ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ತಿರುಕ್ಕುರಳ್ ಎಂಬ ಗ್ರಂಥವನ್ನು ತಿರುವಳ್ಳುವರ್ ನಿಂದ ರಚನೆಯಾಯಿತು. ತಮಿಳರ ಆದಿ ಗ್ರಂಥವಾಗಿರುವ ಈ ಕೃತಿಯು ವಿಶ್ವಮಾನವ ಸಂದೇಶವನ್ನು ಸಾರುತ್ತದೆ. ಇದರಲ್ಲಿ ದೇಶ, ಭಾಷೆ, ಜಾತಿ, ಮತ, ಪಂಥಗಳನ್ನು ಹೊರತುಪಡಿಸಿದ್ದು, ವಿಚಾರ, ವಿವೇಕ ಪರ ಲಕ್ಷಣಗಳಿಂದ ವೇಕ್ಕೆ ಸಲುವಾಗಿ ಇದನ್ನು ಕಾಣಲಾಗಿದೆ. ಲೌಕಿಕ – ಅಲೌಕಿಕ, ಆಸ್ತಿಕ – ನಾಸ್ತಿಕ ಬಹುಧರ್ಮ, ಸಂಸ್ಕೃತಿಗಳನ್ನೊಳಗೊಂಡಿದೆ ಬುದ್ಧಿಜೀವಿ, ತತ್ವಜ್ಞಾನಿ ಮೊದಲಾದವರು ಇದನ್ನು ಅಧ್ಯಯನ ಮಾಡಿ ಚರ್ಚಿಸಿ, ಜಗತ್ತಿಗೆ ಮಾದರಿಯಾಗಿ ನಿರೂಪಿಸಿದ್ದಾರೆ.

ಪ್ರಸ್ತುತ ಕೃತಿಯಲ್ಲಿ ತಿರುವಳ್ಳುವರ್ ಮೂರು ಸಂಗತಿಗಳನ್ನು ಪ್ರಧಾನವಾಗಿ ವಿಶ್ಲೇಷಿಸಿದ್ಧಾರೆ. ಅವುಗಳೆಂದರೆ ಧರ್ಮ, ಅರ್ಥ ಮತ್ತು ಕಾಮ, ಮಾನವ ತನ್ನ ಮೃಗೀಯ ವರ್ತನೆಯಿಂದ ನಾಗರಿಕನಾದ ಮೇಲೆ ಸಮಾಜದಲ್ಲಿ ಹೀಗೆ ಬದುಕಬೇಕು ಎಂಬ ಸಂದೇಶವನ್ನು ಇದು ಸಾರುತ್ತದೆ. ಇಲ್ಲಿ ವ್ಯಕ್ತಿಯ ಬಯಕೆ, ಆಸೆ, ಭೋಗ, ಸಮೃದ್ಧತೆ, ಸಂಪತ್ತು, ರಾಜ್ಯ ಸಾಮಾಜಿಕ ವ್ಯವಸ್ಥೆಗಳಲ್ಲಿ ತುಂಬಿರುವ ಸ್ವಾರ್ಥಗಳ ಬಗ್ಗೆ ಹೇಳಲಾಗಿದೆ. ಹಾಗೆಯೇ ಒಬ್ಬ ಮನುಷ್ಯ ಉತ್ತಮವಾಗಿ ಇರಲು ಬೇಕಾದ ಲಕ್ಷಣಗಳನ್ನು ತಿಳಿಸಿದ್ದಾನೆ, ನಿಸ್ವಾರ್ಥ, ನಿರಾಸೆ, ನಿರ್ಮೋಹ ಗೆಳತಿ ಪರೋಪರಕಾರ ಶಾಂತಿ, ನೆಮ್ಮದಿಗಳ ಬಗ್ಗೆ ವಿವರಿಸಿದ್ದಾನೆ. ತಿರುವಳ್ಳುವರ್ ಮಹರ್ಷಿಯಾಗಿ ಆದಿಕವಿ, ದೇವಕವಿಯಾಗಿ ಜನರಿಂದ ದೊಡ್ಡ ಹೆಸರು ಪಡೆದಿದ್ದಾನೆ.

ತಿರುವಳ್ಳುವರ್ ತನ್ನ ವಿಚಾರಗಳನ್ನು ರಾಜಪ್ರಭುತ್ವದೊಂದಿಗೆ ಹಂಚಿಕೊಂಡಿದ್ದಾನೆ.

ಆ ಮೂಲಕ ನಾವು ಪ್ರಜಾಪ್ರಭುತ್ವಕ್ಕೆ ಅನ್ವಯಿಸಿ ಮಾತನಾಡಬೇಕಿದೆ.

೧. ರಾಜನು ಸಾಕ್ಷಾತ್ ದೇವಸ್ವರೂಪಿ ಎನ್ನುವಾಗ ಶೋಷಣೆ ಇರುವುದನ್ನು ಗುರುತಿಸಬಹುದು. ರಾಜದೇಶದ ಶಿರಫಮಣಿ, ಪ್ರತ್ಯಕ್ಷ ದೈವ, ಸತ್ಯ, ಸಂಪನ್ನ ಸುಗುಣ, ಸುಸ್ಥಿತಿ, ಸುಭೀಕ್ಷೆಯಿಂದ ಇರುವವನೆಂದು ತಿಳಿಸುತ್ತಾ, ರಾಜ ಹೇಗೆ ಇರುತ್ತಾನೆ ಪ್ರಜೆಗಳು ಹಾಗೆಯೇ ಇರುತ್ತಾರೆ ಎನ್ನುತ್ತಾನೆ. ಪ್ರಜೆಗಳಿಗೆ ರಾಜ ಮಾರ್ಗದರ್ಶಿ ಮತ್ತು ರಾಜಧರ್ಮದಕ್ಕೆ ಅನುಗುಣವಾಗಿರುಬೇಕು, ರಾಜ ಧರ್ಮಕ್ಕೆ ಗೌರವಿರಬೇಕು, ಹಾಗಾದರೆ ಮಾತ್ರ ದಂಡಾಧಿಕಾರಿ, ಆಳಿತಾಧಿಕಾರಿ ಹಾಗೂ ಸೇವಕರು ಪ್ರಾಮಾಣಿಕ. ರಾಜನ ಪರಮ ಕರ್ತವ್ಯವೆಂದರೆ ಪ್ರಜೆಗಳನ್ನು ಸುಖವಾಗಿ ಇಡುವುದು. ಧರ್ಮದ ನೆರಳಲ್ಲಿ ಸೈನ್ಯ ಹೊಂದಿ, ದೇಶಪ್ರೇಮವಾಗಿ ಸಂಪತ್ತನ್ನು ವಿನಿಯೋಗದ ಬಗ್ಗೆ ಪರಿಜ್ಞಾನ ಹೊಂದಿರಬೇಕು. ರಾಜನು ಕೀರ್ತಿ, ಜಯ, ಯಶಸ್ಸುಗಳಿಸಲು ಬೇರೆ ರಾಜರಿಗಿಂತ ಹೆಚ್ಚಿನ ಗೌರವಕ್ಕೆ ಪಾತ್ರನಾಗುತ್ತಾನೆ. ಹಣದ ಖರ್ಚು ಕರ್ತವ್ಯದಲ್ಲಿ ಪ್ರಜೆಗಳಿಗೆ ಹೆಚ್ಚಿನ ವಿವೇಕ ಇರಬೇಕು. ರಾಜನಿಗೆ ವಿವೇಕ, ಜಾಗರೂಕತೆ, ಆದಾಯ, ಖಜಾನೆ, ಹಣದ ಖರ್ಚು ಕಳ್ಳಕಾಕರು, ಬಗ್ಗೆ ಮೊದಲಾದ ವಿನಿಯೋಗಗಳ ಬಗ್ಗೆ ಸಂಗತಿಗಳ ಬಗ್ಗೆ ಎಚ್ಚರಿಕೆ ಇಟ್ಟು ಪ್ರಜೆಗಳ ಕಲ್ಯಾಣವೇ ಅಂತಿಮವಾಗಿರಬೇಕು.

೨. ರಾಜನಿಗೆ ಆಳ್ವಿಕೆ ಮಾಡುವಾಗ ನೆಲೆಯ ವಾಸ್ತು ಅಷ್ಟೇ ಮುಖ್ಯ ಯುದ್ದದಲ್ಲಿ ವೈರಿಗಳನ್ನು ಸೋಲಿಸಲು ಬೇಕಾದ ಸ್ಥಳ ಅಗತ್ಯ. ಅದೇ ರೀತಿ ತನ್ನ ಸುರಕ್ಷತೆ, ರಾಜಧಾನಿ, ಕೋಟೆ, ಅರಮನೆ ನಿರ್ಮಾಣದಲ್ಲಿಯೂ ರಾಜ ರಕ್ಷಣಾತ್ಮಕ ನಿರ್ಣಯಗಳನ್ನು ಕೈಗೊಳ್ಳಬೇಕು.

೩. ರಾಜನು ಹೇಗಿರಬೇಕೆಂದು ಹೇಳುವಾಗ ಹುಟ್ಟುಗುಣಗಳೊಂದಿಗೆ ಕೆಲವನ್ನು ಕಲಿಯಬೇಕು. ನೀತಿ. ನಿರ್ಭಯತೆ, ನೈಜತೆ, ನಿಧಾನ, ನಿಪುಣತೆ, ನಿಮಿತ್ತತೆ, ನಿಯತ್ತು, ನಿರಾಡಂಬರ, ನಿರಾತಂಕ, ನಿರ್ಣಾಯಕವಾಗಿರಬೆಕು. ಅಧರ್ಮ, ಅನ್ಯಾಯ ಅತ್ಯಾಚಾರಗಳನ್ನು ತಡೆಗಟ್ಟಬೇಕು. ವೀರ, ಶೂರ, ಧೈರ್ಯ, ಪರಾಕ್ರಮ ಶಾಲಿಯಾಗಿ ಉತ್ತಮ ನಡತೆ ರೂಪಿಸಿಕೊಳ್ಳಬೇಕು. ತಾಳ್ಮೆ, ಶಾಂತಿ, ವಿವೇಚನೆ, ವಿದ್ಯಾಸಂಪನ್ನ, ಶಾಸ್ತ್ರ ಪರಿಣಿತ, ವೇದಕಲಿತು, ಧರ್ಮ _ ಶಾಸ್ತ್ರಗ್ರಂಥಗಳನ್ನು ಅಭ್ಯಾಸ ಮಾಡಿರಬೇಕು. ರಾಜ ಅನುಭವಿ ಮತ್ತು ಅನುಭಾವಿಯಾಗಿರಬೇಕು. ಪಂಚೇಂದ್ರಿಯಗಳ ನಿಗ್ರಹ, ಆತ್ಮ ಸಂಯಮ, ತತ್ವಜ್ಞಾನಿಯಾಗಿ, ತಿಳುವಳಿಕೆ ಹೊಂದಿರಬೇಕು. ಅಹಂಕಾರ ದ್ರೋಹಿಯಾಗಿರಬಾರದು. ಮೊದಲು ರಾಜ ತಪ್ಪು ಮಾಡಬಾರದು. ಪ್ರಜೆಗಳಿಗೆ ತಪ್ಪಿನ ಅರಿವು ತಿಳಿಸಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸಬೇಕು. ಆಗ ರಾಜ ಶ್ರೇಷ್ಠನಾಗಿದ್ದರೆ ಯಾವುದೇ ಅಪಖ್ಯಾತಿ ರಾಜನಿಗೆ ಬರುವುದಿಲ್ಲ. ಎಲ್ಲ ಬಲ್ಲವರ ತಿಳಿದವರ ಸಲಹೆಯನ್ನು ರಾಜ ಪಡೆಯಬೇಕು. ಜನಸಾಮಾನ್ಯರ ಬಳಿ ರಾಜ ಬಂದು ಕಷ್ಟ – ಸುಖಗಳನ್ನು ವಿಚಾರಿಸಬೇಕು. ಜನರು ರಾಜನ ಬಳಿ ಮುಕ್ತವಾಗಿ ಭೇಟಿ ಮಾಡಿ ತಮ್ಮ ಸಂಕಷ್ಟಗಳನ್ನು ತಿಳಿಸಬೇಕಿತ್ತು. ಒಳ್ಳೆಯ ವರನ್ನು ಪ್ರೋತ್ಸಾಹಿಸಿ ಕೆಟ್ಟವರನ್ನು ಶಿಕ್ಷಿಸಿ, ಪ್ರಜೆಗಳ ಪಾಲನೆ ಮಾಡುವುದು ರಾಜನ ಕರ್ತವ್ಯವಾಗಿತ್ತು.

೪. ರಾಜನು ದಯೆ, ಕರುಣೆ, ಕಷ್ಟದಲ್ಲಿರುವವರಿಗೆ ಸಹಾಯ ಸಾಂತ್ವನದೊಂದಿಗೆ ರಾಜಧರ್ಮವನ್ನು ಅನುಸರಿಸಬೇಕು. ರಾಜನು ಶಿಕ್ಷೆ. ಗೌರವ, ಬಹುಮಾನ, ಉಡುಗೊರೆ ಇತ್ಯಾದಿಗಳನ್ನು ಕೊಡುವ ಅಧಿಕಾರ ರಾಜನಿಗಿತ್ತು. ಆದರೂ ಇತಿ – ಮಿತಿಗಳೊಂದಿಗೆ ರಾಜನ ಹತ್ತಿರ ಅಂತರ ಕಾಪಾಡಿಕೊಳ್ಳುವುದು ಹೆಚ್ಚು ಸೂಕ್ತ.

೫. ಪ್ರಾಚೀನ ಕಾಲದಲ್ಲಿ ತನ್ನ ರಾಜ್ಯದ ಕಲ್ಪನೆ ಇತ್ತು. ಅಲ್ಲಿ ರಾಷ್ಟ್ರ, ದೇಶ, ಭಾಷೆ, ನಾಡು – ನುಡಿ ಇತ್ಯಾದಿ ಸಂಕೀರ್ಣ ಸಂಗತಿಗಳ ಬಗ್ಗೆ ತಲೆಕೆಡೆಸಿಕೊಂಡಿಲ್ಲ. ಭೂಮಿ, ನೀರು ಇದ್ದು ವ್ಯವಸಾಯ ಮಾಡಬೇಕು. ಮಳೆನೀರನ್ನು ಬಳಸಿಕೊಂಡು ಉತ್ತಮ ಫಸಲನ್ನು ಪಡೆಯಬೇಕು. ಕೆರೆ, ಕಾಲುವೆ, ಸರೋವರ, ಕಣಿವೆ, ನದಿ ಬಾವಿ, ಕುಂಟೆಗಳಲ್ಲಿ ಸದಾ ನೀರು ಇರುವಂತೆ ರಾಜ ಕ್ರಮ ವಹಿಸಬೇಕಿತ್ತು. ಬೆಟ್ಟ, ಗುಡ್ಡ, ಅರಣ್ಯಪ್ರದೇಶ, ಪ್ರಾಣಿ – ಪಕ್ಷಿಗಳಿದ್ದರೆ ಆರ್ಥಿಕವಾಗಿ ರಾಜ್ಯ ಅಭಿವೃದ್ಧಿಯಲ್ಲಿತ್ತು. ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಜನರಿಂದ ಮಾಡಿಸ ಬೇಕು. ರಾಜ್ಯದಲ್ಲಿ ಕ್ಷಾಮ, ಡಾಮರ, ರೋಗ – ರುಜಿನಗಳೂ ಬಂದರೆ ಗುಣಪಡಿಸ ಬೇಕು. ಕೃಷಿಗೆ ಹೆಚ್ಚಿನ ಆದ್ಯತೆ ಇತ್ತು. ಇದರಿಂದ ಆದಾಯ ಉತ್ಪತ್ತಿಯನ್ನು ಸದುಪಯೋಗದಿಂದ ವಿನಿಯೋಗಿಸಬೇಕು. ಜನರಿಗೆ ಲಾಭದಾಯಕವಾಗಿ ಬೆಳೆದ ಬೆಳೆಗೆ ಬೆಲೆ ಸಿಗಬೇಕು. ರಾಜ್ಯದಲ್ಲಿ ಪ್ರಕೃತಿ ವಿಕೋಪ, ಅತಿವೃಷ್ಟಿ, ಅನಾವೃಷ್ಟಿ, ಕ್ಷಾಮ ಡಾಮರ ಯುದ್ಧಗಳು ಸಂಭವಿಸಿದರೆ ಮುಂಜಾಗ್ರತ ಕ್ರಮವನ್ನು ರಾಜ ವಹಿಸಬೇಕು. ರಾಜ, ಮಂತ್ರಿ, ಆಡಳಿತಗಾರರು ಈ ಬಗ್ಗೆ ಜವಾಬ್ದಾರಿ ಯಿಂದ ಪರಿಹರಿಸಬೆಕು. ರಾಜ್ಯದಲ್ಲಿ ಪಕ್ಷ, ಗುಂಪು, ಸಂಘಟನೆ, ಒಳಗುಂಪು ವಿವಾದ, ಗೊಂದಲ, ಶತ್ರುಗಳಿದ್ದರೂ, ಅನೈತಿಕ ಚಟುವಟಿಕೆ ನಡೆಸಿ ರಾಜದ್ರೋಹ, ರಾಷ್ಟ್ರದ್ರೋಹ ಮಾಡಿದರೆ ರಾಜನು ಅಧಿವೇಶನದಲ್ಲಿಟ್ಟು ಕೊಂಡು ಜಾಣ್ಮೆಯಿಂದ ಪರಿಹರಿಸಬೇಕು. ದಂಗೆ, ಜಗಳ, ಗಲಟೆ, ಸಂಘರ್ಷ ನಡೆಯಲು ಆಂತರಿಕವಾಗಿ ರಾಜ ಅವಕಾಶ ಕೊಡಬಾರದು. ಒಳ್ಳೆಯ ಪ್ರಜೆಗಳು ಕೆಟ್ಟ ಜನರಿಂದ ತೊಂದರೆ ಅನುಭವಿಸಬಾರದು. ಬಾಹ್ಯ ಶತೃಗಳನ್ನು ನಿಭಾಯಿಸ ಬೇಕು. ಜನರ ಜೀವನ್ನಕ್ಕೆ ರಾಜ ಸಕಲ ಸವಲತ್ತುಗಳನ್ನು ಮಾಡಬೇಕಿತ್ತು.

ರಾಜ ಮಳೆ ನೀರನ್ನು ಸಂಗ್ರಹಿಸಲು ಬಾವಿ, ಕೆರೆ, ಕಟ್ಟೆಗಳನ್ನು ನಿರ್ಮಿಸಬೇಕು. ಆ ನೀರನ್ನು ಕೃಷಿಗೆ ಬಳಸಿಕೊಂಡು ಹೆಚ್ಚಿನ ಫಸಲನ್ನು ಬೆಳೆಯಬೇಕು. ಆಗ ರಾಷ್ಟ್ರ ಅಭಿವೃದ್ಧಿ ಹೊಂದುತ್ತದೆ.

ಒಂದು ರಾಜ್ಯ ಅಥವಾ ರಾಷ್ಟ್ರ ಒಳ್ಳೆಯದು ಎಂದು ಅನ್ನಿಸಿಕೊಳ್ಳಬೇಕಾದರೆ ಅಲ್ಲಿನ ಜನರು ಯಾವುದೇ ಬಗೆಯ ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗದೆ, ದೃಢಕಾಯ, ನಿಶ್ಚಲಮನಸ್ಸುಗಳ ಆರೋಗ್ಯವಂತರಾಗಬೇಕು. ಪ್ರಾಕೃತಿಕ ಸಂಪತ್ತನ್ನು ಬಳಸಿಕೊಂಡು ರಾಜ್ಯದ ಸಂಪತ್ತನ್ನು ಅಭಿವೃದ್ಧಿಪಡಿಸಬೇಕಕು. ರಾಜ್ಯದಲ್ಲಿ ಕ್ಷಾಮ, ಡಾಮರ, ದುಃಖ, ದಾರಿದ್ರ್ಯಗಳಿಗೆ ಜನರು ಬಲಿಯಾಗದಂತೆ ರಾಜ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಪ್ರಜೆಗಳು ಬಾಹ್ಯ ಹಾಗೂ ಆಂತರಿಕ ಶತ್ರುಗಳಿಂದ ಹೆದರದೆ, ಭಯಪೀಡಿತರಾಗದೇ ನೆಮ್ಮದಿಯಿಂದ ಇರಬೇಕು. ರಾಜ್ಯದಲ್ಲಿ ಕಳ್ಳ – ಕಾಕರ ಹಾವಳಿ, ಶತ್ರಗಳ ಬಾಧೆ ಇರಬಾರದು. ಪ್ರಜೆಗಳಿಗೆ ನ್ಯಾಯದ ರಕ್ಷಣೆ ಇರಬೇಕಿತ್ತು. ಈ ಮೇಲಿನ ಐದು ಸಂಗಿತಿಗಳು ಸಂವಿಧಾನಬದ್ಧವಾಗಿದ್ದು, ರಾಜಪ್ರಭುತ್ವ ಶ್ರೇಷ್ಠ ಖ್ಯಾತಿ ಪಡೆಯಬಹುದಿತ್ತು.

ಶ್ರಮವಿಲ್ಲದ ದುಡಿಮೆ, ಲಾಭದ ಬಗ್ಗೆ ತಿಳಿಸಲಾಗಿದೆ. ಜನರು ಆಹಾರಕ್ಕಾಗಿ ಅಲೆದಾಡಬಾರದು. ಅಭಿವೃದ್ಧಿ ಮೂಲಕ ಸಾಧಿಸಿ ತೋರಿಸಬೇಕು.

೬. ತಿರುವಳ್ಳುವರ್ ರಾಜದಂಡ ಬಗ್ಗೆ ತಿಳಿಸುತ್ತಾ, ರಾಜ ತನ್ನನ್ನು ರಕ್ಷಿಸಿಕೊಂಡು ರಾಜ್ಯವನ್ನು ಸಂರಕ್ಷಣೆ ಮಾಡಬೇಕೆಂದಿದ್ದಾನೆ. ರಾಜ್ಯ ಸುಭಿಕ್ಷೆ ಇದ್ದರೆ ಪ್ರಜೆಗಳು ನೆಮ್ಮದಿಯಿಂದ ಇರುತ್ತಾರೆ. ರಾಜನ ಕರ್ತವ್ಯ ಆಜ್ಞೆ, ರಾಜ್ಯ ಪರಿಪಾಲನೆ, ಶಿಕ್ಷೆ, ಮಳೆ – ಬೆಳೆ ಮೊದಲಾದ ಸಂಗತಿಗಳನ್ನು ದುರುಪಯೋಗಪಡಿಸಬಾರದು. ದುಷ್ಟರಿಗೆ ಪ್ರೋತ್ಸಾಹ ಕೊಡಬಾರದು. ನ್ಯಾಯ ನೀತಿ ಧರ್ಮಕ್ಕೆ ರಾಜ ಬೆಲೆ ಕೊಡಬೇಕು. ರಾಜ ಜನಬಲ ಹೊಂದಿರಬೇಕು, ಜನರು ರಾಜನ ಬಗ್ಗೆ ಪ್ರೀತಿ, ವಾತ್ಸಲ್ಯ, ಅಭಿಮಾನ ಹೊಂದಿರಬೆಕು. ರಾಜನು ದಂಡವನ್ನು ಪ್ರಯೋಗಿಸಬೇಕು. ಇಲ್ಲದೆ ಹೋದರೆ ದುಷ್ಟರೇ ಬೆಳೆದು ಶಿಷ್ಟರು ಕಷ್ಟಕ್ಕೀಡಾಗುತ್ತರೆ.

ಧರ್ಮಗ್ರಂಥಗಳ ಪ್ರಕಾರ ಮಾಡಿದ ತಪ್ಪಿಗೆ ಶಿಕ್ಷೆಗೆ ವಿಧಿಸಲಾಗುತ್ತದೆ. ಹಿರಿಯರ, ಬುದ್ಧಿಜೀವಿಗಳ ಸಲಹೆಯನ್ನು ರಾಜ ಕಡೆಗಣಿಸಬಾರದು. ಉತ್ತಮ ತೀರ್ಮಾನ ಕೈಗೊಳ್ಳಲು ರಾಜನಿಗೆ ಹಕ್ಕಿದೆ. ಹಾಗಾಗಿ ಇಲ್ಲಿಪ್ರಜೆಗಳನ್ನು ರಾಜ ತನ್ನ ಮಕ್ಕಳಂತೆ ಷೋಷಿಸುತ್ತಿದ್ದ. ನಿಷ್ಠೆ. ಪ್ರಾಮಾಣಿಕತೆಯಿಂದ ರಾಜ್ಯ ಭಾರ ಮಾಡಬೇಕು, ರಾಜನೀತಿಯನ್ನು ರಾಜ ಪಾಲಿಸಬೆಕು. ಕಲ್ಯಾಣರಾಜ್ಯ – ಸುಖೀರಾಜ್ಯ ಆಗ ಬೇಕಾದರೆ ರಾಜನೀತಿ, ಧರ್ಮಮಾರ್ಗ ಅನುಸರಿಸಬೇಕು. ಜನರಿಗೆ ವೇದ ಪುರಾಣ ಇತರ ಶಾಸ್ತ್ರಗಳ ಬಗ್ಗೆ ತಿಳಿಸಿಕೊಡಬೇಕು. ಹಿರಿಯರ ಮಾರ್ಗದರ್ಶನ, ಪ್ರಜೆಗಳ ಅನಿಸಿಕೆ, ಅಭಿಪ್ರಾಯಗಳನ್ನು ಆಲಿಸಿ, ಲಾಲಿಸಿ, ಪಾಲಿಸಿ, ಪುರಸ್ಕರಿಸ, ಮನ್ನಿಸಿ ಪ್ರಜೆಗಳ ಇಚ್ಛೆಯಂತೆ ರಾಜ್ಯಭಾರ ಮಾಡಬೇಕು. ದುಷ್ಟರ ಶಿಕ್ಷೆಗಾಗಿ ರಾಜದಂಡವನ್ನು ಉಪಯೋಗಿಸಬೇಕು. ನ್ಯಾಯಶಾಸ್ತ್ರ, ಧರ್ಮಶಾಸ್ತ್ರಗಳ ಮೂಲಕ ಸಮಾಜದಲ್ಲಿ ಒಳ್ಳೆಯವರನ್ನು ಕಾಪಾಡಲಾಗುತ್ತದೆ. ಧರ್ಮ ರಕ್ಷಿಸುತ್ತದೆ. ಧರ್ಮಕ್ಕೆ ಹೆದರಿ ರಾಜ್ಯ ಉಳಿದರೆ, ರಾಜನೀಗೆ ಧೈರ್ಯ ಬರುತ್ತದೆ. ರಾಜ್ಯದಲ್ಲಿ ಅಪರಾಧಿಗೆ ತಪ್ಪಿತಸ್ಥನಿಗೆ ಶಿಕ್ಷೆ ವಿಧಿಸುವುದು ಸೂಕ್ತ ಎಂದು ಹೇಳಿದ್ದಾನೆ.

೭. ಮಂತ್ರಿ, ಸಾಮಂತರು ಇತರರು ಅರಸನ ಒಡನಾಡಿಗಳು. ಇವರ ಸಂಬಂಧ, ರಾನೊಂದಿಗೆ ಎಚ್ಚರಿಕೆಯಿಂದ ಇರಬೇಕಿತ್ತು. ಅರಸ ತಮ್ಮ ಸಂಬಂಧಿಯಾದರೂ ನಗುವುದು, ಪಿಸುಮಾತು, ಇಷ್ಟಪಟ್ಟ ಕಾರ್ಯಗಳಿಗೆ ಹಠ ಇವುಗಳನ್ನು ಮಾಡಬಾರದು. ರಾಜನ ಗುಣಸ್ವಭಾವವನ್ನು ಅರಿತು ವರ್ತಿಸಬೇಕಿತ್ತು. ಹೆಚ್ಚು ಸಲುಗೆ ಯಿಂದ ರಾಜನಲ್ಲಿ ವರ್ತಿಸಬಾರದು. ರಾಜನ ಆಸೆ, ಬೇಡಿಕೆ, ಅಕಾಂಕ್ಷೆಗಳನ್ನು ಇತರರು ಪಡಬಾರದು. ಒಂದು ವೇಳೆ ಆ ರೀತಿ ಮಾಡಿದರೆ, ಕೆಡಕು ಆಗಬಹುದು, ತನ್ನ ಒಡನಾಡಿಗಳ ನಡವಳಿಕೆ ಸ್ವಚ್ಛವಾಗಿರಬೇಕು. ರಾಜನಿಗೆ ಅವಮಾನ, ಅಗೌರವವನ್ನು ಇವರು ತರಬಾರದು. ರಾಜ ತನ್ನ ಸಹಚರರು, ಹಿತೈಷಿಗಳ ಗುಣ – ಸ್ವಭಾವ ಹವ – ಭಾವ ಮುಖಚೆರ್ಯ ಅವರ ಮನಸ್ಸಿನ ಸ್ಥಿತಿ, ನಾಡಿ – ಮಿಡಿತವನ್ನು ತಿಳಿದಿರಬೇಕು. ಮಂತ್ರಿಗಳೂ ಸದಾ ಜಾಗೃತರಾಗಿರಬೇಕು. ರಾಜನ ಭಾವನೆಗಳನ್ನು ಮುಖ ಲಕ್ಷಣದಿಂದ ತಿಳಿಯಬೇಕು. ರಾಜನ ಬಗ್ಗೆ ಮಂತ್ರಿ ಗುಪ್ತಚಾರರು, ಇತರರು ಏನೇನು ಮಾತನಾಡತ್ತಾರೆಂಬ ಬಗ್ಗೆ ಕೌಶಲ್ಯ ಮತಿ, ನಿಪುಣ, ಪರಿಣತರು ಬೇಕಾಗಿತ್ತು. ರಾಜನಿಗೆ ಶತೃವಿನ ಮುಖ ನೋಡಿ ಅವನ ಅಂತರಾಳವನ್ನು ಅಳಿಯುವ ಶಕ್ತಿ ಹೊಂದಿರುತ್ತಿದ್ದನು. ಇವರಿಗೆ ಸಂಬಳ ಇತರ ಮೂಲ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದನು. ರಾಜನ ಯೋಜನೆಗಳು ಬೇಗ ಮೂಗಿಸಲು ಇವರು ಕಾರಣ. ಪಂಚೇಂದ್ರಿಯಗಳ ಮೂಲಕ ಇತರರ ಗುಣ ಲಕ್ಷಣಗಳನ್ನು ರಾಜ ಅರಿಯುವುದುಂಟು. ಮಿತ್ರಕ, ಶತೃಗಳು ಕಪಟತನ ಹೊಂದಿರುವವರು ಯಾರು ಎಂಬ ಬಗ್ಗೆ ತಿಳಿದಿರಬೇಕು.

೮. ಪ್ರಜೆಗಳ ರಕ್ಷಣೆಗಾಗಿ ಸುಭದ್ರವಾದ ಕೋಟೆ ನಿರ್ಮಿಸಲಾಗುತ್ತಿತ್ತು. ತನ್ನ, ರಕ್ಷಣೆ, ಶತೃಗಳನ್ನು ಗೆಲ್ಲಲು, ತಾನು ಬಚ್ಚಿಟ್ಟುಕೊಳ್ಳಲು ಕೋಟೆ ಅತ್ಯಗತ್ಯ ಕೋಟೆ ಭದ್ರತೆಯ ಕಾರಣದಿಂದ ಬೆಟ್ಟಗುಡ್ಡ, ಪರ್ವತ, ಕಂದಕ, ಕಣಿವೆ, ಮರದ ತೋಪು, ಗುಡಿಗೋಪುರದ ಬಳಿ ನಿರ್ಮಿಸಲಾಗುತ್ತಿತ್ತು. ಕೋಟೆ ಬಾಗಿಲು ಕಿರಿದಾಗಿದ್ದು, ಶತೃಗಳನ್ನು ಜಯಿಸುವಂತಿರಬೇಕು. ಶತೃಗಳ ರಕ್ಷಣೆ, ಮುತ್ತಿಗೆ ಹಾಕಲು ಆಸ್ಪದ ಇರಬಾರದು. ಒಂದು ವೇಳೆ ಶತೃದಾಳಿ ಮಾಡಿದಾಗ ಅವನ ಮೇಲೆ ಯುದ್ಧ ಸಾರಲು ಸಾಕಷ್ಟು ಸಮಯ ಸಿಗುವಂತೆ ಕೋಟೆಯನ್ನು ಜಾಗವನ್ನು ನಿರ್ಮಿಸಬೇಕು. ವಿಶೇಷವೆಂದರೆ ಕೋಟೆಯ ಮೇಲೆ ನೀರು ದೊರೆಯಬೇಕು. ಕಂದಕ, ಕೋಟೆ, ಬುರುಜುಗಳಿರಬೇಕು. ಶತೃಗಳು ದಾಳಿ / ಆಕ್ರಮಣ ಮಾಡಿದಾಗ ಕೋಟೆ ಹತ್ತಲು ಆಗದಂತೆ ಕಟ್ಟಬೇಕು. ರಾಜನಿಗೆ ಕೋಟೆ ಅನುಕೂಲ ಪರಿಸರ ನಿರ್ಮಿಸಿರಬೇಕು, ಶತೃವಿಗಲ್ಲ. ಉತ್ತಮ ಕೋಟೆಯಿಂದ ರಾಜ ನಿಶ್ಚಿಂತೆಯಿಂದಿರುತ್ತಿದ್ದ. ಕೋಟೆ ಒಳಗಡೆ ಗುಪ್ತದ್ವಾರ, ಯಂತ್ರ ತಂತ್ರಗಳನ್ನು ಶತೃ ಧಮನಕ್ಕೆ ಮಾಡಿದ್ದರೂ ಅದು ಹೊರಗಿನವರಿಗೆ ತಿಳಿಯ ಬಾರದಿತ್ತು.

೯. ರಾಜ ತನಗಿಷ್ಟ ಬಂದಹಾಗೆ ಆಳ್ವಕೆ ನಡೆಸುವುದಕ್ಕೆ ನಿರಂಕುಶ ಪ್ರಭುತ್ವ ಎನ್ನುತ್ತಾರೆ. ರಾಜಪ್ರಭುತ್ವದಲ್ಲಿ ಜನ ಸಾಮಾನ್ಯರಿಗೆ ಕಿಂಚಿತ್ತು ಕಿಮ್ಮತ್ತಿರುವುದಿಲ್ಲ. ತನ್ನ ಸಹಚರರ ಮಾತನ್ನು ರಾಜ ಕಡೆಗಣಿಸಬಾರದು. ನಿರ್ಲಕ್ಷಿತ ಮನೋಭಾವದಿಂದ ರಾಜ ಅಪಕೀರ್ತಿಗೆ ಪಾತ್ರನಾಗುತ್ತಾನೆ. ರಾಜನೇ ಶ್ರೀಮಂತನಾಗಿ ಎಲ್ಲೆಲ್ಲೂ ಅಧರ್ಮ, ಅಸತ್ಯ, ತಾಂಡವಾಡಿ ರಾಜನಿಗೆ ಕೆಟ್ಟ ಹೆಸರು ಬರುತ್ತದೆ. ರಾಜ್ಯದಲ್ಲಿನ ಎಲ್ಲಾ ವ್ಯವಹರಗಳ ಬಗ್ಗೆ ರಾಜನಿಗೆ ಅರಿವಿರಬೇಕು. ರಾಜ ಸರ್ವಾಧಿಕಾರಿಯಾದರೆ ಸಂಪಾದಿಸಿದ ಸಂಪತ್ತು ಮಂಜಿನಂತೆ ಕರಗುತ್ತದೆ. ನ್ಯಾಯನೀತಿ, ಧರ್ಮ ಇತರ ಸಂಗತಿಗಳಿಗೆ ಬದ್ದನಾಗಿರಬೇಕು. ರಾಜ ಹೇಗಿರುತ್ತಾನೋ ಪ್ರಜೆಗಳು ಹಾಗೆಯೇ. ರಾಜ ದಿವಾಳಿ ಆದರೆ ಪ್ರಜೆಗಳು ದಿವಾಳಿ ಆಗುತ್ತಾರೆ. ರಾಜ ಸರ್ವಾಧಿಕಾರಿ ಧೋರಣೆಯಿಂದ ಆಡಳಿತ ನಡೆಸಬಾರದು. ಅಮಾಯಕ, ಸಾದು ಸಜ್ಜನರು, ದೇಶಪ್ರೇಮಿ, ನಿರಪರಾಧಿ ಮೊದಲಾದವರ ಬಗ್ಗೆ ಕನಿಕರ ಇರಬೇಕು. ಸಜ್ಜನರು, ಬಡವರು, ಧರ್ಮಸುಧಾರಕರಿಗೆ ತೊಂದರೆ ಕೊಡ ಬಾರದು. ರಾಜನಿಗೆ ಲೋಕಖ್ಯಾತಿ ಪ್ರಾಪ್ತವಾಗಲು ಧರ್ಮ, ದಕ್ಷತೆ ಧೈರ್ಯವಂತಿಕೆ ಇರಬೇಕು.

೧೦. ಪ್ರಜೆಗಳ ಸುಖವೇ ರಾಜನ ಸುಖ. ಪ್ರಜೆಗಳ ರಕ್ಷಣೆ ರಾಜನ ಮೊದಲ ಕೆಲಸ, ರಾಜ ಕೋಪಿಷ್ಟನಾಗಬಾರದು. ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ರಾಜ ಗೌರವ, ಮರ್ಯಾದೆಯನ್ನು ಸಂಪಾದಿಸಬೆಕು. ಬಾಹ್ಯ – ಆಂತರಿಕ ಶತೃಗಳ ಬಗ್ಗೆ ಎಚ್ಚರ ಇರಬೇಕು. ಧರ್ಮ ಶಾಸ್ತ್ರದ ಪ್ರಕಾರ ಆಡಳಿತ ನಡೆಸುತ್ತಾನೆ.

೧೧. ರಾಜನಿಗೆ ಬೇಹುಗಾರಿಕೆ ಒಂದು ದೊಡ್ಡ ಅಸ್ತ್ರ. ಆದರೆ ರಾಜ್ಯ ಏಳು – ಬೀಳು ಉನ್ನತಿ ಅವನತಿಯ ಬಗ್ಗೆ ಸಾಕ್ಷಿಯಾಗಬಲ್ಲದು. ಬೇಹುಗಾರರಿಗೆ ಬಹುಮಾನ ನೀಡಲಾಗುತ್ತಿತ್ತು. ಆಗು – ಹೋಗುಗಳ ಬಗ್ಗೆ ಸ್ಪಷ್ಟ ಚಿತ್ರಣ ಇದರಿಂದ ತಿಳಿಯುತ್ತಿತತು. ನ್ಯಾಯಶಾಸ್ತ್ರ, ಧರ್ಮಶಾಸ್ತ್ರಗಳ ಪ್ರಕಾರ ಅರಸ ಆಳ್ವಿಕೆ ಮಾಡುತ್ತಾನೆ. ರಾಜನ ಆಪ್ತವಲಯ, ಬಾಹ್ಯ ಆಂತರಿಕ ಸಂಬಂಧಗಳ ಬಗ್ಗೆ ಬೇಹುಗಾರರ ವರದಿ ಬಹುಮುಖ್ಯ ಬೇಹುಗಾರಿಕೆಯಿಂದ ಮೋಸ, ವಂಚನೆ ನಡೆಯಲು ಸಾಧ್ಯತೆ ಇದೆ. ಯುದ್ಧ, ಸಾಧನೆ, ಪ್ರಗತಿ, ಉತ್ತಮ ಕಾರ್ಯಕ್ರಮಗಳಲ್ಲಿ ಬೇಹುಗಾರರು ಇರಬೇಕಿತ್ತು.

೧೨. ಗುಪ್ತಚಾರ ಇಲಾಖೆ ಇಂದು ಖ್ಯಾತಿ ಪಡೆದಿದೆ. ಹಿಂದೆಯೂ ಸಹ ರಾಜನಿಗೆ ಪೂರಕವಾಗಿ ಒಳಿತು ಕೆಡುಕುಗಳ ಬಗ್ಗೆ ಕೆಲವರು ರಾಜನ ಹಿತೈಷಿಗಳಾಗಿದ್ದು ಶತ್ರು ರಾಜನ ಆಸೆ – ಆಮಿಷಗಳಿಗೆ ಒಳಗಾಗುವುದನ್ನು ಗುಪ್ತಚರರು ತಿಳಿಸುತ್ತಾರೆ. ಗುಪ್ತಚರಿ ಮಾಡುವವ ಜನರ ಮಧ್ಯೆದಲ್ಲಿ ಮಾರುವೇಷದಿಂದ ಇರಬೇಕಿತ್ತು. ವಿರೋಧಿಗಳೂ ಇವರನ್ನು ಕಂಡು ಹಿಡಿಯದಂತೆ ವೇಷ ಬದಲಿಸಿಕೊಳ್ಳುತ್ತಿದ್ದರು. ಗುಟ್ಟನ್ನು ಅರಿಯಲು ಇವರು ವೇಷ ಬದಲಿಸುತ್ತಿದ್ದರು. ರಾಜ, ರಾಜ್ಯ ಜನರ ಪರ, ವಿರುದ್ಧ ನಡೆಯುವ ಚಟುವಟಿಕೆಗಳನ್ನು ತಿಳೀಸುತ್ತಾರೆ. ಗುಪ್ತಚರ ನಂಬಿಕೆ, ದಕ್ಷ, ಕುಶಲಮತಿ, ಸತ್ಯನಿಷ್ಠನಾಗಿರಬೇಕು. ಇವನ ಸಾಧನೆಗೆ ಪ್ರಶಸ್ತಿ ಪುರಸ್ಕಾರವಿತ್ತು.

೧೩. ರಾಜ್ಯದಲ್ಲಿ ರಾಯಭಾರಿ, ರಾಜಧೂತರ ಪಾತ್ರದ ಬಗ್ಗೆ ತಿರುವಳ್ಳುವರ್ ಅಭಿಪ್ರಾಯಿಸಿದ್ದಾನೆ. ಇಂದಿನ ವಿದೇಶಾಂಗ ಖಾತೆಯನ್ನು ಇದು ನೆನಪಿಸುತ್ತದೆ. ಬೆರೆ ರಾಜ್ಯಗಳ ಸಂಬಂಧ, ಏಳಿಗೆ, ರಾಜತಂತ್ರ ಅರಿತವನು ರಾಯಭಾರಿ, ತನ್ನ ದೇಶದ ಪರ ಬೇರೆ ದೇಶವನ್ನು ಪ್ರತಿನಿಧಿಸುತ್ತಾನೆ. ವಿಶ್ವಾಸಿ, ವಿರೋಧ, ಸ್ನೇಹ, ಶತೃತ್ವ, ರಾಜ್ಯಬಾಹಿರ ಇವನ ಕಾರ್ಯದಕ್ಷತೆಯನ್ನು ಅವಲಂಬಿಸಿವೆ. ರಾಯಭಾರಿ ಆಗಿರುವವನು ಉತ್ತಮ ಕುಲದಲ್ಲಿ ಹುಟ್ಟಿರಬೇಕು, ಪ್ರೀತಿಯಿಂದ, ರಾಜನಿಗೆ ವಿಧೇಯನಾಗಿರಬೇಕು. ರಾಜನಿಗೆ ಎದುರಾಡಬಾರದು. ಅನುಭವ, ಸಾಮರ್ಥ್ಯ, ಶಕ್ತಿ, ಶುದ್ಧ ಚಾರಿತ್ರ್ಯ, ನ್ಯಾಯತೀರ್ಮಾನಿಸುವ ಸಾಮರ್ಥ್ಯವುಳ್ಳವನಾಗಿರಬೇಕು. ನ್ಯಾಯ, ವಿವೇಕ, ಶಾಸ್ತ್ರಗಳ ಪ್ರಕಾರ ತಿಳುವಳಿಕೆ ಹೊಂದಿರಬೇಕು. ಇವನು ಸುಂದರ, ದೃಢಕಾಯ, ಶಕ್ತಿವಂತ, ಯುಕ್ತಿವಂತ, ಗಂಭೀರವುಳ್ಳವನಾಗಿದ್ದನು. ಅಂಜುಬುರುಕುತನ ಇರಬಾರದು. ಕಾಲ, ದೇಶ, ಸ್ಥಳ, ಸಂದರ್ಭಕ್ಕೆ ಅನುಗುಣವಾಗಿ ವ್ಯವಹರಿಸಬೇಕು. ರಾಜದ್ರೋಹಿ, ದೇಶದ್ರೋಹಿಯಾಗದೆ ಕರ್ತವ್ಯವನ್ನು ನಿಷ್ಠೆ, ಪ್ರಾಮಾಣಿಕತೆಯಿಂದ ಕಾರ್ಯಮಾಡಬೇಕಿತ್ತು. ತನ್ನ ಪ್ರಾಣಕ್ಕೆ ಆಪತ್ತು ಬಂದರೂ ರಾಜ – ರಾಜ್ಯದ ಜವಾಬ್ದಾರಿ ಮುಖ್ಯ ತಿರುವಳ್ಳುವರ್ ಮೂರು ಗುಣಗಳನ್ನು ರಾಯಭಾರಿಗೆ ತಿಳಿಸಿದ್ದಾರೆ. ತಾನು ಮಾಡುವ ಕೆಲಸದಲ್ಲಿ ಪ್ರೀತಿ, ಮನಸ್ಸಿಟ್ಟು ಮಾಡಬೇಕು. ಮಾಡುವ ಕೆಲಸವನ್ನು ಚೆನ್ನಾಗಿ ತಲೀದುಕೊಂಡಿರಬೇಕು. ತಾನು ಮಾತನಾಡುವ ವ್ಯಕ್ತಿಗೆ ಪ್ರೀತಿ, ಮಧುರತೆ, ವಿಶ್ವಾಸ ಮೂಡುವಂತೆ ಮಾತನಡಬೇಕು. ಎಂಥ ಕೆಲಸವನ್ನು ಸಾಧಿಸುವ ಛಲ ಇರಬೇಕು. ಹೊರದೇಶಕ್ಕೆ ಹೋಗಿ ತನ್ನ ರಾಜ್ಯದ ಆಗುಹೋಗುಗಳ ಬಗ್ಗೆ ತಿಳಿಸಿದಾಗ ರಾಯಭಾರಿ ಬುದ್ದಿವಂತ, ಕುಶಲತೆ, ಮಾತುಗಾರನು, ಪ್ರಭಾವಿಯಾಗಿ, ಸುಂದರ, ದೃಢಕಾಯ, ಸಂತೃಪ್ತ, ಸುಜ್ಞಾನಿ, ಸಮಾನಮನಸ್ಯನು ಆಗಿರಬೆಕು. ರಾಯಭಾರಿಗೆ ತತ್ವಶಾಸ್ತ್ರ, ನ್ಯಾಯಶಾಸ್ತ್ರ, ರಾಜ್ಯಶಾಸ್ತ್ರ, ನೀತಿಶಾಸ್ತ್ರಗಳ ಬಗ್ಗೆ ತಿಳಿದಿರಬೇಕು. ಬೇರೆ ದೇಶದ ಮಂತ್ರಿ, ಸಭಾಸದಸ್ಯರು, ಪಂಡಿತರು, ಹಿರಿಯರು ರಾಯಭಾರಿಯ ಮಾತನ್ನು ಮೆಚ್ಚುವಂತಿರಬೇಕು. ರಾಜಧೂತನು ವಿದ್ಯಾ – ಬುದ್ದಿವಂತನು ಆಗಿದ್ದು ಉತ್ತಮ ಗ್ರಂಥಗಳು ಅಭ್ಯಾಸಿಯಗಿ, ಸಂಶೋಧಿಸಿ ವಿಷಯಗಳನ್ನು ತಿಳಿಸಬೇಕು. ಸಾವಿಗೆಅಂಜದೆ, ಅಳುಕದೆ ರಾಜನಿಗೆ ರಾಯಭಾರಿ ತಾನು ಕೈಗೊಂಡ ಕಾರ್ಯವನ್ನು ವಿವರಿಸಬೇಕು. ಆ ಕಾಲದಲ್ಲಿ ಸತ್ತರೆ ಸ್ವರ್ಗ, ಗೆದ್ದರೆ, ರಾಜ್ಯ ಎಂಬ ಪರಿಕಲ್ಪನೆ ನೆಲೆಯೂರಿತ್ತು.

೧೪. ರಾಜ್ಯದ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲು ರಾಜನೊಮದಿಗೆ ಮಂತ್ರಿ ಮತ್ತು ಇತರರ ಪಾತ್ರ ಮುಖ್ಯ ರಾಜ ಸಮರ್ಪಕವಾಗಿ ನಡೆಸಲು ಕಾರ್ಯಕ್ಕೆ ಸಹಾಯಕರಾಗಿ ಮಂತ್ರಿಗಳು ಇರುತ್ತಾರೆ. ಒಂದು ರಾಜ್ಯದ ಅಸ್ತಿತ್ವ, ಪ್ರಜೆಗಳ ಉದ್ದಾರ, ನಾಶ, ಸರ್ವಸ್ವವು ಮಂತ್ರಿಗಳ ಕೈಯಲ್ಲಿರುತ್ತದೆ. ನಂಬಿಕೆಗೆ ಅರ್ಹವಾದ, ಅರಸ, ನಾಡಿಗೆ ಪ್ರಜೆಗಳಿಗಾಗಿ ತ್ಯಾಗ ಮಾಡುವವನು ಮಂತ್ರಿ ಯಾಗಿರುತ್ತಿದ್ದ. ರಾಜ್ಯದ ಪಗ್ರತಿ, ಕ್ಷೇಮ, ಶತ್ರಗಳ ಶಮನ ಇತ್ಯಾದಿ ಕಾರ್ಯಗಳನ್ನು ಮಂತ್ರಿ ಯಶಸ್ವಿಯಾಗಿ ನಿಭಾಯಿಸುತ್ತಿದ್ದ. ವಿದ್ಯಾವಂತ, ಬುದ್ದಿವಂತ, ತ್ಯಾಗಮಯಿ, ಕರ್ತವ್ಯನಿಷ್ಠೆ, ಸೇವಾನಿಷ್ಠೆ. ಹೃದಯ ವೈಶಾಲ್ಯತೆ, ಜಾಣ, ಚತುರ, ಚಾಣಕ್ಷ, ತಾಂತ್ರಿಕ, ಚಿಂತಕ ಧರ್ಮಿ, ನ್ಯಾಯ ಶಾಸ್ತ್ರಗಳನ್ನು ಬಲ್ಲವನಾಗಿದ್ದ ಮಂತ್ರಿಗೆ ಪಂಡಿತ ಪಾಮರರು ಇತರರು ಇದ್ದರು. ಮಂತ್ರಿ ಅಂತಃಕರಣ, ಕಠೋರ, ಶತೃಗಳ ಶಮನ, ಮಂತ್ರಿಗೆ ಪ್ರಕೃತಿದತ್ತ ಗುಣಗಳಿರಬೇಕು. ವ್ಯವಹರ, ಪ್ರಪಂಚಜ್ಞಾನ, ವಿಚಾರ ಇರಬೇಕು. ರಾಜದಡ್ಡನದರೂ ಮಂತ್ರಿ ಬುದ್ಧಿವಂತ ನಿರಬೇಕು. ಮಂತ್ರಿ ದಡ್ಡನಾಗಿದ್ದರೆ ಇಡೀ ರಾಜ್ಯವು ಹಾಳಾಗುತ್ತದೆ. ತಿರುಕ್ಕುರಳ್ ಗ್ರಂಥದಲ್ಲಿ ಮಂತ್ರಿಯ ೫ ಗುಣಗಳ ಬಗ್ಗೆ ತಿಳಿಸಲಾಗಿದೆ.

೧. ಕೈಗೊಂಡ ಕೆಲಸವನ್ನು ಪೂರೈಸುವ ಧೈರ್ಯ ಮಂತ್ರಿಗಿರಬೇಕು.

೨. ಕೈಗೊಂಡ ಕೆಲಸದ ಮಧ್ಯದಲ್ಲಿ ತೊಂದರೆ, ಅಡ್ಡಿ – ಆತಂಕ ಬಂದರೆ ಯಾರಿಗೂ ಹೆದರದೆ, ಏನೇ ಸಮಸ್ಯೆ ಬಂದರೂ ಹೆದರದೆ, ಬೆದರದೆ, ಚದರದೆ ಮುಗಿಸುವ ಧೈರ್ಯವಿರಬೇಕು.

೩. ರಾಜ್ಯದ ಪ್ರಜೆಗಳನ್ನು ಸಂರಕ್ಷಿಸುವ ಜವಾಬ್ದಾರಿ ಮತ್ತು ಹೊಣೆಗಾರಿಕೆ, ಶ್ರದ್ದೆ, ಜನರ ಕಷ್ಟ ಸುಖಗಳನ್ನು ಪರಿಹರಿಸಬೇಕು.

೪. ಮಂತ್ರಿ, ರಾಜನಿಗೆ ಮಾರ್ಗದರ್ಶನ ನೀಡುವಾಗ ನೀತಿಶಾಸ್ತ್ರ, ನ್ಯಾಯಶಾಸ್ತ್ರ, ಧರ್ಮಶಾಸ್ತ್ರಗಳನ್ನು ತಿಳಿದು ಸೂಕ್ತ ಸಲಹೆಗಳನ್ನು ನೀಡಬೇಕಿತ್ತು.

೫. ಕೈಗೊಂಡ ಕೆಲಸವನ್ನು ಪೂರೈಸುವ ಬಿಡಬಾರದು. ಇದಕ್ಕೆ ಎಲ್ಲ ಶಕ್ತಿಯನ್ನು ಉಪಯೋಗಿಸಿಕೊಳ್ಳಬೇಕು.

ಈ ಮೇಲಿನ ಐದು ಗುಣಗಳ್ಳುಳ್ಳ ಮಂತ್ರಿ ಉತ್ತಮ ರಾಜ್ಯವನ್ನು ಮತ್ತು ಉತ್ತಮ ರಾಜನಿಗೆ ಉತ್ತಮ ಮಂತ್ರಿಯಾಗಿರುತ್ತಾನೆ.

ಈ ಮೇಲಿನಂತೆ ಶತೃಗಳನ್ನು ಸಂಹರಿಸಲು – ಇಬ್ಭಾಗಿಸುವ ಶತೃಸಮುಹವನ್ನು ಬೇರ್ಪಡಿಸುವ ಜಾಣ್ಮೆ ಇರಬೇಕು. ಮಿತ್ರರು ಬಂಧುಗಳು ಒಳ್ಳೆಯ ಮಿತ್ರತ್ವವನ್ನು ಹೊಂದಿರಬೇಕು. ರಾಜ್ಯದಲ್ಲಿ ಜನರು ಶಾಮತಿಯಿಂದ ನೆಲಸಲು ಅವಕಾಶ ಮಾಡಿ ರಾಜ ಮಂತ್ರಿಯ ಸಹಾಯ, ಸಹಕಾರ ವಿಲ್ಲದೆ ಆಳ್ವಿಕೆ ಮಾಡುವುದು ಕಷ್ಟ. ಯವುದು ಒಳ್ಳೆಯದು. ಕೆಟ್ಟದ್ದು ನಿರ್ಧರಿಸಬೇಕು. ಒಮ್ಮೆ ರಾಜ ಅವಿವೇಕಿ, ಮೂರ್ಖ, ಹಠವಾದಿ, ತಿಳುವಳಿಕೆಯಿಲ್ಲದವನಾಗಿದ್ದರೆ, ಬುದ್ಧಿವಂತ ಮಂತ್ರಿಯಿಂದಲೇ ಆಡಳಿತ ಸುಗಮವಾಗಿ ನಡೆಸಬಹುದಾಗಿರುತ್ತದೆ.

೧೫. ವ್ಯವಸಾಯ ರಾಜ್ಯದ ಪ್ರಮುಖ ಆಹಾರದ ಮೂಲ. ವ್ಯವಸಾಯ ರಾಜ್ಯದ ಬೆನ್ನೆಲುಬು. ರೈತ ದುಡಿಮೆಯಿಂದಲೇ ಶ್ರೀಮಂತರು, ಬಡವರು, ಸಹಸ್ರಾರು ಜನರು ಆಶ್ರಯದಾತರು ಬದುಕುತ್ತಿದ್ದರು. ಕೋಟಿ ವಿದ್ಯೆಗಿಂತ ಮೇಟಿವಿದ್ಯೆಮೇಲು ಎನ್ನಲಾಗುತ್ತದೆ. ಕ್ಷಾಮ – ಡಾಮರ ಬಂದಾಗ ರೈತ ಪಾತ್ರ ಬಹುಮುಖ್ಯ ವಾದುದು ಕೃಷಿ ಬಗ್ಗೆ ತಾತ್ಸಾರ ಮಾಡದೇ ಉಳಿಮೆಮಾಡಿ ದುಡಿಯಬೇಕು.

೧೬. ರಾಜನಿಗೆ ಉತ್ತಮ ಗೆಳೆಯರಿರಬೇಕು. ಪ್ರತಿಯೊಂದು ಸಂಗತಿಯನ್ನು ಸಮಾನವಾಗಿ ಚರ್ಚಿಸಲು ಗೆಳೆಯರ ಸಂಗಡ ಬಹುಮುಖ್ಯ. ಗೆಳೆತನದಿಂದ ರಾಜ್ಯ ರಕ್ಷಣೆ, ಆಗುಹೋಗುಗಳ ಬಗ್ಗೆ ಚರ್ಚೆ, ಕಷ್ಟ – ನಷ್ಟ ಉತ್ತಮ, ನೀಚತನಗಳ ಬಗ್ಗೆ ಗೆಳೆತನ ಇರಬೇಕು. ಸ್ನೇಹ ಎಂಬುದು ಇಬ್ಬರು ಹೃದಯದಲ್ಲಿ ಹುಟ್ಟಿರಬೇಕು. ಆಪತಕಾಲದಲ್ಲಿ ಸ್ನೇಹ ಕೆಲಸ ಮಾಡುತ್ತದೆ. ಗೆಳೆತನದಿಂದ ಉತ್ತಮ ಪುಸ್ತಕಗಳನ್ನು ಓದಿದರೆ, ಜ್ಞಾನವೃದ್ಧಿಯ ಗೂಡ ಭಾವಗಳು, ಭಾವನೆಗಳೂ ಹೊಸ ಬದುಕನ್ನು ಕಟ್ಟಿಕೊಡುತ್ತವೆ. ಉತ್ತಮ ಗೆಳೆಯರು, ಉತ್ತಮ ಪುಸ್ತಕ ಇದ್ದಹಾಗೆ, ಗೆಳೆತನದಿಂದ ತೊಂದರೆ, ಸಮಸ್ಯೆ, ಕಷ್ಟಗಳು ದೂರವಾಗಿ ಶಾಂತಿ, ಸಂತೋಷ, ನೆಮ್ಮದಿ ದೊರೆಯುತ್ತದೆ. ಗೆಳೆತನದಲ್ಲಿ ದೊಡ್ಡವ – ಸಣ್ಣವ. ಬಡವ, ಶ್ರೀಮಂತ,ವಿದ್ಯಾವಂತ, ಅವಿದ್ಯಾವಂತ, ನಾಗರಿಕ, ಅನಗರಿಕ, ಅಧಿಕಾರ, ಹಣ್, ಅಂತಸ್ತು, ಜಾತಿಮತ, ಧರ್ಮ, ಕುಲ – ಗೋತ್ರ ಭಾಷೆ ಇವು ಯಾವುವು ಸರಿಸಮಾನವಲ್ಲ. ಇವುಗಳನ್ನು ಮೀರಿದ ಗೆಳೆತನ ರಾಜ್ಯದ ಅಭಿವೃದ್ಧಿ ಬಗ್ಗೆ ಗೆಳೆಯರು ಚಿಂತಿಸಬೇಕು. ಸುಖ – ದುಃಖಗಳ ಮೂಲಕ ಭಿನ್ನಾಭಿಪ್ರಾಯ ಮರೆತು ಸೌಹಾರ್ದಯುತ ವಾತಾವರಣ ಗೆಳೆತನದಿಂದ ಇರಬೇಕು.

೧೭. ತಿರುವಳ್ಳುವರ್ ಸ್ನೇಹದ ಬೆಲೆ ಕುರಿತು ಹೇಳುತ್ತಾರೆ. ಗೆಳೆತನ ಮಾಡುವ ಮೊದಲು ಗೆಳೆಯ ಅಥವಾ ಸ್ನೇಹದ ಬೆಲೆ ಬಗ್ಗೆ ತಿಳಿದಿರಬೇಕು. ಅಯೋಗ್ಯ ಅನರ್ಹರಿಂದ ಕೇಡು ಕಟ್ಟಿಟ್ಟಬುತ್ತಿ. ಉತ್ತಮ ವಂಶದವರೊಡನೆ ಸ್ನೇಹ ಸಂಪಾದನೆ ಸಮಾಜದಲ್ಲಿ ತಪ್ಪುಗಳನ್ನು ತಿದ್ದಿ. ಆಪತ್ಕಾಲದಲ್ಲಿ ನೆರವಾದವನು ಸ್ನೇಹಿತ. ಸ್ನೇಹಿತನ ಬಗ್ಗೆ ಅಸಡ್ಡೆ, ಉದಾಸೀನೆ, ಅಲ್ಪತನ ಬಿಟ್ಟು, ಪ್ರೀತಿ, ವಿಶ್ವಾಸಗಳಿಂದ ಮುಂದುವರೆಯಬೇಕು. ಒಳ್ಳೆಯ ಸ್ನೇಹಿತರು ಇರಬೇಕು. ಕೆಟ್ಟವರು ಇರಬಾರದು.

೧೮. ಪರಸ್ಪರ ಇಬ್ಬರು ಸ್ನೇಹವನ್ನು ಅರಿತು ತಿಳಿದುಕೊಂಡಿರಬೇಕು. ಸ್ನೇಹದ ಸ್ವಭಾವ – ಸಂಪರ್ಕ ಸಲಿಗೆಯಿಂದ ಇರುತ್ತದೆ. ಸ್ನೇಹ ಆತ್ಮ ಸಂಬಂಧ ಹೊಂದಿದೆ. ಇಬ್ಬರ ನಡುವೆ ಏನೇ ವೈಮನಸ್ಸು ಭಿನ್ನಾಭಿಪ್ರಾಯಗಳಿದ್ದರೂ ಅವರು ಒಂದಾಗಿರುತ್ತಾರೆ. ಒಳ್ಳೆಯ ಸ್ನೇಹದಿಂದ ಜಗತ್ತನ್ನೇ ಗೆಲ್ಲಬಹುದು. ಸುಖ, ಶಾಂತಿ, ನೆಮ್ಮದಿ, ಅಪಾಯ, ಅಶಾಂತಿ, ಅವಮಾನ, ಅವಸಾನ ಹೊಂದಿರಬೇಕು. ಕೆಟ್ಟವರ ಸ್ನೇಹ ಉತ್ತಮ ನಾಗರಿಕ ಮಾಡಬಾರದು. ಉತ್ತಮರಲ್ಲದವರೊಂದಿಗಿನ ಸ್ನೇಹ ಅಪಾಯ. ಮಾಡಿದರೆ ಒಳ್ಳೆಯವರಲ್ಲ. ಕೆಟ್ಟಮನಸು, ಕರುಬುತನ, ಸ್ವಾರ್ಥತನ, ಪ್ರಯೋಜನಕ್ಕಾಗಿ ಹಂಬಲಿಸಿ ಹಿತಚಿಂತಕರಂತೆ ನಟಿಸುವರು. ದ್ರೋಹ, ಕೆಟ್ಟ ಚಿಂತನೆ, ಮಾನ – ಶೀಲ, ಅವಿಶ್ವಾಸ, ಸ್ವಾರ್ಥ, ಸಾಧನೆ, ಹೊಟ್ಟೆಕಿಚ್ಚು, ಮಹಾಬುದ್ಧಿವಂತರು, ಚಮತ್ಕಾರಿಗಲು, ಪರರನಿಂದೆ, ಪರವ್ಯಸನ, ಪರದೂಷಣೆ, ಪರರ ಗುಣಗಾನ, ಇನ್ನೊಬ್ಬರ ಬೆಳವಣಿಗೆ ಸಹಿಸದೇ ಇರುವುದು, ಸ್ನೇಹದಲ್ಲಿ ಕಪಟತನ, ದ್ರೋಹ, ಸ್ವಾರ್ಥ, ದುಷ್ಟತೆ, ಕೆಟ್ಟ ಆಲೋಚನೆ, ತಾತ್ಸಾರ ಬುದ್ದಿ ಇರಭಾರದು. ಕಪಟಿಗರು ಮಾಡುವ ವಿಧೇಯ, ನಮಸ್ಕಾರ ಹಾಗೂ ವರ್ತನೆಯಲ್ಲಿ ದ್ರೋಹ, ಮೋಸ ಅಡಗಿರುತ್ತದೆ. ಹಿತಶತೃಗಳ ಸಿಹಿಮಾತು – ವಿಷವಾಗುವ ಸಂದರ್ಭವಿರುತ್ತದೆ.

೧೯. ಅವಿದ್ಯಾವಂತರು, ಅನಾಗರಿಕರು, ಕೆಟ್ಟದ್ದನ್ನು ಒಳ್ಳೆಯದೆಂದು ಭಾವಿಸಿ, ದ್ವೇಷಿಸುವರು ಮೂರ್ಖರು ತಿಳಿಗೇಡಿಗಳೆಂದು ತಿರುವಳ್ಳುವರ್ ತಿಳಿಸಿದ್ದಾನೆ. ತಿಳಿಗೇಡಿಗಳು ಮಂಗನ ಕೈಲ್ಲಿ ಮಾಣಿಕ್ಯ ಇದ್ದಂತೆ ಎನ್ನುತ್ತಾನೆ. ಕೆಟ್ಟದನ್ನು ನೋಡಿ, ಮಾತನಾಡಿ, ಕೇಳಿ ಅಲ್ಲದೆ ಪಾಪ, ಅನ್ಯಾಯ, ಅಧರ್ಮ, ಅಪವಿತ್ರತೆಗೆ ದಾಸನಾಗುತ್ತಾನೆ. ಬೇರೆಯವರಿಗೆ ಒಳ್ಳೆಯದನ್ನು ಬಯಸುವುದಿಲ್ಲ.ಉತ್ತಮ ಗ್ರಂಥ ಓದಿ ಬೇರೆಯವರಿಗೆ ಬುದ್ಧಿವಾದ ಹೇಳಬೇಕು.

೨೦. ಅಲ್ಪವನ್ನು ತಿಳಿದವರೇ ಜಗತ್ತಿನಲ್ಲಿ ಮೂರ್ಖರು. ಅಜ್ಞಾನಿ, ಅವಿದ್ಯಾವಂತರು ಬುದ್ಧಿವಾದವನ್ನು ಒಪ್ಪಲಾರರು. ಅಲ್ಪಮತಿ, ಅಲ್ಪಜ್ಞಾನ ಹೊಂದಿರುತ್ತರೆ. ಕಾಲ, ದೇಶ, ತತ್ವ ಬದಲಾವಣೆ, ಆಗಬೇಕಾದರೆ ಅವರು ಬದಲಾವಣೆ ಆಗಬೇಕು.

೨೧. ಹಗೆತನ ಎಂಬುದು ವ್ಯಕ್ತಿಯ ವ್ಯಾದಿ. ಕ್ರೋಧ, ಮದ, ಮತ್ಸರ ಎಲ್ಲ ನಾಶಕ್ಕೂ ಇದು ಸಾಕು. ರಾಮಾಯಣ, ಮಹಾಭಾರತಗಳಲ್ಲಿ ದಾಯಾದಿ ಮತ್ಸರ ಕೇಳಿದ್ದೇವೆ. ಜಯ, ಕೀರ್ತಿ ಸಂಪಾದಿಸುವಾಗ ಅವಿವೇಕದ ಭ್ರಮೆ, ಕ್ರೋಧಗಳನ್ನು ಕೈಬಿಟ್ಟು ಉತ್ತಮವಾಗಿರಬೇಕು.

೨೨. ಎಷ್ಟೇ ಸ್ನೇಹಜೀವಿ ಆಗಿದ್ದರೂ ಅವನು ಶತ್ರವಾಗಿದ್ದರೆ ಸಹಾಯ ಮಾತ್ರ ಮಾಡಬಾರದು. ಶತ್ರು ಬಗ್ಗೆ ಮೃದುಧೋರಣೆ, ಉದಾಸೀನ ತಾಳಬಾರದು. ಶತ್ರಗಳಿಗೆ ಒಳ್ಳೆಯವರು ಹೆದರಬಾರದು, ಅವರ ವಿರುದ್ಧ ಬಲಿಷ್ಠರಾಗಬೇಕು. ಶತ್ರಗಳನ್ನು ಗೆಲ್ಲುವುದು ಸೂಕ್ತ. ಎಲ್ಲರೂ ಒಳ್ಳೆಯವರಲ್ಲ – ಕೆಟ್ಟವರಲ್ಲ ಕೆಲವರಲ್ಲಿ ಹಿತಶತ್ರುಗಳು, ಕೃತ್ರಿಮಿಗಳೂ, ಅಯೋಗ್ಯರು, ವಂಚಕ, ನಯವಂಚಕರು ಇದ್ಧಾರೆ. ಕೆಟ್ಟವರಿಂದ ಸಜ್ಜನರು ದೂರ ಇರಲು ಬಯಸುತ್ತಾರೆ.

೨೩. ನಮಗಿರುವ ಶತೃ ಯಾರು, ಬಲಿಷ್ಟನೋ, ದುರ್ಬಲನೋ. ಹುಚ್ಚುತನ, ದಡ್ಡತನ, ಶತ್ರು, ಮಿತ್ರತ್ವ, ಯುದ್ಧ, ಶಾಂತಿ ಬಗ್ಗೆ ಶತ್ರುಗಳ ಬಗ್ಗೆ ಸದಾ ಎಚ್ಚರಿಕೆ ಇರಬೇಕು. ಶತೃಗಳನ್ನು ಜಯಿಸುವ ಬಗ್ಗೆ, ಅವರಲ್ಲಿ ಒಡಕು ಹುಟ್ಟಿಸಿ, ಬಲಿಷ್ಟ, ಶತೃಗಳ ಬಗ್ಗೆ ಯಾರು ಮಟ್ಟಹಾಕಲು ಸಾಧ್ಯ ಎಂದು ತಿಲಿಸಲಾಗಿದೆ.

೨೪. ತಿರುವಳ್ಳುವರ್ ಹೊರಗಿನ ಶತ್ರುವನ್ನು ನಂಬುತ್ತಾನೆ. ಒಳಗಿನ – ಹಿತಶತೃಗಳನ್ನು ನಂಬುವುದಿಲ್ಲ. ಇವರೇ ಬಹು ಅಪಾಯಕಾರಿಗಲೂ. ಆಹಾರ, ನೀರು, ಧರ್ಮ ಕಷ್ಟಕಾಲದಲ್ಲಿ ನೆರವಾಗುವುದು ಯಾರು? ಯುದ್ಧ ಆಗಲು ಬಂಧುತ್ವ ಕೆಡಲು ಹಿತಶತ್ರುಗಳೇ ಕಾರಣ. ಸಮನಾದ ಗುಣ, ಸ್ವಭಾವ, ಯೋಗ್ಯತೆ, ನಡತೆಗಳನ್ನು ಹೊಂದಿರಬೇಕು. ಅಂತಃಕಲಹ ರಕ್ತ ಸಂಬಂಧವನ್ನು ಕೆಡಿಸುತ್ತದೆ, ಕುಟುಂಬನಾಶ, ಒಳಜಗಳ, ಭೇದ – ಭಾವ ಉಂಟಾಗಿ, ನೆಮ್ಮದಿ, ಶಾಂತಿ ಸಂತೋಷ ಇರುತ್ತದೆ.

೨೫. ಹಿರಿಯ, ಬಲಿಷ್ಠ, ಶ್ರೇಷ್ಟರನ್ನು ಗೌರವಿಸಬೇಕು. ತಪ್ಪು ಮಾಡಿದರೆ ಕಷ್ಟ, ಕೆಟ್ಟದ್ದು ಮಾಡಬಾರದು. ಹಾವಿನೊಡನೆ ಸ್ನೇಹ ಬೆಳಸಿದಂತೆ, ವಿರೋಧಿಗಳನ್ನು ಬೆಳಸಬಾರದು. ಮಹಾನ್ ತ್ಯಾಗಿಗಳು, ಋಷಿಗಳಿಗೆ ಗೌರವ ಮತ್ತು ಅವರು ಮುನಿದರೆ ರಾಜ್ಯ ಅವನತಿ ಹಾದಿ ಹಿಡಿಯುತ್ತಿತ್ತು/

೨೬. ರಾಜ ಅಥವಾ ಪ್ರಜೆಗಳು ಮಧುಪಾನ ಅಥವಾ ಮದ್ಯದ ಸಹವಾಸ ಮಾಡಬಾರದು. ಮನೆತನ, ಕುಟುಂಬ ಹಾಳಾಗುತ್ತದೆ. ಮೆದುಳು ಹಿಡಿತದಲ್ಲಿರದೆ, ಬುದ್ದಿ ಭ್ರಮಣೆಯಂತಿರುತ್ತದೆ. ಕೆಟ್ಟ ಅಭ್ಯಾಸಗಳನ್ನು ಪ್ರೋತ್ಸಾಹಿಸಬಾರದು. ಎಷ್ಟೇ ವಿಶ್ವಾಸವಿರಲಿ ಬಂಧು – ಅಣ್ಣ – ತಮ್ಮಂದಿರು, ಸ್ನೇಹಿತರು ಇದಕ್ಕೆ ಬಲಿಯಾಗಬಾರದು. ಹಣ, ಹೆಂಡ, ಹೆಣ್ಣುಗಳಿಂದ ಸಂಪತ್ತು ನಾಶ, ಅನಾರೋಗ್ಯ, ಅಸಭ್ಯತನ ಹುಟ್ಟುತ್ತದೆ. ಕುಡಿದವರಿಗೆ ಶರೀರಪ್ರಜ್ಞೆ ನಿಯಂತ್ರಣ ಇರುವುದಿಲ್ಲ.

೨೭. ಪ್ರಾಚೀನ ಕಾಲದಲ್ಲಿ ಜೂಜು, ಮೋಜುಗಳು ಸಮಾಜದಲ್ಲಿದ್ದವು. ಸಾಮಾಜಿಕ ಪಿಡುಗು ಜೂಜು. ಮದ್ಯ, ವೇಸ್ಯೆ ಸಹವಾಸ, ಜೂಜು ವ್ಯಕ್ತಿಯ ಅವನತಿಯ ಪಾಲಾಗುತ್ತದೆ. ಜೂಜುಕೋರನಿಂದ ಕುಟುಂಬದ ಹೆಂಡತಿ, ಮಕ್ಕಳು, ಸ್ನೇಹಿತರು, ಆತ್ಮೀಯರು, ಲಕ್ಷ್ಮೀ ಸಹ ದೂರವಾಗುತ್ತಾಳೆ, ಸುಳ್ಳು ಮೋಸ, ರೋಗಗಳು ಇದರಿಂದ ಬರುತ್ತವೆ.

೨೮. ಗೌರವದಿಂದ ಸಮಾಜದಲ್ಲಿ ಬಾಳಲು ಎಲ್ಲರು ಇಚ್ಚಿಸಿರುತ್ತಾರೆ. ಕೀರ್ತಿ, ಸಂಪತ್ತು, ಹಣಗಳಿಂದ ಆತ್ಮಗೌರವ ಬರುತ್ತದೆ. ಉತ್ತಮ ಕೆಲಸ ಮಾಡಿದರೆ ಗೌರವ ಪ್ರಶಸ್ತಿಗಳು ಲಭಿಸುತ್ತವೆ. ಸಣ್ಣ ತಪ್ಪು ಮಾಡಬಾರದು. ದೊಡ್ಡ ಕೆಲಸ ಮಾಡಿ ದೊಡ್ಡ ವ್ಯಕ್ತಿಯಾಗಿ, ಹೆಸರು ಪಡೆಯಬೇಕು. ದೊಡ್ಡತನ ಹುಟ್ಟು ಬರಬೇಕು, ಇನ್ನೊಬ್ಬರ ಮೂಲಕ ಬರಬಾರದು.

೨೯. ತಿರುವಳ್ಳುವರ್ ಒಬ್ಬ ವ್ಯಕ್ತಿ (ಅಥವಾ ರಾಜ). ಸಮಾಜದಲ್ಲಿ ಶ್ರೇಷ್ಟನಾಗಲು ಹಲವು ಸಂಗತಿಯನ್ನು ತಿಳಿಸಿದ್ದಾನೆ. ಒಳ್ಳೆಯ ವ್ಯಕ್ತಿಯ ಅಥವಾ ಸಮಾಜದ ಲಕ್ಷಣದಲ್ಲಿ ‘ನ್ಯಾಯ, ಧರ್ಮ, ವಿವೇಕ, ಘನತೆ, ಗಂಭೀರತೆ, ಮಾನ ಮರ್ಯಾದೆ, ಸದಾಚಾರ, ತತ್ವನಿಷ್ಠೆ, ಕಾರ್ಯತತ್ಪರತೆ, ಕಾಯಕ, ಕರ್ತವ್ಯ ಪರಿಪಾಲನೆ, ಶಿಸ್ತು, ಸಂಯಂ, ಶಾಂತಿ, ಪರೋಪಕಾರ, ನಿಸ್ವಾರ್ಥ, ಸೇವಾ ಮನೋಭಾವ, ನಿರಾಹಂಕಾರ, ನಿಶ್ಚಲತೆ, ಮುಗುಳ್ನಗೆ, ಧಾರಾಳತನ, ಸವಿಮಾತು, ಬೇರೆಯವರನ್ನು ತೆಗಳದಿರುವುದು, ದಾನಶೂರ, ಧರ್ಮ ಪರಿಪಾಲಕ ವಂಚನೆಯ ಮನಸ್ಸಿಲ್ಲದವನು, ಮೋಸ ಮಾಡದಿರುವನು, ಪರದ್ರೋಹಾಚಾರಣೆಯಲ್ಲಿ ತೊಡಗದಿರುವುದು, ವಿನಯವಂತನಾಗಿರುವುದು. ಕ್ರೂರತನವಿಲ್ಲದಿರುವುದು, ಹಿಂಸಾರಾಧಕನಾಗದಿರುವುದು, ವಿನಯವಂತನಾಗಿ, ವಿವೇಚನೆಯುಳ್ಳವನಾಗಿ ಆತ್ಮ ವಿಶ್ವಾಸವುಳ್ಳವನಾಗಿ, ವಿಶಾಲ ಹೃದಯವುಳ್ಳವನಾಗಿ ಜೀವಿಸಿದರೆ ಅವನಿಗೂ ಒಳ್ಳೆಯದಾಗಿ ಸಮಾಜಕ್ಕೂ ಒಳ್ಳೆಯದಾಗುತ್ತದೆ. ಇದರಿಂದ ಒಳ್ಳೆಯ ಉತ್ತಮವಾದ ದೇಶ ನಿರ್ಮಾಣವಾಗುತ್ತದೆ ಎಂದು ತಿರುವಳ್ಳುವರ್ ರಾಜನೀತಿಯ ಸಂಗತಿಗಳನ್ನು ಕುರಿತು ಅಧ್ಯಯನ ಎಂದು ತಿರುವಳ್ಳುವರ್ ರಾಜನೀತಿಯ ಸಂಗತಿಗಳನ್ನು ಕುರಿತು ಅಧ್ಯಯನ ಮಾಡಿರುವ ಭುವನೇಶ್ವರ ಪ್ರಸಾದ್ ಅವರು (ತಿರುಕ್ಕುರಳ್) ತಿಳಿಸಿದ್ದಾರೆ.