ಪೀಠಿಕೆ

ವಾಲ್ಮೀಕಿ ಸಮುದಾಯದ ಆರ್ಥಿಕ ಜೀವನವನ್ನು ನೋಡಿದಾಗ ಪ್ರಾಚೀನ ಕಾಲದಲ್ಲಿ ಅವರ ಜೀವನ ಬಹಳ ಕಷ್ಟದಾಯಕವಾಗಿತ್ತು. ಅಂದರೆ ಅವರು ಜೀವನ ನಡೆಸಿಕೊಂಡು ಸಾಗಬೇಕಾದರೆ ಅವರು ತಮ್ಮ ಮೂಲ ಕಸುಬನ್ನು ಉದ್ಯೋಗವೆಂದು ತಿಳಿದವರಾಗಿದ್ದರು. ಅವರ ಕುಲ-ಕಸುಬು ಎಂದರೆ ಬೇಟೆಯಾಡುವ ಪದ್ಧತಿ ಮತ್ತು ಕಳ್ಳತನ ಮಾಡುವುದಾಗಿತ್ತು. ಅವರಿಗೆ ಹೊಲಗದ್ದೆಗಳು ಇರಲಿಲ್ಲ. ಈ ಸಮುದಾಯದವರು ಬಡಕುಟುಂಬದವರಾಗಿದ್ದರು. ಇವರು ಕಡುಬಡವರು ಆಗಿದ್ದರು. ಅಂದರೆ ಬಡತನ ರೇಖೆ ಕೆಳಗೆ ಜೀವನ ನಡೆಸುತ್ತಿದ್ದರು. ಅವರ ಆರ್ಥಿಕ ಜೀವನ ಕಷ್ಟದಾಯಕವಾಗಿತ್ತು ಎಂದು ಹೇಳಬಹುದು.

ವಾಲ್ಮೀಕಿ ಸಮುದಾಯದ ಜನರು ಮುಂದೆ ಕ್ರಮೇಣ ಬೇಟೆಯಾಡುವುದು, ಕಳ್ಳತನ ಮಾಡುವುದು ನಿಲ್ಲಿಸಿ ಎಲ್ಲ ಜನರ ಹಾಗೆ ವ್ಯವಸಾಯದಲ್ಲಿ ತೊಡಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಅಥಣಿ ತಾಲೂಕಿನ ಸಮುದಾಯದ ಜನರಲ್ಲಿ ಬದಲಾವಣೆಯನ್ನು ನೋಡುತ್ತೇವೆ. ವ್ಯವಸಾಯ, ಉದ್ಯೋಗದಲ್ಲಿ ತೊಡಗಿದ್ದಾರೆ. ಕೃಷಿ, ಕೈಗಾರಿಕೆ, ಸೇವಾ, ಉದ್ಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಇವರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ವಾಲ್ಮೀಕಿ ಸಮುದಾಯದ ಜನರು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತಮ ಆರ್ಥಿಕ ಜೀವನ ನಡೆಸಿಕೊಳ್ಳುತ್ತಿದ್ದಾರೆ. ಮತ್ತು ತಮ್ಮ ಆರ್ಥಿಕ ಜೀವನ ಸುಧಾರಿಸಿಕೊಳ್ಳುತ್ತಿದ್ದಾರೆ.

ವ್ಯವಸಾಯ

ವಾಲ್ಮೀಕಿ ಸಮುದಾಯದ ಜನರನ್ನು ಬೇಡರು ಅಥವಾ ನಾಯಕರು ಎಂದು ಕರೆಯುತ್ತಾರೆ. ಈ ಸಮುದಾಯದ ಜನರ ಉದ್ಯೋಗ ಮೊದಲು ಬೇಟೆಯಾಡುವುದಾಗಿತ್ತು.  ಅಂದರೆ ಬಡತನ ರೇಖೆ ಕೆಳಗೆ ಜೀವನ ನಡೆಸುತ್ತಿದ್ದರು. ಅವರಿಗೆ ತಮ್ಮದೇ ಆದ ಸ್ವಂತ ಜಮೀನು ಇರಲಿಲ್ಲ. ಅವರು ಬೇರೆ ಬೇರೆ ಉದ್ಯೋಗದಲ್ಲಿ ಕೆಲಸ ಮಾಡಲು ಆಸಕ್ತಿ ಕೂಡ ವಹಿಸುತ್ತಿರಲಿಲ್ಲ. ಅವರ ಆರ್ಥಿಕ ಜೀವನ ಕಷ್ಟದಾಯಕವಾಗಿತ್ತು.

ಮುಂದೆ ವಾಲ್ಮೀಕಿ ಸಮುದಾಯದ ಜನರಲ್ಲಿ ಅಂದರೆ ಇತ್ತೀಚಿನ ದಿನಗಳಲ್ಲಿ ಬದಲಾವಣೆಯನ್ನು ಕಾಣುತ್ತೇವೆ. ಇವರು ತಮ್ಮ ಆರ್ಥಿಕವನ್ನು ಜೀವನವನ್ನು ಸುಧಾರಿಸಿ ಕೊಳ್ಳುವಲ್ಲಿ  ವ್ಯವಸಾಯ ಉದ್ಯೋಗದಲ್ಲಿ ತೊಡಗಿದ್ದಾರೆ. ಕೃಷಿ, ಕೈಗಾರಿಕೆ, ಸೇವಾ ಉದ್ಯೋಗ ಮಾಡುತ್ತಿದ್ದರು ಮತ್ತು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವರು ತಮ್ಮ ಜೀವನವನ್ನು ಸುಧಾರಿಸಿಕೊಳ್ಳುತ್ತಿದ್ದಾರೆ.

ಆಧುನಿಕ ಕಾಲದಲ್ಲಿ ವಾಲ್ಮೀಕಿ ಸಮುದಾಯದ ಜನರು ತಮ್ಮ ವ್ಯವಸಾಯ ಮಾಡುವಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಹಾಕಿಕೊಟ್ಟಿದೆ.

೧. ಉದ್ಯೋಗ ಪಡೆಯಲು ತರಬೇತಿಯನ್ನು ಕೊಡುವುದು

೨. ಬ್ಯಾಂಕುಗಳ ಮುಖಾಂತರ ಸಾಲ ಸೌಲಭ್ಯ ಒದಗಿಸಿಕೊಡುವುದು.

೩. ಮನೆಯನ್ನು ಕಟ್ಟಿಸಿಕೊಡುವುದು.

೪. ಗಂಗಾ ಕಲ್ಯಾಣ ಯೋಜನೆ ಮೂಲಕ ನೀರಾವರಿಯ ಸೌಲಭ್ಯ ಒದಗಿಸುವುದು.

೫. ಉತ್ಪಾದನೆ ಹೆಚ್ಚಿಸುವುದು

೬. ಆದಾಯ ಹೆಚ್ಚಿಸುವುದು.

ಈ ಎಲ್ಲ ಯೋಜನೆಗಳಿಂದ ವಾಲ್ಮೀಕಿ ಸಮುದಾಯದ ಜನರು ವ್ಯವಸಾಯದಲ್ಲಿ ಅಭಿವೃದ್ದಿಯಾಗುವುದನ್ನು ಕಾಣುತ್ತೇವೆ. ವಾಲ್ಮೀಕಿ ಸಮುದಾಯದ ಜನರು ಕೃಷಿ, ಕೈಗಾರಿಕೆ, ಸೇವಾ ಉದ್ದಿಮೆಯಲ್ಲಿ ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ.

ಕೃಷಿ ವಲಯ

ಅಥಣಿ ತಾಲೂಕಿನ ವಾಲ್ಮೀಕಿ ಸಮುದಾಯದ ಜನರು ಒಟ್ಟು ೧೯ ಹಳ್ಳಿಗಳಲ್ಲಿದ್ದಾರೆ. ಅವರು ವ್ಯವಸಾಯ ಮಾಡುತ್ತಿರುವುದರಲ್ಲಿ ವ್ಯತ್ಯಾಸವನ್ನು ನೋಡುತ್ತೇವೆ. ೯ ಹಳ್ಳಿಗಳು ಅಧಿಕ ನೀರಾವರಿಯ ಪ್ರದೇಶವಾಗಿರುತ್ತವೆ. ಇವರು ಅಧಿಕ ಪ್ರಮಾಣದಲ್ಲಿ ಕಬ್ಬು ಬೆಳೆಯುತ್ತಾರೆ ಮತ್ತು ೧೦ ಹಳ್ಳಿಗಳಲ್ಲಿ ನೀರಾವರಿಯ ಪ್ರದೇಶ ಕಡಿಮೆ ಇದೆ. ಅವರು ತೆರದ ಬಾವಿ, ಮಳೆಯನ್ನು ಅವಲಂಬಿಸಿದ್ದಾರೆ. ಇವರು ಬೆಳೆಯುವ ಬೆಳೆ ಕಬ್ಬು, ದ್ರಾಕ್ಷಿ, ದಾಳಿಂಬೆ, ಅರಿಶಿನ, ಸೂರ್ಯಕಾಂತಿ, ಶೇಂಗಾ, ಹೆಸರು, ಜೋಳ, ಮೆಕ್ಕೆ ಜೋಳ, ಸಜ್ಜೆ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ವ್ಯವಸಾಯ ಮಾಡುವುದರಿಂದ ವಾಲ್ಮೀಕಿ ಸಮುದಾಯದವರ ಆರ್ಥಿಕ ಜೀವನ ಸುಧಾರಣೆಯಾಗುತ್ತಿವೆ.

ಕೈಗಾರಿಕೆ ವಲಯ

ಅಥಣಿ ತಾಲೂಕಿನಲ್ಲಿ ೪ ಸಕ್ಕರೆ ಕಾರ್ಖಾನೆಗಳು ಇವೆ. ೧ ಖಾದಿ ಮತ್ತು ಗ್ರಾಮೋದ್ಯೋಗ, ೧ ಉಣ್ಣೆ ಕೈಮಗ್ಗವನ್ನು ಹೊಂದಿದೆ. ಈ ವಲಯದಲ್ಲಿ ವಾಲ್ಮೀಕಿ ಸಮುದಾಯದವರು ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ.

ಸೇವಾ ವಲಯ

ವಾಲ್ಮೀಕಿ ಸಮುದಾಯದ ಜನರು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಸೇವಾ ವಲಯದಲ್ಲಿ ಕೆಲವೊಂದು ಜನರು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಸಾಲ ಸೌಲಭ್ಯಗಳು

ಅಥಣಿ ತಾಲೂಕಿನಲ್ಲಿರುವ ಬ್ಯಾಂಕುಗಳು ಸಂಖ್ಯೆ ೯ ಇವೆ. ೫ ರಾಷ್ಟ್ರೀಕೃತ ಬ್ಯಾಂಕುಗಳಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳ ಮೂಲಕ ಸಾಲವನ್ನು ಪಡೆದುಕೊಳ್ಳುತ್ತಿದ್ದಾರೆ. ೫೦ಕ್ಕಿಂತ ಅಧಿಕ ಸಹಕಾರಿ ಬ್ಯಾಂಕುಗಳಿಂದ ಸಾಲವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಬ್ಯಾಂಕುಗಳು ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ಕೊಡುವುದರಿಂದ ಸಾಲವನ್ನು ತೆಗೆದುಕೊಳ್ಳಲು ವಾಲ್ಮೀಕಿ ಸಮುದಾಯದ ಜನರಿಗೆ ಅನುಕೂಲವಾಗಿದೆ.

ಟ್ಯಾಕ್ಟರ್ ತೆಗೆದುಕೊಳ್ಳಲು ಬ್ಯಾಂಕುಗಳು ಸಾಲವನ್ನು ಕೊಡುವುದರಿಂದ ಅವರಿಗೆ ಉದ್ಯೋಗ ದೊರೆಯುತ್ತದೆ. ಉದ್ಯೋಗ ದೊರೆಯುವ ಮೂಲಕ ಅವರ ಆರ್ಥಿಕ ಜೀವನ ಸುಧಾರಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬರಾದ ಗೋಪಾಲ ಪರಸನಾಯಕ. ಇವರು ತಮ್ಮ ಆರ್ಥಿಕ ಜೀವನ ಸುಧಾರಿಸಿಕೊಂಡಿದ್ದಾರೆ.

ವ್ಯವಸಾಯ ಮಾಡಲು ಸರ್ಕಾರ ಗಂಗಾ ಕಲ್ಯಾಣ ಯೋಜನೆ ಮೂಲಕ ನೀರಾವರಿಯ ಸೌಲಭ್ಯವನ್ನು ಮಾಡಿಕೊಟ್ಟಿದೆ. ಇದರಿಂದ ಇವರ ಆರ್ಥಿಕ ಜೀವನದ ಸುಧಾರಣೆಯನ್ನು ನೋಡುತ್ತಿದೆ.

ಬ್ಯಾಂಕುಗಳು ಸಾಲ ಸೌಲಭ್ಯಗಳನ್ನು ಕೊಡುವುದರಿಂದ ಉದ್ದಿಮೆದಾರರಿಗೆ, ಕೂಲಿ ಕಾರ್ಮಿಕರಿಗೆ, ಹೈನುಗಾರಿಕೆ ಮುಂತಾದವುಗಳಿಗೆ ಬ್ಯಾಂಕುಗಳ ಮೂಲಕ ಹಣಕಾಸಿನ ನೆರವು ನೀಡಿ ಅವರ ಆರ್ಥಿಕ ಜೀವನ ಸುಧಾರಿಸಿಕೊಳ್ಳುವಲ್ಲಿ ಮಹತ್ವವಾದ ಪಾತ್ರ ಹೊಂದಿದೆ.

ಸ್ವಸಹಾಯ ಸಂಘಗಳು

ಆಧುನಿಕ ಜಗತ್ತಿನಲ್ಲಿ ಸ್ವಸಹಾಯ ಸಂಘಗಳ ಪಾತ್ರ ಅತ್ಯಂತ ಮಹತ್ವವಾದುದು. ವಾಲ್ಮೀಕಿ ಸಮುದಾಯದ ಜನರು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿದ್ದಾರೆ. ಸ್ವಸಹಾಯ ಸಂಘಗಳ ಮೂಲಕ ಉಳಿತಾಯ ಮಾಡಲು, ಉದ್ಯೋಗ ಪಡೆದುಕೊಳ್ಳಲು, ಹೈನುಗಾರಿಕೆ ಕಿರಾಣಿ ಅಂಗಡಿ ಉದ್ಯೋಗ ಪಡೆಯುವ ಮೂಲಕ ತಮ್ಮ ಆರ್ಥಿಕ ಜೀವನವನ್ನು ಸುಧಾರಿಸಿಕೊಳ್ಳುತ್ತಿದ್ದಾರೆ.

ಸರ್ಕಾರ ಮತ್ತು ಸರ್ಕಾರೇತರ ಯೋಜನೆಗಳ ಮೂಲಕ ಉದ್ಯೋಗ ಪಡೆದುಕೊಳ್ಳುವಲ್ಲಿ ವಾಲ್ಮೀಕಿ ಸಮುದಾಯದ ಜನರು ತಮ್ಮ ಆರ್ಥಿಕ ಜೀವನವನ್ನು ಸುಧಾರಿಸಿಕೊಳ್ಳುವಲ್ಲಿ ಯಶಸ್ವಿಯನ್ನು ಸಾಧಿಸುತ್ತಿದ್ದಾರೆ.