ಆಧುನಿಕ ಕಾಲಘಟ್ಟದ ರಾಜಕಾರಣ, ರಾಜನೀತಿ, ರಾಜಧರ್ಮಗಳನ್ನು ನೋಡಿ ಜನ ಬೆಚ್ಚಿಬೀಳುವುದು ಸಹಜ. ರೌಡಿಗಳಂತೆ, ರಾವಣ, ಕೀಚಕರಂತೆ ಆಧುನಿಕ ರಾಜಕಾರಣಗಳಿಗೆ ನೀತಿ.  ನಡೆತ ಯಾವುದು ಗೊತ್ತಿಲ್ಲ. ಹಿಂದಿನ ತಲೆಮಾರಿನ ಆದರ್ಶಗಳನ್ನು ಪಾಲಿಸುವಲ್ಲಿ, ಸಮಕಾಲೀನರು ವಿಫಲರಾಗಿರುತ್ತಾರೆ. ಈಗಿರುವುದೇ ಜನರ ಪ್ರಭುತ್ವ ಒಳ್ಳೆಯದು. ಹಿಂದೆ ಇದ್ದ ರಾಜಪ್ರಭುತ್ವ ಬೇಡವಾದ ಆಳ್ವಿಕೆಯಗಿದೆ. ತಾನು ಶ್ರೇಷ್ಠ ರಾಜ್ಯ ವಿಸ್ತಾರ, ಸಿಂಹಾಸನಕ್ಕಾಗಿ ಸಂಘರ್ಷ, ಹೋರಾಟ, ವಂಶಾಡಳಿತಗಳನ್ನು ನೋಡಬಹುದು. ಸಿರಿಗೆರೆಯ ಜಗದ್ಗುರು ಡಾ. ಶಿವಮೂರ್ತಿ ಕಾಲಂನಲ್ಲಿ (ಅಂಕಣ) ರಾಜಧರ್ಮ ಮತ್ತು ಪ್ರಜಾಧರ್ಮ (೧೪.೭.೨೦೧೦) ದ ಹೋಲಿಸಿ ನೋಡಿದ್ದಾರೆ. ಅದರಲ್ಲಿ ಮಹಾ ಭಾರತದ ಶಾಂತಿ ಪರ್ವದಲ್ಲಿ ಭೀಷ್ಮನು ಧರ್ಮರಾಯನಿಗೆ ಹೇಳಿದ ರಾಜನೀತಿ ರಾಜಧರ್ಮ ವಿಚಾರ ಗಳು ಇಂತಿವೆ “ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡಿರುವವನು ಕ್ರೋಧವನ್ನು ಜಯಿಸಿರುವವನು, ಶಾಸ್ತ್ರ – ಸಿದ್ಧಾಂತಗಳ ಪರಿಜ್ಞಾನ ಉಳ್ಳವನು, ಧರ್ಮ ಅರ್ಥ – ಕಾಮ – ಮೋಕ್ಷಗಳೆಂಬ ನಾಲ್ಕು ಪುರಷಾರ್ಥಗಳಲ್ಲಿ ತೊಡಗಿರುವವನು ರಾಜನ ಲಕ್ಷಣವಾಗಿತ್ತು ‘ರಾಜನಾದವನು ಯಾರನ್ನು ನಂಬಬಾರದು, ವಿರ್ಶವಾಸಕ್ಕೆ ಪಾತ್ರಾದವರಲ್ಲಿಯೂ ಅತಿಯಾದ ವಿಶ್ವಸವನ್ನು ಇಡಬಾರದು’. ‘ರಾಜನಾದವನು ಯಾವಗಲೂ ಪ್ರಸನ್ನವದನನಾಗಿರಬೇಕು, ಇತರರೊಡನೆ ಮಾತನಾಡುವಾಗ ಹಸನ್ಮುಖಿ ಯಾಗಿರಬೇಕು. ‘ತಂದೆಯ ಮನೆಯಲ್ಲಿ ಹೇಗೆ ಮಕ್ಕಳು ನಿರ್ಭಯವಾಗಿ ಆಡಿಕೊಂಡು ಇರುತ್ತಾರೋ, ಹಾಗೆ ಯಾವ ರಾಜನ ರಾಜ್ಯದಲ್ಲಿ ಪ್ರಜೆಗಳು ನಿರಾತಂಕವಾಗಿ ಜೀವನವನ್ನು ಸಾಗಿಸುತ್ತಾರೋ ಆ ರಾಜನೇ ಶ್ರೇಷ್ಠನು. “ಒಳ್ಳೆಯ ರಾಜನ ಆಡಳೀತದಲ್ಲಿ ಸುಳ್ಳು, ಮೋಸ, ವಂಚನೆ, ಕಳ್ಳತನ ಅಸೂಯೆ ಇರುವುದಿಲ್ಲ’ ರಾಜ್ಯದಲ್ಲಿರುವ ಪ್ರಜೆಗಳನ್ನು ಸಂರಕ್ಷಿಸುವುದೇ ರಾಜನ ಪ್ರಮುಖ ಕರ್ತವ್ಯ, ಇದಕ್ಕಿಂತ ಮಿಗಿಲಾದ ಕರ್ತವ್ಯ ಬೇರೇನೂ ಇಲ್ಲ. ‘ನಿನ್ನ ರಾಜ್ಯದಲ್ಲಿ ಭಿಕ್ಷುಕರು ಇಲ್ಲದಂತಾಗಲಿ, ಕಳ್ಳಕಾರರು ಇಲ್ಲದಂತಾಗಲಿ – ಹೀಗೆ ರಾಜ ಧರ್ಮವನ್ನ ಧರ್ಮರಾಯನಿಗೆ ಭೀಷ್ಮನು ಬೋಧಿಸುತ್ತಾನೆ (ವಿಜಯ ಕರ್ನಾಟಕ ೧೪.೭.೧೦ ಪು. ೬).

ಒಂದೊಂದು ಕಾಲಘಟ್ಟದಲ್ಲಿ ರಾಜನಿಗೆ ರಾಜನೀತಿ, ರಾಜಧರ್ಮವನ್ನು ಬೋಧಿಸಿದ್ದು ಕಂಡು ಬರುತ್ತದೆ. ಬಾಣನ ಕಾದಂರಿಯಲ್ಲಿ ಬರುವ ಯುವರಾಜ ಚಂದ್ರಾಪೀಡನಿಗೆ ಶುಕನಾಸ ಉಪದೇಶ ಮಾಡುತ್ತಾನೆ. ಹಾಗೆಯೇ ಕಲ್ಹಣನ ರಾಜ ತರಂಗಿಣಿಯಲ್ಲಿ ಚಂದ್ರಾಪೀಡನ ಅಧಿಕಾರಿಗಳು ತ್ರಿಭುವನಸ್ವಾಮಿ, ದೇವಾಲಯವನ್ನು ನಿರ್ಮಿಸಲು ಮುಂದಾಗುತ್ತಾರೆ. ಆದರೆ ಅಲ್ಲೊಬ್ಬ ಚರ್ಮಕಾರ ಗುಡಿಸಲಿನಲ್ಲಿ ನೆಲೆಸಿರುತ್ತಾನೆ. ಅಧಿಕಾರಿಗಳೂ ಈ ಗುಡಿಸಲು ಕಿತ್ತು ದೇವಾಲಯ ನಿರ್ಮಿಸಲು ಮುಂದಾದಾಗ ಆತ ಕೀಳಲು ಬೇಡ ಎಂದು ಬೇಡಿಕೊಂಡರು ಬಿಡುವುದಿಲ್ಲ. ಕೊನಗೆ ರಾಜನ ಹತ್ತಿರ ಚರ್ಮಕಾರನನ್ನು ಕರೆದುಕೋಂಡು ಹೋದಾ, ದೇವಾಲಯ ಕಟ್ಟಲು ರಾಜಾಜ್ಞೆಆಗಿರುವುದನ್ನು ಅರಿತ ಚರ್ಮಕಾರ ರಾಜನ ಹತ್ತಿರ ಕರೆದೊಯ್ದಾಗ ಮಹಾರಾಜ, ತಮಗೆ ಅರಮನೆ, ಹೇಗೋ ಹಾಗೆ ನನ್ನ ಗುಡಿಸಲು ನನಗೆ ಅರಮನೆ, ನನ್ನವರಿಗೆ ಅದನ್ನು ನೆಲಸಮ ಮಾಡುವುದನ್ನು ನೋಡಲಾರೆ ಎಂದಾಗ ರಾಜ ಚರ್ಮಕಾರನ ಬೇಡಿಕೆಯನ್ನು ಆಲಿಸಿ ಕೊನೆಗೆ ಈ ಅಭಿಪ್ರಾಯಕ್ಕೆ ತನ್ನ ಅಧಿಕಾರಿಗಳಿಗೆ ಕಟ್ಟುವ ದೇವಲಯವನ್ನು ನಿಲ್ಲಿಸಿ ಪರರ ಭೂಮಿ ಅಪಹರಿಸಿ ಪುಣ್ಯ ಕಾರ್ಯಕ್ಕೆ ಕಳಂಕ ತರಬೇಡಿರಿ ಇಲ್ಲವೆ ಬೇರೆಡೆ ನಿರ್ಮಿಸಿ, ಒಳಿತು ಕೆಡುಕುಗಳನ್ನು ಪರಿಪಾಲಿಸುವರಾದ ನಾವೇ ಧರ್ಮಬಾಹಿರವಾಗಿ ಈ ಭೂಮಿಯಲ್ಲಿ ನಡೆದುಕೊಳ್ಳಬಾರದೆಂದು ತಿಳಿಸುತ್ತಾನೆ. ಇಲ್ಲಿ ರಾಜ ಪ್ರಜಾಧರ್ಮವನ್ನು ಒಪ್ಪುತ್ತಾನೆ. ರಾಜನ ಈ ನೀತಿಯನ್ನು ಕಂಡು ಬೆರೆಗಾದ ಚರ್ಮಕಾರ ಕೊನೆಗೆ ದೇವಸ್ಥಾನಕ್ಕೆ ತನ್ನ ಕೊಟ್ಟಿಗೆ ಜಾಗವನ್ನು ಬಿಟ್ಟುಕೊಟ್ಟು ಪ್ರಜಾಧರ್ಮದ ಸಾರ್ಥಕತೆಯನ್ನು ಗಳಿಸುತ್ತಾನೆ.

ಭಾರತದಲ್ಲಿ ರಾಜನೀತಿಯನ್ನು ಚಾರಿತ್ರಿಕವಾಗಿ ಪ್ರಾಚೀನ ಕಾಲದಿಂದಲೂ ಗುರುತಿಸುತ್ತೇವೆ. ಮೌರ್ಯ, ಶಾತವಾಹನ, ಕುಶಾನ, ಗುಪ್ತರು, ದೆಹಲಿಸುಲ್ತಾನರು, ಮೊಘಲರು, ಬ್ರಿಟಷರು ಹೀಗೆ ತಮಗೆ ಇಷ್ಟಬಂದಂತೆ ಕೆಲವರು ಆಡಳಿತದಲ್ಲಿ ರಾಜಧರ್ಮ – ನೀತಿ ಅನುಸರಿಸಿದ್ದಾರೆ. ಕೌಟಿಲ್ಯ ಮೊದಲಾದರು ಈ ಕುರಿತು ಚಿಂತಿಸಿದ್ದಾರೆ. ಬ್ರಿಟಿಷರು ಭಾರತದಲ್ಲಿ ಅನುಸರಿಸದ ‘ಒಡೆದು ಆಳುವ ನೀತಿ’ ಅವರಿಗೆ ಆಡಳಿತದ ರಾಜನೀತಿಯಾಗಿತ್ತು. ಭಾರತದಲ್ಲಿ ಒಡೆದು ಆಳುವ ನೀತಿಯನ್ನು ಜಾರಿಗೆ ತಂದರು, ತಾವೇ ಅದರ ನೇತಾರರಾದರು. ಆಗಿನ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ ಮುನ್ನಡೆಯನ್ನು ಬ್ರಾಹ್ಮಣರು ವಹಿಸಿಕೊಂಡಿದ್ದರು. ಬ್ರಾಹ್ಮಣರು ಬ್ರಿಟಿಷರ ಪರವಾಗಿದ್ದರೆಂದು ತಿಳಿಸಲಾಗಿದೆ. ಬ್ರಾಹ್ಮಣೇತರರು ಒಗ್ಗಟ್ಟಾಗಿ ಸಂಘಟನೆ ಗೊಂಡರು, ಮಹಾತ್ಮಗಾಂಧಿ, ಹಳ್ಳಿಗಳಿಗೆ ೧೯೨೦ರಲ್ಲಿ ಬಂದಾಗ ಬ್ರಾಹ್ಮಣೇತರರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲು ಆಹ್ವಾನಿಸಿದರು. ಆಗ ಪ್ರತಿಯೊಂದು ಜಾತಿ – ವಂಶಗಳಿಗೂ ಸಂವಿಧಾನಬದ್ಧ ಸೌಲಭ್ಯಗಳನ್ನು ಪರಿಚಯಿಸಿದರು.

ಭಾರತಕ್ಕೆ ಸ್ವಾತಂತ್ರ್ಯ ಬರುವ ಪೂರ್ವದಲ್ಲಿ ರಾಜಪ್ರಭುತ್ವ ಇತ್ತು. ಆನಂತರ ಪ್ರಜಾಪ್ರಭುತ್ವ, ಗ್ರಾಮಸ್ವರಾಜ್ಯ, ಗ್ರಾಮೀಣ ಕೈಗರಿಕೆಗಳ ಪುನರುಸ್ಥಾನ, ಕಲ್ಯಾಣ ರಾಜ್ಯದ ಕಲ್ಪನೆ, ಸರ್ವೋದಯ ಕಲ್ಪನೆ, ಗಾಂಧಿತತ್ವ, ಶಿಕ್ಷಣ ವ್ಯವಸ್ಥೆ ಮೊದಲಾದವು ಇದ್ದವು. ಬ್ರಿಟಿಷರು ಭಾರತವನ್ನು ಬಿಟ್ಟು ಹೋದಮೇಲೆ, ಭಾರತೀಯರು ಕಲ್ಯಾಣ ರಾಜ್ಯದ ಕಲ್ಪನೆಯನ್ನು ಹೊಂದಿದ್ದರು. ಅದು ಸಾಕಾರಗೊಳ್ಳಲಿಲ್ಲ.

ರಾಮನಾಥ ಚರಿತೆಯಲ್ಲಿ ‘ರಾಜನೀತಿ’ಯ ಪ್ರಸ್ತಾಪವಿದೆ. ರಾಜಕುಮಾರನಿಗೆ ಆಸ್ತ್ರ – ಶಸ್ತ್ರಗಳ ತರಬೇತಿಯಲ್ಲದೆ “ರಾಜನೀತಿಯ’ಯನ್ನು ತಿಳಿಸುತ್ತಿದ್ದರು. ರಾಜನು ಎಷ್ಟೇ ಸಮರ್ಥವಾಗಿದ್ದರೂ, ಶಕ್ತಿವಂತನಾಗಿದ್ದರೂ, ಬುದ್ಧಿಬಲ ಇರುವುದು ಅನಿ ವಾರ್ಯವಾಗಿತ್ತು. ರಾಜ ಆಂತರಿಕ – ಬಾಹ್ಯಸಂಬಂಧ, ಆಡಳಿತವನ್ನು ನಿರ್ವಹಿಸಲು ವಿದ್ಯಾರ್ಥಿ ಹಂತದಿಂದಲೇ ವಿದ್ಯಾಭ್ಯಾಸ ಕೊಡಲಾಗುತ್ತಿತ್ತು. ತಂದೆ – ತಾಯ, ಹಿರಿಯರು, ಮಂತ್ರಿ ವರ್ಗಮೊದಲಾದವರು ರಾಜಕುಮಾರನಿಗೆ ವಿದ್ಯೆಯನ್ನು ಕಲಿಸುತ್ತಿದ್ದರು.

ನಂಜಂಡ ಕವಿಯ ವಿರಚಿತ ‘ರಾಮನಾಥ ಚರಿತೆ’ಯಲ್ಲಿ ಹರಿಹರದೇವಿ ಕುಮಾರರಾಮನಿಗೆ ರಾಜನೀತಿಯನ್ನು ಬೋಧಿಸುತ್ತಾಳೆ. ಕುಮಾರರಾಮ ಅರಮನೆಯಲ್ಲಿ ರಾಜಕಾರ್ಯಗಳನ್ನು ಬಿಟ್ಟು ಚೆಂಡಾಟ ಆಡಲು ಮುತ್ತಿನ ಚೆಂಡನ್ನು ತೆಗೆದುಕೊಳ್ಳಲು ಹೋದಾಗ ಹರಿಹರದೇವಿ ಹೀಗೆ ಹೇಳುತ್ತಾಳೆ. ವೈರಿಗಳ ಬಗೆಗೆ ಸಂಪೂರ್ಣ ಎಚ್ಚರದಿಂದಿರಬೇಕು. ಮಕ್ಕಳಾಟ ಬಿಟ್ಟು ಮಂದಿಯ ಕಡೆ ಗಮನಕೊಡು, ಕುದುರೆ ಸವಾರಿ ಮಾಡು, ಸೈನಿಕರನ್ನು, ಭಟರನ್ನು ಸರಿಯಾಗಿ ನೋಡಿಕೊಳ್ಳಬೇಕು. ನೆಂಟರು – ದಾಯಾದಿಗಳೊಂದಿಗೆ  ವಿರಸ – ನೋವು ಬೇಡ, ಕೆಟ್ಟವರನ್ನು ದೂರವಿಡು, ಕೋವಿದ – ಮಾತಾಪಿತೃಗಳೊಡನೆ ಹೇಗೆ ನಡೆದುಕೊಳ್ಳಬೇಕೆಂದು ತಿಳಿಸುತ್ತಾಳೆ, ಜಾತಿ – ಧರ್ಮ ಎಂದೆಣಿಸದೆ ಎಲ್ಲರಿಗೂ ಸಮಾನವಾಗಿ ನಡೆದುಕೋ, ಸಂಗ್ರಾಮದಲ್ಲಿ ಭಯ – ಭೀತಿ ಆಗಬೇಡ, ವಿಶ್ವಾಸಘಾತಕರನ್ನು ನಂಬಬೇಡ. ವಿನಯದಿಂದ ನಡೆದುಕೋ ಕುಮ್ಮಟದುರ್ಗ ಹೊಸಮಲೆದುರ್ಗಕ್ಕೆ ನೆಮ್ಮದಿಯನ್ನುಂಟುಮಾಡು. ತುರುಕರ ಬಗ್ಗೆ, ಬೇಹುಗಾರರ ಮಾತುಗಳ ಬಗ್ಗೆ ಎಚ್ಚರಿಕೆಯಿಂದ ಲಕ್ಷಿಸುವುದು. ಎಂಥ ಕಷ್ಟ ಬಂದರೂ ದುರ್ಗವನ್ನು ಬಲಿಕೊಡದೆ ರಕ್ಷಿಸಬೇಕು. ಮಂತ್ರಿ ಮೊದಲಾದವರೊಡನೆ ಕಾರ್ಯ ನಿರ್ವಹಿಸಬೇಕು. ಹೀಗೆ ರಾಜನೀತಿಯನ್ನು ಹರಿಹರದೇವಿ ಹೇಳುತ್ತಾ – ‘ಕುಂತಿ ಮಾತು ಕೇಳದೆ ಜೂಜಾಟವಾಡಿದ ಪಾಂಡವರಿಗೆ ಬಂದ ವನವಾಸವನ್ನು, ಬಂಧು – ಬಾಂಧವರಲ್ಲಿ ಕದನ ಬೇಡವೆಂದು ಗಾಂಧಾರಿಯ ಮಾತು ಮೀರಿದ್ದರಿಂದ ಕೌರವರಿಗೆ ಬಂದೊದಗಿದ ವಿನಾಶವೇನು? ಹಮ್ಮಿನಿಂದ ರಾಮನು ಕಾಂಚನಮೃಗ ಬೆನ್ನಟ್ಟಿ ತೊಂದರೆಗೊಳಗಾದ ಬಗೆಯನ್ನು’ ತನ್ನ ರಾಜನೀತಿಯಲ್ಲಿ ತಿಳಿಸುತ್ಥಾಳೆ. ಅರಸನ ದಕ್ಷತೆ, ಎಚ್ಚರ, ಸಂಯಮ, ವೃದ್ಧಿಗಲಿಂದ ಆದರ್ಶನಾಗುವ ಎಲ್ಲ ಲಕ್ಷಣಗಳು ರಾಜನಲ್ಲಿರುತ್ತಿದ್ದವು. ರಾಜನೀತಿ ಕಲಿಯುವುದು ಅವಶ್ಯಕವಾಗಿತ್ತು (ರಾಮನಾಥ ಚರಿತೆ, ಸಾಂಸ್ಕೃತಿಕ ಅಧ್ಯಯನ, ೨೬೬ – ೬೭).

ರಾಜನೀತಿಯಲ್ಲಿ ಪ್ರಮುಖವಾಗಿ ಈ ಸಂಗತಿಗಳು ನಿರ್ಣಾಯಕವಾಗಿವೆ; ಅರಸನ ಹಿರಿಮೆ, ಶಿಕ್ಷಣ, ಅವಿದ್ಯೆ, ಕೇಳುವಿಕೆ, ಅರಿವು, ತಪ್ಪುತಿದ್ದಿಕೊಳ್ಳುವುದು, ಹಿರಿಯರ ಆಶ್ರಯ, ನೀಚರ ಸಹವಾಸ ಮಾಡದಿರುವುದು, ತಿಳಿದು ವರ್ತಿಸುವ ಬಗೆ, ಬಲದ ಅರಿವು, ಕಾಲದ ಪರಿಜ್ಞಾನ, ಸ್ಥಳ ಪರಿಜ್ಞಾನ, ಅರಿತು ನಂಬುವ ಬಗೆ, ಅರಿತು ಕಾಯಕ್ಕೆ ನೇಮಿಸುವುದು, ಬಂಧುಗಳನ್ನು ಆದರಿಸುವಿಕೆ, ಮರೆಯದಿರುವಿಕೆ, ನ್ಯಾಯಾಡಳಿತ, ಕ್ರೂರಾಡಳಿತ, ಭೀತಿ ನಿವಾರಣೆ, ಕರುಣೆಯ ದೃಷ್ಟಿ, ಬೇಹುಗಾರಿಕೆ, ಸಾಮರ್ಥ್ಯನಾಗಿರುವುದು, ಆಲಸ್ಯ ಇಲ್ಲದಿರುವಿಕೆ, ಪುರಷ ಯತ್ನ ಪಡೆದಿರುವುದು, ಆಪತ್ತಿನಲ್ಲಿ ಸ್ಥೈರ್ಯದ ಬಗ್ಗೆ ಅವಲೋಕಿಸಬಹುದಾಗಿದೆ. ಪ್ರಾಚೀನ ಕಾಲದಲ್ಲಿ ಈ ಬಗೆಯ ಲಕ್ಷಣಗಳಿದ್ದವು. ಮುಂದುವರೆದು ಮಂತ್ರಿ, ಮಾತು, ಕಾರ್ಯ ಕೆಲಸ, ರಾಯಭಾರ, ರಾಜ ಮಂತ್ರಿ ಸಂಬಂಧ, ಸಭೆ ಪರಿಜ್ಞಾನ, ಸಂಕೇತ ಪ್ರಜ್ಞೆ, ನಾಡು, ಕೋಟೆ, ಸ್ನೇಹ, ಸಲಿಗೆ, ಕೆಟ್ಟ ಸ್ನೇಹ, ದಡ್ಡತನ, ಹಗೆತನ, ಜೂಜು, ಮದ್ದು, ವೇಶಾಸ್ತ್ರೀಯರು, ಹೆಣ್ಣಿನ ಮಾತು ಕೇಳುವ ಗಂಡಸರು, ಹಿರಿಯರಿಗೆ ಕೊಡುವ ಗೌರವ ಮೊದಲಾದ ವಿಷಯಗಳು ರಾಜನೀತಿಯಲ್ಲಿ ಕಂಡುಬರುತ್ತವೆ.