ರಾಗ ಭೈರವಿ ಅಷ್ಟತಾಳ

ಮಾಯಾಭೂಸುರನೆ ನೀನು | ಮೋಹಿಸಿ ಮೋಸೋ | ಪಾಯದುರಾತ್ಮಕನೂ |
ಆಯತವಾಗಿಹ ಧರ‍್ಮವಬೇಡಿಯ | ನ್ಯಾಯದೊಂಚಕಖೂಳನೂ  || ೧ ||

ಆರಾತ್ಮಭವರಿವರೂ | ಪಾಮರನೀ | ನ್ಯಾರೆಂಬನಿಜವದರೂ |
ಕ್ರೂರಪಾಪಿಯೆ ಪೇಳದಿರೆಬಿಡೆಬಿಡೆನೆಂದು | ಧಾರುಣಿಗೆಳದುಕೇಳ್ದಾ        || ೨ ||

ಸುರಪತಿಕೇಳೊ ನಾನು | ಖೂಳನೆ ನಿನ್ನ | ತರಿಯಾಲು ಬಂದಿಹೆನೂ |
ಮರುತಾದಿದಿಕ್ಪಾಲರಿವರೆಂದು ನಿಜರೂಪ | ಧರಿಸಿನಿಂದರು ಸರ‍್ವರೂ      || ೩ ||

ಶೂರರಾದಡೆ ಧುರದೀ | ಜಯವಪೊಂದೀ | ಸಾರಿರಿ ಚಾತುರ‍್ಯದೀ |
ಚಾರುಧರ್ಮಾದಿಸದ್ಗುಣಗಳಕಳೆದಿಹ | ಚೋರರೆಂದನು ಭೂಪನೂ        || ೪ ||

ದುಷ್ಟಾನಿಗ್ರಹಕೆನಾನು | ನಾನೋಪಾಯ | ವಿಟ್ಟು ಕಾದುವಶೂರನೂ |
ದಿಟ್ಟನಿಲ್ಲೆನುತಾಲೆಸುರಪತಿ ಘರ್ಜಿಸು | ತಟ್ಟಹಾಸವಗೈದನೂ   || ೫ ||

ದಿತಿಯಾಗರ್ಭದಶಿಶುವಾ | ಮೋಸದಿಕೊದ | ಮತಿಗೇಡಿನಿನ್ನೊಲವಾ |
ಕ್ಷಿತಿಮೂರರೊಳುಖ್ಯಾತಿಯಾಗಿದೆ ಕಡುದುಷ್ಟ | ನತಿಪಾಪಿಗಳಹದಿರೋ   || ೬ ||

ರಾಗ ಶಂಕರಾಭರಣ, ಮಟ್ಟೆತಾಳ

ಯನ್ನವಧಿಸುವಂಥತರಳ | ನನ್ನು ಪಡವೆನೆನುತ ಗರ್ಭ |
ವನ್ನು ಧರಿಸಿದಂಥವೈರಿ | ಶೀಳಿಬಿಸುಟೆನು    || ೧ ||

ಪರಮವಂಚಕಾಗ್ರಗಣ್ಯ | ಶರಧಿಯಲ್ಲಿಜನಿಸಿದಂಥ |
ತುರಗವೃಕ್ಷವಮೃತಗಜವ ನೊದೆನೀನೆಲಾ    || ೨ ||

ಸತ್ಯಸಂಧರಿಂಗೆದೇವ | ನರ್ಥಿಯಿಂದಲೊಲಿದು ಭಾಗ್ಯ |
ವಿತ್ತನದಕೆವಡಲವುರಿಗ | ಳೇಕೊಸುಮ್ಮನೆ    || ೩ ||

ನೋಡುಗೌತುಮಾಖ್ಯನರಸಿ | ಕೂಡಿಋಷಿಯಶಾಪಗೊಂಡ |
ಖೋಡಿನೀನಸತ್ಯವಂತ | ಬಲ್ಲೆಬಲ್ಲೆನು        || ೪ ||

ಅರಿಯೆನೀಹಿರಣ್ಯಕಾಖ್ಯ ತರುಣಿ ತರಳದ್ರೋಹವನ್ನು |
ವಿರಚಿಸಿರ್ದನವನಕುಲದಿ ಪುಟ್ಟಿದಧಮನು     || ೫ ||

ತೊಲಗಿಸೀದೆಮುನಿಪನಸುವ | ಕುಲಿಶನಿರ್ಮಾಣಕಾಗಿ |
ಹೊಲಸುನಾಥದೆಲುವಪಿಡಿದೆ ಶಬರರಂದದಿ  || ೬ ||

ಹರಿಯನೇಮದಿಂದಧೀಚಿ | ವರಮುನೀಶನಾಜ್ಞೆಪಡದು |
ಧರಿಸಿಕೊಂಡೆ ಕುಲಿಶವ್ರತಿಯ ತರಿಯಲಿಲ್ಲವೊ          || ೭ ||

ರಾಗ ಮಾರವಿ, ಏಕತಾಳ

ದುರುಳಪುರಂದರಕೇಳೆಲೊ ಕೌಶಿಕ | ವಿರಚಿಪತಪಗಳನು ||
ಮರುಳೆಮೇನಕಿಯಿಂದಕೆಡಿಸೀಹೆ ಮುನಿದ್ರೋಹಿ | ಪರಮಪಾತಕಿನೀನೂ || ೧ ||

ಶೃತಿಗನುಚಿತಬಾ | ಹುಜರಿಗೆ ತಪಗಳ | ನತಿಛಲವಿಡಿದವನು ||
ವ್ರತಿಯಂದದೊಳಾಚರಿಸಿದಕೆಡಿಸಲು | ಸತಿಯನ್ನಟ್ಟಿದೆನು       || ೨ ||

ದುಷ್ಟತನದೊಳೇನೆಸಗಿದರಾತನು | ಬಿಟ್ಟನೆತಪಮರುಳೆ ||
ಕಟ್ಟವನಿಂದ್ರನೆಂದಪಕೀರ್ತಿಗಳುರೆ | ಸೃಷ್ಟಿಯೊಳಾಗಿಹುದೂ     || ೩ ||

ಭಾಮಿನಿ

ಮಾತಿನಿಂದೇನಹುದು ಖಳಪತಿ |
ಖ್ಯಾತನಾದಡೆ ಸಮರಮುಖದೊಳ |
ಗೀತತೂಕ್ಷಣಗೆಲಿದರೆನ್ನನುಶೂರನೆಂದೆನುವೆ ||
ಪ್ರೇತಗಣಕೌತಣವ ಗೈಯ್ಯುವ |
ರೀತಿಯನು ತೋರುವೆನುಭುವನಕೆ |
ಪಾತಕಿಯೆನಿಲ್ಲೆನುತಲಿಂದ್ರನು ಗಜರಿಘರ್ಜಿಸಿದಾ       || ೧ ||

ರಾಗ ಭೈರವಿ ಝಂಪೆತಾಳ

ಖಿಡಗೆದರಿಬಲಿಚಕ್ರವರ್ತಿಪೇಳಿದನಾಗ | ಕಡುಪಾಪಿ ಬಂದೆನ್ನಗುಣವಾ ||
ವಡನೆವಂಚಿಸಿ ದರ್ಪದಿಂದನಿಂದಿಹೆ ನಿನ್ನ | ಬಿಡೆನುಜೀವದೊಳೆಂದುಭರದಿ         || ೧ ||

ತ್ವರಿತದಿಂದಸಚಿವ ಜಂಭನೊಡನಿಂತೆಂದ | ಬರಿಸುಮಾರ್ಬಲಗಳೆಲ್ಲವನು ||
ತೆರಳಲೀಕ್ಷಣ ಕಾಲನೇಮಿಶುಂಭನಿಶುಂಭ | ಸುರಪುರದಸೂರೆಗೆಂದೆನುತಾ         || ೨ ||

ಜೊತೆಯೊಳಗೆರಕ್ತಬೀಜಾಖ್ಯಧೂಮ್ರಾಕ್ಷಕರು | ಸಿತಲೋಮಮಾಲಿವಾತಾಪಿ ||
ಅತಿಬಲಾಢ್ಯಸುಮಾಲಿ | ಮಹಿಷದುಂದುಭಿನರಕ | ಶತದಂಷ್ಟ್ರರೊಡನೈದಲೀಗ     || ೩ ||

ಶರಭನಿಲ್ವಲನೇಕ ದಂಷ್ಟ್ರಶಂಭರಕುಣಪ | ತೆರಳಲಂತಕರಗ್ನಿಪುರಕೆ ||
ಭರದಿಮುತ್ತಲಿಲಗ್ಗೆ | ನಿರುತಿವಾರುಣಿನಗರ | ಮುರತಾರಕಾಖ್ಯದಾನವರೂ         || ೪ ||

ಅಸಿಲೋಮವಿಪ್ರಚಿತಿಚಂದ್ರಹಂತರುಭೇಗ | ಕುಶಲದಿಂದನಿಲಕೌಬೇರ ||
ವಸತಿಪಟ್ಟಣಸೂರೆಗೈಯ್ಯಲೋಸುಗ ಕಳುಹು | ಅಸುರರೆಲ್ಲರನೆಂದು ಬಲಿಯು     || ೫ ||

ಕರದಿಚಾಪವಗೊಂಡುಝೇಗೈದುನಿಂದಿರಲು | ಪರಕಿಸುತಸುರಪಾಲನಾಗ ||
ನಿರುತಿಕೌಬೇರಮಾರುತರೊಡನೆ ಪೇಳಿದನು | ಕರದವರನಂತರಂಗದಲಿ || ೬ ||

ರಾಗ ಸೌರಾಷ್ಟ್ರ, ತ್ರಿವುಡೆ

ಕಡುದುರುಳಕರ್ಬುರರು ಯಮರಾವತಿಯು ತೇಜೋವತಿಯು ಶೈಮುನಿ |
ಯೊಡನೆಯಳಕಾವತಿಯು ರಕ್ಷಾವತಿಗೆತರುಬಿ || ೧ ||

ಮುತ್ತುವರುಪೋಗೀಗಲೊರುಣನೆ | ಸಪ್ತಮಾತೃಕೆ ವಿಶ್ವದೇವರ |
ಕೃತ್ತಿಕಾದಿಗಳಿಂದ ಪುರಗಳಸಲಹೊಬೇಗಾ    || ೨ ||

ಮರುತಪೋಗೈಗರುಡಕಿನ್ನರ | ರುರಗಮರುತುಗಳಿಂದಲಂತಕ |
ಪುರವ ನಿನ್ನಯನಗರವೆರಡನು | ರಕ್ಷಿಸುವದು || ೩ ||

ತೆರಳುವೇಗಧನೇಶನಗ್ನಿಯಪುರಿಯು ಸತ್ಯಾವತಿಗಳೆರಡನು |
ದುರುಳರುಪಟಳಬಾರದಂದದಿ ಪೊರೆಯೊನೀನೂ      || ೪ |

ನಿರುತಿ ನಿನ್ನಯ ನಗರಮತ್ತಾ | ಸುರಪುರವರಕ್ಷಿಪುದುವಿದ್ಯಾ |
ಧರರುಸುಮನಸರುದ್ರಗಣದೊಳು | ಪೋಗುಪೋಗೈ   || ೫ ||

ಕಡುದುರುಳರಿವರನ್ನು ಮರ್ಧಿಸಿ | ಸಡಗರದಿನಾಬಹೆನುಪೋಗಿರಿ |
ನಡಿರಿನೀವೆಂದೆನುತ | ಕಳುಹಿದನಿಂದ್ರನವರಾ         || ೬ ||

ಭಾಮಿನಿ

ಕೆರಳುತಲಿವೃಷಪರ್ವಧನುಝೇಂ ಕರಿಸುತಿತ್ತಲು |
ಮುಂದುವರಿಯುತ |
ಹರಿಯನಾದವಗೈದುಮಾರಾಂತಿರಲುಪಾವಕನು ||
ಧುರಕೆಬಂದಿದಿರಾಗಿ ಶಕ್ತಿಯ |
ತಿರುಹಿತೂಗುತಲರರೆನಿನ್ನಯ |
ಕರಚಮತ್ಕೃತಿ ತೋರಿಸೆನ್ನಲು | ಪೇಳ್ದವೃಷಪರ್ವಾ    || ೧ ||

ರಾಗ ಭೈರವಿ ಏಕತಾಳ

ಶರಧಿಯಮಥನದಧುರವಾ | ಜಯ | ಪಡದಿರುವನೆ ಬಾನಿನ್ನೊಲವಾ |
ಪರಿಕಿಪೆನೀಶರಮುಖದಿ | ಯಂ | ದರುಹುತಲೆಚ್ಚನುಭರದಿ       || ೧ ||

ನಡುಮಾರ್ಗದಿಮುರಿದದನೂ | ಭೋ | ರಿಡುತಲೆ ವೈಶ್ವಾನರನೂ |
ಖಡಿದನುಚಾಪವನಾಗ | ಪ | ಲ್ಗಡಿಯುತಲೆಚ್ಚನುಬೇಗಾ         || ೨ ||

ಯಲೆಲೇಶಿಖಿ ನೋಡಿದನೂ | ಝಳ | ಝಳಿಸುತಲಿಹಖಡ್ಗವನು |
ಕಲಿಯಾದರೆತಾಳೆನುತಾ | ತೂ ಗೊಲಿಯುತಲೆಸದಘರ್ಜಿಸುತಾ         || ೩ ||

ಯಸಯುತಲೆಂಟಸ್ತ್ರವನು | ಕೂ | ರಸಿಯನುಮುರಿದಿಕ್ಕಿದನು |
ಅಸಮಪರಾಕ್ರಮಿಕೇಳೊ | ನಾ | ನೆಸದಿಹೆಶೂಲವತಾಳೊ       || ೪ ||

ಶೂಲವತುಂಡಿಸುತಾಗ | ಕಂ | ಕಾಲಾಸ್ತ್ರವಬಿಡೆಬೇಗಾ |
ಜ್ವಾಲೆಯತೆರದೊಳಗುರಿದು | ಕ | ಪೋಲವ ಭೇದಿಸೆಕೊಂದೂ  || ೫ ||

ರಾಗ ಕೇದಾರಗೌಳ, ಝಂಪೆತಾಳ

ಯಕ್ಷಪತಿವೃಷಪರ್ವಮೂರ್ಛೆಯ | ನಾಕ್ಷಣವೆತಾಳುತ್ತಧರಣಿಗೆ |
ವೃಕ್ಷದಿಂ ಫಲವುದುರುವಂದದೊಳುರುಳೆಕಾಣುತಲಿ ||
ರಕ್ಷಪತಿಜಂಭಾಖ್ಯಕೋಪದೊ | ಳಕ್ಷಿಯೊಳುಖಿಡಿಗೆದರಿ ಸಮರಕೆ |
ದಕ್ಷಮಥನನತೆರದಿ ಘರ್ಜಿಸಿಬರಲಿಕಂತಕನು || ೧ ||

ರಾಗ ಮಾರವಿ ಏಕತಾಳ

ಯಲೆಯಲೆ ಜಂಭಾಸುರನೆನ್ನೊಳು ಮಾ | ರ್ಮಲಯುತ ವಿಜಯವನು ||
ಘಳಿಸಲು ಶೂರನೆಂದೆಂಬೆನು ಪೌರುಷ | ದೊಲವನುತೋರೆಂದಾ        || ೧ ||

ದಂಡಧರನೆಕೇಳೆಲವೊ ಶಿರವನು | ಖಂಡಿಪೆನರಕ್ಷಣದಿ ||
ಚಂಡ ಪರಾಕ್ರಮಿತಾಳೆನುತಲೆ ಮುಂ | ಕೊಂಡುರೆಶರವೆಸದಾ  || ೨ ||

ಮಿಹಿರಾತ್ಮ ಜನದಖಂಡಿಸಿವೇಗದಿ | ಗಹಗಹಿಸುತಲಾಗ ||
ಮಹಶೂರಾಗ್ರಣಿಶರವೆಲ್ಲಿದೆ ಯ | ನ್ನಹಿತನೆನೋಡೀಗಾ          || ೩ ||

ಪರಿಘಾಯುಧವನುತಿರುಹುತಜಂಭನು | ಕೆರಳುತಲಂತಕನಾ ||
ಶಿರಕೆರಗಲುಕಸಿದದರೊಳುಬಡಿಯುತ | ಲುರುಳಿಸಿದನುಕ್ಷಣದಿ   || ೪ ||

ರಾಗ ಕೇತಾರಗೌಳ, ಝಂಪೆತಾಳ

ತಳೆಯೆಜಂಭನುಮೂರ್ಛೆಯ | ಕಂಡಾಗ | ಬಲಿಯುದಿವಿಜರವಿತತಿಯಾ |
ಕೊಲುವೆನೆನ್ನುತಬರುತಿದೆ | ಸುರಪಮಾ | ರ್ಮಲಯೆಶ್ರೋಣಿತಪುರಧೊರೆ          || ೧ ||

ದುರುಳನಿಂದ್ರನೆರಣದಲಿ | ಜಯವಿಲ್ಲ | ತೆರಳುಸಾತ್ವಿಕ ಜನರಲಿ |
ವಿರಚಿಸಿದ ದುಷ್ಕೃತ್ಯವು | ನಿನ್ನ | ಕೊರಳರಿಯುವದು ಕೇಳ್ಸಹಜವು        || ೨ ||

ಸತ್ಯವಂತರುದಿವಿಜರು | ಈರೇಳುಪೃಥ್ವಿಯೊಳ್ಪೊಗಳುತಿಹರೂ |
ವಿಸ್ತರಿಸುದುಷ್ಕಾರ‍್ಯವಾ | ಗೈದುವನು | ಧೂರ್ತನೀಪೇಳೆಲ್ಲವಾ   || ೩ ||

ರಾಗ ಶಂಕರಾಭರಣ, ಮಟ್ಟೆತಾಳ

ಗುರುವರೇಣ್ಯನಾದ ವಿಶ್ವ ರೂಪನೆಂಬವಿಪ್ರನನ್ನು |
ದುರುಳನೀನುಕೊಂದೆಯಾಕೆ | ಬ್ರಹ್ಮಘಾತಕಿ || ೧ ||

ದ್ವೇಷಿಯಾದಸುರರುಗಳಿಗೆ | ತೋಷದಿಂದಹವಿಯ ಕೊಡುವ |
ಭೂಸುರಾಧಮನಕೊಂದೆ | ದೋಷವೇನಿದೆ   || ೨ ||

ದುರುಳನಾದಡಾಗಲವನು | ಗುರುವುನಿನಗೆಕೊಂದುಕಳದೆ |
ತ್ವರದುಪೋಪುದುಂಟೆಬ್ರಹ್ಮ | ಹತ್ಯ ಸುರಪನೆ          || ೩ ||

ದುರುಳರನ್ನು ವಿಪ್ರರೆಂದು | ಕರಯಲಾಗದವನಕೊಂದ |
ದುರಿತಸುದತಿತರುಶಿಲಾದಿ | ಜಲಕೆ ಕೊಟ್ಟೆನೂ         || ೪ ||

ಯನ್ನತಾತವರಹಿರಣ್ಯ | ಕಸ್ಯಪಾಖ್ಯನರಸಿಯೆನ್ನು |
ಮುನ್ನನೀನೊದದ್ರೋಹಿ | ಪತಿವ್ರತೇಯಳಾ  || ೫ ||

ರಾಗ ಭೈರವಿ, ಅಷ್ಟತಾಳ

ದುಷ್ಟಾನಿನ್ನಯತಾತನು | ದುಷ್ಕಾಮ್ಯವ | ನಿಟ್ಟುತಪವಗೈದನು |
ಕೆಟ್ಟಾಯೋಚನೆಗಳ ತೊಲಗೀಸಲೀಕೆಯ | ಥಟ್ಟಾನೊದೆನುಕೇಳೆಲೊ     || ೧ ||

ಭೂಸುರಾನ್ವಯವೃತ್ರಾನ | ಕೊಂದಿಹಕ್ರೂರ | ದೋಷಿನೀನೊಂಚಕನಾ |
ದೇಶವತೆಜಿಸುತ್ತಾ | ಸರಸಿಯೊಳಡಗೀಸಿ | ಘಾಸಿಮಾಡಿತು ಪಾಪವು     || ೨ ||

ಸನಕಸನಂದನರಾ | ಶಾಪದಿದುಷ್ಟಾ | ಧನುಜಾರಾಗುದಿಸಿರ್ದರಾ |
ನೆನಸೀಕೊ ನಿನ್ನಾಯ | ಪ್ರಪಿತಾಮಹರನ್ನು | ಕೆಣಕಾಬೇಡೆಂದನಿಂದ್ರಾ    || ೩ ||

ಧರಿಸಿಭೂಸುರರೂಪವಾ | ಯಮ್ಮಯಪುರ | ವರಕೆ ಬಂದೆಯೊಮಘವಾ |
ತಿರಿದಪಹರಿಸಿದೆ ಪಿತವಿರೋಚನಗುಳ್ಳ | ಪರಮಾಯುರ್ದಾಯವನ್ನೂ     || ೪ ||

ದುರುಳಹಿರಣ್ಯಾಕ್ಷನು | ಜೀವಕೆಮೂಲ | ಧರೆಯಾಕೊಂಡೊದಿಹನು |
ಪರಮಾತ್ಮದಯದಿಂದತಂದಿಳುಹಿದಕೇಳೊ | ಪರಮಪಾವನಕುಲವೂ    || ೫ ||

ಮಾತಾಡದಿರುಸಾರಿದೆ | ನಪುಂಸಕ | ನ್ಯಾತಕೊರಣಗೈಯ್ಯಾದೆ |
ಖ್ಯಾತಶುಂಭಗೆಸೋತು ವನವಾಸಕೈದಿಹ | ರೀತಿಯಬಲ್ಲೆ ನಾನು         || ೬ ||

ವಾರುಧಿಮಥನದೊಳು | ವಜ್ರಕಪ್ರಾಣಾ | ಧಾರವಿತ್ತವೆನೆಕೇಳೂ |
ಪಾರಮಾರ್ಥದಿ ಶುಕ್ರ ಜೀವಗೈದಿಹನ್ಯಾಕೆ | ಕ್ರೂರಪಾಪಿಯೆನಿನ್ನನೂ      || ೭ ||

ರಾಗ ಭೈರವಿ ಏಕತಾಳ

ಘುಡುಘುಡಿಸುತಬಲಿಯಾಗಾ | ಹೆದೆ | ಗಿಡುತಲೆಶರಮಂಬೇಗಾ |
ಬಿಡಲದಮುಕ್ಕಡಿಮಾಡಿ | ಸುರ | ರೊಡಯನುನಿಂದಿರೆನೋಡಿ   || ೧ ||

ಕೆರಳುತಬಲಿಯಾಕ್ಷಣದಿ | ಶಿರ | ಕೆರಗೆಕಠೋರದಶರದಿ |
ಸುರಪತಿಮೂರ್ಛೆಯತಳೆದು | ಕ | ಣ್ದೆರದಾಕ್ಷಣಮೇಲ್ವಾದು      || ೨ ||

ತಿರುಹುತಲೊಜ್ರವನಾಗ | ಪಣೆ | ಗೆರಗಲುಕಂಪಿಸಿಬೇಗಾ |
ಉರುಳಿದ ಬಲಿಯಂಕಂಡೂ | ಬಲ | ತೆರಳಿತುಭೀತಿಯಗೊಂಡೂ         || ೩ ||

ವಾರ್ಧಿಕ್ಯ

ಧರೆಯೊಳಗೆಮೂರ್ಛೆಯಂತಳೆದುಬಿದ್ದಿಹಬಲಿಯ |
ಪರಿಕಿಸುತಲಾ ಸುರಪನೆಂದನೆಲೆಪಾತಕಿಯೆ |
ವರವನಿತ್ತಿಹನಿನ್ನ ಕುಲಕೆಮೃತಿಯಿಲ್ಲೆನುತ | ನರಹರಿಯುಕಾರುಣ್ಯದಿ ||
ತರೆನುಭಂಗವನದಕೆ ಖಡುಮೂರ್ಖನೆಂದಾಗ |
ಸುರಪನೆಡಗಾಲಿನೊಳಗೊದ್ದು ಮೂದಲಿಸುತ್ತಾ |
ತರಣಿಜಾಗ್ನಿಗಳೊಡನೆ ತೆರಳಿಪೊಕ್ಕನುಪುರಿಯ ದೇವದುಂದುಭಿಮೊಳಗಿತು        || ೧ ||

ಭಾಮಿನಿ

ಮರುತಧನಪಾದಿಗಳು ತಮ್ಮಯ |
ಪುರಕೆಮುತ್ತಿಹ ಖಳರನೋಡಿಸಿ |
ಹರುಷಮಯದೊಸಗೆಯನು ವಾಸವಗಾಗಬಿನ್ನೈಸೆ ||
ಪರಮ ಧರ‍್ಮವಸೆಳೆದೆಬಲಿಯೊಳು |
ದುರುಳಭಯಮಿಲ್ಲೆಂದು ಸುರಪತಿ |
ಹರುಷದಿಂದಿರಲಿತ್ತ ವೈರೋಚನಿಯುಚೇತರಿಸಿ         || ೧ ||

ಕಂದಪದ್ಯ

ಶಿರವನ್ನೆಗಹುತಮೆಲ್ಲನೆ | ತೆರಳಿದನೆಲ್ಲಿಗೆ ಸುರಪತಿಯನ್ನುತನಾಲ್ದೆಸಿ |
ಪರಿಕಿಸಿಕಾಣದೆ ಮನದೊ | ಳ್ಕರಗುತೆನಾನಾತೆರದಿಂಚಿಂತಿಸುತಾಗಳ್   || ೧ ||

ರಾಗ ನೀಲಾಂಬ್ರಿ ಏಕತಾಳ
(ಇಕ್ಷೂಚಾಪಾ ಎಂಬಂತೆ)

ಹರಿಗೋವಿಂದಾ | ಪರಮಾನಂದಾ | ದುರಿತಾರಿಮುಕುಂದಾ ||
ಕರಣಾನೆನ್ನಾ | ಮರತೇದೇವಾ | ಸರುವಾಂತರ‍್ಯಾಜೀವಾ       || ೧ ||

ವಾಸವಾಸ | ದ್ಧರ್ಮಾವನ್ನೂ | ಮೋಸಾದಿಂದಾಸೆಳದೂ ||
ಘಾಸೀಗೈದಾ | ಧುರದೊಳನ್ನಾ || ತೋಷಾವೇಶ್ರೀಹರಿಯೇ      || ೨ ||

ಯಾತಾಕೆನಾ | ನಿಂದೇಧುರಕೇ | ಖ್ಯಾತೀಪೋಯಿತಕಟಾ ||
ಹೂತಾಲತೆಯಾ | ಮೂಲಾವರಿದಾ | ರೀತೀಯಾಯ್ತೇಯನಗೇ  || ೩ ||

ಭಾಮಿನಿ

ಎಂದುಚಿಂತಾಂಬುಧಿಯೊಳಾಳುತ |
ಕುಂದಿಮೌನದೊಳಿರಲು ಶುಕ್ರನು |
ಬಂದುದನುಪರಿಕಿಸುತಲೊಂದಿಸೆ ಪರಸುತಾಕ್ಷಣದೀ ||
ಮಂದಹಾಸ ಮುಖಾಬ್ಜವೆಂಬುದು |
ಕಂದಿಚಿಂತಾತಪದಿಸೊರಗಿದ |
ವಂದವರುಹೆನಲೆಂದವೈರೋಚನಿಯು ದುಗುಡದಲಿ    || ೧ ||

ಸಾಂಗತ್ಯ

ಲಾಲೀಸೂಗುರುವರೇಣ್ಯನೆ ಯನ್ನಾದುಗುಡಾವ | ಪೇಳಾಲಾರೆನು ನಿನ್ನಾಮುಂದೇ ||
ಖೂಳಾಪುರಂಧರ ಕಪಟಾಭೂಸುರನಾಗಿ | ಕೇಳಿದಾ ಸದ್ಧರ್ಮಗುಣವಾ   || ೧ ||

ಕೊಟ್ಟೆಯಾಚಕನೆಂದೂ ಸೌಭಾಗ್ಯಾದಿಗಳೆಲ್ಲ | ಬಿಟ್ಟೆನ್ನಾತೆರಳಿರಲಾಗಾ ||
ದುಷ್ಟಾನೊಡನೆ ಕೊಳುಗುಳವಾಯ್ತು ಸೋತಿಹೆ | ಕೆಟ್ಟಾಪಕೀರ್ತಿಮೂಜಗದಿ        || ೨ ||

ವಸುಧೆಭಾರಕನಾನು | ಬಾಳಿರ್ದರೇನೆನ | ಲುಶನಾಪೇಳಿದ ಬಿಡುವೆಥೆಯಾ ||
ಅಸಮವಿಕ್ರಮಿ ವಿಶ್ವಜಿತುಮಖವನುಗೈದು | ಪಸರೀಸುಕೀರ್ತಿಸಂಪದವಾ          || ೩ ||

ದೊರೆರಾಯಾಲಾಲಿಸೀಕ್ರತುವಾಗೈದರೆ ವಿಶ್ವ | ಧರೇಯಾದಿಗ್ವಿಜಯಾವಪಡವೇ ||
ಸುರಪುರ ಸಕಲಸಂಪದವಾಪೊಂದುವೆ ಸೋಪ | ಸ್ಕರವಾಸಂಗ್ರಹಿಸೀಗಪೇಳ್ವೆ     || ೪ ||

ವಾರ್ಧಿಕ್ಯ

ಕ್ರೋಶಪಂಚಕಶಾಲೆಯಂಗೈಸು ತನ್ಮಧ್ಯ |
ಭಾಸುರಾಂಗದೊಳಷ್ಟಕೋಣ ಕುಂಡತ್ರಯವ |
ತೋಷದಿಂದಲೆರಚಿಸು ಕುಶಸಮಿಧ ಚರುಪುರೋಡಾಶಮಂಗಲದ್ರವ್ಯದೀ ||
ಭೂಸುರೋತ್ತಮರಿಂದ ವಿಧ್ಯುಕ್ತಮಾಗಿಕ್ರತು | ವೀಸಕಲಜಗವ ತನ್ನಾತ್ಮದೊಳಗಿರಿಸಿರ್ಪ |
ವಾಸುದೇವ ಪ್ರೀತನಾಗುವಂದದಿ ನಾನು ಮಖವಗೈಸುವೆನೆಂದನೂ      || ೧ ||

ಭಾಮಿನಿ

ಹರುಷದಿಂದ ವಿರೋಚನಾಖ್ಯನ |
ತರಳ ಶುಕ್ರನಮತದಿ ಮಯನನು |
ಕರಸುತೆಮುನೆಯತಡಿಯಶಾಲೆಯ ರಚಿಸಿಸಂಭ್ರಮದೀ ||
ಚರುಪುರೋಡಾಶಾದಿ ಸಂಗ್ರಹ | ವೆರಸಿರುತ್ವಿಜವರರನೇಮಿಸಿ |
ಗುರುಮುಖೋದಿತದಂತೆ ದೀಕ್ಷಿತನಾಗಿಮಂಡಿಸಲು    || ೧ ||

ರಾಗ ಕಾಂಬೋದಿ ಝಂಪೆತಾಳ

ವಸುಧೆಪತಿ ಬಲಿಚಕ್ರ | ವರ್ತೀದೀಕ್ಷಿತನಾಗ |
ಲುಶನಾವೇಗದೊಳರಣಿ | ಮುಖದೊಳಗ್ನಿಯನೂ ||
ಕುಶಲದಿಂದಲೆಸೃಜಿಸಿ | ಹೋಮಿಸಲುಕುಂಡದಿಂ |
ದೆಸದುಬಂದನು ದೇವಪುರುಷನೋರುವನು  || ೧ ||

ಸುರಪನುಚ್ಚೈಶ್ರವವಪೋಲ್ವ ತುರಗವಕಟ್ಟಿ |
ವರಕಾಂಚನದದಿವ್ಯ | ರಥವನುರೆಕೊಂಡು ||
ಕರದಿಮಿಸುನಿಯಚಾಪಖಡ್ಗಶರಕವಚವನು |
ಧರಿಸಿಬಲಿಯೊಡನಿತ್ತು ಪೇಳ್ದಸಂತಸದೀ      || ೨ ||

ಧೊರೆಯೇಕೇಳ್ ಸ್ಯಂಧನವ | ಚಾಪಖಡ್ಗಾದಿಗಳ |
ಹರುಷದಿಂದಲಿ ನಿನಗೆ | ಕೊಡಲೂ ಬಂದಿಹೆನೂ ||
ಪರಮವಿಕ್ರಮಿ ನಿನ್ನಪೋಲ್ವರಿನ್ನಿಲ್ಲೆನುತ |
ಕರುಣಿಸುತಲಗ್ನಿಯೊಳಗಡಗಿದನುಪುರುಷಾ   || ೩ ||

ಹರುಷಾದೊಳೊ ಕೈಕೊಂಡೂ | ಗುರುವರೇಣ್ಯನ ಮತದೀ |
ವರಪೂರ್ಣಾಹುತಿಯಿಂದ | ಕ್ರತುವಾಪೂರೈಸೀ ||
ಪರಮರುತ್ವಿಜರಿಂಗೆ ದಕ್ಷಿಣಾದಿಗಳಿತ್ತು |
ಚರಣಕೆರಗಿದ ಬಲಿಯೊಳೆಂದ ಭಾರ್ಗವನೂ  || ೪ ||

ರಾಗ-ಜಂಜೋಟಿ, ಅಷ್ಟತಾಳ

ಕೇಳಯ್ಯಾ ಬಲಿಚಕ್ರವರ್ತೀ | ನಾನು ಪೇಳೂವನುಡಿಯಾ ಸತ್ಕೀರ್ತಿ |
ಸೀಲಾನೀನಗ್ನಿಯೊಳ್ಪಡದಿಹರಥವೇರಿ | ತಾಳುತಿಹೆ ಸ್ವರ್ಗಾದಿವಿಜಯವ |
ನೇಳುತಡಬಡಮಾಡದೀಕ್ಷಣ        || ೧ ||

ಕ್ರತುವಗ್ನಿಜನ್ಯಚಾಪದೊಳು | ಶರ | ವಿತತೀಯಪೂಡಿಶೌರ‍್ಯದೊಳು |
ಸತತನೀಪೊರಡೆಮಾರಾಂತು ನಿಲ್ಲುವರಿಲ್ಲ | ಖತಿಯತಾಳುತ ನಿಲುವಶೂರನು |
ಜಿತವಪೊಂದನು ಕೇಳುನಿಶ್ಚಯ     || ೨ ||

ಕೊಡುವೇನೂಶಂಖವನಾನು | ಪಿಡಿ | ದೊಡನಿದನೂದೆನಾದವನು |
ವಡನೆಕೇಳಿದ ಜನರೊಳಗಿಹಬಲವರ್ಧ | ದಡಿಗ ನಿನ್ನನು ಪೊಂದಿಬರುವದು |
ಕಡುಪರಾಕ್ರಮಿಯನುತಲಿತ್ತನು      || ೩ ||

ರಾಗ ಮಾರವಿ ಏಕತಾಳ

ಹರುಷದಿಕೈಕೊಂಡೆರಗುತ ಶುಕ್ರನ | ಚರಣಕೆಭಕ್ತಿಯೆಲಿ ||
ಸುರಪುರವಿಜಯಕೆ ಪರಸುತಕಳುಹೆನೆ | ತೆರಳೆಂದನುಭರದಿ    || ೧ ||

ಲಾಲಿಸು ಜಂಭಾಸುರನೀಕ್ಷಣದೊಳು | ಕಾಲನಪುರವರಕೆ ||
ಪಾಳಯಕೂಡುತ ನಡಿನಡಿಸಮರದಿ | ಖೂಳರಜವೆಡಿಸು        || ೨ ||

ವೃಷಪರ್ವನೆಶೂರಾಗ್ರಣಿಶುಂಭಾ ದ್ಯಸುರರಕೂಡುತಲೀ ||
ಬಸವಳಿದಗ್ನಿಯ ಮರುತಾದಿಗಳನು | ಕುಶಲದಿಬಾರೆಂದಾ      || ೩ ||

ಯಂದುಸುರುತಖಳ ಸುಮುದಾಯಗಳನು | ಛಂದದಿತೆರಳಿಸುತಾ ||
ಕೊಂದುರುಳಿಪೆಶಚಿವಲ್ಲಭನನು ನಾ | ನೆಂದ್ಯೋಚಿಸುತಾಗಾ    || ೪ ||

ಕುಂಡದಿಜನಿಸಿಹ ರಥವನ್ನಡರುತ | ಚಂಡಪರಾಕ್ರಮಿಯು ||
ಕೊಂಡನುಶಿಖಿಯೊಳ್ಪಡದಿಹಚಾಪವ | ಖಂಡೆಯಶರಗಳನೂ    || ೫ ||

ತಾರಕಮಹಿಷಾಸುರಶಂಬರಮುರ | ಘೋರಖಳೇಶರನೂ ||
ಭೋರನೆ ತರುಬುತಪೊರಟನು ಮಾರ್ಬಲ | ಮೂರರ್ಬುಧದೊಡನೇ     || ೬ ||

ಭಾಮಿನಿ

ಧರಣಿಕಂಪಿಸಲಾವಿರೋಚನ |
ತರಳಖಳಸಮುದಾಯದೊಂದಿಗೆ |
ತೆರಳಿಸುರಪುರಕೈದಲಿತ್ತಲು ಜಂಭದಾನವನೂ ||
ಭರಿತರೋಷದೊಳೈದಿಕಾಲನ |
ಪುರವಲಗ್ಗೆಯನಿತ್ತುಘರ್ಜಿಸಿ |
ಚರರಪಿಡಿದಪ್ಪಳಿಸಿ | ಕರಗಳ ಬಂಧಿಸುತಪೇಳ್ದ         || ೧ ||