ಈ ಲೇಖನಗಳನ್ನು ಎಲ್ಲೆಲ್ಲಿಂದಲೋ ಹುಡುಕಿ, ಅವು ಇರುವುದನ್ನು ನನಗೆ ಜ್ಞಾಪಿಸಿ, ಒಟ್ಟುಮಾಡಿ ಪ್ರಕಟಿಸುತ್ತಿರುವ ನ. ರವಿಕುಮಾರ ಮತ್ತು ಅಭಿನವ ಬಳಗಕ್ಕೆ.

ಇವು ಹುಟ್ಟಲು ಕಾರಣರಾದ ಕನ್ನಡ ಸಾರಸ್ವತ ಲೋಕದ ಮಿತ್ರರಿಗೆ,

ಲೇಖನಗಳನ್ನು ಅನುವಾದಿಸಿದ ನಿತ್ಯಾನಂದ ಶೆಟ್ಟಿ, ಸಿರಾಜ್ ಅಹಮದ್, ವೆಂಕಟರಮಣ ಐತಾಳ್, ವೆಂಕಟಲಕ್ಷ್ಮಿ ಅವರಿಗೆ,

ಕೆಲ ಲೇಖನಗಳನ್ನು ಪರಿಷ್ಕರಿಸಿದ ವಾಸುದೇವಮೂರ್ತಿಗೆ,

ನನ್ನ ಭಾಷಣ/ಮಾತುಗಳನ್ನು ಬರಹ ರೂಪಕ್ಕೆ ತಂದ ಶ್ರೀಮತಿ ಪುಷ್ಪಾ ಪಶುಪತಿ, ಇಸ್ಮಾಯಲ್, ಹಿ.ಚಿ. ಬೋರಲಿಂಗಯ್ಯ, ಕೆದ್ಲಾಯ, ಬಾಲಕೃಷ್ಣ ಹೊಸಂಗಡಿ, ರಘುನಾಥ್ ಚ.ಹ. ಮುಂತಾದವರಿಗೆ,

ಪ್ರಕಟಿಸಿದ ಪತ್ರಿಕೆಗಳು, ಪುಸ್ತಕಗಳು ಮತ್ತು ಅದರ ಸಂಪಾದಕರಿಗೆ,

ಕೃತಜ್ಞತೆಗಳು

ಯು.ಆರ್.ಅನಂತಮೂರ್ತಿ
೧೦-೧೨-೨೦೦೬