ಕಾರ್ಯದರ್ಶಿ ಪತ್ರ ವ್ಯವಹಾರ ತಿಳಿವಳಿಕೆ ಪತ್ರ

ಮಾದರಿ

ಮಹದೇಶ್ವರ ಕಂಪನಿ ಲಿಮಿಟೆಡ್
ಬಸ್ತಿಪೇಟೆ, ಕೊಳ್ಳೆಗಾಲ ತಾಲ್ಲೂಕು, ಮೈದಾನ ಪುರ

ತಂತಿ: ‘ಮಕಂ’                                            ದಿ.೪ನೇಯ ಡಿಸೆಂ, ೧೯೮೭
ದೂರವಾಣಿ: ೬೩೯೦೪೨

ಪತ್ರಾಂಕ: ನಿಮಂಸ: ೪ ೧/೫೧೯೮೭.

ಶ್ರೀ ಬಂಗಾರ ನಾಯ್ಡು
ಶಿರಗೊಂಡ
ಹೊಳೆಗಾಲ ತಾಲ್ಲೂಕು, ಮೈದಾನಪುರ.

ಮಾನ್ಯರೆ,

ಕಂಪೆನಿ ನಿರ್ದೇಶಕರ ಮಂಡಳಿಯ ಸಭೆಯನ್ನು ೨೨-೧೨-೧೯೮೭ರಂದು ಬೆಳಿಗ್ಗೆ ೧೦:೩೦ ಗಂಟೆಗೆ ಕೆಳಕಂಡ ಕಾರ್ಯಕಲಾಪಗಳ ಬಗ್ಗೆ ಚರ್ಚೆ ನಡೆಸಲು, ಶ್ರೀ ರಾಮರಾಜಪ್ಪನವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ.

ಇವು ಮಂಡಳಿ ಸಭೆಗೆ, ಸಕಾಲಕ್ಕಿ ಹಾಜರಾಗಬೇಕೆಂದು ಬಿನ್ನಹ.

ತಮ್ಮ ವಿಶ್ವಾಸಿ,
ಜಗನ್ನಾಥ ಭಟ್ಟ
ಕಾರ್ಯದರ್ಶಿ

ಕಾರ್ಯಸೂಚಿ:

೧. ಕಳೆದ ಸಭೆಯ ನಡೆವಳಿಕೆಗಳ ಸ್ಥಿರೀಕರಣ
೨. ಕಾನೂನು ಸಲಹೆಗಾರರ ನೇಮಕಾತಿ
೩. ಕಂಪೆನಿ ನೌಕರರ ಸಂಬಳ ಸುಧಾರಣಾ ಸಮಿತಿಯ ವರದಿ ಪರಿಶೀಲನೆ
೪. ಷೇರು ಸಂಖ್ಯೆ ೪೮೭-೫೮೬ ವರ್ಗಾವಣೆ ವಿಚಾರ
೫. ವಿಶೇಷ ನಿರ್ದೇಶಕರ ಮಂಡಳಿಗೆ ಸಂಬಂಧಿಸಿದ ನಿಯಮಾವಳಿ ತಿದ್ದುಪಡಿ ಮತ್ತು ಸಕಲಸದಸ್ಯರ ಸಾಮಾನ್ಯ ಸಭೆಯನ್ನು ಕರೆಯಲು ದಿನಾಂಕ ನಿರ್ಧಾರ
೬. ನವೀನ ಮಾರಾಟ ಮಳಿಗೆಯೊಂದನ್ನು ತೆರೆಯುವ ವಿಚಾರ
೭. ಅಧ್ಯಕ್ಷರ ಅನುಮತಿ ಪಡೆದು ಚರ್ಚಿಸಬೇಕಾದ ಇತರ ವಿಚಾರಗಳು

 

ಕಾರ್ಯದರ್ಶಿ ಪತ್ರ ವ್ಯವಾರವಿರ್ದೇಶಕರೊಡನೆ
ಮಾದರಿ

ಜೈ ಕರ್ನಾಟಕ ಜಲಯಂತ್ರ ತಯಾರಿಕಾ ಕಂ., ಲಿ.
ವರುಣ ಭವನ, ಮಂಡಿಪೇಟೆ, ತುಮಕೂರು

ತಂತಿ: ‘ಸುಜಲ’                                           ದಿನಾಂಕ: ೧೭-೧೧-೧೯೮೭
ದೂರವಾಣಿ: ೬೮೭೬೬

ಶ್ರೀರಾಮಾನಾರಯಣ್
೪೮, ೩೭ನೆಯ ಅಡ್ಡರ‍್ತೆ
ಜೆ.ಪಿ.ನಗರ
ಬೆಂಗಳೂರು-ಇವರಿಗೆ

ಮಾನ್ಯರೆ,

ನಮ್ಮ ಸಂಸ್ಥೆಯ ನಿರ್ದೇಶಕ ಮಂಡಲಿಯು ಡಿಸೆಂಬರ್ ತಿಂಗಳ ಸಭೆಯನ್ನು ಆ ತಿಂಗಳ ಮೊದಲ ಭಾನುವಾರದ ಬೆಳಿಗ್ಗೆ ೧೦:೩೦ ಗಂಟೆಗೆ ಕೇಂದ್ರ ಕಾರ್ಯಾಲಯದಲ್ಲಿ ಏರ್ಪಡಿಸಿದೆ. ತಾವು ಸೂಚಿಸಿದ ವಿಷಯದ ಬಗ್ಗೆ ಮಾನ್ಯರಂದು ವಿಷಯವನ್ನು ಸೂಚಿಸಿ ಬರೆದ ಪತ್ರ ತಲುಪಿತು. ತಾವು ಸೂಚಿಸಿದ ವಿಷಯದ ಬಗ್ಗೆ ಮಾನ್ಯ ಅಧ್ಯಕ್ಷರೊಡನೆ ವಿವರವಾಗಿ ಚರ್ಚಿಸಲಾಯಿತು. ‘ಈ ವಿಷಯ ವಾರ್ಷಿಕ ಸಾಧಾರಣ ಸಭೆಯ ಮುಂದೆ ಚರ್ಚೆಗೆ ಬರಬೇಕಾಗಿದೆ’ ಎಂದು ಅಧ್ಯಕ್ಷರು ತೀರ್ಮಾನಿಸಿದ್ದಾರೆ. ಆದ್ದರಿಂದ ನಿರ್ದೇಶಕ ಮಂಡಳಿಯ ಈ ಮಾಸಿಕ ಸಭೆಯಲ್ಲಿ ತಾವು ಸೂಚಿಸಿದ ವಿಷಯದ ಪ್ರಸ್ತಾಪವಿಲ್ಲವೆಂದು ಈ ಮೂಲಕ ತಿಳಿಯಪಡಿಸುತ್ತಿದ್ದೇನೆ.

ತಮ್ಮ ವಿಶ್ವಾಸಿ
ಜಿಗಣಿ ನೆಲ್ಲಪ್ಪ
ಕಾರ್ಯದರ್ಶಿ

ಲಾಭಾಂಶ ಕಡಿಮೆ ಎಂದು ದೂರಿದ ಷೇರುದಾರರಿಗೆ ಕಾರ್ಯದರ್ಶಿಯ ಉತ್ತರ
ಮಾದರಿ

ಭೋಗರಾಜ ಕಂಪನಿ ಲಿಮಿಟೆಡ್

ತಂತಿ: ‘ಭೋಗ’                                                       ಕರಣಿಕ ರಸ್ತೆ
ದೂರವಾಣಿ: ೬೩೪೩೬೭೮                               ಜಕ್ಕವಳ್ಳಿ

ದಿ: ೧೪-೮-೧೯೮೭

ಶ್ರೀ ಧನಪಾಲಯ್ಯ
ಮಸೀದಿ ರಸ್ತೆ
ಮಲ್ಲಿಗೆ ಹಳ್ಳಿ

ಮಾನ್ಯರೆ,

೧೯೮೬ನೆಯ ಸಾಲಿಗೆ ೯% ಲಾಭಾಂಶ ಹಂಚಿಕೆ ಏನೇನೂ ಸಾಲದು, ಕಂಪೆನಿ ಹಲವು ಲಕ್ಷ ರೂ. ಲಾಭ ಗಳಿಸಿರುವಾಗ ಇಷ್ಟು ಅತ್ಯಲ್ಪ ಪ್ರಮಾಣದಲ್ಲಿ ಲಾಭಾಂಶ ಹಂಚಿಕೆ ಉಚಿತವಲ್ಲವೆಂದು ತಮ್ಮ ಪತ್ರದಲ್ಲಿ ದೂರಿದ್ದೀರಿ; ಇನ್ನೂ ಹೆಚ್ಚಿನ ಲಾಭಾಂಶ ಘೋಷಿಸಲು ಕೋರಿದ್ದೀರಿ.

ಷೇರುದಾರರು ಲಾಭಾಂಶದಲ್ಲಿ ನ್ಯಾಯವಾದ ಪಾಲನ್ನು ನಿರೀಕ್ಷಿಸುತ್ತಾರೆ ಮತ್ತು ಹಾಕಿದ ಬಂಡವಾಳ ವ್ಯರ್ಥವೆಂಬ ಭಾವನೆ ಅವರಿಗೆ ಬರದಂತೆ ಕಂಪೆನಿ ವರ್ತಿಸಬೇಕು ಎಂಬುದು ಸಹಜವಾದ ಮಾತಾಗಿದೆ. ಆದರೆ ಕೇವಲ ಲಾಭದಾಸೆಯಿಂದಲೇ ಬಂಡವಾಳವನ್ನು ಗಮನಿಸಲಾಗದು. ಕಂಪೆನಿಯ ಭವಿಷ್ಯದ ಯೋಜನೆಗಳನ್ನೂ ಬಂಡವಾಳವನ್ನು ಗಮನಿಸಲಾಗದು. ಕಂಪೆನಿಯ ಭವಿಷ್ಯದ ಯೋಜನೆಗಳನ್ನೂ ಆರ್ಥಿಕ ಸ್ಥಿರತೆಯನ್ನೂ ಗಮನಿಸಬೇಕಾಗುತ್ತದೆ. ಇತರ  ಸಂಸ್ಥೆಗಳ ಇದೇ ಸ್ಥಿತಿಯಲ್ಲಿದ್ದರೂ ನೀಡಿರುವ ಲಾಭಾಂಶದ ದರವನ್ನೂ ಗಮನಿಸಬೇಕಾಗುತ್ತದೆ; ಲಾಭಾಂಶವನ್ನೆಲ್ಲಾ ಪೂರ್ಣವಾಗಿ ‘ಡಿವಿಡಂಡ್’ ಆಗಿ ಹಂಚಲು ಸಾಧ್ಯವಿಲ್ಲ ಎಂಬುದು ಎಲ್ಲರೂ ಒಪ್ಪುವ ಮಾತಾಗಿದೆ; ಹಣ ಕಂಪೆನಿಯ ಬೆಳೆವಣಿಗೆಗೆ ಬೇಕಾಗುತ್ತದೆ.

ಕಳೆದ ಐದು ವರ್ಷಗಳಿಂದ ಲಾಭಾಂಶದರ ಏರುತ್ತಲೇ ಬಂದಿದೆ ಎಂಬುದನ್ನು ಗಮನಿಸಬೇಕು. ನಮ್ಮ ಹಳೆದ ವರದಿಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ೫ ವರ್ಷಗಳ ಹಿಂದೆ ೩% ಲಾಭಾಂಶವಿದ್ದದ್ದು ಕಳೆದ ವರ್ಷ ೬% ಆಯಿತು. ಈ ವರ್ಷ ೯%ಕ್ಕೆ ಏರಿದೆ. ನಿರ್ದೇಶಕ ಮಂಡಳಿಯವರು ಷೇರುದಾರರ ಹಿತಕ್ಕೆ ಆದ್ಯಗಮನವಿತ್ತು ಕಂಪೆನಿಇಯ ಹಿತವನ್ನೂ ಸಮಗ್ರವಾಗಿ ಗಮನಿಸಿ ಪ್ರಸ್ತುತ ವರ್ಷ ಲಾಭಾಂಶ ಹಂಚಿಕೆಯನ್ನು ನಿರ್ಧರಿಸಿದ್ದಾರೆ ಎಂಬುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. ನಿರ್ದೇಶಕ ಮಂಡಳಿಯ ತೀರ್ಮಾನ ಸರ್ವಸಮ್ಮತವೆಂದೂ ಭಾವಿಸಿದ್ದೇನೆ ಈ ವಿವರಗಳು ತಮಗೆ ಸಮಾಧಾನ ನೀಡುತ್ತವೆ ಎಂದು ನಂಬಿದ್ದೇನೆ.

ತಮ್ಮ ವಿಶ್ವಾಸಿ
ಉಮೇಶ್
ಕಾರ್ಯದರ್ಶಿ
ಭೋಗರಾಜ ಕಂ.ಲಿ

ಪಿಕೆ/

ಕಾರ್ಯದರ್ಶಿ ಪತ್ರ ವ್ಯವಹಾರಷೇರುದಾರರೊಂದಿಗೆ
ಮಾದರಿ

ವಿಳಾಸ ಬದಲಾವಣೆಯನ್ನು  ಗುರುತು ಹಾಕಿಕೊಳ್ಳದಿರುವ ಬಗ್ಗೆ ಷೇರುದಾರ ಕಾರ್ಯದರ್ಶಿಗೆ ಬರೆದ ದೂರುಪತ್ರ

ಸಮೀರಕುಮಾರ್
೪೮೮, ಆನೆ ಬಂಡೆ ರಸ್ತೆ
ಹೊನ್ನೇರು ಘಟ್ಟ,
ಗಂಜನಪುರ

ದಿನಾಂಕ: ೧೨-೧೧-೧೯೮೭

ಕಾರ್ಯದರ್ಶಿಯವರು
ಶುಭಮಂಗಳ ಕಂ.ಲಿ.
ಜಯತಿ ಶ್ರೀನಗರ
ಸೊರಟೂರು

ಮಾನ್ಯರೆ,

ನಿಮ್ಮ ಸಂಸ್ಥೆಯಿಂದ ಕಳೆದ ನಾಲ್ಕು ತಿಂಗಳಿಂದ ನನಗೆ ಬರುತ್ತಿರುವ ಪತ್ರಗಳೆಲ್ಲವೂ ನಾನು ಮೊದಲಿದ್ದ ಮನೆಯ ವಿಳಾಸಕ್ಕೆ ತಲುಪುತ್ತಿವೆ. ಕೆಲವು ಕಾಲದ ನಂತರ ಅವು ನನ್ನ ಕೈ ಸೇರುತ್ತವೆ. ನಾಲ್ಕು ತಿಂಗಳ ಹಿಂದೆ ನಾನು ಮನೆ ಬದಲಾಯಿಸಿದ ಕೂಡಲೇ ನಿಮಗೆ ಪತ್ರ ಬರೆದು ಹೊಸಮನೆಯ ವಿಳಾಸವನ್ನು ಕೊಟ್ಟು ಇನ್ನು ಮುಂದೆ ಈ ವಿಳಾಸಕ್ಕೆ ಪತ್ರ ಬರೆಯಿರಿ ಎಂದು ಕೋರಿ ಪತ್ರ ಬರೆದಿದ್ದೆ. ಆದರೆ ಇದುವರೆಗೆ ಒಂದು ಪತ್ರವಾದರೂ ಹೊಸಮನೆಯ ವಿಳಾಸಕ್ಕೆ ಪತ್ರ ಬರೆಯಿರಿ ಎಂದು ಕೋರಿ ಪತ್ರ ಬರೆದಿದ್ದೆ. ಆದರೆ ಇದುವರೆಗೆ ಒಂದು ಪತ್ರವಾದರೂ ಹೊಸಮನೆಯ ವಿಳಾಸಕ್ಕೆ ಬರಲಿಲ್ಲ. ಅಷ್ಟೇ ಅಲ್ಲ, ಎಲ್ಲಾ ಪತ್ರಗಳೂ ಹಳೆಯ ವಿಳಾಸಕ್ಕೆ ತಲುಪುತ್ತಿವೆ. ಅಲ್ಲಿನ ಬಾಡಿಗೆದಾರರಿಗೆ ನನ್ನ ಹೊಸವಿಳಾಸವನ್ನು ಕೊಟ್ಟಿದ್ದೆ ಅವರು ದೊಡ್ಡ ಮನಸ್ಸು ಮಾಡಿ ನಿಮ್ಮಿಂದ ಬಂದ ಪತ್ರಗಳನ್ನೆಲ್ಲಾ ಬದಲಾದ ವಿಳಾಸಕ್ಕೆ ಬರೆದು ಅಂಚೆ ಮೂಲಕ ಕಳಿಸುತ್ತಿದ್ದಾರೆ ಇದು ಅವರ ಸೌಜನ್ಯದ ಮಾತಾಯಿತು.

ಆದರೆ ನೀವು ಇಷ್ಟು ದಿನವಾದರೂ ಹೊಸ ವಿಳಾಸ ಗಮನಿಸದೆ ಹಳೆಯ ವಿಳಾಸಕ್ಕೆ ಪತ್ರಗಳನ್ನು ಕಳಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಇನ್ನು ಮುಂದಾದರೂ ಹೊಸ ವಿಳಾಸಕ್ಕೆ ಪತ್ರಗಳನ್ನು ಕಳಿಸುವ ಕೃಪೆ ಮಾಡುವಿರಿ ಎಂದು ನಂಬಲೇ?

ನಿಮ್ಮ ವಿಶ್ವಾಸಿ
ಸಮೀರ್‌ಕುಮಾರ್
ಷೇರುದಾರ

ಷೇರುದಾರರ ದೂರು ಪತ್ರಕ್ಕೆ ಕಾರ್ಯದರ್ಶಿಯ ಉತ್ತರ
ಮಾದರಿ

ಶುಭಮಂಗಳ ಕಂಪೆನಿ ಲಿಮಿಟೆಡ್

ತಂತಿ: ಶುಭ                                                       ಜಯತಿ ಶ್ರೀನಗರ,
ದೂರವಾಣಿ: ೬೪೫೬೭                                           ಸೊರಟೂರು

ದಿನಾಂಕ: ೨೦-೧೧-೧೯೮೭

ಶ್ರೀ ಸಮೀರಕುಮಾರ್
೪೮, ಆನೆ ಬಂಡೆ ರಸ್ತೆ
ಬನ್ನೇರುಘಟ್ಟ
ಗುಜನಪುರ

ಮಾನ್ಯರೆ,

ವಿಷಯ: ತಮ್ಮ ದೂರು ಪತ್ರಕ್ಕೆ ಉತ್ತರ

ತಮ್ಮ ಬದಲಾದ ವಿಳಾಸವನ್ನು ನಾವು ಗುರುತ ಹಾಕಿಕೊಂಡು, ಆ ಪ್ರಕಾರ ಪತ್ರಗಳನ್ನು ಕಳಿಸುತ್ತಿಲ್ಲವೆಂದು ತಾವು ದೂರಿದ್ದೀರಿ. ಈ ಬಗ್ಗೆ ನಮ್ಮ ಕಚೇರಿಯಲ್ಲಿ ಪರಿಶೀಲಿಸಿದಾಗ ತಮ್ಮಿಂದ ಯಾವ ಪತ್ರವೂ ನಮಗೆ ಕಾಣಲಿಲ್ಲ. ತಾವು ವಿಳಾಸ ಬದಲಾವಣೆ ತಿಳಿಸಿ ಯಾವಾಗ ಪತ್ರವನ್ನು ಕೋರುತ್ತೇವೆ. ನಮ್ಮ ಕಚೇರಿಯಲ್ಲಿ ಮತ್ತೊಮ್ಮೆ ತಪಾಸಣೆ ಮಾಡಿಸುತ್ತೇವೆ; ಆ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳುವ ಭರವಸೆಯನ್ನು ತಮಗೆ ನೀಡುತ್ತೇವೆ.

ಇನ್ನು ಮುಂದೆ ತಾವು ತಿಳಿಸಿರುವ ಹೊಸ ವಿಳಾಸಕ್ಕೆ ಪತ್ರಗಳನ್ನು ಬರೆಯುತ್ತೇವೆ. ನಮ್ಮ ಕಂಪೆನಿಯ ವಿಳಾಸಪಟ್ಟಿಯಲ್ಲಿ ತಮ್ಮ ಬದಲಾದ ವಿಳಾಸವನ್ನು ದಾಖಲಿಸಿಕೊಂಡಿದ್ದೇವೆ.

ತಮ್ಮ ವಿಶ್ವಾಸದ
ಹರಿಶ್ಚಂದ್ರಯ್ಯ
ಕಾರ್ಯದರ್ಶಿ
ಶುಭಮಂಗಳ ಕಂ.ಲಿ.

ಕಾರ್ಯಾಲಯದ ಸಿಬ್ಬಂದಿ ವರ್ಗದವರ ವರ್ತನೆಯನ್ನು ಖಂಡಿಸಿ ಬರೆದ ಪತ್ರಕ್ಕೆ ಕಾರ್ಯದರ್ಶಿ ಉತ್ತರ
ಮಾದರಿ

ಸ್ವದೇಶಿ ಕಾಗದ ಕಾರ್ಖಾನೆ ಲಿ
ತುಳಸಿ ಪೇಟೆ, ಅರಣ್ಯಪುರ

ದಿನಾಂಕ: ೧೦-೮-೧೯೮೭

ತಂತಿ: ‘ಸ್ವದೇಶಿ’
ದೂರವಾಣಿ: ೬೩೯೪೬೭

ಶ್ರೀ ಜಡಿದಾರ್ ಜಯಪ್ರಕಾಶ್
೬, ತೋಂಟಪ್ಪ ರಸ್ತೆ
ಕಾಗದ ಪೇಟೆ
ಅರಣ್ಯಪುರ-ಅವರಿಗೆ

ಸನ್ಮಾನ್ಯರೆ,

ದಿನಾಂಕ: ೧-೮-೧೯೮೭ರಂದು ಬೆಳಗ್ಗೆ ೧೧ ಗಂಟೆ ಸಮಯದಲ್ಲಿ ತಾವು ಬಂದಾಗ ತಮ್ಮ ಕಚೇರಿ ಸಿಬ್ಬಂದಿ ವರ್ಗದವರು ಸೌಜನ್ಯದಿಂದ ವರ್ತಿಸಲಿಲ್ಲವೆಂದು ತಿಳಿಸಿದ ಬರೆದ ಪತ್ರ ತಲುಪಿತು, ವಿಷಾದವೂ ಆಶ್ಚರ್ಯವೂ ಆಯಿತು.

ಜನತಾ ಜನಾರ್ದನನ ಸೇವೆ ಮಾಡುತ್ತಿರುವ ನಾವು, ನಮ್ಮಲ್ಲಿ ಬರುವ ಪ್ರತಿಯೊಬ್ಬ ಸದಸ್ಯರನ್ನೂ- ಅವರು ಯಾರೇ ಇರಲಿ, ಏನೇ ಆಗಿರಲಿ – ‘ಅತಿಥಿ ದೇವೋಭವ’ ಎಂಬ  ಭಾವನೆಯಿಂದ ಪ್ರೀತ್ಯಾದರಗಳಿಂದ ಸ್ವಾಗತಿಸುತ್ತೇವೆ. ಸದಸ್ಯರ ಸಮಸ್ಯೆಗಳಿಗೆ ಶೀಘ್ರ ಉತ್ತರ-ಪರಿಹಾರವನ್ನು ನೀಡಲು ಶ್ರಮಿಸುತ್ತೇವೆ ಇದಕ್ಕಾಗಿ ನಾವು ನಮ್ಮ ಕಚೇರಿಯಲ್ಲಿ ‘ಸ್ವಾಗತಕಾರಿಣಿ’ಯನ್ನು ನೇಮಿಸಿದ್ದೇವೆ; ಮಾರ್ಗದರ್ಶಕರನ್ನೂ ಗೊತ್ತು ಮಾಡಿದ್ದೇವೆ. ಹೊರಗಿನಿಂದ ಬಂದವರಿಗೆ ಆದ್ಯ ಗಮನವಿತ್ತು. ಆನಂತರ ನಿಮ್ಮ ಕೆಲಸ ಮಾಡಬೇಕೆಂದು ಸಿಬ್ಬಂದಿಗೆ ಸೂಚನೆ ನೀಡಿದ್ದೇವೆ.

ಹೀಗಿದ್ದರೂ ಸಹ ತಾವು ಬಂದಾಗ ನಮ್ಮ ಸಿಬ್ಬಂದಿ ತಕ್ಕ ಗೌರವದಿಂದ ಕಾಣಲಿಲ್ಲ ಎಂದು ದೂರಿರುವುದು ಆಶ್ಚರ್ಯವನ್ನುಂಟು ಮಾಡುತ್ತಿದೆ. ಬಹುಶಃ ಕಾರ್ಯ ಗೌರವ ಬಾಹುಳ್ಯದಿಂದಲೋ ಅಲಕ್ಷ್ಯ ವರ್ತನೆಯಿಂದಲೋ ಕಿಂಚಿತ್ ಆಚಾತುರ್ಯ ಸಂಭವಿಸಿರಬಹುದು. ಇದರಿಂದ ತಮ್ಮ ಮನಸ್ಸಿಗೆ ನೋವಾಗಿದ್ದಲ್ಲಿ ಅದಕ್ಕಾಗಿ ನಾನು ಕ್ಷಮಾಪಣೆ ಕೇಳುತ್ತೇನೆ. ತಮ್ಮೊಡನ ಸೌಜನ್ಯರಹಿತವಗಿ ವರ್ತಿಸಿದವರಾರು ಎಂಬುದನ್ನು ಸಾಧಾರಪೂರ್ವಕವಾಗಿ ತಿಳಿಸಿದ್ದೇ ಆದರೆ ಆ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮವನ್ನು ಕೈಗೊಳ್ಳುವ ಆಶ್ವಾಸನೆಯನ್ನು ನೀಡುತ್ತೇನೆ.

ಈ ಸಂಗತಿಯನ್ನು  ನನ್ನ ಗಮನಕ್ಕೆ ತಂದಿದ್ದಕ್ಕಾಗಿ ವಂದನೆಗಳು. ಇನ್ನು ಮುಂದೆ, ಅನ್ಯಥಾ ಭಾವಿಸದೆ ಕಚೇರಿಗೆ ಬಂದುಹೋಗುತ್ತಿರಬೇಕೆಂದೂ ಅಗತ್ಯವಾದ ಮಾಹಿತಿಯನ್ನು ಪಡೆಯಬೇಕೆಂದು ತಮ್ಮನ್ನು ಪ್ರಾರ್ಥಿಸುತ್ತೇನೆ.

ವಂದನೆಗಳು,

ತಮ್ಮ ವಿಶ್ವಾಸಿ
ಜಯಂತರಾವ್ ಕಾರ್ಯದರ್ಶಿ

ಸಿಟಿ/

ಕಾರ್ಯದರ್ಶಿ ಪತ್ರ ವ್ಯವಹಾರಸಿಬ್ಬಂದಿಯೊಡನೆ
ಮಾದರಿ

ದೇಶಪ್ರೇಮಿ ಪೀಠೋಪಕರಣ ಕಂ.ಲಿ
ಕೇಂದ್ರಕಚೇರಿ, ಶಕ್ತಿನಗರ, ರಾಯಚೂರು

ತಂತಿ: ‘ಪ್ರೇಮಿ’
ದೂರವಾಣಿ: ೬೩೪೫೬೭

ಪಸಂ: ಅವಿವ್ಯಪ: ೪-೧-೧೯೮೭

ದಿನಾಂಕ ಳ ೧೨-೧೨-೧೯೮೭

ವ್ಯವಸ್ಥಾಪಕರು
ದೇಶಪ್ರೇಮಿ ಪೀಠೋಪಕರಣ ಕಂ.ಲಿ
ಬಿಜಾಪುರ ಶಾಖೆ
ಬಿಜಾಪುರ

ಮಾನ್ಯರೆ,

ಕಂಪೆನಿಯ ಎಲ್ಲಾ ಶಾಖಾ ಕಚೇರಿಗಳಿಗೂ ಸಾಕಷ್ಟು ಅಧಿಕಾರ ನೀಡಬೇಕು ಮತ್ತು ಕೇಂದ್ರ ಕಚೇರಿಯ ಕಾರ್ಯದ ಅನಗತ್ಯ ಹೊರೆಯನ್ನು ತಗ್ಗಿಸಬೇಕೆಂಬ ದೃಷ್ಟಿಯಿಂದ ಕೆಲವು ವಿಷಯಗಳಲ್ಲಿ ಸ್ವತಃ ವ್ಯವಹರಿಸಲು ಶಾಖಾ ಕಚೇರಿಗಳಿಗೆ ಪೂರ್ಣಾಧಿಕಾರ ಕೊಡಲಾಗಿದೆ.

ಈ ಕಾರ್ಯಕ್ರಮದ ಮೊದಲ ಹಂತವಾಗಿ, ಆಯಾ ಶಾಖೆಗಳ ವ್ಯವಹಾರಗಳಿಗೆ ಸಂಬಂಧಿಸಿದ ಪ್ರಕಟಣೆಗಳನ್ನೂ ಸ್ಥಳೀಯ ಜಾಹೀರಾತುಗಳನ್ನೂ ಸ್ವತಂತ್ರವಾಗಿ ನೀಡಲು ಶಾಖಾ ಕಚೇರಿಗಳಿಗೆ ಪೂರ್ಣಾಧಿಕಾರವನ್ನು ನೀಡಲಾಗಿದೆ. ಈ ಬಗ್ಗೆ ಕೈಗೊಂಡ ನಿರ್ಣಯ ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದೆ. ಇದನ್ನು ಗಮನಿಸಿ ನೀವು ಕಾರ್ಯಪ್ರವೃತ್ತರಾಗಬಹುದೆಂದು ಈ ಮೂಲಕ ತಿಳಿಯಪಡಿಸಲಾಗಿದೆ.

ನಿಮ್ಮ ವಿಶ್ವಾಸಿ,
ಘನಶ್ಯಾಂ
ಕಾರ್ಯದರ್ಶಿ

ಕಾರ್ಯದರ್ಶಿ ಪತ್ರ ವ್ಯವಹಾರಸಿಬ್ಬಂದಿಯೊಡನೆ
ಮಾದರಿ

ದೇಶಪ್ರೇಮಿ ಪೀಠೋಪಕರಣ ಕಂ.ಲಿ
ಕೇಂದ್ರ ಕಚೇರಿ, ಶಕ್ತಿನಗರ, ರಾಯಚೂರು

ತಂತಿ: ‘ಪ್ರೇಮಿ’
ದೂರವಾಣಿ: ೬೩೪೫೬೭

ಪತ್ರಕಾಂ: ಪವ್ಯಸಿ: ೧೦-೨-೧೯೮೭

ದಿನಾಂಕ: ೧೦-೧೨-೧೯೮೭

ಶ್ರೀಧೀಮಂತಪ್ಪ,
ಅಧ್ಯಕ್ಷರು, ನೌಕರರ ಸಂಘ,
ದೇಶಪ್ರೇಮಿ ಪೀಠೋಪಕರಣ ಕಂ.ಲಿ
ಶಕ್ತಿನಗರ, ರಾಯಚೂರು

ಮಾನ್ಯರೆ,

ಕಂಪೆನಿಯ ಸಿಬ್ಬಂದಿ ವರ್ಗದವರಿಗೆ ರಜೆ ಸೌಲಭ್ಯ ಮತ್ತು ಸಂಬಳ ಸುಧಾರಣೆಯ ಬಗ್ಗೆ ಎಲ್ಲಾ ಶಾಖೆಗಳ ವ್ಯವಸ್ಥಾಪಕರಿಂದ ಬಂದ ಸಲಹೆಗಳನ್ನು ನಿರ್ದೇಶಕ ಮಂಡಲಿ ತನ್ನ ಸಭೆಯಲ್ಲಿ ಚರ್ಚಿಸಿತು. ಅಂತಿಮವಾಗಿ ಈ ಕೆಳಕಂಡ ತೀರ್ಮಾನವನ್ನು ಕೈಗೊಂಡಿತು. ಇದನ್ನು ತಮ್ಮ ಗಮನಕ್ಕೆ ತರಲು ನನಗೆ ಅಪ್ಪಣೆಯಾಗಿದೆ.

ಮಂಡಳಿ ಸಭೆಯ ತೀರ್ಮಾನ ಹೀಗಿದೆ:

ಕಂಪೆನಿಯ ಎಲ್ಲಾ ಶಾಖೆಗಳ ನೌಕರರ ರಜೆ ಸೌಲಭ್ಯ ಮತ್ತು ಸಂಬಳ ಸುಧಾರಣೆ ಬಗ್ಗೆ ಕಂಪೆನಿಯ ನೌಕರರ ಸಂಘ ಮಾಡಿಕೊಂಡ ಮನವಯನ್ನು ಪುರಸ್ಕರಿಸಿ, ಈ  ಬಗ್ಗೆ ವರದಿಯನ್ನು ನೀಡಲು ನಿರ್ದೇಶಕ ಮಂಡಳಿಯು ಸಮಿತಿಯೊಂದನ್ನು ರಚಿಸಿದೆ; ಸಮಿತಿ ಮೂರು ತಿಂಗಳೊಳಗಾಗಿ ತನ್ನ ವರದಿಯನ್ನು ಸಲ್ಲಿಸಬೇಕು. ಈ ಸಮಿತಿಯಲ್ಲಿ ನಿಮ್ಮನ್ನೂ ಒಬ್ಬ ಸದಸ್ಯರನ್ನಾಗಿ ಸೇರಿಸಿಕೊಳ್ಳಲು ನಿರ್ಣಯಿಸಲಾಗಿದೆ. ಈ ಬಗ್ಗೆ ಕೂಡಲೇ ನಿಮ್ಮ ಒಪ್ಪಿಗೆ ಪತ್ರವನ್ನು ಕಚೇರಿ ಕಾರ್ಯಾಲಯಕ್ಕೆ ಕಳಿಸಿಕೊಡಬೇಕಾಗಿ ಬಿನ್ನಹ.

ನಿಮ್ಮ ವಿಶ್ವಾಸಿ
ಘನಶ್ಯಾಂ
ಕಾರ್ಯದರ್ಶಿ
ದೇಶಪ್ರೇಮಿ ಪೀಠೋಪಕರಣ ಕಂ.ಲಿ

ಕಾರ್ಯದರ್ಶಿ ಪತ್ರ ವ್ಯವಹಾರ ಬ್ಯಾಂಕಿನೊಂದಿಗೆ
ಮಾದರಿ೧೦

ಅಲಂಕಾರ್ ಉಡುಪು ಕಂ.ಲಿ

ತಂತಿ : ‘ಅಲಂಕಾರ್’                                     ಗಣೇಶ ದೇವಸ್ಥಾನ ರಸ್ತೆ
ದೂರವಾಣಿ : ೬೩೪೮೯೦                                ಪಾರ್ವತಿ ಪೇಟೆ
ಈಶ್ವರನಗರ

ಪತ್ರಾಂಕ : ವ್ಯವಪ: ೧-೧-೧೯೮೭                       ದಿನಾಂಕ : ೧೫-೧೨-೧೯೮೭

ವ್ಯವಸ್ಥಾಪಕರು
ಕುಬೇರ ಬ್ಯಾಂಕ್ ಲಿಮಿಟೆಡ್
ಗಣೇಶ ದೇವಸ್ಥಾನ ರಸ್ತೆ
ಪಾರ್ವತಿ ಪೇಟೆ
ಈಶ್ವರನಗರ

ಮಾನ್ಯರೆ,

ವಿಷಯ : ‘ನಮ್ಮ ಖಾತೆಗಳ ವರ್ಗಾವಣೆ ಬಗ್ಗೆ’

ಕಳೆದ ಹತ್ತು ವರ್ಷಗಳಿಂದ ನಿಮ್ಮ ಬ್ಯಾಂಕಿನಲ್ಲಿ ನಮ್ಮ ಕಂಪೆನಿಯ ಹೆಸರಿನಲ್ಲಿ ಹಲವಾರು ಖಾತೆಗಳನ್ನು ತೆರೆದು (ವಿವರ ಪಟ್ಟಿ ಲಗತ್ತಿಸಿದೆ) ವ್ಯವಹರಿಸುತ್ತಿರುವುದು ನಿಮಗೆ ತಿಳಿದ ವಿಷಯವೇ ಆಗಿದೆ.

೧ನೆಯ ಜನವರಿ ೧೯೮೮ರಂದು ನಮ್ಮ ಸಂಸ್ಥೆಯ ಕಾರ್ಯಾಲಯವನ್ನು ವಿಷ್ಣುಪುರದಲ್ಲಿರುವ ನಮ್ಮ ಸ್ವಂತಕಟ್ಟಡಕ್ಕೆ ವರ್ಗಾಯಿಸುತ್ತಿರುವುದನ್ನು ಪರಿಪತ್ರದ ಮೂಲಕ ನಿಮ್ಮ ಗಮನಕ್ಕೆ ತರಲಾಗಿದೆ. ಇತ್ತೀಚೆಗೆ ಸಭೆ ಸೇರಿದ ನಮ್ಮ ನಿರ್ದೇಶಕರ ಮಂಡಲಿಯ ನಿರ್ಣಯಾನುಸಾರ ನಮ್ಮ ಹೊಸ ಕಾರ್ಯಾಲಯಕ್ಕೆ ಈಶ್ವರನಗರ ಶಾಖೆ ದೂರವಾಗಿರುವುದರಿಂದ ವ್ಯವಹಾರಕ್ಕೆ ಸಾಕಷ್ಟು ಕಷ್ಟವಾಗುತ್ತಿದೆ. ಆದ್ದರಿಂದ ವಿಷ್ಣುಪುರದಲ್ಲಿರುವ ನಿಮ್ಮ ಬ್ಯಾಂಕಿನ ಶಾಖೆಗೆ ನಮ್ಮ ಕಂಪೆನಿಯ ಎಲ್ಲಾ ನಿಧಿಗಳನ್ನು ಪತ್ರ ವ್ಯವಹಾರಗಳನ್ನೂ ವರ್ಗಾಯಿಸಬೇಕೆಂದು ಕೋರುತ್ತೇನೆ. ಈ ಬಗ್ಗೆ ನಿರ್ದೇಶಕರ ಮಂಡಳಿಯ ನಿರ್ಣಯವನ್ನು ಈ ಪತ್ರದೊಂದಿಗೆ ನಿಮ್ಮ ಅವಗಾಹನೆಗಾಗಿ ಕಳಿಸಲಾಗುತ್ತಿದೆ.

ನಿಮ್ಮ ವಿಶ್ವಾಸಿ
ಸರ್ವೋತ್ತಮರಾವ್
ಕಾರ್ಯದರ್ಶಿ
ಅಲಂಕಾರ್ ಉಡುಪು ಕಂ.ಲಿ

ಲಗತ್ತುಗಳು :

೧) ನಿರ್ದೇಶಕ ಮಂಡಳಿ ನಿರ್ಣಯ
೨. ನಿಮ್ಮ ಬ್ಯಾಂಕಿನಲ್ಲಿರುವ ನಮ್ಮ ಕಂಪೆನಿಯ
ವ್ಯವಹಾರ ಖಾತೆಗಳ ಲೆಕ್ಕ ಸಂಖ್ಯೆ ವಿವರಪಟ್ಟಿ

ಬೆರಳಚ್ಚು ವಿಕ/-

ಕಾರ್ಯದರ್ಶಿ ಪತ್ರ ವ್ಯವಹಾರಕಾನೂನು ತಜ್ಞರೊಡನೆ
ಮಾದರಿ೧೧

ರಾಮಕೃಷ್ಣ ಬಿಸ್ಕತ್ ಕಂ.ಲಿ.
ಹೊಸೂರು ರಸ್ತೆ, ಬೆಂಗಳೂರು

ತಂತಿ : ‘ಸಿಹಿಖಾರ’
ದೂರವಾಣಿ : ೬೩೫೮೯೨

ಪಸಂ : ಕಾತಸಪ : ೩-೧-೧೯೮೭

ತಾರೀಖು : ೧೩-೧೨-೧೯೮೭

ಶ್ರೀ ನೀಲಕಂಠೇಗೌಡ, ಎಂ.ಎ; ಎಂ.ಎಲ್
ವಕೀಲರು, ೪, ನಯಸೇನ ರಸ್ತೆ
ಪುಸ್ತಕ ಪೇಟೆ
ಬೆಂಗಳೂರು

ಮಾನ್ಯರೆ,

ನಮ್ಮ ಸಂಸ್ಥೆಯ ’ರಾಮ’ ಮತ್ತು ‘ಕೃಷ್ಣ’ ಬ್ರಾಂಡಿನ ‘ಸಿಹಿ’ ಮತ್ತು ‘ಖಾರ’ ಬಿಸ್ಕತ್ತು ಪ್ಯಾಕೆಟುಗಳು ತುಂಬಾ ಜನಪ್ರಿಯವಾಗಿದ್ದು ದೇಶಾದ್ಯಂತವೆಲ್ಲಾ ಅಧಿಕವಾಗಿ ವಿಕ್ರಯವಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.

ಇತ್ತೀಚೆಗೆ ಇದರ ಜನಪ್ರಿಯತೆಯನ್ನು ಕಂಡು ಅತ್ಯಾಕರ್ಷವಾದ ನಮ್ಮ ಬಿಸ್ಕತ್ತಿನ ಮಾದರಿಯಲ್ಲಿಯೇ ರಕ್ಷಾ ಕವಚಗಳುಳ್ಳ ಕಳಪೆಮಟ್ಟದ ಬಿಸ್ಕತ್ತುಗಳನ್ನು ತಯಾರಿಸಿ ನಮ್ಮ ಕಂಪೆನಿ ಹೆಸರಿನಲ್ಲಿ ಮಾರುತ್ತಿರುವುದು ತಿಳಿದುಬಂದಿದೆ. ರಾಮ,ಕೃಷ್ಣ ಎಂಬ  ಹೆಸರಿನಲ್ಲಿ ನಮ್ಮ ದಾಖಲಾದ ವ್ಯಾಪಾರ ವಿನ್ಯಾಸದಲ್ಲೇ ಅವನ್ನು ಮಾರುತ್ತಿದ್ದಾರೆ. ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗಿದೆ. ಆದ್ದರಿಂದ ನಿಮ್ಮೊಡೆ ಚರ್ಚಿಸಲು ನಮ್ಮ ಅಧಿಕಾರಿಗಳು ನಿಮ್ಮ ಬಳಿ ಬರುತ್ತಾರೆ. ದಯವಿಟ್ಟು ನಿಮ್ಮ ಬಿಡುವಿನ ಕಾರ್ಯಾಲಯಕ್ಕೆ ಬರುವುದಾದರೆ ಬಹಳ ಸಂತೋಷ ಯಾವುದಕ್ಕೂ ಪತ್ರ ಬರೆದು ಇಲ್ಲವೇ ದೂರವಾಣಿ ಮೂಲಕ ತಿಳಿಸಬೇಕೆಂದು ಮತ್ತೊಮ್ಮೆ ನಿಮ್ಮನ್ನು ಕೋರುತ್ತೇನೆ.

ನಿಮ್ಮ ವಿಶ್ವಾಸದ
ಪಿ.ಚಾಣಕ್ಯ
ಕಾರ್ಯದರ್ಶಿ

ಚಿ: ಎಸ್.ಕೆ/-