ರಾಗ ನವರೋಜು ಏಕತಾಳ
(ಬಂದನು ದೇವರದೇವಾ ಎಂಬಂತೆ)
ಧನ್ಯನುನಾನೀದಿನದಿ | ಪರ | ದುನ್ನತಭೋಗವಜವದೀ |
ಎಣ್ಣಿದ ತೆರದೊಳುಲಭಿಸಿತು ವಟುವರ | ರನ್ನು ನಾಕಂಡುದಕಾಗಿ ಸಂತೋಷಿಪೆ || ೧ ||
ಗುರುರಾಯಾನೊಡಗೊಂಡೂ | ವಟು | ವರನನುಮನ್ನಿಸಿಕಂಡೂ |
ಕರತಂದಾಕ್ಷಣಸುರಚಿರಪೀಠವ | ಹರುಷದೊಳೀಯುತಚರಣವತೊಳದೂ || ೨ ||ಶಿರದೊಳುತೀರ್ಥವಧರಿಸೀ | ಧೃಡ | ಥರದಾಕಿಂಕರನೆನಿಸೀ |
ವಿರಚಿಸಿಮಧುಪರ್ಕಾದ್ಯುಪಚರ್ಯವ | ಕರಗಳಜೋಡಿಸುತೆಂದನು ವಿನಯದಿ || ೩ ||
ಕುಶಲವೆತಮ್ಮಯಪದಕೆ | ಕ್ರತು | ವೆಸಗಿಹೆಸಾರ್ಥಕಪರಕೆ |
ಶಶಿರವಿಕೋಟಿನಿಭಾಂಗನೆ ಬಂದುದು | ಹಸನವಾಯಿತು ಯನ್ನಧ್ವರಶಾಲೆಯೂ || ೪ ||
ರಾಗ ಶಂಕರಾಭರಣ ಆದಿತಾಳ
(ಹರಿಯೇಲಾಲಿಸು ನಿನ್ನಾಮರೆಹೊಕ್ಕಾ ಎಂಬಂತೆ)
ಬಲಿರಾಯನೆನ್ನಾಗಮನ ನಿನ್ನಾಮನದೀ || ನೆಲಸೀದರ್ಥಗಳೇನೂ ಪೇಳೋನೀಮುದದೀ || ೧ ||
ಅರಿಯೂವೆನೆಲೆಸ್ವಾಮಿ | ಬ್ರಹ್ಮರ್ಷಿವರರಾ || ಧರಸೀತೊತಪವೇಪೇಳೀದೇಹವಿವರಾ || ೨ ||
ಸ್ವಾರಿಯಾಗಮನಾದಿ ಪಿತೃದೇವತೆಗಳೂ | ಭೂರಿತೃಪ್ತರು ಧನ್ಯನಾದೇಕೃಪಾಳೂ || ೩ ||
ತಮ್ಮಾಗಮನದಿಂದ | ಕೃತುಸಾಂಗವಾಯ್ತು | ಕರ್ಮಾಶಾಸ್ತ್ರೀಯದಗ್ನಿಹೋಮಿತವಾಯ್ತು || ೪ ||
ತವಪಾದಸಲಿಲಾಬಿಂದುಗಳಿಂದಶಿರವು | ಭವಭಯಾದುರಿತಾವ | ಹರಿಸೀತುನಿಜವೂ || ೫ ||
ಭಾಮಿನಿ
ಕಿರುಮೃದುಲಪದರಜದೊಳೆನ್ನಯ |
ತುರಗಮಖಮಂಟಪ ಪವಿತ್ರವು |
ಪರಮಭೂಸುರವಟುವರೇಣ್ಯನೆ ನಮೊನಮೋಯಂಬೇ ||
ಅರುಹುಜೋತಿರ್ಮಯನೆನಿನ್ನಯ |
ಭರಗಳೇನೈವಾಂಛಿತಾರ್ಥವ |
ಕರುಣಿಸುವೆ ಧನಕನಕಗೋಭೂದಾನಗಳನಾನೂ || ೧ ||
ರಾಗ ಬೇಗಡೆ, ಏಕತಾಳ
(ಏನಿದು ನಿಮ್ಮಲ್ಲಿ ಸಂವಾದ ಎಂಬಂತೆ)
ಕೇಳುಕೇಳೈಸಾರ್ವಭೌಮಕನೇ | ಸತ್ಕೀರ್ತಿಸದ್ಗುಣ |
ಸೀಲಭೂಸುರಪ್ರೀಯಧಾರ್ಮಿಕನೇ | ಪೇಳುವೆನು ತಪವೀರ್ಪಮುನಿಪನ |
ಬಾಲವಾಮನನೆಂಬವಟುನಾ | ಕೇಳಿಬಂದಿಹೆನಿನ್ನಧರ್ಮವ |
ಜಾಲಮಾತುಗಳಲ್ಲನಂಬಿಕೊ || ೧ ||
ನಿನ್ನಕುಲದೊಳಗ್ಯಾಚಿಸಿದರಿಂಗೇ | ಧಿಕ್ಕಾರಗೈದಿಹ |
ರನ್ನುನಾಕೇಳಿಲ್ಲವೀವರೆಗೇ | ಮುನ್ನ ಕೊಡುತಿಹೆನೆಂದು ಆಶೆಗ |
ಳನ್ನು ಪೇಳುತಕಡೆಯೊಳೀಯದೆ | ಬನ್ನಬಡಿಸುತಲುಬ್ಧರಾಗಿಹ |
ರನ್ನುನಿನ್ನನ್ವಯದಿಕೇಳನು || ೨ ||
ಬೆದರಿವೈರಿಗಳಿಂಗೆಸಮರದಲೀ | ವೋಡೀರ್ಪರುಂಟೇ |
ಕದನಶೂರರು ನಿನ್ನವಂಶದಲೀ | ಗಧೆಯಧರಿಸಿ ಹಿರಣ್ಯಕಾಕ್ಷನು |
ವುದಧಿಪರಿಮಿತಚರಿಸೆಸಮರವ | ನೊದಗಿಕೊಡುವವರನ್ನುಕಾಣದೆ |
ಕುದಿವಕೋಪದೊಳೊದಧರೆಯನು || ೩ ||
ರಾಗ ಕಾಂಬೋದಿ ಅಷ್ಟತಾಳ
(ಮರುಳಾದೆಯೇನೊ ಬಾಲಾ ಎಂಬಂತೆ)
ಪರಮಾಧಾರ್ಮಿಕನೇನೀನೂ | ನಿನ್ನನ್ವಯ | ಚರಿತೆವಿಸ್ತರಿಸೂವೆನೂ |
ವರಹನಾಗಿಯೆಹರಿ | ಕಷ್ಟದಿಂದರಿದಾರೂ | ಧುರದಿಹಿರಣ್ಯನಗೆಲಿದೇನೆಂದರಿತಾನೆ || ೧ ||
ಮಡಿದಾತಮ್ಮನವೈರಿಯಾ ಕೊಲ್ಲೂವಛಲ | ವಿಡಿದರಸಾಲುಧಾತ್ರಿಯಾ |
ಕಡುಶೂರಹಿರಣ್ಯ | ಕಸ್ಯಪಗಂಜುತ್ತಾ | ವಡಲ ಪೊಕ್ಕಾನುಹರಿ | ಬಿಡನೆಂದೂಭಯದೊಳೂ || ೨ ||
ಶರಧಿಸಪ್ತಕದೊಳಾಗೇ | ತ್ರೈಭುವನಾದಿ | ಗಿರಿತರುಲತೇಯೊಳಗೆ |
ಅರಸೀಕಾಣದೆಹರಿ | ಯಳಿದನೆನ್ನುತಮಹ | ಧುರಧೀರಹಿರಣ್ಯಕಸ್ಯಪುಮನದಲ್ಲಿ || ೩ ||
ರಾಗ ಕೇತಾರಗೌಳ, ಅಷ್ಟತಾಳ
ಮರಣಪರ್ಯಂತರವೈರವೆಂಬುದ ತನ್ನೊ | ಳರಿತಾಹಿರಣ್ಯಕನೂ |
ಹರಿಯನರಿಸಿಮತ್ತೆ ಪೋಗಲಿಲ್ಲಂತಹ | ಧುರಧೀರರವರು ಕೇಳೂ || ೧ ||
ತವತಾತಪ್ರಹ್ಲಾದ ಹರಿಭಕ್ತಧಾರ್ಮಿಕ | ಕವಿರಾಯಾ ಗುರುವರನೂ |
ಭುವನಾದೊಳಿವರಂಥ ಪ್ರಾಜ್ಞರಕಾಣೆನು | ವಿವರಿಪುದ್ಯಾಕೆನಾನೂ || ೨ ||
ಅರಿಗಳಾಗಿಹ ಸುಮನಸರಾಕಪಟವೃತ್ತಿ | ಯರಿತಾ ವಿರೋಚನನೂ |
ಧರಿಸಿ ಭೂಸುರರೂಪದಿಂದ ಬೇಡಲುಬಂದ | ಸುರರಿಗಾಯುಷ್ಯವಿತ್ತಾ || ೩ ||
ಹಿಂದಿನವರಿಗಿಂತಲಧಿಕನಾಗಿಹೆ ಧರ್ಮ | ದಿಂದಾಲೀಧಾತ್ರಿಯೊಳೂ |
ಮುಂದೆ ಜನಿಪರುಂಟೆಬಲಿರಾಯಮೂರ್ಜಗ | ವಂದೀಪುದೆನೆಕೇಳುತ್ತಾ || ೪ ||
ಭಾಮಿನಿ
ಆದರಾಲಿಸುಸ್ವಾಮಿಮನದೊಳು |
ಖೇದಪಡದಿರುವಾಂಛಿತಾರ್ಥವ |
ಸಾದರದಿಕೊಡುತೀರ್ಪೆನೆನೆ ವಟುವರನು ನಸುನಗುತಾ ||
ಮೇದಿನಿಯನೀ ನನ್ನ ಪದದೊಳ |
ಗಾದಮೂರಡಿಯೆನ್ನುಕರುಣಿಸು |
ಮೋದಪಡುವೆನು ಜೀವನಾವಧಿ ವೃತ್ತಿಯಾಗುವದೂ || ೧ ||
ರಾಗ ಸೌರಾಷ್ಟ್ರ, ತ್ರಿವುಡೆತಾಳ
ಎಲೆಲೆವಟುವರಕೇಳುನಿನ್ನಯ | ಸಲೆಚಮತ್ಕೃತಿವಚನಕೇಳಲು |
ತಿಳಿದಮಹಿಮರಿಗತಿಹಿತಂಗಳುಪರಿಯನೋಡೆ || ೧ ||
ಬಾಲನೀನಹೆಸ್ವಾರ್ಥ ವಿಷಯದಿ | ಖೇಲವಿಲ್ಲಿದರಿಂದಲೇನಿದೆ |
ಕೇಳುಸಪ್ತದ್ವೀಪವಾದರು ಕೊಡುತಲಿಹೆನೂ || ೨ ||
ಮೂರುಲೋಕಾಧೀಶನೆನ್ನೊಳ | ಗ್ಯಾರುಯಾಚಿಪರನ್ಯರೆಡೆಯೊಳು |
ಸಾರಿಕೇಳುವದುಂಟೆ ಸಾಲದೆವೃತ್ತಿತಮಗೆ || ೩ ||
ಕೇಳುವೃತ್ತಿಗಳೆನಿತುಕೊಡುವೆನು | ಬಾಲಬುದ್ಧಿಯುನಿನ್ನಜೀವನ |
ಕಾಲಭೂಕ್ಷೇತ್ರಗಳಮೂರಡಿಯಿಂದಲೇನೂ || ೪ ||
ಸಾಂಗತ್ಯ
ಮೂರೂಲೋಕದಭೋಗ್ಯಾ | ವಸ್ತುಗಳಿರೆಬಲಿ |
ಪಾರೂಗಾಣರು ಆಸೇಗಳಿಗೇ ||
ಮೂರಡಿಯೊಳು ತೃಪ್ತಿಹೊಂದಾದೇ ಸಂಪೂರ್ಣ |
ಧಾರುಣೀಯಿತ್ತಾರಾಗುವದೆ || ೨ ||
ಆಳಿಕೊಂಡೀರ್ದರು ಸಪ್ತದ್ವೀಪದಭೂಮಿ |
ಪಾಲರುಪೃಥುಗಯಸಗರಾ ||
ಮೇಲಾಶಾಪೂರ್ತಾರಾಗಿರಲಿಲ್ಲವೆಂಬೂದ |
ಕೇಳಿಬಲ್ಲೆನುಬಲಿರಾಯಾ || ೨ ||
ದುರಿತಾಹೊಂದುವನೈಸೆಪ್ರಕೃತಾಕಿಂದಧಿಕಾಶಾ |
ವೆರದೂಕೊಂಡಿಹ ದ್ವಿಜವರನೂ ||
ಕರವಾರು ಚೋರನೆಂದವ ನಿಂಗೇಸಾಕೀಗ |
ಚರಣಾಮೂರವನೀಯಕೊಡಲೂ || ೩ ||
ಎನೆಹಸಾದಗಳೆಂದೂ ಪರಮಾಭಕ್ತಿಗಳಿಂದ |
ಧನುಜಾಧಿಪತಿಜಲವನ್ನೂ ||
ವಿನಯಾದಿಕೈಕೊಂಡೂ ಕೊಡುವೇನೆನ್ನುತಲಿಹ |
ಮನವರಿತಾಗಭಾರ್ಗವನು || ೪ ||
ರಾಗ ಕೇತಾರಗೌಳ, ಝಂಪೆತಾಳ
ಲಾಲಿಸೆನ್ನಯನುಡಿಯನೂ | ಬಲಿರಾಯ | ಶ್ರೀಲಲನೆಪತಿಈತನೂ |
ಲೋಲಕಸ್ಯಪಸತಿಯೊಳು | ಜನಿಸಿರ್ಪಬಾಲ | ದಿವಿಜರಮೊರೆಯೊಳೂ || ೧ ||
ರಾಗ ಮಾರವಿ ಏಕತಾಳ
ಮೋದಗಳಾಯಿತುಗುರುವರ ತುರಗದ | ಮೇಧವೆಹರಿಗಾಗಿ ||
ಸಾದರದೊಳುನಾಗೈವೆನು ದಯದಿಂ | ಮಾಧವಮೆಚ್ಚಿಹನೂ || ೧ ||
ರಾಗ ಕೇತಾರಗೌಳ, ಝಂಪೆತಾಳ
ಅರಿಯದಿತ್ತೆಯೊಭಾಷೆಯಾ | ಕಂಟಕವ | ತರುವನೀತನುನಿಶ್ಚಯಾ |
ಶಿರಿಭೋಗಕೀರ್ತಿಗಳನೂ | ಬರೆಸೆಳದು | ಸುರಪನಿಂಗೀವನಿವನೂ || ೧ ||
ರಾಗ ಮಾರವಿ ಏಕತಾಳ
ಗುರುನಿನ್ನಭಿಮತವ್ಯಾವುದು ನಿತ್ಯದಿ | ಪರಿಸೇವಿಪೆನವನಾ ||
ಕರುಣಕೆಪಾತ್ರನಾನೊಂಚನೆಗೈವನೆ | ಶರಣಾಗತರಕ್ಷಾ || ೧ ||
ರಾಗ ಕೇತಾರಗೌಳ, ಝಂಪೆತಾಳ
ಧರೆಯನೊಂದಡಿಮಾಳ್ಪನೂ | ಸ್ವ್ವರ್ಗವನು | ಯರಡಕದಕೈಕೊಂಬನೂ |
ಇರದೆಧರಮತ್ತೊಂದಕೆ | ನಿನ್ನಶಿರಿ | ಬರೆಸೆಳವನಿವನುಜೋಕೆ || ೧ ||
ರಾಗ ಮಾರವಿ, ಏಕತಾಳ
ಕೊಟ್ಟಿಹೆಭಾಷೆಯಭೂಸುರನೀತಗೆ | ಶ್ರೇಷ್ಟನೆಕೇಳೀಗಾ ||
ದುಷ್ಟನಾನಾಗೆನು ಕೊಡುವದೆಸರಿಸರಿ | ಎಷ್ಟೆಂದರುಬಿಡೆನೂ || ೧ ||
ರಾಗ ಕೇದಾರಗೌಳ, ಝಂಪೆತಾಳ
ಸ್ಥಾನಚ್ಯುತಿಯಾಗುತಿಹುದೂ | ಕೆಡಬೇಡ | ದಾನವರಿಗತಿಮೃತ್ಯು ಬಹುದು |
ಯೇನಾದಡಾಗಲಿದನೂ | ನಂಬದಿರು | ನಾನರಿತುಪೇಳಿರ್ಪೆನೂ || ೧ ||
ರಾಗ ಕೇದಾರಗೌಳ, ಝಂಪೆತಾಳ
ಪರಕಾರ್ಯಕಾಗಿತಾನು | ಕೆಡುತಿಹನೆ | ಮರುಳಾಟದಿಂದ್ಯಾವನು |
ಮರಣಸಂಕಟಬರುವದು | ವಾಗ್ದಾನ | ತ್ವರದರಿಂತೇನಾಹುದೂ || ೧ ||
ರಾಗ ಮಾರವಿ ಏಕತಾಳ
ಪರಕಾರ್ಯಕೆಸತ್ಪುರುಷರು ಜೀವವ | ತ್ವರವರು ಕೇಳ್ಗುರುವೇ ||
ಮೆರದಿದೆಕೀರ್ತಿದಧೀಚಿಮುನೀಶನ | ಧರೆಯೊಳುಶಿಬಿನೃಪನಾ || ೧ ||
ವಾರ್ಧಿಕ್ಯ
ವರಯುವೆನು ಬಲಿಚಕ್ರವರ್ತಿ ಗೋರಕ್ಷಣದಿ |
ತರುಣಿಯೊಳು ರತಿಕೇಳಿಸಮಯ ಕನ್ಯಾಘಟನ |
ವರನಿಗೆಸಗುವಕಾಲ ವ್ಯಾಪಾರದೊಳ್ಮತ್ತೆ ಜೀವನೋಪಾಯಗಳಲೀ ||
ಧರಣಿವಿಭುದರರಕ್ಷಣಾರ್ಥಮರಣೋಪದ್ರ |
ಪರಹಿಂಸೆಮುಂತಾದವಿಷಯದೊಳ್ಸಟೆಯಾಡೆ |
ಬರದುಪಾತಕ ಭಾಷೆತಪ್ಪಿದರೆ ಸುಖವಿಹುದು ಕೆಡಬೇಡನಾಸಾರಿದೆ || ೧ ||
ರಾಗ ಶಂಕರಾಭರಣ ತ್ರಿವುಡೆತಾಳ
ಗುರುವೆಕೇಳ್ದಯವಂತಪುರುಷರು | ತಿರಿದುಜೀವಿಪಜನರೊಳೂ |
ಕರುಣದಿಂದೀಯುವರಭೀಷ್ಟವ | ತ್ವರಯರವರಾ || ೧ ||
ಮತ್ತೆನಿಮ್ಮಂದದೊಳುಪೂಜ್ಯತೆ | ವೆತ್ತಶ್ರೌತ್ರಿಯರಾದರಾ |
ಇಷ್ಟಪಾಲಿಸದೀರ್ದಮೂರ್ಖನ | ಸೃಷ್ಟಿಪೊರುವಳೆಭಾರ್ಗವಾ || ೨ ||
ಪರಮಪೂಜ್ಯನೀಬ್ರಹ್ಮಚಾರಿಯು | ಪರಮಪುರುಷನೆಯನ್ನುತಾ |
ವರಯುತಿಹೆನೀನೆನಗೆಧನ್ಯನು | ಕೊಟ್ಟ ಭಾಷೆಯುನಡದರೇ || ೩ ||
ರಾಗ ಘಂಟಾರವ ಅಷ್ಟತಾಳ
(ತಾಳಿ ಪರ್ವತಕಲ್ಮರಂಗಳನೆಲ್ಲ ಎಂಬಂತೆ)
ಯಂದಮಾತನುಕೇಳುತ್ತಾ ಭಾರ್ಗವ | ಮಂದಮತಿ ನೀನೆನ್ನವಾಕ್ಯವ |
ಹಿಂದೆಕಳದೆಯೊವೆರ್ಥದೀ || ೧ ||
ತಾನೆಪ್ರಾಜ್ಞಾನೆಂತೆಂಬಾನೆಶೀಘ್ರದಿ | ಸ್ಥಾನಚ್ಯುತಿಯಾಗೆನುತಶಪಿಸಿದ |
ದಾನವಾಧಿಪಗಾಗಳೂ || ೨ ||
ರಾಗ ಕಾಂಬೋಧಿ ಝಂಪೆತಾಳ
ಗುರುವೇನಿನ್ನಯಶಾಪ | ಶಿರದೊಳಗೇಧರಿಸಿಹೆನು | ಧರಣಿಸುರನಿಗೆಕೊಟ್ಟಾ |
ವಚನಗಳತ್ವರಯೇ || ಕರುಣನಿಧಿ ನಿನ್ನ ಕೃಪೆಯಿರಬೇಕು ಪೂರ್ಣದಲಿ |
ಶಿರಿಭೋಗಧರಣಿಯೊಳು ಮನವಿಲ್ಲವೀಗ || ೧ ||
ತರುಣೀ ವಿಂಧ್ಯಾವಳಿಯ | ಪರಿಕಿಸುತಲಿಂತೆಂದಾ | ವರಮನೋಹರೆನಿನ್ನ |
ಮತವನರುಹಿನಲೂ || ಚರನಕೆರಗುತಲವಳು ಪೂರ್ವಪುಣ್ಯಗಳಿಂದ |
ಕರವಿಡಿದೆ ನಾನಿನ್ನ | ಧನ್ಯಳಾಗಿಹೆನು || ೨ ||
ಪತಿಯೇನಿನ್ನಯಭಕ್ತಿ | ಗಾಗೀಶ್ರೀ ಪರಮಾತ್ಮಾ |
ನತಿಶಯದೀಪ್ರತ್ಯಕ್ಷವಾಗೀಬಂದಿಹನೂ || ಸತತಕೊಟ್ಟಿಹ ಬಾಷೆಗಳಕಬಾರದುವಾಂಛಾ |
ಪೃಥಿವಿಮೂರಡಿಗಳನು ಕೊಡುಕೊಡೀಕ್ಷಣದೀ || ೩ ||
ಯಂಬನುಡಿಯನುಕೇಳಿ | ಸಂಭ್ರಮದೊಳಾಬಲಿಯು | ಕಂಬೂಕಂಠಿನಿಜಲವಾ | ತಾರೀಗೆಂದೆನುತಾ || ಕುಂಭಿನಿಪಬೆಸಸಿದಾಕ್ಷಣ ತರಲುಭಕ್ತಿಯೊಳ |
ಗಂಬುಜೇಕ್ಷಣಮೂರ್ತಿಯನ್ನು ಪರಿಕಿಸುತಾ || ೪ ||
ರಾಗ ಕಾಂಬೋಧಿ ತ್ರಿವುಡೆತಾಳ
(ಯಾತಾಕಿಷ್ಟುಪಚಾರವೈ ಎಂಬಂತೆ)
ಜಯನಮೊಜಯಜಯತೂ | ಭೂಸುರವರ್ಯ | ಜಯನಮೊ | ಜಯ | ಜಯತೂ | || ಪಲ್ಲ ||
ಜಯ | ಜಯಾ | ದುರಿತಾಧ್ರಿನಾಶನ | ಜಯ | ಜಯಾ | ನಿಗಮಾರ್ಥಸಾಧನ || ಜಯ |
ಜಯಾಮಂತ್ರಾದಿಬೀಜಕ | ಜಯತು ಜ್ಞಾನಾನಂದಕಾರಣ || ಅನುಪಲ್ಲ ||
ಚರಣಾವತೊಳದಿಹೆನು | ಅರ್ಘ್ಯವನಿತ್ತು | ಪರಮಾಚಮನವಿತ್ತೇನು |
ಪರಿಮಳಿಪಸೌಗಂಧವಕ್ಷತೆ | ಸುರಗಿಮಂದಾರಾದಿಪುಷ್ಪವ |
ಪರಿಗ್ರಹಿಸಿ ಭಕ್ಷಾದಿಭೋಜನ | ಕರುಣಗೊಳುವಟುವರರೆವೇಗದಿ || ಜಯನಮೊ || ೧ ||
ಇದಕೊಕರ್ಪುರವೀಳ್ಯವ | ಸೇವಿಸುದಯಾಂ |
ಬುಧಿಯೆನೀರಾಜನವಾ | ಸದಮಲಾತ್ಮಕಮಂತ್ರ ಪುಷ್ಪದೊ |
ಳ್ಮುದದಿಪ್ರದಕ್ಷಣೆಯಗೈಯ್ಯುತ | ಪದಕೆನಮಿಸುವ ಧನ್ಯನಾದೆನು |
ಪದುಮನಾಭಸ್ವರೂಪಜಯಜಯ || ಜಯನಮೋಜಯಜಯತೂ || ೨ || || ೩೭೬ ||
ಭಾಮಿನಿ
ಪರಮಭಕ್ತಿಗಳಿಂದ ಶ್ರೋಣಿತ |
ಪುರದಧಿಪನಾಕ್ಷಣವೆ ಪತ್ನಿಯ |
ಕರದೊಳಿಹ ಸೌವರ್ಣಕಲಶದಜಲವಕೈಕೊಂಡು |
ಪರಮಭೂಸುರವರ್ಯ ನಿಮ್ಮಯ |
ಚರಣದೊಳುಮೂರಡಿಯಭುವನವ |
ಹರಿಜನಾರ್ದನವಾಸುದೇವಾರ್ಪಣದಿಕೊಟ್ಟಿಹೆನೂ || ೧ || || ೩೭೭ ||
ವಾರ್ಧಿಕ್ಯ
ನೀರಜೇಕ್ಷಣವಿಶ್ವರೂಪತನ್ನೊಳಗಾಂತು |
ಮೂರುಲೋಕೋನ್ನತಕೆಬೆಳಸಿತನುರಂಜಕದ |
ಹಾರಕುಂಡಲಮುಕುಟಮಣಿರಮ್ಯಕಾಂತಿಕೇ | ಯೂರಕೌಂಸ್ತುಭರತ್ನದಿ ||
ಚಾರುಕಂಠಾಭರಣಕಿರಣಪ್ರಕಾಶದೊಳ್ |
ತೋರುತಿಹಖದ್ಯೋತಶತಕೋಟಿಭಾಸದಿಂ |
ಮೂರುತಿತ್ರಿವಿಕ್ರಮನುಕ್ಷಣಮಾತ್ರದೊಳ್ಸರ್ವ | ರಕ್ಷಿಗೋಚರಮಾಗಲು || ೧ || || ೩೭೮ ||
ರಾಗ ಕೇತಾರಗೌಳ ಝಂಪೆತಾಳ
ಧಾರುಣಿಯನೊಂದುಪದದಿ | ವ್ಯಾಪಿಸುತ | ವಾರಿಜಾಕ್ಷನುಮೋದದಿ |
ಭಾರಿದೇಹದಿದಿಶಗಳಾ | ತುಂಬಿಮುದ | ವೇರಿಯಂಬರಪಥಗಳಾ || ೧ ||
ಎತ್ತಿ ಎರಡನೆಪಾದವಾ | ಸ್ವರ್ಗಾದಿ | ಸತ್ಯತಪಜನಲೋಕವಾ |
ಅರ್ಥಿಯಿಂದಳದೆಂದನೂ | ಬಲಿಯೆನಾ | ನೆತ್ತಿಡಲಿಪದವಂದನೂ || ೨ ||
ತೋರುತೋರೈವೇಗದಿ | ಯರಡಾಯ್ತು | ಮೂರನೆಯಪದಕರುಣದೀ |
ಧಾರೆಯರದುದತೆಜಿಪುದೂ | ಸರಿಯಲ್ಲ | ಕ್ರೂರಪಾತಕಬರುವದೂ || ೩ ||
ರಾಗ ಸೌರಾಷ್ಟ್ರ, ತ್ರಿವುಡೆತಾಳ
ಅಂಬುಜೇಕ್ಷಣನೆಂದಮಾತನು | ಜಂಭಮೊದಲಾಗಿರುವ ದೈತ್ಯಕ |
ದಂಬಕೇಳುತ ಖತಿಯಗೊಳುತಾರ್ಭಟಿಸುತಾಗಾ || ೧ ||
ಸತ್ಯವನುಬಿಡೆನೆಮತಲೆಮ್ಮಯ | ಪೃಥ್ವಿಪಾಲಕಕುಳಿತುಕೊಂಡಿಹ |
ಧೂರ್ತವಟುಬಂದೆಮ್ಮವಡಯನಗೋಣಕೊದಾ || ೨ ||
ಕಳೆದುಕೊಂಡನು ಸತ್ಯಧರ್ಮಕೆ | ನಿಳಯಸರ್ವಸ್ವವನು ಭೂಪತಿ |
ಕೊಲಲುಬೇಕೀ ಕಪಟವಿಪ್ರನನೆನುತಕನಲೀ || ೩ ||
ಭೋರಿಡುತಮುಂಬರಿದುಬರುತಿಹ | ಘೋರದಾನವರನ್ನು ಕಾಣುತ |
ವಾರಿಜಾಕ್ಷನು ಕರದುಗರುಡನೊಳೆಂದನಾಗ || ೪ ||
ಧುರಕೆ ಖಳರೈತಹರುಭಾಷೆಯ | ಸಲಿಸಲಿಲ್ಲೀದೈತ್ಯನಾಥನು |
ಕೆರಳಿತಾನಿನ್ನೇನಗೈವನೊ | ಬಂಧಿಸಿವನಾ || ೫ ||
ಅರುಹೆನಮಿಸುತಲಾಗಗರುಡನು | ವರುಣಪಾಶದಿಬಲಿಯಕರಗಳ |
ಭರಿದಿಬಂಧಿಸೆ ದಂಷ್ಟ್ರಜ್ವಾಲಿಯಾರುಭಟಿಸೀ || ೬ ||
ರಾಗ ಶಂಕರಾಭರಣ ಮಟ್ಟೆತಾಳ
ಆರೊನಮ್ಮಧರಣಿಪತಿಯ | ಕ್ರೂರತನದಿಬಿಗಿದಮೂರ್ಖ |
ತೋರುನಿನ್ನಸಹಸವೆನುತ ಮಲತುನಿಂದನು || ೧ ||
ದುಷತಾಳುತಾಳೆನುತ್ತ | ಮುಷ್ಟಿಯನ್ನುಬಲಿದುಗರುಡ |
ಕುಟ್ಟಿತಿವಿಯೆ ವೃಕ್ಷದಿಂದಬಡಿದನಾಕ್ಷಣಾ || ೨ ||
ಭರಕೆತಪ್ಪಿವೈನತೇಯ | ಕೆರಳಿರಕ್ಕೆಯಿಂದಬಡಿದು |
ದುರುಳನೋಡೆನುತ್ತಲೆತ್ತಿನಭದೊಳೆಸದನೂ || ೩ ||
ಘೋರನಾದದಿಂದಬಂದು | ಭಾರಿಶಿಲೆಯನೆತ್ತಿಪೊಯ್ಯೆ |
ಶೂರತನದಿಕೊಕ್ಕಿನಿಂದ ಕುಕ್ಕಿ ಕೆಡಹಿದಾ || ೪ ||
ಖಾರಿರಕ್ತವನ್ನುದಂಷ್ಟ್ರ | ಜ್ವಾಲೆಬಿದ್ದಪರಿಯಕಂಡು |
ಘೋರನಾದದಿಂದಜಂಭಬರಲುಕಾಣುತಾ || ೫ ||
ನಿಲ್ಲುನಿಲ್ಲುಯನುತಧನಪ | ಮಲ್ಲಸಹಸಿಯಹುದೊಭಳಿರೆ |
ಚೆಲ್ಲುತಿಹೆನುರಕ್ತವೆನುತಶರದೊಳೆಸದನು || ೬ ||
ರಾಗ ಭೈರವಿ, ಏಕತಾಳ
ಬರುವಸ್ತ್ರವಮುರಿದಾಗ | ಖಳ | ಪರಿಘವತಿರುಹುತಭೇಗಾ |
ಯರಗಲುಧನಪತಿಯನ್ನು | ತುಂ | ಡರಿಯುತಕೆಡಹಿದನದನೂ || ೧ ||
ಫಡಫಡಧನಪತಿನಿನ್ನಾ | ಶಿರ | ಖಡಿಯುವೆಕೇಳೀಗೆನ್ನಾ |
ಖಡುಗವನೋಡೆಂದೆನುತಾ | ನೆಗ | ದಿಡುವದಮುರಿದದನಗುತಾ || ೨ ||
ಮುಕ್ಕಡಿಗೈಯ್ಯಲು ಕಂಡೂ | ಖಳ | ಗಕ್ಕನೆಶೂಲವಗೊಂಡು |
ಉಕ್ಕುತರೋಷದೊಳೆಸೆಯೆ | ಕೈ | ಯಿಕ್ಕಿಕುಬೇರನುಕಸಿಯೆ || ೩ ||
ಗಧೆಯನುತಿರುಹುತಭರದಿ | ಬರ | ಲದರನುಕಸಿಯುತರವದಿ |
ಯದೆಗೆರಗಲುಖಳಗಾಗ | ಶಿರ | ಚದುರುತ ಬಿದ್ದನುಭೇಗಾ || ೪ || || ೩೯೭ ||
ಭಾಮಿನಿ
ಕುಂಭಿನಿಗೆಮೂರ್ಛಿಸುತಬಿದ್ದಿಹ |
ಜಂಭನನುಕಂಡಾಗಧನುವಿನೊ |
ಳಂಬುಕೀಲಿಸಿ ಶೌರ್ಯದೊಳುವೃಷಪರ್ವ ಮುಂದರಿಯೆ |
ಅಂಬುನಿಧಿಪತಿ ತಡದುರೌದ್ರದಿ |
ಸ್ತಂಬಡಿಂಬೋದ್ಭವನತೆರದಲಿ |
ಮುಂಬರಿದುಶರಮಳೆಯಸುರಿಸುತಲೆಂದನಾಕ್ಷಣದಿ || ೧ || || ೩೯೮ ||
ರಾಗ ಮಾರವಿ ಏಕತಾಳ
ನಿಲ್ಲೆಲೊನಿಲ್ಲೆಲೊ ಖುಲ್ಲಯಕ್ಷಾಧಮ | ನಿಲ್ಲೀಕ್ಷಣಧುರಕೆ ||
ಬಲ್ಲಿದನಹೆಧಿಟನಿನ್ನಯರಕುತವ | ಚೆಲ್ಲುವೆನೋಡೆಂದಾ || ೧ ||
ವರುಣನೆನಿನ್ನಯುಪೌರುಷಬಲ್ಲೆನು | ಧುರದೊಳಗೆನಗಂಜಿ ||
ತೆರಳಿದೆ ಖಗರೂಪುಗಳನು ಧರಿಸುತ | ಶಿರವರಿಯುವೆನೀಗಾ || ೨ ||
ಏನಂದೆಯೊಫಡಯಕ್ಷನೆ ನಿನ್ನಯ | ಗೋಣರಿದೀಕ್ಷಣದೀ ||
ಕಾಣಿಸುವೆನುಯಮನಾಲಯನೋಡೀ ಬಾಣದೊಳನುತೆಚ್ಚಾ || ೩ || || ೪೦೦ ||
ರಾಗ ಮಾರವಿ ಮಟ್ಟೆತಾಳ
ದುರುಳನಿನ್ನ ಕರುಳನುಗಿವೆನೆನುತಲೆಕ್ಷನೂ ||
ಉರುಕಠೋರಶರವನುಗಿದುಪಡದುನಿಂದನೂ || ೧ ||
ಖಡಿದುವರುಣನಾಗಖತಿಯತಳದು ವೇಗದಿ ||
ಪಿಡಿದಚಾಪವನ್ನು ಮುರಿಯೆಯಕ್ಷಶೌರ್ಯದಿ || ೨ ||
ಭಾರಿಶೂಲವನ್ನು ವರುಣನಂಗಕೆಸಯಲು ||
ಚೂರುಗೈಯ್ಯಲೊಂದೆವಿಶಿಖದಿಂದ ಖತಿಯೊಳು || ೩ ||
ಬಿಂಡಿವಾಲವನ್ನುತಿರುಹುತಾಗಲೆಕ್ಷನು ||
ಚಂಡಕೋಪದಿಂದಪೊಯ್ಯಲಾಗವರುಣನು || ೪ ||
ಕಸಿದುಬಿಸುಡಿ ಸಿಂಹ್ವನಾದಗೈದು ದುರುಳನೇ ||
ಅಸಮಸಹಸಿಯಹುದು ಪಾದಕೆರಗುಗಮ್ಮನೆ || ೫ ||
Leave A Comment