ಗುರುಮುಟ್ಟಿ ಗುರುವಾಗಿ ಅರುವಿನೊಳ್ ಅರುವಾಗಿ
ಬೆರೆತು ನಾದಬಿಂದು ಸಂಮೇತ ಭರಿತಳಾಗೆ ತಂಗ್ಯಮ್ಮ || ಪ ||

ಬಸವಾದಿ ಪ್ರಮಥರು ಉಸುರೀದ ವಾಕ್ಯವು
ಕೆಸರಿಲ್ಲ ಅದರೋಳು ಅನಿತು ವಿಚಾರ ಮಾಡೆ ತಂಗ್ಯಮ್ಮ || ೧ ||

ಆದಾರ ಚಕ್ರಕ್ಕೆ ನಾಲ್ಕು ಅಕ್ಷರ ದಳಕಮಲ ಆಚಾರಲಿಂಗ
ವಿಚಾರ ಮಾಡೆ ತಂಗಮ್ಮ || ೨ ||

ಸ್ವಚಿಷ್ಠನ ಚಕ್ರಕ್ಕೆ ಆರು ಆಕ್ಷರು ದಳಕಮಲ
ಗುಹೇಶ್ವರಲಿಂಗ ಬೆರೆತು ನೀನು ಮುಕ್ತಳಾಗೆ ತಂಗಮ್ಮ || ೩ ||

ಮಣಿಪೂರಕ ಚಕ್ರದಲಿ ಹತ್ತು ಅಕ್ಷರ ದಳಕಮಲ
ಶಿಕಾರಪ್ರಣವ ಶಿವಲಿಂಗ ನಿಷ್ಠೆಯಿಂದ ಪೂಜೆ ಮಾಡೆ ತಂಗ್ಯಮ್ಮ || ೪ ||

ಅನಾಥ ಚಕ್ರದಲಿ ಹನ್ನೆರಡು ಅಕ್ಷರ ದಳಕಮಲ
ವಕಾರ ಪ್ರಣವ ಜ್ಯೋತಿರ್ಮಯ ಲಿಂಗ ಪ್ರಕಾಶ
ಮಾಡೆ ತಂಗಮ್ಮ || ೫ ||

ವಿಶುದ್ಧಿಯ ಚಕ್ರದಲಿ ಹದಿನಾರಕ್ಷರ ದಳಕಮಲ
ಯಕಾರ ಪ್ರಣವ ಸದಾಶಿವಲಿಂಗ ಪ್ರಸಾದನರ್ಪಿಸಿ
ತೃಪ್ತಳಾಗೆ ತಂಗ್ಯಮ್ಮ || ೬ ||

ಅಗ್ನೇಯ ಚಕ್ರದಲಿ ಎರಡು ಅಕ್ಷರದಳ ಕಮಲ
ಓಂಕಾರ ಪ್ರಣವ ಶಿರಾ ಚಕ್ರದನೆಲೆಯನು
ನೋಡೆ ತಂಗ್ಯಮ್ಮ || ೭ ||

ಶಿವಾ ಚಕ್ರದಲಿ ಸಹಸ್ರಾರು ಅಕ್ಷರ ದಳಕಮಲ
ಅಕಾರ ಪ್ರಣವ ಕೋಟಿಸೂರ್ಯ ಪ್ರಭೆಯನು
ನೋಡೆ ತಂಗ್ಯಮ್ಮ || ೮ ||

ಪಶ್ಚಿಮ ಚಕ್ರದಲಿ ಆರು ಅಕ್ಷರ ದಳಕಮಲ
ಉಕಾರ ಪ್ರಣವ ಚಂದ್ರ ಮಂಡಲ
ನವಕಲೆಗಳ ನೋಡೆ ತಂಗಮ್ಮ || ೯ ||

ಘತಾ ಚಕ್ರದಲಿ ಐದು ಅಕ್ಷರ ದಳಕಮಲ
ಮಕಾರ ಪ್ರಣವ ಜಂಗಮಲಿಂಗ
ಸುರಿಯುತ್ತಿರುವ ಸುರೆಯನು ಕುಡಿದು
ಜನನ ಮರಣದೊಳಾಗೆ ತಂಗ್ಯಮ್ಮ || ೧೦ ||

ತೇಜೋ ಚಕ್ರದಲಿ ಮೂರು ಅಕ್ಷರ ದಳಕಮಲ
ನಿಷ್ಕಳಂಕ ನಿಸೂನ್ಯಲಿಂಗ ನಿಗಮಾತೀತನೆ
ಅವಿತಳ ಪರಂಜ್ಯೋತಿ ಸ್ವರೂಪದಿ
ಲೋಹಳಾಗೆ ತಂಗ್ಯಮ್ಮ || ೧೧ ||

ಮಾಯಾ ಚಕ್ರದಲಿ ಎರಡು ಅಕ್ಷರ ದಳಕಮಲ
ಪ್ರಭುಲಿಂಗ ಪರಮ ಪ್ರಭುವಿನೊಳ್ ಬೆರೆತು
ನೀನು ಮುಕ್ತಳಾಗೆ ತಂಗಮ್ಮ || ೧೨ ||

ಗುರುಪಾದ ಸೇವೆ ತಾದೊರೆ ಕೊಂಡಿತಾದರೆ
ಪರಿದಪ್ಪ ಪಾಪ ಪರಿಮದು ಕರ್ಪೂರದ
ಗಿರಿಯು ಬೆಂದಂತೆ ಸರ್ವಜ್ಞ

ಸಣ್ಣನೆಯ ಮಳಲೊಳಗೆ ಸುಣ್ಣನೆಯ ಶಿಲೆಯೊಳಗೆ
ಬಣ್ಣಿಸಿ ಬರೆದ ಪಟದೊಳಗೆ ಇರುವಾಗ
ತನ್ನೊಳಗೆ ಇರದೆ ಸರ್ವಜ್ಞ

ಚಿತ್ತವಿಲ್ಲದೆ ಗುಡಿಯ ಸುತ್ತಿದಡೆ ಫಲವೇನು
ಎತ್ತು ಗಾಣವನು ಹೊತ್ತು ತಾ ನಿತ್ಯದಿ
ಸುತ್ತಿ ಬಂದಂತೆ ಸರ್ವಜ್ಞ

ಮನದಲ್ಲಿ ನೆನೆವಂಗೆ ಮನೆ ಏನು ಮಠ ಏನು
ಮನದಲ್ಲಿ ನೆನೆಯದಿರುವವನು ದೇಗುಲದ
ಕೊನೆಯಲ್ಲಿದ್ದೇನು ಸರ್ವಜ್ಞ

ಬಲ್ಲನೆಂಬುವ ಮಾತು ಎಲ್ಲವೂ ಹುಸಿಕಾಣೊ
ಬಲ್ಲಿರೇ ಬಲ್ಲನೆನೆ ಬೇಡ ಸುಮ್ಮನಿರ
ಬಲ್ಲವನೇ ಬಲ್ಲ ಸರ್ವಜ್ಞ

ಕೋತಿಗೆ ಗುಣವಿಲ್ಲ ಮಾತಿಗೆ ಕೊನೆಯಿಲ್ಲ
ಸೋತು ಹೋದವನಿಗೆ ಸುಖವಿಲ್ಲ ಅರಿದವಗೆ
ಜಾತಿಯೇ ಇಲ್ಲ ಸರ್ವಜ್ಞ

ಆನೆ ನೀರಾಟದಲಿ ಮೀನ ಕಂಡಂಜವುದೇ
ಹೀನ ಮಾನವರ ಬಿರುನುಡಿಗೆ ತತ್ವದ
ಜ್ಞಾನಿ ಅಂಜುವನೇ ಸರ್ವಜ್ಞ

ಸತ್ಯದಾನುಡಿ ತೀರ್ಥ ನಿತ್ಯರಾನಡೆ ತೀರ್ಥ
ಉತ್ತಮರ ಸಂಗವದು ತೀರ್ಥ ಹರಿವನೀ
ಕಿತ್ತಣದು ತೀರ್ಥ ಸರ್ವಜ್ಞ

ನೀಚರಾ ನೆರೆಯಿಂದ ಈಚಲ ಮರಲೇಸು
ಈಚಲೊಂದೆಡೆಗೆ ಉಪಕಾರಿ ನೀಚನು
ಈಚಲಿಂ ಕಷ್ಟ ಸರ್ವಜ್ಞ

ಕೊಟ್ಟದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ
ಕೊಟ್ಟದ್ದು ಕೆಟ್ಟತನ ಬೇಡ ಸ್ವರ್ಗದಲಿ
ಕೆಟ್ಟಿಹುದು ಬುತ್ತಿ ಸರ್ವಜ್ಞ

ಮಾತು ಬಲ್ಲಾಂತೆಗೆ ಯಾತವು ಸುರಿದಂತೆ
ಮಾತಾಡಲರಿಯದಾತಂಗೆ ಬರಿಯಾತ
ನೇತಾಡಿದಂತೆ ಸರ್ವಜ್ಞ

ಗುರುಗಳಿಗೆ ಹಿರಿಯರಿಗೆ ಶಿರಬಾಗಿ ಎರಗಿದರೆ
ನರಸುರರೊಲಿದು ಸಿರಿಸುರಿದು ಕೈಲಾಸ
ಕರತಲಾಮಲಕ ಸರ್ವಜ್ಞ