. ಪ್ರಸ್ತಾವನೆ

ಕರ್ನಾಟಕ ರಾಜ್ಯದ ಉತ್ತರ ಭಾಗದ ಮಧ್ಯದಲ್ಲಿರುವ ವಿಜಾಪುರ ಜಿಲ್ಲೆಯು ೧೦೫೩೬.೨೩ ಚ.ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ (ವಿಜಾಪುರ ಗ್ಯಾಸೆಟಿಯರ್ ೧೯೯೯). ವಿಸ್ತೀರ್ಣದಲ್ಲಿ ಅದು ರಾಜ್ಯದಲ್ಲಿ ನಾಲ್ಕನೆಯ ಸ್ಥಾನದಲ್ಲಿದೆ. ಇದು ಭಾರತದ ದಕ್ಷಿಣ ಪ್ರಸ್ಥಭೂಮಿಯಲ್ಲಿರುವ ಒಣ ಪ್ರದೇಶವಾಗಿದೆ. ಜನಗಣತಿ ೨೦೦೧ರ ಪ್ರಕಾರ ಜಿಲ್ಲೆಯ ಜನಸಂಖ್ಯೆ ೧೮.೦೬ ಲಕ್ಷ. ಈ ಜಿಲ್ಲೆಯ ಒಟ್ಟು ಜಿಲ್ಲಾ ಆಂತರಿಕ ಉತ್ಪನ್ನ ೨೦೦೭-೦೮ರಲ್ಲಿ ಚಾಲ್ತಿ ಬೆಲೆಗಳಲ್ಲಿ ರೂ. ೨೬೭೩೫. ಈ ಜಿಲ್ಲೆಯ ೨೦೦೧ರ ಮಾನವ ಅಭಿವೃದ್ಧಿ ಸೂಚ್ಯಂಕ ೦.೫೮೯. ಈ ಜಿಲ್ಲೆಯಲ್ಲಿನ ೨೦೦೧ರ ಸಾಕ್ಷರತಾ ಪ್ರಮಾಣ ಶೇ. ೫೭.೦೧.

ರಾಜ್ಯದ ಒಟ್ಟು ವಿಸ್ತೀರ್ಣದಲ್ಲಿ ಜಿಲ್ಲೆಯ ಭೌಗೋಳಿಕ ವಿಸ್ತೀರ್ಣದ ಪಾಲು ಶೇ. ೫.೪೯ರಷ್ಟಿದ್ದರೆ ಜನಸಂಖ್ಯೆಯಲ್ಲಿ ಅದರ ಪಾಲು ಶೇ. ೩.೪೨. ಆದರೆ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಎಸ್‌ಡಿಪಿ) ಜಿಲ್ಲೆಯ ಒಟ್ಟು ಆಂತರಿಕ ಉತ್ಪನ್ನ (ಜಿಡಿಡಿಎಸ್)ದ ಪಾಲು ಶೇ. ೨.೧೮. ಈ ಜಿಲ್ಲೆಯ ೨೦೦೭-೦೮ನೆಯ ಸಾಲಿನ ತಲಾ ವರಮಾನ ರೂ. ೨೬೭೩೫. ಇದು ೨೦೦೭-೦೮ರ ರಾಜ್ಯದ ಸರಾಸರಿ ತಲಾ ವರಮಾನದ (ರೂ. ೪೧೯೦೨) ಶೇ. ೬೩.೮೦ರಷ್ಟಾಗುತ್ತದೆ. ರಾಜ್ಯದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಜಿಲ್ಲೆಯ ಮಾನವ ಅಭಿವೃದ್ಧಿ ಸೂಚ್ಯಂಕದ ಪಾಲು ಶೇ. ೯೦.೬೧ ಜಿಲ್ಲೆಯ ಸಾಕ್ಷರತಾ ಪ್ರಮಾಣವು ರಾಜ್ಯದ ಸಾಕ್ಷರತಾ ಪ್ರಮಾಣದ ಶೇ. ೮೫.೫೪ ರಷ್ಟಿದೆ.

ಈ ವಿವರಗಳನ್ನು ನೀಡಲು ಕಾರಣವೇನೆಂದರೆ ಇದರಿಂದ ಜಿಲ್ಲೆಯ ಅಭಿವೃದ್ಧಿಯ ಸ್ಥಾನವೇನೆಂದು ಒಂದು ಸ್ಥೂಲಚಿತ್ರ ಇದರಿಂದ ದೊರೆಯುತ್ತದೆ. ಪ್ರಸ್ತುತ ಅಧ್ಯಾಯದಲ್ಲಿ ಜಿಲ್ಲೆಯ ಪ್ರಾಕೃತಿಕ ಸಂಪನ್ಮೂಲಗಳ ಒಂದು ಚಿತ್ರವನ್ನು ನೀಡಲಾಗಿದೆ. ಈ ಬಗ್ಗೆ ಒಟ್ಟಾರೆ ಹೇಳಬಹುದಾದ ಸಂಗತಿಯೆಂದರೆ ರಾಜ್ಯದಲ್ಲಿ ಅಭಿವೃದ್ಧಿ ಸಂಪನ್ಮೂಲಗಳ ದೃಷ್ಟಿಯಿಂದ ಅತ್ಯಂತ ಬಡತನದಿಂದ ಮತ್ತು ದಾರಿದ್ರ್ಯದಿಂದ ಕೂಡಿದ ಜಿಲ್ಲೆ ವಿಜಾಪುರವಾಗಿದೆ. ಈ ಜಿಲ್ಲೆಯ ವಿಸ್ತೀರ್ಣ ೧,೦೫೩,೪೭೦ ಹೆಕ್ಟೇರುಗಳು. ಆದರೆ ಜಿಲ್ಲೆಯಲ್ಲಿನ ಅರಣ್ಯ ಪ್ರದೇಶ ವಿಸ್ತೀರ್ಣ ೧೯೭೭ ಹೆಕ್ಟೇರುಗಳು. ಜಿಲ್ಲೆಯ ಭೌಗೋಳಿಕ ಪ್ರದೇಶದಲ್ಲಿ ಅರಣ್ಯ ಪ್ರದೇಶದ ವಿಸ್ತೀರ್ಣ ಶೇ. ೦.೧೯. ಪ್ರಾಕೃತಿಕವಾಗಿ ಅದು ಯಾವ ಪ್ರಮಾಣದಲ್ಲಿ ದಾರಿದ್ರ್ಯದಿಂದ ಕೂಡಿದೆ ಎಂಬುದು ಇದರಿಂದ ತಿಳಿಯುತ್ತದೆ. ಈ ಜಿಲ್ಲೆಯ ಸರಾಸರಿ ಮಳೆಯ ಪ್ರಮಾಣ ೫೫೦ ಮಿ.ಮೀ. ಇದು ರಾಜ್ಯ ಸರಾಸರಿ ಮಳೆಯ ಪ್ರಮಾಣದ (೧೧೮೯ ಮೀಮಿ) ಶೇ. ೪೬.೨೫. ಈ ಜಿಲ್ಲೆಯು ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದು ಯಾಕೆ ಎಂಬುದ್ನು ಮೇಲಿನ ವಿವರಗಳಿಂದ ತಿಳಿಯುತ್ತದೆ. ಪ್ರಕೃತಿಯು ವಿಜಾಪುರ ಜಿಲ್ಲೆಗೆ ಅನುಕೂಲಕರವಾಗಿಲ್ಲ. ಈ ಕಾರಣದಿಂದಾಗಿ ಅಲ್ಲಿ ಅಭಿವದ್ದಿಯೆಂಬುದು ಸಪಾಲಿನ ಸಂಗತಿಯಾಗದೆ.

. ಭೂಸಂಪನ್ಮೂಲ

ಈಗಾಗಲೆ ತಿಳಿಸಿರುವಂತೆ ಪ್ರಕೃತಿಯು ವಿಜಾಪುರ ಜಿಲ್ಲೆಗೆ ಅನುಕೂಲಕರವಾಗಿಲ್ಲ. ಈ ಕಾರಣದಿಂದಾಗಿಯೇ ಈ ಜಿಲ್ಲೆಯ ಕೃಷಿ ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿದೆ. ಉದಾಹರಣೆಗೆ ಜಿಲ್ಲೆಯ ೨೦೦೫-೦೬ರಲ್ಲಿ ಪ್ರತಿ ಎಕರೆಗೆ ಆಹಾರೋತ್ಪನ್ನ ಇಳುವರಿ ೦.೪೪ ಟನ್ನುಗಳಾದರೆ ರಾಜ್ಯ ಮಟ್ಟದಲ್ಲಿ ಅದು ಒಂದು ಟನ್ನಿನಷ್ಟಿದೆ. ರಾಜ್ಯಮಟ್ಟದಲ್ಲಿ ಒಟ್ಟು ಭೌಗೋಲಿಕ ವಿಸ್ತೀರ್ಣದಲ್ಲಿ ಅರಣ್ಯ ಪ್ರದೇಶದ ಪ್ರಮಾಣ ಶೇ. ೧೬.೧೨ರಷ್ಟಿದ್ದರೆ ವಿಜಾಪುರ ಜಿಲ್ಲೆಯಲ್ಲಿ ಅದರ ಪ್ರಮಾಣ ೦.೧೯ರಷ್ಟಿದೆ. ಈ ಜಿಲ್ಲೆಯಲ್ಲಿ ಭೂಬಳಕೆಯ ವಿವರಗಳನ್ನು ಕೋಷ್ಟಕ ೪.೧ರಲ್ಲಿ ತೋರಿಸಿದೆ.

ಅದೇ ರೀತಿಯಲ್ಲಿ ಬೀಳು ಭೂಮಿಯ ವಿಸ್ತೀರ್ಣವು ಜಿಲ್ಲೆಯ ಭೌಗೋಳಿಕ ವಿಸ್ತೀರ್ಣದಲ್ಲಿ ಶೇ. ೨೪ರಷ್ಟಿದೆ. ರಾಜ್ಯಮಟ್ಟದಲ್ಲಿ ಇದರ ಪ್ರಮಾಣ ಶೇ. ೮.೮೪. ನಿವ್ವಳ ಬಿತ್ತನೆ ಪ್ರದೇಶವು ಒಟ್ಟು ಭೌಗೋಳಿಕ ಪ್ರದೇಶದ ಶೇ. ೬೮.೦೬ರಷ್ಟಿದ್ದರೆ ರಾಜ್ಯ ಮಟ್ಟದಲ್ಲಿ ಅದರ ಪ್ರಮಾಣ ಶೇ. ೫೫.೧೭ರಷ್ಟಿದೆ. ಅಂದರೆ ಭೂಮಿಯ ಬಳಕೆಯ ತೀವ್ರತೆ ಜಿಲ್ಲೆಯಲ್ಲಿ ಕಡಿಮೆಯಿಂದ. ಬೆಳೆ ತೀವ್ರತೆಯ ಪ್ರಮಾಣ ಜಿಲ್ಲೆಯಲ್ಲಿಶೇ. ೧೦೯ರಷ್ಟಿದ್ದರೆ ರಾಜ್ಯಮಟ್ಟದಲ್ಲಿ ಅದು ಶೇ. ೧೨೩ ರಷ್ಟಿದೆ. ಆದರೆ ಜಿಲ್ಲೆಯಲ್ಲಿನ ನೀರಾವರಿ ಪ್ರದೇಶದ ವಿಸ್ತೀರ್ಣವು ನಿವ್ವಳ ಬಿತ್ತನೆ ಪ್ರದೇಶದ ಶೇ. ೧೭.೯೨ರಷ್ಟಿದ್ದರೆ ರಾಜ್ಯಮಟ್ಟದಲ್ಲಿ ಅದರ ಪ್ರಮಾಣ ೨೦೦೪-೨೦೦೫ರಲ್ಲಿ ಶೇ. ೨೮.೨೫. ಈ ಜಿಲ್ಲೆಯಲ್ಲಿ ಸಾಗುವಳಿ ಭೂಮಿಯ ವಿಸ್ತೀರ್ಣವನ್ನು ಅಧಿಕಗೊಳಿಸಲು ಅವಕಾಶವಿದೆ ಮತ್ತು ಬೆಳೆಗಳ ತೀವ್ರತೆಯನ್ನು ಹೆಚ್ಚಿಸಲು ಅವಕಾಶವಿದೆ.

ವಿಜಾಪುರ ಜಿಲ್ಲೆಯಲ್ಲಿ ಭೂಮಿಯ ಬಳಕೆ : ೨೦೦೪೦೫ (ಹೆಕ್ಟೇರುಗಳಲ್ಲಿ)

ಕೋಷ್ಟಕ .

ವಿವರಗಳು

.ಬಾಗೇವಾಡಿ

ವಿಜಾಪುರ

ಇಂಡಿ

ಮುದ್ದೇಬಿಹಾಳ

ಸಿಂದಗಿ

ಜಿಲ್ಲೆ

ಒಟ್ಟು ಭೌಗೋಳಿಕ ವಿಸ್ತೀರ್ಣ ೧೯೭೮೬೫ ೨೬೫೭೬೯ ೨೨೨೪೯೨ ೧೪೯೭೪೪ ೨೧೭೬೦೧ ೧೦೫೩೭೪೧
ಅರಣ್ಯ ೧೧೪೩ ೮೩೪ ೧೯೭೭
ಸಾಗುವಳಿ ಮಾಡದಿರುವ ಪ್ರದೇಶ ೧೪೨೩ ೮೦೮೮ ೨೪೯೩ ೨೦೮೯ ೨೨೯೦ ೧೬೩೮೩
ಸಾಗುವಳಿಗೆ ಲಭ್ಯವಿಲ್ಲದ ಭೂಮಿ ೧೨೩೯೯ ೧೯೮೫೦ ೧೪೧೫೫ ೮೫೨೪ ೯೯೮೮ ೬೪೯೦೬
ಬೀಳುಭೂಮಿ ೬೧೭೦೫ ೭೭೭೫೧ ೬೧೦೮೭ ೧೬೦೭೩ ೩೬೩೩೬ ೨೫೨೮೫೨
ಬಿತ್ತನೆ ಪ್ರದೇಶ ನಿವ್ವಳ ೧೨೧೧೯೫ ೧೩೦೮೮೩ ೧೫೯೨೪೬ ೧೭೧೧೦೪ ೧೪೪೭೫೭ ೧೬೯೧೭೧
ಒಟ್ಟು ೧೨೦೬೮ ೧೩೫೪೪೬ ೧೬೮೯೮೭ ೧೮೦೯೮೯ ೭೧೭೨೫೩ ೭೮೭೫೯೩
ನಿವ್ವಳ ನೀರಾವರಿ ಪ್ರದೇಶ (೨೦೦೪-೦೫) ೯೧೫೫ ೩೦೭೯೮ ೨೯೭೫೫ ೧೦೦೬೯ ೪೮೮೧೩ ೧೨೮೫೯೦

ಮೂಲ: ವಿಜಾಪುರ ಜಿಲ್ಲೆಯ ಅಂಕಿಅಂಶ ನೋಡ: ೨೦೦೪೦೫ ಜಿಲ್ಲಾ ಅಂಕಿ ಅಂಶ ಸಂಗ್ರಹಣಾಧಿಕಾರಿ ಕಛೇರಿ, ವಿಜಾಪುರ

ಎಲ್ಲಕಿಂತ ಮುಖ್ಯವಾಗಿ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ವಿಸ್ತೀರ್ಣವನ್ನು ಸಮರೋಪಾದಿಯಲ್ಲಿ ಹೆಚ್ಚಿಸುವ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

. ಜಲ ಸಂಪತ್ತು

ಜಲ ಸಂಪತ್ತಿಗೆ ಸಂಬಂಧಿಸಿದಂತೆಯೂ ಜಿಲ್ಲೆಯ ಅದೃಷ್ಟಶಾಲಿಯಾಗಿಲ್ಲ. ಅವಿಭಜಿತ ವಿಜಾಪುರ ಜಿಲ್ಲೆಯು ಜಲಸಂಪತ್ತಿನ ದೃಷ್ಟಿಯಿಂದ ಸಮೃದ್ಧವಾಗಿತ್ತು. ಆದರೆ ೧೯೯೭ರಲ್ಲಿ ಜಿಲ್ಲೆಯನ್ನು ವಿಭಜಿಸಿದಾಗ ಐದು ತಾಲ್ಲೂಕುಗಳನ್ನು ಪಡೆದ ವಿಜಾಪುರ ಜಿಲ್ಲೆಯು ಜಲ ಸಂಪತ್ತಿನಿಂದ ವಂಚಿತವಾಯಿತು. ಈ ಜಿಲ್ಲೆಯ ದಕ್ಷಿಣ ಗಡಿಭಾಗದಲ್ಲಿ ಕೃಷ್ಣ ನದಿಯು ಹರಿಯುತ್ತಿದ್ದರೆ ಅದರ ಉತ್ತರ ಗಡಿಯಲ್ಲಿ ಭೀಮಾ ನದಿ ಹರಿಯುತ್ತದೆ. ಈ ನದಿಯು ವಿಜಾಪುರ, ಬ.ಬಾಗೇವಾಡಿ, ಸಿಂದಗಿ ಮತ್ತು ಮುದ್ದೇಬಿಹಾಳ ತಾಲ್ಲೂಕುಗಳಲ್ಲಿ ಹರಿಯುತ್ತದೆ. ರಾಜ್ಯದಲ್ಲಿ ಇದು ೧೭೬ ಕಿ.ಮೀ. ಹರಿದರೆ ವಿಜಪುರ ಜಿಲ್ಲೆಯಲ್ಲಿಯೇ ೧೪೦ ಕಿ.ಮೀ. ಹರಿಯುತ್ತದೆ. ಈ ಜಿಲ್ಲೆಯ ಒಟ್ಟು ನೀರಾವರಿ ಪ್ರದೇಶದಲ್ಲಿ (೧೨೮೫೯೦ ಹೆಕ್ಟೇರುಗಳು) ಬಾವಿಗಳು, ಕೊಳವೆ ಬಾವಿಗಳು ಮತ್ತು ಇತರೆ ಮೂಲಗಳಿಂದ ನೀರಾವರಿ ಪಡೆದ ಪ್ರದೇಶದ (೧೦೪೯೩೩ ಹೆಕ್ಟೇರುಗಳು) ಪ್ರಮಾಣ ೨೦೦೪-೦೫ರಲ್ಲಿ ಶೇ. ೮೧.೬೦ ಜಲ ಸಂಪತ್ತಿನ ದೃಷ್ಟಿಯಿಂದ ಜಿಲ್ಲೆಯ ಸ್ಥಿತಿಯು ಸಮೃದ್ಧವಾಗಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಮಳೆ ನೀರಿನ ಅಭಾವದಿಂದಾಗಿ ಮತ್ತು ನೀರಾವರಿಯ ಅಲಭ್ಯತೆಯಿಂದಾಗಿ ಅಂತರ್ಜಲದ ಬಳಕೆ ಅಧಿಕವಾಗಿದೆ. ಈ ಜಿಲ್ಲೆಯಲ್ಲಿ ನೆಲದ ನೀರಿನ ಬಳಕೆ ಶೇ. ೫೦ರಷ್ಟಿದೆ. ಈ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ನೆಲದ ನೀರಿನ ಬಳಕೆ ಶೇ. ೬೫ಕ್ಕಿಂತ ಅಧಿಕವಾಗಿದೆ. ನೆಲದ ನೀರಿನ ಬಳಕೆ ಹೆಚ್ಚಿದಂತೆ ಜಲಮಟ್ಟವು ಕಡಿಮೆಯಾಗುತ್ತಾ ಹೋಗುತ್ತದೆ.

. ಖನಿಜ ಸಂಪತ್ತು

ಈ ಜಿಲ್ಲೆಯಲ್ಲಿ ಖನಿಜ ಸಂಪತ್ತು ಇಲ್ಲವೆಂದರೂ ಸರಿಯೇ. ಸುಣ್ಣಕಲ್ಲನ್ನು ಬಿಟ್ಟರೆ ಜಿಲ್ಲೆಯಲ್ಲಿ ಮತ್ತಾವ ಉಪಯುಕ್ತ ಖನಿಜ ದೊರೆಯುವದಿಲ್ಲ. ಮುದ್ದೇಬಿಹಾಳ ತಾಲ್ಲೂಕಿನ ತಾಳಿಕೋಟೆ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿರುವ ಅಧಿಕ ಕ್ಯಾಲ್ಸಿಯಮ್ ಸುಣ್ಣದ ಗಣಿಗಳುಕಂಡು ಬಂದಿವೆ. ಒಂದು ಅಂದಾಜಿನ ಪ್ರಕಾರ ಇಲ್ಲಿ ೨೯೭ ದಶಲಕ್ಷ ಟನ್ನುಗಳಷ್ಟು ಸಿಮೆಂಟ್ ದರ್ಜೆಯ ಸುಣ್ಣಶಿಲೆ ದೊರೆಯುತ್ತದೆ ಎಂಬುದು ಖಚಿತವಗಿದೆ.

. ಮಾನವ ಸಂಪನ್ಮೂಲ

ಜನಸಂಖ್ಯೆಯ ಸಮಸ್ಯೆಯನ್ನು ಕೆಲವೊದು ಸಂದರ್ಭದಲ್ಲಿ ಉತ್ಪೇಕ್ಷೆ ಮಾಡಲಾಗಿದೆಯೆಂಬ ಮಾತನ್ನು ಅಮರ್ತ್ಯಸೆನ್ ಹೇಳುತ್ತಾನೆ. ಅಭಿವೃದ್ಧಿಶೀಲ ದೇಶಗಳಲ್ಲಿ ಜನರನ್ನು ಕಾಡುವ ಪ್ರತಿಯೊಂದು ಸಮಸ್ಯೆಗೂ ಜನಸಂಖ್ಯೆಯ ವಿಪರೀತ ಏರಿಕೆಯನ್ನು ಕಾರಣ ಮಾಡುವುದು ರೂಢಿಯಲ್ಲಿದೆ. ಆಹಾರ ಕೊರತೆಯಿರಲಿ, ಪರಿಸರ ಅಸಮತೋಲನವಿರಲಿ, ನಿರುದ್ಯೋಗವಿರಲಿ ಎಲ್ಲದಕ್ಕೂ ಜನಸಂಖ್ಯೆಯ ಬೆಳವಣಿಗೆಯನ್ನು ಕಾರಣ ಮಾಡುವ ಒಂದು ಸಂಗತಿ ವಾಡಿಕೆಗೆ ಬಂದು ಬಿಟ್ಟಿದೆ. ನಿಜ, ಕರ್ನಾಟಕದಲ್ಲಿ ಜನಸಂಖ್ಯೆಯು ತೀವ್ರಗತಿಯಲ್ಲಿ ಬೆಳೆಯುತ್ತಿದ್ದ ಕಾಲವೊಂದಿತ್ತು. ಆದರೆ ಇಂದು ಅಂತಹ ಸ್ಥಿತಿಯಿಲ್ಲ ಜನಸಂಖ್ಯೆಯು ತೀವ್ರಗತಿಯಲ್ಲಿ ಬೆಳೆಯುತ್ತಿದ್ದರೆ ಅದರ ಪರಿಣಾಮ ಅಭಿವೃದ್ಧಿಗೆ ಅನಾನುಕೂಲಕರವಾಗಿರುತ್ತದೆ. ಆದರೆ ಅದನ್ನು ಎಲ್ಲದಕ್ಕೂ ಕಾರಣ ಮಾಡುವುದು ಸರಿಯಾದ ಕ್ರಮವೆಂದು ಅನ್ನಿಸುವುದಿಲ್ಲ. ಅಮರ್ತ್ಯಸೆನ್ ತನ್ನ ಬರಗಾಲ ಕುರಿತ ಅಧ್ಯಯನದ ಭಾಗವಾಗಿ ಹಸಿವಿನ ಸಮಸ್ಯೆಗೆ ಆಹಾರೋತ್ಪಾನೆಯಲ್ಲಿನ ಕುಸಿತವೇ ಕಾರಣವೆಂಬ ಪ್ರಮೇಯವನ್ನು ತಿರಸ್ಕರಿಸುತ್ತಾನೆ. ಬರಗಾಲಕ್ಕೆ ಸಂಬಂಧಿಸಿದ ಆಹಾರ ಉತ್ಪಾದನೆಯಲ್ಲಿ ಕುಸಿತ ಎಂಬ ವಾದವನ್ನು ಸೆನ್ ಹುಸಿಗೊಳಿಸಿಬಿಟ್ಟಿದ್ದಾನೆ. ಈ ಬಗ್ಗೆ ಬರೆಯುತ್ತಾ ಹಸಿವು, ಅಪೌಷ್ಟಿಕತೆ, ಬರ ಮುಂತಾದವುಗಳಿಗೆ ಕಾರಣವನ್ನು ಆಹಾರೋತ್ಪಾದನೆಯಲ್ಲಿ ಕಂಡುಕೊಲ್ಳುವ ಕ್ರಮ ತಪ್ಪು ಎಂದು ನುಡಿದಿದ್ದಾನೆ. ನಿಜ, ಹಸಿವಿಗೆ ಆಹಾರೋತ್ಪಾದನೆಯಲ್ಲಿನ ಬದಲಾವಣೆಯು ಒಂದು ಕಾರಣವಿದ್ದೀತು. ಆದರೆ ಅದನ್ನು ವಿಪರೀತ ಉತ್ಪೇಕ್ಷಿಸುವ ಅಗತ್ಯವಿಲ್ಲ.

ಮಾನವರು ಕೇವಲ ಸಂಪನ್ಮೂಲವೋ ಅಥವಾ ಅಭಿವೃದ್ಧಿಯನ್ನು ಅನುಭವಿಸುವವರೋ?

ಇದು ಅತ್ಯಂತ ಪ್ರಸ್ತುತವಾದ ಪ್ರಶ್ನೆಯಾಗಿದೆ. ಜನಸಂಖ್ಯೆಯಲ್ಲಿ ಸಂಖ್ಯೆಯು ಮುಖ್ಯವಾಗಿ ಜನ ಅಮುಖ್ಯವಾಗಿ ಬಿಟ್ಟಿದೆ. ಈ ಸಂಖ್ಯೆಯ ಬಗ್ಗೆ ಆತಂಕ ಹುಟ್ಟುಹಾಕಲಾಗಿದೆ. ಈ ಜನಸಂಖ್ಯೆಯನ್ನು ಅಭಿವೃದ್ಧಿ ಕುರಿತ ಚರ್ಚೆಗಳಲ್ಲಿ ಸಂಪನ್ಮೂಲವಾಗಿ ಮಾತ್ರ ನೋಡುವ ಕ್ರಮವಿದೆ. ಈ ಹಿನ್ನೆಲೆಯಲ್ಲಿ ನಾವು ಇಂದು ಚಲಾವಣೆಗೆ ಬಂದಿರುವ ಮಾನವ ಸಂಪನ್ಮೂಲದ ಅಭಿವೃದ್ದಿ ಮತ್ತು ಮಾನವ ಬಂಡವಾಳ ಮುಂತಾದ ಪರಿಕಲ್ಪನೆಗಳನ್ನು ನೋಡಬೇಕಾಗಿದೆ. ನಮ್ಮಂತಹ ದೇಶದಲ್ಲಿ ಅದರ ಗಾತ್ರದ ಬಗ್ಗೆಯೂ ಆತಂಕವಿದೆ ಮತ್ತು ಅದರ ಗುಣದ ಬಗ್ಗೆಯೂ ಸಮಸ್ಯೆಯಿದೆ. ಜನರು ಕೇವಲ ಸಂಪನ್ಮೂಲ ಮಾತ್ರವಲ್ಲ. ಅವರು ಶ್ರಮಶಕ್ತಿಯನ್ನು ನೀಡುತ್ತಾರೆ. ಅವರ ಕುಶಲತೆಯು ಅಭಿವೃದ್ಧಿಯಲ್ಲಿ ಚಾಲಕ ಶಕ್ತಿಯಾಗಿ ಕೆಲಸ ಮಾಡುತ್ತದೆ. ಇದೆಲ್ಲ ಸರಿ. ಆದರೆ ಅಭಿವೃದ್ಧಿಯ ಫಲವನ್ನು ಅನುಭವಿಸುವವರೂ ಜನರೇ ತಾನೆ? ಅದರ ಸಂಪನ್ಮೂಲದ ನೆಲೆಯನ್ನು ಪ್ರಮುಖ ಸಂಗತಿಯನ್ನಾಗಿ ಮಾಡಿ ಅಭಿವೃದ್ದಿಯನ್ನು ಅನುಭವಿಸುವುದರ ಪಾತ್ರವನ್ನು ಕಡೆಗಣಿಸಲಾಗಿದೆ. ಅಭಿವೃದ್ಧಿ ಇರುವುದು ಜನರಿಗಾಗಿಯೇ ವಿನಾ ಜನರು ಅಭಿವೃದ್ಧಿಗಾಗಿ ಅಲ್ಲ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಅಂದರೆ ಜನರು ಅಭಿವೃದ್ಧಿಯನ್ನು ಆಗು ಮಾಡುವ ಸಂಪನ್ಮೂಲವೂ ಹೌದು ಮತ್ತು ಅಭಿವೃದ್ಧಿಯನ್ನು ಅನುಭವಿಸುವ ಫಲಾನುಭವಿಗಳೂ ಹೌದು.

ಕರ್ನಾಟಕ ಮತ್ತು ವಿಜಾಪುರ ಜಿಲ್ಲೆಯ ಜನಸಂಖ್ಯಾ ಬೆಳವಣಿಗೆ ಪ್ರವೃತ್ತಿ

ಕರ್ನಾಟಕದ ಮತ್ತು ವಿಜಾಪುರದ ಜನಸಂಖ್ಯೆಯು ಯಾವಾಗಲೂ ಆತಂಕಕಾರಿಯಾಗಿರಲಿಲ್ಲ. ಇದು ಬಹಳ ಮುಪಖ್ಯವಾದ ಸಂಗತಿಯಾಗಿದೆ. ಉದಾಹರಣೆಗೆ ವಿಜಾಪುರ ಜಿಲ್ಲೆಯ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ೧೯೬೧ ರಿಂದ ೨೦೧೧ರ ವರೆಗಿನ ನಾಲ್ಕು ದಶಕಗಳಲ್ಲಿ ಯಾವಾಗಲೂ ಮಿತಿಮೀರಿ ಬೆಳದಿಲ್ಲ. ಅದ ೧೯೬೧-೭೧ರ ದಶಕದ ವಾರ್ಷಿಕ ಬೆಳವಣಿಗೆ ಪ್ರಮಾಣ ೧೯೬೧ರಿಂದ ೨೦೦೧ರವರೆಗಿನ ನಾಲ್ಕು ದಶಕಗಳಲ್ಲಿ ಯಾವಾಗಲೂ ಮಿತಿಮೀರಿ ಬೆಳೆದಿಲ್ಲ. ಅದರ ೧೯೬೧-೭೧ರ ದಶಕದ ವಾರ್ಷಿಕ ಬೆಳವಣಿಗೆ ಗತಿ ಶೇ. ೧.೮೬ರಷ್ಟಿದ್ದರೆ ೧೯೭೧-೧೯೮೧ರ ದಶಕದಲ್ಲಿ ಅವದರ ಪ್ರಮಾಣ ಶೇ. ೧.೮೭ ರಷ್ಟಿತ್ತು. ಕೇವಲ ೧೯೮೧-೧೯೯೧ರಲ್ಲಿ ಮಾತ್ರ ಅದರ ಪ್ರಮಾಣ ಶೇ. ೨.೨೯ ರಷ್ಟನ್ನು ತಲುಪಿತು. ಆದರೆ ಮತ್ತು ಅದು ೧೯೯೧-೨೦೦೧ರ ದಶಕದಲ್ಲಿ ಅದು ಶೇ. ೧.೭೫ರಷ್ಟಾಗಿದೆ. ಮುಂದೆ ೨೦೦೧-೧೧ರಲ್ಲಿ ಅದರ ಬೆಳವಣಿಗೆ ಪ್ರಮಾಣ ಇನ್ನೂ ಕಡಿಮೆಯಾಗುವ ಎಲ್ಲಾ ಧ್ಯತೆಗಳಿವೆ. ಹಾಗೆ ನೋಡಿದರೆ ೧೯೯೧-೦೧ರ ದಶಕದಲ್ಲಿ ವಿಜಾಪುರದ ಜನಸಂಖ್ಯೆಯಲ್ಲಿ ೦-೬ ವಯೋಮಾನದವರ ಸಂಖ್ಯೆಯು ಒಟ್ಟು ಮೊತ್ತದಲ್ಲಿ ಕಡಿಮೆಯಾಗಿದೆ. ಈ ಜಿಲ್ಲೆಯಲ್ಲಿ ೧೯೯೧ರಲ್ಲಿದ್ದ ೦-೬ ವಯೋಮಾನದ ಮಕ್ಕಳ ಸಂಖ್ಯೆ ೨.೯೫ ಲಕ್ಷ ಅದು ೨೦೦೧ರಲ್ಲಿ ಅದು ೨.೮೭ ಲಕ್ಷಕ್ಕೆ ಇಳಿದಿದೆ. ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ೦-೬ ವಯೋಮಾನದ ಮಕ್ಕಳ ಪ್ರಮಾಣ ೧೯೯೧ರಲ್ಲಿ ಶೇ. ೧೯.೨೪ರಷ್ಟಿದ್ದುದು ೨೦೦೧ರಲ್ಲಿ ಶೇ. ೧೫.೮೭ಕ್ಕಿಳಿದಿದೆ. ಆದರೆ ರಾಜ್ಯಮಟ್ಟದಲ್ಲಿ ೦-೬ ವಯೋಮಾನದ ಮಕ್ಕಳ ಪ್ರಮಾಣ ೨೦೦೧ರಲ್ಲಿ ಶೇ. ೧೩.೫೮ರಷ್ಟಿದೆ. ಅಂದರೆ ವಿಜಾಪುರ ಜಿಲ್ಲೆಯ ಜನಸಂಖ್ಯೆಯು ರಾಜ್ಯಮಟ್ಟದಲ್ಲಿರುವುದಕ್ಕಿಂತ ಎಳೆತನದಿಂದ ಕೂಡಿದೆಯೆಂದು ಹೇಳಬಹುದು.

ಕರ್ನಾಟಕ ರಾಜ್ಯದಲ್ಲಿ ಜನಸಂಖ್ಯೆಯ ಬೆಳವಣಿಗೆಯು ಯಾವ ಸಂದರ್ಭದಲ್ಲಿಯೂ ತೀವ್ರ ಸಮಸ್ಯೆಯಾಗಿರುವದು ಕಂಡು ಬರುವುದಿಲ್ಲ. ಅಲ್ಲಿ ೧೯೬೧-೧೯೭೧ರ ದಶಕದಲ್ಲಿ ಜನಸಂಖ್ಯೆಯ ವಾರ್ಷಿಕ ಏರಿಕೆ ಪ್ರಮಾಣ ಶೇ. ೨.೪೨ರಷ್ಟಿತ್ತು. ಮುಂದೆ ೧೯೭೧-೮೧ರ ದಶಕದಲ್ಲಿ ಅದು ಶೇ. ೨.೬೭ರಷ್ಟಾಯಿತು. ಆದರೆ ೧೯೮೧-೧೯೯೧ರ ದಶಕದಲ್ಲಿ ಅದು ಶೇ. ೨.೧೧ಕ್ಕಿಳಿಯಿತು. ಮುಂದೆ ೧೯೯೧-೦೧ರ ದಶಕದಲ್ಲಿ ಅದು ಶೇ. ೧.೭೫ಕ್ಕಿಳಿಯಿತು. ಖಚಿತವಾಗಿ ೨೦೦೧-೧೧ರ ದಶಕದಲ್ಲಿ ಅದು ತೀವ್ರ ಕಡಿಮೆಯಾಗುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ ವರತಿ ೨೦೦೫ರಲ್ಲಿ ಮಾಡಿರುವ ಅಂದಾಜಿನ ಪ್ರಕಾರ ೨೦೦೧-೧೧ರ ದಶಕದಲ್ಲಿ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ವಾರ್ಷಿಕ ಶೇ. ೧.೪೨ ರಷ್ಟಾಗುತ್ತದೆ. ಎನ್ನಲಾಗಿದೆ. ವಿಜಾಪುರದ ಜನಸಂಖ್ಯೆಯ ಬೆಳವಣಿಗೆ ಪ್ರ್ಮಾಣ ೨೦೦೧-೧೧ರ ದಶಕದಲ್ಲಿ ವಾರ್ಷಿಕ ಶೇ. ೧.೩೬ ರಷ್ಟಾಗುವ ಸಾಧ್ಯತೆಯಿಂದೆ. ಇದೆಲ್ಲ ತೋರಿಸುವುದೇನೆಂದರೆ ಕರ್ನಾಟಕದಲ್ಲಿ, ಅದೇ ರೀತಿಯಲ್ಲಿ ವಿಜಾಪುರದಲ್ಲಿ ಜನಸಂಖ್ಯೆಯು ಸಮಸ್ಯೆಯಾಗಿ ಉಳಿದಿಲ್ಲ ಎಂಬುದಾಗಿದೆ. ಅದು ಇಳಿಯುವ ಪ್ರವೃತ್ತಿಯನ್ನು ತೋರಿಸುತ್ತಿದೆ. ಯಾರಾದರೂ ನಮ್ಮ ರಾಜ್ಯದಲ್ಲಿ ಜನಸಂಖ್ಯೆಯನ್ನು ಸಮಸ್ಯೆಯನ್ನಾಗಿ ಇಂದು ಗುರುತಿಸಿದರೆ ಅವರಿಗೆ ವಸ್ತುಸ್ಥಿತಿಯು ಗೊತ್ತಿಲ್ಲವೆಂದು ಹೇಳಬೇಕಾಗುತ್ತದೆ.ಕಳೆದ ದಶಕದಲ್ಲಿ ಜನಸಂಖ್ಯೆಗೆ ಸಂಬಂಧಿಸಿದಂತೆ ಉಂಟಾಗಿರುವ ಎರಡು ಮಹತ್ವದ ಬೆಳವಣಿಗೆಗಳೆಂದರೆ ಮೊದಲನೆಯದಾಗಿ ಜನಸಂಖ್ಯೆಯಲ್ಲಿ ೦.೧೫ ವಯೋಮಾನದವರ ಪ್ರಮಾಣವು ಕಡಿಮೆಯಾಗಿದೆ. ಎರಡನೆಯದಾಗಿ ೧೫ ರಿಂದ ೫೯ ವಯೋಮಾನದ ದುಡಿಯುವ ವರ್ಗದ ಪ್ರಮಾಣ ಅಧಿಕಗೊಂಡಿದೆ.

ಜನಸಂಖ್ಯೆಯಲ್ಲಿ ೦-೧೫ ವಯೋಮಾನದವರ ಪ್ರಮಾಣ ಕಡಿಮೆಯಾಗುತ್ತಿರುವುದು ಜನಸಂಖ್ಯೆಯ ಬೆಳವಣಿಗೆ ಗತಿಯು ಕಡಿಮೆಯಾಗುತ್ತಿರುವುದುರ ಸೂಚಿಯಾಗಿದೆ. ಜನಸಂಖ್ಯೆಯಲ್ಲಿ ೧೫-೫೯ ವಯೋಮಾನದ ದುಡಿಯುವ ವರ್ಗಧ ಪ್ರಮಾಣ ಅಧಿಕಗೊಂಡಿರುವುದು ಅಭಿವೃದ್ಧಿಯ ದೃಷ್ಟಿಯಿಂದ ಆಶಾದಾಯಕ ಸಂಗತಿಯಾಗಿದೆ. ಈ ಬದಲಾವಣೆಗಳು ರಾಜ್ಯಮಟ್ಟದಲ್ಲಿ ಹೇಗೆ ನಡೆಯುತ್ತಿದೆಯೋ ಅದೇ ಕ್ರಮದಲ್ಲಿ ವಿಜಾಪುರ ಮಟ್ಟದಲ್ಲೂ ನಡೆಯುತ್ತಿವೆ. ಒಂದು ಸೂಕ್ಷ್ಮವಾಗಿ ಗಮನಿಸಬೇಕಾದ ಸಂಗತಿಯೆಂದರೆ ಈಗಾಗಲೇ ಹೇಳಿರುವಂತೆ ವಿಜಾಪುರ ಜಿಲ್ಲೆಯ ಜನಸಂಖ್ಯೆಯು ಎಳೆತನದಿಂದ ಕೂಡಿದೆ.

ಜನಸಂಖ್ಯೆ ವಯೋಮ್ನ ರಚನೆ ೨೦೦೧

ಕೋಷ್ಠಕ .

ಕ್ರಸಂ ವಯೋಮಾನ ವಿಜಾಪುರ ಜಿಲ್ಲೆ ಕರ್ನಾಟಕರಾಜ್ಯ
೧.

೦-೧೪

೬೬೫,೧೮೪ (೩೬.೮೧)

೧೬,೮೪೫,೬೦೧ (೩೧.೮೭)

೨.

೧೫-೫೯

೯೯೭,೯೫೫ (೫೫.೨೩)

೩೧,೯೪೨,೯೩೯ (೬೦.೪೪)

೩.

೬೦+

೧೪೩,೭೭೯
(೭.೯೬)

೪,೦೬೨,೦೨೨ (೭.೬೯)

೪.

ಒಟ್ಟು ಜನಸಂಖ್ಯೆ

೧,೮೦೬,೯೧೮ (೧೦೦.೦೦)

೫೨,೮೫೦,೫೬೨ (೧೦೦.೦೦)

ಮೂಲ: ಸೆನ್ಸಸ್ ಆಫ್ ಇಂಡಿಯಾ ೨೦೦೧ ಕೋಷ್ಟಕ : ಸಿ. ೧೪. ಸಿಡಿ. ಆಫೀಸ್ ಆಫ್ ರಿಜಿಸ್ಟ್ರಾರ್ ಜನರಲ್, ಇಂಡಿಯಾ

ಟಿಪ್ಪಣಿ : ಆವರಣದಲ್ಲಿರುವ ಅಂಕಿಗಳು ಸಂಬಂಧಿಸಿದ ಮೊತ್ತದ ಶೇಕಡ ಪ್ರಮಾಣವನ್ನು ತೋರಿಸುತ್ತವೆ.

ಉದಾಹರಣೆಗೆ ರಾಜ್ಯದಲ್ಲಿ ೦-೧೫ ವಯೋಮಾನದ ಜನರ ಪ್ರಮಾಣ ಶೇ. ೩೧.೮೭ರಷ್ಟಿದ್ದರೆ ವಿಜಾಪುರ ಜಿಲ್ಲೆಯಲ್ಲಿ ಅವರ ಪ್ರಮಾಣ ಶೇ. ೩೬.೮೧ರಷ್ಟಿದೆ. ಆದರೆ ದುಡಿಯುವ ವರ್ಗಕ್ಕೆ ಬಂದರೆ ರಾಜ್ಯದಲ್ಲಿ ೧೫-೫೯ ವಯೋಮಾನದ ಪ್ರಮಾಣ ಶೇ. ೬೦.೪೪ರಷ್ಟಿದ್ದರೆ ವಿಜಾಪುರ ಜಿಲ್ಲೆಯ ಅದರ ಪ್ರಮಾಣ ಶೇ. ೫೫.೨೩ ರಷ್ಟಿದೆ.ಮುಂದಿನ ದಶಕದಲ್ಲಿ ಖಚಿತವಾಗಿ ವಿಜಾಪುರ ಜಿಲ್ಲೆಯಲ್ಲಿದುಡಿಯುವ ವರ್ಗದ ಪ್ರಮಾಣವು ರಾಜ್ಯಮಟ್ಟದಲ್ಲಿರುವುದಕ್ಕಿಂತ ಅಧಿಕವಾಗುತ್ತದೆ. ಇಂದು ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಸ್ವಾಗತಾರ್ಹವಾದ ಸಂಗತಿಯಾಗಿದೆ.

. ಗ್ರಾಮೀಣ ಪ್ರಧಾನ ಜಿಲ್ಲೆ

ನಗರೀಕರಣವನ್ನು ಅಭಿವೃದ್ಧಿಯ ಒಂದು ಸೂಚಿಯನ್ನಾಗಿ ಭಾವಿಸಲಾಗಿದೆ. ಈ ಮಾನಂದಂಡದಿಂದ ನೋಡಿದಾಗ ವಿಜಾಪುರ ಜಿಲ್ಲೆಯ ಹಿಂದುಳಿದಿರುವಿಕೆಯನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ಈ ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರಮಾಣ ೧೯೮೧ರಲ್ಲಿ ಶೇ. ೮೧.೩೬ರಷ್ಟಿದ್ದುದು ೨೦೦೧ರಲ್ಲಿ ಶೇ. ೭೮.೦೮ಕ್ಕಿಳಿದಿದೆ. ರಾಜ್ಯಮಟ್ಟದಲ್ಲಿ ಇದು ೧೯೮೧ರಲ್ಲಿ ೭೧.೧೧ರಷ್ಟಿದ್ದುದು ೨೦೦೧ರಲ್ಲಿ ಅದು ಶೇ. ೬೬.೦೬ ಕ್ಕಿಳಿದಿದೆ. ಜಿಲ್ಲಾ ಮಟ್ಟದಲ್ಲಿ ಗ್ರಾಮೀಣ ಪ್ರದೇಶದ ಪ್ರಮಾಣ ೧೯೮೧ರಿಂದ ೨೦೦೧ರ ಅವಧಿಯಲ್ಲಿ ಶೇ. ೪.೦೩ರಷ್ಟು ಕಡಿಮೆಯಾಗಿದ್ದರೆ ರಾಜ್ಯಮಟ್ಟದಲ್ಲಿ ಅದು ಅದೇ ಅವಧಿಯಲ್ಲಿ ಶೇ. ೭.೧೦ರಷ್ಟು ಇಳಿದಿದೆ. ಅಂದರೆ ನಗರೀಕರಣದ ಗತಿಯು ಜಿಲ್ಲಾಮಟ್ಟದಲ್ಲಿ ಮಂದಗತಿಯಲ್ಲಿ ನಡೆದಿದ್ದರೆ ರಾಜ್ಯಮಟ್ಟದಲ್ಲಿ ಅದು ತೀವ್ರಗತಿಯಲ್ಲಿ ನಡೆದಿದೆ. ಕಳೆದ ಐವತ್ತು ವರ್ಷಗಳಲ್ಲಿ ವಿಜಾಪುರ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಮೇಲಿನ ಅವಲಂಬನೆಯನ್ನು ತೀವ್ರವಾಗಿ ಕಡಿಮೆ ಮಾಡಲು ಸಾಧ್ಯವಾಗಿಲ್ಲ.

ವಿಜಾಪುರ ಜಿಲ್ಲೆಯ ತಾಲ್ಲೂಕುವಾರು ಜನಸಂಖ್ಯೆ ೧೯೭೧, ೧೯೮೧, ೧೯೯೧ ಮತ್ತು ೨೦೦೧

ಕೋಷ್ಠಕ : .

ತಾಲ್ಲೂಕು

೧೯೭೧

೧೯೮೧

೧೯೯೧

೨೦೦೧

೧. ಬ.ಬಾಗೇವಾಡಿ
ಒಟ್ಟು

೧೮೫,೬೫೯

೨೨೦,೦೨೦

೨೬೧,೭೧೧

೩೬೩,೨೯೦

ಗ್ರಾಮೀಣ

೧೭೧,೬೯೩
(೯೨.೪೬)

೨೦೧,೧೪೮

೨೩೪,೦೯೫

೨೭೪,೭೩೦
(೭೫.೬೨)

ನಗರ

೧೪,೦೦೨
(೭.೫೪)

೧೮,೮೭೨

೨೭,೬೧೬೧

೨೮,೫೬೦
(೨೪.೩೮)

೨. ಬಿಜಾಪುರ
ಒಟ್ಟು

೩೦೬,೧೦೬

೩೭೮,೯೧೦

೪೭೩,೦೪೮

೫೬೯,೩೪೮

ಗ್ರಾಮೀಣ

೨೦೨,೧೭೫
(೬೬.೦೫)

೨೩೧,೫೯೭

೨೭೯,೯೧೬

೩೧೫,೪೫೭
(೫೫.೪೧)

ನಗರ

೧೦೩,೯೩೧
(೩೩೯೫)

೧೪೭,೩೧೩

೧೯೩,೧೩೧

೨೫೩,೮೯೧
(೪೪.೫೯)

೩. ಇಂಡಿ
ಒಟ್ಟು

೨೧೨,೦೪೦
(೧೯,೫೯)

೨೪೪,೨೭೯

೩೦೩,೧೩೩

೩೩೫,೯೮೭

ಗ್ರಾಮೀಣ

೧೯೮,೨೯೫
(೯೩.೫೨)

೨೨೬,೫೧೨

೨೭೮,೦೧೨

೩೨೨,೫೦೫
(೯೧.೧೧)

ನಗರ

೧೩,೭೪೫
(೬೪೮)

೧೭,೭೬೭

೨೫,೧೨೧

೩೧,೪೮೨
(೮.೮೯)

೪. ಮುದ್ದೇಬಿಹಾಳ
ಒಟ್ಟು

೧೫೮,೯೯೫

೧೮೪,೮೫೬

೨೧೯,೨೩೬

೨೫೩,೬೩೮
(೧೪.೦೪)

ಗ್ರಾಮೀಣ

೧೩೪,೦೩೬
(೮೪.೩೦)

೧೫೧,೫೫೮

೧೭೭,೨೬೦

೧೯೯,೨೧೪
(೭೮.೫೪)

ನಗರ

೨೪,೯೫೯
(೧೫.೬೯)

೩೩,೨೯೮

೪೧,೯೭೬

೫೪,೪೨೪
(೨೧.೪೬)

೫. ಸಿಂದಗಿ
ಒಟ್ಟು

೧,೯೧,೧೦೪

೨,೨೨,೭೧೨

೨,೮೦,೯೧೫

೩,೨೬,೬೫೫
(೧೮.೦೮)

ಗ್ರಾಮೀಣ

೧,೮೦,೯೨೬
(೯೪.೬೭)

೨,೦೬,೯೦೧

೨,೬೪,೭೩೨

೨,೯೮,೯೨೩
(೯೧.೫೧)

ನಗರ

೧೦,೧೭೮
(೫.೩೩)

೧೫,೮೧೧

೧೬,೧೮೩

೨೭೭೩೨
(೨೮.೪೯)

ಜಿಲ್ಲೆ ಒಟ್ಟು

೧,೦೫೩,೯೪೦

೧,೨೫೦,೭೭೭

೧,೫೩೮,೦೪೨

೧,೮೦೬,೯೧೮
(೧೦೦)

ಗ್ರಾಮೀಣ

೮೮೭,೧೨೫
(೮೪.೧೭)

೧,೦೧೭,೭೧೬

೧,೨೩೪,೦೧೫

೧,೪೧೦,೮೨೯
(೭೮.೦೮)

ನಗರ

೧೬೬,೮೧೫
(೧೫.೮೩)

೨೩೩,೦೬೧

೩೦೪,೦೨೭

೩೯೬,೦೮೯
(೨೧.೯೨)

ಮೂಲ: ಭಾರತ ಸರ್ಕಾೞ, ಕರ್ನಾಚಕ ಸ್ಟೇಟ್ ಗ್ಯಾಸೆಟಿಯರ್, ವಿಜಾಪುರ ಜಿಲ್ಲೆ, ಪು. ೨೨೯೨೩೦
. ಕರ್ನಾಟಕ ಸರ್ಕಾರ, ಕರ್ನಾಟಕ ಮಾನವ ಅಭಿವೃದ್ಧಿ ವರದಿ೨೦೦೫

ಟಿಪ್ಪಣಿ : .ಆವರಣದಲ್ಲಿ ಕೊಟ್ಟಿರುವ ಅಂಕಗಳು ಒಟ್ಟು ಜನಸಂಖ್ಯೆಯಲ್ಲಿನ ಪಾಲನ್ನುತೋರಿಸುತ್ತವೆ.
. ತ್ಲಾಲುಕು ಜನಸಂಖ್ಯೆಯನ್ನು ಆಧರಿಸಿ ಜಿಲ್ಲೆಯ ಜನಸಂಖ್ಯೆಯನ್ನು ೧೯೭೧ರಿಂದ ಲೆಕ್ಕ ಹಾಕಲಾಗಿದೆ.

ವಾಸ್ತವವಾಗಿ ಜಿಲ್ಲೆಯ ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳಲ್ಲಿ ಗ್ರಾಮೀಣ ಪ್ರದೇಶದ ಪ್ರಮಾಣ ೨೦೦೧ರಲ್ಲಿ ಶೇ. ೯೦ಕ್ಕಿಂತ ಅಧಿಕವಾಗಿದ್ದರೆ ಬ.ಬಾಗೇವಾಡಿ ಮತ್ತು ಮುದ್ದೇಬಿಹಾಳ ತ್ಲಾಲುಕುಗಳಲ್ಲಿ ಅದು ಶೇ. ೭೫ಕ್ಕಿಂತ ಅಧಿಕವಾಗಿದೆ. ಜಿಲ್ಲಾ ಕೇಂದ್ರವಾಗಿರುವ ವಿಜಾಪುರ ತಾಲ್ಲುಕಿನಲ್ಲಿ ಮಾತ್ರ ಗ್ರಾಮೀಣ ವಾಸಿಗಳ ಪ್ರಮಾಣ ೨೦೦೧ರಲ್ಲಿ ಶೇ. ೫೫.೪೧ರಷ್ಟಿದೆ. ಇದು ಜಿಲ್ಲಾ ಸರಾಸರಿಯು ಸ್ವಲ್ಪಮಟ್ಟಿಗೆ ಕೆಳಮಟ್ಟದಲ್ಲಿರಲು ಕಾರಣವಾಗಿದೆ. ಇಲ್ಲಿನ ಒಂದು ಕುತೂಹಲಕಾರಿ ಸಂಗತಿಯೊಂದರ ಬಗ್ಗೆ ನಾವು ಗಮನಹರಿಸಬೇಕಾಗುತ್ತದೆ. ಅದೇನೆಂದರೆ ಇಂಡಿ ತಾಲ್ಲೂಕಿನಲ್ಲಿ ಗ್ರಾಮೀಣ ಜನಸಂಖ್ಯೆಯ ಪ್ರಮಾಣ ೧೯೭೧ರಿಂದ ೨೦೦೧ರ ಅವಧಿಯಲ್ಲಿ ಕೇವಲ ಶೇ. ೯೩.೫೨ ರಿಂದ ಶೇ. ೯೧.೧೧ಕ್ಕಿಳಿದಿದೆ ಮತ್ತು ಸಿಂದಗಿ ತಾಲ್ಲೂಕಿನಲ್ಲಿ ಇದೇ ಅವಧಿಯಲ್ಲಿ ಅದು ಶೇ. ೯೪.೬೭ ರಿಂದ ಶೇ. ೯೧.೧೫ಕ್ಕಿಳಿದಿದೆ. ಈ ತಾಲ್ಲೂಕುಗಳಲ್ಲಿ ನಗರೀಕರಣವು ಅತ್ಯಂತ ಮಂದಗತಿಯಲ್ಲಿ ನಡೆದಿರುವುದು ಇದರಿಂದ ತಿಳಿಯುತ್ತದೆ. ನಗರೀಕರಣವೇನೂ ಸ್ವಾಗತಾರ್ಹವಾದ ಸಂಗತಿಯೇನಲ್ಲ. ಆದರೂ ಅದರಿಂದ ಉದ್ಯೋಗದ ಅವಕಾಶಗಳು ವಿಸ್ತೃತಗೊಳ್ಳುವ ಸಾಧ್ಯತೆಯಿದೆ. ಇಲ್ಲಿ ಸೇವಾ ಕ್ಷೇತ್ರವು ತೀವ್ರಗತಿಯಲ್ಲಿ ಬೆಳೆಯುವುದು ಸಾಧ್ಯವಾಗುತ್ತದೆ. ಈ ಜಿಲ್ಲೆಯಲ್ಲಿ ಅಭಿವೃದ್ಧಿಯು ಸಂಪೂರ್ಣವಾಗಿ ಕೃಷಿಯನ್ನು ಅವಲಂಬಿಸಿರುವುದರಿಂದ ಮತ್ತು ಅದು ಒಣಭೂಮಿ ಕೃಷಿಯಾಗಿರುವುದರಿಂದ ಅಲ್ಲಿ ಗ್ರಾಮೀಣವಾಸಿಗಳ ಪ್ರಮಾಣ ಅತ್ಯಧಿಕವಾಗಿದೆ.