ಕಂಪೆನಿಯ ಕಾರ್ಯದರ್ಶಿ ಕಂಪೆನಿಯ ಮುಖವಾಣಿ: ಕಂಪೆನಿಯ ನಿರ್ದೇಶಕರು ಷೇರುದಾರರು, ಕಾರ್ಯ ನಿರ್ವಹಿಸುವ ಸಿಬ್ಬಂದಿ ಬದಲಾಗಬುಹುದು, ಆದರೆ ಕಾರ್ಯದರ್ಶಿ ನಿರ್ವಹಿಸುವ ಕರ್ತವ್ಯಗಳಲ್ಲಿ ಲೋಪ ಬರುವುದಿಲ್ಲ. ಕಂಪೆನಿಯ ರಾಯಭಾರಿಯಾಗಿ, ವಕ್ತಾರನಾಗಿ, ಕಾರ್ಯಸಚಿವನಾಗಿ, ನಿರಂತರ ಕೊಂಡಿಯಾಗಿ ಸಂಪರ್ಕ ಮಾಧ್ಯಮವಾಗಿ ಆತ ಕಾರ್ಯನಿರ್ವಹಿಸಬೇಕಾಗುತ್ತದೆ.

ಕಂಪೆನಿ ಕಾರ್ಯದರ್ಶಿಯ ಕರ್ತವ್ಯಗಳು ಇಷ್ಟೇ ಎಂದು ನಿಖರವಾಗಿ ಹೇಳಲಾಗದು; ಆತ ಇಷ್ಟು ಜನರಲ್ಲಿ, ಇಂಥ ಸಂದರ್ಭಗಳಲ್ಲಿ ವ್ಯವಹರಿಸುತ್ತಾನೆ ಎಂದು ಖಚಿತವಾಗಿ ಹೇಳಲಾಗದು; ಸಾರ್ವಜನಿಕರಿರಲಿ, ಸಿಬ್ಬಂದಿ ವರ್ಗದವರಿರಲಿ, ನಿರ್ದೇಶಕ ಮಂಡಳಿಯವರಿಲಿ, ಷೇರುದಾದರರಿರಲಿ, ಇತರ ಕಂಪೆನಿಯವರಿರಲಿ, ಸರ್ಕಾರದ ಅಧಿಕಾರಿಗಳಿರಲಿ ಎಲ್ಲರೊಡನೆಯೂ ಆತ ವ್ಯವಹರಿಸಿ ತನ್ನ ಪಾಲಿನ ಕರ್ತವ್ಯ ಪಾಲನೆ ಮಾಡಬೇಕಾಗುತ್ತದೆ. ಆದರೂ ಸಹ ಸ್ಥೂಲವಾಗಿ ಕಾರ್ಯದರ್ಶಿಯ ಪತ್ರ ವ್ಯವಹಾರವನ್ನೂ ಕರ್ತವ್ಯಗಳನ್ನೂ ಹಲವು ವಿಧಗಳಲ್ಲಿ ವರ್ಗೀಕರಿಸಿ ವಿಶ್ಲೇಷಿಸಬಹುದಾಗಿದೆ.

ಕಾನೂನಿಗೆ ಸಂಬಂಧಿಸಿದ ಕರ್ತವ್ಯಗಳು(ಸ್ಟಾಚ್ಯುಟರಿ ಡ್ಯೂಟೀಸ್): ಕಂಪೆನಿಗಳ ಶಾಸನಬದ್ಧವಾದ ಕಾರ್ಯಗಳನ್ನು ನಿರ್ವಹಿಸುವವನೇ ಕಾರ್ಯದರ್ಶಿ. ಕಾನೂನಿ ಪರಿಪಾಲನೆಗೆ ಅಗತ್ಯವಾದ ಶಾಸ್ತ್ರಜ್ಞಾನ ಅವನಿಗೆ ಇರಲೇಬೇಕಾಉತ್ತದೆ; ಅದರ ತಿಳಿವಳಿಕೆಗೆ ಬೇಕಾದ ಗ್ರಂಥಗಳ ಅಭ್ಯಾಸವನ್ನು ಅವನು ಮಾಡಬೇಕು. ಕಾನೂನಿನ ಪರಿಪಾಲನೆಗೆ ಅಗತ್ಯವಾದ ಕಡತಗಳನ್ನು ಸುವ್ಯವಸ್ಥಿತವಾಗಿ ಕಾಯ್ದಿಡಬೆಕು. ಕಂಪೆನಿಯ ವ್ಯವಹಾರ ಪ್ರಾರಂಭವಾಗುವ ಹಂತದಲ್ಲಿ ಮನವಿ ಪತ್ರ, ಲಿಖಿತ ನಿಯಮಾವಳಿ, ನಿರ್ದೇಶಕರ ಪಟ್ಟಿ, ವರದಿ ಪುಸ್ತಕ, ನಿರ್ದೇಶಕರ ಒಪ್ಪಿಗೆ ಪತ್ರ, ಸದಸ್ಯರ ಪಟ್ಟಿ, ಕ್ರಮಬದ್ಧವಾಗಿಡಬೇಕು. ಆಗಾಗ ದಾಖಲಾತಿಗಳನ್ನೂ, ಅಗತ್ಯವಿವರಗಳನ್ನೂ ರಿಜಿಸ್ಟ್ರಾರರಿಗೆ ಸಲ್ಲಿಸಬೇಕು *೧. ಹೀಗೆ ಕಾನೂನಿನ ಅನುಸಾರ ದಾಖಲೆಗಳನ್ನಿಡುವ ಹಾಜರುಪಡಿಸುವ ಗುರುತರ ಹೊಣೆ ಕಂಪನಿ ಕಾರ್ಯದರ್ಶಿಗೆ ಸೇರಿದೆ.

ವರಮಾನ ತೆರಿಗೆ ಕಾನೂನಿನ ಪ್ರಕಾರ ಕಂಪೆನಿಯ ಸಿಬ್ಬಂದಿಯ ಸಂಬಳದಿಂದ, ಆದಾಯ ತೆರಿಗೆ ಕಡಿತಗೊಳಿಸಿ, ಕಂಪೆನಿ ಆದಾಯದ ಬಗ್ಗೆ ದಾಖಲೆ ಪತ್ರ, ಹಾಜರುಪಡಿಸಿ ಕಂಪೆನಿಯ ಪರವಾಗಿ ತೆರಿಗೆ ಅಧಿಕಾರಿಗಳಿಗೆ ತೆರಿಗೆಯನ್ನು ಪಾವತಿ ಮಾಡಬೇಕು. ವರಮಾನ ತೆರಿಗೆ ಅಧಿಕಾರಿಗಳು ನೀಡುವ ಪ್ರಮಾಣ ಪತ್ರವನ್ನು ಲಾಭಾಂಶಗಳಿಸಿದ ಷೇರುದಾರರಿಗೆ ನೀಡಬೇಕು. ಸ್ಟಾಂಪು, ಕಾರ್ಖಾನೆ, ಸಂಬಳ ಹಂಚಿಕೆ, ಕೈಗಾರಿಕಾ ವಿವಾದ,  ಏಕಸ್ವಾಮ್ಯ  ಹಾಗೂ  ನಿರ್ಬಂಧಿತ ವ್ಯಾಪಾರಿ ಪದ್ಧತಿ ಕಾನೂನುಗಳ ಪ್ರಕಾರ ಕಾರ್ಯದರ್ಶಿ ಕಾರ್ಯ ನಿರ್ವಹಿಸಬೇಕು.

ನಿರ್ದೇಶಕರೊಡನೆ ಕಾರ್ಯದರ್ಶಿ ಕರ್ತವ್ಯಗಳು: ಕಾರ್ಯದರ್ಶಿಯನ್ನು ನೇಮಕ ಮಾಡುವವರು ನಿರ್ದೇಶಕ ಮಂಡಳಿಯವರು. ನಿರ್ದೇಶಕರ ಲಿಖಿತಾದೇಶಾನುಸಾರ ಮತ್ತು ಅದರನ್ವಯದ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಯೇ ಕಾರ್ಯದರ್ಶಿ. ಆದ್ದರಿಂದಲೇ ನಿರ್ದೇಶಕ ಮಂಡಳಿಯನ್ನೂ ಜ್ಞಾನೇಂದ್ರಿಯವೆಂದೂ ಕಾರ್ಯದರ್ಶಿಯನ್ನು ಕರ್ಮೇಂದ್ರಿಯವೆಂದೂ ಕರೆಯುವರು. ಕಾನೂನಿನ ಪರಿಪಾಲನೆ ನಿರ್ದೇಶಕರ ಕಾರ್ಯ ನಿರ್ವಹಣೆ, ಈ ಎರಡೂ ಬಗೆಯ ಕಾರ್ಯಗಳನ್ನು ನಿರ್ವಹಿಸುವ ವ್ಯಕ್ತಿಯಾದ ಕಾರ್ಯದರ್ಶಿಯ ಹೊಣೆ ಅಮಿತವಾದುದು. ಸಭೆಗಳ ವ್ಯವಸ್ಥೆಗೆ ಸಂಬಂಧಿಸಿದಂತೆ ತಿಳಿವಳಿಕೆ ಪತ್ರ, ಕಾರ್ಯಕಲಾಪ, ವರದಿ ತಯಾರಿ, ನಿರ್ಣಯಗಳ ಸಿದ್ಧತೆ ಮತ್ತು ಅವುಗಳ ಜಾರೀಕರಣ ಮುಂತಾದ ಯಥಾ ರೀತಿಯ ಕಾರ್ಯಗಳೂ ಇರುತ್ತವೆ ಕಾನೂನಿನ ಕಕ್ಷೆಯಲ್ಲಿ ನಿರ್ದೇಶಕರಿಗೆ ತಿಳಿವಳಿಕೆ ನೀಡಬೇಕಾದ ಕಾರ್ಯ. ನಿರ್ದೇಶಕರಿಗೆ ಅಪ್ರಿಯವೆನಿಸುವ ಆದರೆ ಕಂಪೆನಿ ಹಿತಾಸಕ್ತಿಯಿಂದ ಮಾಡುವ ಕೆಲಸವಾಗಿದೆ. ನಿರ್ದೇಶಕರೊಡನೆ ನಿರ್ವಹಿಸುವ ಕೆಲಸ ಕಾರ್ಯಗಳು ಜಟಿಲವಾಗಿಯೂ ಕಾರ್ಯದರ್ಶಿಯ  ಸಾಮರ್ಥ್ಯಕ್ಕೆ ಸವಾಲಾಗಿಯೂ ಇರುತ್ತದೆ. ಪ್ರತಿಭಾವಂತನಾದ ಕಾರ್ಯದರ್ಶಿ ಎಂಥ ನಿರ್ದೇಶಕರ ಮಂಡಳಿ ಇದ್ದರೂ ಅವರ ಆದೇಶಗಳನ್ನು ಕಾನೂನಿನ ಚೌಕಟ್ಟಿನಲ್ಲೆ ಪರಿಹರಿಸಿ ಜಾಣತನದಿಂದ ಅವರಿಗೆ ಮಾರ್ಗದರ್ಶನಕ್ಕಾಗಿ ಕಾರ್ಯದರ್ಶಿಯ ನೆರವನ್ನು ಸಹಜವಾಗಿ ಅಪೇಕ್ಷಿಸುತ್ತಾರೆ. ಆಗ ಕಾರ್ಯದರ್ಶಿ ನಿರ್ದೇಶಕರ ಅಗತ್ಯವನ್ನು ಪೂರೈಸಲು ಕ್ತಿಮೀರಿ ಶ್ರಮಿಬೇಕು.

ಪತ್ರವ್ಯವಹಾರ: ಕಾರ್ಯದರ್ಶಿ ನಿರ್ದೇಶಕರೊಡನೆ ಸಾಕಷ್ಟು ಸಂದರ್ಭಗಳಲ್ಲಿ ಪತ್ರವ್ಯವಹಾರ ಮಾಡುತ್ತಾನೆ. ನಿರ್ದೇಶಕರಿಗೆ ಆತ ಬರೆಯುವ ಪತ್ರ ಯಾವುದೇ ಆದರೂ ಅದು ಆತ್ಮೀಯತೆಯಿಂದ ಕೂಡಿರಬೇಕು. ಕಂಪೆನಿಯ ಕಾನೂನುಗಳಿಗೆ ವಿರುದ್ಧವಾದಾಗ ಕಾನೂನಿನ ಭಂಗವಾಗುತ್ತಿದ್ದರೆ ಅದನ್ನು ತಪ್ಪಿಸಲು ಯಾವ ಮಾರ್ಗವನ್ನು ಅನುಸರಿಸಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು. ಕಾರ್ಯದರ್ಶಿ ಮತ್ತು ನಿರ್ದೇಶಕರು ಕಂಪೆನಿಯ ತಲೆ ಮಣಿಗಳಾದ್ದರಿಂದ ಇವರಿಬ್ಬರ ನಡುವಣ ಪತ್ರ ವ್ಯವಹಾರದಲ್ಲಿ ಒಂದೊಂದು ಅಂಶವೂ ತೀವ್ರ ಚಿಂತನೆಯ ಫಲವಾಗಿ ಮೂಡಿದ ನುಡಿಗಳಾಗಿರಬೇಕು; ಇಲ್ಲದಿದ್ದಲ್ಲಿ ಕಂಪೆನಿಗೆ ನಷ್ಟವಾಗುವ ಸಂಭವವಿರುತ್ತದೆ ಅಥವಾ ಕಂಪೆನಿಯ ಘನತೆಗೆ ಕುಂದು ಬರುತ್ತದೆ.

ಕಾರ್ಯದರ್ಶಿ ಮತ್ತು ನಿರ್ದೇಶಕರ ನಡುವಣ ಪತ್ರ ವ್ಯವಹಾರದ ಕೆಲವು ಸಂದರ್ಭಗಳನ್ನು ಗಮನಿಸಬಹುದು. ಕಾರ್ಯದರ್ಶಿ ನಿರ್ದೇಶಕ ಮಂಡಳಿಯ ಸಭೆಯನ್ನು ಕರೆಯುವಾಗ ನಿರ್ದೇಶಕರಿಗೆ ತಿಳಿವಳಿಕೆ ಪತ್ರ ನೀಡಬೇಕು. *೨ ವರದಿಗಳನ್ನು ಕಳಿಸಬೇಕು. ನಿರ್ದೇಶಕ ಮಂಡಳಿಯ ಅಧ್ಯಕ್ಷರು, ಮಂಡಳಿಯ ಸದಸ್ಯರಿಗೆ ಯಾವುದಾದರೂ ವಿಷಯದ ಬಗ್ಗೆ ಸಭೆಗೆ ಪೂರ್ವಭಾವಿಯಾಗಿ ತಿಳಿಸಿ ಎಂದಾಗ ಕಾರ್ಯದರ್ಶಿ ಆ ನಿರ್ದೇಶಕರಿಗೆ ಪತ್ರ ಬರೆಯಬೇಕು. ನಿರ್ದೇಶಕರಲ್ಲಿ ಯಾರಾದರೂ ಕಂಪೆನಿಯ ಹಿತಕ್ಕೆ ಧಕ್ಕೆಯೊದಗುವ ರೀತಿಯಲ್ಲಿ ಎಂದರೆ ಕಂಪೆನಿ ಕಾನೂನಿಗೆ ವಿರುದ್ಧವಾಗಿ ವರ್ತಿಸುತ್ತಾರೆ ಎಂದೆನ್ನಿಸಿದಾಗ ಆ ಬಗ್ಗೆ ತಿಳಿವಳಿಕೆ ನೀಡಿ ಪತ್ರ ಬರೆಯಬೇಕಾಗುತ್ತದೆ. ಕಾರ್ಯದರ್ಶಿ ತಾನಾಗಿಯೇ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಪ್ರಸ್ತಾಪಿಸಬೇಕಾದ ವಿಷಯ ಅಥವಾ ಕೋರಿಕೆಯಿದ್ದಲ್ಲಿ ಅದನ್ನು ಕುರಿತು ಮಂಡಳಿ ಅಧ್ಯಕ್ಷರಿಗೆ ಮೊದಲೇ ಪತ್ರ ಬರೆದು ತಿಳಿಸಬೇಕು *೩. ನಿರ್ದೇಶಕ ಮಂಡಳಿಯ ಸಭೆಯ ಕಾರ್ಯದರ್ಶಿಗೆ ಪತ್ರ ಒಂದು ವಿಷಯವನ್ನು ಸೇರಿಸಲು ಕೋರಿ ನಿರ್ದೇಶಕರೊಬ್ಬರು ಕಾರ್ಯದರ್ಶಿಗೆ ಪತ್ರ ಬರೆಬಹುದು; ಮುಖ್ಯ ಸಲಹೆಗಳನ್ನು ಮಂಡಳಿಯ ಮುಂದಿಡಲು ಕೋರಬಹುದು. ಹೀಗೆ ಹಲವಾರು ರೀತಿಯಲ್ಲಿ ನಿರ್ದೇಶಕರಿಗೂ ಕಾರ್ಯದರ್ಶಿಗೂ ಪತ್ರ ವ್ಯವಹಾರದ ಸಂಬಂಧವಿದ್ದೇ ಇರುತ್ತದೆ.

ಷೇರುದಾರರಿಗೆ ಸಂಬಂಧಿಸಿದಂತೆ ಕಾರ್ಯದರ್ಶಿ ಕರ್ತವ್ಯಗಳು: ಷೇರುದಾರರು ತಮಗೆ ಬೇಕಾದ ಮಾಹಿತಿಗಳನ್ನು ಪಡೆಯಲು ಕಾರ್ಯದರ್ಶಿಯನ್ನು ಸಂಪರ್ಕಿಸಬೇಕು; ಅವರು ನೇರ ಮಾತಿನ ಮೂಲಕ ಅಥವಾ ಪತ್ರ ಮುಖೇನ ವ್ಯವಹರಿಸಬಹುದು. ಕಾರ್ಯದರ್ಶಿ ನಿರ್ದೇಶಕ ಮಂಡಳಿಯ ಅಧೀನ ವ್ಯಕ್ತಿಯಾಗಿದ್ದರೂ ಷೇರುದಾರರ ಹಿತಾಕಾಕ್ಷಿಯೂ ಆಗಿರುತ್ತಾನೆ. ಆದಕಾರಣ ಕಂಪೆನಿಯ ಯಾವುದೆ ವಿದ್ಯಮಾನಗಳ ಬಗ್ಗೆ ಷೇರುದಾರರು ಮಾಹಿತಿಯನ್ನು ಅಪೇಕ್ಷಿಸಿದರೂ ಕಾರ್ಯದರ್ಶಿ ಅದನ್ನು ನೀಡಬೇಕಾದುದು ಆತನ ಮುಖ್ಯ ಕರ್ತವ್ಯಗಳಲ್ಲಿ ಒಂದಾಗಿದೆ. ಹಾಗೆಂದ ಮಾತ್ರಕ್ಕೆ ಗೋಪ್ಯವಾಗಿರಿಸಬೇಕಾದ ಸಂಗತಿಗಳನ್ನು, ಕಂಪೆನಿ ಹಿತಕ್ಕೆ ಧಕ್ಕೆಯೊದಗಬಹುದಾದಂಥ ಸಂಗತಿಗಳನ್ನು ತಿಳಿಸಬೇಕೆಂದಲ್ಲ. ಕಂಪೆನಿಗೆ ನಷ್ಟವಾಗಬರದು, ಷೇರುದಾರರಿಗೆ ಅನ್ಯಾಯವಾಗಬಾರದು ಎಂಬ ರೀತಿಯಲ್ಲಾತ ವ್ಯವಹರಿಸಬೇಕು. ಷೇರುದಾರರು ಬಾವೋದ್ವೇಗಗಳಿಂದ ವರ್ತಿಸಿದಾಗ ಕಾರ್ಯದರ್ಶಿ ತಾಳ್ಮೆಯನ್ನೂ ಸಂಯಮವನ್ನೂ ಪ್ರದರ್ಶಿಸಬೇಕಾದದ್ದು ಆತನ ಕರ್ತವ್ಯವಾಗಿದೆ. ಏಕೆಂದರೆ ಕಂಪೆನಿಯ ಎಲ್ಲಾ ಅಧಿಕಾರಿಗಳೂ ಅಂತಿಮವಾಗಿ ಕಾರ್ಯದರ್ಶಿ ಆದ್ಯಗಮನ ಕೊಡಬೇಕು. ಕಾರ್ಯದರ್ಶಿ ಷೇರುದಾರರಿಗೆ ಕಳಿಸಿಕೊಡುವ ಪತ್ರಗಳಲ್ಲಿ ಹೆಚ್ಚಿನವು ಪರಿಪತ್ರಗಳಾಗಿರುತ್ತವೆ. ಉದಾಹರಣೆಗೆ: ಸಕಲ ಸದಸ್ಯರ ಸಭೆಯ ಕಾರ್ಯಸೂಚಿ, ವರದಿ, ನಿರ್ದೇಶಕರ ವರದಿ, ಷೇರು ನೀಡಿಕೆ ಪತ್ರ, ಲಾಭಾಂಶ ಹಂಚಿಕೆ ಪ್ರಕಟಣೆ ಮುಂತಾದವನ್ನೂ ನೋಡಬಹುದು.

ಪತ್ರ ವ್ಯವಹಾರ: ಷೇರುದಾರ ಮತ್ತು ಕಾರ್ಯದರ್ಶಿಗಳ ನಡುವೆ ಪತ್ರ ವ್ಯವಹಾರ ನಿರಂತರವಾಗಿ ಸಾಗಿರುತ್ತದೆ. ಷೇರು ಹಂಚಿಕೆ, ಲಾಭಾಂಶ ವಿತರಣೆ, ಷೇರುದಾರರ  ಸಭೆಯ ಸಮಾವೇಶ, ಷೇರುದಾರರಿಗೆ ತಿಳಿವಳಿಕೆ ನೀಡುವ ಪ್ರಕಟಣೆ ಮೊದಲಾದವು ಸಾಮಾನ್ಯವಾಗಿ ಇವರಿಬ್ಬರ ನಡುವೆ ನೆಯುವ ಪತ್ರವ್ಯವಹಾರಗಳಲ್ಲಿ ಕೆಲವು. ಇವರಿಬ್ಬರ ಮಧ್ಯೆ ನಡೆಯುವ ಪತ್ರ ವ್ಯವಹಾರವನ್ನು ಸ್ಥೂಲವಾಗಿ ಉತ್ತರ ಪತ್ರಗಳು, ಪರಿಪತ್ರಗಳು, ಮಾಹಿತಿ ನೀಡಿಕೆ ಪತ್ರಗಳು ಸಹಾ ಪತ್ರಗಳು, ಆಕ್ಷೇಪಣೆ ಪತ್ರಗಳು ಎಂದು ವರ್ಗೀಕರಿಸಬಹುದು.

ಷೇರು ಪೇಟೆಯಲ್ಲಿ ಷೇರುಧಾರಣೆ ಕುಸಿದಾಗ, ಲಾಭಾಂಶವೆಷ್ಟು ಬರುತ್ತದೆ ಎಂಬುದನ್ನು ತಿಳಿಯಲು ಅಪೇಕ್ಷಿಸಿದಾಗ, ತಮ್ಮ ಕಂಪೆನ ಇನ್ನೊಂದು ಪ್ರಗತಿಯ ಬಗ್ಗೆ ಕೇಳಿದಾಗ ಷೇರುದಾರರು ಬರೆಯುವ ಪತ್ರಗಳೆಲ್ಲ ಮಾಹಿತಿ ಬೇಡಿಕೆ ಸ್ವರೂಪದ ಪತ್ರಗಳಾಗಿರುತ್ತವೆ. ಇಂತ ಪತ್ರಗಳು ಬಂದ ತಕ್ಷಣ ಕಾರ್ಯದರ್ಶಿ ಸಕಾಲದಲ್ಲಿ ಸಮರ್ಪಕವಾಗಿ ಉತ್ತರಿಸಬೇಕು; ಇಲ್ಲದಿದ್ದರೆ ಕಂಪೆನಿಯ ಘನತೆಗೆ ಕುಂದುಂಟಾಗಬಹದು; ಜೊತೆಗೆ ಷೇರುದಾರರಿಂದ ಪ್ರತಿಭಟನೆ ಪತ್ರಗಳು ಬರಬಹುದು. ಹಲವಾರು ಸಂದರ್ಭಗಳಲ್ಲಿ ಷೇರುದಾರರು ಕಾರ್ಯದರ್ಶಿಯನ್ನು ಆಕ್ಷೇಪಿಸಿ ಪತ್ರ ಬರೆಯುತ್ತಾರೆ. ಉದಾ: ಕಂಪೆನಿಯ ಲಾಭಾಂಶ ಕಡಿಮೆಯಾದಾಗ *೪ ತಮ್ಮ ವಿಳಾಸದಲ್ಲಿ ಆದ ಬದಲಾವಣೆಯನ್ನು ಕಚೇರಿಗೆ ತಿಳಿಸಿದ್ದರೂ ಅವರು ಬರೆದುಕೊಳ್ಳದಿದ್ದಾಗ *೫-೬, ಷೇರುದಾರರು ಕಾರ್ಯಾಲಯಕ್ಕೆ ಹೋದಾಗ ಉಚಿತ ರೀತಿಯ ಪುರಸ್ಕಾರ ಸಿಗದಿದ್ದಾಗ ಷೇರುದಾರ  ಆಕ್ಷೇಪಣಾ ಪತ್ರವನ್ನು ಬರೆಯುತ್ತಾನೆ. ಇದು ಸಹಜವೂ ಹೌದು. ಇಂಥ ಪತ್ರಗಳಿಗೆ ಸಮಾಧಾನಕರವಾಗಿ ಉತ್ತರ ನೀಡಬೇಕಾದದ್ದು ಕಾರ್ಯದರ್ಶಿ ಕಾರ್ಯದರ್ಶಿ ಕರ್ತವ್ಯವಾಗಿದೆ *೭. ಕಾರ್ಯದರ್ಶಿಯೂ ಷೇರುದಾರರಿಗೆ ಹಲವಾರು ಸಂದರ್ಭಗಳಲ್ಲಿ ಪರಿಪತ್ರಗಳನ್ನು ಬರೆಯುತ್ತಾನೆ. ಉದಾಹರಣೆಗೆ: ಷೇರುದಾರರಿಗೆ ಹೋಸ ಷೇರುಗಳನ್ನು ನೀಡಿದಾಗ, ಕಂಪೆನಿ ಪುನರ್ರಚನೆಯ ಬಗ್ಗೆ ಕಾರಣಗಳನ್ನು ತಿಳಿಸುವಾಗ, ಇನ್ನೊಂದು ಕಂಪೆನಿಯಲ್ಲಿ ತಮ್ಮ ಕಂಪೆನಿ ಸಂಯೋಗವಾಗುವಾಗ ಕಾರ್ಯದರ್ಶಿ ತಾನಾಗಿಯೇ ಷೇರುದಾರರಿಗೆ ಪತ್ರ ಬರೆಯುತ್ತಾನೆ. ಸಕಲ ಸದಸ್ಯರ ಸಭೆ, ಲಾಭಾಂಶ ಹಂಚಿಕೆ, ವಾರ್ಷಿಕ ವರದಿ ಪತ್ರಗಳನ್ನು ಕಾರ್ಯದರ್ಶಿ ಷೇರುದಾರರಿಗೆ ಕಳಿಸಬೇಕಾಗುತ್ತದೆ; ಉಳಿದವರೆಲ್ಲರಿಗಂತ ಕಾರ್ಯದರ್ಶಿ ವ್ಯವಹಾರ ಷೇರುದಾರರೊಂದಿಗೆ ಹೆಚ್ಚು ನಡೆಯುತ್ತದೆ ಎನ್ನಬಹುದು.

ಸಿಬ್ಬಂದಿಕಾರ್ಯದರ್ಶಿ: ಕಾರ್ಯದರ್ಶಿ ಕಂಪೆನಿಯ ನೌಕರ ವರ್ಗದವರೊಡನೆ ಯಾಂತ್ರಿಕವಾಗಿ ವ್ಯವಹರಿಸಲಾಗದು; ಅವರ ಮಿತ್ರನತೆ ಮಾರ್ಗದರ್ಶಿಯಂತೆ ಹಿತಚಿಂತನಕನಂತೆ ಮಹಾದಾಶನಿಕನಂತೆ ವ್ಯವಹರಿಸಬೇಕು; ಅವರ ಕಷ್ಟಸುಖಗಳಲ್ಲಿ ಪಾಲ್ಗೊಂಡು ಸಾಕಷ್ಟು ನೆರವನ್ನು ನೀಡಬೇಕು; ಪ್ರತಿಯೊಬ್ಬ ನೌಕರಿನಿಗೂ ಅವನದೇ ಆದ ಶಕ್ತಿ ಸಾಮರ್ಥ್ಯ, ಇತಿ ಮಿತಿ, ಕಷ್ಟಸುಖಗಳಿರುತ್ತವೆ ಎಂಬುದನ್ನು ಕಾರ್ಯದರ್ಶಿ ನೆನಪಿಡಬೇಕು. ಆದಕಾರಣ ಒಬ್ಬರ ಬೇಡಿಕೆ ಮತ್ತೊಬ್ಬರ ಬೇಡಿಕೆಯಾಗಲಾರದು; ವಿಭಿನ್ನ ದೃಷ್ಟಿಕೋನಗಳಿಂದ ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ನೌಕರರ ಹಿತವೆಷ್ಟು ಮುಖ್ಯವೋ ಕಂಪೆನಿಯ ಹಿತರಕ್ಷಣೆ ಮಾಡುವುದೂ ಅಷ್ಟೇ ಮುಖ್ಯ. ಆತ ನೌಕರರ ಅನುಚಿತ ಬೇಡಿಕೆಗಳನ್ನು ಈಡೇರಿಸುವಂತಿಲ್ಲ; ಅನರ್ಥ ಆಕ್ಷೇಪಣೆಗಳ ಕಡೆ ಲಕ್ಷ್ಯವೀಯುವಂತಿಲ್ಲ, ಸ್ವಾರ್ಥದ ಬೆದರಿಕೆಗಳನ್ನು ಮನ್ನಿಸುವಂತಿಲ್ಲ, ಕಂಪೆನಿ ವಿರುದ್ಧದ ಪ್ರಯತ್ನಗಳನ್ನು ಹತ್ತಿಕ್ಕದೆ ಬಿಡುವಂತಿಲ್ಲ. ಇದು ಕಾರ್ಯದರ್ಶಿ ಮತ್ತು ನೌಕರರ ವಿಷಯಕ್ಕೆ ಅನ್ವಯಿಸುವ ಮಾತಾಯಿತು.

ಇನ್ನೂ ಕೆಲವು ಸಂಗತಿಗಳಲ್ಲಿ ಕಾರ್ಯದರ್ಶಿ ಮಧ್ಯವರ್ತಿಯ ಪಾತ್ರವನ್ನು ವಹಿಸುತ್ತಾನೆ. ನಿರ್ದೇಶಕರ ಮಂಡಳಿ ತೀರ್ಮಾನಗಳನ್ನು ಕಾರ್ಯರೂಪಕ್ಕೆ ತರುವಲ್ಲಿ *೮, ನೌಕರರ ಕೋರಿಕೆಗಳನ್ನು ಮಂಡಳಿಯ ಮುಂದಿಡುವುದರಲ್ಲಿ ಇಬ್ಬರಿಗೂ ತೃಪ್ತಿಯುಂಟಾಗುವ ರೀತಿಯಲ್ಲಿ ಕಾರ್ಯದರ್ಶಿ ವರ್ತಿಸಬೇಕು. *೯. ನಿರ್ದೇಶಕ ಮಂಡಳಿಯಲ್ಲಿ “ನಮ್ಮ ಕೋರಿಕೆಗಳನ್ನೂ ಕುಂದುಕೊರತೆಗಳನ್ನೂ ಸಮರ್ಪಕವಾಗಿ ಮಂಡಿಸಿ ಸಮಸ್ಯೆಗಳ ಪರಿಹಾರಕ್ಕೆ ನೆರವಾಗಲಿಲ್ಲ” ಎಂಬ ಭಾವನೆ ಸಿಬ್ಬಂದಿ ವರ್ಗಕ್ಕೆ ಬರಬಾರದು. ಕಾರ್ಯದರ್ಶಿ ನಮ್ಮ ತೀರ್ಮಾನಗಳನ್ನು ಸಾರ್ಥಕವಾಗಿ ಕಾರ್ಯರೂಪಕ್ಕೆ ಇಳಿಸುವಲ್ಲಿ, ಸಿಬ್ಬಂದಿಯನ್ನು ಸರಿಯಾಗಿ ಬಳಸಿಕೊಳ್ಳುವುದಿಲ್ಲ ಎಂಬ ಭಾವನೆ ನಿರ್ದೇಶಕರಿಗೆ ಬರಬಾರದು. ಆದಕಾರಣ ಕಾರ್ಯದರ್ಶಿ ಮುಖ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯಾಲಯದ ವಿವಿಧ ಭಾಗಗಳ ಕಾರ್ಯಗಳನ್ನು ಸಂಘಟಿಸಬೇಕಾಗುತ್ತದೆ: ಮೇಲ್ವಿಚಾರಣೆ ನಡೆಸಬೇಕಾಗುತ್ತದೆ. ಷೇರುವಿಭಾಗ, ಪತ್ರವ್ಯವಹಾರ ವಿಭಾಗ, ದಾಖಲೆ ವಿಭಾಗ, ಹಣಕಾಸಿನ ವಿಭಾಗ, ಲೆಕ್ಕಪತ್ರ ವಿಭಾಗ ಎಂದು ಕಾರ್ಯ ವಿಂಗಡಣೆ ಮಾಡಿಕೊಂಡು, ಆಧುನಿಕ ವಾಣಿಜ್ಯ ಸಾಧನಗಳನ್ನೂ ಸಂಪರ್ಕ ಮಾಧ್ಯಮಗಳನ್ನೂ ಸಮರ್ಥವಾಗಿ ಬಳಸಿಕೊಂಡು ಕಾರ್ಯ ನಿರ್ವಹಿಸಬೇಕು. ಒಳ್ಳೆಯ ಆಡಳಿತಗಾರನಾಗದವನು ಒಳ್ಳೆಯ ಕಾರ್ಯದರ್ಶಿಯಾಗಲಾರನು.

ಕಂಪೆನಿ ನೊಂದಾವಣೆಗೆ ಸಂಬಂಧಿಸಿದ ಕರ್ತವ್ಯಗಳು: ಕಂಪೆನಿ ರಿಜಿಸ್ಟ್ರಾರ್ ಅವರಿಗೆ ಸಂಬಂಧಿಸಿದಂತೆ ಕಾರ್ಯದರ್ಶಿ ಹಲವಾರು ಹಂತಗಳಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಕಂಪೆನಿ ನೊಂದಾವಣೆಯಾಗುವ ಮುನ್ನ ಕರೆಯಲಾಗುವ ಪ್ರವರ್ತಕರ ಸಭೆಗಳಿಗೆ ಕಂಪೆನಿ ಕಾನೂನುಗಳನ್ನು ಗಮನಕ್ಕೆ ತರುವುದು. ಮನವಿಪತ್ರ, ನಿಯಮ ಪತ್ರ, ದಾಖಲೆ ಪತ್ರ, ಕಂಪೆನಿ ವಿವರ ತಯಾರಿಸುವುದು, ಸಭೆಯ ನಿರ್ಣಯಗಳನ್ನು ಸಿದ್ಧಪಡಿಸುವುದು, ಇವುಗಳನ್ನು ರಿಜಿಸ್ಟ್ರಾರರಿಗೆ ಕಳಿಸಿಕೊಟ್ಟ ನೊಂದಾವಣಿಯಾಗುವಂತೆ ಮಾಡುವುದು ಕಾರ್ಯದರ್ಶಿಯ ಕರ್ತವ್ಯಗಳಾಗಿವೆ; ನೊಂದಾವಣೆಯಾದ ಕೂಡಲೇ ನಿರ್ದೇಶಕ ಮಂಡಳಿಯ ಪ್ರಥಮ ಸಭೆಯನ್ನು ಕರೆದು ಗೊತ್ತುವಳಿಗಳ ಸ್ವೀಕಾರಕ್ಕೆ ವ್ಯವಸ್ಥೆ ಮಾಡುವುದು, ಅತ್ಯಗತ್ಯ ದಾಖಲೆ ಪತ್ರಗಳನ್ನು ರಿಜಿಸ್ಟ್ರಾರರಿಗೆ ಕಳಿಸಿ ವ್ಯವಹಾರ ಪ್ರಾರಂಭಿಸಲು ಅನುಮತಿ ಪಡೆಯಬೇಕು. ಅನಂತರ ಶಾಸನಬದ್ಧ ಸಭೆ ಕರೆದು ವರದಿ ತಯಾರಿಸಿ ನಿರ್ಣಯಾನುಸಾರ ಷೇರು ಸಂಗ್ರಹ ಮತ್ತು ಷೇರು ಹಂಚಿಕೆ ಕಾರ್ಯ ನಡೆಸುವುದು ಇವೇ ಮೊದಲಾದ ಕಾರ್ಯಗಳನ್ನು ನೊಂದಾವಣೆ ಮೊದಲು ಪ್ರಾರಂಭದ ಹಂತಗಳಲ್ಲಿ, ಅನಂತರ ನಿರ್ವಹಿಸಬೇಕಾದ ಕಾರ್ಯದರ್ಶಿ ಕರ್ತವ್ಯಗಳನ್ನು ನೊಂದಾವಣೆಗೆ ಸಂಬಂಧಿಸಿದ ಕರ್ತವ್ಯಗಳೆಂದು ಕರೆಯಬಹುದು.

ಸಂಕೀರ್ಣ ಕರ್ತವ್ಯಗಳು: ನಿರ್ದೇಶಕ ಮಂಡಳಿ, ಷೇರುದಾರರು ಮತ್ತು ಸಿಬ್ಬಂದಿ ವರ್ಗದವರೊಡನೆ ಕಾರ್ಯದರ್ಶಿ ನಡೆಸುವ ವ್ಯವಹಾರ ಕಂಪೆನಿಯ ಒಳ ವ್ಯವಹಾರವಾಗಿರುತ್ತದೆ. ಕಂಪೆನಿಗೆ ಸಂಬಂಧಿಸಿದ, ಅಷ್ಟೇ ಮುಖ್ಯವಾದ ಆದರೆ ಹೊರಗಿನವರೊಡನೆ ಕಾರ್ಯದರ್ಶಿ ನಡೆಸುವ ವ್ಯವಹಾರಗಳನ್ನು ‘ಸಂಕೀರ್ಣ ಕರ್ತವ್ಯ’ಗಳೆಂದು ಕರೆಯಬಹುದು.

ಕಾರ್ಯದರ್ಶಿ ಕಂಪೆನಿಯ ಲೆಕ್ಕವನ್ನು ಸರಿಯಾಗಿಟ್ಟು ಬ್ಯಾಂಕುಗಳೊಡನೆ ನಿರಂತರ ವ್ಯವಹಾರವನ್ನು ನಡೆಸಬೇಕಾಗುತ್ತದೆ. ಬ್ಯಾಂಕಿನಲ್ಲಿ ಲೆಕ್ಕ ಪ್ರಾರಂಭಿಸುವಾಗ, ಓವರ್ ಡ್ರಾಫ್ಟ್ ಸೌಲಭ್ಯ ಕೇಳಿದಾಗ, ವ್ಯಾಪಾರ ಸಂಸ್ಥೆಯೊಂದರ ಬಗ್ಗೆ ಪರಾಮರ್ಶನವನ್ನು ಕೇಳುವಾಗ, ಕಂಪೆನಿಯ ವಿಳಾಸದಲ್ಲಿ ಬದಲಾವಣೆಯಾದಾಗ ಕಾರ್ಯದರ್ಶಿ ಬ್ಯಾಂಕಿನೊಡನೆ ವ್ಯವಹರಿಸಬೇಕಾಗುತ್ತದೆ. * ೧೦

ಸಂಸ್ಥೆ ಎಂದ ಮೇಲೆ ಅಲ್ಲಿ ಹತ್ತಾರು ಜನರಿರುತ್ತಾರೆ, ಹಣದ ವ್ಯವಹಾರ, ಅಧಿಕಾರದ ಚಲಾವಣೆಯಾಗುವಾಗ ಅಲ್ಲಿ ಸಮಸ್ಯೆಗಳೂ ಬರಬಹುದು; ನಿಯಮಗಳನ್ನು ಪ್ರಶ್ನಿಸಿ ಕೋರ್ಟು ಕಚೇರಿಕಟ್ಟೆಯನ್ನು ಹತ್ತಿ ನ್ಯಾಯಬೇಡುವುದು ಎಲ್ಲಾ ಕಡೆ ಕಂಡುಬರುವ ವಿಚಾರವಾಗಿದೆ. ಕಂಪೆನಿ ವ್ಯವಹಾರದಲ್ಲಿಯೂ ಅನ್ಯಾಯಕ್ಕೆ ಸಂಬಂಧಿಸಿದ ಕಾನೂನುಗಳ ಔಚಿತ್ಯವನ್ನು ಪ್ರಶ್ನಿಸುವ ಸಂದರ್ಭಗಳಿದ್ದೇ ಇರುತ್ತವೆ. ಇಂಥ ಸನ್ನಿವೇಶಗಳಲ್ಲಿ, ಕಂಪೆನಿಗೋಸ್ಕರ ನೇಮಕವಾದ ನ್ಯಾಯ ಸಲಹೆಗಾರರೊಂದಿಗೆ ಕಾರ್ಯದರ್ಶಿ ವ್ಯವಹರಿಸಬೇಕಾಗುತ್ತದೆ. ಕಂಪೆನಿಯ ತೀರ್ಮಾನಗಳು ಕಾನೂನು ಬದ್ಧವಾಗಿವೆಯೇ? ಅವನ್ನು ಕಾರ್ಯರೂಪಕ್ಕೆ ತರುವಲ್ಲಿ ಕಾನೂನು ಭಂಗ ಪ್ರಸಂಗಗಳೇನಾದರೂ ಬರುತ್ತವೆಯೇ? ಎಂಬುದನ್ನು ತಿಳಿಯಲು ಕಾರ್ಯದರ್ಶಿ ನ್ಯಾಯ ಸಲಹೆಗಾರರೊಂದಿಗೆ ಸಮಾಲೋಚನೆ ನಡೆಸಬೇಕಾಗುತ್ತದೆ. ಇಂಥ ಸಂದರ್ಭಗಳಲ್ಲಿ ನ್ಯಾಯ ಸಲಹೆಗಾರರ ಪಾತ್ರ ಮಹತ್ವಪೂರ್ಣವಾದುದು. ಸಮಯೋಚಿತವಾಗಿ ನ್ಯಾಯ ಸಲಹೆಗಾರರ ಮಾರ್ಗದರ್ಶನ ಪಡೆಯದ ಕೋಶಾಧಿಕಾರಿ ಕಂಪೆನಿಯನ್ನು ತೊಡಕಿನಲ್ಲಿ ಸಿಲುಕಿಸಿ ಬಿಡುತ್ತಾನೆ. ಆದಕಾರಣ ಅಗತ್ಯಬಿದ್ದಾಗಲೆಲ್ಲಾ ಕಾರ್ಯದರ್ಶಿ ನ್ಯಾಯ ಸಲಹೆಗಾರರೊಂದಿಗೆ ವ್ಯವಹರಿಸುವುದೂ ಆತನ ಕರ್ತವ್ಯಗಳಲ್ಲಿ ಒಂದಾಗಿದೆ *೧೧. ಕಂಪೆನಿಯ ಲೆಕ್ಕ ಪರಿಶೋಧಕರನ್ನು ಕರೆಯಲು, ಅವರು ಕೇಳಿದ ದಾಖಲೆಗಳನ್ನು ಒದಗಿಸಲು, ಅವರೆತ್ತಿದ್ದ ಆಕ್ಷೇಪ ಮತ್ತು ಲೋಪದೋಷಗಳನ್ನು ನಿರ್ದೇಶಕ ಮಂಡಳಿಯ ಮುಂದಿಟ್ಟು ಪಡೆದ ಉತ್ತರಗಳನ್ನು ತಿಳಿಸಲು ಮತ್ತು ಇತರ ಅನೇಕ ಸಂದರ್ಭಗಳಲ್ಲಿ ಕಾರ್ಯದರ್ಶಿ ಲೆಕ್ಕ ಪರಿಶೋಧಕರೊಡನೆ ಪತ್ರವ್ಯವಹಾರ ಮಾಡಬೇಕಾಗುತ್ತದೆ. ಒಟ್ಟಿನಲ್ಲಿ  ಕಾರ್ಯದರ್ಶಿರಂಗ ನಿರ್ದೇಶಕರಂತೆ ಕಂಪೆನಿಯ ಎಲ್ಲ ಪಾತ್ರಗಳೊಡನೆ ಸಮರ್ಪಕವಾಗಿ ವ್ಯವಹರಿಸಿ ಕರ್ತವ್ಯಗಳನ್ನು ನಿರ್ವಹಿಸುವ ಸರ್ವಾಂತರ್ಯಾಮಿಯಾಗಿರುತ್ತಾನೆ.

ಕಾರ್ಯದರ್ಶಿ ಸಾರ್ವಜನಿಕರೊಂದಿಗೆ ವ್ಯವಹರಿಸುವ ಸಂದರ್ಭಗಳೂ ಇರುತ್ತವೆ. ಕಂಪೆನಿಯ ಪ್ರತಿಯೊಂದು ಕಾಗದ ಪತ್ರವೂ ಕಾರ್ಯದರ್ಶಿ ಮೂಲಕವೇ ಹೋಗಬೇಕು, ಹೊರಗಿನ ಎಲ್ಲಾ ಪತ್ರಗಳೂ  ಕಾರ್ಯದರ್ಶಿಗೆ ತಲುಪಬೇಕು. ಆದ್ದರಿಂದ ಕಾರ್ಯದರ್ಶಿಯನ್ನು ‘ಸಂಪರ್ಕದ ಕೊಂಡಿ’ ಎನ್ನಬಹುದು. ಅನೇಕ ವೇಳೆ ಸಾರ್ವಜನಿಕರು, ಸಾಲಿಗರು, ಇತರ ಸಾಹುಕಾರರು ಕಂಪೆನಿ ಬಗ್ಗೆ ಮಾಹಿತಿಗಳನ್ನು ಕೋರಿದಾಗ, ಕಾರ್ಯದರ್ಶಿ ಅದನ್ನು ಪೂರೈಸಬೇಕು. ಅಂತಹ ಸಂದರ್ಭಗಳಲ್ಲಿ ಕಂಪೆನಿಯ ವ್ಯವಹಾರಕ್ಕೆ ಧಕ್ಕೆ ಬಾರದಂತೆ ರಹಸ್ಯ ಪಾಲನೆಗೆ ಭಂಗವುಂಟಾಗದಂತೆ ವ್ಯವಹರಿಸಬೇಕಾಗುತ್ತದೆ. ಹೀಗೆ ಕಂಪೆನಿಯ ಹೊರಗಿನ ಸಂಸ್ಥೆಗಳನ್ನು ಸಂಪರ್ಕಿಸುವ ಜವಾಬ್ದಾರಿ ಕಾರ್ಯವೂ ಕಾರ್ಯದರ್ಶಿಗೇ ಸೇರಿದ್ದು, ಉದಾಹರಣೆಗೆ: ಕಂಪೆನಿಯ ಸರಕುಗಳನ್ನು ಜಾಹೀರಾತು ಮಾಡಲು, ಷೇರುಗಳನ್ನು ಸಾರ್ವಜನಿಕರಿಗೆ ತೆರೆಯಲು, ಇನ್ನಿತರ ಪ್ರಕಟಣೆಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುವಾಗ ಕಾರ್ಯದರ್ಶಿ ಜಾಹೀರಾತು ಸಂಸ್ಥೆಯೊಂದಿಗೆ ವ್ಯವಹರಿಸಬೇಕಾಗುತ್ತದೆ.

ವರದಿಗಳನ್ನು ಸಿದ್ಧಪಡಿಸುವುದು ಕಾರ್ಯದರ್ಶಿಯ ಪ್ರಮುಖ ಕರ್ತವ್ಯಗಳನ್ನು ಒಂದಾಗಿದೆ. ಸಾಮಾನ್ಯವಾಗಿ ಅದು ಏಕವ್ಯಕ್ತಿ ವರದಿಯಾಗಿದ್ದು ಅದನ್ನು ಕಾರ್ಯದರ್ಶಿಯೇ ಸಲ್ಲಿಸುತ್ತಾನೆ. ವರದಿಗಳನ್ನು ಸಲ್ಲಿಸುವ ಸಂದರ್ಭಗಳು ಅನೇಕ ಇರುತ್ತವೆ.

ವ್ಯಾಪಾರ ಇಳಿಮುಖವಾದಾಗ ಅದಕ್ಕೆ ಕಾರಣಗಳನ್ನೂ ಪರಿಹಾರೋಪಾಯಗಳನ್ನೂ ತಿಳಿಸುವ ವರದಿ, ಕಾರ್ಯಾಲಯದಲ್ಲಿ ಜನಸಂದಣಿ ಹೆಚ್ಚಾಗಿ ಕೆಲಸಕ್ಕೆ ತೊಂದರೆಯದಾಗ ಪರಿಹಾರ ಮಾರ್ಗ ಸೂಚಿಸುವ ವರದಿ ಅನ್ಯ ಕಂಪೆನಿಗಳ ಷೇರುಗಳನ್ನು ಕೊಳ್ಳುವ ವಿಚಾರವಾಗಿ ತೀರ್ಮಾನ ಕೈಗೊಳ್ಳಲು ನೆರವಾಗುವ ವಿವರಗಳ ನೀಡಿಕೆಗೆ ಸಲ್ಲಿಸುವ ವರದಿ, ಸಂಸ್ಥೆಗೆ ಬರಬೇಕಾದ ಬಾಕಿ ಅತಿಯಾಗಿ ಉಳಿದಿರುವ ಬಗ್ಗೆ ಮತ್ತು ವಸೂಲಿ ವಿಧಾನಗಳ ಬಗ್ಗೆ ಸಲ್ಲಿಸುವ ವರದಿ ಮೊದಲಾದ ಏಕವ್ಯಕ್ತಿ ವರದಿಗಳನ್ನು ಕಂಪೆನಿ ಕಾರ್ಯದರ್ಶಿ ಸಲ್ಲಿಸುತ್ತಾನೆ. ಕೆಲವೊಮ್ಮೆ ಬೇರೆ ತಜ್ಞರಿಗೂ ಈ ಕಾರ್ಯವನ್ನು ವಹಿಸಬಹುದು.

ಕಾರ್ಯದರ್ಶಿ ಪತ್ರವ್ಯವಹಾರರಿಜಿಸ್ಟ್ರಾರರೊಂದಿಗೆ ಕಂಪೆನಿಯ ರಿಜಿಸ್ಟ್ರಾರಾದ ಕಾರ್ಯಾಲಯದ ವಿಳಾಸ ಬದಲಾವಣೆ ಬಗ್ಗೆ ಬರೆದ ಪರಿಪತ್ರ.

ಮಾದರಿ

ಅಲಂಕಾರ್ ಉಡುಪು ಕಂ.ಲಿ
ಈಶ್ವರನಗರ

ತಂತಿ: ‘ಅಲಂಕಾರ್’                                        ಗಣೇಶ ದೇವಸ್ಥಾನ ರಸ್ತೆ
ದೂರವಾಣಿ: ೬೪೩೮೯೦                                ಪಾರ್ವತಿ ಪೇಟೆ
ಈಶ್ವರನಗರ

ಪತ್ರಾಂಕ: ರಿವ್ಯಪ; ೨-೧-೧೯೮೭     ದಿನಾಂಕ: ೨೦ನೆಯ ಡಿ, ೧೯೮೭

ಅವರಿಗೆ,
ರಿಜಿಸ್ಟ್ರಾರರು,
ಕೊಠಡಿ ಸಂಖ್ಯೆ ೪,
ಬಹುಮಹಡಿ ಕಟ್ಟಡ,
ನೃಪತುಂಗ ರಸ್ತೆ, ಬೆಂಗಳೂರು.

ಮಾನ್ಯರೆ,

ವಿಷಯ: ನಮ್ಮ ಕಂಪೆನಿ ವಿಳಾಸದ ಬದಲಾವಣೆ ಬಗ್ಗೆ

ನಮ್ಮ ಕಂಪನಿಯ ಕೇಂದ್ರ ಕಾರ್ಯಾಲಯದ ಎಲ್ಲಾ ವ್ಯವಹಾರಗಳನ್ನೂ ಮೇಲ್ಕಂಡ ವಿಳಾಸದ ಮೂಲಕ ನಡೆಸುತ್ತಿರುವುದು ತಮಗೆ ತಿಳಿದ ಸಂಗತಿಯಾಗಿದೆ. ಇನ್ನು ಮುಂದೆ ನಮ್ಮ ವಿಳಾಸದಲ್ಲಿ ಬದಲಾವಣೆಯಾಗುತ್ತದೆ ಎಂಬುದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ.

ವಿಷ್ಣಪುರದಲ್ಲಿ ನಿರ್ಮಿಸಲಾಗಿರುವ ನಮ್ಮ ಕಂಪೆನಿಯ ಸ್ವಂತ ಕಟ್ಟಡಕ್ಕೆ ನಮ್ಮ ಕಾರ್ಯಾಲಯವನ್ನು ೧ನೇಯ ಜನವರಿ, ೧೯೮೮ರಿಂದ ವರ್ಗಾಯಿಸುವವರಿದ್ದೇವೆ. ಆದ್ದರಿಂದ ತಾವು ದಯಾಮಾಡಿ ಎಲ್ಲಾ ವ್ಯವಹಾರಗಳನ್ನೂ ೧ನೆಯ ಜನವರಿ, ೧೯೮೮ರಿಂದ ನಮ್ಮ ಹೊಸ ಕಾರ್ಯಾಲಯದ ವಿಳಾಸದೊಂದಿಗೆ ನಡೆಸಬೇಕೆಂದು ಪ್ರಾರ್ಥಿಸುತ್ತೇನೆ.

ನಮ್ಮ ಕಂಪೆನಿಯ ಹೊಸ ವಿಳಾಸ:
ಅಲಂಕಾರ್ ಉಡುಪು ಕಂ.ಲಿ.
ಕಾಳಿ ಬೀದಿ, ವಿಷ್ಣುಪುರ
ಈಶ್ವರನಗರ

ತಮ್ಮ ವಿಶ್ವಾಸಿ,
ಸರ್ವೋತ್ತಮರಾವ್
ಅಲಂಕಾರ್ ಉಡುಪು ಕಂ.ಲಿ