ಕೋಟಿ ಜನ್ಮವಿಕಾಸನ
ನಮ್ಮ ಇಂದಿನ ಜೀವನ –
ತನುವಿಕಾಸನ
ಮನವಿಕಾಸನ
ಮನುಜಬುದ್ಧಿ ವಿಕಾಸನ
ದಿನವು ದಿನವೂ ನೂತನ.

ದಿನವು ಅರಳುವ
ಅಲರಿನೆದೆಯಲಿ
ನವ್ಯಜೀವನವಿಕಸನ
ದಿನವು ಧ್ಯಾನಿಪ
ಭಕ್ತನೆದೆಯಲಿ
ದೈವತೇಜಪ್ರಕಾಶನ !
ನಿತ್ಯವಿಕಸನ
ಜೀವಲಕ್ಷಣ ;
ಅಲ್ಲದಿರಲದೆ ಜಡತನ.
ಮಾನವತ್ವದಿ
ದೈವವಿಕಸನ
ಅದುವೆ ಸುಂದರ ಪಾವನ.