Categories
ಅಕಾಡೆಮಿ ಪ್ರಶಸ್ತಿ ಪುರಸ್ಕೃತರು (೧೯೫೯ – ೬೦ ರಿಂದ ೨೦೦೭-೦೮ವರೆಗೆ) ಕನ್ನಡ ಕಲೆ ನೃತ್ಯ ಪುಸ್ತಕಗಳಿಂದ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ವಸುಂಧರ ದೊರೆಸ್ವಾಮಿ

ಶ್ರೀಮತಿ ವಸುಂಧರ ದೊರೆಸ್ವಾಮಿಯವರು ದಿವಂಗತ ಕೆ. ರಾಜರತ್ನಂ ಪಿಳ್ಳೆಯವರಲ್ಲಿ ಶಿಕ್ಷಣ ಪಡೆದು, ವಿದ್ವತ್‌ನಲ್ಲಿ ಪ್ರಥಮ ಶ್ರೇಣಿ  ಪಡೆದಿರುವರಲ್ಲದೆ, ಪಂಡನಲ್ಲೂರು ಶೈಲಿಯ ಇಂದಿನ ಪ್ರಮುಖ ನರ್ತಕರಲ್ಲಿ ಒಬ್ಬರಾಗಿದ್ದಾರೆ. ರಾಜ್ಯ, ರಾಷ್ಟ್ರದ ಪ್ರಮುಖ ಸಭೆ-ಸಮ್ಮೇಳನಗಳಲ್ಲಿ ನರ್ತಿಸಿರುವ ಶ್ರೀಮತಿಯವರು ಸಿಂಗಾಪುರ್‌ನಲ್ಲೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ದೂರದರ್ಶನದ ರಾಷ್ಟ್ರೀಯ ಜಾಲದಲ್ಲೂ ಇವರ ನೃತ್ಯ ಬಿತ್ತರಗೊಂಡಿದೆ. “ಯೋಗ ಮತ್ತು ಭರತನಾಟ್ಯ” ಕುರಿತು ಕೌಲನಿಕ ಅಧ್ಯಯನ ಮಾಡಿರುವ ಈಕೆ ಹಲವಾರು ನೃತ್ಯ ರೂಪಕಗಳನ್ನು ನಿರ್ದೇಶಿಸಿದ್ದಾರೆ. ಮೈಸೂರಿನ “ವಸುಂಧರಾ ಫರ್‌ಫಾರ್ಮಿಂಗ್ ಆಟ್ಸ್‌! ಸೆಂಟರ್” ಮೂಲಕ ಕಿರಿಯರಿಗೆ ನೃತ್ಯ ಶಿಕ್ಷಣವನ್ನೂ ನೀಡುತ್ತಿದ್ದಾರೆ. ಎರಡು ಅವಧಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯೆಯೂ ಆಗಿದ್ದ ವಸುಂಧರಾ ಅವರಿಗೆ ಸುರ ಸಿಂಗಾರ ಸಂಸದ್‌ನ ’ಶಿಂಗಾರ ಮಣಿ’ ಬಿರುದೂ ಸಂದಿದೆ. ಕ್ರಿಯಾಶೀಲ ನರ್ತಕಿ ಶ್ರೀಮತಿ ವಸುಂಧರ ದೊರೆಸ್ವಾಮಿ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೧೯೯೦-೯೧ರ ಪ್ರಶಸ್ತಿಯನ್ನು “ಕರ್ನಾಟಕ ಕಲಾ ತಿಲಕ” ಬಿರುದಿನೊಂದಿಗೆ ನೀಡಿ ಗೌರವಿಸಿದೆ.