ರಾಗ ಜಂಜೋಟಿ ಅಷ್ಟತಾಳ

ವರಮನೋಹರಲಾಲಿಸೀಗಾ | ಪುರಂ | ಧೆರನೀಗೆ ತ್ರಿದಿವದಭೋಗಾ |
ತ್ವರದಿದೆ ಬಲಿಯಿಂದಶೋಕೀಪಳದಿತೀಯೂ | ಪರಮಪಾವನೆ ಪುಣ್ಯಶಾಲಿನಿ |
ವಿರಚಿಪಳುಪಯವ್ರತವಮೋದದಿ    || ೧ ||

ಆದಿಯೊಳದಿತಿಕಸ್ಯಪರೂ | ಯನ್ನ | ಮೋದಾದಿಸ್ತುತಿಸೀದರವರೂ |
ಸಾದರದೊಳುಪೋಗಿಭಕ್ತಿಭಾವಕೆಮೆಚ್ಚಿ | ಖೇದವೇನನೆಸತ್ಯಸಂಧಕ |
ರಾದವರು ಬೇಡಿಹರುವರಗಳಾ      || ೨ ||

ತನಯಾನಾಗುದಿಸಾಬೇಕೆಂದೂ | ಮೂರು | ಜನುಮಾದೊಳಮ್ಮೊಳುಬಂದೂ |
ಮನವನ್ನುಕರಗಿಸಲಿತ್ತೆ ವರವನಾಗ | ಜನುಮಿಸುವೆನವರೊಳಗೆ ಧರ‍್ಮವ |
ನನುಗೊಳಿಸಲೋಸುಗವೆಧರೆಯೊಳು         || ೩ ||

ಸಾಂಗತ್ಯ

ಮುಂದೇಕಸ್ಯಪದಶರಥನು ಕೋಸಲನೃಪ | ನಂದಾನೆಯ ದಿತೀದಂಪತಿಯಾ ||
ಕಂದಾನಾಗುದಿಸೂವೆ ದಶಶಿರನೊಧೆಗಾಗಲಿಂದೀರೆಜಾನ್ನಕಿನೀನೂ       || ೧ ||

ವಸುದೇವನಹಮುನಿಕಸ್ಯಪನದಿತೀಯೆ | ಶಶಿಮುಖಿದೇವಕಿಯಹೆಳೂ ||
ಅಸುರಾನಾಶಕಕೃಷ್ಣನಹೆನೂ ರುಗ್ಮಿಣಿನೀನೇ | ಬಿಸಜಾಕ್ಷಿ ದ್ವಾಪರಾಯುಗದೀ       || ೨ ||

ಬಲಿಗರ‍್ವದಹನಾಕಾಗಿಯೆ ಮಾಳ್ಪವ್ರತವಿದ | ಕೊಲಿದದಿತಿಯೊಳೀಗಜನಿಪೆ ||
ಇಳೆಮೂರರಧಿಕಾರವಿತ್ತೆನೀಕಲ್ಪದಿ | ಶಳದಿಹನಿಂದನೊಳ್ಬಲಿಯು         || ೩ ||

ಶರಣವೈರೋಚನಿಯಹುದೂ ಮುಂದಿನಕಲ್ಪ | ಸುರಪತಿತ್ವವನೀವೆನವಗೇ ||
ಶಿರಯಾಭೋಗದಿ ಮದಿಸಿಹನದಶಳದೀಗ | ಸುರಪಾಗೆಸ್ಥಿರಗೊಳಿಸುವೆನೂ         || ೪ ||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ಸರಸಿಜಾಸನದೂರಿಕೊಂಡಿಹ | ಸುರರಸ್ವರ್ಗದೊಳಿರಿಸಿಮುನ್ನಿನ |
ತೆರನರಕ್ಷಿಸಬೇಕೆನುತ್ತಲಿ ದೈನ್ಯದಿಂದಾ       || ೧ ||

ಅದಿತಿಯೊಳಗವತರಿಪೆನಾನೆಲೆ | ಪದುಮಲೋಚನೆನಿನ್ನಮನವೇ |
ನದನುಪೇಳೆನೆನಮಿಸುತಿಂದಿರೆ ಪೇಳ್ದಳಾಗಾ || ೨ ||

ಪಂಕಜೇಕ್ಷಣಪ್ರಕೃತಿಪುರುಷರು | ಸಂಕಲನವಾಗಿರುವದಲ್ಲದೆ |
ಶಂಖೆಯಿಲ್ಲರ್ಧಾಂಗದೊಳುನಾನಿರುವೆನೈಸೆ  || ೩ ||

ಅಹುದುನಿಶ್ಚಯವೆಂದು ಪದುಮಾಂಬಕನು ಕಸ್ಯಪನರಸಿಯೆಲ್ಲಿಗೆ |
ಮಹಿಯೊಳವತರಿಸಲ್ಕೆ ಪೋಗಲಿಕಿತ್ತಬಲಿಯು || ೪ ||

ತುರಗವನುಶೃಂಗರಿಸಿಭಾರ್ಗವ | ಗುರುಮುಖೋದಿತ ಶುಭಮುಹೂರ್ತದಿ |
ಪುರವಪೊರಮಡೆ ವಾದ್ಯದುಂದುಭಿ ಘೋಷದಿಂದಾ    || ೫ ||

ನೋಡಿದನುನರ್ಮದೆಯತೀರದಿ | ಮಾಡಿರುವಸೌಂಧರ‍್ಯಶಾಲೆಯ |
ಕೂಡಿರುವಭೂಸುರರಮನ್ನಿಸಿವಿಭವಂದಾ     || ೬ ||

ರಾಗ ಕಾಂಬೋಧಿ, ಝಂಪೆತಾಳ

ಮಿಂದೂನರ್ಮದೆಯೊಳಗೇ | ನಿತ್ಯಾಕರ‍್ಮವಗೈದೂ |
ಛಂದಾದಿಂಗಜಮುಖನಾ | ಪೂಜಿಸುತಬಲಿಯೂ ||

ಮಂದರಾಧರ ವಾಸುದೇವನನು ಭಜಿಸಿವಲ |
ವಿಂದಾದೀಕ್ಷೆಯತಾಳ್ದನಾಗಾ ಸಂತಸದಿ       || ೧ ||

ಗುರುಭಾರ್ಗವೇಶ್ವರನ | ನೇಮದಲಿಗಾರ್ಗ್ಯಸಂ |
ವರಣಗಾಲವಕಪಿಲ | ಚವನಾದಿಗಳನೂ ||

ಹರುಷದಿಂರುತ್ವಿಜಕೆ ನೇಮಿಸುತಜಂಭನಿಗೆ |
ಧರಣಿಪಾತಿಥ್ಯಗಳಿಗಾಜ್ಞೆಗಳನಿತ್ತಾ   || ೨ ||

ಅರಣಿಮುಖದೊಳಗಗ್ನಿ | ವಿಧ್ಯುಕ್ತದೊಳುಬರಿಸಿ |
ವರಗಾರ್ಹಪತ್ಯಾದಿಕುಂಡತ್ರಯಗಳಿಗೇ ||

ಹರುಷದಿಂಸ್ಥಾಪಿಸುತ ಕರ್ಮಖಾಂಡಗಳಂತೆ |
ತುರಗಮೇಧವಬಲಿಯುರಚಿಸುತಿರಲತ್ತಾ     || ೩ ||

ಭಾಮಿನಿ

ವಂದುದಿನಸುರಪಾಲಹಿಮಗಿರಿ |
ಕಂದರದಗುಹೆಯೊಳಗೆಸುಮನಸ |
ವೃಂದದೊಡಗೂಡಿರಲು ನಮಿಸುತದೇವಚಾರಕನೂ ||
ಬಂದೆರಗಿಬಲಿಕೃತುವಗೈಯ್ಯುವ |
ನೆಂದೆನುತಬಿನ್ನೈಸೆ ಸುರಪತಿ |
ಕಂದಿಕುಂದುತಲಾಗ ತನ್ನಯ ವಿಧಿಯನೆನನದೂ       || ೧ ||

ರಾಗ ನೀಲಾಂಬ್ರಿ, ರೂಪಕ

ಛಂದದೊಳಾಲಿಸಿದಿವಿಜರು | ಬಂದುದೆವೆಥೆಮತ್ತೀಗಳು |
ಇಂದಿರೆಯರಸನಕರುಣಗ | ಳಂದಿಗೆಬರುತಿಹುದೊ     || ೧ ||

ದುರುಳವೃತ್ರಾಸುರನಮುಚಿಯು | ಪರಿಪರಿಕಷ್ಟವನಿತ್ತರು |
ಸರಸಿಜನಾಭನಕರುಣದಿ | ಧುರದೊಳುಗೆಲಿದಿಹೆನು    || ೨ ||

ಮೂರೂಲೋಕದೊಳಿಂದ್ರನು ಶೂರನು ಯಂಬುವಖ್ಯಾತಿಯು |
ತೀರಿತೆವೈರೋಚನಿಯೊಳು | ಮಾರಮಣಗೆಹಿತವೇ    || ೩ ||

ದಿವಿಜರಿಗೋಸುಗಶರಧಿಯ | ಭವಭಯಭಂಝನ ಶ್ರೀಹರಿ |
ತವಕದಿಮಥನವಗೈಸಿದ | ವಿವರಿಸಲಸದಳವು         || ೪ ||

ಭಾರೀ ಭಾರಿಗುವೆಥೆಗಳ | ದೂರುವದಂದವೆನರಹರಿ |
ಪಾರಾಮಾರ್ಥಕೆಗೋಚರ | ದೋರದೆಪೋಗುವದೇ    || ೫ ||

ರಾಗ ಶಂಕರಾಭರಣ, ಆದಿತಾಳ
(ಹರಿಯೇಲಾಲಿಸು ನಿನ್ನಾಮರೆಹೊಕ್ಕಾ ಎಂಬಂತೆ)

ಯನಲಾಮಾತನುಕೇಳಿ ಗುರುರಾಯಾನೆಂದಾ ||
ಕನಿಕರದೊಳುಕಾಯ್ವಬಿಡನೂಮುಕುಂದಾ    || ೧ ||

ಮೂಲೋಕದಧಿಕಾರ | ಬಲಿಯೊಳಗಿಹುದೂ ||
ಕೇಳಶ್ವಮೇಧಗಳ್ಪ್ರಾರಂಭಿಸಿಹುದೂ  || ೨ ||

ವಂದೆಜ್ಞಮಾಡಾಲುಶತಮಖನಹನೂ ||
ಕುಂದಕಬರದಿರೇಸ್ಥಿರದೊಳಾಳುವನೂ        || ೩ ||

ಮರಸೀನಿಮ್ಮಯರೂಪ | ಪೋಗೀಶಾಲೆಯೊಳೂ |
ಇರಲಾಗಹರಿಬಂದೂ | ಕಾಯ್ವತೋಷದೊಳೂ         || ೪ ||

ರಾಗ ಕೇತಾರಗೌಳ, ಅಷ್ಟತಾಳ

ಗುರುರಾಯನೆಂದೂದಕೇಳುತ್ತಾ ದಿಕ್ಪಾಲ | ವರರೇಕೇಳೆಲ್ಲನಾವು |
ತೆರಳೀ ಭೂಸುರರೂಪಿನೊಳಗೇ ಶಾಲೆಯೊಳಿರ್ದು | ದುರುಳಾಗೆತಿಳಿಯಾದಂತೇ || ೧ ||

ಅಲ್ಲಿನಾವಿದ್ದಂತೆ ಕೆಡಿಸಾಬೇಕೀಕ್ರತು | ಮಲ್ಲಸಹಸಿಕರೊಳು |
ಖುಲ್ಲಾಗೆಶತಮಖವಾಗದತೆರದಿ ನಾ | ವೆಲ್ಲವಿಘ್ನವಗೈವುದೂ    || ೨ ||

ಧರಿಸಿಭೂಸುರರೂಪದಿಂದಲೆಪೊರವಂಟು | ತೆರಳಿಬಂದಿರೆಶಾಲೆಗೆ |
ವರವೆ ಕೇಳಿತ್ತಕಸ್ಯಪಮುನಿಯದಿತೀಯ | ಕರಯುತ್ತಾಲಿಂತೆಂದಾನೂ     || ೩ ||

ವಾರ್ಧಿಕ್ಯ

ವರಮನೋಹರೆ ಪುಣ್ಯಚರಿತೆಪಯೊವ್ರತವೆಸಗಿ |
ಹರಿಯಪೆತ್ತಿಹ ಭಾದ್ರಪತಮಾಸ ಶುಕ್ಲದೋಳ್ |
ಪರಮದ್ವಾದಶಿಶ್ರವಣನಕ್ಷತ್ರ ಪ್ರಥಮಾಂ ಶಶುಭದಿವಸ ಸುಮೂಹೂರ್ತದೀ ||
ಹಿರಿಯಸುತನಿಂದ್ರನಿಗೆ ಜಯವು ನಿಶ್ಚಯವಹುದು |
ತರಳನಿಗೆ ವಾಮನನು ಯಂಬಪೆಸರಿಟ್ಟಹೆನು
ಸರಸಿಜಾಸನಮುಖದಿ ಚೌಲೋಪನಯನಾದಿ ವಿರಚಿಸೀರ್ಪೆವು ಮುದದಲೀ        || ೧ ||

ಭಾಮಿನಿ

ಚಾರುಚಂದಿರವದನೆನಿನ್ನ ಕು |
ಮಾರವಾಮನನನ್ನು ನೋಳ್ಪರೆ |
ಪಾರಮಾರ್ಥಕದೊಳಗೆ ಮೋಹವುಬೀರಿ ಭಾದಿಪುದು ||
ನೀರಜಾಕ್ಷಿಯೆ ಕರದುತಾರೆನೆ |
ಭೋರನೈದುತಲದಿತಿಮತ್ಸುತ |
ಬಾರೆನುತಬಿಗಿದಪ್ಪಿ ಮುದ್ದಿಸಿಮುನಿಪಗೊಪ್ಪಿಸಲೂ      || ೧ ||

ರಾಗ ಮಾಧುಮಾಧವಿ ತ್ರಿವುಡೆತಾಳ

ಬಂದುಪಿತನಡಿಗೆರಗಿ ದೈನ್ಯದಿ | ನಿಂದಕುವರನನಪ್ಪಿ ಮುನಿಪತಿ |
ಕಂದಬಾರೆನ್ನಯ್ಯಜಗದಾ | ನಂದಿಕುಳ್ಳಿರುಯನ್ನುತಾ   || ೧ ||

ತರಳನೇಮಾಯಾವಿವಿಗತಾ | ವರಣಹೊರವಳಗೆಲ್ಲನೀನಿಹೆ |
ನಿರುತನಿನ್ನೊಳಗೈಕ್ಯವೀಜಗ | ಪರಮಪುರುಷಪರಾತ್ಮನೇ       || ೨ ||

ತನುರಹಿತಪರಿಪೂರ್ಣನಿರ್ಗುಣ | ಗುಣನಿಧಿಯೆನೀ ಸಕಲಲೋಕದ |
ಜನನವಿಲಯಸ್ಥಾನಕಾರಣ | ಚಿನುಮಯಾತ್ಮಕಚೇತನಾ        || ೩ ||

ಬೆಳಸುತಿಹೆರಜದೊಳಗೆಸತ್ವದಿ | ನಿಲಿಸಿತಾಮಸಗುಣದಿ ನಿಧನ |
ಕ್ಕುಳಿಸಿಜಗವನು ಪೊರೆವೆಮಾಯದಿ | ತಿಳಿವರ‍್ಯಾರೂ  || ೪ ||

ಯನ್ನೊಳುದಿಸಿದಕಾರಣದಿನಾ | ಧನ್ಯನಾದೆನು ದೇವದೇವನೆ |
ಸನ್ನುತಾಂಗಳು ಯದಿತಿಪುಣ್ಯಗ | ಳನ್ನು ವರ್ಣಿಸಲಾರೆನು       || ೫ ||

ರಾಗ ತೋಡಿ, ಆದಿತಾಳ
(ಏಸುದಿನಬೇಕೆನ್ನ ಪ್ರಾಣೇಶನಕಾಂಬುವದಕ್ಕೆ ಎಂಬಂತೆ)

ಯಂದುಮಾತಾಕೇಳೂತಾಗ | ಮಂದರಾಧ್ರಿಧರನೂಪೇಳ್ದಾ |
ಛಂದದಿಂದಾಭಜಿಸುತ್ತಿಹರಾ | ನಂದಾದೊಳಪಾಲೀಸುವೇನೂ   || ೧ ||

ಧರೆಯ ಭಾರವನ್ನೂಹರಿಸೀ | ನಿರುತಧರ್ಮಗಳನೂಮೆರಸೀ |
ಸುರರಪೊರವುದೊಂದೇಮನಕೇ | ಕೊರತೆಯಲ್ಲದುಂಟೇಮತ್ತೇ || ೨ ||

ಯಸವದಿವ್ಯತಪದೊಳೆನ್ನಾ | ವಶವಮಾಡಿಕೊಂಡೀರ್ದುದಕೇ |
ಕುಶಲದೊಳಗುದಿಸೀರ್ಪೆನಾ | ನೆಸಗಬೇಕಾದುದನೂಪೇಳೀ     || ೩ ||

ಭಾಮಿನಿ

ಪರಮಪುರುಷನೆಜಗವ ಪೊರೆಯುವ |
ಬಿರಿದುನಿನ್ನಯಪದದೊಳಿರುತಿರೆ |
ವರವದೇನಿದೆ ನೋಡಿಕಾರ‍್ಯವನೆಸಗಬೇಕೆನಲೂ ||
ಸುರರಪಾಲಿಪೆನ್ಯುಕ್ತಿಯೊಳಗೆಂ |
ದರುಹಿಮುನಿಪಗೆಪರಮಪುರುಷನು |
ಹರುಷದಿಂದಿರಲಿತ್ತಬಲಿಯಧ್ವರದಶಾಲೆಯೊಳೂ        || ೧ ||

ರಾಗ ಕೇತಾರಗೌಳ, ಅಷ್ಟತಾಳ

ಧರಣಿವಿಬುಧರೂಪದಿಂದೀರ್ಪಸುರಪನು | ಕರದುದಿಕ್ಪಾಲರನ್ನೂ |
ತುರಗಾಮೇಧಗಳರ್ಧವಾಯ್ತುನಾಳೆಯೊಳೀತ | ಪರಿಪೂರ್ಣಾಹುತಿಗೈವಾನೂ      || ೧ ||

ಗಂಧರ್ವಚಿತ್ರಾಸೇನಗೆಪೇಳ್ದುವಿಘ್ನವ | ತಂದಿರಲನಕನಾವು |
ಇಂದಿರೆಪತಿಯವತರಿಸಿಹಬರುವನು | ಮುಂದೆಮ್ಮರಕ್ಷಿಪಾರೆ     || ೨ ||

ನೆನೆಯೆಬಂದೆರಗಿದಚಿತ್ರಸೇನನೊಳಿಂದ್ರ | ಘನವೇಗದಿಂದಶ್ವವ |
ಮನಬಂದತೆರನೊಳಗಡಗಿಸೆನಲುಪೋದ | ನನುವಿನೊಳಾಖಚರಾ      || ೩ ||

ಬಂಧೀಸಿರುವಯೂಪಸ್ತಂಭಾದತುರಗಾವ | ಗಂಧರ್ವಮಾಯಾಕದಿ |
ಅಂಧಾಕಾರವಗೈದುಕೊಂಡೊಯ್ಯೆನಭದೊಳ | ಗಂದಾವರಿತುಶುಕ್ರಾನು  || ೪ ||

ರಾಗ ತೋಡಿ ಅಷ್ಟತಾಳ
(ಕಂಡರತಿ ಚೆಲುವೆ ನೀನು ಭಂಡುಮಾತ ಎಂಬಂತೆ)

ನೋಡುನೋಡುವಿರೋಚನಾಖ್ಯನೆ |  ಮಾಡಿರುವ ಹಯಮೇಧಕೀಕ್ಷಣ |
ಕೇಡುಬಂದುದು ಖಚರನೋರುವನು || ಖೋಡಿತನದಲಿ ತುರಗವನುಶಳ |
ದೋಡಿಹನುಗಂಧರ್ವಗತಿಯೆಲಿ | ಮಾಡಿಸಿನ್ನೊಂದಗ್ನಿಕುಂಡವನೂ        || ೧ ||

ಮಾರಣಧ್ವರಗೈಸಿ ದುರುಳನ |  ಭೋರನರಿಯೆಲುಜನಿಪೆನೋರ್ವಳ |
ಭೂರಿಸಹಸವನೋಡುಕ್ಷಣದೊಳಗೆ || ಧೀರಕೇಳಥರ್ವಣ ರಹಸ್ಯದ |
ಘೋರಮುದ್ಗಲಸೂತ್ರದಿಂದಲೆ | ಮೂರುಲೋಕದ ಜಯವಪೊಂದಿಸುವೆ  || ೨ ||

ಗುರುವರೇಂದ್ರನನುಡಿಯಕೇಳುತ | ತ್ವರಿತದೊಳುಗೈಸಿದನುಕುಂಡವ |
ನೆರಹೆಸೋಪಸ್ಕರವನೆಲ್ಲವನೂ || ಹರುಷದಿಂಸ್ಥಾಪಿಸುತಲಗ್ನಿಯ |
ಚರುಸಮಿಧಗಳ ಕೊಂಡುಶುಕ್ರನು | ವಿರಚಿಸಲುಹೋಮಗಳ ಸಂತಸದೀ || ೩ ||

ವಾರ್ಧಿಕ್ಯ

ವಡದುದಿಳೆ ಬಾದೆರಯುತಗ್ನಿಕುಂಡದೊಳಾಗ |
ಘುಡುಘುಡಿಸಿ ದಳ್ಳುರಿಯಮಧ್ಯದೋಳ್ ಝಗಿಝಗಿಸಿ |
ಖಡುಗಕುಂತಪರಶ್ವಚಾಪಶರ ಖಟ್ವಾಂಗ | ವಿಡಿದಷ್ಟಬಾಹುಗಳಲಿ ||
ಬಡಬಾಗ್ನಿಯಂತೆ ಹೂಂಕರಿಪವದನತ್ರಯದಿ |
ಖಿಡಿಗೆದರಿಕೆಂಜೆಡೆಯುಕೋರ್ದಾಡೆಮಸೆಯುತ್ತ |
ವಡನೆಪೊರಟಿಹಯೋಜನಾಯತಸ್ತನಭರದ | ಯುವತಿಯಂಕಾಣುತುಶನಾ        || ೧ ||

ಭಾಮಿನಿ

ಕೇಳುದಂಷ್ಟ್ರೋಜ್ವಲೆಯೆವೇಗದಿ |
ಖೂಳಖೇಚರನೊದ ತುರಗವ |
ಜಾಲಮಾಯಕದಿಂದಪೋಗೈ ತಹುದುನೀನೆನುತಾ ||
ಪೇಳಿಕಳುಹಿಸೆಶುಕ್ರಗೊಂದಿಸಿ |
ಕಾಲಮೃತ್ಯುವಿನಂತೆದಳ್ಳುರಿ |
ಜ್ವಾಲೆಧಗಧಗಿಸುತ್ತಲೊದನದಿ | ಚಿಗಿದಳಂಬರಕೆ       || ೧ ||

ರಾಗ ಸೌರಾಷ್ಟ್ರ, ಮಟ್ಟೆತಾಳ
(ನಡೆಯಲೊಮುರಾರಿಸುಖದೊಳು ಎಂಬಂತೆ)

ನಡದಳಾಗಳಭ್ರಮಾರ್ಗದಿ | ದಂತಗಳನು | ಖಡಿದುಧೈರ‍್ಯಶೌರ‍್ಯಸಹಸದಿ ||
ದಡಿಗಖಳರರೋಮಕೂಪ | ದೊಳಗೆ ಸೃಷ್ಟಿಗೈಯ್ಯುತಾಗ |
ಖಡುಮಹೋಗ್ರದಿಂದ ಭೋರ್ಗುಡಿಸುತಂದಕಾರವೆಸಗಿ |
ಕೆಡಹುತಗ್ನಿಯನ್ನು ದಂಷ್ಟ್ರ | ಜ್ವಾಲೆವದನತ್ರಯದೊಳಾಗಲೇ |
ಪಡವಿಗಲೆವಭಾರಿಕೆಂಜೆಡೆಯ | ನುಲಿವಶೌರ‍್ಯದಿಂದಲೇ || ನಡದಳಾಗ    || ೧ ||

ತುರಗಸಹಿತ ಪೋಪಖಚರನಾ | ತಡದುಹೂಂ | ಕರಿಸಿ ಭಲರೆಮೂರ್ಖನೀತನಾ |
ಕೊರಳನರಿದುತಿಂಬೆನೆನುತ | ಪರಮಶೌರ‍್ಯದಿಂದಧನುಜೆ | ಕರದಖಡ್ಗವನ್ನುತಿರುಹಿ |
ಧೊರೆಯಮೇಧತುರಗವನ್ನು | ಭರದಿಶಳದುತಂದನಿನ್ನ | ನಿರಿಸೆಚೋರದುರುಳನೀನೆಲಾ
ಪರಮಶೌರ‍್ಯತೋರುತೋರು | ಖಡಿದುತಿಂಬೆನೀಗನೋಡೆಲಾ  || ೨ ||

ರಾಗ ಮಾರವಿ ಏಕತಾಳ

ಖಡಖಡಿದೀಕ್ಷಣಭೂತಗಣಂಗಳಿ | ಗಿಡಿಸುವೆನೌತಣವಾ ||
ದಡಿಗ ಮಧಾಂದಳೆನೀನ್ಯಾರೆನುತಲಿ | ಪಡದನುಶರಗಳನೂ    || ೧ ||

ಬರುವಸ್ತ್ರವ ಮುರಿದಿಕ್ಕುತಲೆಂದಳು | ದುರುಳನೆನಿನ್ನಸುವಾ ||
ಕರಕರನಗಿಯುತಮೆಲುತಿಹನಾನೇ | ಮರಣಾಂತಕಮೃತ್ಯು     || ೨ ||

ಭಂಡರಕ್ಕಸೀ ನೀತೋರದಿರೆನ್ನೊಳು | ದ್ಧಂಡಪರಾಕ್ರಮವಾ ||
ಖಂಡಿಪನಿನ್ನೆಲು ಚಿತ್ರಸೇನಾಖ್ಯನ | ಚಂಡಸಹಸನೋಡು        || ೩ ||

ಯಲೆಲೇಖಚರನೆ ಬಿಡುಬಿಡುತುರಗವ | ಘಳಿಸದಿರಹಿತವನು ||
ಕೊಲುಎನುಕೊಡದಿರೆ ಸಾರಿದೆನಿನ್ನಯ | ಛಲಗಳ ಬಿಡುಬೇಗಾ  || ೪ ||

ರಾಗ ಶಂಕರಾಭರಣ, ಮಟ್ಟೆತಾಳ

ಭ್ರಷ್ಟೆಕೇಳು ಸಾಮದಿಂದ | ಕೊಡೆನುತುರಗ ನಿನ್ನಶೌರ‍್ಯ |
ವೆಷ್ಟುನೋಳ್ಪೆತಾಳುತಾಳೆನುತ್ತಲೆಚ್ಚನು       || ೧ ||

ಕೊಡಹಿರೋಮಗಳನುದೈತ್ಯೆ | ಯಡದಕೈಯಿಂದಲದನು |
ಪಿಡಿದುಮುರಿದು ಬಿಸುಟಳಾಗ | ಬರುವಶರವನೂ      || ೨ ||

ದಿಂಡೆನೋಡುನೋಡೆನುತ್ತ | ಚಂಡಚಿತ್ರಸೇನ ಖತಿಯ |
ಗೊಂಡು ಗಾಂಧರ್ವಶರವ | ನೆಚ್ಚಗಜರುತಾ  || ೩ ||

ತಿಕ್ಕಿಪುಡಿಯಗೈದು ಕಾರ್ಗ | ತ್ತಲೇಯನೆಸಗಿದೈತ್ಯೆ |
ಘಕ್ಕನೊಂದುತರುವತೂಗಿ | ಬಡಿದಳಾಕ್ಷಣ   || ೪ ||

ಭರಕೆತಪ್ಪಿಚಿತ್ರಸೇನ | ಹರಿಸಿಮಾಯತಿಮಿರಗಂ |
ಧರುವಮಾಯದಿಂದಭೋ | ರ್ಮರದುನಿಂದನು        || ೫ ||

ಭಳಿರೆಭಳಿರೆಯೆನುತಲವನ | ಚರಣವನ್ನು ಪಿಡಿದುತಿರುಹಿ |
ಭರದಿಬಂಧಿಸುತ್ತ ಧರಣಿ | ಯೊಳಗೆಕೆಡಹುತಾ          || ೬ ||

ವಾರ್ಧಿಕ್ಯ

ತೋರುವಿಕ್ರಮವೆನುತಲಾರ್ಭಟಿಸಿ ಶರೆವಿಡಿದು |
ಭೋರನಶ್ವವಕೊಂಡುಪಿಂತಿರುಗಿ ಶಾಲೆಯಡೆ |
ಸಾರಿಬಲಿಪದಕೆರಗಿ ಬಂಧಿಸಿಹೆಗಂಧರ್ವ ವೀರನನುನೋಡೆನ್ನುತಾ ||
ನಾರಿ ಸಂತೋಷದಿಂದೊಪ್ಪಿಸಲ್ತುರಗಮಂ |
ಕಾರಮಂದಿರಕಿಡಿಸಿ ಖೇಚರನಶ್ರೋಣಿತಾ |
ಧಾರುಣಿಪ ಮುಖಭಂಗವಾಯಿತಿದಕೇನೆನುತಗುರುವರೇಣ್ಯನಿಗೆರಗಲೂ   || ೧ ||

ಸಾಂಗತ್ಯ

ಕುಳ್ಳೀರೈತ್ರೆಲೋಕ | ಮಲ್ಲಾನೀಬಲಿರಾಯಾ | ಬಲ್ಲೇ ಪ್ರಾಯಚ್ಚಿತ್ತಂಗಳನೂ ||
ಸಲ್ಲೀಸುಲಕ್ಷಾಜ್ಯಾಹುತಿಯಷ್ಟಾಕ್ಷರಿಯೊಳು | ನಿಲ್ಲಾದೀದೋಷಾಪೋಗುವದೂ       || ೧ ||

ಎಂದೂಹೋಮಗಳನ್ನು ಗೈಸೇವಿಧ್ಯುಕ್ತಾದಿ | ಬಂಧೀಸಿತುರಗಾವಧ್ವಜಕೇ ||
ಕುಂದಾಕಬರದಂತೇ ದಂಷ್ಟ್ರಜ್ವಾಲಿನಿಯನ್ನು | ಛಂದಾದೊಳಿಕ್ಕೀಕಾವಲನೂ        || ೨ ||

ಇಂತೂಸಪ್ತಾಹದಿ ಹೋಮಗೈಸಲು ಗುರು | ಸಂತಸದೊಳುವೈರೋಚನಿಯೂ ||
ಚಿಂತೀತಾರ್ಥವವಿಪ್ರರಿಂಗಿತ್ತು ಪರದಿಮ | ಹಾಂತಪುಣ್ಯವಘಳಿವೆನೆನುತಾ || ೩ ||

ರಾಗ ರೇಗುಪ್ತೆ ಅಷ್ಟತಾಳ

ಚರಣಕೊಂದಿಪೆದ್ವಿಜವರರೇ | ಮನ | ದಿರವಬೇಡಿರಿಸದ್ಗುಣರೇ |
ಧರಣಿಮೂರಧಿಕಾರವಿರುವದಲ್ಲದೆ ಮಹ | ತುರಗಾಮೇಧವಗೈವೆವಾಂಛಿತ ಕೊಡುವೆನೂ    || ೧ ||

ಇದ್ದಾಕಾಲದಿ ಧರ್ಮಗಳನೂ | ಮಾಡ | ದಿದ್ದರೆ ಫಲಗಳಿನ್ನೇನೂ |
ಬದ್ಧವಾಗಿಹಧನ ಸದ್ಧರ್ಮವೆಂಬೂದೇ | ಸಿದ್ಧವೆಂಬುದುಸರ್ವ | ಶೃತಿಸಾರವಚನಾದಿ          || ೨ ||

ಕೊಡದಿರೆಧನಿಕದಾನವನು | ಮುಂ | ದೊಡನವದಾರಿದ್ರನಹನೂ |
ಮಡದಿಮಕ್ಕಳ ರಕ್ಷಿಸುವ ಶೋಕವಪಡುತಿರೇ | ಕಡೆಗಣ್ಣಿನೊಳುಕಾಣರಾಗ ಶಿರಿವಂತಾರು    || ೩ ||

ಘೋರಸಂಸಾರ ಬಂಧನವು | ಬಿಡ | ದ್ಯಾರಿಗುಕರ್ಮಚೇತನವು |
ಪಾರಮಾರ್ಥದೊಳೀವೆವಾಂಛಿತಾರ್ಥವನೀಗ | ವಾರಿಜಾಕ್ಷನದಿವ್ಯಪಾದಕರ್ಪಣವಾಗಿ       || ೪ ||

ರಾಗ ಕಾಂಬೋಧಿ, ಝಂಪೆತಾಳ

ಕೇಳಯ್ಯಾ ಬಲಿಚಕ್ರವರ್ತೀ ನೀಪುಣ್ಯಾತ್ಮಾ |
ಪಾಲಿಸಿಹೆ ನಮ್ಮ ಮನದಿರವಿತ್ತೀವರಿಗೇ ||
ಮೂಲೋಕದೊಳು ನಿನ್ನವೋಲೀರ್ಪಧಾರ‍್ಮಿಕನ |
ಕೇಳಿಲ್ಲಪೂರ್ವದೊಳ | ಗಾಳೀರ್ಪರೊಳಗೇ    || ೧ ||

ಕೊಟ್ಟಾದಕ್ಷಿಣದ್ರವ್ಯ | ದೊಳಗೇ ತೃಪ್ತಿಗಳಾತು |
ಅಷ್ಟೈಶ್ವರ‍್ಯಗಳೊಡನೆ ಶಾಶ್ವತದಿ ನೀನೂ ||
ಸೃಷ್ಟಿಯೊಳು ಚಿರಜೀವಿಯಾಗೆಂದುಪರಸಿಹೆವು |
ಕಟ್ಟಿಹುದು ಸದ್ಧರ್ಮಫಲವುಸಂತತದೀ        || ೨ ||

ಭೂಸುರೋತ್ತಮರಿಂದಾ | ಪಡದಾಶಿರ್ವಾದವನು |
ತೋಷದೊಳೂ ಬಲಿಚಕ್ರವರ್ತಿಗುರುಮುಖದಿ ||
ಶೇಷಶಯನಪ್ರೀತವಾಗುವಂದದಿ ಸರ್ವ |
ದೋಷಹರಹೋಮಗಳನೆಸಗುತ್ತಲೀರ್ದಾ    || ೩ ||

ವಾರ್ಧಿಕ್ಯ

ವರಗಾರ್ಹಪತ್ಯಾದಿಕುಂಡದೊಳ್ವಿದ್ಯುಕ್ತ |
ಚರುಪುರೋಡಾಶಾದಿ ಹವಿಯನರ್ಪಿಸುತಿರಲ್ |
ತರಣಿಕೋಟಿತ್ರಯದಿ ಝಳಝಳಿಸಿಪೊಳೆಯುತಿಹ ತೇಜವೇನಿದುಯನ್ನುತಾ ||
ಪರಮಮಖಶಾಲೆಯಂಬೆಳಗುತಿಹ ಪಾರ್ವನೊ |
ತುರಗಮೇಧವನೋಳ್ಪಮನವೆಳಸಿಮಾರ್ತಾಂಡ |
ಹರಿತಹನೊಪದ್ಮಜಂಕೃತುಶಾಲೆಯಡೆಗೀಗ | ತೇಜಪೂರ್ಣಿಮಕೌಮುದಿ  || ೧ ||

ರಾಗ ಮಧುಮಾಧವಿ ತ್ರಿವುಡೆತಾಳ

ಉದಯಿಸಲುಸುಜ್ಞಾನಚಂದ್ರನು | ಮುದದಿಹೃತ್ತಾಕಾಶಮಧ್ಯದಿ |
ಚದುರುತಿರಲಜ್ಞಾನತಿಮಿರಗ | ಳೊದಗೆಸಂಶಯತಾರಕಿ         || ೧ ||

ಅರಳಿಕೊಂಡಿಹಚಿತ್ತಕುಮುದವ | ಪರಿಕಿಸುತಲಾಹ್ಲಾದಕೋಕಿಲ |
ಮೆರಯಲಂತಃಕರಣಸಾಗರ | ಭರಿತಮೇರುವೆದಪ್ಪಿರೆ  || ೨ ||

ಚೋರತನಕೈತಂದಮದಹಂ | ಕಾರಕರ್ತವ್ಯಗಳನಡಿಸದೆ |
ಸಾರುತಿವೆಭಳಿಭಳಿರೆಸಂಶಯ | ಕಾರಣಂಗಳಿದೇನಿದೂ         || ೩ ||

ಯನುತಲಚ್ಚರಿಗೊಂಡುತನ್ನೊಳು | ಧನುಜಪತಿಮುಂದೆಸೆಯನೋಡಲು |
ದಿನಪಕೋಟಿಪ್ರಕಾಶದೊಟುವರ | ಘನತೆಯೊಳ್ಬರೆಕಾಣುತಾ    || ೪ ||

ಕಿರುನಗೆಯುಸಂಪುಲ್ಲಪಂಕೇ | ರುಹಸಮೋಪಮವದನತುಳಸೀ |
ಸರದಿರಂಜಿಪಕಂಠದೇಶದ | ಪರಮಮಂಗಲ | ಮೂರುತೀ      || ೫ ||

ಮೆರವದ್ವಾದಶನಾಮ | ವಾಮದ | ಕರದಿಪಿಡಿದಿಹಛತ್ರ ದಕ್ಷಿಣ |
ಕರದೊಳಗೆ ದಂಡವನುಧರಿಸಿಹ | ವಟುವರೇಣ್ಯನಿಗೆರಗುತಾ    || ೬ ||