ಈ ಪುಸ್ತಕವನ್ನು ಪ್ರಕಟಿಸಲು ಪ್ರೋತ್ಸಾಹಿಸಿದ ಮಾನ್ಯ ಕುಲಪತಿಗಳಾದ ಡಾ. ಎಚ್. ಜೆ. ಲಕ್ಕಪ್ಪಗೌಡ ಅವರಿಗೆ ಕುಲಸಚಿವರಾದ ಡಾ. ಕೆ. ವಿ. ನಾರಾಯಣ ಅವರಿಗೆ, ನಾನು ಮೊದಲಿಗೆ ಕೃತಜ್ಞನಾಗಿರುವೆ. ಕ್ಷೇತ್ರಕಾರ್ಯ ಸಂದರ್ಭದಲ್ಲಿ ನನ್ನೊಂದಿಗೆ ಸಹಕರಿಸುವುದರೊಂದಿಗೆ ಮಾಹಿತಿಯನ್ನು ಪರಿಶೀಲಿಸಿದ ವಿಭಾಗದ ಮುಖ್ಯಸ್ಥರಾದ ಟಿ. ಆರ್. ಚಂದ್ರಶೇಖರ್ ಅವರಿಗೆ ಹಾಗೂ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಜೊತೆಗೆ ಪಾಲೊಂಡಿದ್ದ ಸಂಶೋಧನಾ ವಿದ್ಯಾರ್ಥಿಗಳಾದ ಜೆ. ಕೃಷ್ಣ ಮತ್ತು ಯರ್ರಿಸ್ವಾಮಿ ಅವರ ನೆರವಿಗೆ ಆಬಾರಿಯಾಗಿದ್ದೇನೆ. ಅಂತೇಯೇ ಮುದ್ರಣಕ್ಕೆ ಅಚ್ಚುಕಟ್ಟುತನವನ್ನು ಪ್ರದರ್ಶಿಸುತ್ತಿರುವ ಪ್ರಸಾರಾಂಗವು ಈ ಕೃತಿಯನ್ನು ಪ್ರಕಟಿಸುತ್ತಿರುವುದು ನನಗೆ ವೈಯಕ್ತವಾಗಿಯೂ ಸಂತೋಷದ ವಿಚಾರವೆಂದೇ ಹೇಳಬೇಕು. ಅದರಲ್ಲೂ ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನ ಮೂರ್ತಿ ಅವರ ಸಹಕಾರ, ಹಸ್ತಪ್ರತಿ ಕರಡು, ವಿನ್ಯಾಸದ ಎಲ್ಲ ಕೆಲಸವನ್ನು ಒಪ್ಪವಾಗಿ ತಿದ್ದಿ ನನ್ನ ಕೆಲಸವನ್ನು ಹಗುರ ಮಾಡಿದ ಮಿತ್ರ ಶ್ರೀ. ಕೆ. ಎಲ್. ರಾಜಶೇಖರ್ ಅವರಿಗೆ, ಅದೇ ರೀತಿ ಪುಸ್ತಕಕ್ಕೊಂದು ಅಂದವಾದ ರಕ್ಷಾ ಕವಚವನ್ನು ಹೊದಿಸಿರುವ ಶ್ರೀ. ಕೆ. ಕೆ. ಮಕಾಳಿ ಅವರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

. ಶ್ರೀಧರ