ರಾಗ ಮಾರವಿ ಏಕತಾಳ

ಖಿಡಿಖಿಡಿಯೇರುತ ವೃಷಪರ್ವಾಖ್ಯನು | ಖಡುಗವಜಳಪಿಸುತಾ ||
ದಡಿಗತನವನಾನಿಲಿಸುವೆನೆನ್ನುತ | ವಡನದತೂಗಿಡಲೂ        || ೧ ||

ಭಳಿರೇಭಾಪುರೆಯನುತದಖಂಡಿಸಿ | ಛಲದೊಳುಘರ್ಜಿಸುತಾ ||
ಗಳವನುಖಂಡಿಪೆನೆನುತಲೆಪಾಶದಿ | ಬಲಿಯುತಲುರುಳಿಸಿದ    || ೨ || || ೪೦೭ ||

ಭಾಮಿನಿ

ಧುರದಿ ವೃಷಪರ್ವನನುಬಂಧಿಸಿ |
ಹರಿಯನಾದದೊಳೊರುಣ ನಿಂದಿರೆ |
ಗುರುವುನಡೆತಂದಾಗ ಶಿರದೂಗುತ್ತಲಿಂತೆಂದಾ ||
ದುರುಳದಾನವರೆಲ್ಲ ಶುಕ್ರನ |
ಭರವಸದಿಕೊಂಡಿಹರುಸ್ವರ್ಗವ |
ಕೊರಳಕೊದನು ತ್ವರದನಿವರಿಗೆಬಂದಿತಪಜವು        || ೧ || || ೪೦೮ ||

ರಾಗ ಶಂಕರಾಭರಣ ಮಟ್ಟೆತಾಳ

ನುಡಿಯಕೇಳುತಾಗಶುಕ್ರ | ಯಲವೊಲಂಡಿಗುರುವೆಹಿಂದೆ |
ಕಡುಬಲಾಢ್ಯಶಿಷ್ಯರೊಡನೆ ವನಕಪೋದೆಲಾ  || ೧ ||

ಅರಿತುಜಯದಕಾಲವನ್ನು ಪಾಯದಿಂದ | ಲಹಿತರನ್ನು
ಶಿರವನರಿವೆನನುತಲಡಗಿಬಂದೆವೀಗೆಲಾ      || ೨ ||

ಯನ್ನಶಿಷ್ಯರೈಕಮತ್ಯ | ವೆನ್ನೊಳಿರ್ಪಭಕ್ತಿಯಂತೆ |
ನಿನ್ನ ಶಿಷ್ಯರೀರ್ದರಿನಿತು | ಕಷ್ಟವ್ಯಾತಕೊ     || ೩ ||

ನಿನ್ನ ಶಿಷ್ಯನ್ಯಾಕೆನುಡಿಗಳ | ನ್ನುಕೇಳದಿನಿತುಗೈದ |
ರೆನ್ನಮಾತಸುರರುಕೇಳ್ದುದಕ್ಕೆಗೆಲಿದರೂ       || ೪ ||

ಸುರಪನಿನ್ನತೆಜಿಸಿವಿಶ್ವ | ರೂಪನೆಂಬವಿಬುಧನನ್ನು |
ಗುರುವಮಾಡಿಕೊಂಡುಕೊರಳಕೊದನ್ಯಾತಕೊ         || ೫ ||  || ೪೧೩ ||

ರಾಗ ಘಂಟಾರವ ಏಕತಾಳ
(ತಾಳಿಪರ್ವತಕಲ್ಮರಂಗಳನೆಲ್ಲ ಎಂಬಂತೆ)

ಯಲವೊಶುಕ್ರನೆ ಜಡಿದೆನೀಯನ್ನಾನು | ಘಳಿಸಿರುವತಪವಿರಲು | ಶಪಿಸುವೆ |
ಛಲವನೋಡೀಗೆಂದನೂ   || ೧ ||

ಗುರುವೆಯನ್ನಯತಪದಶಕ್ತಿಗಳಿರೆ | ಉರುಹುತಿಹಪ್ರತಿಶಾಪದಿಂದಲಿ |
ಪರಿಯನೋಡೇವೇಗದಿ    || ೨ ||

ಭಾಮಿನಿ

ವಿಲಯರುದ್ರನತೆರದೊಳೀರ್ಪರ |
ಬಲಿಯುಕಾಣುತ ಶಿರವಬಾಗಿಸಿ |
ಕಲಹವ್ಯಾತಕೆ ನಿಮ್ಮೊಳೀರ್ವರು ಪರಮವಿಕ್ರಮರು ||

ಹಲವುಶಾಸ್ತ್ರವನರಿತಪ್ರಾಜ್ಞರೆ |
ಖಳರುಕೈಕೊಂಬುವರುಕ್ರೋಧವ |
ನೊಲಿಸದಿರಿನೀವೆಂದುಸಂತೈಸುತ್ತ ದೈನ್ಯದೊಳು      || ೧ ||  || ೪೧೬ ||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ತಾಳಿರೈಧಾನವರು ಕ್ಷಮೆಯನು | ಕೇಳಿಯನ್ನಯನುಡಿಯತಾರಕ |
ಮಾಲಿಶಂಬರಹೇತಿಮುಖ್ಯರೆನುತ್ತಬಲಿಯು   || ೧ ||

ಧುರವಿಜಯವೆಮಗಿಲ್ಲವೀಗಳು | ಸರುವಭೂತಗಳಿಂಗೆ ಕರ್ಮದಿ |
ಬರುವ ಸುಖದುಃಖಗಳ ಹರಿಸೆಸಮರ್ಥರಾರು          || ೨ ||

ಮೊದಲೆಮಗೆಜಯ ಸುರರಿಗಪಜಯ | ವದಗಿದಂದವನೆನಯಬೇಡಿರಿ |
ವಿಧಿವಶದಿವೆತ್ಯಸ್ತವಾಗಿದೆ ಕ್ಷಮಿಸಿರಯ್ಯಾ     || ೩ ||

ನೋಡಿದೈವದಗತಿ ಪ್ರಸನ್ನತೆ | ಕೂಡೆವದಗಲು ವಿಜಯಮನಗಳ |
ಮಾಡಿಹೊಂದುವತನಕ | ಕಾಲವನೋಡುತಿಹುದು     || ೪ ||

ರಕ್ಷಿಪರೆನೀವ್‌ನಿಮ್ಮಜೀವವ | ನೀಕ್ಷಣಪೊಂದಿರಿರಸಾತಳ |
ಶಿಕ್ಷಿಪಿರಿನೀವೀಗಸುರರೊಳಗೆಂದುಕಳುಹೆ     || ೫ ||

ನಡಿದರಾಕ್ಷಣನಮಿಸಿದೈತ್ಯರು | ಜಡಜಲೋಚನನೆಂದಬಲಿಯೊಳು |
ಅಡಿಗಳೆರಡಾಯ್ತೆನಗೆ | ಮೂರರಪಡವಿತೋರೂ       || ೬ ||

ವಾರ್ಧಿಕ್ಯ

ಕೊಟ್ಟಮಾತುಗಳಂತೆನಡಸದಿರಲಾಪುರುಷ |
ದುಷ್ಟನಹಸುರಲೋಕಧೂರವಾಪುದುಮತ್ತೆ |
ಸೃಷ್ಟಿಯೊಳ್ ಕ್ರಿಮಿಕೀಟಜನ್ಮಗಳತಾನೆತ್ತಿನರಕಯಾತನೆಪೊಂದುವಾ ||
ಕೆಟ್ಟಹಂಕಾರದೊಳಗಿತ್ತವಾಗ್ದಾನಮಂ |
ಬಿಟ್ಟುಬಾಳ್ದರೆ ನರಕದೊಳಗೆವಾಸಿಸುಯಂದು |
ಶಿಟ್ಟಿನೋಳ್ನಿಂದಿರುವಹರಿಯ ಮೂರ್ತಿಯದಿವ್ಯ ದೃಷ್ಟಿಯೊಳ್ತಾನೋಡಿದಾ || ೧ ||

ಪರಮವಿಶ್ವಂಭರನ ಮೂರ್ತಿಯೊಳ್ಬ್ರಂಹ್ಮಾಂಡ |
ಶರಧಿಗಿರಿತರುಗಹನಗುಲ್ಮನದ್ಯಾದಿಗಳು |
ಸುರರುಕಿನ್ನರ ಯಕ್ಷಸಾಧ್ಯಚಾರಣಗರುಡ ರುರಗತಿರ್ಯಕ್ ಪ್ರಾಣಿಯು ||
ತುರಗಮಖಶಾಲೆಯಾಚಾರ‍್ಯರುತ್ವಿಜರಿಂದ |
ಮೆರವದಕ್ಷಿಣವನ್ಹಿಯಹವನಿಯಜಾಜ್ವಲ್ಯ |
ವರಗಾರ್ಹಪತ್ಯಗಳಬಳಿಯೊಳಗೆತಾನಿರ್ಪುವಂತೆ ಕಂಡನುದೇಹದಿ        || ೨ || || ೪೨೪ ||

ರಾಗ ಆಹೇರಿ ಆದಿತಾಳ
(ಅಹುದೇ ಯನ್ನಾಯರಮಣಾ ಎಂಬಂತೆ)

ಹರಿಜಗನ್ಮಯಪಾಲಿಸೂ | ದುರಿತಾರಿಶೌರೇ | ಪರಮಾಪುರುಷಾಲಾಲಿಸೂ         || ಪಲ್ಲ ||

ಸರಸಿಜದಳನೇತ್ರಾ | ವರಕಮನೀಯಗಾತ್ರಾ | ಸುರಮುನಿಗಣಸ್ತೋತ್ರಾ |
ಶರಣುಸನ್ನುತಿಪಾತ್ರಾ      || ಅನು ಪಲ್ಲ ||

ಶಿರಿಧರೆಸತಿಸುತರಾ | ಭೋಗಾದಿಮನ | ವಿರಿಸಾದಸದ್ಭಕ್ತಾರ | ಅರಿವೆನೀನೇಕಾಂತ |
ಭಕ್ತರೆಂದವರೀಗೆ | ಪುರುಷಾರ್ಥಗಳನಿತ್ತೂ | ಕರುಣೀಪೆಮೋಕ್ಷಾವ ||
ಹರಿಜನನ್ಮಯಲಾಲಿಸು ||  || ೧ ||

ನಿನ್ನಿಂದಾಲಜಭವರೂ | ಸುರಸಿದ್ಧಸಾಧ್ಯ | ಪನ್ನಾಗಾದಿಗಳೆಲ್ಲಾರೂ |
ನಿನ್ನೊಳುಸ್ಥಾವರ | ಜಂಗಾಮಾದಿಗಳೆಲ್ಲ | ಜನ್ಮಿಸಿಕಡೆಯೊಳು |
ನಿನ್ನೊಳಗೈಕ್ಯವೂ | ಹರಿಜಗನ್ಮಯಪಾಲಿಸೂ || ೨ ||

ನರಕಾಪೊಂದಾಲುಬೆದಾರೆ | ನಷ್ಟಾಗಳೈದೀ | ವರುಣಾಪಾತಕುಬೆದಾರೇ |
ಹರಿಯೇನೀನಿತ್ತವ | ಮಾನಾಕೂಬೆದರೇನೂ | ತ್ವರಯಾಲಾರೆನೂಸತ್ಯಾ |
ವದಕಗಿಬೆದರರೂವೇ | ಹರಿಜಗನ್ಮಯಪಾಲಿಸೂ       || ೩ ||

ಉತ್ತುಮವಿದುನೋಡಾಲು | ಮಹನೀಯಾಪುರುಷಾ | ವಿತ್ತಿಹಶಾಸನಂಗಾಳೂ |
ಮತ್ತೆಪಿತನುಮಾತೃ | ಭ್ರಾತೃಗಳೀಯದ | ನಿತ್ತೂಶಿಕ್ಷಿಪರೈಸೆ | ಹಿತಕಾಗಿ ಮಹಿಮಾರೂ ||
ಹರಿಜಗನ್ಮಯಪಾಲಿಸೂ   || ೪ ||

ಧನಧಾನ್ಯಮದದೊಳಾಗೇ | ಕನಕಾದಿಭುವನ | ವನಿತಾದಿಭೋಗಾದೊಳಾಗೆ |
ತನುಮಧಾಂದದಿದುಷ್ಟ | ಧನುಜಾರಾದೆಮ್ಮಾನು | ಕನಿಕರದೊಳಗದ | ತೆಜಿಸೀರಕ್ಷಿಪೆದೇವಾ ||
ಹರಿಜಗನ್ಮಯಪಾಲಿಸೂ   || ೫ ||

ಭಾಮಿನಿ

ಧರೆಯನೆಲ್ಲವನಳದುಯನ್ನನು |
ವರುಣಪಾಶದಿಬಿಗಿದೆಯಾದರು |
ಹರಿಯೆ ನಿನಗರ್ಪಿಸಿದ ಮೂರನೆಯಡಿಯ ಕೊಡುತಿಹೆನೂ ||
ಸುರನರಾದಿಗಳಿಂಗೆದುರ್ಲಭ |
ಪರಮಪದಮಂಪಡವೆ ಕರುಣಾ |
ಕರನೆಯನ್ನಯ ಶಿರದೊಳಿರಿಸೈ ಪಾದಪಂಕಜವಾ      || ೧ ||  || ೪೩೦ ||

ಕಂದ ಪದ್ಯ

ಇಂತೆನೆಶ್ರೀಹರಿ ಮನದೊಳ್ |
ಸಂತಸಗೊಂಡಿರೆ ವಿಂದ್ಯಾವಳಿಯತಿ ದೈನ್ಯದಿ |
ನಿಂತಿಹಮೂರುತಿಗೊಂದಿಸಿ |
ತಾಂತವಕದಿಕರಗಳಮುಗಿಯುತಲೆಂದಳ್ಭರದಿಂ       || ೧ ||  || ೪೩೧ ||

ಭಾಮಿನಿ

ಸೃಷ್ಟಿಸಿಹೆನೀನಖಿಳಲೋಕವ |
ಸೃಷ್ಟಿಸಿಹೆಜೀವಗಳದೇವನೇ |
ಶ್ರೇಷ್ಟರೆಂಬರುತಾವೆ ತಮ್ಮಯಗರ್ವದಿಂಬರಿದೇ ||
ಸೃಷ್ಟಿಸ್ಥಿತಿಲಯನಿನ್ನೊಳಿದೆಹರಿ |
ಕೊಟ್ಟುಕೊಂಬಸ್ವತಂತ್ರರ‍್ಯಾರೈ |
ಹೃಷ್ಟಮಾನಸ ರಕ್ಷಿಸೆನೆಮನ್ನಿಸುತಲಾಕ್ಷಣದಿ  || ೧ || || ೪೩೯ ||

ರಾಗ ಜಂಜೋಟಿ ಅಷ್ಟತಾಳ

ಶರಣಾರೊಳತಿಶ್ರೇಷ್ಟನೀನೂ | ಮಹ | ಹರುಷಾತಾಳಿಹೆಕೇಳೂ ನಾನೂ |
ಧರೆಯೊಳುಬಲಿಚಕ್ರವರ್ತಿನಿಂಗೆಣೆಗಾಣೆ | ಪರಮಭಕ್ತನುಸತ್ಯಧರ್ಮವ |
ವಿರಚಿಪರುಮತ್ತ್ಯಾರುಲೋಕದಿ       || ೧ ||

ಆದಿಯೊಳ್ಭಕ್ತಾರಶಿರಿಯಾ | ನಾನು | ಮೋದಾದಿಶಳದೀವೆಸುಖವಾ |
ಖೇದಪಡಲುಬೇಡ ಸುರನರೋರುಗರಿಂದ | ಸಾಧನದಿಪಡಯುವರೆ ದುರ್ಲಭ |
ವಾದಘನಥರ ಸ್ಥಾನವೀವೆನು        || ೨ ||

ಕಳಯಾಲೀಮನ್ವಂತರಗಳೂ | ಮನ | ವಳುಕಲಾಗದುಹರ್ಷತಾಳು |
ವಲಿದೀವೆಸೂರ್ಯಾಸಾವರ್ಣಿಯಕಾಲದಿ | ಬಲಿಯೆನಿನಗಾಗಿಂದ್ರಪದದೊಳು |
ನೆಲಸುವಂದವಮಾಳ್ಪೆಧಿಟವಿದು     || ೩ ||

ವೆಥೆರೋಗಶೂನ್ಯವಾಗಿಹುದೂ | ಮತ್ತಾ | ಸುತಳಾದಿಬಳಲೀಕೆಬರದೂ |
ಕ್ಷುತುಕ್ಷಾಮಭಯವಿಲ್ಲ ವಿಶ್ವಕರ್ಮನುಗೈದ | ನತಿಶಯದರಂಜಕದಲೋಕದಿ |
ಸತಿಸುತಾದಿಗಳಿಂದಸುಖಿಸೈ       || ೪ || || ೪೩೬ ||

ಶ್ರೀರಾಗ ಆದಿತಾಳ
(ಶ್ರೀರಮಣಾಸರಸೀರುಹಾಕ್ಷಿಯ ಎಂಬಂತೆ)

ಮಾರಜನಕಸುರ | ವಾರವಿನುತಕೇ | ಯೂರಧಾರೀಶ್ರೀಶಂ     || ಪ ||
ಘೋರಧನುಜಸಂ | ಹಾರಗುಣೋದಯ | ಹೀರಕೌಂಸ್ತುಭಮಣಿ |
ಹಾರಧೀರಜಯ | ಮಾರಜನಕ ||             || ಅನುಪಲ್ಲ ||

ಚರಣಾನಂಬೀದರನ್ನೂ | ಪರಯೂವಾಬಿರೀದನ್ನೂ | ಧರಿಸೀಮೆರವದೇವಾ ||
ಸ್ಥಿರಚರಾತ್ಮಕಜೀವಾ | ನರಹರಿರೂಪವನೂ | ತಾಳುತತಾತಪ್ರಹ್ಲಾದನನೂ |
ಪರದಿಹೆ ತತ್ಪಿತನಿಂದಪಮೃತ್ಯುವ | ಹರಿಸಿದೆದೀನೋದ್ಧರಣ ನೃಕೇಸರೀ || ಮಾರಜನಕ     || ೧ ||

ಧನುಜಾರವೈರಿಯಂದೂ | ನಿನಗೇಪೇಳೂವರಿಂದೂ | ಹನನಾಮಾಡುತ್ತಖಳರಾ |
ಘನಮೋಕ್ಷಾದೊಳಗೆಮ್ಮವರಾ | ಕನಿಕರದೊಳುನಿಲಿಸೀ | ಮುನಿಜನದುರ್ಲಭಪದವೆನಿಸೀ |
ಚಿನುಮಯನೀಸನ್ಮಿತ್ರನುಕರ್ಬುರ | ಜನರಿಂಗಹಿತನೆಂತೆಂಬರುಬರಿದೇ || ಮಾರಜನಕ      || ೨ ||

ಆದೀಪುಣ್ಯದೊಳೀಗಾ | ಳಾದೀತೇಯಾರಭೋಗಾ | ಮೋದಾಶಾಶ್ವತವಲ್ಲಾ | ಭಾದಾಕವಹುದಲ್ಲಾ |
ಪೋದರೆಪುಣ್ಯಗಳೂ | ಪುನರಪಿಖೇದದಜನ್ಮಗಳೂ | ಮಾಧವಕೇಳ್ಸುರರಿಂಗತಿಕಷ್ಟವು |
ಸಾಧಿಸಿಮುಕ್ತಿಯಪಡವರು ಧನುಜರು || ಮಾರಜನಕ  || ೩ || || ೪೩೯ ||

ಸಾಂಗತ್ಯ

ಹರಿಯಂದಾಶ್ವಾಸಾಮಾತ್ರದಿ ವಿರೋಚನನಿಹಾ | ಸುರರಾಯುಷ್ಯವ ಶಳದಿಹರೂ ||
ತ್ವರಯಾಲಾಪುದೆವಿಧಿ ವಶವನ್ನೂ ಸುತಳಾಕೆ | ಕರದೊದೂಸಲಹೋನೀನವನಾ  || ೧ ||

ಶರಣಾಪ್ರಹ್ಲಾದನನೊಡಗೊಂಡೂವೇಗಾದಿ | ತೆರಳೂದೈತ್ಯರಫಡೆಸಹಿತಾ ||
ಸುರಪತಿಯೊಳುವೈರವಿಡದಿರೂಮನದೊಳೂ | ಸುರರಂಗೋಪಾಂಗಳೆನಗೇ      || ೨ || || ೪೪೧ ||

ರಾಗ ಶಂಕರಾಭರಣ ಅಷ್ಟತಾಳ
(ಯಾದವೋತ್ತುಮಾನೀನೂಲಾಲಿಸಿಕೇಳೂ ಎಂಬಂತೆ)

ಸುರನರೋರುಗಾಯಕ್ಷಾ | ವಂದ್ಯಪಾದಾಬ್ಜಂ |
ಕರುಣದಿಸಲ ಹೆನ್ನಾನಭಯವನಿಡುತಂ || ಸುರನರೋರುಗ      || ೧ ||

ನಿನ್ನನೇಮಕೆಭಂಗಾ | ವಿತ್ತಿಹೆನಾನೂ | ಮುನ್ನದೇವೇಂದ್ರನ |
ಪದವಕೊಂಡಿಹೆನೂ || ಸುರನರೋರುಗಯುಕ್ಷಾ        || ೨ ||

ಪಕ್ಷಿವಾಹನಾದೇವಾ | ಗೈದುದುಷ್ಕೃತ್ಯಂ | ಕುಕ್ಷಿಯೊಳಿಡಬೇಡ |
ಪಾಲಿಸುನಿತ್ಯಂ || ಸುರನರೋರುಗಯಕ್ಷಾ    || ೩ || || ೪೪೪ ||

ರಾಗ ಅಷ್ಟತಾಳ

ಶರಣನಿನ್ನಯಾ | ಸತ್ಯನಡತೆಯಾ | ಪರಿಕಿಸೂವರೇ | ವರುಣ ಪಾಶವಾ ||
ಗರುಡನಿಂದಲೀ | ಬಂಧಿಸೀರ್ಪೆನೂ | ಪರಮಕಿಂಕರಾ | ಸದ್ಗುಣಾಕರಾ    || ೧ ||

ಕರುಣದಿಂದಲೀ | ಬಿಚ್ಚಿಶ್ರೀಹರೀ | ವರವಕೇಳಿಕೊ | ಕೊಡುವೆನೆಂದನೂ ||
ಚರಣಕೆರಗುತಾ | ಬಲಿಯುಸಂತತಾ | ಹರಿಯೆಯನ್ನಯಾ | ಗೃಹದಿನೆಲಸಯ್ಯಾ   || ೨ || ||

ರಾಗ ಮಧ್ಯಮಾವತಿ ಆದಿತಾಳ
(ದೇವಾದೇವರದೇವಾ ಎಂಬಂತೆ)

ಭಳಿರೇಭಳಿರೇಶರಣಾ | ನಿನ್ನನಿ | ಶ್ಚಲದಭಕ್ತಿಗೆಕರುಣಾ | ಯಳಸಿತೆನ್ನಾಯಮನ |
ಕಳವಳಿಸುತಲಿದೇ | ನೆಲಸೂವೇನನೂದಿದ | ಚಲಿಸೆನಾನೆಂದಿಗೂ || ಭಳಿರೇ       || ೧ ||

ಕರುಣೀಸೂವೆನೂನಿನಗೇ | ಭೋಗಕಿ | ನ್ನರರಂತೇಸುಖದೊಳಾಗೇ | ಸುರಸಿದ್ಧ ಸಾಧ್ಯಪ |
ನ್ನಗರಿಂದಪೊಂದದ | ಪರಮಸಂಪದನಿ ನಗೀವೆನಾಸುತಳದೀ || ಭಳಿರೇ || ೨ ||

ಶರಣಾರಮನದೊಳಗೇ | ಸಂತತ | ವಿರುವೇನೂಮುದದೊಳಗೇ |
ತರಳರಂದದಿದಿವ್ಯಕರುಣಕಟಾಕ್ಷದೀ | ಪೊರವೆನಲ್ಲದೆತ್ವರದಿರೆನಾನೆಂದಿಗೂ || ಭಳಿರೇ       || ೩ ||

ಭಾಮಿನಿ

ವರಚತುರ್ಭುಜಮಂಡಲದಪೀ |
ವರವರೋರುಸ್ತಳದತೊಳಗುವ |
ತರುಣತುಲಸೀಮಾಲೆಗಳ ವರ | ವೈಜಯಂತಿಗಳಾ ||
ಕರವಿರಾಜಿತಶಂಖಚಕ್ರಾಂ |
ಬುರುಹಗಧೆಯೊಳುಮೆರವ ಪೀತಾಂ |
ಬರತ್ರಿವಿಕ್ರಮನೆನ್ನ ಬಿನ್ನಪವನ್ನು ಲಾಲಿಪುದೂ || ೧ || || ೪೫೦ ||

ರಾಗ ಅಹೇರಿ ಏಕತಾಳ
(ಕೈಯ್ಯಾತೋರೊ ಕರುಣಿಗಳರಸನೆ ಎಂಬಾಂತ)

ಲಾಲೀಸಯ್ಯಾದೇವಾಲಕ್ಷ್ಮೀ | ಲೋಲಾಶ್ರೀಹರೇ |
ನೀಲಾಮೇ ಘಶ್ಯಾಮಪಂಕಜ | ಮಾಲಾನರಹರೇ  || ಪಲ್ಲ ||

ತುರಗಾಧ್ವರವಾನೆಸಗೀರ್ಪೇನೂ | ಹರಿಯೇನಾನೀಗಾ |
ಪರಿಸಮಾಪ್ತಿಪೂರ್ಣಾಹುತಿಯ ಗೈವೇನೂಭೇಗಾ ||
ಲಾಲಿಸಯ್ಯಾದೇವಾ ಲಕ್ಷ್ಮೀ | ಲೋಲಾಶ್ರೀಹರೇ        || ೧ ||

ಸರಸೀಜಾಕ್ಷಾ ನಿನಗರ್ಪಣೆಯಾ | ಮಾಳ್ಪೇನೂಸ್ವಾಮೀ |
ತೆರಳೂವೆನಾಮೇಲೆಯಾಜ್ಞೆ | ಯಂತೇಸುಪ್ರೇಮೀ ||
ಲಾಲಿಸಯ್ಯಾದೇವಾಲಕ್ಷ್ಮೀಲೋಲಶ್ರೀಹರಿ    || ೨ ||

ಖತಿಯೊಳಿಹನೂಗುರುವರೇಣ್ಯ | ಮತವಾಮೀರ್ದೆನೂ |
ಕೃತುಸಮಾಪ್ತಿಗೈಸೂವಂತೇ | ಪೇಳ್ವೂದೂನೀನೂ ||
ಲಾಲಿಸಯ್ಯಾದೇವಾಲಕ್ಷ್ಮೀಲೋಲಾ ಶ್ರೀಹರೇ || ೩ || || ೪೫೩ ||

ರಾಗ ಸೂರಟ ಏಕತಾಳ
(ಕೋಮಲಾಂಗಿಕೇಳೆ ಎಂಬಂತೆ)

ಬಲಿಯಂದುದಕೇಳೀ | ಮಾಧವ | ಘಳಿಲನೆಮುದತಾಳೀ |
ಕಳಿಯದೆಕಾಲವ ಪೂರ್ಣವಗೈಸನೆ | ಜಲಜಾಕ್ಷನಿಗಭಿವಂಧಿಸಿ ಶುಕ್ರನು    || ೧ ||

ಯಜ್ಞಾಂಗನೆನೀನೂ | ಬಂದಿರ | ಲೆಜ್ಞದೊಳಿನ್ನೇನೂ |
ಯಜ್ಞಸಂಪೂರ್ಣಾಹುತಿಯಿನ್ನೇತಕೆ | ಸುಜ್ಜಾನವನೀಕರುಣಿಪದಾತನೂ    || ೨ ||

ಉಶನನನುಡಿಗಾಗ | ಪೇಳ್ದನುಬಿಸಜಾಕ್ಷನುಬೇಗಾ | ಯಸಗಿದಕರ‍್ಮವಪೂರೈ
ಸದೆಬಿಡ | ಲುಸುರಿದೆಪಾತಕವೆನ್ನುತನಿಗಮದಿ          || ೩ ||

ಅಸ್ತೆಂದೆರಗುತಲೀ | ಭಾರ್ಗವ | ಚಿತ್ತದಿಗ್ರಹಿಸುತಲೀ | ಅತ್ಯಧಿಕಪೂರ್ಣಾಹುತಿಗೈಸಲು |
ಚಿತ್ತಜಪಿತಗಭಿವಂದಿಸಿಬಲಿಯೂ     || ೪ ||  || ೪೫೬ ||

ಭಾಮಿನಿ

ಹರಿಯಪದಕರ್ಪಿಸುತಲೆಜ್ಞವ |
ಗುರುವರೇಣ್ಯನಿಗಿತ್ತುದಕ್ಷಿಣೆ |
ಪರಮರುತ್ವಿಜರಿಂಗೆಸಾಮ್ಯಾದಿಗಳ ಕರುಣಿಸುತಾ ||
ಸುರಿವನೇತ್ರೋದಕದಿಶುಕ್ರನ |
ಚರಣಪ್ರಕ್ಷಾಳನವಗೈಯ್ಯುತ |
ಗುರುವೆನೀನೈತಹುದುಸುತಳಕೆಯನ್ನಜೊತೆಗೂಡೀ    || ೧ || || ೪೫೮ ||

ರಾಗ ಕಾಂಬೋಧಿ ಝಂಪೆತಾಳ

ಬರುವೆನೆಲೆಬಲಿಚಕ್ರ | ವರ್ತೀಮುನ್ನಿನತೆರದೊ | ಳಿರುವೇನಿನ್ನೊಡಗೊಂಡೂ |
ಧೈರ‍್ಯಾನಾಗೀಗಾ | ಶಿರಿವರನುಸಲಹುವನು ಶರಣರಕ್ಷಕನೆನಲು |
ಹರುಷದಿಂದೊಂದಿಸುತ ವೇಗದೊಳುಬಲಿಯೂ        || ೧ ||

ಹರಿಯೆಮೂರನೆಪದಕೆ | ಶಿರದೊಳಿರಿಸೆಂದೆನುತ |
ಪರಮಾಭಕ್ತಿಯೊಳೆರಗೆ | ಮಾಧವನುದಯದಿ ||
ಶರಣರೊಳುನಿನ್ನಂದಕಾಣೆನುತ ಪಾದವನು |
ಶಿರದೊಳಿರಿಸಲು ಸುತಳಲೋಕಕೈದಿದನೂ  || ೨ ||

ಸುರರಪೊಳಲಿಂದಧಿಕ | ಶಿರಿಭೋಗಾದಿಂದಬಲಿ |
ತರುಣೀಬಾಂಧವರೊಡನೇ | ಹರಿಯಾಪೂಜಿಸುತಾ ||
ಹರುಷದಿಂದಿರೆ ಸುತಳದೊಳಗಿತ್ತಪರಮಾತ್ಮ |
ಸುರಪದಿಕ್ಪಾಲಾದಿಗಳಕೂಡಿಭರದೀ || ೩ ||

ತೆರಳೀಪುಷ್ಪಕದಿಂದ ಸುರಪುರಕೆವಿಭವದಲಿ |
ಪರಿಯಾಕಸ್ಯಪರದಿತಿ | ಯರಿಗೇಬಿನ್ನೈಸೀ ||
ಹರುಷದಿಂದಮರಪುರವಧಿಕಾರವಿಂದ್ರನಿಗೆ |
ಕರುಣಿಸಿಯೆಚಿನ್ಮಯ ಮೋದದಿಂದೀರ್ದಾ     || ೪೬೨ ||

ಭಾಮಿನಿ

ವರತ್ರಿವಿಕ್ರಮಮೂರ್ತಿಸುತಳದೊ |
ಳಿರಿಸಿ ಬಲಿಯಡೆಯೊಳಗೆ ಸ್ವರ್ಗದಿ |
ಪರಮಪುರುಷನುಪೇಂದ್ರನಾಮಕದಿಂದಮೆರಯುತಲಿ ||
ಹರುಷಗೊಳಿಸುತಮಾತೃಪಿತೃಗಳ |
ಕರುಣಪಾತ್ರಕೆಸಿಲುಕಿ ಲಕ್ಷುಮೀ |
ವರಸುನಿತ್ಯಾನಂದಚಿನ್ಮಯಮೋದದಿಂದರ್ದಾ         || ೧ || || ೪೬೩ ||

ರಾಗ ಕೇತಾರಗೌಳ ಅಷ್ಟತಾಳ

ಈ ರೀತಿಯೊಳುಶುಕಮುನಿ ಪರೀಕ್ಷಿತನಿಂಗೇ | ವಾರಿಜಾಕ್ಷನಕಥೆಯಾ |
ಪಾರಾಮಾರ್ಥದಿಪೇಳ್ದತೆರನಂತೆಗೈದೆನು | ದ್ವಾದಶಕೃತಿಯಿದನೂ       || ೧ ||

ವರುಷಸಾಧಾರಣದೊಳುಶ್ರಾವಣ್ಯದಶುಕ್ಲ | ಹರಿದಿನವೇಕಾದಶಿ |
ವರಭೌಮವಾಸರದೊಳಗೆ ಮಂಗಲಗೈದೆ | ನರಿಯೆನಾಕೃತಿಗಳನೂ      || ೨ ||

ಪನಸಾಖ್ಯಪುರದುರಗೇಂದ್ರಶಾಸ್ತ್ರಿಯಸುತ | ಮನುಜಕೇಸರಿಯಿದನೂ |
ಚಿನುಮಯಪ್ರೇರಿಸಿದಂತೆಗೈದಿಹೆ ವಿದ್ಯುಜ್ಜನರಿಗರ್ಪಿತವಾಗಲಿ   || ೩ ||  || ೪೬೬ ||

ಮಂಗಲಪದ

ಮಂಗಲಜಯಜಯತೂ | ಜಯಜಯ | ಮಂಗಳಜಯ | ಜಯತೂ   || ಪಲ್ಲ ||

ಮಂಗಲಜಯಜಯ | ರಂಗನಾಥಗೆಯದು | ಪುಂಗವಖಳರಸು |
ಭಂಗಗೋಪಾಲಗೆ          || ಅನುಪಲ್ಲ ||

ವರನಿಗಮವಕೊಂಡೊದನಮಡುಹಿದ | ಮತ್ಸ್ಯಗೆ ಜಯಜಯತೂ |
ಶರಧಿಯಮಥನದಿ ಗಿರಿಯನುಪೊತ್ತಿಹ | ಕೂರ್ಮಗೆಯಜಯಜತೂ |
ವರಹವತಾರ ನೃಸಿಂಹ್ವಗೆ ವಾಮನ | ಪರಶುರಾಮಗೆಶ್ರೀರಾಮಗೆಜಯಜಯ ||
ಮಂಗಲಜಯಜಯತೂ | ಜಯಜಯ | ಮಂಗಲಜಯಜಯತೂ || ೧ ||

ಧರೆಯೊಳಗಾಗುಂಬಾಖ್ಯದಪುರದಲಿ | ಹರುಪದಿನೀನೆಲಸೀ |
ಕರುಣಕಟಾಕ್ಷದಿಶರಣರಪಾಲಿಪೆ | ದುರಿತವಪರಿಹರಿಸೀ |
ದುರುಳಕಂಸಾಸುರಪೂತನಿಶಕಟರ | ತರಿದಿಹವೇಣುಗೋಪಾಲಗೆ ಜಯಜಯ ||
ಮಂಗಲ | ಜಯಜಯತೂ || ೨ ||

ದುರುಳತ್ರಿಪುರಖಳಸತಿವ್ರತಗಡಿಸಲು | ಬೌದ್ಧನುನೀನಾದೇ |
ತುರಗವನೇರುತಮ್ಲೇಂಭರಮಥನಕೆ |
ಕಲ್ಕ್ಯನೆನೀಮುಂದೇ | ಶರಣಪ್ರಹ್ಲಾದನಪೊರೆಯಲುಸ್ತಂಭದಿ | ಪೊರಟಿಹಲಕ್ಷುಮೀನರಸಿಂಹ್ವಮೂರ್ತಿಗೆ ||
ಮಂಗಲಜಯಜಯತೂ | ಜಯಜಯ | ಮಂಗಲಜಯಜಯತೂ || ೩ || || ೪೬೯ ||