ಬೆಂಗಳೂರು ವಿಶ್ವವಿದ್ಯಾಲಯವು ಪದವಿ ತರಗತಿಗಳಲ್ಲಿ ಸೆಮಿಸ್ಟರ್ ಪದ್ಧತಿಯನ್ನು ಅಳವಡಿಸಿದ್ದು, ಈ ಪದ್ಧಥಿಗೆ ಅನುಗುಣವಾಗಿ, ಪೂರಕವಾಗುವ ಹಾಗೆ ಪದವಿ ಪಠ್ಯಪುಸ್ತಕಗಳನ್ನು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರ ನೇತೃತ್ವದಲ್ಲಿ ಅಧ್ಯಯನ ಮಂಡಲಿ ಹಾಗು ಪರಿಶೀಲನಾ ಸಮಿತಿಯ ಸಲಹೆ ಸೂಚನೆಗಳಂತೆ ಸಿದ್ಧಪಡಿಸಲಾಗಿದೆ.

ಪುಸ್ತಕಗಳು ಸಕಾಲದಲ್ಲಿ ಹೊರಬರಲು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ||ಸಿದ್ಧಲಿಂಗಯ್ಯನವರು ಹಾಗು ಪರಿಶೀಲನಾ ಸಮಿತಿಯ ಸದಸ್ಯರು ಅನುವು ಮಾಡಿಕೊಟ್ಟಿದ್ದಾರೆ. ಅವರಿಗೆ ನಾನು ಕೃತಜ್ಞನಾಗಿದ್ದೇನೆ.

ಕುಲಪತಿಗಳಾದ ಪ್ರೊ|| ಹೆಚ್.ಎ.ರಂಗನಾಥ್‌ರವರ ಪ್ರೋತ್ಸಾಹದಿಂದ ಈಗ ಈ ಕೃತಿಯು ಪುನರ್ಮುದ್ರಣಗೊಳ್ಳುತ್ತಿದೆ ಹಾಗು ಈ ಯೋಜನೆಗೆ ತೀವ್ರ ಉತ್ಸಾಹ ತೋರಿದ್ದಾರೆ. ಅವರಿಗೆ ನನ್ನ ವಂದನೆಗಳು. ಇದನ್ನು ಅಂದವಾಗಿ ಮುದ್ರಿಸಿದ ಮುದ್ರಣಾಲಯ ಸಿಬ್ಬಂದಿಗೂ ನಾನು ಕೃತಜ್ಞ.

ಡಾ.ಡಿ. ಸರ್ವೋತ್ತಮ ಕಾಮತ್
ನಿರ್ದೇಶಕ
ಪ್ರಸಾರಾಂಗ ಮತ್ತು ಮುದ್ರಣಾಲಯ