ಬೆಂಗಳೂರು ವಿಶ್ವವಿದ್ಯಾಲಯವು ೨೦೦೪-೦೫ನೇ ವರ್ಷದಿಂದ ಸೆಮಿಸ್ಟರ್ ಪದ್ಧತಿಯನ್ನು ಪದವಿ ತರಗತಿಗೆ ಅಳವಡಿಸಿದೆ. ವಿಜ್ಞಾನ ವಿಷಯಗಳಲ್ಲಿ ಈ ಪದ್ಧತಿಯು ಹೆಚ್ಚು ಉಪಯುಕ್ತವಾಗುವಂತೆಯೇ ಸಾಹಿತ್ಯ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿಯೂ ಹೆಚ್ಚು ಪ್ರಸ್ತುತವಾಗಬೇಕೆನ್ನುವ ಸದಿಚ್ಛೆ ವಿಶ್ವವಿದ್ಯಾಲಯದ್ದಾಗಿದೆ. ಸೆಮಿಸ್ಟರ್ ಪದ್ಧತಿಯಲ್ಲಿ ವಿದ್ಯಾರ್ಥಿಗಳು ವಿಷಯಗಳನ್ನು ಹೆಚ್ಚು ಪ್ರಸ್ತುತವೂ, ಸತತ ಅಭ್ಯಾಸ ನಿರತರಾಗಿ ಪರಿಣಿತಿ ಪಡೆಯುವಂತೆಯೂ ಮಾಡುವ ಹಿನ್ನೆಲೆಯಲ್ಲಿ, ಪಠ್ಯಕ್ರಮವನ್ನು ರೂಪುಗೊಳಿಸುವಂತೆ ಉತ್ತೇಜನ ಕೊಡಲಾಗಿದೆ. ಈಗ ಈ ಪಠ್ಯಪುಸ್ತಕವು ಪುನರ್ಮುದ್ರಣಗೊಳ್ಳುತ್ತಿದೆ.

ಈ ಹಿನ್ನೆಲೆಯಲ್ಲಿ ಕನ್ನಡ ಅಧ್ಯಯನ ಮಂಡಲಿಯ ಸಲಹೆಯಂತೆ ಪರಿಶೀಲನಾ ಸಮಿತಿಯು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ|| ಸಿದ್ಧಲಿಂಗಯ್ಯನವರ ನೇತೃತ್ವದಲ್ಲಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿದೆ.

ಈ ಪುಸ್ತಕಗಳು ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗುತ್ತವೆ ಎನ್ನುವ ನಂಬಿಕೆ ನನ್ನದು. ಪಠ್ಯಪುಸ್ತಕಗಳನ್ನು ಸಿದ್ಧಪಡಿಸಲು ನೆರವಾದ ಎಲ್ಲರಿಗೂ ವಿಶ್ವವಿದ್ಯಾಲಯ ಅಭಾರಿಯಾಗಿದೆ.

ಈ ಪಠ್ಯಪುಸ್ತಕಗಳನ್ನು ಅಲ್ಪಕಾಲದಲ್ಲಿ ಸುಂದರವಾಗಿ ಪುನರ್ಮುದ್ರಣ ಮಾಡಿದ ಪ್ರಸಾರಾಂಗ ಮತ್ತು ಮುದ್ರಣಾಲಯದ ನಿರ್ದೇಶಕರಾದ ಡಾ.ಡಿ. ಸರ್ವೋತ್ತಮ ಕಾಮತ್ ಹಾಗೂ ಅವರ ಸಿಬ್ಬಂದಿಗೆ ನನ್ನ ಅಭಿನಂದನೆಗಳು.

ಪ್ರೊ|| ಹೆಚ್.. ರಂಗನಾಥ್
ಕುಲಪತಿಗಳು

* * *