೆಸ್ ಅಧಿಕಾರ ಶಾಸನ ಸಭೆಗೆ ಚುನಾವಣೆಗಳು.
೧೯೩೭ ಜನವರಿ, ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯರು ಬಳ್ಳಾರಿಯಲ್ಲಿ ಹಿಂದಿ ಶಾರದಾ ಮಂದಿರ ಸ್ಥಾಪಿಸಿದರು.
೧೯೩೭ ಜೂನ್ ೨೭, ಬಳ್ಳಾರಿಯಲ್ಲಿ ಕನ್ನಡ ಗೆಳೆಯರ ಗುಂಪು ಸ್ಥಾಪನೆ.
೧೯೩೮ ಜನವರಿ ೨, ಮಹಿಳೆ ಮತ್ತು ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿಗಳು.
೧೯೩೮ ಬಳ್ಳಾರಿಯ ಪುರಸಭೆಯ ಜಾಹಿರಾತುಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ನಿಕ್ಷೇಪಿ ಸುವ ಬಗ್ಗೆ ಠರಾವು.
೧೯೩೮-೩೯ ಬಳ್ಳಾರಿಯಲ್ಲಿ ಮದ್ರಾಸ್ ಮಂತ್ರಿ ಶ್ರೀಮತಿ ಲಕ್ಷ್ಮೀಪತಿಯವರು ಕೋದಂಡರಾಮ ದೇವಸ್ಥಾನವನ್ನು ಹರಿಜನರಿಗಾಗಿ ತೆರೆದರು.
೧೯೩೮-೩೯ ವೇಣಿ ವೀರಾಪುರದಲ್ಲಿ ಭೂಪಟ್ಟಗಳನ್ನು ರೈತರಿಗೆ ವಿತರಿಸಿದರು.
೧೯೩೯ ಅಕ್ಟೋಬರ್ ೩, ಆಲ್ ಇಂಡಿಯಾ ರೇಡಿಯೊದಲ್ಲಿ ಕನ್ನಡ ಸುದ್ದಿ ಬಿತ್ತರಿಸಲು ಕನ್ನಡ ಗೆಳೆಯರು ಬೇಡಿಕೆಯಿತ್ತರು.
೧೯೩೯ ಡಿಸೆಂಬರ್, ಕನ್ನಡ ಗೆಳೆಯರ ಗುಂಪಿನವರು ಶವಸಂಸ್ಕಾರ ಹೊತ್ತಿಗೆಯನ್ನು ಮುದವೀಡ ಕೃಷ್ಣರಾಯರಿಗೆ ಅರ್ಪಿಸಿದರು.
೧೯೩೯-೪೦ ಭಾರತದ ರಾಷ್ಟ್ರಾಧ್ಯಕ್ಷರಾಗಿದ್ದ ವಿ.ವಿ. ಗಿರಿಯವರು ಆಲೂರಿನಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
೧೯೪೦ ಬಳ್ಳಾರಿ ಜಿಲ್ಲೆ ಹರಿಜನೋದ್ಧಾರಕರ ಸಂಘಕ್ಕೆ ಶ್ರೀ ಭೀಮರಾಯರು ಅಧ್ಯಕ್ಷ ರಾಗಿದ್ದರು.
೧೯೪೨ ಆಗಸ್ಟ್ ೮ ರಂದು ಭಾರತ ಬಿಟ್ಟು ತೊಲಗಿ ಚಳುವಳಿ.
೧೯೪೨ ಅಕ್ಟೋಬರ್ ೨೪ ಬಿ.ಎಂ. ಮರಳಸಿದ್ದಯ್ಯ ಮತ್ತಿತರ ಸ್ವಾತಂತ್ರ್ಯ ಹೋರಾಟ ಗಾರರು ಅಲ್ಲೀಪುರ ಸೆರಮನೆಗೆ ಹೋದರು.
೧೯೪೩ ಜನವರಿ ೧೨, ಸ್ವಾತಂತ್ರ್ಯ ಹೋರಾಟಗಾರ ಟಿ.ಬಿ. ಕೇಶವರಾಯರ ಬಿಡುಗಡೆ.
೧೯೪೩ ಜನವರಿ ೨೬, ಬಳ್ಳಾರಿಯ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಕಾರ್ಖಾನೆಯ ವ್ಯವಹಾರದ ಬಗ್ಗೆ ಸರ್ಕಾರದ ಕಾರ್ಯದರ್ಶಿಯವರ ಪತ್ರ.
೧೯೪೩ ವಾಡ್ಲಾ ಹಾಲಿನಲ್ಲಿ ಜಿಲ್ಲೆಯ ಪ್ರಥಮ ಸಾಹಿತ್ಯ ಪರಿಷತ್ತಿನ ಅಧಿವೇಶನ.
೧೯೪೪ ಮೇ ೨೯, ಸಕ್ಕರೆ ಕಾರ್ಖಾನೆಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬೋನಸ್ ಹೆಚ್ಚಿಸಲು ಆದೇಶ ಹೊರಡಿಸಿತು.
೧೯೪೫ ಮುಂಬಯಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನಕ್ಕೆ ಬಳ್ಳಾರಿಯ ಹಲವಾರು ಮುಖಂಡರು ಹೋಗಿದ್ದರು.
೧೯೪೫ ತುಂಗಭದ್ರಾ ಜಲಾಶಯದ ಆಣೆಕಟ್ಟು ನಿರ್ಮಾಣ.
೧೯೪೬ ಕಮಲಾಪುರದಲ್ಲಿ ಹರಿಜನ ಮಂತ್ರಿ ಕೊರ್ಮಯ್ಯನವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.
೧೯೪೬ ಮೇ ೧೮, ೩೬ನೇ ಮದ್ರಾಸ್ ಪ್ರಾವಿನ್ಸಿಯಲ್ ಇಡಿಎಲ್ ಕಾನ್ಫರೆನ್ಸ್ ಬಳ್ಳಾರಿ ಹೆಸರಿನಲ್ಲಿ ಕಮಲಾಪುರದ ಸರ್ಕಾರಿ ಬಂಗಲೆ ಮುಂದೆ ನಡೆಯಿತು.
೧೯೪೬ ಅಕ್ಟೋಬರ್ ೧೩, ಹಂಪಿಯಲ್ಲಿ ಆಂಧ್ರ ಪರಿಷತ್ತು ನಡೆಸುತ್ತಾರೆಂದು ಬಳ್ಳಾರಿಯ ಸಿಂದಗಿ ಸಿದ್ದಬಸಪ್ಪ, ಬಿ.ಎಂ. ಮರಳಸಿದ್ದಯ್ಯ ಮುಂತಾದವರು ಉಗ್ರವಾದ ಪ್ರತಿಭಟನೆ ಮಾಡಿದರು.
೧೯೪೬ ಜನಾಬ್ ಅಬ್ದುಲ್ ರವೂಫ್ ಸಾಹೇಬರು ಮುನ್ಸಿಪಲ್ ಮುಸ್ಲಿಂ ಹೈಸ್ಕೂಲ್ ಸ್ಥಾಪಿಸಿದರು. ಬಳ್ಳಾರಿಗೆ ಮದ್ರಾಸ್ ಸರ್ಕಾರದ ಮಂತ್ರಿ ವಿ.ವಿ. ಗಿರಿ ಭೇಟಿ.
೧೯೪೭ ಆಗಸ್ಟ್ ೧೫, ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಣೆ, ಸ್ವಾತಂತ್ರ್ಯ ಸಿಕ್ಕ ನೆನಪಿಗಾಗಿ ಸಭೆ, ಸಮಾರಂಭಗಳು ನಡೆದವು. ಬಳ್ಳಾರಿ ಮದ್ರಾಸ್ ಅಧಿಪತ್ಯದಲ್ಲಿ ಉಳಿಯಿತು.
೧೯೪೭ ಉಜ್ಜನಿ ಸದ್ಧರ್ಮ ಪೀಠವು ಜ್ಞಾನಗುರು ವಿದ್ಯಾಪೀಠ ಸಂಸ್ಥೆಯನ್ನು ಸ್ಥಾಪಿಸಿತು.
೧೯೪೮ ಜೂನ್ ೨೮, ಜಿಲ್ಲೆಯಲ್ಲಿ ಕ್ಷಾಮ ಪರಿಹಾರ ಕಾಮಗಾರಿ.
೧೯೪೮ ಜಿಲ್ಲೆಯಲ್ಲಿ ಕ್ಷಾಮ ಬರದ ಕಾರಣ ರಸ್ತೆ ನಿರ್ಮಿಸಲು ಜಮೀನುಗಳನ್ನು ವಶಪಡಿಸಿ ಕೊಂಡವರಿಗೆ ರೂ. ೭೫,೦೦೦ ಅನುದಾನ ಬಳ್ಳಾರಿ ಜಿಲ್ಲಾ ಬೋರ್ಡ್‌ಗೆ ಮದ್ರಾಸ್ ಸರ್ಕಾರ ನೀಡಿತು.
೧೯೪೮ ನವೆಂಬರ್ ೩೦, ಕಂಪ್ಲಿ ಪಂಚಾಯಿತಿ ಬೋರ್ಡಿನಿಂದ ರೂ. ೨೦೦ರನ್ನು ಮಹಾತ್ಮ ಗಾಂಧಿ ಸ್ಮಾರಕ ನಿಧಿಗೆ ದೇಣಿಗೆ.
೧೯೪೯ ಗ್ರಾಮಗಳಲ್ಲಿ ವಿದ್ಯುಚ್ಛಕ್ತಿ ವ್ಯವಸ್ಥೆ.
೧೯೪೯ ಬಳ್ಳಾರಿ ಜಿಲ್ಲಾ ವಾಲ್ಮೀಕಿ ನಾಯಕ ವಿದ್ಯಾಭಿವೃದ್ದಿ ಸಂಘ ಸ್ಥಾಪನೆ.
೧೯೫೦ ಅಕ್ಟೋಬರ್ ೧೩, ಪಂಚವಾರ್ಷಿಕ ಯೋಜನೆಯಲ್ಲಿ ಉಜ್ಜನಿಯಿಂದ ತೂಲ ಹಳ್ಳಿಗೆ ರಸ್ತೆ ನಿರ್ಮಾಣ.
೧೯೫೦ ಸೊಂಡೂರನ್ನು ತಾಲ್ಲೂಕಾಗಿ ಮಾಡಲಾಯಿತು. ನಂತರ ಮಲ್ಲಾಪುರವನ್ನು (ಹೊಸಪೇಟೆ ತಾಲ್ಲೂಕಿನಿಂದ ೧೪ ಗ್ರಾಮ, ಹಡಗಲಿಯಿಂದ ೨೪ ಗ್ರಾಮಗಳನ್ನು ಸೇರಿಸಿ) ತಾಲ್ಲೂಕು ಮಾಡಲಾಯಿತು.
೧೯೫೦ ಅಕ್ಟೋಬರ್ ೧೩, ಪಂಚವಾರ್ಷಿಕ ಯೋಜನೆಯಲ್ಲಿ ೨ನೇ ಮಹಾಯುದ್ಧದ ನಂತರ ಉಜ್ಜನಿಯಿಂದ ತೂಲಹಳ್ಳಿಗೆ ಹೋಗುವ ರಸ್ತೆಯನ್ನು ಸೇರ್ಪಡೆ ಮಾಡಿದರು.
೧೯೫೧ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಪುರುಷೋತ್ತಮ ದಾಸ್ ಟಂಡನ್ ಬಳ್ಳಾರಿಗೆ ಭೇಟಿ.
೧೯೫೨ ಹರಪನಹಳ್ಳಿ ಮತ್ತು ಹಡಗಲಿಯಿಂದ ಬಾಗಳಿ ಎಂಬ ಐತಿಹಾಸಿಕ ಸ್ಥಳಕ್ಕೆ ರಸ್ತೆ ನಿರ್ಮಾಣ.
೧೯೫೨ ಪಂಡಿತ ಜವಾಹರ್‌ಲಾಲ ನೆಹರು ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಬಳ್ಳಾರಿಗೆ ಭೇಟಿ.
೧೯೫೨ ಜಿಲ್ಲೆ ಮತ್ತು ವೃತ್ತಗಳ ಮರುವಿಂಗಡಣೆ ಏಪ್ರೀಲ್ ೨೬, ಮುಸ್ಲಿಮರು, ಭಾರತೀಯ ಕ್ರಿಶ್ಚಿಯನ್ನರು ಮತ್ತು ಯುರೋಪಿಯನ್ನರಿಗೆ ಮೀಸಲಾಗಿದ್ದ ಜಿಲ್ಲಾ ಬೋರ್ಡ್ ಚುನಾಯಿತ ಸದಸ್ಯರ ಸ್ಥಾನಗಳನ್ನು ಸಾಮಾನ್ಯ ವರ್ಗದ ಸ್ಥಾನಗಳೆಂದು ಮಾರ್ಪಡಿಸಿದರು.
೧೯೫೨ ಕೆಳಹಂತದ ಭವಾನಿ ಯೋಜನೆಯಿಂದ ಮುಳುಗಡೆಯಾದ ಕಣಿವೆ ಬಸಾಪುರ ಹಳ್ಳಿಯನ್ನು ಪಂಚಾಯತ್ ಬೋರ್ಡನಿಂದ ರಕ್ಷಣೆ.
೧೯೫೨ ಬಳ್ಳಾರಿ ಪ್ರತಿಷ್ಠಿತ ಅಲೀಪುರಂ ಮತ್ತು ಸೆಂಟ್ರಲ್ ಜೈಲುಗಳಿಗೆ ಬೇಳೆ ಸರಬರಾಜು ಮಾಡುವ ಒಪ್ಪಂದವನ್ನು ಹೈದರಾಬಾದಿನಲ್ಲಿ ಆಗ ನಡೆಯುತ್ತಿದ್ದ ವ್ಯಾಪಕ ಗಲಭೆ ಮತ್ತು ರಾಜಕೀಯ ಅಸ್ಥಿರತೆಯಿಂದ ನಿಲ್ಲಿಸಲಾಯಿತು.
೧೯೫೩ ಭಾರತದ ಉಪರಾಷ್ಟ್ರಪತಿಗಳಾಗಿದ್ದ ಡಾ. ಎಸ್. ರಾಧಾಕೃಷ್ಣನ್ ಬಳ್ಳಾರಿಗೆ ಭೇಟಿ. ಬಳ್ಳಾರಿ ಜಿಲ್ಲೆಯಲ್ಲಿ ೪೬೪ ಎಲಿಮೆಂಟರಿ ಮತ್ತು ೧೭ ಮಾಧ್ಯಮಿಕ ಶಾಲೆಗಳಿದ್ದವು.
೧೯೫೩ ಫೆಬ್ರವರಿ ೨೮, ಸೊಂಡೂರು ಸರ್ಕಾರ ತರನಗೇರಿ (ತಾರಾನಗರ) ಹಳ್ಳಿಯನ್ನು ಸ್ವಾಧೀನಪಡಿಸಿಕೊಂಡಿತು.
೧೯೫೩ ಜಿಲ್ಲೆಯ ೭ ತಾಲ್ಲೂಕುಗಳು ಮೈಸೂರಿಗೆ ಸೇರಿಸಲು ಆದೇಶ (ಸಿರುಗುಪ್ಪ, ಹೊಸಪೇಟೆ, ಸಂಡೂರು, ಹೂವಿನಹಡಗಲಿ, ಹರಪನಹಳ್ಳಿ, ಕೂಡ್ಲಿಗಿ ಮತ್ತು ಬಳ್ಳಾರಿ ತಾಲ್ಲೂಕುಗಳು).
೧೯೫೩ ಅಕ್ಟೋಬರ್ ೧, ಬಳ್ಳಾರಿ ಜಿಲ್ಲೆ ಮೈಸೂರು ರಾಜ್ಯವನ್ನು ಸೇರಿ ಹೊಸ ಮೈಸೂರಿನ ಜಿಲ್ಲೆಯೆಂದೇ ಖ್ಯಾತಿ ಪಡೆಯಿತು (ಆಗಿನ ಜನಸಂಖ್ಯೆ ೭,೭೩,೭೧೨ ಇತ್ತು).
೧೯೫೫ ಅಕ್ಟೋಬರ್ ೧, ಬಳ್ಳಾರಿ ಜಿಲ್ಲೆಯ ಆದೋನಿ, ಆಲೂರು, ರಾಯದುರ್ಗಗಳೆಂದು ಮರು ತುಂಡಾಯಿತು.
೧೯೬೬ ನವೆಂಬರ್ ೨೮, ಅಲ್ಲೀಪುರದ ಹನುಮಂತಪ್ಪ ಇತರರ ಹೋರಾಟದ ಫಲವಾಗಿ ಸಂಡೂರಿನ ರಾಜ ಕುಮಾರಸ್ವಾಮಿ ದೇವಾಲಯವನ್ನು ಭಕ್ತಾಧಿಗಳಾಗಿ ಮುಕ್ತ ಪ್ರವೇಶ ನೀಡಿದರು.
೧೯೭೦-೭೨ ಶ್ರೀಮತಿ ಇಂದಿರಾಗಾಂಧಿ ಬಳ್ಳಾರಿಗೆ ಮೂರು ಬಾರಿ ಭೇಟಿ.
೧೯೭೧ ಬಳ್ಳಾರಿ ಸಿಟಿ ಕಾಂಗ್ರೆಸ್ ಸಮ್ಮೇಳನದಲ್ಲಿ ಎಚ್. ಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಭಾಸ್ಕರ್ ನಾಯ್ಡು, ವಿ.ಕೆ.ಆರ್.ವಿ.ರಾವ್, ಇಂದಿರಾಗಾಂಧಿ, ದೇವರಾಜ ಅರಸ್, ಅಲ್ಲೀಪುರದ ಜಿ. ಹನುಮಂತಪ್ಪ ಭಾಗವಹಿಸಿದ್ದರು.
೧೯೭೧ ಬ್ಯಾಂಕುಗಳ ರಾಷ್ಟ್ರೀಕರಣ ಗರೀಬಿಹಠಾವೊ ಸ್ಲೋಗನ್‌ಗಳ ಪ್ರದರ್ಶನ.
೧೯೭೩ ಆಗಸ್ಟ್ ೧೧, ರೈತರ ಒತ್ತಾಯದಿಂದ ಜಿಲ್ಲಾಧಿಕಾರಿಯ ವರ್ಗಾವಣೆ.
೧೯೭೮ ಏಪ್ರಿಲ್ ೧೬, ಕುಡತಿನಿ ನಿತ್ಯಾನಂದಾಶ್ರಮದಲ್ಲಿ ತಾಲ್ಲೂಕು ಮಟ್ಟದ ಸರ್ವ ಧರ್ಮ ಸಮನ್ವಯ ಸಮ್ಮೇಳನ.
೧೯೭೮ ಅಲ್ಲೀಪುರದಲ್ಲಿ ಶ್ರೀ ವಾಲ್ಮೀಕಿ ಗುರುಕುಲ ಸ್ಥಾಪನೆ.
೧೯೮೦ ಜನತಾಪಕ್ಷದ ಪಾರ್ಲಿಮೆಂಟ್ ಚುನಾವಣೆ ಪ್ರಚಾರಕ್ಕೆ ಬಿಹಾರದ ಮುಖ್ಯಮಂತ್ರಿ ಕರ್ಪೂರ್ ಠಾಕೂರ್ ಬಂದಿದ್ದು, ಬಳ್ಳಾರಿಯ ಅಲ್ಲೀಪುರದಲ್ಲಿ ಕಂಪ್ಲಿರಾಯ ಗಿರಿಜನ ಪ್ರೌಢಶಾಲೆ ಮತ್ತು ಕುಮಾರರಾಮ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿ ದರು.
೧೯೮೧ ಮಾರ್ಚ್ ೮, ಬಳ್ಳಾರಿ ಜಿಲ್ಲಾ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ.
೧೯೮೩ ಆಗಸ್ಟ್ ೨೧, ವೈ. ನಾಗೇಶ ಶಾಸ್ತ್ರಿಗಳ ವಿರಚಿತ ಮರಿಶಿವಯೋಗೀಶ್ವರ ಪುರಾಣ ಪ್ರವಚನ ಎರಡು ವಾರಗಳ ಕಾಲ ಕೋಳೂರುನಲ್ಲಿ ನಡೆಯಿತು.
೧೯೯೦ ರಾಜೀವಗಾಂಧಿಯವರು ಬಳ್ಳಾರಿಗೆ (ಹಂಪಿ) ಭೇಟಿ.
೧೯೯೧ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆ.
೨೦೦೪ ಜುಲೈ ಪ್ರತ್ಯೇಕ ರಾಯಲಸೀಮಾ ರಾಜ್ಯಕ್ಕೆ ಬಳ್ಳಾರಿ ಜಿಲ್ಲೆಯನ್ನು ಸೇರಿಸುವ ಸುದ್ದಿಗೆ ಬಳ್ಳಾರಿಯಲ್ಲಿ ಚಳುವಳಿ ಆರಂಭ.