ಕಂಪನಿಯ ಸ್ವರೂಪ ಪರಿಚಯ

ಕೈಗಾರಿಕಾ ಕ್ರಾಂತಿ ಜಗತ್ತಿನ ರಾಜಕೀಯ, ಸಾಮಾಜಿಕ ಆರ್ಥಿಕ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿತು; ವಿಶೇಷವಾಗಿ ಆರ್ಥಿಕ ಕ್ಷೇತ್ರಗಳಲ್ಲಿ ಅದ್ಭುತ ಬದಲಾವಣೆಗಳಾದವು; ಆಗ ವಿವಿಧ ವ್ಯಾಪಾರ ಕ್ಷೇತ್ರಗಳಲ್ಲಿ ಅಪಾರ ಪ್ರಮಾಣದ ಬಂಡವಾಳವನ್ನು ಹೂಡಬೇಕಾಯಿತು; ಬಗೆಬಗೆಯ ಪದಾರ್ಥಗಳ ಉತ್ಪಾದನೆ ಅಧಿಕವಾಯಿತು. ಆದರೆ ಏಕವ್ಯಕ್ತಿ ವ್ಯಾಪಾರ ಸಂಸ್ಥೆಯಿಂದ ಅಥವಾ ಪಾಲುದಾರ ಸಂಸ್ಥೆಯಿಂದ ಬಂಡವಾಳವನ್ನು ಬಹುದೊಡ್ಡ ಪ್ರಮಾಣದಲ್ಲಿ ಒದಗಿಸುವುದು ಕಷ್ಟವಾಯಿತು. ಆಡಳಿತ ಸಾಮರ್ಥ್ಯ ಹೆಚ್ಚಿಸುವುದು, ಸಂಸ್ಥೆಯನ್ನು ನಿರಂತರವಾಗಿ ಮುಂದುವರಿಸುವುದು, ಸಂಪನ್ಮೂಲಗಳನ್ನು ಕ್ರೋಢಿಕರಿಸಿ ಅಧಿಕಗೊಳಿಸುವುದು, ಅನಿಯಮಿತ ಹೊಣೆಗಾರಿಕೆಯನ್ನು ನಿಯಮಿತೊಗಳಿಸುವುದು ಮುಂತಾದ ವಿಚಾರಗಳಲ್ಲಿ ಉಂಟಾದ ನಾನಾ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಕಂಪನಿ ವ್ಯವಸ್ಥೆ ಆಧುನಿಕಯುಗದ ಅತ್ಯುತ್ತಮ ವ್ಯವಹಾರಿ ಸಂಸ್ಥೆಯಾಗಿ ರೂಪುಗೊಂಡಿತು. ಕಂಪನಿ ವ್ಯವಸ್ಥೆಯ ನಿಯಮಿತ ಹೊಣೆಗಾರಿಕೆ ಮತ್ತು ಶಾಸನಬದ್ದ ಅಸ್ತಿತ್ವವನ್ನು ಹೊಂದಿದ್ರಿಂದ ವ್ಯಾಪಾರ, ವಾಣಿಜ್ಯ, ಕೈಗಾರಿಕಾ ಕ್ಷೇತ್ರಗಳಲ್ಲಿ ಹೆಚ್ಚು ಜನಪ್ರಿಯ ಸಂಸ್ಥೆಯಾಯಿತು.

ಸಾಮಾನ್ಯವಾಗಿ ಕಂಪನಿ ಎಂದರೆ ‘ಸಾರ್ವಜನಿಕ ನಿಯಮಿತ ಕಂಪೆನಿ’ ಎಂದರ್ಥ; ವಿಸ್ತೃತವಾಗಿ ಹೇಳುವುದಾದರೆ, “ನಿಯಮಿತ ಹೊಣೆಗಾರಿಕೆಯನ್ನೂ ಶಾಸನಬದ್ಧ ಅಸ್ತಿತ್ವವನ್ನೂ ಹೊಂದಿದಿ ಕಂಪೆನಿಗಳ ಕಾನೂನಿಗೆ ಅಉಗುಣವಾಗಿ ರಚಿತವಾದ ಕೂಡು ಬಂಡವಾಳ ಸಂಸ್ಥೆ” ಎನ್ನಬಹುದು. ಆದರೆ ಕಂಪನಿಗಳ ಕಾನೂನುಗಳ ಪ್ರಕಾರ ನೊಂದಾಯಿಸಲ್ಪಟ್ಟ ಸಂಸ್ಥೆಗಳೆಲ್ಲ ಕೂಡುಬಂಡವಾಳ ಸಂಸ್ಥೆಯಾಗಿರುವುದಿಲ್ಲ. ಉದಾಹರಣೆಗೆ ಭಾರತೀಯ ವಿಮಾನ ಸಾರಿಗೆ ಸಂಸ್ಥೆ ಕಾರ್ಪೊರೇಷನ್ ಆಗಿದೆಯೇ ಹೊರತು ಕೂಡುಬಂಡವಾಳ ಸಂಸ್ಥೆಯಲ್ಲ. ಕಂಪನಿಯ ಸ್ವರೂಪವನ್ನು ಅದರ ಮುಖ್ಯ ಲಕ್ಷಣಗಳನ್ನು ಅರಿಯುವುದರಿಂದ ಇದನ್ನು ಇನ್ನೂ ಸ್ಪಷ್ಟವಾಗಿ ತಿಳಿಯಬಹುದಾಗಿದೆ.

ನೊಂದಾವಣೆ, ಕಂಪೆನಿಯ ಲಕ್ಷಣಗಳಲ್ಲಿ ಒಂದು; ಇಪ್ಪತ್ನಾಲ್ಕಕ್ಕಿಂತ ಅಧಿಕ ಸದಸ್ಯರಿರುವು ವ್ಯವಹಾರ ಸಂಸ್ಥೆಯಾಗಲಿ, ಹತ್ತಕ್ಕಿಂತ ಹೆಚ್ಚಿನ ಸದಸ್ಯರಿದ್ದು ಬ್ಯಾಂಕು ವ್ಯವಹಾರ ಮಾಡುವ ಸಂಸ್ಥೆಯಾಗಲಿ ಕಂಪೆನಿ ನಿಯಮಾನುಸಾರ ನೊಂದಣಿ ಹೊಂದಲೇಬೇಕು. ಇಲ್ಲದಿದ್ದರಲ್ಲಿ ಅದು ಕಾನೂನು ಬಾಹಿರ ಸಂಸ್ಥೆಯಾಗುತ್ತದೆ. ಎರಡನೆಯದಾಗಿ, ಕಾನೂನಿನ ದೃಷ್ಟಿಯಿಂದ ಕಂಪನಿಯನ್ನು ಒಬ್ಬ ವ್ಯಕ್ತಿಯಂತೆ ಪರಿಗಣಿಸಲಾಗುತ್ತದೆ. ಆದರೆ ಸಾಮಾನ್ಯವಾಗಿ ದೇಹ ಆತ್ಮಗಳ ದೃಷ್ಟಿಯಿಂದ ಒಬ್ಬನನ್ನು ವ್ಯಕ್ತಿ ಎಂದು ಭಾವಿಸುವಂತೆ ಕಂಪನಿಯನ್ನು ಪರಿಗಣಿಸುವುದಿಲ್ಲ; ಶಾಸನಬದ್ಧ ಅಸ್ತಿತ್ವದ ದೃಷ್ಟಿಯಲ್ಲಿ ತನ್ನದೇ ಆದ ಸಾಮಾನ್ಯ ಮುದ್ರೆ, ಅಬಾಧಿತ ಅಸ್ತಿತ್ವ ಪೆಡದ ವ್ಯಕ್ತಿ ಎಂಬಂತೆ ಪರಿಗಣಿಸಲಾಗುತ್ತದೆ. ಆದಕಾರಣ ಕಂಪನಿ ಎಂಬ ವ್ಯಕ್ತಿಗೂ ಕಂಪನಿಗೆ ಸೆರಿದ ವ್ಯಕ್ತಿಗಳಿಗೂ ವ್ಯತ್ಯಾಸವಿದೆ. ಕಂಪನಿಯ ಕಾರ್ಯಗಳು ಅದರ ಸದಸ್ಯರ ಕಾರ್ಯಗಳಿಗೆ ಭಂಗವುಂಟು ಮಾಡಲಾರವು. ಆದರೆ ಪಾಲುದಾರಿಕೆ ಸಂಸ್ಥೆಯಲ್ಲಿ ಈ ರೀತಿಯ ಸಂಬಂಧವಿರುವುದಿಲ್ಲ.

ಕಂಪೆನಿಯನ್ನು ವ್ಯಕ್ತಿ ಎಂದು ಭಾವಿಸಿದರೂ ಅದು ನೈಜವ್ಯಕ್ತಿಯ ಲಕ್ಷಣಗಳಿಗಿಂತ ಭಿನ್ನ ಸ್ವರೂಪದ್ದಾಗಿರುತ್ತದೆ. ವ್ಯಕ್ತಿಯಂತೆ ಕಂಪನಿ ಸಹಿ ಮಾಡಲಾರದು. ಆದರೆ ಕಂಪನಿಯ ಅಧಿಕಾರ ಮುದ್ರೆ ಸಹಿಯನ್ನು ಪ್ರತಿನಿಧಿಸುತ್ತದೆ. ಕಂಪೆನಿ ರಕ್ತ ಮಾಂಸದ ಶಿಶುವಾಗಿರದೆ ಕಾನೂನಿನ ಶಿಶುವಾಗಿರುವುದರಿಂದ ಸದಸ್ಯರ ನಿಧನ, ನಿರ್ಗಮನ, ದಿವಾಳಿ, ಬುದ್ಧಿಗೆಡುವಿಕೆ ಮೊದಲಾದವುಗಳಿಂದ ಕಂಪನಿಯ ಅಸ್ತಿತ್ವಕ್ಕೆ ಧಕ್ಕೆಯುಂಟಾಗುವುದಿಲ್ಲ. ಕಂಪನಿಗೂ ಪಾಲುದಾರ ಸಂಸ್ಥೆಗೂ ಮುಖ್ಯ ವ್ಯತ್ಯಾಸವೊಂದಿದೆ: ಕಂಪನಿಯ ಸದಸ್ಯರಿಗೆ ಅವರು ಹೊಂದಿರುವ ಷೇರುಗಳ ಮೊತ್ತಕ್ಕೆ ತಕ್ಕಂತೆ ಹೊಣೆಗಾರಿಕೆ ಇರುತ್ತದೆ; ಷೇರುಗಳ ವರ್ಗಾವಣೆಗೆ ಅರ್ಹವಾಗಿರುತ್ತವೆ ಎಂದರೆ ಸದಸ್ಯರು ತಮ್ಮ ಷೇರುಗಳನ್ನು ಇತರರಿಗೆ ವರ್ಗಾಯಿಸಬಹುದು, ಅಥವಾ ಇತರರ ಷೇರುಗಳನ್ನು ಪಡೆಯಬಹುದು. ಕಂಪನಿಯ ಒಡೆತನದ ಮಾಲೀಕರು ಎಂದರೆ ಷೇರುದಾರರೆ. ಆಡಳಿತ ನಿರ್ವಹಣೆ ನಿರ್ದೇಶಕರ ಮಂಡಳಿಗೆ ಸೇರಿರುತ್ತದೆ ಅಷ್ಟೆ! ಆದರೆ ಪಾಲುದಾರರ ಸಂಸ್ಥೆಯಲ್ಲಿ ಪಾಲುದಾರರೇ ಒಡೆಯರು, ಪಾಲುದಾರರೇ ಆಡಳಿತಗಾರರೂ ಆಗಿರುತ್ತಾರೆ.

ಹೀಗೆ ನಿರ್ದಿಷ್ಟ ಲಕ್ಷಣ ಹೊಂದಿದ ಕಂಪಿಯ ನಿಯಮಾವಳಿ ಪ್ರಕಾರ ನೊಂದಾಯಿಸಲ್ಪಟ್ಟ ಕೂಡುಬಂಡವಾಳ ಸಂಸ್ಥೆಯ ಕಾರ್ಯದರ್ಶಿಯನ್ನು ಕಂಪನಿಯ ಕಾರ್ಯದರ್ಶಿ ಎಂದು ಕರೆಯುತ್ತಾರೆ.

ಕಂಪನಿಗಳ ವರ್ಗೀಕರಣ: ಮೇಲೆ ತಿಳಿಸಿದಂತೆ ಕಂಪನಿ ಕಾನೂನಿನ ಪ್ರಕಾರ ನೊಂದಾಯಿಸುವ ಮಾತ್ರಕ್ಕೆ ಅಂಥ ಕಂಪನಿ ಷೇರುಗಳಿಂದ ನಿಯಮಿತವಾದ ಕೂಡುಬಂಡವಾಳ ಸಂಸ್ಥೆಯೇ ಆಗಿರುತ್ತದೆ ಎಂದು ಹೇಳಲಾಗುದು. ಇತರ ಬಗೆಯ ಕಂಪನಿಗಳೂ ನೊಂದಾಯಿಸಲ್ಪಟ್ಟಿರುತ್ತವೆ. ಆದ್ದರಿಂದ ಕಂಪನಿ ಕಾನೂನಿನ ಪ್ರಕಾರ ನೊಂದಾಯಿಸಲ್ಪಡುವ ಕಂಪನಿಗಳಲ್ಲಿ ಸನ್ನದು ಹೊಂದಿದ್ದ ಕಂಪನಿಗಳು, ಶಾಸನಾಧಾರಿತ ಕಂಪನಿಗಳು, ನೊಂದಾಯಿತ ಕಂಪನಿಗಳು ಎಂದು ಮೂರು ವರ್ಗಗಳಿವೆ. ನೊಂದಾಯಿತ ಕಂಪನಿಗಳಲ್ಲಿ ನಾಲ್ಕು ಮುಖ್ಯ ಪ್ರಭೇದಗಳನ್ನು ಗಮನಿಸಬಹುದು.

ಸನ್ನದು ಹೊಂದಿದ ಕಂಪನಿಗಳು (ಚಾರ್ಟರ್ಡ್ ಕಂಪನೀಸ್): ದೊರೆ ಅಥವಾ ಸರ್ಕಾರ ನೀಡಿದ ವಿಶೇಷ ಸನ್ನದಿನ ಪ್ರಕಾರ ಸ್ಥಾಪಿತವಾದ ಕಂಪನಿಗಳಿಗೆ ಸನ್ನದು ಕಂಪನಿಗಳೆಂದು ಕರೆಯುತ್ತಾರೆ. ಈ ಬಗೆಯ ಕಂಪನಿಗಳ ಸ್ಥಾಪನೆಗೆ ನಮ್ಮಲ್ಲಿ ಅವಕಾಶವಿಲ್ಲ. ಸನ್ನದಿನಲ್ಲಿ ನಮೂದಿಸಿದ ನಿಯಮಾನುಸಾರ ಈ ಬಗೆಯ ಕಂಪನಿಗಳು ವ್ಯವಹಾರ ನಡೆಸುತ್ತವೆ. ಈಸ್ಟ್ ಇಂಡಿಯಾ ಕಂಪನಿ, ಬ್ಯಾಂಕ್ ಆಫ್ ಇಂಗ್ಲೆಂಡ್, ಬ್ರಿಟಿಷ್ ದಕ್ಷಿಣ ಆಫ್ರಿಕಾ ಕಂಪನಿ ಮೊದಲಾದವು ಈ ವರ್ಗಕ್ಕೆ ಸೇರುವ ಕಂಪನಿಗಳಾಗಿವೆ.

ಶಾಸನಬದ್ಧ ಕಂಪನಿಗಳು (ಸ್ಟ್ಯಾಚ್ಯುಟರಿ ಕಂಪನೀಸ್): ಶಾಸನ ಸಭೆ ರೂಪಿಸುವ ವಿಶಿಷ್ಟ ಶಾಸನಾನುಸಾರ ಸ್ಥಾಪಿಸಲಾಗುವ ಕಂಪನಿಗಳನ್ನು ಶಾಸನಬದ್ಧ ಕಂಪನಿಗಳು ಎಂದು ಕರೆಯುತ್ತಾರೆ. ಈ ಬಗೆಯ ಸಂಸ್ಥೆಗಳು ತಂತಮ್ಮ ಕಾಯ್ದೆಗಳಿಗನುಸಾರ ಕಾರ್ಯ ನಿರ್ವಹಿಸುತ್ತವೆ. ವಿಗಳ ಹಕ್ಕು ಬಾಧ್ಯತೆಗಳು ವಿಶೇಷ ಸ್ವರೂಪದವಾಗಿದ್ದು ಕಂಪಿ ಕಾನೂನಿನ ಹಕ್ಕು ಬಾಧ್ಯತೆಗಳಿಂದ ಭಿನ್ನವಾಗಿರುತ್ತವೆ. ಅದಕ್ಕಾಗಿ ಪ್ರತ್ಯೇಕ ಕಾನೂನುಗಳನ್ನು ಜಾರಿ ಮಾಡಲಾಗುತ್ತದೆ. ರಿಸರ‍್ವ್ ಬ್ಯಾಂಕ್ ಆಫ್ ಇಂಡಿಯಾ, ಯುನಿಟ್ ಟ್ರಸ್ಟ್ ಆಫ್ ಇಂಡಿಯಾ ಮೊದಲಾದವು ಶಾಸನಬದ್ಧ ಕಂಪನಿಗಳಾಗಿವೆ.

ನೊಂದಾಯಿತ ಕಂಪನಿಗಳು (ರಿಜಿಸ್ಟರ್ಡ್ ಕಂಪನೀಸ್): ೧೯೫೬ರ ಭಾರತೀಯ ಕಂಪನಿಗಳ ಕಾನೂನು ಪ್ರಕಾರ ನೊಂದಾಯಿತ ಕಂಪೆನಿಗಳನ್ನು ‘ನೊಂದಾಯಿತ ಕಂಪನಿ’ಗಳೆಂದು ಕರೆಯುತ್ತಾರೆ. ಸಾಮಾನ್ಯವಾಗಿ ಸಾಲುಗಾರಿಕೆ ವ್ಯವಹಾರದ ಸಂಸ್ಥೆಯ ಸದಸ್ಯರ ಸಂಖ್ಯೆ ಇಪ್ಪತ್ತನ್ನು ಮೀರಿದ್ದರೆ ಅಥವಾ ಬ್ಯಾಂಕು ವ್ಯವಹಾರದ ಪಾಲುಗಾರಿಕೆಯ ಸಂಸ್ಥೆಯ ಸದಸ್ಯರ ಸಂಖ್ಯೆ ಹತ್ತನ್ನು ಮೀರಿದ್ದರೆ ಅಂತಹ ಸಂಸ್ಥೆಗಳು ಕಂಪನಿ ನಿಯಮಾನುಸಾರ ನೊಂದಾವಣೆ ಮಾಡಬೇಕು. ಹೀಗೆ ನೊಂದಾವಣೆ ಮಾಡಿದ ಮೇಲೆ ಅವು ಅಸ್ತಿತ್ವಕ್ಕೆ ಬರುತ್ತವೆ. ಆದಕಾರಣ ಇವುಗಳನ್ನು ನೊಂದಾಯಿತ ಕಂಪನಿಗಳು ಎಂದು ಕರೆಯುತ್ತಾರೆ. ಈ ಬಗೆಯ ಕಂಪೆನಿಗಳು ಕಂಪೆನಿ ಕಾನೂನುಗಳ ಪ್ರಕಾರ ಮತ್ತು ಕಂಪೆನಿ ಕಾನೂನಿಗೆ ವಿರುದ್ಧವಿಲ್ಲದೆ ತಾವೆ ರಚಿಸಿಕೊಂಡ ನಿಯಮಾವಳಿ ಪ್ರಕಾರ ಕಾರ್ಯ ನಿರ್ವಹಿಸುತ್ತವೆ.

ನಿಯಮಿತ ಷೇರು ಕಂಪನಿಗಳು (ಕಂಪೇನೀಸ್ ಲಿಮಿಟೆಡ್ ಬೈ ಷೇರ್ಸ್): ತಾವು ಕೊಂಡ ಷೇರುಗಳ ಮುಖ ಬೆಲೆಗೆ ತಕ್ಕಂತೆ ಹೊಣೆಗಾರಿಕೆ ಹೊಂದಿರುವ ಷೇರುದಾರರ ಬಂಡವಾಳಕ್ಕೆ ನಿಯಮತವಾದ ಕಂಪನಿಯನ್ನು ನಿಯಮಿತ ಷೇರು ಕಂಪೆನಿ ಎಂದು ಕರೆಯುತ್ತಾರೆ. ಷೇರುದಾರರು ಷೇರುಗಳನ್ನು ಕಂತಿನ ಮೂಲಕ ಅಥವಾ ಒಟ್ಟಿಗೆ ಹಣ ನಿಡಿಕೊಂಡಿರುತ್ತಾರೆ.  ಕಂಪೆನಿಯ ಲಾಭ ನಷ್ಟಗಳಿಗೂ ವ್ಯಕ್ತಿಯ ಲಾಭನಷ್ಟಗಳಿಗೂ ಸಂಬಂಧವಿರುವುದಿಲ್ಲ. ಕಂಪೆನಿ ದಿವಾಳಿ ತೆಗೆದರೆ ಷೇರುದಾರರು ಹೆಚ್ಚಿನ ಹಣಕೊಟ್ಟು ತೀರಿಸಲಾರರು,  ಕಂಪೆನಿ ದಿವಾಳಿ ತೆಗೆದರೆ ಷೇರುದಾರರು ಹೆಚ್ಚಿನ ಹಣಕೊಟ್ಟು ತೀರಿಸಲಾರರು, ಕಂಪೆನಿ ಹೆಚ್ಚು ಲಾಭ ಪಡೆದರೂ ಹೊಣೆಗಾರಿಕೆ ಮಾತ್ರ ಷೇರುದಾರದ ಷೇರಿನ ಮೊತ್ತಕ್ಕಷ್ಟೆ ಸೀಮಿತವಾಗಿರುತ್ತದೆ. ಆದ್ದರಿಂದ ಕಂಪೆನಿಯ ಹಾಗೂ ಷೇರುದಾರರ ಹೊಣೆಗಾರಿಕೆ ಷೇರುಗಳ ಮೂಲಕ ನಿಯಮಿತಗೊಳಿಸಲಾಗಿರುತ್ತದೆ; ಆದ್ದರಿಂದ ಈ ಬಗೆಯ ಸಂಸ್ಥೆಗಳನ್ನು ನಿಯಮಿತ ಹೊಣೆಗಾರಿಕೆಯ ಷೇರುಗಳ ದೃಷ್ಟಿಯಿಂದಲೂ ನಿಯಮಿತವಾದ ಕಂಪನಿಗಳೆಂದು ಕರೆಯಬಹುದು.

ಸಾಮಾನ್ಯವಾಗಿ ವಾಣಿಜ್ಯ ವ್ಯವಹಾರ ಶಾಸ್ತ್ರದಲ್ಲಿ ಕಾರ್ಯದರ್ಶಿಯ ವ್ಯವಹಾರಗಳನ್ನು ಕುರಿತು ಚರ್ಚಿಸುವಾಗ ‘ಕಂಪೆನಿ ಕಾರ್ಯದರ್ಶಿ’ ಎಂಬ ಮಾತುಗಳನ್ನು, ಷೇರುಗಳಿಂದ ನಿಯಮಿತವಾದ ಕಂಪೆನಿಗಳಿಗೆ ಸಂಬಂಧಿಸಿದಂತೆ ಬಳಸುತ್ತೇವೆ ಎಂಬಂಶವನ್ನು ಅತ್ಯಗತ್ಯವಾಗಿ ನೆನಪಿಡಬೇಕು. ಈ ಗ್ರಂಥದಲ್ಲಿಯೂ ಕಾರ್ಯದರ್ಶಿಯ ಪತ್ರವ್ಯವಹಾರ ಮತ್ತು ಕಂಪೆನಿ ವ್ಯವಹಾರವನ್ನು ಈ ಬಗೆಯ ಷೇರು ನಿಯಮಿತ ಕಂಪನಿ ವ್ಯವಹಾರಗಳಿಗೆ ಸೀಮಿತವಾಗಿದೆ.

ಸರಕಾರಿ ಕಂಪೆನಿಗಳು: ಯಾವುದೇ ಕಂಪನಿಯಲ್ಲಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಇಲ್ಲವೇ ಎರಡೂ ಸರ್ಕಾರಗಳು ಅಥವಾ ಎರಡಕ್ಕಿಂತ ಹೆಚ್ಚು ಸರ್ಕಾರಗಳು ಶೇ.೫೧ರಷ್ಟು ಇಲ್ಲವೇ ಅದಕ್ಕೂ ಮೇಲ್ಪಟ್ಟು ಷೇರು ಬಂಡವಾಳ ಹಾಕಿದ್ದರೆ ಅಂಥ ಕಂಪೆನಿಗಳನ್ನು ಸರಕಾರಿ ಕಂಪೆನಿಗಳಂದು ಕರೆಯುತ್ತಾರೆ. ಹಿಂದೂಸ್ತಾನ್ ಸ್ಟೀಲ್ ಲಿಮಿಟೆಡ್, ಅಶೋಕ ಹೋಟೆಲ್, ಭಾರತ್ ಎಲೆಕ್ಟ್ರಾನಿಕ್ಸ್, ಹಿಂದುಸ್ಥಾನ್ ಮೆಷಿನ್ ಟೂಲ್ಸ್ ಲಿಮಿಟೆಡ್ ಮೊದಲಾದವು ಸರ್ಕಾರಿ ಕಂಪೆನಿಗಳಾಗಿವೆ.

ಅನಿಯಮಿತ ಕಂಪೆನಿಗಳು(ಅನ್ಲಿಮಿಟೆಡ್ ಕಂಪೆನಿಗಳು): ಅನಿಯಮಿತ ಕಂಪೆನಿಗಳಲ್ಲಿ ಷೇರುದಾರರ ಹೊಣೆಗಾರಿಕೆ ಅವರ ಷೇರಿನ ಮುಖ ಬೆಲೆಯ ಮೊತ್ತಕ್ಕೆ ಸೀಮಿತವಾಗಿರದೆ ಕಂಪನಿಯ ಏರುಪೇರುಗಳಿಗೂ ಅನ್ವಯಿಸುತ್ತದೆ. ಕಂಪೆನಿ ದಿವಾಳಿ ತೆಗೆದಾಗ ಸದಸ್ಯರು ತಮ್ಮ ಖಾಸಗಿ ಆಸ್ತಿಯನ್ನು ಮಾರಿ ಕಂಪೆನಿಯ ಸಾಲವನ್ನು ತೀರಿಸಬೇಕಾಗುತ್ತದೆ ಎಂದರೆ ಕಂಪನಿಯ ಷೇರುದಾರರ ಹೊಣೆಗಾರಿಕೆ ಸೀಮಿತವಾಗಿರುವುದಿಲ್ಲ ಆದಕಾರಣ ಇಂಥ ಸಂಸ್ಥೆಗಳಿಗೆ  ‘ಅನಿಮಿಯಿತ’ ಎಂಬ ಪದವನ್ನು ಬಳಸಲೇಬೇಕು; ಅನಿಯಮಿತ ಕಂಪೆನಿಯನ್ನು ನಿಯಮಿತ ಕಂಪೆನಿಯನ್ನಾಗಿ ಪರಿವರ್ತಿಸಲು ಕಂಪೆನಿ ಕಾನೂನಿನಲ್ಲಿ ಅವಕಾಶವಿದೆ.

ಖಾತ್ರಿ ಆಧಾರಿತ ನಿಯಮಿತ ಕಂಪೆನಿಗಳು (ಕಂಪೆನೀಸ್ ಲಿಮಿಟೆಡ್ ಬೈ ಗ್ಯಾರಂಟೀ): ಖಾತ್ರಿ ಆಧಾರಿತ ನಿಯಮಿತ ಕಂಪೆನಿಯ ಬಂಡವಾಳವನ್ನು ಸದಸ್ಯರಿಂದ ಚಂದಾರೂಪದಲ್ಲಿ ಅಥವಾ ಷೇರು ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಇಂಥ ಕಂಪೆನಿಗಳ ಸದಸ್ಯರ ಹೊಣೆಗಾರಿಕೆಯು ಅವರು ನೀಡಿದ ಭರವಸೆಯ ಮೊತ್ತಕ್ಕೆ ತಕ್ಕಂತೆ ಇರುತ್ತದೆ; ಕಂಪೆನಿ ವಿಸರ್ಜನೆ ಆದಾಗ ಮಾತ್ರ ಸದಸ್ಯರಿಗೆ ಹಿಂದಕ್ಕೆ ಬರುತ್ತದೆ, ಬೇರೆ ಸಂದರ್ಭದಲ್ಲಿ ಇಲ್ಲ. ಕಂಪೆನಿಯ ಮನವಿಪತ್ರದಲ್ಲಿ ಪ್ರತಿ ಸದಸ್ಯನು ನೀಡಬೇಕಾದ ಭರವಸೆ ಹಣವನ್ನು ನಮೂದಿಸಿರಲಾಗುತ್ತದೆ. ಲಾಭದ ಆಸೆಯಿಲ್ಲದ ಸೇವಾಗುರಿ ಹೊಂದಿದ ಕಲೆ, ಸಾಹಿತ್ಯ, ವಾಣಿಜ್ಯ, ವಿಜ್ಞಾನ ಸಂಸ್ಥೆಗಳೂ ಈ ವರ್ಗಕ್ಕೆ ಸೇರುತ್ತವೆ.

ವಿದೇಶಿ ಕಂಪನಿಗಳು (ಫಾರಿನ್ ಕಂಪೇನೀಸ್): ವಿದೇಶದಲ್ಲಿ ನೊಂದಾವಣೆ ಹೊಂದಿದ ಕಂಪೆನಿಯನ್ನು ಅಥವಾ ಭಾರತದಲ್ಲಿ ವ್ಯವಹಾರ ನಡೆಸಲು ವಿದೇಶಿ ಕಂಪೆನಿ ಸ್ಥಾಪಿಸಿದ ಸಂಸ್ಥೆಯನ್ನು ವಿದೇಶಿ  ಕಂಪೆನಿಗಳು ಎಂದು ಕರೆಯುತ್ತಾರೆ. ಈ ಬಗೆಯ ಕಂಪನಿಗಳು ಭಾರತೀಯ ಕಂಪೆನಿ ಕಾನೂನಿನ ಪ್ರಕಾರ ಭಾರತದಲ್ಲಿ ನೊಂದಾಯಿಸಲಾಗಿರುವುದಿಲ್ಲ. ಆದರೂ ಭಾರತದ ಕಂಪೆನಿ ತಿದ್ದುಪಡಿ ಕಾನೂನುಗಳ ಪ್ರಕಾರ ಹಲವಾರು ನಿಯಮಗಳನ್ನು ವಿದೇಶಿ ಕಂಪೆನಿಗಳು ಪರಿಪಾಲಿಸಬೇಕು.

ಖಾಸಗಿ ಕಂಪೆನಿಗಳು (ಪ್ರೈವೇಟ್ ಕಂಪೆನೀಸ್): ಭಾರತದ ಕಂಪೆನಿಯ ಕಾನೂನಿನ ಪ್ರಕಾರ ಷೇರುಳ ವರ್ಗಾವಣೆ ಇರುವುದಿಲ. ೫೦ ಸದಸ್ಯರಿಗೆ ಸೀಮಿತವಾಗಿರುತ್ತದೆ. ಸಾರ್ವಜನಿಕರಿಂದ ಷೇರುಗಳ ಹಣವನ್ನು ಪಡೆಯುವುದಿಲ್ಲ; ಸಂಸ್ಥೆಯ ಹೆಸರಿನ ಜೊತೆಗೆ ಖಾಸಗಿ ನಿಯಮಿತ ಎಂಬ ಪದಗಳನ್ನು ಬಳಸುತ್ತದೆ; ತನ್ನದೇ ಆದ ನಿಯಮಾವಳಿಗಳನ್ನು ರಚಿಸಿಕೊಂಡಿರುತ್ತದೆ; ಇಂಥ ಕಂಪೆನಿಗಳನ್ನು ಖಾಸಗಿ ಕಂಪೆನಿಗಳೆಂದು ಕರೆಯುತ್ತಾರೆ. ಖಾಸಗಿ ಕಂಪೆನಿಯ ಕಂಪೆನಿಯಲ್ಲಿ ಕನಿಷ್ಠ ಪಕ್ಷ ಇಬ್ಬರು ಸದಸ್ಯರಾದರೂ ಇರಲೇಬೇಕು.]

ಸಾರ್ವಜನಿಕ ಕಂಪೆನಿಗಳು (ಪಬ್ಲಿಕ್ ಕಂಪೆನೀಸ್): ಕಂಪೆನಿ ಕಾನೂನು ಪ್ರಕಾರ ಖಾಸಗಿ ಕಂಪೆನಿ ಯಾವುದಲ್ಲವೋ ಅದು ಸಾರ್ವಜನಿಕ ಕಂಪೆನಿ ಆಗಿರುತ್ತದೆ. ಸಾರ್ವಜನಿಕ ಕಂಪೆನಿ ಸ್ಥಾಪನೆಗೆ ಕನಿಷ್ಟ ಪಕ್ಷ ಏಳು ಜನರಿರಿಬೇಕು ಗರಿಷ್ಠ ಮಿತಿ ಇಲ್ಲ. ಕನಿಷ್ಟ ಪಕ್ಷದ ಸದಸ್ಯರಿದ್ದಾಗ ಅವರಲ್ಲಿ ಮೂವರು ಆಡಳಿತ ಮಂಡಳಿ ನಿರ್ದೇಶಕರಾಗಿರುತ್ತಾರೆ. ರ್ಸಾಜನಿಕ ಕಂಪೆನಿಯ ಷೇರುಗಳನ್ನು ಸಾರ್ವಜನಿಕರು ಕೊಳ್ಳಲು ಕರೆ ನೀಡುತ್ತದೆ ಮತ್ತು ಕಂಪೆನಿಯ ಸದಸ್ಯರು ತಮ್ಮ ಷೇರುಗಳನ್ನು ಇತರರಿಗೆ ವರ್ಗಾಯಿಸಲು ಅವಕಾಶವಿದೆ.

ಸೂತ್ರಧಾರಿ ಕಂಪೆನಿಗಳು (ಹೋಲ್ಡಿಂಗ್ ಕಂಪೆನೀಸ್): ೧೯೫೬ರ ಕಂಪೆನಿಗಳ ಕಾನೂನಿನ ಪ್ರಕಾರ ಒಂದು ಕಂಪೆನಿ ತನ್ನ ಕಂಪೆನಿಯ ಇನ್ನೊಂದು ನಿರ್ದೇಶಕರ ಮಂಡಳಿಯನ್ನು ನಿಯಂತ್ರಿಸಿದರೆ ಮತ್ತು ಅದರ ಷೇರು ಬಂಡವಾಳದಲ್ಲಿ ಶೇ. ೫೦ಕ್ಕಿಂತ ಅಧಿಕಭಾಗ ಹೊಂದಿದ್ದರೆ ಅಂತಹ ಕಂಪೆನಿಯನ್ನು ಸೂತ್ರಧಾರಿ ಕಂಪೆನಿ ಅಥವಾ ಹಿಡುವಳಿ ಕಂಪೆನಿ ಎಂದು ಕರೆಯುತ್ತಾರೆ. ಇನ್ನೊಂದು ಕಂಪೆನಿಯ ಮೇಲೆ ನಿಯಂತ್ರಣ ಹೊಂದಿರುವ ಮತ್ತೊಂದು ಕಂಪೆನಿಯನ್ನು ನಿಯಂತ್ರಿಸುವ ಕಂಪೆನಿಯನ್ನು ಸಹ ಸೂತ್ರಧಾರಿ ಕಂಪೆನಿ ಎನ್ನುತ್ತಾರೆ.

ಸಹಾಯಕ ಕಂಪೆನಿಗಳು (ಸಬ್ಸಿಡಿಯರಿ ಕಂಪೆನೀಸ್): ಭಾರತೀಯ ಕಂಪೆನಿ ಕಾನೂನುಗಳ ಪ್ರಕಾರ ಇನ್ನೊಂದು ಕಂಪೆನಿಯ ನಿಯಂತ್ರಣಕ್ಕೆ ಒಳಪಟ್ಟ ಕಂಪೆನಿಯನ್ನು ಸಹಾಯಕ ಕಂಪೆನಿ ಎಂದು ಕರೆಯುತ್ತಾರೆ. ಇಂತಹ ಸಹಾಯಕ ಕಂಪೆನಿಯ ವ್ಯವಹಾರವನ್ನು ಇನ್ನೊಂದು ಕಂಪೆನಿಯ ನಿರ್ದೇಶಕರ ಮಂಡಳಿ ನಿಯಂತ್ರಿಸುತ್ತದೆ. ಸಹಾಯಕ ಕಂಪೆನಿಯ ಷೇರು ಬಂಡವಾಳದಲ್ಲಿ ಅರ್ಧ ಭಾಗಕ್ಕಿಂತ ಹೆಚ್ಚಿನ ಪಾಲನ್ನು ಮತ್ತೊಂದು ಕಂಪೆನಿ ಪಡೆದಿರುತ್ತದೆ.

ಕಂಪೆನಿಯ ರಚನೆ ಮತ್ತು ಕಾರ್ಯದರ್ಶಿಯ ಪಾತ್ರ

ಕಂಪೆನಿ ರಚನೆ: ಪೀಠಿಕೆ

ಕಾರ್ಯದರ್ಶಿಯಾದವನಿಗೆ ಕಂಪೆನಿಯ ರಚನಾ ವಿವರಗಳು, ಕಾನೂನುಗಳು ಕರತಲಾಮಲಕವಾಗಿರಬೇಕು. ಕಂಪೆನಿಯ ಕಾರ್ಯದರ್ಶಿಯಾಗಿ ನೇಮಕವಾದವನೂ ಕಂಪೆನಿಯನ್ನು ಆರಂಭಿಸುವ ಹೊಣೆಯನ್ನು ಹೊತ್ತಿರುತ್ತಾನೆ. ಇದಕ್ಕೆ ಸಂಬಂಧಿಸಿದ ಸಮಸ್ತ ಪತ್ರ ವ್ಯವಹಾರವನ್ನು ನಡೆಸುತ್ತಾನೆ.  ಕಂಪೆನಿ ಕಾನೂನುಗಳಿಗೆ ಅನುಸೃವಾಗಿ ಕಂಪೆನಿಯ ರಚನೆಯನ್ನು ಮಾಡುತ್ತಾನೆ. ಈ ಸಂದರ್ಭದಲ್ಲಿ ಕಾರ್ಯದರ್ಶಿಯ ಪತ್ರ ವ್ಯವಹಾರ, ನಿರ್ದೇಶಕರೊಂದಿಗೆ, ಷೇರುದಾರರೊಂದಿಗೆ, ಸಾರ್ವಜನಿಕರೊಂದಿಗೆ ಹಾಗೂ ಇತರರೊಂದಿಗೆ ಹೇಗೆ ಸಾಗುತ್ತದೆ ಎಂದು ತಿಳಿಯುವ ಮುನ್ನ ಕಂಪೆನಿ ರಚನಾ ವಿವರದ ಲಘು ಪರಿಚಯ ಅಗತ್ಯವಾಗಿದೆ.

ಕಂಪೆನಿಯ ಪ್ರಾರಂಭದ ಹಂತ(ಪ್ರವರ್ತಯ ಹಂತ), ಸಂಯೋಜನಾ ಹಂತ, ಷೇರು ಬಂಡವಾಳ ಸಂಗ್ರಹ ಹಂತ, ವ್ಯವಹಾರ ಪ್ರಮುಖ ಪತ್ರ ಸ್ವೀಕಾರ ಹಂತ ಎಂಬ ನಾಲ್ಕು ಘಟ್ಟಗಳಲ್ಲಿ ಕಂಪೆನಿಯ ರೂಪುಗೊಳ್ಳುತ್ತದೆ.

೧. ಪ್ರವರ್ತನೆಯ ಹಂತ: ಕಂಪೆನಿಯೊಂದರಲ್ಲಿ ಸ್ಥಾಪಿಸಬೇಕೆಂದು ನಿರ್ಧಾರ ಮಾಡಿದ ಕೆಲವು ಮುಖಂಡರು ಆ ಬಗ್ಗೆ ಚಿಂತಿಸಲು ನಿರ್ಣಯಗಳನ್ನು ಕೈಗೊಳ್ಳಲು ಸಭೆ ಸೇರುತ್ತಾರೆ. ಈ ಸಭೆಯಲ್ಲಿ ಭಾಗವಹಿಸುವವರಿಗೆ ಎಂದರೆ ಕಂಪೆನಿ ಸ್ಥಾಪಿಸಲು ಉದ್ದೇಶಿಸಿ ಕಾರ್ಯಪ್ರವೃತ್ತರಾದ ಜನರನ್ನು ಪ್ರವರ್ತಕರೆಂದು(ಪ್ರಮೋಟರ್ಸ್‌) ಕರೆಯುವುದು  ವಾಡಿಕೆಯಾಗಿದೆ. ಹೀಗೆ ಸಭೆ ಸೇರಿದ ಜನರು ಕಂಪೆನಿಯನ್ನು ಸ್ಥಾಪಿಸಲು ಅಗತ್ಯವಾದ ಯಂತ್ರೋಪಕರಣಗಳು, ಕಟ್ಟಡ, ಸ್ಥಳ, ಸಿಬ್ಬಂದಿವರ್ಗ, ಬಂಡವಾಳ ವ್ಯವಸ್ಥ-ಸಂಗ್ರಹ ವಿಧಾನ ಮೊದಲಾದ ವಿಚಾರಗಳಲ್ಲಿ ನಿರ್ಧಾರವನ್ನು ಕೈಗೊಳ್ಳುತ್ತಾರೆ.

ಒಂದು ವೇಳೆ ಈಗಾಗಲೇ ಅಸ್ತಿತ್ವದಲ್ಲಿರುವ ಕಂಪೆನಿಯನ್ನೇ ತಮ್ಮ ವಶಕ್ಕೆ ತೆಗೆದುಕೊಂಡು ಕಾರ್ಯಪ್ರವೃತ್ತರಾಗಬಹುದು. ಈಗೆ ಅಸ್ತಿತ್ವದಲ್ಲಿರುವ ಕಂಪೆನಿಯನ್ನು ತೆಗೆದುಕೊಳ್ಳಲು ನಾನಾಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ತಾವು ಕೊಳ್ಳಲಿರುವ ಸಂಸ್ಥೆಯ ಸ್ಥಿತಿಗತಿಗಳ ಬಗ್ಗೆ ತಜ್ಞರಿಂದ ಪರಿಶೀಲನೆ ನಡೆಸಿ ವರದಿಯನ್ನು ಪಡೆಯಬೇಕಾಗುತ್ತದೆ. ಕಂಪೆನಿಯನ್ನು ವಶಕ್ಕೆ ತೆಗೆದುಕೊಳ್ಳುವ ವಿಧಾನ, ಅದರ ಬೆಲೆಯನ್ನು ಸಂದಾಯ ಮಾಡುವ ಬಗ್ಗೆ, ಕಂಪೆನಿಯ ಮಾಲೀಕರೊಂದಿಗೆ ಪೂರ್ವಭಾವೀ ಒಡಂಬಡಿಕೆ ಮಾಡಿಕೊಳ್ಳುವುದು, ಕಂಪೆನಿಯ ಷೇರುಗಳ ಮೊತ್ತ ೨೫ ಲಕ್ಷ ರೂ. ಮೀರಿದ್ದರೆ ಕೇಂದ್ರ ಸರ್ಕಾರದ ಅನುಮತಿ ಪಡೆಯುವುದು ಇವೇ ಮೊದಲಾದ ಕಾರ್ಯಗಳನ್ನು ನಿರ್ವಹಿಸಬೇಕು. ಈ ಬಗೆಯ ಪೂರ್ವಭಾವಿ ಪ್ರಯತ್ನಗಳನ್ನು ಕಂಪೆನಿಯ ಪ್ರಾರಂಭ ಹಂತ ಅಥವಾ ಪ್ರವರ್ತನೆಯ ಹಂತ ಎಂದು ಕರೆಯುತ್ತಾರೆ.

೨. ನೊಂದಾವಣೆ ಹಂತ(ಸಂಘ ಸಮರ್ಥನ ಪತ್ರ ನೀಡಿಕೆ ಹಂತ, ಇನ್ ಕಾರ್ಪೊರೇಟರ್ ಸ್ಟೇಜ್): ಈ ಹಂತದಲ್ಲಿ ಕಂಪನಿಯ ಮನವಿ ಪತ್ರ, ಲಿಖಿತ ವಿಧಿ ಪತ್ರ, ಕೇಂದ್ರ ಕಚೇರಿಯ ವಿಳಾಸ ನಿರ್ದೇಶನ ಪತ್ರ, ನಿರ್ದೇಶಕರಿಗೆ ಸಂಬಂಧಿಸಿದ ನಮೂನೆ ಪತ್ರಗಳು, ನಿರ್ದೇಶಕ ಮಂಡಳಿ ಪಟ್ಟಿ, ನಿರ್ದೇಶಕರು ಒಪ್ಪಿಗೆ ನೀಡಿದ ಪತ್ರ, ನಿರ್ದೇಶಕರ ಅರ್ಹತಾ ಷೇರುಗಳು ಖರೀದಿ ವಾಗ್ದಾನ ಪತ್ರ, ವಿಧಿಯುಕ್ತ ಘೋಷಣಾ ಪತ್ರ (ಸ್ಟಾಚ್ಯುಟರಿ ಡಿಕ್ಲರೇಷನ್), ಕೋಶಾಧಿಕಾರಿ ಮತ್ತು ಕಾರ್ಯದರ್ಶಿಯೊಂದಿಗಿನ ಒಪ್ಪಂದ ಪತ್ರ- ಇವೇ ಮೊದಲಾದ ದಾಖಲೆ ಪತ್ರಗಳೊಡನೆ ಕಂಪೆನಿಯನ್ನು  ನೊಂದಾಯಿಸಿಕೊಳ್ಳಲು ನಿರ್ದಿಷ್ಟ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಈ ಅರ್ಜಿ ಸಲ್ಲಿಸುವ ಮುಂಚೆ ಕಂಪನಿಗೆ ಇಡುವ ಹೆಸರಿನ ಬಗ್ಗೆ ರಿಜಿಸ್ಟ್ರಾರರಿಂದ ಒಪ್ಪಿಗೆ ಪಡದಿರಬೇಕು; ೨೫ ಲಕ್ಷ ರೂ.ಗಳಿಗೂ  ಮೀರಿದ ಬಂಡವಾಳದ ಸಂಸ್ಥೆಯಾಗಿದ್ದಲ್ಲಿ ಪಡೆಯಬೇಕಾಗುವ ರಹದಾರಿಯನ್ನು ಪಡೆದಿರಬೇಕು. ನಿಯಮಾನುಸಾರ ಸಲ್ಲಿಸಿದ ಮೇಲ್ಕಂಡ ಎಲ್ಲಾ ದಾಖಲೆಯುಕ್ತ ಅರ್ಜಿಯನ್ನು ಸಮಗ್ರವಾಗಿ ಪರಿಶೀಲಿಸಿ ಅದು ಸಮರ್ಪಕವಾಗಿದ್ದಲ್ಲಿ ಕಂಪೆನಿಯನ್ನು ನೊಂದಾವಣೆ ಮಾಡುತ್ತಾನೆ; ನೊಂದಾವಣೆ ಪತ್ರವನ್ನು ಕಂಪೆನಿಗೆ ಸಲ್ಲಿಸುತ್ತಾನೆ. ಅಲ್ಲಿಂದ ಮುಂದಕ್ಕೆ ಕಂಪನಿ ಶಾಸನಬದ್ಧವಾಗಿ ಅಸ್ತಿತ್ವಕ್ಕೆ ಬರುತ್ತದೆ. ಆದರೆ ಕಂಪನಿಯು (ಸಾರ್ವಜನಿಕ ಕಂಪೆನಿ) ವ್ಯವಹಾರ ಪ್ರಾರಂಭಿಸಲು ತಕ್ಷಣ ಸಾಧ್ಯವಾಗುವುದಿಲ್ಲ. ಅದಕ್ಕೆ ಮುಂದಿನ  ಎರಡು ಹಂತಗಳ ಕಾರ್ಯವನ್ನು ಪೂರೈಸಬೇಕಾಗುತ್ತದೆ.

೩. ಷೇರು ಬಂಡವಾಳ ಸಂಗ್ರಹಣಾ ಹಂತ ಕಂಪೆನಿಯ ನೊಂದಾವಣೆಯಾಗಿ ಶಾಸನಬದ್ಧವಾಗಿ ಅಸ್ತಿತ್ವಕ್ಕೆ  ಬಂದಕೂಡಲೇ ಕಂಪೆನಿಯ ಪ್ರವರ್ತಕರು ನಿರ್ದೇಶಕರ ಪ್ರಥಮ ಸಭೆಯನ್ನು ಏರ್ಪಡಿಸಿಸುತ್ತಾರೆ. ಈ ಸಭೆಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ, ಬ್ಯಾಂಕರ್, ಲೆಕ್ಕಪರಿಶೋಧಕ, ಕಾನೂನು ಸಲಹೆಗಾರ, ಷೇರು ದಲ್ಲಾಳಿ ಮೊದಲಾದವರನ್ನು ಗೊತ್ತು ಮಾಡಲಾಗುತ್ತದೆ. ಕಂಪೆನಿಯ ಷೇರುಗಳನ್ನು ಕೊಳ್ಳಲು ಸಾರ್ವಜನಿಕರಾಗಿ ಬಿಡುಗಡೆ ಮಾಡುವ  ಮುಂಚೆ ರಿಜಿಸ್ಟಾರರಲಿ ಪ್ರತಿಯನ್ನು ದಾಖಲು ಮಾಡುವ ಪ್ರಸಿದ್ದಿ ಪತ್ರಿಕೆಯನ್ನು (ವಿವರಣ ಪತ್ರಿಕೆ: ಪ್ರಾಸ್ಪೆಕ್ಟಸ್) ಸಿದ್ಧಪಡಿಸಿ ಒಪ್ಪಿಗೆ ನೀಡಲಾಗುತ್ತದೆ. ಇದಲ್ಲದೆ ಪೂರ್ವಭಾವಿ ಒಪ್ಪಂದಗಳು, ಪ್ರಸಿದ್ಧಿ ಪತ್ರಿಕೆಯ ಬಿಡುಗಡೆಯ ದಿನಾಂಕ, ಸ್ಟಾಕ್ ಎಕ್ಸ್‌ಚೇಂಜ್, ಕೇಂದ್ರಕ್ಕೆ ಅರ್ಜಿ ಸಲ್ಲಿಸಲು ನಿರ್ಧಾರ ಇವೇ ಮೊದಲಾದ ವಿಚಾರಗಳನ್ನು ಪರಿಶೀಲನೆ ಮಾಡಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಾರ್ಯ ಪ್ರವೃತ್ತರಾಗಬೇಕಾಗುವುದು.

೪. ಷೇರುಗಳ ಹಂಚಿಕೆ: ಸಾರ್ವಜನಿಕರು ಷೇರುಗಳನ್ನು ಕಂಪೆನಿಯ ಬ್ಯಾಂಕು ಮತ್ತು ದಳ್ಳಾಳಿಗಳ ಮೂಲಕವೂ ಕೊಳ್ಳಬಹುದು. ಪ್ರಸಿದ್ಧಿ ಪತ್ರಿಕೆಯನ್ನು ವೃತ್ತ ಪತ್ರಿಕೆಗಳ ಜಾಹಿರಾತಿನಂತೆ ಪ್ರಕಟಿಸಲಾಗುವುದು. ಸಾರ್ವಜನಿಕರು ಷೇರುಗಳನ್ನು ಪಡೆಯಲು ಅರ್ಜಿ ಹಣದೊಂದಿಗೆ ಸಲ್ಲಿಸಬೇಕಾಗುತ್ತದೆ; ಷೇರುಗಳನ್ನು ಸೂಕ್ತ ಕ್ರಮದಲ್ಲಿ ಅರ್ಜಿದಾರರಿಗೆ ಹಂಚಬೇಕು; ಷೇರುಗಳನ್ನು ಪಡೆದವರಿಗೆ ಷೇರು ಹಂಚಿಕೆ ಪತ್ರವನ್ನೂ (ಲೆಟರ್ ಆಫ್ ಅಲಾಟ್‌ಮೆಂಟ್) ಷೇರು ದೊರಕದಿರುವವರಿಗೆ ವಿಷಾದ ಸೂಚನೆ ಪತ್ರ(ಲೆಟರ್ ಆಫ್ ರಿಗ್ರೇಟ್)ವನ್ನೂ ಕಳಿಸಬೇಕು. ಷೇರು ಹಂಚಿಕೆಯಾದ ಮೇಲೆ ಷೇರು ಹಂಚಿಕೆಯ ಸಮಗ್ರ ವಿವರಗಳನ್ನು ಕಂಪೆನಿ ರಿಜಿಸ್ಟ್ರಾರರಿಗೆ ಒಂದು ತಿಂಗಳ ಅವಧಿಯೊಳಗೆ ಕಳಿಸಿಕೊಡಲಾಗುತ್ತದೆ. ಷೇರು ಅರ್ಜಿಯೊಂದಿಗೆ ನೀಡುವ ಹಣವೂ ಷೇರು ಹಂಚಿಕೆಯ ಅನಂತರ ಬರುವ ಹಣವೂ ಒಟ್ಟು ಷೇರು ಹಣದ ಒಂದು ಅಂಶವಾಗಿರುತ್ತದೆ; ಉಳಿದ ಹಣವನ್ನು ಷೇರುದಾರರು ಕಂಪೆನಿಗೆ ಗೊತ್ತಾದ ಕಂತುಗಳಲ್ಲಿ, ಕಂಪೆನಿ ಷೇರುದಾರರಿಗೆ ಕರೆಕಳಿಸಿದಾಗಲೆಲ್ಲಾ ಸಲ್ಲಿಸಬೇಕಾಗುತ್ತದೆ. ಅನಂತರ ಸದಸ್ಯರ ದಾಖಲಾತಿ ಹೊತ್ತಗೆಯನ್ನು (ರಿಜಿಸ್ಟರ್ ಆಫ್ ಮೆಂಬರ್ಸ್‌) ಸಿದ್ಧಪಡಿಸಿ ಷೇರುದಾರರ ಮತ್ತು ಅವರ ಷೇರುಗಳ ವಿವರಗಳನ್ನು ನಮೂದಿಸಲಾಗುತ್ತದೆ. ಇದಾದ ಮೇಲೆ ಕಂಪೆನಿಯ ಮುದ್ರೆಯಿರುವ ಕನಿಷ್ಠ ಪಕ್ಷ ಇಬ್ಬರು ನಿರ್ದೇಶಕರ ಸಹಿ ಇರುವ ಷೇರುಪ್ರಮಾಣ ಪತ್ರಗಳನ್ನು ಷೇರುದಾರರಿಗೆ ಕಳಿಸಲಾಗುತ್ತದೆ.

೫. ವ್ಯವಹಾರ ಪ್ರಾರಂಭದ ಹಂತ: ಷೇರು ಹಂಚಿಕೆಯ ಕ್ರಮಗಳೆಲ್ಲ ಮುಗಿದ ಮೇಲೆ ಕನಿಷ್ಠ ಹಣ ಸಂಗ್ರಹವಾಗಿರುವ ಬಗ್ಗೆ, ನಿರ್ದೇಶಕರು ಅರ್ಹತಾ ಷೇರುಗಳನ್ನು ಕೊಂಡ ಬಗ್ಗೆ ವ್ಯವಹಾರಕ್ಕೆ ಬೇಕಾದ ಎಲ್ಲ  ಅಗತ್ಯಗಳನ್ನು ಕಾನೂನು ರೀತಿ ಪೂರೈಸಲಾದ ಬಗ್ಗೆ ಹೇಳಿಕೆಗಳನ್ನು ಪತ್ರಗಳ ರೂಪದಲ್ಲಿ ಬರೆದು ರಿಜಿಸ್ಟ್ರಾರರಿಗೆ ಸಲ್ಲಿಸಬೇಕು; ಜೊತೆಗೆ ಪ್ರಸಿದ್ಧಿ ಪತ್ರಿಕೆಯ ನಕಲು ಅಥವಾ ಆ ಬಗ್ಗೆ ಹೇಳಿಕೆ ಪತ್ರವನ್ನು ಸಲ್ಲಿಸಬೇಕು. ಅವಶ್ಯಕವಾದ ಶುಲ್ಕವನ್ನೂ ಕಟ್ಟಬೇಕು. ಇಷ್ಟೆಲ್ಲಾ  ಆದ ಮೇಲೆ ರಿಜಿಸ್ಟ್ರಾರರು ಅವೆಲ್ಲವನ್ನೂ ಪರಿಶೀಲಿಸುತ್ತಾರೆ; ಎಲ್ಲ ದಾಖಲೆಗಳೂ ತೃಪ್ತಿಕರವೆಂದು ಕಂಡು ಬಂದರೆ ವ್ಯವಹಾರವನ್ನು ಪ್ರಾರಂಭಿಸಲು ವ್ಯಾಪಾರಿ ಪ್ರಮಾಣ ಪತ್ರವನ್ನು ನೀಡುತ್ತಾನೆ. ಇದು ಕೈಗೆ ಬಂದ ನಂತರವೇ ಕಂಪೆನಿ ತನ್ನ ಕಾರ್ಯವನ್ನು ಪ್ರಾರಂಭಿಸಬೇಕಾಗುತ್ತದೆ.

೬. ಕಂಪೆನಿ ರಚನೆಯಲ್ಲಿ ಕಾರ್ಯದರ್ಶಿ ಪಾತ್ರ: ಹೀಗೆ ಕಂಪೆನಿಯನ್ನು ರಚಿಸಿ, ನೊಂದಾಯಿಸಿ ವ್ಯವಹಾರಕ್ಕೆ ತೊಡಗುವಂತೆ ಮಾಡುವಲ್ಲಿ ಕಾರ್ಯದರ್ಶಿ ಹತ್ತಾರು ಬಗೆಯ ಕರ್ತವ್ಯ ನಿರ್ವಹಣೆಯಲ್ಲಿ ತೊಡಗಬೇಕಾಗುತ್ತದೆ. ಈ ಹಂತದ ಕಾರ್ಯಗಳನ್ನು ಕಂಪೆನಿ ನೊಂದಾವಣೆ ಆಗುವ ಮೊದಲು ಅನಂತರ ಎಂದು ಎರಡು ಹಂತಗಳಲ್ಲಿ ವಿವೇಚಿಸಬಹುದಾಗಿದೆ.