ಸಂವಿಧಾನದ ೭೩ನೇ ತಿದ್ದುಪಡಿಯು ಶೇಕಡ ೩೩ರಷ್ಟು ಮಹಿಳೆಯರಿಗೆ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮೀಸಲಾತಿ ನೀಡಿದೆ. ಇದರಿಂದ ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ಉತ್ತಮ ವೇದಿಕೆ ನಿರ್ಮಿಸಿದಂತಾಗಿದೆ. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆ, ಸಾಮಾಜಿಕ ಕಟ್ಟುಪಾಡು, ಅನಕ್ಷರತೆ, ಕೌಟುಂಬಿಕ ಜವಾಬ್ದಾರಿ ಮೊದಲಾದ ಕಾರಣಗಳಿಂದ ಪಂಚಾಯತ್ ರಾಜ್ ಸಂಸ್ಥೆಗಳ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಸೂಕ್ತ ಪರಿಹಾರಗಳನ್ನು ಕಂಡುಕೊಂಡರೆ ಮಹಿಳೆಯರ ಸಬಲೀಕರಣವಾಗುವುದಲ್ಲದೆ, ಗ್ರಾಮಮಟ್ಟದ ಪಂಚಾಯತಿಗಳ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು.

ಪೀಠಿಕೆ : ಈ ಲೇಖನದ ಉದ್ದೇಶ ಗ್ರಾಮ ಪಂಚಾಯತಿ ಮಟ್ಟದ ರಾಜಕೀಯದಲ್ಲಿ ಮಹಿಳೆಯರ ಸ್ಥಿತಿಗತಿ ಹೇಗಿದೆ? ರಾಜಕೀಯದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದಾರೆ? ಯಶಸ್ವಿಯಾಗಿಲ್ಲದಿದ್ದರೆ ಕಾರಣವೇನು? ಅದಕ್ಕೆ ಶಿಕ್ಷಣ, ವೃತ್ತಿ, ವಯಸ್ಸು, ಕಾರಣವೇ? ಎನ್ನುವ ಅಂಶಗಳ ಮೇಲೆ ಮಹಿಳೆಯರ ರಾಜಕೀಯ ಸ್ಥಿತಿಗತಿಯನ್ನು ಅಧ್ಯಯನ ಮಾಡಲು ಅಥಣಿ ತಾಲ್ಲೂಕನ್ನು ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಸಂದರ್ಶನದ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಈ ಲೇಖನಕ್ಕೆ ಬಳಸಿಕೊಳ್ಳಲಾಗಿದೆ.

ಗ್ರಾಮ ಪಂಚಾಯತಿಯಲ್ಲಿನ ಮಹಿಳೆಯರ ರಾಜಕೀಯ ನಾಯಕತ್ವಕ್ಕೂ ಮತ್ತು ರಾಷ್ಟ್ರಮಟ್ಟದಲ್ಲಿನ ಗ್ರಾಮೀಣ ಅಭಿವೃದ್ದಿಗೂ ಬೇರೆ ಸಂಬಂಧವಿದೆ. ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತಿಯ ಪರಿಣಾಮಕಾರಿ ಕಾರ್ಯನಿರ್ವಹಣೆ ಪುರುಷರ ರಾಜಕೀಯ ಭಾಗವಹಿಸುವಿಕೆಗಿಂತಲೂ ಮಹಿಳೆಯ ಭಾಗವಹಿಸುವಿಕೆಯಲ್ಲಿನ ಆಸಕ್ತಿ, ಸಾಮರ್ಥ್ಯ, ತಿಳುವಳಿಕೆಯ ಮೇಲೆ ಅವಲಂಬಿತವಾಗಿದೆ. ಏಕೆಂದರೆ ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಗಳು ಪುರುಷರಿಗಿಂತ ಹೆಚ್ಚು ಚೆನ್ನಾಗಿ ಮಹಿಳೆಯರಿಗೆ ತಿಳಿದಿರುತ್ತವೆ. ಆದ್ದರಿಂದ ಗ್ರಾಮಮಟ್ಟದ ರಾಜಕೀಯದಲ್ಲಿ ಮಹಿಳೆಯರು ಹೆಚ್ಚು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಬೇಕಾಗಿದೆ.

ಭಾರತ ಸ್ವಾತಂತ್ರ್ಯಗಳಿಸಿದ ಅವಧಿಯಲ್ಲಿ ಮಹಿಳೆ ಮತ್ತು ಪುರುಷರಿಗೆ ರಾಜಕೀಯದಲ್ಲಿ ಸಮಾನ ಸ್ಥಾನಮಾನಗಳನ್ನು ನೀಡಲಾಗಿತ್ತು. ಆದರೆ ಸ್ಥಳೀಯ ಹಂತದ ರಾಜಕೀಯದಲ್ಲಿ ಭಾಗವಹಿಸುವುದಕ್ಕೆ ಸಂವಿಧಾನದ ೭೩ನೇ ತಿದ್ದುಪಡಿಯವರೆಗೆ ಕಾಯಬೇಕಾಯಿತು. ಸಂವಿಧಾನದ ೭೩ನೇ ತಿದ್ದುಪಡಿಯು ಮಹಿಳೆಯರಿಗೆ ಪಂಚಾಯತಿಗಳಲ್ಲಿ ಶೇಕಡಾ ೩೩.ರಷ್ಟು ಮೀಸಲಾತಿ ನೀಡಿತು. ಈ ಮೂಲಕ ಮಹಿಳೆಯರು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಗ್ರಾಮೀಣ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವುದರ ಮೂಲಕ ‘ಮಹಿಳಾ ರಾಜಕೀಯ ಸಬಲೀಕರಣ’ಕ್ಕೆ ಉತ್ತಮ ವೇದಿಕೆಯನ್ನು ಒದಗಿಸಿಕೊಟ್ಟಿತು. ಆದರೆ ಸಂವಿಧಾನಾತ್ಮಕ ತಿದ್ದುಪಡಿಯ ಮೂಲಕ ಮಹಿಳೆಯರಿಗೆ ರಾಜಕೀಯದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿರುವುದು ಐತಿಹಾಸಿಕವಾಗಿ ಕಾಣುತ್ತದೆಯೇ ವಿನಃ ನಿಜವಾದ ಪರಿವರ್ತನೆಯಾಗಿ ಕಾಣುತ್ತಿಲ್ಲ. ಕಾರಣ ಅನಕ್ಷರತೆ, ರಾಜಕೀಯ ಇಚ್ಛಾಶಕ್ತಿಯ ಕೊರತೆ, ಕೌಟುಂಬಿಕ ಜವಾಬ್ದಾರಿಗೆ ಹೆಚ್ಚಿನ ಆದ್ಯತೆ ಮೊದಲಾದ ಸಮಸ್ಯೆಗಳು ರಾಜಕೀಯದಲ್ಲಿ ಮಹಿಳೆಯರು ಹೆಚ್ಚು ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.

ಐತಿಹಾಸಿಕ ಹಿನ್ನಲೆ

ಭಾರತ ಸ್ವಾತಂತ್ರ್ಯಗಳಿಸಿದ ನಂತರ ಅಂದಿನ ಸರ್ಕಾರ ಗ್ರಾಮೀಣ ಅಭಿವೃದ್ದಿಗಾಗಿ ‘ಸಮುದಾಯ ಅಭಿವೃದ್ದಿ ಯೋಜನೆ’ಯನ್ನು ಜಾರಿಗೊಳಿಸಿತು’. ಆದರೆ ಅದು ವಿಫಲವಾಗಿದ್ದರಿಂದ ೧೯೫೭ರಲ್ಲಿ ‘ಸಮುದಾಯ ಅಭಿವೃದ್ದಿ ಯೋಜನೆಯ ವಿಫಲತೆಯನ್ನು ಅಧ್ಯಯನ ಮಾಡಿ ಸೂಕ್ತ ಸಲಹೆ ನೀಡಲು ‘ಬಲವಂತ ರಾಯ್ ಮೆಹತ್ ಸಮಿತಿ’ಯನ್ನು ನೇಮಕ ಮಾಡಲಾಯಿತು. ಸಮಿತಿಯು ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯ ರಚನೆಗೆ ಶಿಫಾರಸ್ಸು ಮಾಡಿತು. ಮುಂದುವರೆದು ಯಾರು ಮಹಿಳೆ ಮತ್ತು ಮಕ್ಕಳ ಅಭಿವೃದ್ದಿಗೆ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೊ ಅಂತಹ ಇಬ್ಬರು ಮಹಿಳಾ ಸದಸ್ಯರಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅವಕಾಶ ಮಾಡಿಕೊಡಬೇಕೆಂದು ಸಲಹೆ ನೀಡಿತು. ಆದರೆ ಯಾವ ರಾಜ್ಯಗಳೂ ಆ ನಿಟ್ಟಿನಲ್ಲಿ ಯಾವುದೇ ಕ್ರಮವನ್ನೂ ಕೈಗೊಳ್ಳಲಿಲ್ಲ.

೧೯೭೪ರಲ್ಲಿ ‘ಮಹಿಳೆ ಸ್ಥಾನಮಾನ ಮತ್ತು ಹಕ್ಕು’ಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಅಧ್ಯಯನ ಮಾಡಲು ಸಮಿತಿಯೊಂದನ್ನು ನೇಮಕ ಮಾಡಲಾಯಿತು. ಸಮಿತಿಯು ಸ್ಥಳೀಯ ಸ್ವಯಂ ಸರ್ಕಾರ ಸಂಸ್ಥೆಗಳಲ್ಲಿ ಮೀಸಲಾತಿಯ ಮೂಲಕ ಮಹಿಳೆಯರಿಗೆ ಕೆಲವೇ ಕೆಲವು ಸ್ಥಾನಗಳನ್ನು ನೀಡಿರುವುದರಿಂದ ಗ್ರಾಮೀಣ ಹಂತದಲ್ಲಿ ಮಹಿಳಾ ಪಂಚಾಯತಿಗಳಿಗೆ ಸಂಬಂಧಿಸಿದ ನಿಯಮಗಳನ್ನು, ನಿಬಂಧನೆಗಳನ್ನು ಸ್ಥಾಪಿಸಲು ಸಲಹೆ ಮಾಡಿತು.

೧೯೭೮ರಲ್ಲಿ ‘ಅಶೋಕ ಮೆಹತಾ ಸಮಿತಿ’ಯು ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾ ಪಂಚಾಯಿತಿಯ ಹಂತದವರೆಗೆ ಶೇಕಡಾ ೩೦ ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು. ಗ್ರಾಮೀಣ, ಮಧ್ಯಮ ಮತ್ತು ಜಿಲ್ಲಾ ಹಂತಗಳಲ್ಲಿನ ಮುಖ್ಯ ಕಾರ್ಯನಿರ್ವಾಹಕರಲ್ಲಿ ಪ್ರಸ್ತುತ ಶೇಕಡಾವಾರು ಮೀಸಲಾತಿ ಮಹಿಳೆಯರಿಗೆ ಇರಬೇಕೆಂದು ಸಲಹೆ ಮಾಡಿತು. ಇವೆಲ್ಲವುಗಳ ಪರಿಣಾಮವಾಗಿ ೮ನೇ ಪಂಚವಾರ್ಷಿಕ ಯೋಜನೆಯಲ್ಲಿ ‘ಮಹಿಳೆ ಮತ್ತು ಅಭಿವೃದ್ದಿ’ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು.

ಈ ಅವಧಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳನ್ನು ಒಳಗೊಂಡಂತೆ ಕೆಲವೇ ಕೆಲವು ರಾಜ್ಯಗಳು ಮಹಿಳಾ ಮೀಸಲಾತಿಗೆ ಅವಕಾಶ ಮಾಡಿಕೊಟ್ಟವು. ಮುಂದೆ ೧೯೮೮-೨೦೦೦ರಲ್ಲಿ ‘ಮಹಿಳೆಗಾಗಿ ರಾಷ್ಟ್ರೀಯ ಮಹಿಳಾ ಯೋಜನೆ’ (National Perspective Plan for Women)  ಸ್ಥಳೀಯ ಸರ್ಕಾರ ಸಂಸ್ಥೆಗಳ ಒಟ್ಟು ಸ್ಥಾನಗಳಲ್ಲಿ ಶೇಕಡಾ ೩೦ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕೆಂದು ಸಲಹೆ ಮಾಡಿತು. ಅದರಂತೆ ಸಂವಿಧಾನದ ೬೪ನೇ ತಿದ್ದುಪಡಿ ಮೂಲಕ ಶೇಕಡ ೩೦ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಾತಿ ನೀಡಬೇಕೆಂಬ ಮಸೂದೆ ಸಂಸತ್ತಿನಲ್ಲಿ ಬಹುಮತವಿಲ್ಲದೇ ಜಾರಿಗೊಳ್ಳಲಿಲ್ಲ. ನಂತರ ೧೯೯೧ರಲ್ಲಿ ಸಂವಿಧಾನದ ೭೩ ಮತ್ತು ೭೪ನೇ ತಿದ್ದುಪಡಿ ಮೂಲಕ ಎಲ್ಲಾ ಹಂತಗಳ ಪಂಚಾಯತಿಗಳಲ್ಲಿ ಶೇಕಡ ೩೩ರಷ್ಟು ಮಹಿಳೆಯರಿಗೆ ಮೀಸಲಾತಿಗೆ ಅವಕಾಶ ಕಲ್ಪಿಸಿಕೊಟ್ಟಿತು.

ಕರ್ನಾಟಕ ರಾಜ್ಯದ ಮಟ್ಟಿಗೆ ಹೇಳುವುದಾದರೆ ಮೀಸಲಾತಿ ಮೂಲಕ ಮಹಿಳಾ ನಾಯಕತ್ವದ ಬೆಳವಣಿಗೆಯಲ್ಲಿ ಮಹತ್ವಪೂರ್ಣವಾದ ಬದಲಾವಣೆಗೆ ಕಾರಣವಾಗಿದೆ. ಪರಿಣಾಮವಾಗಿ ೧೯೯೩ರಲ್ಲಿ ನಡೆದ ಚುನಾವಣೆಗಳಲ್ಲಿ ಮಹಿಳಾ ಸದಸ್ಯರ ಪ್ರಮಾಣ ಏರಿಕೆಯಾಗಿದ್ದನ್ನು ಈ ಮುಂದಿನ ಕೋಷ್ಟಕಗಳಲ್ಲಿ ಕಾಣಬಹುದು.

ಕೋಷ್ಟಕ: ೧೯೯೪ರ ಗ್ರಾಮ ಪಂಚಾಯತಿ ಮೀಸಲಾತಿ ಮೂಲಕ ಆಯ್ಕೆಯಾದ ಮಹಿಳಾ ಅಧ್ಯಕ್ಷರು

ಕ್ರ. ಸಂ.

ಜಿಲ್ಲೆಯ ಹೆಸರು

ಗ್ರಾ.ಪಂ. ಸದಸ್ಯರ ಸಂಖ್ಯೆ

ಒಟ್ಟು ಸ್ಥಾನಗಳು

ಮಹಿಳಾ ಮೀಸಲಾತಿ

ಮಹಿಳಾ ಅಧ್ಯಕ್ಷರು

ಬೆಂಗಳೂರು ನಗರ ೧೧೬ ೧೭೪೦ ೨೬೨೮ ೩೮
ಬೆಂಗಳೂರು ಗ್ರಾಮಾಂತರ ೨೨೬ ೩೫೩೮ ೧೫೨೭ ೭೩
ಚಿತ್ರದುರ್ಗ ೨೭೫ ೪೧೫೯ ೧೭೩೧ ೯೧
೪. ಕೋಲಾರ ೩೦೫ ೪೩೮೫ ೧೯೫೧ ೧೦೨
೫. ಶಿವಮೊಗ್ಗ ೩೬೪ ೩೫೬೫ ೧೭೩೯ ೧೨೧
೬. ತುಮಕೂರು ೩೨೦ ೪೯೩೧ ೨೦೯೩ ೧೦೬
೭. ಚಿಕ್ಕಮಗಳೂರು ೨೨೫ ೨೨೦೩ ೧೦೮೭ ೭೫
೮. ದಕ್ಷಿಣ ಕನ್ನಡ ೩೫೪ ೫೧೮೨ ೨೨೬೦ ೧೧೮
೯. ಹಾಸನ ೨೨೫ ೩೪೨೨ ೧೫೩೬ ೮೫
೧೦. ಕೊಡಗು ೯೬ ೧೦೯೧ ೫೦೯ ೩೨
೧೧. ಮಂಡ್ಯ ೨೨೮ ೩೫೫೭ ೧೫೦೮ ೭೬
೧೨. ಮೈಸೂರು ೩೬೧ ೫೮೭೦ ೨೪೯೯ ೧೨೦
೧೩. ಬೆಳಗಾವಿ ೪೭೩ ೭೨೯೬ ೩೧೪೭ ೧೫೫
೧೪. ಬಿಜಾಪುರ ೩೬೩ ೫೬೭೭ ೨೪೫೬ ೧೨೧
೧೫. ಧಾರವಾಡ ೪೩೯ ೫೮೩೨ ೨೫೬೨ ೧೪೬
೧೬. ಉತ್ತರ ಕನ್ನಡ ೨೦೯ ೨೪೦೨ ೧೧೩೫ ೭೦
೧೭. ಬಳ್ಳಾರಿ ೨೨೦ ೩೩೭೪ ೧೪೩೫ ೭೩
೧೮. ಬೀದರ್ ೧೭೬ ೨೬೨೬ ೧೭೨೪ ೫೮
೧೯. ಗುಲಬರ್ಗಾ ೩೩೬ ೫೦೯೫ ೨೨೫೬ ೧೧೨
೨೦. ರಾಯಚೂರು ೨೯೯ ೪೨೮೧ ೨೦೦೨ ೧೦೦
ಒಟ್ಟು ೫೬೪೧ ೮೦೨೨೬ ೩೭೧೮೩ ೧೮೭೬

Source: B.S.Bhargava & Shoba, Political endowment of women, the case study of Karnataka Experiment, NIRD, 1994

 

ಕೋಷ್ಟಕ: ೧೯೯೩ರ ಹೊಸ ಪಂಚಾಯತಿ ವಿಧೇಯಕದ ಅನ್ವಯ ಕರ್ನಾಟಕ ರಾಜ್ಯ ತಾಲೂಕು ಪಂಚಾಯತಿಗಳಿಗೆ ಆಯ್ಕೆಯಾಗಿರುವ ಮಹಿಳಾ ಮೀಸಲಾತಿ ಸದಸ್ಯರ ವಿವರ

ಕ್ರ. ಸಂ.

ಜಿಲ್ಲೆಯ ಹೆಸರು

ಒಟ್ಟು ಸಂಖ್ಯೆ

ಪರಿಶಿಷ್ಟ ಜಾತಿ

ಪರಿಶಿಷ್ಟ ವರ್ಗ

ಹಿಂದುಳಿದ ವರ್ಗ

ಸಾಮಾನ್ಯ

ಬೆಂಗಳೂರು ನಗರ ೨೭ ೦೭ ೦೧ ೦೯ ೧೦
ಬೆಂಗಳೂರು ಗ್ರಾಮಾಂತರ ೨೭ ೧೨ ೦೫ ೧೭ ೨೩
ಚಿತ್ರದುರ್ಗ ೭೦ ೧೫ ೧೩ ೨೩ ೧೯
೪. ಕೋಲಾರ ೮೦ ೨೧ ೧೧ ೨೫ ೨೩
೫. ಶಿವಮೊಗ್ಗ ೬೨ ೧೪ ೦೪ ೨೦ ೨೪
೬. ತುಮಕೂರು ೮೦ ೧೫ ೦೯ ೨೬ ೩೦
೭. ಚಿಕ್ಕಮಗಳೂರು ೪೬ ೧೦ ೦೨ ೧೬ ೧೮
೮. ದಕ್ಷಿಣ ಕನ್ನಡ ೮೨ ೦೮ ೦೭ ೨೭ ೪೦
೯. ಹಾಸನ ೫೬ ೧೧ ೧೯ ೨೬
೧೦. ಕೊಡಗು ೧೯ ೦೩ ೦೩ ೦೬ ೦೭
೧೧. ಮಂಡ್ಯ ೫೬ ೧೦ ೧೮ ೨೮
೧೨. ಮೈಸೂರು ೯೪ ೨೦ ೦೬ ೩೦ ೩೮
೧೩. ಬೆಳಗಾವಿ ೧೦೭ ೧೪ ೦೪ ೩೪ ೫೫
೧೪. ಬಿಜಾಪುರ ೮೪ ೧೬ ೦೨ ೨೮ ೩೮
೧೫. ಧಾರವಾಡ ೧೦೬ ೧೭ ೦೬ ೩೬ ೪೭
೧೬. ಉತ್ತರ ಕನ್ನಡ ೫೭ ೧೦ ೦೧ ೨೨ ೨೪
೧೭. ಬಳ್ಳಾರಿ ೫೫ ೧೨ ೦೭ ೧೯ ೧೭
೧೮. ಬೀದರ್ ೪೩ ೧೦ ೦೫ ೧೫ ೧೩
೧೯. ಗುಲಬರ್ಗಾ ೮೧ ೨೦ ೦೭ ೧೯ ೧೭
೨೦. ರಾಯಚೂರು ೮೧ ೧೬ ೧೧ ೨೨ ೨೯
  ಒಟ್ಟು ೧೩೪೩ ೨೬೧ ೧೦೪ ೪೩೪ ೫೨೬

ಆಕರ : ಪಂಚಾಯತ್ ರಾಜ್ ಮತ್ತು ಗ್ರಾಮೀಣಾವೃದ್ದಿ ಇಲಾಖೆ, ಕರ್ನಾಟಕ ಸರ್ಕಾರ

 

ಕೋಷ್ಟಕ: ೧೯೯೩ರ ಹೊಸ ಪಂಚಾಯತ್‌ರಾಜ್ ವಿಧೇಯಕದ ಮೂಲಕ ಕರ್ನಾಟಕ ರಾಜ್ಯ ಜಿಲ್ಲಾ ಪಂಚಾಯತಿಗಳಿಗೆ ಆಯ್ಕೆಯಾಗಿರುವ ಮಹಿಳಾ ಸದಸ್ಯರ ಮೀಸಲಾತಿ ವಿವರ

ಕ್ರ. ಸಂ.

ಜಿಲ್ಲೆಯ ಹೆಸರು

ಒಟ್ಟು ಸಂಖ್ಯೆ

ಪರಿಶಿಷ್ಟ ಜಾತಿ

ಪರಿಶಿಷ್ಟ ವರ್ಗ

ಹಿಂದುಳಿದ ವರ್ಗ

ಸಾಮಾನ್ಯ

ಬೆಂಗಳೂರು ನಗರ ೦೭ ೦೨ ೦೨ ೦೩
ಬೆಂಗಳೂರು ಗ್ರಾಮಾಂತರ ೧೫ ೦೩ ೦೧ ೦೫ ೦೬
ಚಿತ್ರದುರ್ಗ ೧೭ ೦೪ ೦೩ ೦೫ ೦೫
೪. ಕೋಲಾರ ೧೯ ೦೫ ೦೨ ೦೬ ೦೬
೫. ಶಿವಮೊಗ್ಗ ೧೫ ೦೩ ೦೧ ೦೫ ೦೬
೬. ತುಮಕೂರು ೨೦ ೦೪ ೦೨ ೦೬ ೦೮
೭. ಚಿಕ್ಕಮಗಳೂರು ೧೩ ೦೩ ೦೧ ೦೪ ೦೫
೮. ದಕ್ಷಿಣ ಕನ್ನಡ ೧೯ ೦೨ ೦೧ ೦೬ ೧೦
೯. ಹಾಸನ ೧೩ ೦೩ ೦೪ ೦೬
೧೦. ಕೊಡಗು ೧೦ ೦೧ ೦೧ ೦೩ ೦೫
೧೧. ಮಂಡ್ಯ ೧೪ ೦೨ ೦೫ ೦೭
೧೨. ಮೈಸೂರು ೨೨ ೦೫ ೦೧ ೦೭ ೦೯
೧೩. ಬೆಳಗಾವಿ ೨೭ ೦೩ ೦೧ ೦೯ ೧೪
೧೪. ಬಿಜಾಪುರ ೨೨ ೦೪ ೦೧ ೦೭ ೧೦
೧೫. ಧಾರವಾಡ ೨೪ ೦೩ ೦೧ ೦೮ ೧೨
೧೬. ಉತ್ತರ ಕನ್ನಡ ೧೪ ೦೫ ೦೫ ೦೮
೧೭. ಬಳ್ಳಾರಿ ೧೫ ೦೩ ೦೨ ೦೫ ೦೫
೧೮. ಬೀದರ್ ೧೧ ೦೩ ೦೧ ೦೪ ೦೩
೧೯. ಗುಲಬರ್ಗಾ ೧೯ ೦೫ ೦೧ ೦೬ ೦೭
೨೦. ರಾಯಚೂರು ೧೯ ೦೪ ೦೨ ೦೬ ೦೭
  ಒಟ್ಟು ೩೩೫ ೬೩ ೨೨ ೧೦೮ ೧೪೨

ಆಕರ : ಪಂಚಾಯತ್ ರಾಜ್ ಮತ್ತು ಗ್ರಾಮೀಣಾವೃದ್ದಿ ಇಲಾಖೆ, ಕರ್ನಾಟಕ ಸರ್ಕಾರ

ಅಥಣಿ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ರಾಜಕೀಯ ಪ್ರವೇಶ

ಅಥಣಿ ತಾಲೂಕು ೧೯೯೫.೭ ಚದರ ಕಿ.ಮೀ.ಗಳ ವಿಸ್ತ್ರೀರ್ಣ ಹೊಂದಿದ್ದು ಒಟ್ಟು ೪,೬೧,೮೬೨ ಜನಸಂಖ್ಯೆಯನ್ನು ಒಳಗೊಂಡಿದೆ. ಜನವಸತಿ ಇರುವ ಗ್ರಾಮಗಳು ೧೦೮. ಉಪಗ್ರಾಮಗಳು ೧೧೮.

ತಾಲೂಕಿನಲ್ಲಿ ಗ್ರಾಮ ಪಂಚಾಯತಿಗಳಿದ್ದು, ೫೯೦ ಪುರುಷರು ಮತ್ತು ೪೧೦ ಮಹಿಳಾ ಸದಸ್ಯರು ಸೇರಿದಂತೆ ಒಟ್ಟು ೧೦೦೦ ಜನಪ್ರತಿನಿಧಿಗಳು ಗ್ರಾಮ ಪಂಚಾಯತಿಗಳಿಗೆ ಆಯ್ಕೆಯಾಗಿದ್ದಾರೆ. ತಾಲೂಕು ಪಂಚಾಯತಿಗೆ ೨೭ ಪುರುಷರು ಹಾಗೂ ೧೬ ಮಹಿಳೆಯರು ಸೇರಿದಂತೆ ಒಟ್ಟು ೪೩ ಸದಸ್ಯರು ಆಯ್ಕೆಯಾಗಿದ್ದಾರೆ. ೪೧೦ ಮಹಿಳೆಯರಲ್ಲಿ ಪರಿಶಿಷ್ಟ ಜಾತಿಯಿಂದ ೭೬, ಪರಿಶಿಷ್ಟ ಪಂಗಡದಿಂದ ೩೪, ಹಿಂದುಳಿದ ಆ ವರ್ಗದಿಂದ ೮೯, ಬ ವರ್ಗದಿಂದ ೨೧, ಸಾಮಾನ್ಯ ವರ್ಗದಿಂದ ೧೫೮ ಮತ್ತು ಇತರೆ ೩೨ ಮಹಿಳಾ ಸದಸ್ಯರು ಆಯ್ಕೆಯಾಗಿದ್ದಾರೆ. ಶೇಕಡಾವಾರು ಪ್ರಮಾಣವನ್ನು ಈ ಮುಂದಿನ ಕೋಷ್ಟಕದಲ್ಲಿ ಕಾಣಬಹುದು.

ಕೋಷ್ಟಕ: ಅಥಣಿ ಗ್ರಾಮ ಪಂಚಾಯತಿಗಳಿಗೆ ಆಯ್ಕೆಯಾದ ಸದಸ್ಯರ ವಿವರ

ಕ್ರ. ಸಂ.

ವಿವರ

ಮಹಿಳೆಯರು

ಪುರುಷರು

ಒಟ್ಟು

ಶೇಕಡ

ಸಂಖ್ಯೆ

ಶೇಕಡ

ಸಂಖ್ಯೆ

ಶೇಕಡ

 

 

೧. ಪರಿಶಿಷ್ಟಜಾತಿ ೭೬ ೪೫.೫ ೯೧ ೫೪.೫ ೧೬೭ ೧೬.೭
೨. ಪರಿಶಿಷ್ಟವರ್ಗ ೩೪ ೮೭.೨ ೦೫ ೧೨.೮ ೩೯ ೩.೯
೩. ಹಿಂದುಳಿದವರ್ಗ ಅ ೮೯ ೩೯.೪ ೧೩೭ ೬೦.೬ ೨೨೬ ೨೨.೬
೪. ಹಿಂದುಳಿದವರ್ಗ ಬ ೨೧ ೩೩.೩ ೪೨ ೬೬.೭ ೬೩ ೬.೩
೫. ಸಾಮಾನ್ಯ ೧೫೮ ೩೭.೬ ೨೬೨ ೬೨.೪ ೪೨೦ ೪೨.೦
೬. ಇತರೆ ೩೨ ೩೭.೬ ೫೩ ೬೨.೪ ೮೫ ೮.೫
ಒಟ್ಟು ೪೧೦ ೪೧.೦ ೫೯೦ ೫೯.೦ ೧೦೦೦ ೧೦೦

ಆಕರ : ಜಿಲ್ಲಾ ಪಂಚಾಯತ್ ಬೆಳಗಾವಿ

ವಯಸ್ಸು

ಚುನಾಯಿತ ಸದಸ್ಯರ ಕಾರ್ಯವೈಖರಿಗೂ ಮತ್ತು ಅವರ ವಯಸ್ಸಿಗೂ ನೇರ ಸಂಬಂಧವಿದೆ. ೨೫ ವರ್ಷದ ಒಳಗಿನ ಸದಸ್ಯರು ಪಂಚಾಯತಿಗೆ ಆಯ್ಕೆಯಾದರೆ ತರಬೇತಿಯ ಸಂದರ್ಭದಲ್ಲಿ ವಿಷಯಗಳನ್ನು ಬೇಗನೇ ಅರ್ಥಮಾಡಿಕೊಳ್ಳಬಲ್ಲರು ಮತ್ತು ಪಂಚಾಯತಿಗಳ ಸಭೆ, ಅಧಿವೇಶನಗಳಲ್ಲಿ ಭಾಗವಹಿಸಿ ಆಡಳಿತ ಮತ್ತು ಅಭಿವೃದ್ದಿ ಕಾರ್ಯಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬಲ್ಲರು. ಈ ನಿಟ್ಟಿನಲ್ಲಿ ನೋಡಿದಾಗ ೧೮ ರಿಂದ ೨೫ ವರ್ಷದ ಒಳಗಿನ ಸದಸ್ಯರ ಸಂಖ್ಯೆ ಶೇಕಡಾ ೪೨.೯ರಷ್ಟಿದೆ. ಜಾತಿವಾರು ಸಂಖ್ಯೆಯನ್ನು ಈ ಮುಂದಿನ ಕೋಷ್ಟಕದಲ್ಲಿ ಕಾಣಬಹುದು.

ಕೋಷ್ಟಕ: ಚುನಾಯಿತ ಮಹಿಳಾ ಸದಸ್ಯರ ವಯಸ್ಸಿನ ವಿವರ

ಕ್ರ. ಸಂ

ವಯಸ್ಸಿನ ವಿವರ

ಪ.ಜಾ

ಪ.ಪಂ.

ಹಿ.ವ.ಅ.

ಹಿ.ವ.ಬ.

ಸಾಮಾನ್ಯ

ಇತರೆ

ಒಟ್ಟು

ಶೇಕಡ

ಒಟ್ಟು

ಶೇಕಡ

ಒಟ್ಟು

ಶೇಕಡ

ಒಟ್ಟು

ಶೇಕಡ

ಒಟ್ಟು

ಶೇಕಡ

ಒಟ್ಟು

ಶೇಕಡ

ಒಟ್ಟು

ಶೇಕಡ

೧೮೨೫ ೦೭ ೯.೩ ೮.೮ ೧೧ ೧೨.೪ ೦೨ ೯.೫ ೧೩ ೮.೨ ೦೩ ೯.೪ ೩೯ ೯.೫
೨೬೩೫ ೩೪ ೪೪.೭ ೧೦ ೨೯.೪ ೪೦ ೪೪.೯ ೧೦ ೪೭.೭ ೬೯ ೪೩.೭ ೧೩ ೪೦.೬ ೧೭೬ ೪೩.೦
೩೬೪೫ ೧೯ ೨೫.೦ ೧೧ ೩೨.೪೩ ೨೩ ೨೫.೮ ೦೪ ೧೯.೦ ೪೯ ೩೧.೦ ೧೦ ೩೧.೩ ೧೧೬ ೨೮.೩
೪೬೫೫ ೧೪ ೧೮.೪ ೦೫ ೧೪.೭ ೧೧ ೧೨.೪ ೦೪ ೧೯.೦ ೧೬ ೧೦.೧ ೦೬ ೧೮.೭ ೫೬ ೧೩.೬
೫೫ ಮೇಲ್ಮಟ್ಟು ೦೨ ೨.೬ ೦೫ ೧೪.೭ ೦೪ ೪.೫ ೦೧ ೪.೮ ೧೧ ೭.೦ ೨೩ ೫.೬
ಒಟ್ಟು ೭೬ ೧೮.೫ ೩೪ ೮.೩ ೮೯ ೨೧.೭ ೨೧ ೫.೧ ೧೫೮ ೩೮.೫ ೩೨ ೭.೮ ೪೧೦ ೧೦೦

ಆಕರ : ಕ್ಷೇತ್ರ ಅಧ್ಯಯನದಿಂದ ಸಂಗ್ರಹಿಸಿದ ಮಾಹಿತಿ

ಶಿಕ್ಷಣ

ಗ್ರಾಮೀಣ ಪ್ರದೇಶದ ನಾಯಕತ್ವದಲ್ಲಿ ಪರಿವರ್ತನಾಶೀಲತೆಯನ್ನು ತರುವಲ್ಲಿ ಶಿಕ್ಷಣ ಮಹತ್ವದ ಪಾತ್ರವಹಿಸಬಲ್ಲದು. ಆಯ್ಕೆಯಾದ ಚುನಾಯಿತ ವರ್ಗ ಶಿಕ್ಷಣ ಪಡೆದುಕೊಂಡಿಲ್ಲದಿದ್ದರೆ, ಅಧಿಕಾರ ಪಂಚಾಯತಿ ಕಾನೂನುಗಳು, ನಿಯಮಗಳು, ಯೋಜನೆಗಳು ಮೊದಲಾದ ವಿಷಯಗಳನ್ನು ಅರ್ಥಮಾಡಿಕೊಂಡು ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ನೋಡಿದಾಗ ಅಥಣಿ ತಾಲೂಕಿನ ಗ್ರಾಮಪಂಚಾಯಿತಿ ಚುನಾಯಿತ ಮಹಿಳಾ ಸದಸ್ಯರಲ್ಲಿ ಶೇಕಡಾ ೪೯.೭೫ರಷ್ಟು ಸದಸ್ಯರು ಅನಕ್ಷರಸ್ಥರಿದ್ದಾರೆ. ಅದು ಪರಿಶಿಷ್ಟ ಜಾತಿಯಲ್ಲಿ ಶೇಕಡಾ ೫೫.೨ ಪರಿಶಿಷ್ಟ ಪಂಗಡದಲ್ಲಿ ಶೇಕಡಾ ೫೮.೮ರಷ್ಟಿದೆ. ವಿವಿಧ ಜಾತಿವಾರು ಶಿಕ್ಷಣ ಮಟ್ಟವನ್ನು ಮುಂದಿನ ಕೋಷ್ಟಕದಲ್ಲಿ ಕಾಣಬಹುದು.

ಕೋಷ್ಟಕ೬: ಚುನಾಯಿತ ಮಹಿಳಾ ಸದಸ್ಯರ ಶೈಕ್ಷಣಿಕ ವಿವರ

ಕ್ರ.
ಸಂ.

ವಯಸ್ಸಿನ
ವಿವರ

ಪ.ಜಾ

ಪ.ಪಂ.

ಹಿ.ವ.ಅ.

ಹಿ.ವ.ಬ.

ಸಾಮಾನ್ಯ

ಇತರೆ

ಒಟ್ಟು

ಶೇಕಡ

ಒಟ್ಟು

ಶೇಕಡ

ಒಟ್ಟು

ಶೇಕಡ

ಒಟ್ಟು

ಶೇಕಡ

ಒಟ್ಟು

ಶೇಕಡ

ಒಟ್ಟು

ಶೇಕಡ

ಒಟ್ಟು

ಶೇಕಡ

೧೦ ೧೩.೨ ೦೮ ೨೩.೫ ೧೨ ೧೩.೫ ೧೬ ೧೦.೧ ೦೪ ೧೨.೫ ೫೦ ೧೨.೨
೧೪ ೧೮.೪ ೦೫ ೪೧.೨ ೨೦ ೨೨.೫ ೦೫ ೨೩.೮ ೩೫ ೨೨.೨ ೧೧ ೩೪.೪ ೯೦ ೨೨.೦
೧೦ ೦೮ ೧೦.೫ ೦೧ ೧.೩ ೦೯ ೧೦.೧ ೦೩ ೧೪.೩ ೨೮ ೧೭.೭ ೦೧ ೩.೧ ೫೦ ೧೨.೨
೧೧೧೨ ೦೨ ೨.೬ ೦೨ ೨.೨ ೦.೭ ೪.೪ ೧೧ ೨.೭
ಪದವಿ ೦೧ ೪.೮ ೦೪ ೨.೫ ೦೫ ೧.೨
ಯಾವುದು ಇಲ್ಲ ೪೨ ೫೫.೩ ೨೦ ೨೬.೦ ೪೬ ೫೧.೭ ೧೨ ೫೭.೧ ೬೮ ೪೩.೧ ೧೬ ೩೦ ೨೦೪ ೪೯.೭
ಒಟ್ಟು ೭೬ ೧೮.೫ ೩೪ ೮.೩ ೮೯ ೨೧.೭ ೨೧ ೫.೧ ೧೫೮ ೩೮.೫ ೩೨ ೭.೮ ೪೧೦ ೧೦೦

ಆಕರ : ಕ್ಷೇತ್ರ ಅಧ್ಯಯನದಿಂದ ಸಂಗ್ರಹಿಸಿದ ಮಾಹಿತಿ

ವೃತ್ತಿ

ವೃತ್ತಿಯು ಚುನಾಯಿತರ ಆರ್ಥಿಕ ಅಂತಸ್ತನ್ನು ಮಾತ್ರ ತಿಳಿಸಲು ನೆರವಾಗದೆ ತಮ್ಮ ವೃತ್ತಿಯಲ್ಲಿಯೇ ತೊಡಗಿರುತ್ತಾರೆಯೋ? ಅಥವಾ ತಮ್ಮ ರಾಜಕೀಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಎಷ್ಟರಮಟ್ಟಿಗೆ ಭಾಗವಹಿಸುತ್ತಾರೆ? ಕೇವಲ ವೃತ್ತಿಗೆ ಆದ್ಯತೆಯನ್ನು ನೀಡುತ್ತಾರೆಯೇ? ಇಲ್ಲ ಎರಡಕ್ಕೂ ಸಮಾನ ಆದ್ಯತೆ ನೀಡುತ್ತಾರೆಯೋ? ಎನ್ನುವುದನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ನೋಡಿದಾಗ ಶೇಕಡಾ ೯೧.೪೬ರಷ್ಟು ಸದಸ್ಯರು ಮನೆಕೆಲಸದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಥಣಿ ತಾಲೂಕಿನ ರೈತ ಕುಟುಂಬಗಳು ತಮ್ಮ ವಸತಿಯನ್ನು ತಮ್ಮ ತಮ್ಮ ವ್ಯವಸಾಯ ಭೂಮಿಯಲ್ಲಿಯೇ ಕಟ್ಟಿಕೊಂಡಿರುತ್ತಾರೆ. ಏಕೆಂದರೆ ಮನೆಕೆಲಸದ ಜೊತೆಗೆ ಬೇಗನೇ ಹೊಲಮನೆಯ ಕೆಲಸವನ್ನು ಮಾಡಿಕೊಳ್ಳಬಹುದು ಎನ್ನುವುದಕ್ಕಾಗಿ. ಇದರಿಂದ ಪ್ರತಿಯೊಂದು ಮನೆಯು ಗ್ರಾಮದಿಂದ ದೂರವಿರುವುದರಿಂದ ಬಹುತೇಕ ಮಹಿಳೆಯರು ಗ್ರಾಮಪಂಚಾಯಿತಿ ಪ್ರಕ್ರಿಯೆಯಲ್ಲಿ ಭಾಗವಹಿಸದೇ ತಮ್ಮ ಪತಿ ಇಲ್ಲವೇ ಸಂಬಂಧಿಗಳು ಭಾಗವಹಿಸುತ್ತಾರೆ. ಹೆಸರಿಗೆ ಮಾತ್ರ ಮಹಿಳೆಯು ಸದಸ್ಯೆಯಾಗಿರುತ್ತಾಳೆ ಎನ್ನುವುದನ್ನು ಸಂದರ್ಶನದ ಸಂದರ್ಭದಲ್ಲಿ ತಿಳಿದುಕೊಳ್ಳಲಾಯಿತು. ಇದಕ್ಕೆ ಸಂಬಂಧಿಸಿದಂತೆ ವಿವಿಧ ವೃತ್ತಿಯಲ್ಲಿ ತೊಡಗಿದ ಸದಸ್ಯರ ವಿವರವನ್ನು ಈ ಮುಂದಿನ ಕೊಷ್ಟಕದಲ್ಲಿ ಕಾಣಬಹುದು.

ಕೋಷ್ಟಕ ೭: ಚುನಾಯಿತ ಮಹಿಳಾ ಸದಸ್ಯರ ವೃತ್ತಿಯ ವಿವರ

ಕ್ರ. ಸಂ.

ವಯಸ್ಸಿನ ವಿವರ

ಪ.ಜಾ

ಪ.ಪಂ.

ಹಿ.ವ.ಅ.

ಹಿ.ವ.ಬ.

ಸಾಮಾನ್ಯ

ಇತರೆ

ಒಟ್ಟು

ಶೇಕಡ

ಒಟ್ಟು

ಶೇಕಡ

ಒಟ್ಟು

ಶೇಕಡ

ಒಟ್ಟು

ಶೇಕಡ

ಒಟ್ಟು

ಶೇಕಡ

ಒಟ್ಟು

ಶೇಕಡ

ಒಟ್ಟು

ಶೇಕಡ

ಮನೆಕೆಲಸ ೬೬ ೮೬.೮ ೩೧ ೯೧.೨ ೮೨ ೯೨.೧ ೧೮ ೮೫.೭ ೧೪೮ ೯೩.೭ ೩೦ ೯೩.೭ ೩೭೫ ೯೧.೫
ವ್ಯವಸಾಯ ೦೯ ೧೧.೮ ೦೩ ೮.೮ ೦೫ ೫.೭ ೦೨ ೯.೫ ೦೬ ೩.೮ ೦೨ ೬.೩ ೭೭ ೬.೬
ಕೂಲಿ ೦೧ ೧.೪ ೦೧ ೧.೧ ೦೨ ೧.೩ ೦೪ ೦.೮
ವ್ಯಾಪಾರ ೦೧ ೦.೬ ೦೧ ೦.೩
ಉದ್ಯೋಗ ೦೧ ೧.೧ ೦೧ ೪.೮ ೦೧ ೦.೬ ೦೩ ೦.೮
ಒಟ್ಟು ೭೬ ೧೮.೫ ೩೪ ೮.೩ ೮೯ ೨೧.೭ ೨೧ ೫.೧ ೧೫೮ ೩೮.೫ ೩೨ ೭.೮ ೪೧೦ ೧.೫೦

ಆಕರ : ಕ್ಷೇತ್ರ ಅಧ್ಯಯನದಿಂದ ಸಂಗ್ರಹಿಸಿದ ಮಾಹಿತಿ

ತರಬೇತಿ

ಚುನಾಯಿತ ಸದಸ್ಯರಿಗೆ ಆಡಳಿತ ಅಧಿಕಾರ ಮತ್ತು ಯೋಜನೆಗಳ ಬಗ್ಗೆ ಸರಿಯಾದ ತರಬೇತಿಯನ್ನು ನೀಡಿದಾಗ ಮಾತ್ರ ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯ. ಆದರೆ ಬಹುತೇಕ ಸದಸ್ಯರು ಅನಕ್ಷರಸ್ಥರಾಗಿದ್ದು, ಕುಟುಂಬದ ಜವಾಬ್ದಾರಿ ಮತ್ತು ಕೃಷಿಯಲ್ಲಿ ಅನಿವಾರ್ಯವಾಗಿ ಕೆಲಸ ಮಾಡಬೇಕಾಗಿರುವುದರಿಂದ ತರಬೇತಿಯನ್ನು ಪಡೆದುಕೊಂಡಿರುವುದಿಲ್ಲ. ಈಗಾಗಲೇ ಅಬ್ದುಲ್ ನಜೀರ್ ಸಾಬ್ ಗ್ರಾಮೀಣ ತರಬೇತಿ ಕೇಂದ್ರ ಮೈಸೂರು ಇದರ ವತಿಯಿಂದ ತರಬೇತಿಯನ್ನು ನೀಡಲಾಗುತ್ತಿದೆ. ಆದರೆ ಅದು ನೆಪ ಮಾತ್ರ ಎನ್ನುವಂತಾಗಿದೆ. ಇದಕ್ಕೆ ಕಾರಣಗಳನ್ನು ಹುಡುಕಿದಾಗ ಕಂಡುಬಂದಿದ್ದೇನೆಂದರೆ ಶೇಕಡಾ ೨೫.೧ರಷ್ಟು ಸದಸ್ಯರು ಅನಿವಾರ್ಯವಾಗಿ ಕೃಷಿಯಲ್ಲಿಯೇ ಕೆಲಸ ಮಾಡಬೇಕಾಗಿರುವುದು. ಶೇಕಡಾ ೪೯.೮ರಷ್ಟು ಸದಸ್ಯರು ಅನಕ್ಷರಸ್ಥರಾಗಿದ್ದು, ಹೆಚ್ಚು ವಯಸ್ಸನ್ನು ಹೊಂದಿದವರಾಗಿದ್ದಾರೆ. ಇಂತಹ ಸದಸ್ಯರಿಗೆ ತರಬೇತಿಯಲ್ಲಿನ ಯಾವ ಅಂಶಗಳನ್ನು ಅರ್ಥಮಾಡಿಕೊಂಡು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಚುನಾಯಿತ ಮಹಿಳಾ ಸದಸ್ಯರು ತೃಪ್ತಿಕರವಾಗಿ ಕಾರ್ಯನಿರ್ವಹಿಸಲು ಕಂಡುಬಂದ ಅಂಶಗಳನ್ನು ಈ ಮುಂದಿನ ಕೋಷ್ಟಕದಲ್ಲಿ ಕಾಣಬಹುದು.

ಕೋಷ್ಟಕ: ತೃಪ್ತಿಕರವಾಗಿ ಕಾರ್ಯನಿರ್ವಹಿಸದಿರಲು ಕಾರಣಗಳೇನು?

ಕ್ರ.ಸಂ. ಕಾರಣಗಳು ಒಟ್ಟು ಶೇಕಡಾ
ರಾಜಕೀಯ ಇಚ್ಛಾಶಕ್ತಿ ಕೊರತೆ ೯೦ ೨೧.೯
ಕರ್ತವ್ಯಗಳ ಬಗ್ಗೆ ಅರಿವಿಲ್ಲದಿರುವುದು ೧೦೬ ೨೫.೮
ಅನಕ್ಷರತೆ ೯೬ ೨೩.೪
ಪುರುಷರ ಅಸಹಕಾರ ೨೦ ೪.೮
ಕುಟುಂಬದ ಜವಾಬ್ದಾರಿ ೯೮ ೨೩.೯
  ಒಟ್ಟು ೪೧೦ ೧೦೦

ಮೇಲಿನ ಕೋಷ್ಟಕವನ್ನು ನೋಡಿದಾಗ ಮತ್ತು ಕ್ಷೇತ್ರಾಧ್ಯಯನದಲ್ಲಿ ಕಂಡುಕೊಂಡಂತೆ, ಅಥಣಿ ತಾಲೂಕಿನಲ್ಲಿ ಚುನಾಯಿತ ಮಹಿಳೆಯರಲ್ಲಿ, ಹೆಚ್ಚಿನ ಮಹಿಳೆಯರು ಅನಕ್ಷರಸ್ಥ ರಾಗಿರುವುದರಿಂದ, ರಾಜಕೀಯ ಇಚ್ಛಾ ಶಕ್ತಿ ಇಲ್ಲದಿರುವುದರಿಂದ ಗ್ರಾಮ ಪಂಚಾಯಿತಿಗಳ ಸಭೆಗಳಲ್ಲಿ ಭಾಗವಹಿಸುವುದು ತುಂಬಾ ವಿರಳ. ಮೀಸಲಾತಿ ನೀಡಿದಾಕ್ಷಣ ಮಹಿಳೆಯರು ಗ್ರಾಮದ ಅಭಿವೃದ್ದಿಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಎನ್ನುವ ಭಾವನೆ ತಪ್ಪಾಗಿ ಕಂಡುಬರುತ್ತದೆ. ಮೀಸಲಾತಿಯ ಜೊತೆಗೆ ಕನಿಷ್ಠ ಮಟ್ಟದ ಶೈಕ್ಷಣಿಕ ಅರ್ಹತೆಯನ್ನು ಸೇರಿಸಿದ್ದರೆ, ಆಗ ಸರ್ಕಾರದ ಉದ್ದೇಶ ಮತ್ತು ಗ್ರಾಮೀಣ ಅಭಿವೃದ್ದಿಯ ಉದ್ದೇಶ ಎರಡೂ ಸಾರ್ಥಕವಾಗುತ್ತಿದ್ದವು.

ಇವೆಲ್ಲವುಗಳನ್ನು ನೋಡಿದಾಗ ಅಥಣಿ ತಾಲೂಕಿನ ಮಹಿಳಾ ರಾಜಕೀಯ ಸ್ಥಿತಿಯಲ್ಲಿ ಇನ್ನೂ ಸುಧಾರಣೆಯಾಗಬೇಕಾಗಿದೆ. ಅಥಣಿ ಗ್ರಾಮೀಣ, ಉಗಾರ, ಐನಾಪೂರ, ಮೊದಲಾದ ಕೆಲವೇ ಗ್ರಾಮಗಳನ್ನು ಹೊರತುಪಡಿಸಿದರೆ ಉಳಿದ ಗ್ರಾಮಗಳ ಮಹಿಳಾ ಸದಸ್ಯರು ಹೆಚ್ಚು ಸಕ್ರಿಯವಾಗಿಲ್ಲ. ಅವರ ರಾಜಕೀಯ ಇಚ್ಛಾಶಕ್ತಿ ಕೊರತೆ, ಕರ್ತವ್ಯಗಳ ಬಗ್ಗೆ ಅರಿವಿಲ್ಲದಿರುವುದು ಮತ್ತು ಕೃಷಿಗೆ ಅಂಟಿಕೊಂಡಿರುವುದು ರಾಜಕೀಯ ಪರಿಜ್ಞಾನ ಇಲ್ಲದಿರುವುದು, ಅನಕ್ಷರತೆಯಂತಹ ಕಾರಣಗಳಿಂದ ರಾಜಕೀಯ ಪಾಲ್ಗೊಳ್ಳುವಿಕೆಯಲ್ಲಿ ಸುಧಾರಣೆಯಾಗಿಲ್ಲ.

ಸಲಹೆಗಳು

೧. ಅಕ್ಷರಸ್ಥರಿಗೆ ಹೆಚ್ಚಿನ ಆದ್ಯತೆ ನೀಡಬೇಕು.

೨. ೨೫ ವರ್ಷದ ಒಳಗಿನ ಸದಸ್ಯರು ಆಯ್ಕೆಯಾಗುವಂತೆ ನೋಡಿಕೊಳ್ಳಬೇಕು.

೩. ಕಡ್ಡಾಯವಾಗಿ ತರಬೇತಿಯನ್ನು ಪಡೆದುಕೊಳ್ಳಲು ಕ್ರಮಕೈಗೊಳ್ಳಬೇಕು.

೪. ಸಭೆಗಳಿಗೆ ಹಾಜರಾಗುವಂತೆ ಪ್ರೇರೇಪಿಸಬೇಕು. ಇಂತಹ ಪ್ರಮುಖ ಕ್ರಮಗಳನ್ನು ಕೈಗೊಂಡಿದ್ದೇ ಆದರೆ ಮಹಿಳೆಯರ ರಾಜಕೀಯ ಸ್ಥಿತಿಯಲ್ಲಿ ಉತ್ತಮ ಸುಧಾರಣೆಯಾಗಬಲ್ಲದು.

೫. ಕೇವಲ, ಸಭೆಗಳಲ್ಲಿ ಮಾತ್ರ ಭಾಗವಹಿಸದೆ ಯಾವುದೇ ಇಲಾಖೆ, ಪಕ್ಷಗಳ ಸಭೆ ಸಮಾರಂಭಗಳಲ್ಲಿ ವಿಚಾರ ಸಂಕಿರಣಗಳಲ್ಲಿ, ತರಬೇತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕು.

೬. ಮಾಧ್ಯಮದವರನ್ನು ಆಹ್ವಾನಿಸಿ ಅವರ ಸಾಧನೆಗಳನ್ನು ಗಮನ ಸೆಳೆಯುವಂತೆ ಮಾಡಿದಾಗ ಪ್ರತಿಯೊಂದು ಕಾರ್ಯಗಳಲ್ಲಿ ಭಾಗವಹಿಸಲು ಮುಂದೆ ಬರುತ್ತಾರೆ.

೭. ಪುರುಷರಾದವರು, ಅಕ್ಷರಸ್ತರಾದವರು ಸಭೆಯಲ್ಲಿ ಮಾತನಾಡುವಂತೆ ಪ್ರೋತಪ್ಪು ಮಾತನಾಡಿದರೂ ಪ್ರಶಂಸಿಸಬೇಕು. ಹೀಗೆ ಇನ್ನೂ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇ ಆದರೆ ಮಹಿಳೆಯೂ ಸಹ ಸಕ್ರಿಯವಾಗಿ ತನ್ನ ಕಾರ್ಯಗಳಲ್ಲಿ ಪಾಲ್ಗೊಳ್ಳಬಲ್ಲಳು.

 

Reference

1. Uma Joshi “Rural women more powerful Role” Kurukshetra, August 1997

2. Susha “Panchayat Raj & Women” ISEC, Bangalore. 2001

3. Aditya “A review of Women Role in Panchayat Raj” Kurukshetra, vo-XLII, No.9 New Delhi, 1994

4. Keertikumar “Strategies for Empowerment of Women in Panchayat Raj Institutions”, Kurukshetra, Vo-XLII, No.9, New Delhi, 1994

5. Susheela Koushik “Women & Panchyat Raj” Anand publications, New Delhi 1996.

6. ಮಹಿಳೆರಿಗೆ ಮೀಸಲಾತಿ, ನಿಜಸಂಗತಿ, ಸಂಯುಕ್ತ ಕರ್ನಾಟಕ, 1998

7. ಅಪರ್ಣ ಬಸಲಿಂಗ ಸಮಾನತೆಯ ಸಾಧನೆಯತ್ತ ಯೋಜನಾ ಫೆಬ್ರುವರಿ 1996.