ಸ್ವರೂಪ: ಸಂಕ್ಷೇಪ ಲೇಖನವನ್ನು ಸಾರಾಂಶಗ್ರಹಣ, ಅಡಕ ಪತ್ರ ರಚನೆ ಸಂಗ್ರಹ ಲೇಖನ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಇಂಗ್ಲೀಷಿನಲ್ಲಿ ಅದನ್ನು ಪ್ರೀಸಿಸ್ ರೈಟಿಂಗ್ ಎನ್ನುತ್ತಾರೆ. ‘ಪ್ರೀಸಿನ್’ ಎಂಬುದು ಪ್ರೆಂಚ್ ಭಾಷೆಯ ‘ಪ್ರೆಸೀ’ ಎಂಬ ಮೂಲ ಪದದಿಂದ ಇಂಗ್ಲೀಷಿಗೆ ಬಂದಿದೆ. ಇದರ ಅರ್ಥ ಚಿಕ್ಕ ಹಾಗು ಚೊಕ್ಕ ಹೇಳಿಕೆ ಎಂದು.

ಭಾವಾರ್ಥ ನಿರೂಪಣೆ, ತಾತ್ಪರ್ಯ ರಚನೆ, ಅರ್ಥ ವಿಸ್ತರಣೆ, ಪತ್ರಿಕಾವರದಿ, ಪುಸ್ತಕ ಸಂಗ್ರಹ ಪತ್ರದ ಟಿಪ್ಪಣಿ ಮೊದಲಾದವು ಸಂಕ್ಷೇಪೀಕರಣದ ಲಕ್ಷಣಗಳನ್ನೇ ಹೊಂದಿದ್ದರೂ ಅವುಗಳಿಂದ ಭಿನ್ನವಾದುದು ಸಂಕ್ಷೇಪ ಲೇಖನ ಕಲೆ.

ಭಾವಾರ್ಥ ನಿರೂಪಣೆಯಲ್ಲಿ ಪ್ರಾಸಂಗಿಕವಾಗಿ ಅನೇಕ ವಿಚಾರಗಳು ಸೇರಿ ಮೂಲಕ್ಕಿಂತ ವಿಸ್ತಾರವಾಗಬಹುದು; ತಾತ್ಪರ್ಯ ರಚನೆ, ಮುಖ್ಯಾಂಶ ಸಂಗ್ರಹ ಅಥವಾ ಪದ್ಯರೂಪದ ಸರಳ ಗದ್ಯರೂಪವಾಗಬಹುದು. ಗಾದೆ ಅಥವಾ ಸೂಕ್ತಿ ಅಥವಾ ವಿವಿಧ ವಿಷಯಗಳನ್ನು ಅರ್ಥವಿಸ್ತರಣೆ ಮಾಡಿ ಬರೆಯುವಾಗ ಮೂಲದಲ್ಲಿ ಏನಿದೆ ಎಂಬುದು ಬೀಜಪ್ರಾಯವಾಗಿದ್ದು ಕಲ್ಪನೆ ಪಾಂಡಿತ್ಯ ಅಭ್ಯಾಸಗಳಿಂದ ಲೇಖಕ ವಿಸ್ತರಿಸಿರುತ್ತಾನೆ. ಪತ್ರಿಕಾ ವರದಿಗಾರ ಹಲವಾರು ಮುಖ್ಯಾಂಶಗಳನ್ನು ಹಿಡಿದು ತನ್ನದೇ ಆದ ರೀತಿಯಲ್ಲೂ ಪತ್ರಿಕಾವಕಾಶಕ್ಕೆ ತಕ್ಕಂತೆ ಅರ್ಥಾತ್ ಕಾಲಂಗೆ ತಕ್ಕಂತೆ ರೂಪುಗೊಳಿಸುತ್ತಾನೆ. ಪುಸ್ತಕ ಸಂಗ್ರಹಕ್ಕೆ ಮೂಲದ ಗಾತ್ರಕ್ಕಿಂತ ಮೂರನೆಯ ಒಂದು ಭಾಗ ಇರಬೇಕೆಂಬ ನಿಯಮವಿಲ್ಲ. ಆದಷ್ಟು ಮೂಲದ ವಾಕ್ಯಗಳಲ್ಲೇ ವಿಷಯ ಸಂಗ್ರಹ ಮಾಡುವುದನ್ನು ಕಾಣುತ್ತೇವೆ ಮತ್ತು ಮೂಲದ ಸಂಭಾಷಣಾ ಶೈಲಿ, ವರ್ಣನೆ ಇತ್ಯಾದಿಗಳನ್ನು ಭಾಗಶಃ ಸಂಗ್ರಹಗಳಲ್ಲಿ ಬಳಕೆಯಾಗಿರುತ್ತದೆ. ಆದರೆ ಸಂಕ್ಷೇಪಿಕರಣವು ಅಪ್ರತ್ಯಕ್ಷ ಕಥನದ ದಾಟಿಯಲ್ಲಿ ಸಾಗಿರುತ್ತದೆ.

ಆದ್ದರಿಂದ ಸಂಕ್ಷೇಪ ಲೇಖನವೆಂದರೆ ಹೆಸರೇ ಹೇಳುವಂತೆ ‘ಒಂದು ಗದ್ಯಭಾಗವನ್ನು – ಲೇಖನ ಗಾತ್ರದ ಬರೆಹವನ್ನು ಮೂಲದಲ್ಲಿನ ಅಮುಖ್ಯ ಭಾಗಗಳನ್ನು ಬಿಟ್ಟು ಮುಖ್ಯ ಭಾಗಗಳನ್ನು ಗ್ರಹಿಸಿ ವಾಚನೀಯವಾಗುವಂತೆ ಸುಸಂಬಂಧ ರೀತಿಯಲ್ಲಿ ರೂಪಿಸಿದ ಚಿಕ್ಕ ಹಾಗು ಚೊಕ್ಕ ಬರೆಹ’ ಎನ್ನಬಹುದು.

ಸಂಕ್ಷೇಪ ಲೇಖನ ಕಲೆ ವಿಶಿಷ್ಟವಾದುದು; ಅಭ್ಯಾಸಬಲ-ಭಾಷಾ ಹಿಡಿತ- ಸಾರಾಗ್ರಹಣ ಶಕ್ತಿ, ವಿವೇಚನಾ ಬಲ ಹಾಗೂ ವ್ಯಕ್ತಿಯ ಭಾವಾಭಿವ್ಯಕ್ತಿಯ ಶಕ್ತಿಗೆ ತಕ್ಕಂತೆ ರೂಪುಗೊಳ್ಳುವ ಕಲೆಯಾಗಿದೆ. ಆದ ಕಾರಣ ಸಂಕ್ಷೇಪಿಕರಣವನ್ನು ಒಬ್ಬರು ಮಾಡಿದಂತೆ ಮತ್ತೊಬ್ಬರು ಮಾಡಲಾಗುವುದಿಲ್ಲ. ಒಂದು ಗದ್ಯಭಾಗವನ್ನು ಹತ್ತು ಜನ ಸಂಕ್ಷೇಪಗೊಳಿಸಿದರೆ ಆ ಸಂಕ್ಷೇಪ ಲೇಖನಗಳು ಹತ್ತು ಬಗೆಯವಾಗಿರುತ್ತದೆ. ಅಷ್ಟೇ ಅಲ್ಲ ವೈವಿಧ್ಯಮಯವೂ ಆಗಿರುತ್ತದೆ.

ಅಡಕ ಪತ್ರ ರಚನೆ, ಅಡಕಪತ್ರಲೇಖನ ಎಂಬ ಪದಗಳನ್ನು ಸಂಕ್ಷೇಪ ಲೇಖನಕ್ಕೆ ಪರ್ಯಾಯ ಶಬ್ದಗಳಾಗಿ ಕೆಲವರು ಬಳಸಿದ್ದಾರೆ. ಸಾಮಾನ್ಯವಾಗಿ ಪತ್ರದೊಂದಿಗೆ ಕಳಿಸಲು ಲಗತ್ತಿಸುವ ಪತ್ರಗಳಿಗೆ ‘ಅಡಕಗಳು’ ಅಥವಾ ಅಡಕ ಪತ್ರಗಳು ಎನ್ನುತ್ತಾರೆ. ಆದ್ದರಿಂದ ಸಂಕ್ಷೇಪ ಲೇಖನದ ಅರ್ಥದಲ್ಲಿಯೂ ಆ ಪದಬಳಕೆ ಅಷ್ಟು ಸಮಂಜಸವೆನಿಸಲಾರದು. ಇನ್ನು ಸಂಗ್ರಹ ಲೇಖನವೆಂದರೆ, ಸಂಗ್ರಹದ ಗಾತ್ರ ನಿರ್ಧಾರ ಮಾಡಲು ಸಾಧ್ಯವಿಲ್ಲ ಮತ್ತು ಸಂಗ್ರಹದಲ್ಲಿ ಸಂಗ್ರಹಾಕಾರನಿಗೆ ಸ್ವಾತಂತ್ರ್ಯ ಹೆಚ್ಚು; ಸಂಗ್ರಹ ಮಾಡುವಾಗ ತನ್ನ ಮಾತುಗಳನ್ನು ಯಾವ ಪ್ರಮಾಣದಲ್ಲಾದರೂ ಸೇರ್ಪಡೆ ಮಾಡಬಹುದು. ಆದ ಕಾರಣ ಸಾರಾಂಶಗ್ರಹಣ ಅಥವಾ ಸಂಕ್ಷೇಪಲೇಖನ ಎನ್ನುವುದು ಸೂಕ್ತ.

ಮಹತ್ವ: ವಾಣಿಜ್ಯ ಪತ್ರರಚನೆಯ ಅಂಗವಾಗಿ ವಿವಿಧಾಂಗಗಳು, ವಿನ್ಯಾಸ, ಭಾಷಾ ಸ್ವರೂಪ, ಲೇಖನ ಚಿಹ್ನೆಗಳ ಬಳಕೆ ಮೊದಲಾದ ಅಂಶಗಳನ್ನು ಗಮನಿಸುವುದರ ಜತಗೇ ಅಭ್ಯಸಿಸಬೇಕಾದ ವಿಷಯವೆಂದರೆ ‘ಸಂಕ್ಷೇಪೀಕರಣ’ ಕಲೆ.

ಆಧುನಿಕ ವಾಣಿಜ್ಯ ಪ್ರಪಂಚದಲ್ಲಿ ವ್ಯವಹಾರಗಳು ಅತಿಶೀಘ್ರವಾಗಿ ಸಾಗುತ್ತಿವೆ; ಕಾಲ ಉಳಿತಾಯ, ಸೌಲಭ್ಯಾಕಾಂಕ್ಷೆ, ಮಿತವ್ಯಯ ಬಳಕೆ ಅಂಶಗಳು ಪ್ರಧಾನ ಪಾತ್ರ ವಹಿಸಿದೆ. ಈ ಕಾರಣಗಳಿಂದ ಏನೇ ವಿಷಯವಿದ್ದರೂ ಸ್ವಲ್ಪದರಲ್ಲಿ ತಿಳಿಯಬೇಕು ಎಂಬ ಮನೋಭಾವ ರೂಢಿಗತವಾಗಿದೆ. ಅನೇಕ ಸಂದರ್ಭಗಳಲ್ಲಿ ವಿಷಯಗಳ ಸಾರಗ್ರಹಣ ಮಾಡಬೇಕಾದ ಸಂದರ್ಭಗಳು ವಾಣಿಜ್ಯರಂಗದಲ್ಲಿ ಒದಗುತ್ತವೆ. ಬ್ಯಾಂಕು ವ್ಯವಹಾರದಲ್ಲಿ ಗ್ರಾಹಕರು ದೂರುಗಳನ್ನು ಸವಿಸ್ತಾರವಾಗಿ ವರ್ಣಿಸಿ ಬರೆದಿದ್ದರೆ, ಏಕವ್ಯಕ್ತಿ ವರದಿ ಅಥವಾ ಬಹುವ್ಯಕ್ತಿ ವರದಿ ಸುದೀರ್ಘವಾಗಿದ್ದರೆ, ಕಂಪನಿ ಅಧ್ಯಕ್ಷ ಭಾಷಣಗಳು ಅತಿ ದೀರ್ಘವಾಗಿದ್ದರೆ ಕಾರ್ಯದರ್ಶಿ ವರದಿಗಳು ಬಲು ಉದ್ದವಾಗಿದ್ದರೆ ಸಂಬಂಧಪಟ್ಟ ವ್ಯಕ್ತಿಗಳ ಗಮನಕ್ಕೆ ತರಬೇಕಾದಾಗ ಸಾರವತ್ತಾಗಿ ಸಂಕ್ಷಿಪ್ತವಾಗಿ ತಿಳಿಸುವ ಸಂದರ್ಭಗಳು ಬರುತ್ತವೆ, ಆ ಗ ಸಂಕ್ಷೇಪಿಕರಣ ಕಲೆ ಬಳಕೆಯಾಗುತ್ತದೆ.

ಕೇವಲ ಪತ್ರವ್ಯವಹಾರಗಳ ಒಕ್ಕಣೆಗಳನ್ನೂ, ವರದಿಗಳನ್ನೂ, ನಡೆವಳಿಕೆಗಳನ್ನೂ ಸಂಕ್ಷೇಪಿಸುವುದಕ್ಕೆ ಮಾತ್ರ ಈ ಕಲೆ ಮೀಸಲಾಗಿಲ್ಲ. ಭಾಷೆ-ಸಾಹಿತ್ಯಕ್ಕೆ ಸಂಬಂಧಿಸಿದ ಅನೇಕ ಕ್ಷೇತ್ರಗಳಿಗೂ ಇದು ಉಪಯುಕ್ತ ಕಲೆ ಎನ್ನಿಸಿದೆ. ಕಥನ, ವಾದ, ವಿವರಣೆ, ಸಂವಾದ, ಭಾಷಣ, ಸಾಕ್ಷ್ಯ, ಪತ್ರ, ಚರ್ಚೆ, ವರದಿ, ಸಾಹಿತ್ಯ ಸಮ್ಮೇಳನಗಳ ಗೋಷ್ಟಿಗಳಲ್ಲಿಯ ಭಾಷಣ-ಲೇಖನ-ಚರ್ಚೆ ಮೊದಲಾದವುಗಳನ್ನು ಸಂಕ್ಷೇಪಿಸಿ ಹೇಳುವ ಅಗತ್ಯ ಬೀಳುತ್ತದೆ.

ನಿಯತಕಾಲಿಕೆಗಳಲ್ಲಿ ಪುಸ್ತಕ ಪರಿಚಯ, ಪುಸ್ತಕ ವಿಮರ್ಶೆ, ಗ್ರಂಥ ಸಂಗ್ರಹ ಮುಂತಾದವನ್ನು ಮಾಡುವಾಗ, ಹಳೆಗನ್ನಡ, ನಡುಗನ್ನಡ ಕಾವ್ಯ ಸಂಗ್ರಹಗಳ ರಚನೆಯಲ್ಲಿ ಸಂಕ್ಷೇಪೀಕರಣ ತತ್ವಗಳ ಬಳಕೆಯಾಗುವುದನ್ನು ಕಾಣಬಹುದು.

ಸಂಕ್ಷೇಪ ಲೇಖನವೆಂದರೆ ನಿರ್ದಿಷ್ಟಾರ್ಥದಲ್ಲಿ ವಾಣಿಜ್ಯ ಪತ್ರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೀಗೆ ಹೇಳಬಹುದು; ಸಾಮಾನ್ಯವಾಗಿ ಕೊಟ್ಟ ಗದ್ಯಭಾಗದ ಮೂರನೆಯ ಒಂದು ಭಾಗಕ್ಕೆ (೧/೩) ಮೂಲವನ್ನು ಸಾರವತ್ತಾಗಿ, ಕರಮಬದ್ಧವಾಗಿ ಸರಳ ನಿರೂಪಣೆಯಲ್ಲಿ, ಶೀರ್ಷಿಕೆಯನ್ನು ನೀಡಿ ನಿರೂಪಿಸುವ ಬರೆಹ ಎನ್ನಬಹುದು.

ಸಂಕ್ಷೇಪ ಲೇಖನದಿಂದ ಅನಗತ್ಯ ಸಂಗತಿಗಳ ವಾಚನದ ವೇಳೆ ಉಳಿಯುತ್ತದೆ. ಮುಖ್ಯಾಂಶಗಳನ್ನಷ್ಟೇ ಗ್ರಹಿಸಲು ಸಾಧ್ಯವಾಗುತ್ತದೆ; ಶೀಘ್ರವಾಗಿ ವ್ಯವಹರಿಸಲು ಶಕ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯಲ್ಲಿ ಸಾರಸಂಗ್ರಹಣ ಕಲೆ ಸಿದ್ದಿಸುತ್ತದೆ; ಪತ್ರಿಕೋದ್ಯೋಗಿಗಳ ವೃತ್ತಿಗೆ ಸಹಾಯಕವಾಗುತ್ತದೆ. ಒಟ್ಟಿನಲ್ಲಿ ಇದೊಂದು ಉಪಯುಕ್ತ ಕಲೆಯಾಗಿದೆ. ಇದರ ಪ್ರಯೋಜನವನ್ನು ವಿವಿಧ ಕ್ಷೇತ್ರಗಳ ಅಧಿಕಾರಿಗಳೂ ಪಡೆದುಕೊಳ್ಳಬಹುದು; ಸರ್ಕಾರಿ ಕಚೇರಿಗಳಲ್ಲಿ ಸಂಕ್ಷೇಪಕಾರನ್ನು ನೇಮಿಸಿಕೊಳ್ಳುವುದನ್ನಿಲ್ಲಿ ಸ್ಮರಿಸಿಕೊಳ್ಳಬಹುದು.

ಮುಖ್ಯಲಕ್ಷಣಗಳು

೧. ಸಂಕ್ಷಿಪ್ತತೆ: ಸಂಕ್ಷೇಪ ಲೇಖನವು ನಿರ್ದಿಷ್ಟ ವಿಷಯದ ಭಾಗವನ್ನು ಸಾರವತ್ತಾಗಿ ಸಂಕ್ಷೇಪಿಸಿದ ಗದ್ಯದ ಬರೆಹವಾಗಿರುತ್ತದೆ. ಆದ್ದರಿಂದ ಅಸಂಬದ್ಧ ಸಂಗತಿಗಳಿಗೂ ಅಮುಖ್ಯ ಸಂಗತಿಗಳಿಗೂ ಇಲ್ಲಿ ಎಡೆ ಇರುವುದಿಲ್ಲ. ಗದ್ಯದ ಪದಗಳ ಮೂಲಕ, ಸ್ವತಂತ್ರ ವಾಕ್ಯ ರಚನೆಯ ಮುಖಾಂತರ ಮೂಲದ ಮುಖ್ಯಾಂಶಗಳ ಸಾರಗ್ರಹಣದಿಂದ ಸಂಕ್ಷಿಪ್ತತೆಯನ್ನು ಸಾಧಿಸಲಾಗುತ್ತದೆ. ಸಂಕ್ಷಿಪ್ತತೆಯನ್ನು ಸಾಧಿಸಬೇಕಾದರೆ ಪದಗಳನ್ನೂ ವಾಕ್ಯಗಳನ್ನೂ ಸಂಗ್ರಹಿಸುವ ಕಲೆ ಕರಗತವಾಗಿರಬೇಕು;

ಅ) ಯಾವ ಪದಾರ್ಥಗಳನ್ನು ಕೊಳ್ಳಲು ಎಷ್ಟು ಹಣ ಖರ್ಚು ಮಾಡಬೇಕು ಎಂಬ ವಿವೇಚನೆಯನ್ನು ಮಾಡಿ ಆದಷ್ಟೂ ಕಡಿಮೆ ಹಣ ಖರ್ಚು ಮಾಡುವುದು ಗೃಹಿಣಿಯ ಜಾಣತನ=ಮಿತವ್ಯಯ ಸಾಧನೆ ಗೃಹಿಣಿಯ ಜಾಣ್ಮೆ.

ಆ) ‘‘ಪತ್ರವನ್ನು ಬರೆಯುವಾಗ ಯೋಚಿಸಬೇಕು. ಸಕಾಲದಲ್ಲಿ ನಮಗೆ ತಲುಪಬೇಕು; ತಲುಪದಿದ್ದರೆ ಏನಾಗುತ್ತದೆ? ನಾವು ನಿಮ್ಮ ಪತ್ರಕ್ಕಾಗಿ ಕಾದು ಕಾದು ಕಾಲ ವ್ಯರ್ಥವಾಗುವುದಿಲ್ಲವೇ? ನಿಮ್ಮ ಬಗ್ಗೆ ನಿರಾಸೆಯುಂಟಾಗುವುದಿಲ್ಲವೆ? ನಿಮ್ಮ ಪತ್ರದ ಬಗ್ಗೆ ಆಸಕ್ತಿ ಗೌರವಗಳು ಉಳಿಯಬೇಡವೇ? ನಿಮ್ಮ ಪತ್ರಕ್ಕೆ ಕಾದು ಕಾದು ನಮ್ಮ ವ್ಯವಹಾರ ಕೆಡಿಸಿಕೊಳ್ಳಬೇಕೆ?ಇವೆಲ್ಲವನ್ನೂ ನಮಗಿಂತ ಹೆಚ್ಚಾಗಿ ನೀವೇ ಯೋಚಿಸಬೇಕಾದಂತಹ ಮನವೀಯ ಸಂಗತಿಗಳಾಗಿವೆ.”

ಇದನ್ನು ಹೀಗೆ ಸಂಕ್ಷೇಪಿಸಬಹುದು: ‘ಸಕಾಲಕ್ಕೆ ಪತ್ರ ಬರೆಯಬೇಕು. ಇಲ್ಲದಿದ್ದರೆ ಪತ್ರ ಸ್ವೀಕಾರಿಗಳಿಗೆ ತೊಂದರೆಯಾಗುತ್ತದೆ. ಇದನ್ನು ಮುಖ್ಯವಾಗಿ ಪತ್ರಲೇಖಕರು ಯೋಚಿಸಬೇಕು.

೨. ಸರಳತೆ: ಎಲ್ಲರಿಗೂ ತಿಳಿಯುವಂತಹ ಪದಗಳು ಸಂಗ್ರಹ ಲೇಖನದಲ್ಲಿರಬೇಕು. ವಾಕ್ಯಗಳು ಸರಳವಾಗಿರಬೇಕು. ಆಲಂಕಾರಿಕ ಭಾಷೆ ಕ್ಲೇಶಾಧಿಗಳು ಸಲ್ಲವು ವಾಕ್ಯಗಳು ಚಿಕ್ಕವಾಗಿದ್ದು ಅರ್ಥಗರ್ಭಿತವಾಗಿರಬೇಕು. ಖಚಿತಾರ್ಥದ ಪದಗಳೂ ಸಂದರ್ಭೋಚಿತ ಪ್ರಯೋಗಗಳೂ ಇರಬೇಕು. ಕರ್ತೃಕರ್ಮ ಕ್ರಿಯಾಪದಗಳ ಸಂಬಂಧದಲ್ಲಿ ಪದ ಪ್ರಯೋಗಗಳಲ್ಲಿ ಕ್ರಮಬದ್ಧತೆಗೆ ಲೋಪಬರಬಾರದು. ದರ್ಪಣದಲ್ಲಿ ನಿರ್ಮಲ ಪ್ರತಿಬಿಂಬ ಕಾಣುವಂತೆ ಸಂಕ್ಷೇಪ ಲೇಖನದಲ್ಲಿ ಮೂಲದ ಸ್ಪಷ್ಟ ಚಿತ್ರಣವಿರಬೇಕು. ಮೂಲಕ್ಕಿಂತ ಸಂಕ್ಷೇಪ ಲೇಖನ ಸುಲಭವಾಗಿರಬೇಕು. ಸ್ಪಷ್ಟವಾಗಿರಬೇಕು ಎಂಬುದು ಸಂಕ್ಷೇಪ ಲೇಖನದ ಮುಖ್ಯ ಲಕ್ಷಣಗಳಲ್ಲಿ ಒಂದಾಗಿದೆ.

೩. ಯಥಾರ್ಥತೆ: ಮೂಲದ ಪ್ರಾಮಾಣಿಕ ಅನುಸರಣೆಯೇ ಯಥಾರ್ಥತೆ. ಸರ್ವಜ್ಞ ಹೇಳುವಂತೆ ಕರಿಯ ಕನ್ನಡಿಯಲ್ಲಿ ಅಡಗಿಸಿದ ಹಾಗೆ, ಮೂಲದ ಅಡಕ ರೂಪವೇ ಸಂಕ್ಷೇಪ ಲೇಖನ. ಗಾತ್ರ ಕಿರಿದಾದರೂ ಪಾತ್ರಕ್ಕೆ ಚ್ಯುತಿಬರಬಾರದಂತ, ರಸಭಂಗವಾಗದಂತೆ, ಅರ್ಥಕ್ಕೆ ಧಕ್ಕೆಯಾದಂತೆ ಸಾರಬಿಂಬವೆನಿಸಿದ ಬರೆಹವಾಗಿರುತ್ತದೆ. ಹೀಗಾಗಬೇಕಾದರೆ ಸಂಕ್ಷೇಪಕಾರನು ತನ್ನದೇ ಆದ ಅಭಿಪ್ರಾಯಗಳನ್ನು ಸೇರಿಸಬಾರದು. ವಿಷಯದ ಭಾಗದಲ್ಲಿರುವ ಅಂಕಿ ಅಂಶಗಳನ್ನೂ ವಿಶಿಷ್ಟ ಮಾಹಿತಿಗಳನ್ನೂ ಪಾರಿಭಾಷಿಕ ಪದಗಳನ್ನೂ ವಿಶಿಷ್ಟ ರೀತಿಯಲ್ಲಿ ಉಳಿಸಿಕೊಳ್ಳಬೇಕು.

೪. ಸುಸಂಬದ್ಧತೆ: ವಿಷಯ ಸಂಗ್ರಹ ಮಾಡುವುದು ಎಂದರೆ ಅಲ್ಲಲ್ಲಿ ಕೆಲವು ಪದಗಳನ್ನೂ ವಾಕ್ಯಗಳನ್ನೂ ಸಂಗ್ರಹಿಸುವುದು ಎಂದರ್ಥವಲ್ಲ. ವಿಚಾರಧಾರೆ ನಿರಂತರವಾಗಿರುವ ಹಾಗೆ, ತರ್ಕಬದ್ಧವಾಗಿ ಜೋಡಣೆಯಾಗಿರಬೇಕು. ಗ್ರಹಿಸಿದ ಅಂಶಗಳು ಮಣಿಮಾಲೆಯಾಗಿ ಸೇರ್ಪಡೆಯಾಗಿರಬೇಕು. ಕುಪ್ಪೆ ಕುಪ್ಪೆಯಾಗಿ ಸಂತೆಯಲ್ಲಿ ದವಸಧಾನ್ಯಗಳು ರಾಶಿಹಾಕಿದಂತಿರಬೇಕಿಲ್ಲ; ಒಟ್ಟಂದ ಕೆಡದಂತಿರಬೇಕು. ಅನ್ನ ತಿನ್ನುವವನಿಗೆ ಅಲ್ಲಲ್ಲಿ ಕಲ್ಲು ಸಿಕ್ಕಿದಂತೆ, ಅಲ್ಲಿ, ಇಲ್ಲಿ ವಿಚಾರಗಳು ಸಂಬಂಧವನ್ನು ಕಡಿದುಕೊಳ್ಳಬಾರದು. ವಿದ್ಯುತ್ ಸಂಪರ್ಕ ನಿಂತಂತೆ ವಿಷಯ ಧಾರೆ ನಿಲ್ಲಬಾರದು. ಆದ ಕಾರಣ ಪದ-ಪದಗಳ ಸಂಬಂಧ ಅರ್ಥಪೂರ್ಣವಾಗಿರಬೇಕು; ವಾಕ್ಯ-ವಾಕ್ಯಗಳಿಗೆ ಸಂಬಂಧದಲ್ಲಿ ಅವಿಚ್ಛಿನ್ನತೆ ಕಾಣಬೇಕು; ಸ್ವಂತ ರಚನೆಯಾದರೂ ಮೂಲದಿಂದ ಭಿನ್ನವಲ್ಲ ಎಂಬಂತೆ ಸಂಗ್ರಹ ಲೇಖನದ ರಚನೆಯಿರಬೇಕು. ಆದ್ದರಿಂದ ಓದಿನಲ್ಲಿ ಅಡತಡೆಗಲು ಕಾಣಬಾರದು; ಸುಸಂಬದ್ಧತೆ ಬರಬೇಕಾದರೆ ಸಂಕ್ಷೇಪಕಾರ ಗ್ರಹಿಸಿದ ಅಂಶಗಳನ್ನು ಕ್ರಮಬದ್ದವಾಗಿ ನಿರೂಪಿಸುವ ಶಕ್ತಿಯನ್ನು ಪಡೆದಿರಬೇಕು.

೫. ಗಾತ್ರ ಪ್ರಮಾಣ: ಮೂಲದ ಮೂರನೆಯ ಒಂದು ಭಾಗದಷ್ಟೇ ಸಂಕ್ಷೇಪಗೊಳ್ಳಬೇಕು ಎಂಬುದು ಸಾಮಾನ್ಯ ನಿಯಮ. ಈ ನಿಯಮವನ್ನು ಗಣಿತದ ಲೆಕ್ಕಾಚಾರದಂತೆ ನಿರ್ವಹಿಸಲಾಗದು. ಸ್ಥೂಲವಾಗಿ ಪರಿಗಣಿಸಬೇಕಾದ ಅಂಶವಷ್ಟೇ! ಲೇಖನದ ಗಾತ್ರವನ್ನು, ನಿರ್ದಿಷ್ಟ ಪ್ರಮಾಣಕ್ಕೆ ಇಳಿಸಬೇಕಾದರೆ ಕೆಲವು ನಿಯಮಗಳನ್ನು ಗಮನಿಸಬೇಕು. ಮೂಲದ ಗದ್ಯಭಾಗದಲ್ಲಿ ಇರುವ ಪದಗಳನ್ನು ಎಣಿಸಿ ಆ ಸಂಖ್ಯೆಯಲ್ಲಿ ೧/೩ ಭಾಗಕ್ಕೆ ಇಳಿಸಬೇಕು. ಒಂದೆರಡು ಪದಗಳ ಸಂಖ್ಯೆ ಹೆಚ್ಚು ಕಡಿಮೆಯಾದರೆ ಅಪರಾಧವೇನಿಲ್ಲ. ಪದಗಳನ್ನು ಎಣಿಸುವಾಗ ಸಾಮಾನ್ಯವಾಗಿ ಬಳಸುವ ವಿಧಾನವೆಂದರೆ-ಅಚ್ಚಿನಲ್ಲಿ ಪದದಿಂದ ಪದವನ್ನು ಪ್ರತ್ಯೇಕಿಸಿ ತೋರಿಸಲು ಸ್ವಲ್ಪ ಜಾಗ ಬಿಟ್ಟಿರುತ್ತಾರೆ. ಆ ಲೆಕ್ಕದಲ್ಲಿ ಪದಗಳನ್ನು ಎಣಿಸುವುದು ಸುಲಭ ವಿಧಾನವಾಗಿದೆ.

ಉದಾ: ‘ಆ/ಸಂಗತಿಯನ್ನು/ಹಿಂದಿನ/ಪತ್ರದಲ್ಲಿ/ಮೊದಲೇ ಸೂಚಿಸಿದ್ದೆವು’

ಇಲ್ಲಿ ಆರು ಪದಗಳಿವೆ. ಒಂದು ವೇಳೆ ‘ಆ/ಸಂಗತಿಯನ್ನು/ಹಿಂದಿನ ಪತ್ರದಲ್ಲಿ/ಮೊದಲೇ/ಸೂಚಿಸಿದ್ದೆವು’ ಎಂದು ಅಚ್ಚು ಮಾಡಿದ್ದರೆ ಆಗ ಐದು ಪದಗಳಾಗುತ್ತವೆ. ಸಾಮಾನ್ಯವಾಗಿ ಪದಗಳನ್ನು ಉಚ್ಚಾರ ಮಾಡುವಾಗ ನಿಲ್ಲಿಸುವ ಎಡೆಗಳನ್ನು ಗಮನಿಸಿದರೂ ಎಣಿಕೆ ಸಾಧ್ಯ. ಕೆಲವರು ಕೆಲವು ಪದಗಳನ್ನು ಬಿಡಿಸಿ ಹೇಳುತ್ತಾರೆ, ಕೆಲವರು ಸೇರಿಸಿ ಉಚ್ಚರಿಸುತ್ತಾರೆ. ಅದರಂತೆ ಪದಗಳು ಅಚ್ಚಾಗಿರುತ್ತದೆ. ಇದರಿಂದ ಎಣಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಾಗುತ್ತದೆ. ಆದ್ದರಿಂದಲೇ ಸ್ಥೂಲವಾಗಿ ೧/೩ ಭಾಗ ಎಂಬುದು ಗುರಿಯಾಗಿರಬೇಕು. ಒಂದು ಲೆಕ್ಕಾಚಾರದಂತೆ ಮೂಲದ ೧/೩ ಭಾಗಕ್ಕಿಂತ ೫ ಪದಗಳಿಗಿಂತ ಹೆಚ್ಚಿರಬಾರದು ಅಥವಾ ೫ ಪದಗಳಿಗಿಂತ ಕಡಿಮೆ ಇರಬಾರದು ಎಂಬ ಸೂತ್ರವನ್ನು ಕೆಲವರು ಅನುಸರಿಸುತ್ತಾರೆ.

೬. ಶೈಲಿ: ಸಂಕ್ಷೇಪ ಲೇಖನದ ಮೂಲಭಾಗವು ಆತ್ಮ ಕಥನ ರೂಪ, ಸಂಭಾಷಣಾ ಶೈಲಿ ವರ್ಣನಾರೂಪ, ಹೀಗೆ ಯಾವುದೇ ರೂಪದಲ್ಲಿರಬಹುದು. ಮೂಲರೂಪ ಹೇಗೆ ಇರಲಿ ಸಂಕ್ಷೇಪ ಲೇಖನದ ದಾಟಿ ಅಪರೋಕ್ಷ ಕಥನ ವಿಧಾನದಲ್ಲಿರುತ್ತದೆ. ಮೂಲ ಸಂಗತಿಗಳ ಸಂಗ್ರಹದತ್ತ ಹೆಚ್ಚು ಒತ್ತು ಇರುತ್ತದೆ. ಮೂಲದ ಶೈಲಿ ಹಾಗೇ ಇಳಿಯಲು ಸಾಧ್ಯವಿಲ್ಲ. ವಿಷಯ ಪ್ರಥಮ ಪುರುಷ ಭೂತಕಾಲದಲ್ಲಿ ನಿರೂಪಿತವಾಗಿರುತ್ತದೆ. ಮೂಲ ವಿಷಯವನ್ನು ಕ್ರಮಬದ್ಧತೆಗಾಗಿ ತನ್ನದೇ ಆದ ಕ್ರಮದಲ್ಲಿ ಸಂಕ್ಷೇಪವಾಗಿ ನಿರೂಪಿಸಬಹುದು.  ಆದರೆ ಮೂಲದಿಂದ ತೀರ ಭಿನ್ನವಾಗಲಾರದು.

ರಚನಾ ವಿಧಾನ:

ಕರಡು ರೂಪ:

೧. ಮೂಲಗದ್ಯ ಭಾಗವನ್ನು ಸಮಗ್ರವಾಗಿ, ಏಕಾಗ್ರ ಚಿತ್ತದಿಂದ ಒಮ್ಮೆ ಓದಬೇಕು. ಇಡೀ ಭಾಗದ ಕೇಂದ್ರ ವಿಷಯ ಏನೆಂಬುದನ್ನು  ಗ್ರಹಿಸಬೇಕು.

೨. ಮತ್ತೆ ಓದುತ್ತಾ ಹೋಗಿ ಮುಖ್ಯಾಂಶಗಳನ್ನು ಮುಖ್ಯ ಪದಗಳನ್ನು ಗೆರೆ ಎಳೆದು ಗುರುತಿಸುತ್ತಾ ಹೋಗಬೇಕು.

೩. ಮೂಲಭಾಗದಲ್ಲಿರುವ ಪದಗಳನ್ನು ಎಣಿಸಿ ಒಟ್ಟು ಸಂಖ್ಯೆಯನ್ನು ಒಂದೆಡೆ ಗುರುತು ಮಾಡಿಕೊಳ್ಳಬೇಕು.

೪. ಈಗ ಮುಖ್ಯಾಂಶಗಳನ್ನು ಮುಖ್ಯಪದಗಳನ್ನು ಗಮನಿಸುತ್ತಾ ಸರಳ ರೀತಿಯಲ್ಲಿ ಬರೆಯುತ್ತಾ ಹೋಗಿ, ಬರೆಯುವಾಗ ಹಲವಾರು ಪದಗಳಿಗೆ ಬದಲಾಗಿ ಒಂದೇ ಪದ ಬಳಸಲು ಸಾಧ್ಯವೇ? ಹಲವಾರು ವಾಕ್ಯಗಳನ್ನು ಸಂಯೋಜಿಸಿ ಒಂದೇ ವಾಕ್ಯ ಮಾಡಲಾದಿತೇ? ಎಂದು ಚಿಂತಿಸಿ ಬರೆಯಿರಿ. ಸಾರವತ್ತಾದ ಯಾವ ಅಂಶವೂ ಬಿಟ್ಟು ಹೋಗದಂತೆ, ಹೊಸದಾಗಿ ಕೊಂಡಿಪದಗಳ ವಿನಾ ಮತ್ತೇನೂ ಸೇರಿಸದಂತೆ ಎಚ್ಚರವಹಿಸಿ.

೫. ಈಗ ಕರಡನ್ನು ಒಮ್ಮೆ ಓದು ಒಟ್ಟಂದ ಕೆಟ್ಟಿದೆಯೇ? ತರ್ಕ ಬದ್ಧತೆ ಇದೆಯೇ? ಸ್ಪಷ್ಟತೆ ಕಾಣುತ್ತಿದೆಯೇ? ಎಂಬುದನ್ನು ಪರಿಶೀಲಿಸಿ, ಪದ-ವಾಕ್ಯಗಳನ್ನು ಸರಿಪಡಿಸಿ.

೬. ಈಗ ಕರಡಿನ ಭಾಗದಲ್ಲಿರುವ ಪದಗಳನ್ನು ಎಣಿಸಿ, ಮೂಲಭಾಗದ ಪದಗಳ ಸಂಖ್ಯೆಗೂ ಕರಡು ಭಾಗದ ಪದಗಳ ಸಂಖ್ಯೆಗೂ ಇರುವ ಅಂತರವನ್ನು ಗುರುತಿಸಿ, ಕರಡನ್ನು ಎಷ್ಟು ಪ್ರಮಾಣದಲ್ಲಿ ಕುಗ್ಗಿಸಬೇಕು ಅಥವಾ ಹಿಗ್ಗಿಸಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಿ.

ಪರಿಷ್ಕೃತ ರೂಪ:

೧. ಮೂಲದ ೧/೩ ಭಾಗಕ್ಕಿಂತ ಹೆಚ್ಚಾಗಿದ್ದರೆ ಹೆಚ್ಚಾದ ಪ್ರಮಾಣವನ್ನು ಮನಸ್ಸಿನಲ್ಲಿಟ್ಟುಕೊಂಡು ಕರಡನ್ನು ಮತ್ತೆ ಸಾವಧಾನವಾಗಿ ಓದುತ್ತಾ, ಪದಗಳನ್ನೂ ವಾಕ್ಯಗಳನ್ನು ಕುಗ್ಗಿಸುವಿಕೆ, ಮಾರ್ಪಡಿಸುವಿಕೆ ಮೊದಲಾದ ವಿಧಾನದಲ್ಲಿ ಸಂಕ್ಷೇಪಿಸುತ್ತಾ ಹೋಗಿ.

೨. ಈಗ ಮತ್ತೊಮ್ಮೆ ಎಣಿಸಿ, ಇರುವ ವ್ಯತ್ಯಾಸವನ್ನು ಮತ್ತೆ ಓದಿ ಸರಿಪಡಿಸಿ.

೩. ಸಂಗ್ರಹ ರೂಪ- ಮೂಲರೂಪಗಳೆರಡನ್ನೂ ಗಮನಿಸಿ ಸೂಕ್ತ ಶೀರ್ಷಿಕೆಯನ್ನು ನೀಡಿ. ಮೂಲ ಭಾಗ ಮೊದಲಿಗೆ ಓದಿದಾಗಲೇ ಹಲವಾರು ಶೀರ್ಷಿಕೆಗಳು ಹೊಳೆದಿದ್ದರೆ ಮತ್ತು ಅವನ್ನು ಗುರುತು ಹಾಕಿಕೊಂಡಿದ್ದರೆ ಅವನ್ನು ಸೂಕ್ತವಾಗಿ ಮಾರ್ಪಡಿಸಿ, ಅಳವಡಿಸಿ.

೪. ಒಟ್ಟು ಪದಗಳನ್ನು ಮತ್ತೆ ಎಣಿಸಿ, ಸಂಕ್ಷೇಪ ಲೇಖನದ ಕೆಳಗೆ ಬರೆಯಿರಿ.

ಮಾದರಿ

ಒಂದು ದಿನ ‘ಅಮೋಘ ಇಳುವರಿ ಮಾರಾಟ’ ಎಂಬ ಭಾರಿಯ ಪ್ರಚಾರ ಪಡೆದ ದಿನಪತ್ರಿಕೆಯ ದೊಡ್ಡ ಜಾಹೀರಾತನ್ನು ನನ್ನಾಕೆ ನನ್ನ ಮುಂದೆ ಹಿಡಿದಲು. ಆ ಅದ್ಭುತ ಜಾಹೀರಾತನ್ನು ನೋಡಿದಾಗ ಇದು ವ್ಯಾಪಾರಿರಂಗ, ಇಲ್ಲಿ ಉತ್ಪ್ರೇಕ್ಷೆಯ ಪೆಂಪು ಮುಗಿಲನ್ನು ಮುಟ್ಟಿದೆ ಎನ್ನಿಸಿತು ನನಗೆ. ಈಗ ಅಂಗಡಿಯವರೂ ಉತ್ಪ್ರೇಕ್ಷೆಯಲ್ಲಿ ನಮಗಿರುವ ಇಷ್ಟವನ್ನು ತಿಳಿದುಬಿಟ್ಟಿದ್ದಾರೆ. ‘ನಮ್ಮ ಸೀರೆಗಳಿಗೆ  ಹಿಂದೆಂದೂ ಇಲ್ಲದ ಭಾರಿ ಬೇಡಿಕೆ. ಮುಂಬಯಿಯಲ್ಲಿ ಇಷ್ಟು ನೂಕು, ಅಷ್ಟು ನುಗ್ಗಲು’ ಎಂದೆಲ್ಲಾ ಪತ್ರಿಕಾ ಜಾಹೀರಾತು ಹೊರಡಿಸಿ ತಮ್ಮ ಕಂಪನಿಯ ಅಮೋಘ ತೀರುವಳಿ ಮಾರಾಟಕ್ಕೆ ನಮ್ಮನ್ನು ಆಹ್ವಾನಿಸುತ್ತಾರೆ. ಈ ಅಮೋಘ ಇಳುವರಿಯಲ್ಲಿ ನಮಗೆ ನಂಬಿಕೆ ಬರಿಸುವ ಹಟತೊಟ್ಟು ಒಂದು ಕಡೆ ಆ ಬಟ್ಟೆಯ ಮೂಲಬೆಲೆಯನ್ನು ಬರೆದು ಅದಕ್ಕೆ ಬರೆ ಎಳೆದು ಇಳುವರಿ ಎಷ್ಟು ಕಡಿಮೆಯದು, ಎಂಥ ಬಂಡೆತಳದ್ದು ಎಂದು ತೋರಿಸಿ ಗ್ರಾಹಕರಿಗಾಗಿ ತಾವು ಮಾರಾಟಗಾರರು, ಎಂತಹ ತ್ಯಾಗಕ್ಕೂ ಸಿದ್ದರೆಂದು ಉದಾರವಾಗಿ ಘೋಷಿಸಿಕೊಳ್ಳುತ್ತಾರೆ. ಬೇಗ ಬರದಿದ್ದರೆ ಸರಕೆಲ್ಲ ತೀರಿ ನಮಗೆ ತುಂಬ ನಿರಾಶೆಯಾದೀತೆಂದು ತುಂಬ ನೊಂದ ಮನಸ್ಸಿನಿಂದ ಸೂಚನೆ ಕೊಡುತ್ತಾರೆ. ಅಲ್ಲಿಗೂ ನಮ್ಮ ಉತ್ಸಾಹದ ಒತ್ತಡ ಎಲ್ಲಿ ಇಳಿದೀತೋ ಎಂದು ಹೆದರಿ ಮರುದಿನವೇ ಭಾರಿ ಜನಜಾತ್ರೆಯ ಚಿತ್ರಗಳನ್ನು ಪ್ರದರ್ಶಿಸಿ, ಯಾವ ಕಾರಣದಿಂದಲೂ ಕೊನೆಯ ದಿನವನ್ನು ಮುಂದುವರಿಸುವುದಿಲ್ಲ ಎಂದು ಹೇಳಿ ಮೂರೇ ಮೂರು ದಿನಗಳ ಗಡುವಿದೆ ಎಂದು ಕೊನೆಯ ಎಚ್ಚರಿಕೆಯನ್ನು ಕೊಡುತ್ತಾರೆ.

ನನಗೆ ಈ ಇಳುವರಿ ಬೇಕಿಲ್ಲ. ಆದರೆ ಜಾಹೀರಾತುಗಳನ್ನು ನೋಡಿದಾಗ ನನ್ನಾಕೆಯ ತಲೆಕೆಡುತ್ತದೆ. ಅವಳ ತವರು ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ ಹುಡುಗಿಯ ಪೋಟೋ ಕೂಡ ಆ ಪತ್ರಿಕೆಯ ಜಾಹೀರಾತಿನಲ್ಲಿ ಬಂದುಬಿಟ್ಟಿರುವಾಗ ಆ ಅಂಗಡಿಗೆ ನುಗ್ಗಿದ ಮೇಲೆ ತನ್ನ ಜೀವನವೇ ವ್ಯರ್ಥ ಎಂದು ಆಕೆ ಸಂಕಟಪಡುತ್ತಾಳೆ. ನನ್ನ ಜೇಬು ಅಧಿಕ ಒತ್ತಡದಿಂದ ಕುಸಿಯುವಂತಾದರೂ ಆಕೆ ಲಕ್ಷಿಸಲಾರಳು. ಇಷ್ಟರ ಮೇಲೆ ನಾನು ಸಮಧಾನ ಹೇಳಲು ಹೋದರೆ ಆಕೆ ಸಿಟ್ಟಿನಿಂದ ‘ನನಗೋಸ್ಕರ ನೀವು ಏನು ತರಬೇಕಾಗಿಲ್ಲ. ನಿಮಗೂ, ಮಕ್ಕಳಿಗೂ ಅಗ್ಗವಾಗಿ ಸಿಗುವಾಗಲೇ ಒಂದಿಷ್ಟು ಬಟ್ಟೆ ತರೋಣ ಅಂತ ಹೇಳ್ತಾ ಇದೀನೇ ಹೊರತು, ಒಂದು ಕರ್ಚಿಪು ಕೂಡ ನನಗೆ ಬೇಕಾಗಿಲ್ಲ. ಎಲ್ಲ ಮನೆಯೋರು ಹೋಗಿ ಬಂದರಲ್ಲ ಅಂತ ಹೇಳಿದೆ ಅಷ್ಟೆ. ಇಷ್ಟಕ್ಕೂ ಈ ಮನೆಲಿ ನನಗೆ, ನನ್ನ ಮಾತಿಗೆ ಒಂದು ಕುರುಡು ಕವಡೆಯ ಬೆಲೆನೂ ಇಲ್ಲ ಅಂತ ನನಗೇನೂ ಗೊತ್ತಿಲ್ಲವೇ? ಆದರೂ ಹಾಳು ಮನಸ್ಸು, ಸುಮ್ಮನಿರಲಾರದೆ ಹೇಳಿಬಿಟ್ಟೆ ಹೋಗಲಿ ಬಿಡಿ’ ಎಂದು ರಾಜಧಾನಿ ಎಕ್ಸ್‌ಪ್ರೆಸ್‌ನ ಹಾಗೆ ವೇಗವಾಗಿ ಒದರಿ ಅಡಿಗೆ ಮನೆಗೆ ನುಗ್ಗಿ ಬಿಟ್ಟಳು.

ಇನ್ನೂ ಈ ಮನೆಯಲ್ಲಿ ಅವಳಿಗೆ ಬೆಲೆಯಿದೆ ಅಂತ ಸ್ಥಾಪಿಸುವುದಕ್ಕಾಗಿ ಪಕ್ಕದ ಮನೆಯವರ ದೃಷ್ಟಿಯಲ್ಲೂ ಆಕೆ ಸರೀಕಳು ಅನ್ನಿಸುವುದಕ್ಕಾಗಿ ಪೋಟೋದಲ್ಲಿದ್ದ ಮನೆಗೆಲಸದವಳಿಗೆ ಮೇಲು ಅಂತ ದೃಢಪಡಿಸುವುದಕ್ಕಾಗಿ ನಾನು ನನ್ನಾಕೆಯನ್ನು ಮಕ್ಕಳನ್ನೂ ಕಟ್ಟಿಕೊಂಡು ಆ ಅಮೋಘ ಸರಕು ಮಾರಾಟದ ಅಂಗಡಿಗೆ ನುಗ್ಗಬೇಕಾಯಿತು. ಮಕ್ಕಳೆಲ್ಲರ ಎದುರಿಗೆ ನಮ್ಮ ಜಗಳ ನಡೆದದ್ದರಿಂದ ತನ್ನ ಆತ್ಮ ಗೌರವ ಅಮೋಘವಾದ ಇಳುವರಿ ಮಾರಾಟಕ್ಕೆ ಒಳಗಾಯಿತು ಎಂದು ನನ್ನವಳು ಚಡಪಡಿಸಿದ ಹಾಗೆ ಆಕೆಗೂ ಒಂದೆರಡು ಸೀರೆ ಮತ್ತು ಇತರ ನಾಲ್ಕು ವಸ್ತ್ರಗಳನ್ನೂ ಕೊಳ್ಳಬೇಕಾಯಿತು(೨೬೫ ಪದಗಳು)

(ಅ.ರಾ.ಮಿತ್ರ: ಸಂಕಲ್ಪಗಳು: ‘ಉತ್ಪೇಕ್ಷೆ’ ಪುಟ ೧೬-೧೭)

ಪ್ರಥಮ ವಾಚನದಲ್ಲಿ ಹೊಳೆದ ಶೀರ್ಷಿಕೆಗಳು: ೧. ಜಾಹೀರಾತಿನ ಪ್ರಭಾವ ೨. ಅಮೋಘ ಇಳುವರಿ ಮಾರಾಟ ೩. ವ್ಯಾಪಾರಿಗಳ ತಂತ್ರ ೪. ಪ್ರಚಾರದ ಫಲ ೫. ಮನೆಯಾಕೆಯ ಪ್ರಭಾವ ೬. ಮಾತಿಗೆ ಬೆಲೆ ೭. ವ್ಯಾಪಾರೀ ಜಾಹೀರಾತುಗಳ ಆಕರ್ಷಣೆ ೯. ಜಾಹೀರಾತು ಕಲೆ.

ಪ್ರಮುಖಾಂಶಗಳು: ೧. ಲೇಖಕರು ಜಾಹೀರಾತು ನೋಡಿದ್ದು ೨. ಇಳುವರಿ ಮಾರಾಠದ ಪ್ರಕಟನಾ ವೈಖರಿ ೩. ಜಾಹೀರಾತಿನ ಬಗ್ಗೆ ಮನೆಯಾಕೆಯ ವಾದ ೪. ಲೇಖಕರು ಜಾಹೀರಾತು ನೀಡಿದ ಅಂಗಡಿಗೆ ಹೋಗಲು ಕಾರಣ. ೫. ಅಂಗಡಿಯಲ್ಲಿ ಮಾಡಿದ ವ್ಯಾಪಾರ.

ಕರಡು ಪ್ರತಿ: ಲೇಖಕರ ಪತ್ನಿ ಲೇಖಕರಿಗೆ ದಿನಪತ್ರಿಕೆಯೊಂದರಲ್ಲಿ ಬಂದ ಅಮೋಘ ಇಳುವರಿ ಮಾರಾಟದ ಜಾಹೀರಾತನ್ನು ತೋರಿಸಿದಳು. ಅದನ್ನು ಓದಿದ ಲೇಖಕರು, ಅಂಗಡಿಯವರು ಉತ್ಪ್ರೇಕ್ಷಿಸಿದ್ದಾರೆ. ನಮ್ಮ ಇಷ್ಟವನ್ನು ಪತ್ತೆ ಮಾಡಿದ್ದಾರೆ ಎನ್ನಿಸಿತು. ಇಳುವರಿಯಲ್ಲಿ ಆಸಕ್ತಿ ಬರಲು ‘ಹಿಂದೆಂದೂ ಇಲ್ಲದ ಭಾರಿ ಬೇಡಿಕೆ, ಮುಂಬಯಿಯಲ್ಲಿ ನೂಕು ನುಗ್ಗಲು’ ಎಂದೆಲ್ಲಾ ಜಾಹೀರು ಪಡಿಸುತ್ತಾರೆ. ಮೂಲ ಬೆಲೆ ಮತ್ತು ಇಳುವರಿ ಬೆಲೆ ಎರಡರಲ್ಲೂ ಭಾರೀ ವ್ಯತ್ಯಾಸ ತೋರಿಸಿ ಮೂಲ ಬೆಲೆಗೆ ಗೆರೆ ಎಳೆದಿರುತ್ತಾರೆ. ಬೇಗ ಹೋಗದಿದ್ದರೆ ನಿರಾಸೆ ಕಾದಿದೆ ಎಂಬ ಭಾವನೆ ಬರಿಸುತ್ತಾರೆ. ಕುತೂಹಲ ಕುಗ್ಗದಿರಲು ಕೊನೆಯ ದಿನವನ್ನು ಮುಂದೂಡುವುದಿಲ್ಲ ಎಂಬ ಹೇಳಿಕೆಯನ್ನೂ ಭಾರೀ ಜನಜಾತ್ರೆಯ ಚಿತ್ರವನ್ನೂ ಪ್ರಕಟಿಸುತ್ತಾರೆ- ಎಂದು ಲೇಖಕರು ಭಾವಿಸಿದರು.

ಆದರೆ ಮನೆಯಾಕೆ, ಜಾಹೀರಾತಿನಲ್ಲಿ ಮನೆಗೆಲಸದವಳನ್ನು ಕಂಡ ಮೇಲೆ, ಎಲ್ಲ ಮನೆಯವರೂ ಕೊಳ್ಳಲು ಹೋಗಿರುವುದರಿಂದ ತಾವು ಕೊಳ್ಳಲು ಹೋಗದಿದ್ದರೆ ಜನ್ಮ ವ್ಯರ್ಥವೆಂದು ಭಾವಿಸುತ್ತಾಳೆ. ಲೇಖಕರ ಸಮಾಧಾನಕ್ಕೆ ಪ್ರತಿಯಾಗಿ ತನಗೆ ಒಂದು ಕರ್ಚಿಪೂ ಬೇಕಿಲ್ಲವೆಂದೂ ಅಗ್ಗವಾಗಿರುವುದರಿಂದ ಮಕ್ಕಳ ಬಟ್ಟೆಗಾಗಿ ಹೋಗಬೇಕೆಂದೂ ಆದರೆ ತನ್ನ ಮಾತಿಗೆ ಬೆಲೆ ಇಲ್ಲವೆಂದೂ ಒದರಿ ರಾಜಧಾನಿ ಎಕ್ಸ್‌ಪ್ರೆಸ್‌ನಂತೆ ಅಡಿಗೆಮನೆಗೆ ನುಗ್ಗುತ್ತಾಳೆ.

ಪಕ್ಕದ ಮನೆಯವರಿಗೆ ಕಡಿಮೆ ಇಲ್ಲ; ತನ್ನವಳ ಮಾತಿಗೆ ಬೆಲೆ ಇದೆ; ಮನೆಯಾಕೆ ಮನೆಗೆಲಸದವಳಿಗಿಂತ ಕಡಿಮೆಯಿಲ್ಲ ಎನಿಸಲು ಲೇಖಕರು ಜಾಹೀರಾತಿನ ಅಂಗಡಿಗೆ ನುಗ್ಗುತ್ತಾರೆ. ಆಕೆಯ ಆತ್ಮಗೌರವ ಅಮೋಘ ಇಳುವರಿ ಮಾರಾಟ ಆಗದಿರಲು ಒಂದೆರಡು ಸೀರೆ ಮತ್ತು ಇತರ ನಾಲ್ಕು ವಸ್ತ್ರಗಳನ್ನು ಕೊಳ್ಳುತ್ತಾರೆ. (೧೧೮ ಪದಗಳು)

ಪರಿಷ್ಕೃತಪತ್ರಿ

ಅಮೋಘ ಇಳುವರಿ ಮಾರಾಟ

ಅಮೋಘ ಇಳುವರಿ ಮಾರಾಟದ ಜಾಹಿರಾತನ್ನು ಅವರಾಕೆ ತೋರಿಸಿದಾಗ ಲೇಖಕರು ಓದಿ ಅಂಗಡಿಯವರು ಉತ್ಪ್ರೇಕ್ಷಿಸಿದ್ದಾರೆಂದೂ ಇಷ್ಟವನ್ನು ಪತ್ತೆ ಮಾಡಿದ್ದಾರೆಂದೂ ತಿಳಿಸಿದರು.

ಮುಂಬಯಿಯಲ್ಲಿ ನೂಕುನುಗ್ಗಲು, ಹಿಂದೆಂದೂ ಇಲ್ಲದ ಭಾರೀ ಬೇಡಿಕೆ; ಮೂಲಬೆಲೆಗಿಂತ ಇಳುವರಿ ಬೆಲೆಯಲ್ಲಿ ಭಾರೀ ವ್ಯತ್ಯಾಸ, ಎಂದೆಲ್ಲಾ ಹೇಳಿ ಬೇಗ ಹೋಗದಿದ್ದರೆ ನಿರಾಸೆಗೆ ಕಾರಣವೆಂಬ ಭಾವನೆ ಬರಿಸಿದ್ದಾರೆಂದೂ, ಕುತೂಹಲ ಕುಗ್ಗದಿರಲು ಕೊನೆಯ ದಿನ ಮುಂದೂಡುವುದಿಲ್ಲವೆಂಬ ಹೇಳಿಕೆಯನ್ನು ಭಾರೀ ಜನಜಾತ್ರೆಯ ಚಿತ್ರವನ್ನು ಪ್ರಕಟಿಸಿದ್ದಾರೆಂದು ತಿಳಿದರು.

ಆದರೆ ಮನೆಯಾಕೆ, ಜಾಹಿರಾತಿನಲ್ಲಿ ಮನೆಗೆಲಸದವಳನ್ನು ಕಂಡ ಮೇಲೆ ಎಲ್ಲರೂ ಕೊಳ್ಳಲು ಹೋಗಿದ್ದಾರೆ. ತಾವೂ ಕೊಳ್ಳದಿದ್ದರೆ ಜನ್ಮ ವ್ಯರ್ಥವೆಂದು ದುಃಖಿಸಿದಳು. ತನಗಾಗಿ ಒಂದು ಕರ್ಚಿಪೂ ಬೇಡ. ಅಗ್ಗವಾಗಿರುವುದರಿಂದ ಮಕ್ಕಳಿಗಾಗಿ ಕೊಳ್ಳಲು ಹೋಗಬೇಕೆನ್ನುತ್ತಾಳೆ. ಆದರೆ ತನ್ನ ಮಾತಿಗೆ ಬೆಲೆ ಇಲ್ಲವೆಂದೂ ಒದರಿ ಅಡಿಗೆ ಮನೆಗೆ ನುಗ್ಗುತ್ತಾಳೆ.

ಮನೆಯಾಕೆಯ ಮಾತಿಗೆ ಬೆಲೆ ತರಲು ನೆರೆಹೊರೆಯವರಿಗಿಂತ ಹಾಗೂ ಮನೆಗೆಲಸದವಳಿಗಿಂತ ಕಡಿಮೆಯಿಲ್ಲವೆಂದೆನಿಸಲೂ ಆಕೆಯ ಆತ್ಮಗೌರವದ ಅಮೋಘ ಇಳುವರಿ ಮಾರಾಟವಾಗದಿರಲು ಒಂದೆರಡು ಸೀರೆ ಇತರ ನಾಲ್ಕು ವಸ್ತ್ರಗಳನ್ನು ಕೊಂಡರು.

ಮಾದರಿ :

ಸಂಸ್ಕೃತದಲ್ಲಿ ಸಾಲ ಎಂದರೆ ವೃಕ್ಷ ಎಂದು ಅರ್ಥವಿದೆ. ಭಾಷಾಶಾಸ್ತ್ರಜ್ಞರು ಏನೇ ಹೇಳಲಿ ಈ ಶಬ್ದದಿಂದಲೆ ಕನ್ನಡದಲ್ಲಿ ‘ಸಾಲ’ ಎಂಬ ಶಬ್ದ ಬಂದಿದೆ ಎಂದು ನಾನು ನಂಬಿದ್ದೇನೆ. ವೃಕ್ಷಕ್ಕೂ ಸಾಲಕ್ಕೂ ಅದ್ಭುತ ಹೋಲಿಕೆಗಳಿವೆ. ನೆಲದಿಂದ ಆಹಾರ ಸತ್ವಗಳನ್ನು ಪಡೆದು ಬೇರಿನಿಂದ ಪುಷ್ಟಿ ಹೊಂದಿದರೂ ಸಹ ವೃಕ್ಷವು ನಿರ್ದಾಕ್ಷಿಣ್ಯವಾಗಿ ಬೇರುಗಳನ್ನು ಹೊರಗೆ ಕಾಣಿಸದ ಹಾಗೆ ಮುಚ್ಚಿಟ್ಟು ತಾನು ಹಸುರೆಲೆಗಳ ಉಡುಗೆಯುಟ್ಟು ಫಲಭಾರದಿಂದ ನಮ್ರವಾಗಿ ನಿಂತಂತೆ ನಟಿಸುತ್ತದೆ. ಸಾಲಗಾರನೂ ಅಷ್ಟೆ. ಸಾಲದ ಬಗ್ಗೆ, ಸಾಲ ಕೊಟ್ಟವರ ಬಗ್ಗೆ ಅಂತಹ ಮೊದಲಿನ ಲಕ್ಷ್ಯ ತೋರುವುದಿಲ್ಲ. ವೃತ್ತ ಪತ್ರಿಕೆಯಲ್ಲಿ ಮೊದಲ ಪುಟದಲ್ಲಿ ಮುದ್ರಿತವಾದ ಸಂಗತಿಗಳನ್ನು ಒಳಗಿನ ಪುಟಗಳ ಯಾವುದೋ ‘ಕಾಲಂ’ ನಲ್ಲಿ ಮುಂದುವರಿಸಿದ ಹಾಗೆ ಸಾಲದ ಕಂತುಗಳನ್ನು ಮುಂದೆ ಮುಂದೆ ಎಂದು ತಳ್ಳಿಕೊಂಡೇ ಬರುತ್ತಾನೆ. ಕೊಡುವುದಕ್ಕಿಂತ ತಪ್ಪಿಸಿಕೊಳ್ಲುವ ಮಾರ್ಗವನ್ನೇ ಹೆಚ್ಚಾಗಿ ಹುಡುಕುತ್ತಾನೆ. ಭಾರತೀಯರಲ್ಲಿ ಕರ್ಮತತ್ವದ ಬಗ್ಗೆ ಇರುವ ಶ್ರದ್ದೇಯನ್ನು ದುರುಪಯೋಗಪಡಿಸಿಕೊಂಡು ‘ನಿಮ್ಮ ಸಾಲವನ್ನು ಖಂಡಿತ ತೀರಿಸುತ್ತೇನೆ. ಈ ಜನ್ಮದಲ್ಲಿ ಆಗದಿದ್ದರೆ ಮುಂದಿನ ಜನ್ಮದಲ್ಲಿ ನಿಮ್ಮ ಮಗನಾಗಿ ಹುಟ್ಟಿ ಬಂದು ಋಣ ಮುಕ್ತನಾಗುತ್ತೇನೆ’ ಎಂದು ಹೇಳಿ ಸಾಲಿಗನ ಬಾಯಿ ಮುಚ್ಚಿಸುತ್ತಾನೆ. ಒಬ್ಬ ಕವಿ ಇನ್ನೂ ಸುಲಭವಾದ ದಾರಿ ತೋರಿಸಿದ್ದಾನೆ. ಆತನ ಹೇಳಿಕೆಯಂತೆ ‘ಕೊಡದೊಳರ್ದಡೆ ಸಾಲಂಗೊಂಡ ರಿಣಂ ಪೋಕುಂ’ ನೀರಿನಲ್ಲಿ ಒಂದು ಬಾರಿ ಮುಳುಗಿ ಬಿಟ್ಟರೆ ಸಾಕು ಸಾಲದ ಋಣ ಮುಗಿದಂತೆ ಎಂದು ರಸೀತಿ ಬರೆದುಕೊಟ್ಟು ಬಿಟ್ಟಿದ್ದಾನೆ.

ಸಾಲಗಾರನ ಜೀವನದ ಏರಿಳಿತಗಳನ್ನು ಗಮನಿಸಿ ಅವನನ್ನು ದುರಂತನಾಯಕನಿಗೆ ಹೋಲಿಸುವ ಪ್ರಯತ್ನ ಹಲವರದು. ತೂತಿನ ದೋಣಿಯಲ್ಲಿ ಕುಳಿತು ನದಿದಾಟುವುದು, ಸಾಲದ ಸಂಸಾರವನ್ನು ನಡೆಸುವುದು ಎರಡೂ ಒಂದೇ ಎಂದು ಅನೇಕರು ನಂಬಿದ್ದಾರೆ. ‘ಸಾಲ ಬಿಟ್ಟರೆ ಮಾರಿಕೊಂಬರಯ್ಯ’ ಎಂದು ಬಸವಣ್ಣನವರು ಹೆದರಿಸಿದ್ದಾರೆ. ಒಟ್ಟಿನಲ್ಲಿ ಎಲ್ಲರ ಅಭಿಪ್ರಾಯವೂ ಸಾಲಕ್ಕೆ ವಿರೋಧವಾದುದೇ  ಆಗಿದೆ. ಆದರೆ ನಮ್ಮ ದೇಶ ಎಂದಿಗೂ ನುಡಿದಂತೆ ನಡೆಗೆ ಪ್ರಸಿದ್ದಾವಾಗಿಲ್ಲ ಎಂಬುದಕ್ಕೆ ದೊರೆಯುವ ಹಲವು ಹನ್ನೊಂದು ಸಾಕ್ಷ್ಯಗಳಲ್ಲಿ ಸಾಲದ ಸಾಕ್ಷ್ಯವೂ ಒಂದಾಗಿದೆ. ಆದ್ದರಿಂದ ಸಾಲಗಾರರನ್ನು ನಿಂದಿಸುವುದರಲ್ಲಿ ಅರ್ಥವಿಲ್ಲ. ಸಾಲತತ್ವವನ್ನು ಹೀಗೆಳೆಯುವುದು ಸರಿಯಿಲ್ಲ. (೧೮೦ ಪದಗಳು) (ಅ.ರಾ.ಮಿತ್ರ: ಸಂಕಲ್ಪಗಳು ‘ಸಾಲಾಯ ತಸ್ಮೈ ನಮಃ ಪುಟ ೬೪-೬೫)

ಸಾಲಗಾರನ ಸಾಲತತ್ವ

ಪರಿಷ್ಕೃತಪ್ರತಿ

ವೃಕ್ಷವೆಂಬ
ಸಾಲವೆಂಬ
ವೃಕ್ಷವು
ಬೇರುಗಳನ್ನು
ಲಕ್ಷ್ಯವನ್ನೂ
ಸಾಲಗಾರ
ಮಗನಾಗಿ
ಸಾಲಗಾರನ
ಪಯಣಕ್ಕೆ
ಸಾಲಗಾರನನ್ನೂ

ಸಾಲಗಾರರನ್ನೂ
ಅರ್ಥದ
ಪದದ
ಬೇರಿಗೆ
ಹೊರಕಾಣಿಸದು
ನೀಡುವುದಿಲ್ಲ
ಸಾಲವನ್ನು
ಮುಂದೂಡುತ್ತಾನೆ
ಸಾಲವನ್ನು
ಸಂಸಾರವನ್ನು
ಹೋಲಿಸುತ್ತಾರೆ.
ವಿರೋಧಿಸುತ್ತಾರೆ.
ದೇಶದ
ಸಾಲದ
ಸಂಸ್ಕೃತ
ಮೂಲ
ಋಣಿ
ಹಾಗೆಯೇ
ವೃತ್ತ ಪತ್ರಿಕೆಯ
ಜನ್ಮಾಂತರದಲ್ಲಿ
ಸಾಲಗಾರನ
ತೀರಿಸುವೆ
ನದಿಯಲ್ಲಿಯ
ಆದ್ದರಿಂದ
ಆದರೆ
ಜನರು
ತತ್ವವನ್ನೂ
ಪದವೇ
ವೃಕ್ಷದಂತೆ
ಆದರೂ
ಸಾಲಗಾರನೂ
ಮುಂದುವರಿಸಿದ
ಎನ್ನುತ್ತಾನೆ
ತೂತಿನ
ಅವರು
ನುಡಿದಂತೆ
ತಾವೂ
ಹೀಗೆಳೆಯುವುದು
(೬೦ ಪದಗಳು)
ಕನ್ನಡದ
ಸಾಲಿಗ
ವೃಕ್ಷ
ಸಾಲಿಗನಿಗೆ
ಸುದ್ದಿಯಂತೆ
ಜನರು
ದೋಣಿಯ
ಸಾಲವನ್ನೂ
ನಡೆಯದ
ಸಾಲಗಾರನಾಗಿ
ತಪ್ಪು

* * *