ಯು.ವರದರಾಜನ್ ಅವರು ತಮಿಳಿನಲ್ಲಿ ರಚಿಸಿದ ‘ತಮಿಳು ಸಾಹಿತ್ಯ ಚರಿತ್ರೆ’ಯನ್ನು ಕನ್ನಡಕ್ಕೆ ತಂದವರು ಎಲ್.ಗುಂಡಪ್ಪ. ಇದರಲ್ಲಿ ಇಡೀ ತಮಿಳು ಸಾಹಿತ್ಯ ಚರಿತ್ರೆಯನ್ನು ಪರಿಚಯಿಸಲಗಿದೆ. ತಮಿಳು ಭಾಷೆ – ಸಾಹಿತ್ಯ – ಕಾವ್ಯ – ಸಂಗಂ ಸಾಹಿತ್ಯವನ್ನು ತಿಳಿಸುವಾಗ ನೀತಿ ಗ್ರಂಥಗಳ ಕಾಲ ಎಂದು ತಿರುವಳ್ಳುವರ್ ಸಾಹಿತ್ಯವನ್ನು ಪರಿಚಯಿಸಲಾಗಿದೆ. ಈಕಾಲವನ್ನು ಕ್ರಿ.ಶ ೧೦೦ರಿಂದ ಕ್ರಿ.ಶ ೫೦೦ ಎಂದು ತಿಳಿಸಲಾಗಿದೆ. ಸಂಗಂ ಸಾಹಿತ್ಯದ ನಂತರ ಕವಿಗಳು ಪ್ರೇಮ, ವೀರ, ದಾನ ಮೊದಲಾದ ಭಾವನೆಗಳನ್ನು ಅನಂತರ ಕೈಬಿಟ್ಟು ನೀತಿ ಗ್ರಂಥಗಳನ್ನು ರಚಿಸಿದರು. ಇದಕ್ಕೇ ‘ಸಂಘ ಮುಂದುವರಿದು ಮಾರ್ಪಟ್ಟ ಕಾಲ’ ಅಥವಾ ನೀತಿಗ್ರಂಥಗಳ ಕಾಲ’ ಎಂಬ ಹೆಸರಿದೆ. ಬಹುತೇಕವಾಗಿ ಆಳ್ವಿಕೆ ನಡೆಸಿದ ಚೇರ, ಚೋಳ, ಪಾಂಡ್ಯರ ಕಾಲವು ಶಾಂತರವಾಗಿರದೇ, ಕ್ಷೋಭೆ, ಅಶಾಂತಿಯಿಂದ ಕೂಡಿತ್ತು ಕಾರಣ ಕಳಭ್ರರು ಪ್ರವೇಶ ಮಾಡಿ ನಾಡಿನ ಜನಗಳಲ್ಲಿ ಅಶಾಂತಿ ಉಂಟುಮಾಡಿದರು. ಜನರಿಗೆ ಜೀವನದ ಸುಖ – ದುಃಖಗಳನ್ನು ಹಂಚಿ ಕೊಳ್ಳುವ ಹಾಡು ಕಮರಿ ಹೋಯಿತು. ಹಾಗಾಗಿ ಜೀವನವು ದ್ವಂದ್ವ, ಸಮಸ್ಯೆ ದುಃಖದಿಂದ ಕೂಡಿರುವ ಕಾರಣ ಜನರು ಸಮಾಜದಲ್ಲಿ ಹೇಗೆ  ಬಾಳಬೇಕು, ರಾಜನೀತಿ, ಸಾಮಾನ್ಯ ಧಾರ್ಮಿಕ ನೀತಿ, ಸಾಮಾಜಿಕ ನೀತಿ ಹಾಗೂ ಕಟ್ಟುಪಾಡುಗಳನ್ನು ಕವಿ, ವಿದ್ವಾಂಸರು ಮಾಡಿದರು. ಕ್ರಿ.ಶ. ೧೦೦ ರಿಂದ ೫೦೦ರವರೆಗೆ ಬಂದ ಗ್ರಂಥಗಳನ್ನು ‘ಹದಿನೆಂಟು ಕಿರು ಗ್ರಂಥಗಳೆಂದು ಕರೆದರು. ಇವು ಬೇರೆ ಬೇರೆ ವಿಷಯಗಳನ್ನು ಒಳಗೊಂಡಿದ್ದರೂ (೫ ಪ್ರೇಮ ಗ್ರಂಥ. ಒಂದು ಯುದ್ಧ, ೧೨ ನೀತಿ) ಹೆಚ್ಚಾಗಿ ನೀತಿಯನ್ನು ಬೋಧಿಸುತ್ತವೆ.

‘ತಿರುಕ್ಕುರಳ್’ ನೀತಿಗ್ರಂಥಗಳಲ್ಲೇ ಬಹುಶ್ರೇಷ್ಠವಾದುದು. ಹೀಗೆಂದರೆ ಮೊದಲಡಿ ಯಲ್ಲಿ ನಾಲ್ಕು ಗುಣಗಳು, ಎರಡನೆಯ ಅಡಿಯಲ್ಲಿ ಮೂರು ಗುಣಗಳು ಬರುವ ಎರಡಡಿಗಳ ’ವೆಣ್ಬಾ ಪದ್ಯಕ್ಕೆ’ ಕುರಳ್ ವೆಣ್ಬಾ’ ಎನ್ನುವರು. ಈ ಕುರಳ್ ವೇಣ್ಬಾದಿಂದ ರಚಿಸಿರುವ ಗ್ರಂಥಕ್ಕೆ ‘ತಿರುಕ್ಕುರಳ್’ ಎಂಬ ಹೆಸರಾಯಿತು. ಇದನ್ನು ಯಾರು ರಚಿಸಿದರೆಂಬುದು ಕವಿ, ಜೀವನ ಮಾಹಿತಿ ಸಿಗಲಿಲ್ಲ, ನಂತರ ‘ತಿರುವಳ್ಳುವರ್’ ಎಂಬ ವಂಶ – ಉದ್ಯೋಗಕ್ಕೆ ಸಂಬಂಧಿಸಿದ ಹೆಸರು ಪ್ರವರ್ಧಮಾನಕ್ಕೆ ಬಂತು. ಹಾಗಾಗಿ ತಿರುವಳ್ಳುವರ್ ಬಗ್ಗೆ ಏನೆಲ್ಲಾ ಚರ್ಚೆಗಳಿದ್ದರೂ ಲೇಖಕರು ಅಂತಮವಾಗಿ ಒಪ್ಪಿಕೊಂಡಿದ್ದಾರೆ. ಅವರ ಕೃತಿಯಲ್ಲಿ ಸುಶಿಕ್ಷಿತರು., ಲೌಕಿಕ ಜೀವನ ಸವಿದವರು. ರಾಜಕೀಯ ಅನುಭವಿಗಳು, ಹಿರಿಯರು ಮುತ್ಸದ್ದಿಗಳೂ ಮತ – ಧರ್ಮಗಳೊಂದಿಗೆ ಸರ್ವ ಸಮಾನವಾದ ಮನಸ್ಸುಳ್ಳವರು, ಧಾರ್ಮಿಕ ನಂಬಿಕೆ ಇರುವ ಮೂಡನಂಬಿಕೆ ಬಿಟ್ಟವರ ಬಗ್ಗೆ ಪ್ರಸ್ತಾಪಿಸಲಾಗಿದೆ.

‘ತಿರುಕ್ಕುರಳ್’ನಲ್ಲಿ ಪ್ರಮುಖವಾಗಿ ನಾಲ್ಕು ಭಾಗಗಳಿವೆ. ಧರ್ಮ (ಅರಮ್) ಅರ್ಥ (ಪೊರಳ್), ಕಾಮ (ಇನ್ಬಮ್) ಮತ್ತು ಮೋಕ್ಷ (ವೀಡು) ಎಂಬ ನಾಲ್ಕು ಪುರುಷಾರ್ಥಗಳಲ್ಲಿ ಮೊದಲನೆಯ ಮೂರು ಕುರಿತು ೧೩೩೦ (ಕುರುಳ್) ಪದ್ಯಗಳನ್ನು ತಿರುಕ್ಕುರುಳ್ ತಿಳಿಸುತ್ತದೆ. ತಿರುವಳ್ಳವರ್ ಹೇಳುವಂತೆ, ಸನ್ಮಾರ್ಗದಲ್ಲಿ ಈ ಲೋಕದಲ್ಲಿ ಬಾಳಿದರೆ ಮುಕ್ತಿ ತಾನಾಗಿಯೇ ದೊರೆಯುತ್ತದೆಂದು. ತಮಗೆ ನಿಲುಕದ ಮುಕ್ತಿ ವಿಷಯಕ್ಕೆ ವ್ಯರ್ಥ ಎಂಧು ವಿವರಣೆ ನೀಡುತ್ತಾರೆ. ತಿರುವಳ್ಳವರ್ ಮೋಕ್ಷಕ್ಕಿಂತ ಸತ್ಯದ ಕಡೆಗೆ, ಅಧಿಕಾರ, ಬದುಕು, ನೀತಿ, ಧರ್ಮದ ಬಗ್ಗೆ ಚಿಂತಿಸಿದ್ದರು. ಹತ್ತು ಕುರುಳ್‌ಗಳಲ್ಲಿ ಒಂದೊಂದಕ್ಕೆ ಗುಣ – ಅಭಿಪ್ರಾಯ ತಿಳಿಸಿದ್ದಾರೆ. ೩೮೦ ಕುರುಳ್‌ಗಳಲ್ಲಿ ೩೮ ಅಧ್ಯಾಯಗಳಾಗಿ ಧರ್ಮವನ್ನು ವಿವರಿಸಿದ್ದಾರೆ. ಎರಡನೆಯ ಭಾಗದಲ್ಲಿ ರಾಜಕೀಯ ಪೂಜೆಗಳ ಗುಣಗಳ ಬಗ್ಗೆ ೭೦೦ ಕುರುಳುಗಳಲ್ಲಿ ೭೦ ಅಧ್ಯಾಯಗಳಲ್ಲಿ ತಿಳಿಸಿದ್ದಾರೆ. ಶ್ರೇಷ್ಠ ಪ್ರೇಮಿಗಳ – ಪ್ರೇಮ ಕುರಿತು ೨೫೦ ಕುರುಳುಗಳಲ್ಲಿ ೨೫ ಅಧ್ಯಾಯನಗಳ ಮೂಲಕ ಮೂರನೇ ಭಾಗದಲ್ಲಿ ನಿರೂಪಿಸಿದ್ದಾರೆ. ಶ್ರೇಷ್ಠ ಚಿಂತಕ, ಸುಧಾರಖರ ಬಗ್ಗೆ ಮೊದಲಭಾಗ, ಪಳಗಿದ ರಾಜಕಾರಣಿ ನುಡಿಗಳ ಬಗ್ಗೆ, ಮೂರನೇ ಭಾಗದಲ್ಲಿ ಕಲ್ಪನೆಯ ಕವಿಯಾಗಿ ಪ್ರೇಮ, ಪ್ರಿಯ – ಪ್ರೇಯಸಿಯರ ಬಗ್ಗೆ ತಿಳಿಸುತ್ತಾನೆ.

೧. ತಿರುವಳ್ಳುವರ್ ‘ಸಮಾನತೆ’ ಬಗ್ಗೆ ಚಿಂತಿಸಿದ್ದಾರೆ. ಪಕ್ಷ ಬೇಧ ಮಾಡದೆ. ಜನರ ಅಂತರಂಗವನ್ನು ಅರಿತು ಸತ್ಯವನ್ನು ತೆರೆದಿಡುವ ಕೆಲಸಮಾಡಿದ್ದಾರೆ. “ಎಲ್ಲರೂ ಹುಟ್ಟಿನಲ್ಲಿ ಸಮಾನರಾದವರೇ” ಎಂದರು ತನಗೆ ಒದಗಿದ ಸಂಕಟವನ್ನು ಸಹಿಸಿಕೊಳ್ಳುತ್ತಾ, ಬೇರೆ ಜೀವಿಗಳಿಗೆ ದುಃಖವುಂಟು ಮಾಡಬಾರದೆಂದು ತಿಳಿಸುತ್ತಾನೆ. ಪರಿಶುದ್ಧ ಮನಸ್ಸು, ಧರ್ಮ, ಹೊಂದಿರಬೇಕು. ಆಡಂಬರ ಪಡಬಾರದೆಂದು ವಿವರಿಸುತ್ತಾನೆ. ಜ್ಞಾನವನ್ನು ಬೋಧಿಸುವುದೇ ತಿರುಕ್ಕುರಳನ ಉದ್ದೇಶವಾಗಿದೆ. ತಿರುಕ್ಕುರಲ್ ಗ್ರಂಥಕ್ಕೆ ಶತಮಾನಗಳ ಹಿಂದೆ ಹತ್ತು ಜನ ವ್ಯಾಖ್ಯಾನ ಬರೆದಿದ್ದಾರೆ. ಮಹಾತ್ಮಗಾಂಧಿ ಇದನ್ನು ತಿಳಿದು ಮನಸಾರೆ ಕೊಂಡಾಡಿದ್ದಾರೆ. ಜರ್ಮನ್ ವಿದ್ವಾಮಸ ಆಲ್ಬರ್ಟ್ ಸ್ವೈಟ್ಸರ್ ಈ ಗ್ರಂಥವು ‘ಜೀವನಕ್ಕೆ ಪ್ರೀತಿ ಮಾರ್ಗವನ್ನು ವಿವರಿಸುವ ಉನ್ನತ ಗ್ರಂಥ, ಉನ್ನತ ಜ್ಞಾನವನ್ನು ಬೋಧಿಸುವ ಸುಭಾಷಿತ ಸಂಗ್ರಹ ಇದಾಗಿದೆ ಎಂದು ಅಭಿಪ್ರಾಯಿಸಿದ್ಧಾನೆ.

೨. ಧರ್ಮದ ಬಗ್ಗೆ ಗಾಢವಾದ ನಂಬಿಕೆಯಿದ್ದ ತಿರುವಳ್ಳುವರ್ ಪರರಿಗೆ ಕೇಡನ್ನು ಬಯಸಬಾರದೆಂದು ತಿಳಿಸಿದ್ದಾನೆ. ಧರ್ಮವೇ ಕೇಡನ್ನು ರಕ್ಷಿಸುತ್ದೆ ಎನ್ನುತ್ತಾನೆ. ಜೀವನ್ನಕ್ಕೆ ಒಳ್ಳೆಯದಾರಿ ಇರಬೇಕು. ಹೆತ್ತ ತಾಯಿಗೆ ಹಸಿವಾದರೂ, ಅದನ್ನು ಹೇಗೆ ಪರಿಹರಿಸಬೇಕು. ಶ್ರೀಮಂತರು ನಿಂದೆಗೆ ಒಳಗಾಗುವಂತೆ ನೀಚ ಕೆಲಸಗಳನ್ನು ಮಾಡಭಾರದು. ಹಿರಿಯರಿಗೆ ಅಸಹಾಯಕರಿಗೆ. ಸಹಾಯ ದಾನ ಮಾಡುವುದು ಒಳ್ಳೆಯದು, ಧರ್ಮ ಮಾರ್ಗ ಅನುಸರಿಸಬೇಕು, ಪ್ರಾಣಕ್ಕಿಂತ ದೃಢತೆ ಇರಬೇಕು, ತಪ್ಪು ದಾರಿಯಲ್ಲಿ ಜೀವನ ನಡೆಸಬಾರದು. ನಿಸ್ಪಕ್ಷಪಾತ, ಯೋಗ್ಯ, ಮೋಕ್ಷ, ದಾರಿದ್ರ್ಯ, ಸನ್ಮಾರ್ಗ, ಉಪಕಾರ, ಕೋಪ, ದುರ್ಬಲರು, ಕ್ರೂರತನ, ಹಿಂಸೆ, ಕೊಲೆ, ಸುಲಿಗೆ ವಿಚಾರಗಳ ಬಗ್ಗೆ ಮೆಲುಕು ಹಾಕಿದ್ದಾನೆ.

೩. ಲೋಕದಲ್ಲಿ ಜೀವನ ವ್ಯಕ್ತಿಲೋಕಜ್ಞಾನ ಕೇಳಿ ತಿಳಿದುಕೊಳ್ಳುವುದು, ಕೆಲವು ವಿದ್ಯೆ ಕಲಿಯದಿರುವುದರ ಬಗ್ಗೆ ತಿಳಿಸಿದ್ದಾರೆ. ಕಲಿತುಕೊಳ್ಳಬೇಕು, ಸನ್ಮಾರ್ಗದಲ್ಲಿ ರಾಜಪ್ರಭುತ್ವದ ಕಾಲದಲ್ಲಿದ್ದರು. ಹಾಗಾಗಿ ನಿರಂಕುಶ ಪ್ರಭುತ್ವದ ಧೋರಣೆ ತಿಳಿದು, ಬುದ್ಧಿವಾದ ತಿಳಿಸುತ್ತಾ, ಜೀವನಕ್ಕೆ ಹಣ ಅಧಿಕಾರ ಅಗತ್ಯ ಎನ್ನುತ್ತಾನೆ, ‘ತಿರುಕ್ಕುರಳ್‌ನಲ್ಲಿ’ ಧನ, ಅರ್ಥ ಇಲ್ಲದವರಿಗೆ ಈ ಲೋಕವಿಲ್ಲ, ದಯೆ, ಅನುಗ್ರಹ ಇಲ್ಲವರಿಗೆ ಆ ಲೋಕ ಇಲ್ಲದಿರುವ ಹಾಗೆ ತಿಳಿಸಿದ್ದಾರೆ. ‘ಹೆಂಡತಿ ಒಳ್ಳೆಯದಾಗಿರಬೇಕು ಇಲ್ಲದೆ ಹೋದರೆ ಗಂಡನ ಗೋಳು ಕೇಳತೀರದು. ಕೆಲವು ಸಂಗತಿಗಳನ್ನು ನಾಟಕೀಯವಾಗಿ ನಿರೂಪಿಸಿದ್ದಾರೆ.

೪. ತಿರುವಳ್ಳವರ್ ಪ್ರೇಮದ ಬಗ್ಗೆ (ಕಾದಲನ್) ಸೋಗಸಾಗಿ ಚಿಂತಿಸಿದ್ಧಾರೆ. ಪ್ರೇಯಸಿ ದೇವತಾ ಸ್ತ್ರೀಯೋ? ನವಿಲೋ? ಆ ಸುಂದರ ಹೆಣ್ಣಿನ ಬಗ್ಗೆ ವರ್ಣಿಸುತ್ತಾ ಅವನು ಅವಳಲ್ಲಿ ಅನುರಕ್ತನಾಗಿದ್ದಾನೆ. ಇಬ್ಬರು ದೂರವಾದ ನಂತರ ಮರೆಯಲು ಸಾಧ್ಯವಾಗದೇ ಶರೀರ ಪ್ರಾಣಕ್ಕಿರುವ ಸಂಬಂಧವೇ ನನ್ನ ಪ್ರಿಯೆಯೊಡನೆ ಇರುವ ಸ್ನೇಹ ಎಂದು ಅವಳ ಅಗಲುವಿಕೆ ನನಗೆ ಸಾವು ತರುತ್ತದೆ. ಪ್ರೀತಿ – ಪ್ರೇಮದ ಬಗ್ಗೆ ಕಲ್ಪನೆ ಇದ್ದರೂ ವಾಸ್ತವದ ಅನುಭವಗಳು ದಟ್ಟವಾಗಿವೆ. ಕಣ್ಣಿಗೆ ಕಾಡಿಗೆ ಹಚ್ಚುವುದಿಲ್ಲ. ಏಕೆಂದರೆ ಕಾಡಿಗೆ ಹಚ್ಚಿದರ ಪ್ರಿಯ ಕಾಣುಸುವುದಿಲ್ಲ. ಆಕೆ ಆತನನ್ನು ಕಣ್ಣಿನ ರೆಪ್ಪೆಯಲ್ಲಿ ಬಂದಿಸಿದ್ದಾಳೆ. ಪೇಮಿಗಳ ರಹಸ್ಯಮಯ ಕುರಿತು ತಾಯಿ ಊರಿನವರಿಂದ ಮಾತುಗಳ ಮುದನೀಡುವುದಿಲ್ಲ. ಹಿರಿಯರು ಪ್ರೇಮಕ್ಕೆ ಭಂಗ ತಂದರೂ ಹೆದರುವುದಿಲ್ಲ ಪ್ರೇಮಿಗಳು. ಪ್ರಿಯ ಹೊರದೇಶಕ್ಕೆ ಕೆಲಸದ ನಿಮಿತ್ತ ಹೋಗಲು ತನ್ನ ಪ್ರೇಯಸಿ ಹತ್ತಿರ ಬಂದಾಗ ಅವಳ ಉತ್ತರ ಹೀಗಿದೆ: ನನ್ನನ್ನು ಅಗಲಿ ಹೋಗುವ ಸುದ್ದಿ ಹೇಳಬೇಡ, ಹೋಗಿ ಬಹುಬೇಗ ಬರುವೆ ಎಂದು ಹೇಳಬೇಡ, ನೀವು ಹಿಂದಕ್ಕೆ ಬರುವುದರೊಳಗೆ ನನು ಜೀವನ ಸಹಿತ ಇರುವುದಿಲ್ಲ. ‘ಅಂಥವರು ಯಾರಾದರೂ ಇದ್ದರೆ ಅವರ ಬಳಿ ಹೇಳು ನನಗೆ ಹೇಳಬೇಡ ಎಂದು ಇಬ್ಬರು ಪರಸ್ಪರ ಬಿಟ್ಟು ಇರಲರದ ಪರಿಸ್ಥಿತಿಯನ್ನು ಕವಿ, ಅಗಲಿಕೆ, ಗಟ್ಟಿ ಮನಸ್ಸು, ಸಂಕಟ, ವಿರಹಗಳ ಬಗ್ಗೆ ವಿವರಸಿದ್ದಾನೆ. ಪ್ರಿಯಕರ ಸಾಯಲು ಬಯಸಿದರೂ ಸಾವು ಬರುವುದಿಲ್ಲ. ಕನಸಿನಲ್ಲಿಯೂ ಪ್ರಿಯ – ಪ್ರಿಯತಮೆ ಜೊತೆಗಿರಲು ಬಯಸುತ್ತಾರೆ. ಬೆಳಗಿನ ಉಪಕಾರ, ಸಂಜೆಯ ಅಪಕಾರ ಬಗ್ಗ, ಅಗಲಿಕೆಯ ಸಂಕಟ ಬೆಳಗ್ಗೆ, ಮದ್ಯಾಹ್ನ, ಸಂಜೆ ಆಕೆಯ ನೋವು ಹೇಳತೀರದು. ಕಾಮವನ್ನು ಕಾಲ್ಪನಿಕತೆಯಿಂದ, ಎಲ್ಲರಿಗೂ ತಿಳಿಯುವಂತೆ ಅನುಭವ ಪೂರ್ಣವಾಗಿ ನಿರೂಪಿಸಿದ್ದಾನೆ.

೫. ಧರ್ಮದ ಬಗ್ಗೆ ಪದೇ ಪದೇ ಚಿಂತಿಸುತ್ತಾನೆ ತಿರುವಳ್ಳುವರ್. ಪರಿಶುದ್ಧವಾದ ಕಾಯಕ, ರಾಜಕೀಯ ಕರ್ತವ್ಯಗಳ ಬಗ್ಗೆ ತಿಳಿಸುತ್ತಾನೆ. ಸಂಪತ್ತನ್ನು ಸಂಗ್ರಹಿಸುವಾಗ ದೋಷ ಇರಬಾರದು. ನಿಂದೆ ಮಾಡಿ ಪಡೆದ ಸಂಪತ್ತು ಬೇಡ, ಶ್ರೀಮಂತರು ದಾರಿದ್ರ್ಯ ಇರಬಾರದು. ಬೇರೆಯವರ ಹಣ ಅಪಹರಿಸ ಬಾರದು. ಹಣಕ್ಕಾಗಿ ವಂಚನೆ ಮಾಡಬಾರದು.

ಉತ್ತಮವಾದ ಪ್ರೇಮಾಂತಕರಣವನ್ನು ಪರಿಶುದ್ಧ ರೂಪದಲ್ಲಿರಲು ತಿರುವಳ್ಳುವರ್ ಬಯಸಿದ್ದರು. ಸಂಗಂ ಸಾಹಿತ್ಯದಲ್ಲಿ ಬರುವ ಐದು ‘ತಿಣೈ’ಗಳನ್ನು ಇಲ್ಲಿ ಗತಾವಲೋಕಿಸಬಹುದು.

ತಿರುವಳ್ಳುವರ್ ಐದು “ತಿಣೈ”ಗಳಲ್ಲಿ ಮರುದಮ್‌ನಲ್ಲಿ ಪ್ರಣಯ, ಕೋಪ ಬಗ್ಗೆ ತಿಳಿಸುತ್ತಾನೆ. ಒಟ್ಟಾರೆ ಐದು ತಿಣೈಗಳ ವಿವರ ಇಂತಿದೆ:

ಐನ್ ತಿಣೈ (ಜಾತಿ) = ಐದು ಜಾತಿಗಳು

ಜಾತಿ ಮುಖ್ಯವಸ್ತು ಸಾಧನವಸ್ತು ಮೂಲವಸ್ತು
೧. ಕುರುಂಚಿ ಬೆಟ್ಟ, ಕಾರ್ತಿಕಮಾಸ ನಟ್ಟಿರುಳು ಹುಲಿ, ಅನೆ, ಗಿಣಿ, ನವಿಲು, ಚಿರತೆ, ಗಂಧ, ಮರ, ಕಾಂದಳ್ ಹೂವು, ಬೇಟೆಯಾಡುವುದು. ಪ್ರೇಮಿಗಳ ಕೂಟ (ಬಹುಮಟ್ಟಿಗೆ ಮದುವೆಗೆ ಮುಂಚಿತ ಗುಪ್ತ ಪ್ರಣಯ ಜೀವನ)
೨. ಮುಲ್ಲೈ ಕಡು, ಆವಣೆ, ಪುಟ್ಟಶಿ ಸಂಜೆ ಜಿಂಕೆ, ನವಿಲು, ಹಸು ಕೊಂದೆ (ಕಕ್ಕೇ)ಕುರುನ್ದು, ಮೊಲ್ಲೆ ಬಳ್ಳಿ (ಯುದ್ಧದ ಕರ್ತವ್ಯಕ್ಕಾಗಿ) ಪ್ರಿಯನು ಅಗಲಿದಾಗ ಪ್ರಿಯೆ ಅವನ ಬರವನ್ನು ಎದುರು ನೋಡುತ್ತಿರುವುದು.
೩. ಮರುದಮ್ ಬಯಲುಕ, ಮುಂಜಾನೆ ಎಮ್ಮೆ, ನೀರ್ ನಾಯಿ, ಮರುದ, ಕಾಂಜಿ (ಮರಗಳು) ತಾವರೆ, ವ್ಯವಸಾಯ ಪರಸ್ತ್ರೀಯೊಡನೆ ಪ್ರಿಯನು ಸ್ನೇಹ ಗೊಂಡಿದ್ದರಿಂದ ಪ್ರಿಯೆ ಮುನಿಸಿ ಕೊಳ್ಳವುದು.
೪. ನೆಯ್ದಲ್ ಸಮುದ್ರತೀರ, ಸಾಯಂಕಾಲ, ಮೀನು, ಹೊನ್ನೆ, ನೆಯ್ದಲ್, ತಾಳೆ, ಮೀನು ಹಿಡಿಯುವುದು, ಉಪ್ಪುಮಾಡುವುದು. ಪ್ರೇಮಿಯ ಅಗಲಿಕೆ ಯಿಂದ ಪ್ರಿಯೆ ನೊಂದು ಬಾಡುವುದು.
೫. ಪಾಲೈ ಬೆಟ್ಟವೂ ಕಾಡೂ ಬೆಳೆ ಸಮೃದ್ಧಿ ಯಿಲ್ಲದೆ ಒಣಕಲಾಗಿರುವುದು ವಸಂತ ನಡು ಹಗಲು ಬಾಡಿದ ಹುಲಿ, ಆನೆ, ಹದ್ದು, ಕಳ್ಳಿ, ಇಪ್ಪೆಮರಾ (ಹಕ್ಕಿ) ಕೊಳ್ಳೆ ಹೊಡೆಯುವುದು. ಹಣದ ಕಾರಣದಿಂದ ಪ್ರಿಯನು ಅಗಲಿದಾಗ ಪ್ರಿಯೆ ವ್ಯಥೆ ಪಡುವುದು

(ತಮಿಳು ಸಾಹಿತ್ಯ ಚರಿತ್ರೆ, ಪುಟ ೩೨)

ಪ್ರೇಮಿ ವೇಶ್ಯೆಯ ಮನೆಗೆ ಹೋಗಿ ಅವಳೊಂದಿಗೆ ಜೀವನ ಮಾಡುವಂತೆ ತಿಳಿಸಲಾಗಿದೆ. ಅವಳಿಂದ ನಿರೀಕ್ಷಿಸಿದ ಪ್ರಣಯ ಸುಖ ಸಿಗದೆ ಅವನು ಪರಿತಪಿಸುವುದನ್ನು ವಿವರಿಸಲಾಗಿದೆ. ಬೇಸರ, ಕೋಪ, ತಾಪದ ಬಗ್ಗೆ ಉಲ್ಲೇಖವಿದೆ. ತಿರುವಳ್ಳುವರ್ ನೃತ್ಯ, ಗೀತ ಸೌಂದರ್ಯ, ಕಲಾ, ವೇಶ್ಯೆಯರ ಮರುದತಿಣಿ ಪ್ರೇಮಗೀತೆ ಬಗ್ಗೆ ತಿಳಿಸುವುದಿಲ್ಲವೆಂದು ಹೇಳಲಾಗಿದೆ. ತಿರುವಳ್ಳುವರ್ ಕ್ರಾಂತಿಕಾರಿಯಾಗಿ ಪರಿವರ್ತಿಸುವ ಮನೋಭಾವ ಹೊಂದಿದ್ದಾನೆ. ಜೂಜು, ಕಳ್ಳತನ, ಬೆಲೆವೆಣ್ಣುಗಳ ಬಗ್ಗೆ ಒಲ್ಲದ ಮನಸ್ಸಿನಿಂದ ತಿರುವಳ್ಳುವರ್ ಪ್ರಯತ್ನಿಸಿದ್ದಾನೆ. ಕಾಮದ ದೃಷ್ಟಿಯಿಂದಲ್ಲ. ಕಲ್ಪನೆಯಲ್ಲಿ ಪ್ರಣಯ, ಕೋಪ, ವಿನೋದದ ಬಗ್ಗೆ ತಿಳಿಸಿದ್ದಾನೆ. ತನ್ನ ಪ್ರಿಯಕರನಿಗೆ ಪ್ರಿಯೆ ಹೀಗೆ ಹೇಳುತ್ತಾಳೆ: “ನೀನು ಪರಸ್ತ್ರೀಯರನ್ನು ಮುಟ್ಟಿರವೆ, ಎಂಜಲು ಎದೆ ನಿನ್ನದು, ನೀನು ಪರಸ್ತ್ರೀ ಸಂಬಂಧವುಳ್ಳವನು ಎಂದು ವಾಡಿಕೆಯನ್ನು ತಿಳಿಸಲಾಗಿದೆ. ಪ್ರಿಯತಮೆ ಮಾತನ್ನು ಬಿಡುವ ಬಗ್ಗೆ ವಿಶ್ಲೇಷಿಸಲಾಗಿದೆ.

೬. ತಿರುವಳ್ಳುವರ್ ಹೊಸದೃಷ್ಟಿಯಿಂದ ಕಾವ್ಯ ರಚಿಸಿದ್ದಾನೆ. ಬಡವರ ದುಃಖ.ದಾರಿದ್ರ್ಯ, ಸಿರಿವಂತರ ಸ್ಥಿತಿ, ಕಷ್ಟ, ನಷ್ಟ, ನಿನ್ನೆಗಳ ಬಗ್ಗೆ ಹೇಳುತ್ತಾನೆ ಇನ್ನೊಬ್ಬರ ಹತ್ತಿರ ದಾಸನಾಗಿ ಬೇಡಬಾರದೆಂದು ತಿಳಿಸುತ್ತಾನೆ.

೭. ಗೃಹಸ್ಥ, ಸಂನ್ಯಾಸ, ಧರ್ಮಗಳ ಬಗ್ಗೆ ಅವುಗಳ ಮಹಿಮೆ ಬಗ್ಗೆ ತಿಳಿಸುತ್ತಾನೆ ಕಪಟ ಸಂನ್ಯಾಸ ಧರ್ಮದ ಬಗ್ಗೆ ವಿವರಿಸಲಾಗಿದೆ. ಕೆಟ್ಟ ಮನಸ್ಸುಗಳು ಕಾಮದ ಕಣ್ಣುಗಳೂ ಬದಲಾಗುಲು ಸೂಚಿಸುತ್ತಾನೆ.

೮. ತಿರುಕ್ಕುರಳ್‌ನಲ್ಲಿ ಧರ್ಮವು ಮಾನವನ ಅಭಿವೃದ್ಧಿ, ಬೆಳವಣಿಗೆಗೆ ಪೂರಕವಾಗಿದೆ. ಗೃಹಸ್ಥ ಧರ್ಮವು ಸಮಾಜವನ್ನು ತಿಳಿಯಾಗಿಸುವುದು, ಸಂನ್ಯಾಸ ಮನೋಧರ್ಮದಲ್ಲಿ ನೆಮ್ಮದಿ, ಸತ್ಯ, ಜ್ಞಾನದಿಂದ ಪರಿಪೂರ್ಣ ಜೀವನ ಕಾಣಬಹುದು, ಗೃಹಸ್ಥ – ಸನ್ಯಾಸ ಎರಡು ಬಹುಮುಖ್ಯ ಲಕ್ಷಣಗಳಲ್ಲದೆ ಜೀವನ ಬೆಳಕಿನ ಕಿರಣಗಳು.

೯. ನೆಚ್ಚಿನ ಮಡದಿ, ಮಕ್ಕಳೊಂದಿಗೆ ಬದುಕಬೇಕು. ನೆಂಟರು ಅತಿಥಿಗಳನ್ನು ಸತ್ಕರಿಸಬೇಕು, ಉಪಕಾರ ಮಾಡಬೇಕೆಂದು ತಿಳಿಸತ್ತಾನೆ.

೧೦. ತಿರುವಳ್ಳುವರ್ ಅವರ ಗಳಿಸಿದ ಆಹಾರವನ್ನು ಹಂಚಿಕೊಂಡು ತಿನ್ನಬೇಕು. ಜೀವಿಗಳನ್ನು ಕಾಪಾಡಬೇಕು. ಅರಿವೇ ಗುರುವು ಬಗ್ಗೆ ತಿಳಿಸುತ್ತಾರೆ. ಸತ್ಯದ ಅರಿವು ಬಗ್ಗೆ ಹೇಳುತ್ತಾರೆ.

ಹೀಗೆ ತಿರುವಳ್ಳುವರ್ ಮಾನವನ ಬದುಕಿಗೆ ಬೇಕಾದ ಉತ್ತಮ ಗುಣ – ಲಕ್ಷಣ, ಪ್ರಸಂಗಳನ್ನು ವಿಶ್ಲೇಷಿಸಿರುವುದು ಭವಿಷ್ಯದ ಜನಜೀವನಕ್ಕೆ ಮಾರ್ಗದರ್ಶಿಯಾಗಿದೆ.