ಪಲ್ಲವಿ : ವಸುದೇವ ಪುತ್ರ ರಮಣೀಯ ಗಾತ್ರ ಶ್ರೀವತ್ಸಲಾ
ಸುರರೊಳು ಶ್ರೇಷ್ಠ ಆದಿತ್ಯ ರಕ್ಷ ವನಮಾಲೀ

ಚರಣ :  ದೇವಕೀ ನಂದ ದೇವದೇವಾ ನಂದ ಪರಿಹೃತ ತಾಪ
ವರಗಳ ಸುರಿಸುವನೆ ನರನಾರಾಯಣ ದೀನ ವರಕರ

ಪುರ ಸಂರಕ್ಷಕ ಪೂತನಾ ಮೋಕ್ಷಕ ವರ ಪರಂಧಾಮಾ
ತ್ರಯಗುಣ ಪ್ರೇರಣ ದ್ವಾರಕಾಧೀಶ ನಿನಗೆ ವಂದನಂ

ರಮಾ ರಮಣನೇ ರಾಮಾವತಾರ ಹರೇ ಮುಕುಂದ
ಜಯ ಜಯ ಕೃಷ್ಣ ಜಯ ಜಯ ಕೃಷ್ಣ ಜಯ ಜಯ ಕೃಷ್ಣ