ಬಳ್ಳಾರಿ ಪೇಟೆಯೊಳಗೆ ನಮ್ಮ ಗಡಿಗೆ ವೀರಭದ್ರಪ್ಪನವರು
ಮೂರು ಕುದುರೆ ಕಟ್ಟಿ ಮೆರೆಸಿದರಂತೆ ರಥ
ಗಡಗಡ ಗುಡಿದಂಗೆ ಮೇಗವಳ್ಳಿ ಯೋಗವಾಗಿ
ಮಂದಿರ ಬಿಟ್ಟು ಬಂದಂಗಾಯ್ತು ಮನ್ಮಥ.

ಏ, ಲಕ್ಷ್ಮಿ ಕಾಳ್ಯವಿಳ್ಯ ಪುರುಷ ರಕ್ಷಿಸಿ
ಬಿಟ್ಟಾನು ಗುರುವೆ ನಿಕ್ಷೆ ತಿಳಿಯಬೇಕು ಸದ್ಗುಣ
ಸಂಭಾಧೀತ, ವಜ್ರ, ವೈಢೂರ್ಯ ಮಾಣಿಕ್ಯ ಮುತ್ತು.
ರತ್ನ ಖಚಿತ ಉಂಗುರ ಬೆರಳಿಗೆ ಸರಿನ ಚೌಕ ಎದಿಯ ಮೇಲೆ ಕುಬ್ಬೆತಾಯ್ತ.

ಕೀರ್ತಿಯುಳ್ಳ ಪುರಷನಂತೆ ಪೂರ್ತಿಗುರುವಿನ
ಅಂತಃಕರಣ ರಸರಸ ಅನ್ನ ರಾಜಭೋಜಾಮೃತ
ಬಗ್ಗಿ ಮ್ಯಾಲೆ ಕುಂತಕೊಂಡು
ಜಗ್ಗಿ ಹಿಡಕೊಂಡ ಮೂರು ಕುದುರೆ
ಮಗ್ಗಿಮಲ್ಲಿ ಹರಳದಂಗೆ ಅತೀ ಜಾಗ್ರತಾ

ರಾಜಾಧೀರಾಜ ಗಂಭೀರ ರಥವೇರಿ
ಸುಗುಣ ಕೃಷ್ಣೇಂದ್ರ
ಏನು ಹೇಳಲಿ ಕಾಮ ದ್ವಾರ
ಬೆರಗಾಯಿತು ಬಳ್ಳಾರಿ ಶಹರ.

ಪಡೆದು ಬಂದರಂತೆ ಪೂಜೆ ಶಿವ ನಿಧಿಯಲ್ಲಿ
ನಿಯಮನಿಜವೆಂದು ತಿಳಿಯಬೇಕು
ನಾ ಪೂಜಿತಾ
ಗಡಗಡ ಗುಡಿಗಿದಂಗೆ ಮೇಗವಳ್ಳಿ ಯೋಗವಾಗಿ
ಮಂದಿರ ಬಿಟ್ಟು ಬಂದಗಾಯ್ತು ಮನ್ಮಥ.

ಐದು ಹಂತಸ್ತು ಬಂಗಲಿ ಬಹದೂರ್ ಶಾಲಾ ಬಳ್ಳಾರಿ
ಪೈಕಿ ಗಡಿಗೆಯವರ ಮುಂದೆ ಇದ್ದ ಬುದ್ದಿಯಲ್ಲಿ
ಬೊಂಬಾಯಿ ಬಂಗಲೆ ಮದ್ರಾಸ್ ಕೋರ್ಟು ರಾಣಿ ತನಕ ನೋಡಿದರಂತೆ
ಮಾತಿನ ವಿಪುರ ಚಾನೆ ಸಾಹೇಬರು ಹೆಚ್ಚಾದಲ್ಲಿ
ಗವರ್ನರ್ ದೊರೆಗಳಿಗೆಲ್ಲಾ ಗೊತ್ತು ಗಡಿಗೆಯವರ ಮನಸ್ಸಿನ ಕೀರ್ತಿ
ಪಡೆದು ಬಂದರಂತೆ ಅವರು ಬೇಕಾದಲ್ಲಿ

ಪಂಥ ಹಿಡಿದ ಮೇಲೆ ಅವರು ಎಂಥ ಕೆಲಸವಾದರೇನು
ಸ್ವಂತ ಮಾಡಸ್ತರ ಹಿಡಿದು ಅದನ್ನೆಲ್ಲ
ಬಂಗಲೆಯೊಳಗೆ ಕನ್ನಡಿ ಸಾಲು ಕುರ್ಚಿ ಮೇಜುಗಳಾವು
ಹಚ್ಚಿ ನಿಲುವುಗನ್ನಡಿ ಹಚ್ಚಿ ಇಟ್ಟಾರಂತೆ ಪ್ರಭಾವಳಿ

ನಂದಾ ದಿವ್ಯಗೆ ಗಂಡ ಕಸ್ತೂರಿ ಅಂದವಾಗಿ ಧರಿಸಿಕೊಂಡು
ಮಡಿಸಿ ಮಡಿಸಿ ಕೊಡುತಾರಂತೆ ವೀಳ್ಯಾದೆಲೆ

ಜಗನ್ಮೋಹಿನಿ ಬಂಗಲೇ ಸ್ವಂತ, ದೊರೆಸದರಿನ ಮೇಲೆ ಕುಂತಾ
ಸರ್ವ ಮಾತಿನಲ್ಲಿ ಸಮರಂತ
ಈ ಸೃಷ್ಟಿಯೊಳಗೆ ಶ್ರೀಮಂತ
ಪಡೆದು ಬಂದರಂತೆ ಪೂಜೆ ಶಿವನ ನಿಧಿಯಲ್ಲಿ ನಿಯಮ
ನಿಜವೆಂದು ತಿಳಿಯಬೇಕು ಲೌ ಪೂಜಿತಾ

ಗಡಗಡ ಗುಡಿಗಿದಂಗೆ ಮೇಗವಳ್ಳಿ ಯೋಗವಾಗಿ
ಮಂದಿರ ಬಿಟ್ಟು ಬಂದಂಗಾಯ್ತು ಮನ್ಮಥ.

ಆದಶಮಿ ದಿವಸ ಒಳ್ಳೆ ಹತ್ತಿ ಆಗುತಯಿತೆ ದಸರಿಹಬ್ಬದಾಗೆ ನೋಡಿ
ಐದನೆ ಪೂಜೆ ನೇಮಿಸ್ತೀನಿ ರಾತ್ರೆ ದಿನ
ವೀರಭದ್ರಾ ದೇವರು ಗುಡಿಯ ಮುಂದೆ ಅಂಧ್ರ ಹಾಕಿಸಿ
ಆರತಿ ಮಾಡಿದ್ರಂತೆ ಏನು ಹೇಳಲಯ್ಯ ಅವರ ಸಮಸ್ತುರಾ

ದಿನಸುವರಿ ಗುಳಾಪುಹಾಕಿ ದಿರುಸುಬಾಣ
ನಿಲುವುಗನ್ನಡಿ ಹಚ್ಚಿ ಇಟ್ಟರಂತೆ ನಿಂತುರುಯ ಕುರ್ಚಿಯ ಮೇಲೆ ಜನ
ತಾಳ ಮೇಳ ಕಾಸ ಉಡುಪು ಕಾಳೆಕರ್ಣಿ ಬಿರುದಾವಳಿ
ತಾನೇ ನಿಂತುಕೊಂಡು ಕುದ್ದು ಮೂನ್ನೂರು ಇಲಾಲಿ ಕಟ್ಟಿಗೆಸುಡಾ
ತಾರಂತೆ ನೋಡ್ದಾರೆ ಜನ.

ಹುಗುಡ ಬಂದ ಮೇಲೆ ಬನ್ನಿ ನಡೆದ ಸುದ್ದಿ ಹೇಳುವೆನು ಕೇಳು
ದಿನಸವರಿ ಸುಟಾರಂತೆ ಬಿರುಸುಬಾಣ

ಆವತ್ತು ಶುಕ್ರವಾರ ಸಂತೆ
ಹಳ್ಳಿ ಜನ ಹೋಗಲಿಲ್ಲಂತೆ
ಅಪೇಕ್ಷೆ ನೋಡಬೇಕಂತೆ
ಒಳ್ಳೆ ಆರತಿ ಹಾಗೂ ತಯಿತಂತ ಹಳ್ಳಿ ಜನ ಕರಸಿದ್ಧವ್ಣ
ಒಳ್ಳೆ ಅರೇಸಿ ಆಯಿತೆಂದು
ಬಿರುಸುಬಾಣದ ಮೇಲೆ ಬರೆಸಿದ ನಾಮಾಂಕಿತ
ಗಡಗಡ ಗುಡಿದಂಗೆ ಮೇಗವಳ್ಳಿಯೋಗವಾಗಿ
ಮಂದಿರ ಬಿಟ್ಟು ಬಂದಂಗಾಯ್ತು ಮನ್ಮಥ.
ಪ್ರಯತ್ನ ಮಾಡಿ ಕುಂತಾರಂತೆ ಪ್ರಸ್ತಸಾಗಲಿಕ್ಕೆ ಮುಂದೆ
ಬುಂದಿ ಲೊಡ್ಡು ಮಾಡಿಕೊಂಡು ಬುದ್ದಿಗುಣ
ಸುದ್ದಿಯಾಯ್ತು ಊರಾಗೆಲ್ಲಾ, ಸಿದ್ಧವಾಯ್ತು ಕಣ್ಣಂಗಳಲ್ಲಿ
ಬಿದ್ದು ಬಂದು ನಿಂತಾರಂತೆ ಬಿಗಿದು ಜನ

ದಕ್ಷಿಣ ತಾಂಬೂಲ ಕೊಟ್ಟಾರಂತೆ, ತಕ್ಷಣ ಅವರ ಕರೆಕಳಿಸಿ
ಅಕಣೆ ಕೊಟ್ಟ ರುಮಾಲು ಕುಪ್ಪಾಸ
ರೊಟ್ಟಿನ ಪ್ರಸ್ತಾಪ ಸಾಗಿತೆಂದು ಅಡ್ಡಿಯಿಲ್ಲದ ಖರ್ಚಿಕೇಳಿ
ಬಡ್ಡಿಗೆ ಬಂದ ಬುದ್ದಿಯಲ್ಲಾ ಆವತ್ತಿನ ದಿನ
ಅವರ ಸಿರಿಯ ಸಂಪತ್ತು, ಕೈಲಾಸ ಇಳಿದಂಗಿತ್ತು
ವಜ್ರ ವೈಢೂರ್ಯ ಮಾಣಿಕ್ಯ ಮುತ್ತು ಉಂಗುರಕ್ಕೆ ರತ್ನ ಖಚ್ಚಿತ್ತು

ಬೇಕಾದಷ್ಟು ದ್ರವ್ಯ ಮನೆಯಲ್ಲಿ ಅನೇಕ ಮಂದಿ ಚೆಲ್ಲಿದರಂತೆ
ಬಡವರಿಗೆಲ್ಲಾ ಆಪತ್ತು ಬಂದಿರುವಾಗ ತಾಳಿ ಬಂತು ಆಗ ಪ್ರಾಣಿ
ದುರುಮುಖಚಿ ನಾಮ ಸಂವತ್ಸರದಾಗೆ
ಅಷ್ಟ ದಿಕ್ಕಿನ ಬ್ರಷ್ಟಕಾಲ
ಕಷ್ಟ ಬಂದು ಒದಗಿ ಹೋಗಿತ್ತು ಮಳೆ
ಹಸ್ತ ಚಿತ್ತ ಸ್ವಾತಿ ಇವು ಹದಿನೆಂಟು ಜಾತಿ ಕಾಣಲಿಲ್ಲ.
ಹ್ಯಾಗೆ ಮಾಡಲಿ ಮುಂಗಾರಿ ಬೆಳೆ

ಆಗದು ಲೋಟಿ ಆಯಿತೆಂದು ಸುದ್ದಿ ಬಂದು
ಜಿಲ್ಲಾ ಕಲೆಕ್ಟರ್ ಸಾಹೇಬರು ತೂಗಿದರಂತೆ ತೊಲೆ
ತುರ್ತುಯಾಡಕ್ಕೆ ಆರಂಭಮಾಡಿ ತುರ್ತಿನ ಮೇಲೆ
ಬಂಡೆ ಸಾನಾರತಿ ಸರತಿ ಮಾಡಿದರಂತೆ
ಬಡರದೊಯ್ತು ಕಾಳಿ

ಆರು ಸೇರು ಅಕ್ಕಿ ಜೋಳ ಎಂಟು ಸೇರಿಗೆ ನಿಂತು
ಮುಂದೆ ನಿಂತ ಕಾರ್ತಿಕ ಬಂದು ಸ್ವಾತಿ ಮಳೆ

ದೊರೆ ಗವರ್ನರ್ ಸಾಹೇಬರ ಬಂದ
ಬಳ್ಳಾರಿಗೆ ಮದರಾಸಿನಿಂದ
ಬಡವರಿಗೆ ಆಪತ್ತು ತಂದ
ಈಂಗ್ಯಾಕೆ ಮಾಡುತಿರೆಂದ

ವರ್ತಕರೆಲ್ಲಾ ವರಳುತ್ತಾರೆ
ನಿಂತಿರುವಾಗ ಮರಯಾಗೆ, ಮಾಡಿದರು ಅನುಭೋಗತ
ಗಡಗಡ ಗುಡಿದಂಗೆ ಮೇಗವಳ್ಳಿ ಯೋಗವಾಗಿ
ಮಂದಿರ ಬಿಟ್ಟು ಬಂದಂಗಾಯ್ತು ಮನ್ಮಥ.

ರಾಣಿ ಬರುತ್ತಾರಂತ ವರ್ತಕರೆಲ್ಲಾ ಒಂದಾಗಿ
ದಾರಿಗೆಲ್ಲಾ ಅಂಧ್ರ ಹಾಕಿಸಿದಂತೆ ಕರಿ
ಜಿಲ್ಲಾ ಕಲೆಕ್ಟರ್ ಜಡಿಯೆಲ್ಲಾ ಹತ್ತು ಮಂದಿ ಕೂಡಿಯಿದ್ರು
ಜಿಲ್ಲಾ ಜಡ್ಜಿಯೆಲ್ಲಾದುರಿಗೆ ಗವರ್ನರ್ ದೊರೆ
ಕರ್ನೂಲು ದೊರೆ ನೋಡಿ ಬರುತನಂತೆ
ಕುದುರೆ ಜೋಡಿ ಕಟ್ಟಿಕೊಂಡು ಪೋಷಾಕಮಾಡಿ
ಹೊರಟಾರಂತೆ ಗಡಿಗೆ ವೀರಭದ್ರಪ್ಪನವರೇ
ಎಂಟು ಒಡೆದ ಗಂಟೆಯಲ್ಲಿ ಕುಂಜೆತಾಗ ಜನ ಜಾತ್ರೆ ಹೊರಟು
ಒಂಭತ್ತು ಮಂದಿ ನೋಡುತ್ತಾನೆ ದೊರೆ
ಸಿಂಧಗಿ ಮರಿ ಸಿದ್ದಪ್ಪನವರು ವಂದಿಕೆ ಮಾಡಿ
ಇಂಗ್ಲಿಷ್ ಮಾತು ಗೂಡ್ ಮಾನ್, ಆಲ್ ರೈಟ್ ಎಂದಾನು ದೊರೆ.

ದೊರೆ ಗೌವರ್ನರ್ ಸಾಹೇರ್ಬು ಹೀಗೆ
ನಾಳೆ ಬರುತಿನಾಂದ ಊರಾಗೆ
ಊಟ ಉಪಚಾರ ಬಂದ ಹಾಗೆ
ಮಂದಿ ಕುಳಿತಾರು ಮಾಳಿಗೆ ಮ್ಯಾಲೆ

ದಂಡು ಬಂದು ಇಳಿತರಣ್ಣ
ಗುಂಡು ಫಿರಂಗಿ ಹಾರಿದವಂತೆ
ಗೌವರ್ನರ್ ಸಾಹೇಬರು ಸುತ್ತಮುತ್ತ
ಗಡಿಗೆ ವೀರಭದ್ರಪ್ಪನವರ
ಗಡಗಡ ಗುಡಿದಂಗ ಮೇಗವಳ್ಳಿ ಯೋಗವಾಗಿ
ಮಂದಿರ ಬಿಟ್ಟು ಬಂದಂಗಾಯ್ತು ಮನ್ಮಥ

ಮಾತಿನ ಸಾಬಿನ ಮರದಲ್ಲಿ ಕುರುವೆ
ಸ್ವಾತಿ ವಾದಿ ಕಾರ್ತಿ ಹೋದ ಮೇಲೆ
ಕುಡಿಸಿದರಂತೆ ಹಕ್ಕಿ ಗಾಡ ಎಂಟು ಸೇರಿ ಹಾಕಿದರಂತೆ
ಒಂಟು ಹೋಯ್ತು ಹತ್ತು ಪ್ರಾಣ
ಗಂಡು ಬಿಡು ಎಂಬುತಾರೆ ಬಡ ಬಡ
ಒಳ್ಳೆ ಮಾರ್ಯಾದೆಯಿಂದ ಕರಿಸದರಂತೆ
ಒಳ್ಳೆ ಅಕ್ಕಿ ಗಡಿಗೆನವರು ಒಳ್ಳೆ ಬಂದು ಬಿದ್ದವಂತೆ ಮತ್ತೇನುಸುತಡ
ಸಾರಿದರಂತೆ ಸಂತೆ ದಿವಸ
ಮಾರಿದಂತೆ ಒಂಭತ್ತು ಸೇರು
ವರ್ತಕರೆಲ್ಲಾ ಒರಳುತಾರೆ ಗಡಗಡ

ಹನ್ನೊಂದು ಸೇರು ಇದ್ದ ರಾಗಿ
ಹದಿಮೂರುಸೇರು ಕೂಡಿಸುವಂತ ಸತ್ತೂರು ಸಾಹೇಬರು
ಡಂಗೂರು ಹೊಡಿಸಿಬಿಟ್ಟನು ಗಡ
ಗಂಟು ಆದರೆ ಸಾಕುಶಿವನೆ
ಒಂಟು ಬಂದೆವು ಗಡಿಗೆ ನಾವು
ದಂಡು ಬಂದು ನಿಂತಿತು ಅನ್ನದ ಋಣ.

ಕೌಲು ಬಜಾರಕೆ ನಾ ಹೋಗಿ
ಹದಿಮೂರು ಕೊಡಿತಿನಂದ ರಾಗಿ
ತುಂಬಿಟ್ಟ ವರಿಮ್ಮುಖವಾಗಿ
ಉರುಲಾಕೊಂತಿವಿ ಮನೆಗೋಗಿ
ಅಗಿದ ಕೇಳೋದಿಲ್ಲ ನಾವು ನಗದಿ ರೂಪಾಯಿ ಜೋಳ
ಅಗ್ದಿ ಕೇಳದಿಲ್ಲ ನಾವು ನಗ್ದಿ
ಬ್ಯಾಂಕ್ ತಗಾದೆ ಸಾಲಬಂತು ಅತಿ ಜಾಗ್ರತೆ
ಗಡಗಡ ಗುಡಿಗಿದಂಗೆ ಮೇಗವಳ್ಳಿ ಯೋಗವಾಗಿ
ಮಂದಿರ ಬಿಟ್ಟು ಬಂದಂಗಾಯ್ತು ಮನ್ಮಥ.

ಎತ್ತು, ಎಮ್ಮೆ, ದನ, ಕರ, ಕತ್ತೆ, ಕುದುರೆ
ಸಾಯುತಾವೆ ಗೊತ್ತು ಇಲ್ಲದಂಗೆ ಹೋಯ್ತು ನಾಯಿ ನರಿ.
ನೂರು ರೂಪಾಯಿ ಬಾಳುವ ಎತ್ತು
ಮೂರೆ ರೂಪಾಯಿಗೊಗುತಿತ್ತು
ಅಣಿಗೊಂದು ಸಿಗುತ್ತಿತ್ತು ಕುರಿಮರಿ
ಇರುವೆ ಮಂದಿರವ ಕೋಟಿ ಮರಿವಿನಲ್ಲಿ ಮಾಯನ ಬಿಟ್ಟನೆ ಶ್ರೀ ಹರಿ

ತಂದೆಯ ಮಾಳಿಯ ರಾಯ ನೀನು
ಮುಂದೆ ಕೊಟ್ಟು ಕಳುಹಿಸಬೇಕು
ಹಿಂದೆ ಮಾಡಿದಂಗೆ ಭುಮಿಯ ಮ್ಯಾಲೆ ಸೂರಿ
ಲಾಳಿ ಹೋಗಿ ವಾಳಾಗಿ ಹೋದ ತಾಳಿ ಸಹಿತ ಮಾರಿಕೊಂಡು
ಏನು ಬಾಳುವೆ ಮಾಡಿಬೇಕು
ಸತ್ತ ಬಾಳುವೆ ಕಲ್ಲು ಮುಳ್ಳಿ
ದೇವರಲ್ಲ ಬಳ್ಳುಕಟ್ಟಿ ಕುಂತಿದ್ದವೆ
ಮೂರು ದಿವಸ ಆಯ್ತು ಪೂಜಿ ಪತ್ಸರೆ (ಬತ್ತಲೆ)

ಏನು ಮಾಡಲಿ ಬಾಳ್ವೆ ನಾವು
ಬರುದಿಲ್ಲ ನಮಗೆ ಸಾವು
ಭ್ರಷ್ಟಕಾಲ ಬಂದು ಒದಗಿತು
ಯಾರ ಮುಂದೆ ಹೇಳಬೇಕು ನಾವು
ಅನರಾಗಿ ಮಳೆ ಬಂತು ದಿನವೊಯ್ತು
ವಾರ ರಾತ್ರಿ ಜನರಂಬುತಾರೆ ನೋಡ್ರಿ ಹೊಯ್ತು ಬರ
ಒಂದೇ ಮಳಗಿ ತಂದೆ ಜೀವನ ಹೆಂಗೇ ಹೋಯ್ತು
ಅಂಬ ಭಾರ ಬಂತು ೨೩ ಬಿತ್ತು ರಾಗಿಧರ
ಜಿಲ್ಲಾ ಕಲೆಕ್ಟರ್ ಜಡ್ಜ್‌ಯೆಲ್ಲಾ ಹತ್ತು ಮಂದಿ
ಕೂಡಿ ಇದ್ರು ಸಿಂಧಗಿ ಮನೆ ಸಿದ್ದಪ್ಪನವರು
ಬರೆಸಿಕೊಟ್ಟಾನು ಚರ ನೆಲ್ಲೂರು ಸಾಬಿ
ಚಿತ್ರೆದೊಳಗೆ ಮುದ್ರೆ ಮಾಡಿ ಹಾಕಿಸಬೇಕು
ಕುದ್ದು ನೀವು ನಿಂತು ಕೊಂಡು ನಮಸ್ತುರಾ
ಪದ ಮುಗಿಯಿತು ಹಾಡಿನೆನಿಬಲ್ಲಾ
ಕುಂತು ಕೇಳಿರಯ್ಯ ಜನರೆಲ್ಲಾ
ಕಾದ್ರು ಸಾಹೇಬ್ರ ಮಾಡಿದ ಕೇಲ
ಹೊಡಿಯಬೇಕು ಡೊಂಡಕದ ಮೇಲೆ ಕೈಯ
ಅಹಬಡ್ಡಿನ ಬಸಪ್ಪನವರು ಅಡ್ಡಿಯಿಲ್ಲದೆ
ಮುದ್ದೆ ಹಾಕಿಸಿದರೂ ಬಡವರು ಉಮ್ಮುತಾರೆ
ಬಾಳ ಪುಣ್ಯಾತ್ಮರು.
ಗಡಗಡ ಗುಡಿದಂಗೆ ಮೇಗವಳ್ಳಿ ಯೋಗವಾಗಿ
ಮಂದಿರ ಬಿಟ್ಟು ಬಂದಂಗಾಯ್ತು ಮನ್ಮಥ.

(ವಸಾಹತುಶಾಹಿಯ ಧೋರಣೆ, ಶೋಷಣೆ ಜೊತೆಗೆ ಕ್ಷಾಮ, ಬರಗಾಲ, ಕೆಲವೇ ಶ್ರೀಮಂತರಿದ್ದ ಬಗ್ಗೆ ಈ ಲಾವಣಿಯಲ್ಲಿ ಸರ್ವರೀತಿಯ ಲಕ್ಷಣಗಳಲ್ಲಿ ಲಾವಣಿಕಾರ ಪೂಜಾರಹಳ್ಳಿ ಪಾಲಯ್ಯ ಹಾಡಿರುವುದು ನಿಜಕ್ಕೂ ಶ್ಲಾಘನೀಯ, ಈ ಬಗ್ಗೆ ಪ್ರತ್ಯೇಕ ವಿಶ್ಲೇಷಣೆ ಮಾಡಲಾಗಿದೆ.)