. ಪ್ರಸ್ತಾವನೆ

ಈಗಾಗಲೆ ತಿಳಿಸಿರುವಂತೆ (ಅಧ್ಯಾಯ-೭, ಭಾಗ-೭.೨) ಅಭಿವೃದ್ದಿಯಲ್ಲಿ ಶಿಕ್ಷಣ, ಸಾಕ್ಷರತೆ ಮತ್ತು ಆರೋಗ್ಯಗಳಿಗೆ ವಿವಿಧ ಬಗೆಯ ಪಾತ್ರಗಳಿವೆ. ಅವು ವಿವಿಧ ಬಗೆಯಲ್ಲಿ ಅಭಿವೃದ್ಧಿಗೆ ಕಾಣಿಕೆ ನೀಡುತ್ತಿವೆ. ದೀರ್ಘಾಯಸ್ಸಿನಿಂದ ಕೂಡಿದ ಆರೋಗ್ಯಕಾರಿ ಬದುಕು ಅಭಿವೃದ್ಧಿಯ ಒಂದು ಅಂತರ್ಗತ ಸಂಗತಿ. ವರಮ್ನದ ಏರಿಕೆ, ಉತ್ಪಾದನೆಯಲ್ಲಿನ ವಿಸ್ತರಣೆ. ತಂತ್ರಜ್ಞಾನದಲ್ಲಿನ ಬೆಳವಣಿಗೆಗಳಿಂದ ಸಮೃದ್ಧ ಜೀವನ ಸಾಧ್ಯವಿಲ್ಲ. ಬದುಕು ಸಮೃದ್ಧವಾಗ ಬೇಕಾದರೆ ಅದು ಅಗತ್ಯವಾಗಿ ಆರೋಗ್ಯವನ್ನು ಒಳಗೊಂಡಿರಬೇಕಾಗುತ್ತದೆ. ಆರೋಗ್ಯ ಸೂಚಿಗಳನ್ನು ಅಭಿವೃದ್ಧಿಯ ಸಾಧನಗಳನ್ನಾಗಿ ನೋಡುವ ಕ್ರಮವು ವ್ಯಾಪಕವಾಗಿದೆ. ಇದನ್ ‘ಸರಕ -ಸರಂಜಾಮು ದೃಷ್ಟಿಕೋನ’ ವೆಂದು ಕರೆಯಬಹುದು. ಆದರೆ ವರಮಾನಕ್ಕೆ ಅಭಿವೃದ್ಧಿಯಲ್ಲಿಕೇವಲ ಸಾಧನವಾಗಿ ಮಾತ್ರ ಪಾತ್ರವಿದ್ದರೆ ಆರೋಗ್ಯಕ್ಕೆ ಅಭಿವೃದ್ಧಿಯಲ್ಲಿ ಮೂರು ಪಾತ್ರಗಳಿವೆ. ಮೊದಲನೆಯದಾಗಿ ಅದು ಜನರ ಕಾರ್ಯಕ್ಷಮತೆಯನ್ನು ಉತ್ತಮಪಡಿಸುತ್ತದೆ. ಕಾರ್ಮಿಕರ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಆ ಮೂಲಕ ಅದು ಅಭಿವೃದ್ಧಿಗೆ ಕಾಣಿಕೆ ನೀಡುತ್ತದೆ.ಇದು ಸಾಧನವಾಗಿ ಅದು ವಹಿಸುವ ಪಾತ್ರ (ಇನ್‌ಸ್ಟ್ರುಮೆಂಟಲ್ ರೋಲ್). ಇದಕ್ಕಿಂತ ಮುಖ್ಯವಾಗಿ ಅದು ಜನರ ಸುಖೀ ಬದುಕಿನ, ಜನರ ಸಮೃದ್ಧ ಬದುಕಿನ ಅಂತರ್ಗತ ಭಾಗವಾಗಿದೆ (ಕಾನ್ಟಿಟಿಟಿವ್ ಎಲಿಮೆಂಟ್). ಆರೋಗ್ಯವೇ ಅಭಿವೃದ್ಧಿ. ಇದು ಅದರ ಎರಡನೆಯ ಪಾತ್ರ. ಮೂರನೆಯದಾಗಿ ಅದು ಅಭಿವೃದ್ಧಿಯ ಮೌಲ್ಯಮಾಪನದ ಅಳತೆಗೋಲಾಗಿದೆ (ಎವಾಲ್ಯುವೇಟಿವ್ ಎಲಿಮೆಂಟ್). ವರಮಾನದಲ್ಲಿನ ಏರಿಕೆಯು ತನ್ನಷ್ಟಕ್ಕೆ ತಾನೆ ಅಂದರೆ ಅರ್ಥಿಕ ಅಭಿವೃದ್ಧಿಯು ತನ್ನಷ್ಟಕ್ಕೆ ತಾನೆ ಜನರ ಆರೋಗ್ಯವಾಗಿ ಪರಿವರ್ತನೆಯಾಗುತ್ತದೆ ಎಂಬ ನಂಬಿಕೆಯು ಇಂದು ಹುಸಿಯಾಗಿದೆ. ವರಮಾನದ ಏರಿಕೆ ಮೂಲಕ ಆರೋಗ್ಯವನ್ನು ಸಾಧಿಸಿಕೊಳ್ಳುವುದು ಖಾತರಿಯಿಲ್ಲದಿರುವುದರಿಂದ ಅದನ್ನು ನೇರವಾಗಿ ಸಾಧಿಸಿಕೊಳ್ಳುವ ಅಗತ್ಯವನ್ನು ಇಂದು ಗುರುತಿಸಲಾಗಿದೆ. ಈ ದಿಶೆಯಲ್ಲಿ ವಿಜಾಪುರ ಜಿಲ್ಲೆಯಲ್ಲಿನ ಜನರ ಆರೋಗ್ಯದ ಸ್ಥಿತಿಗತಿಯನ್ನು ಪರಿಶೀಲಿಸುವ ಅಗತ್ಯವಿದೆ. ದುಡಿಮೆಗಾರರ ಕಾರ್ಯಕ್ಷಮತೆಯನ್ನು ಏರಿಸುತ್ತದೆ ಎಂಬ ಕಾರಣಕ್ಕೆ ಅದು ಮುಖ್ಯವಾಗಬೇಕಾಗಿಲ್ಲ. ಕಾರ್ಯಕ್ಷಮತೆಯನ್ನು ಉತ್ತಮ ಪಡಿಸುವುದು ಅಗತ್ಯ. ಅದು ಅಭಿವೃದ್ಧಿಗೆ ಕಾಣಿಕೆ ನೀಡುತ್ತದೆ ಎಂಬುದು ನಿ. ಅದು ಸಾಧನವಾಗಿ ಕೆಲಸ ಮಾಡುತ್ತದೆ. ನಿಜ. ಅದಕ್ಕಿಂತ ಮುಖ್ಯವಾಗಿ ಅದು ಅಭಿವೃದ್ಧಿಯು ಒಳಗೊಳ್ಳಬೇಕಾದ ಒಂದು ಗುಣ. ಲಿಂಗ ಸಂಬಂಧಗಳ ದೃಷ್ಟಿಯಿಂದ ಅದರ ಪಾತ್ರ ನಿರ್ಣಾಯಕವಾದುದಾಗಿದೆ. ಇಂದು ನಾವು ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ, ಸಂತಾನೋತ್ಪತ್ತಿ ಆರೋಗ್ಯದ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದೇವೆ. ಆರೋಗ್ಯ ಮತ್ತು ಅಭಿವೃದ್ಧಿಗಳ ನಡುವಿನ ಸಂಬಂಧವನ್ನು ಲಿಂಗ ಸಂಬಂಧಗಳ ನೆಲೆಯಿಂದ ಪರಿಭಾವಿಸಿಕೊಳ್ಳುವ ಅಗತ್ಯವಿದೆ. ನಮ್ಮ ಸಂದರ್ಭದಲ್ಲಿ ಅನಾರೋಗ್ಯವು ಮಾನವ ದುಸ್ಥಿತಿಯ ಮತ್ತು ಆರ್ಥಿಕ ಅಭದ್ರತೆಯ ಅತ್ಯಂತಿಕ ಸೂಚಿಯಾಗಿದೆ. ಆದ್ದರಿಂದ ಜನರಿಗೆ ಧಾರಣಾ ಸಾಮರ್ಥ್ಯವನ್ನು ಒದಗಿಸುವ ಅನೇಕ ‘ಸರ್ಕಾರಿ ಮಧ್ಯ ಪ್ರವೇಶ’ಕ್ಕೆ ಸಂಬಂಧಿಸಿದ ಕ್ರಮಗಳಲ್ಲಿ ಆರೋಗ್ಯ ಸೇವೆಯ ಪಾತ್ರ ನಿರ್ಣಾಯಕವಾದುದಾಗಿದೆ. ಅನಾರೋಗ್ಯವು ಕೇವಲ ರೋಗಿಗೆ ಅಥವಾ ರೋಗಿಯ ಸಂಬಂಧಿಕರಿಗೆ ಮಾತ್ರ ಅನ್ವಯವಾಗುವ ಸಂಗತಿಯಲ್ಲ. ಅದು ಇಡೀ ಸಮಾಜದ ಇತರೆ ಸದಸ್ಯರ ಮೇಲೂ ಪರಿಣಾಮ ಉಂಟು ಮಾಡಬಹುದು. ಈ ಅನಾರೋಗ್ಯವು ಸಮಾಜದಲ್ಲಿ ಜನರ ಬದುಕಿನ ಗುಣ ಮಟ್ಟವನ್ನೇ ಕುಗ್ಗಿಸಿಬಿಡುತ್ತದೆ. ಆರೋಗ್ಯಭಾಗ್ಯಕ್ಕಾಗಿ ಜನರು ಖಾಸಗಿ ಅರೋಗ್ಯ ವ್ಯವಸ್ಥೆಯನ್ನು ಅವಲಂಬಿಸಲು ಯಾಕೆ ಸಾಧ್ಯವಿಲ್ಲ ಎಂಬುದನ್ನು ವಿರಿಸುವ ಅಗತ್ಯವಿಲ್ಲ. ಅದರಲ್ಲೂ ವಿಜಾಪುರದಂತಹ ಸದಾ ಬರವನ್ನು ಎದುರಿಸುವ, ಬಡತನ ವ್ಯಾಪಕವಾಗಿರುವ ಮತ್ತು ಅನಕ್ಷರತೆಯು ತೀವ್ರವಾಗಿರುವ ಜಿಲ್ಲೆಯಲ್ಲಿ ಜನರ ಬದುಕಿಗೆ ಆರೋಗ್ಯ ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ ಸಾರ್ವಜನಿಕ ಆರೋಗ್ಯಸೇವೆಯನ್ನು ಸಾಂಸ್ಥಿಕವಾಗಿ ಒದಗಿಸುವುದು ಅತ್ಯಂತ ಅಗತ್ಯ. ಆರೋಗ್ಯಸೇವೆಗೆ ಸಂಬಂಧಿಸಿದಂತೆ ನಮ್ಮಲ್ಲಿನ ಸಮಸ್ಯೆಯೆಂದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕಾರ್ಯಕ್ಷಮತೆ. ಆರೋಗ್ಯಸೇವೆಯ ಮೂಲಭೂತ ಸೌಲಭ್ಯವನ್ನು ಒದಗಿಸುವುದು ಒಂದು. ಅದು ದಕ್ಷತೆಯಿಂದ ಕೆಲಸ ಮಾಡುವುದು ಮತ್ತೊಂದು ಬಗೆ. ನಮ್ಮ ಸಂದರ್ಭದಲ್ಲಿ ಎರಡನೆಯ ಸಂಗತಿಯು ಮುಖ್ಯವಾದುದಾಗಿದೆ. ಕೇರಳ ರಾಜ್ಯದಲ್ಲಿನ ಆರೋಗ್ಯ ಕ್ಷೇತ್ರದಲ್ಲಿನ ಯಶಸ್ಸಿನ ಹಿಂದೆ ಅಲ್ಲಿ ಅದನ್ನು ರಾಜಕೀಕರಣಗೊಳಿಸಿರುವ ಕ್ರಮ ಕೆಲಸ ಮಾಡಿದೆ. ಹಿಂದುಳಿದ ಪ್ರದೇಶದಲ್ಲಿ ಪ್ರತಿಷ್ಠಿತ ವರ್ಗಗಳ ಅಗತ್ಯಗಳು ಆದ್ಯತೆಯ ಂಗತಿಯಾಗಿ ಬಿಡುತ್ತವೆ. ಕರ್ನಾಟಕ ರಾಜ್ಯದಲ್ಲಿ ಇದನ್ನು ನಾವು ಸ್ಪಷ್ಟವಾಗಿ ನೋಡಬಹುದಾಗಿದೆ. ಉದಾಹರಣೆಗೆ ಉಡುಪಿಯಂತಹ ಅತ್ಯಂತ ಮುಂದುವರಿದ ಜಿಲ್ಲೆಯಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ೫.೩೭ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೆ ಅತ್ಯಂತ ಹಿಂದುಳಿದ ವಿಜಾಪುರ ಜಿಲ್ಲೆಯಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ ೩.೧೨. ಅದೇ ರೀತಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ ೨.೫೩ ಉಪಕೇಂದ್ರಗಳಿದ್ದರೆ ವಿಜಾಪುರ ಜಿಲ್ಲೆಯಲ್ಲಿ ಅವು ೧.೪೫ ರಷ್ಟಿವೆ.

ಆರೋಗ್ಯಕ್ಕೆ ಸಂಬಂಧಿಸಿದ ವಿಷಯದಲ್ಲಿ ವಿಜಾಪುರ ಜಿಲ್ಲೆಯ ಸಾಧನೆಯೇನು? ಮಹಿಳೆಯರ ಆರೋಗ್ಯವನ್ನು ಹೇಗೆ ಜಿಲ್ಲೆಯಲ್ಲಿ ನಿರ್ವಹಿಸಲಾಗುತ್ತಿದೆ? ಲಿಂಗ ಅನುಪಾತವನ್ನು ಮಹಿಳೆಯರ ಆರೋಗ್ಯದ ಸೂಚಿಯಾಗಿ ಬಳಸಲು ಸಾಧ್ಯವೆ? ಮಕ್ಕಳ ಮತ್ತು ಮಹಿಳೆಯರ ಪೌ,ಟಿಕತೆಯ ಮಟ್ಟ ಹೇಗಿದೆ? ಪ್ರಸ್ತುತ ಅಧ್ಯಾದಲ್ಲಿ ವಿಜಾಪುರ ಜಿಲ್ಲೆಯ ಆರೋಗ್ಯ ಸಂಬಂಧಿ ಸಂಗತಿಗಳನ್ನು ಚರ್ಚಿಸಲು ಪ್ರಯತ್ನಿಸಲಾಗಿದೆ.

ಈ ವಿಷಯ ಕುರಿತಂತೆ ನಮಗೆ ಎರಡು ಆಕರಗಳು ಲಭ್ಯವಿದೆ. ಮೊದಲನೆಯದು ಕರ್ನಾಟಕ ಮಾನವ ಅಭಿವೃದ್ಧಿ ವರದಿ ೨೦೦೫ ಮತ್ತು ಎರಡನೆಯದು ಜಿಲ್ಲಾಮಟ್ಟದ ಕುಟುಂಬ ಘಟಕಗಳ ಸಮೀಕ್ಷಾ ವರದಿ. ಇವೆರಡು ಮೂಲಗಳಿಂದ ಪಡೆದ ಮಾಹಿತಿಯನ್ನು ಆದರಿಸಿ ಇಲ್ಲಿ ಚರ್ಚೆಯನ್ನು ಬೆಳೆಸಲಾಗಿದೆ.

. ಜಿಲ್ಲೆಯಲ್ಲಿ ಸಂತಾನೋತ್ಪತ್ತಿ ಆರೋಗ್ಯ

ಕೋಷ್ಟಕ ೯.೧ರಲ್ಲಿ ‘ಜಿಲ್ಲಾ ಕುಟುಂಬ ಘಟಕಗಳ ಸಮೀಕ್ಷೆ’ಯ ವಿವರಗಳನ್ನು ನೀಡಲಾಗಿದೆ. ಇಪ್ಪತ್ತೈದು ಸೂಚಿಗಳ ವಿವರಗಳನ್ನು ಸಂಗ್ರಹಿಸಲಾಗಿದೆ. ವಿಜಾಪುರ ಜಿಲ್ಲೆಯ ಆರೋಗ್ಯ ಮಟ್ಟವನ್ನು ಗುರುತಿಸುವ ದೃಷ್ಟಿಯಿಂದ ಅದರ ಸೂಚಿಗಳ ಮೌಲ್ಯಗಳನ್ನು ಮತ್ತು ಅದು ಆರೋಗ್ಯದಲ್ಲಿ ಪಡೆದುಕೊಂಡಿರುವ ಸ್ಥಾನವನ್ನು ಗುರುತಿಸುವ ದೃಷ್ಟಿಯಿಂದ ಅದರ ಸೂಚಿಗಳು ಮೌಲ್ಯಗಳನ್ನು ರಾಜ್ಯ ಸರಾಸರಿ ಮೌಲ್ಯಗಳು ಮತ್ತು ಆರೋಗ್ಯದಲ್ಲಿ ಉನ್ನತ ಸ್ಥಾನ ಪಡೆದುಕೊಂಡಿರುವ ಹಾಸನ ಜಿಲ್ಲೆಯ ಆರೋಗ್ಯ ಸೂಚಿಗಳ ಮೌಲ್ಯಗಳ ಕೂಡ ತುಲನೆ ಮಾಡುವ ರೀತಿಯಲ್ಲಿ ಮಾಹಿತಿಯನ್ನು ನೀಡಲಾಗಿದೆ. ಈ ಕೋಷ್ಟಕದಲ್ಲಿ ತೋರಿಸಿರುವಂತೆ ವಿಜಾಪುರ ಜಿಲ್ಲೆಯ ಆರೋಗ್ಯಕ್ಕೆ ಸಂಬಂಧಿಸಿದ ಸಾಧನೆಯು ಅತ್ಯಂತ ಕೆಳಮಟ್ಟದಲ್ಲಿದೆ.ಇಲ್ಲಿ ನೀಡಿರುವ ಇಪ್ಪತ್ತೈದು ಸೂಚಿಗಳು ಒಂದಲ್ಲ ಒಂದು ರೀತಿಯಲ್ಲಿ ಜನಸಂಖ್ಯೆಗೆ, ಲಿಂಗ ಸಂಬಂಧಗಳಿಗೆ, ಆರೋಗ್ಯ ಸೌಲಭ್ಯಗಳಿಗೆ ಸಂಬಂಧಿಸಿದ ಸೂಚಿಗಳಾಗಿವೆ. ಅತ್ಯಂತ ಕುತೂಹಲದ ಸಂಗತಿಯೆಂದರೆ ವಿಜಾಪುರ ಜಿಲ್ಲೆಯ ಒಟ್ಟು ಆಂತರಿಕ ತಲಾ ಉತ್ಪನ್ನವು (ರೂ. ೨೬೭೩೫) ಹಾಸನ ಜಿಲ್ಲಾ ಒಟ್ಟು ಆಂತರಿಕ ತಲಾ ಉತ್ಪನ್ನಕ್ಕಿಂತ (ರೂ.೨೫೬೨೫) ಅಧಿಕವಾಗಿದೆ. ಅಂದರೆ ವರಮಾನದ ದೃಷ್ಟಿಯಿಂದ ವಿಜಾಪುರ ಜಿಲ್ಲೆಯು ಹಾಸನ ಜಿಲ್ಲೆಗಿಂತ ಮುಂದುವರಿದಿದೆ. ಹಾಸನ ಜಿಲ್ಲೆಗೆ ಹೋಲಿಸಿದರೆ ವಿಜಾಪುರ ಜಿಲ್ಲೆಯು ವರಮಾನದ ಸೂಚಿಯೊಂದನ್ನು ಬಿಟ್ಟರೆ ಉಳಿದ ಇಪ್ಪತ್ನಾಕು ಸೂಚಿಗಳಲ್ಲೂ ಹಿಂದುಳಿದಿದೆ. ಹಾಸನ ಜಿಲ್ಲೆಗೆ ಹೋಲಿಸಿದರೆ ವಿಜಾಪುರವು ಆರೋಗ್ಯಕ್ಕೆ ಸಂಬಂಧಿಸಿದಂತೆ ತುಂಬಾ ಹೀನಾಯ ಸ್ಥಿತಿಯಲ್ಲಿದೆ.

ವಿಜಾಪುರ ಮತ್ತು ಉಡುಪಿ ಜಿಲ್ಲೆಗಳ ಅಭಿವೃದ್ಧಿ, ಲಿಂಗ ಸಮಾನತೆ ಮತ್ತು ಆರೋಗ್ಯ ಸ್ಥಿತಿಗತಿಗಳ ಚಿತ್ರ (೨೨೦೭೦೮)

ಕೋಷ್ಟಕ .

ಕ್ರ.ಸಂ.

ವಿವರಗಳು/ಸಚಿಗಳು

ವಿಜಾಪುರ

ಹಾಸನ

ಕರ್ನಾಟಕ

೧. ಶಾಸನಾತ್ಮಕ ವಯೋಮಾನ ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿಗೆ ವಿವಾಹವಾದ ಮಹಿಳೆಯರ ಪ್ರಮಾಣ ಶೇ.೪೩.೧ ಶೇ.೩.೨ ಶೇ.೨೨.೮
೨. ಮೂರು ಮತ್ತು ಅದಕ್ಕಿಂತ ಅಧಿಕ ಮಕ್ಕಲಿರುವ ತಾಯಂದಿರ ಪ್ರಮಾಣ ಶೇ.೩೯.೭ ಶೇ.೧೫.೬
೩. ಹುಟ್ಟುವ ಸಂದರ್ಭದಲ್ಲಿ ಲಿಂಗ ಅನುಪಾತ (ಪ್ರತಿ ೧೦೦ ಜನನಗಳಿಗೆ) ೯೧ ೮೮
೪. ಯಾವುದಾದರು ಕುಟುಂಬ ಯೋಜನಾ ವಿಧಝಾನ ಬಳಸುತ್ತಿರುವ ಹೆಂಡತಿ-ಗಂಡ ಇವರ ಪ್ರಮಾಣ ಶೇ.೫೦.೪ ಶೇ.೭೩.೪ ಶೇ.೬೧.೮
೫. ಕನಿಷ್ಟ ಮೂರು ಪ್ರಸವ ಪೂರ್ವ ಸೇವಾ (ಎಎನ್ಸಿ) ಚಿಕಿತ್ಸೆ ಪಡೆದ ಮಹಿಳಯರ ಪ್ರಮಾಣ ಶೇ.೬೩.೯ ಶೇ.೯೪.೦೦ ಶೇ.೮೧.೬
೬. ಸಾಂಸ್ಥಿಕ ಹೆರಿಗೆಗಳ ಪ್ರಮಾಣ ಶೇ.೫೯.೮ ಶೇ.೮೦.೩೦ ಶೇ.೬೫.೧
೭. ಲಿಂಗ ಸಮಾನತೆಯ ಜಿಲ್ಲಾವರಾ ಸಂಯುಕ್ತ ಸೂಚಿ (೨೦೦೧) ಕರ್ನಾಠಕ ಮಾನವ ಅಭಿವೃದ್ಧಿ ವರದಿ ೨೦೦೫ ೬೨.೮೬ ೮೧.೫೫
೮. ರೋಗ ನಿರೋಧ ಚಿಕಿತ್ಸೆಯನ್ನು ಪೂರ್ಣವಾಗಿ ಪಡೆದ ಮಕ್ಕಳ (೧೨-೨೩ ತಿಂಗಳು) ಪ್ರಮಾಣ ಶೇ.೫೦.೮ ಶೇ.೮೪.೧೦ ಶೇ.೭೬.೭
೯. ಒಟ್ಟು ಜನನಗಳ್ಲಿಲ೧೫-೧೯ ವಯೋಮಾನದ ತಾಯಂದಿರಿಗೆ ಹುಟ್ಟಿದ ಮಕ್ಕಳ ಪ್ರಮಾಣ ಶೇ.೩೦.೩ ಶೇ.೧೬.೪೦ ಶೇ.೧೦.೭
೧೦. ಮಹಿಳೆಯರ ದುಡಿಮೆ ಸಹಭಾಗಿತ್ವ ಪ್ರಮಾಣ (೨೦೦೧) ಶೇ. ೨೮.೪೫ ಶೇ. ೩೯.೭೦ ಶೇ. ೩೧.೯೮
೧೧. ಒಟ್ಟು ಜಿಲ್ಲಾ ತಲಾ ಆಂತರಿಕ ಉತೇಪನ್ನ (೨೦೦೭-೦೮ ಚಾಲ್ತಿ ಬೆಲೆಗಳು ರೂ. ೨೬೭೩೫ ರೂ.೨೫೬೨೫ ರೂ.೪೧೯೦೨
೧೨. ಒಟ್ಟು ಜಿಲ್ಲಾ ಆಂತರಿಕ ಉತ್ಪನ್ನ (೨೦೦೭-೦೮ ಚಾಲ್ತಿ ಬೆಲೆಗಳು) ರೂ. ೫೨೩೭ ಕೋಟಿ ರೂ. ೪೭೮ಕೋಟಿ ರೂ. ೨೪೦೦೬೨ ಕೋಟಿ
೧೩. ಮಹಿಳೆಯರ ಒಟ್ಟು ಸಾಕ್ಷರತಾ ಪ್ರಮಾಣ (೨೦೦೧) ಶೇ. ೪೩.೩೭ ಶೇ.೬೮.೮೩ ಶೇ. ೫೬.೮೭
೧೪. ಮಾನವ ಅಭಿವೃದ್ಧಿ ಸೂಚ್ಯಂಕ (೨೦೦೧) ೦.೫೮೯ ೦.೬೩೯ ೦.೬೫೦
೧೫. ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕ (೨೦೦೧) ೦.೫೭೩ ೦.೬೩೦ ೦.೬೯೨
೧೬. ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ ಉಪಕೇಂದ್ರಗಳ ಸಂಖ್ಯೆ (೨೦೦೬-೦೭) ೧.೪೫ ೨.೩೩ ೧.೪೨
೧೭. ಪ್ರತಿ ಲಕ್ಷ ಜನಸಂಖ್ಯೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ (೨೦೦೬-೦೭) ೩.೨೧ ೪.೬೦ ೨.೯೨
೧೮. ಒಟ್ಟು ಸಂತಾನೋತ್ಪತ್ತಿ ಪ್ರಮಾಣ (ಟಿ.ಎಫ್.ಆರ್.)೨೦೦೧ ೩.೦ ೧.೫ ೨.೪
೧೯. ಶಿಶು ಮರಣ ಪ್ರಮಾಣ (೨೦೦೧-೦೨) ೬೭ ೪೫ ೫೫
೨೦. ಜನನ ಕಾಲದ ನಿರೀಕ್ಷಿತ ವಯಸ್ಸು ಮಹಿಳೆಯರು (ವರ್ಷಗಳಲ್ಲಿ ೨೦೦೧-೦೨) ೬೧.೬ ೬೩.೭೦ ೬೪.೫
೨೨. ಆರೋಗ್ಯ ಸಾಧನೆಯ ಸೂಚ್ಯಂಕ (೨೦೦೧) ೦.೬೨೭ ೦.೬೭೦ ೦.೬೮೦
೨೩. ಜನಸಂಖ್ಯಾ ಬೆಳವಣಿಗೆ ಪ್ರಮಾಣ (ವಾರ್ಷಿಕ)೧೯೯೧-೨೦೦೧ ಶೇ. ೧.೭೫ ಶೇ. ೦.೯೬ ಶೇ. ೧.೭೫
೨೪. ಪುರುಷ – ಮಹಿಳೆಯರ ಸಾಕ್ಷರತಾ ಪ್ರಮಾಣದಲ್ಲಿನ ಅಂತರ (೨೦೦೧) (ಶೇಕಡ ಅಂಶಗಳಲ್ಲಿ) ಶೇ. ೨೬.೪೭ ಶೇ.೧೯.೩೭ ಶೇ. ೧೯.೨೩
೨೫. ಡಾ. ಡಿ.ಎಂ. ನಂಜುಂಡಪ್ಪ ವರದಿ ಆಧಾರಿತ ಸಂಚಿತ ದುಸ್ಥಿತಿ ಸೂಚ್ಯಂಕದಲ್ಲಿ ಜಿಲ್ಲೆಯ ಶೇಕಡ ಪಾಲು (೨೦೦೧) ಶೇ. ೬.೯೧ ಶೇ. ೨.೦೭ ಶೇ. ೧೦೦.೦೦

ಮೂಲ : . ಡಿ.ಎಲ್.ಎಚ್.ಎಸ್. ೨೦೦೭೦೮

೨) ಕರ್ನಾಟಕ ಸರ್ಕಾರ. ೨೦೦೬. ಕರ್ನಾಟಕ ಮಾನವ ಅಭಿವೃದ್ಧಿ ವರದಿ ೨೦೦೫

೩) ಕರ್ನಾಟಕ ಸರ್ಕಾರ ೨೦೧೦ ಆರ್ಥಿಕ ಸಮೀಕ್ಷೆ ೨೦೦೯-೧೦

ಆರೋಗ್ಯಕ್ಕೆ ಸಂಬಂಧಿಸಿದ ಮೂಲಸೌಲಭ್ಯದಲ್ಲೂ ವಿಜಾಪುರ ಜಿಲ್ಲೆಯು ಹಾಸನ ಜಿಲ್ಲೆಗಿಂತ ಹಿಂದುಳಿದಿದೆ. ಉದಾಹರಣೆಗೆ ವಿಜಾಪುರದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ೩.೨೧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೆ ಹಾಸನದಲ್ಲಿ ಅವು ೪.೬೦ ರಷ್ಟಿವೆ. ವಾಸ್ತವವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಮೂಲ ಸೌಕರ್ಯಗಳು ಮುಂದುವರಿದ ಜಿಲ್ಲೆಗಳಲ್ಲಿರುವುದಕ್ಕಿಂತ ಉತ್ತಮವಾಗಿರಬೇಕು. ಆದರೆ ಸ್ಥಿತಿಯು ಹಾಗಿಲ್ಲ. ಡಾ.ಡಿ. ಎಂ. ನಂಜುಂಡಪ್ಪ ಸಮಿತಿ ವರದಿಯ ಪ್ರಕಾರ ರಾಜ್ಯದಲ್ಲಿನ ಒಟ್ಟು ಹಿಂದುಳಿದಿರುವಿಕೆಯ ಸೂಚ್ಯಂಕ ೨೦.೨೬ ಇದರಲ್ಲಿ ವಿಜಾಪುರ ಜಿಲ್ಲೆಯ ಪಾಲು ಶೇ. ೬.೯೧ರಷ್ಟಿದ್ದರೆ ಹಾಸನ ಜಿಲ್ಲೆಯ ಪಾಲು ಕೇವಲ ಶೇ. ೨.೦೭. ವಿಜಾಪುರ ಜಿಲ್ಲೆಯ ಸಂಚಿತ ದುಸ್ಥಿತಿಯ ಸೂಚ್ಯಂಕ ೧.೪೦ ರಷ್ಟಿದ್ದರೆ ಹಾಸನ ಜಿಲ್ಲೆಯಲ್ಲಿ ಅದು ೦.೪೨ರಷ್ಟಿದೆ. ವಿಜಾಪುರ ಜಿಲ್ಲೆಯ ಐದು ತಾಲ್ಲೂಕುಗಳ ಪೈಕಿ ನಾಲ್ಕು ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿದ್ದರೆ ಹಾಸನ ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ಪ್ರಕಾರದಲ್ಲಿ ಯಾವ ತಾಲ್ಲೂಕುಗಳೂ ಇಲ್ಲ. ಹಾಸನ ಜಿಲ್ಲೆಯ ಒಟ್ಟು ಎಂಟು ತಾಲ್ಲೂಕುಗಳಲ್ಲಿ ಮೂರು ಅಭಿವೃದ್ಧಿಯಲ್ಲಿ ಮುಂದುವರಿದ ಸ್ಥಿತಿಯಲ್ಲಿದ್ದರೆ ವಿಜಾಪುರ ಜಿಲ್ಲೆಯಲ್ಲಿ ಯಾವ ತಾಲ್ಲೂಕು ಮುಂದುವರಿದ ಸ್ಥಿತಿಯಲ್ಲಿದ್ದರೆ ವಿಜಾಪುರ ಜಿಲ್ಲೆಯಲ್ಲಿ ಯಾವ ತಾಲ್ಲೂಕು ಮುಂದುವರಿದ ಸ್ಥಿತಿಯಲ್ಲಿಲ್ಲ. ನಮ್ಮ ಮೂಲ ಪ್ರಮೇಯವಾದ ವರಮಾನದಲ್ಲಿನ ಏರಿಕೆಯೇ ಅಭಿವೃದ್ದಿಯಲ್ಲ ಎಂಬುದು ಇಲ್ಲಿನ ಉದಾಹರಣೆಯಿಂದ ಸ್ಪಷ್ಟವಾಗುತ್ತದೆ. ಆರೋಗ್ಯದ ಬಹುಮುಖ್ಯ ಸೂಚಿಯಾದ ಜೀವನಾಯುಷ್ಯ ೬೩.೬ ವರ್ಷಗಳಾದರೆ ಹಾಸನದಲ್ಲಿ ಅದು ೬೬.೭ ವರ್ಷಗಳಿಷ್ಟಿದೆ. ಜನಸಂಖ್ಯೆಯ ವಾರ್ಷಿಕ ಬೆಳವಣಿಗೆ ಪ್ರಮಾಣ ೧೯೯೧ರಿಂದ ೨೦೦೧ರ ದಶಕದಲ್ಲಿ ವಿಜಾಪುರ ಜಿಲ್ಲೆಯಲ್ಲಿ ಶೇ. ೧.೭೫ರಷ್ಟಿದ್ದರೆ ಹಾನ ಜಿಲ್ಲೆಯಲ್ಲಿ ಅದು ಶೇ. ೦.೯೬ರಷ್ಟಿದೆ. ಅದೇ ರೀತಿಯಲ್ಲಿ ಲಿಂಗ ಸಂಬಂಧಿ ಸಾಕ್ಷರತಾ ಅಂತರ ವಿಜಾಪುರದಲ್ಲಿ ಶೇ. ೨೬.೪೭ರಷ್ಟಿದ್ದರೆ ಹಾಸನ ಜಿಲ್ಲೆಯಲ್ಲಿ ಅದು ಶೇ. ೧೯.೩೭ ಅಂಶಗಳಷ್ಟಿದೆ.

ಲಿಂಗ ಸಮಾನತೆಯ ದೃಷ್ಟಿಯಿಂದ ಮತ್ತು ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಹೆಣ್ಣು ಮಕ್ಕಳ ವಿವಾಹದ ವಯಸ್ಸು ಬಹಳ ಮುಖ್ಯ. ಅದು ಒಂದು ದೃಷ್ಟಿಯಿಂದ ಅಭಿವೃದ್ಧಿಯ ಸೂಚಿಯೂ ಹೌದು. ಅತ್ಯಂತ ವಿಷಾದದ ಸಂಗತಿಯೆಂದರೆ ವಿಜಾಪುರ ಜಿಲ್ಲೆಯಲ್ಲಿ ಹದಿನೆಂಟು ವಯಸ್ಸು ತುಂಬುವುದರೊಳಗೆ ಮದುವೆಯಾಗುವ ಹೆಣ್ಣು ಮಕ್ಕಳ ಪ್ರಮಾಣ ಶೇ. ೪೩ರಷ್ಟಿದ್ದೆ ಹಾಸನ ಜಿಲ್ಲೆಯಲ್ಲಿ ಅದು ಕೇವಲ ಶೇ. ೩.೨ರಷ್ಟಿದೆ. ಸಾಂಸ್ಥಿಕ ಹೆರಿಗೆಗಳ ಪ್ರಮಾಣ ವಿಜಾಪುರದಲ್ಲಿ ೨೦೦೭-೦೮ರಲ್ಲಿ ಶೇ. ೫೯.೮೦ರಷ್ಟಿದ್ದರೆ ಹಾಸನ ಜಿಲ್ಲೆಯಲ್ಲಿ ಅದರ ಪ್ರಮಾಣ ಶೇ. ೮೦.೩ ರಷ್ಟಿದೆ. ರೋಗ ನಿರೋಧಕ ಚುಚ್ಚು ಮದ್ದನ್ನು ಪೂರ್ಣವಾಗಿ ಪಡೆದ ಮಕ್ಕಳ (೦೨.೨೩ ತಿಂಗಳ ವಯೋಮಾನದ ಮಕ್ಕಳು) ಪ್ರಮಾಣ ವಿಜಾಪುರದಲ್ಲಿ ಶೇ. ೫೦.೮ರಷ್ಟಿದ್ದರೆ ಹಾನದಲ್ಲಿ ಅದರ ಪ್ರಮಾಣ ಶೇ. ೮೪.೧ರಷ್ಟಿದೆ.

ಬಹಳ ಕುತೂಹಲದ ಸಂಗತಿಯೆಂದರೆ ರಾಜ್ಯದ ಜನಸಂಖ್ಯೆಯಲ್ಲಿ ವಿಜಾಪುರ ಜಿಲ್ಲೆಯ ಪಾಲು ಶೇ. ೩.೪೧. ಆದರೆ ರಾಜ್ಯದ ವರಮಾನದಲ್ಲಿ ಅದರ ಪಾಲು ಶೇ. ೨.೧೮. ಇದಕ್ಕೆ ಪ್ರತಿಯಾಗಿ ರಾಜ್ಯದ ಜನಸಂಖ್ಯೆಯಲ್ಲಿ ಶೇ. ೩.೧೪ ಪಾಲು ಪಡೆದಿರುವ ಹಾಸನ ಜಿಲ್ಲೆಯು ರಾಜ್ಯದ ವರಮಾನದಲ್ಲಿ ಕೇವಲ ಶೇ. ೧.೯೯ ರಷ್ಟು ಪಾಲು ಪಡೆದಿದೆ. ಇದು ಏನನ್ನು ಸೋಚಿಸುತ್ತದೆ? ವರಮಾನಕ್ಕೆ ಸಂಬಂಧಿಸಿದ ಎಲ್ಲ ಬಗೆಯ ಮಾಪನಗಳಲ್ಲೂ ಹಾಸನವು ವಿಜಾಪುರ ಜಿಲ್ಲೆಗಿಂತ ಹಿಂದುಳಿದಿದೆ. ಮಾನವ ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ಎಲ್ಲದಕ್ಕಿಂತ ಮುಖ್ಯವಾಗಿ ಲಿಂಗ ಸಮಾನತೆಯ ದೃಷ್ಟಿಯಿಂದ ಹಾಸನ ಜಿಲ್ಲೆಯು ಇಡಿ ರಾಜ್ಯದಲ್ಲಿ ಒಂದು ಆದರ್ಶ ಸ್ಥಾನದಲ್ಲಿದೆ. ಏಳು ಸೂಚಿಗಳನ್ನು ಆಧರಿಸಿ ಲೆಕ್ಕ ಹಾಕಿರುವ ಲಿಂಗ ಸಮಾನತಾ ಸೂಚ್ಯಂಕದಲ್ಲಿ ಹಾಸನ ಜಿಲ್ಲೆಯು ರಾಜ್ಯದ ೨೭ ಜಿಲ್ಲೆಗಳ ಪೈಕಿ ೨೦೦೧ರಲ್ಲಿ ೮೧.೫೫ ಮೌಲ್ಯವನ್ನು ಪಡೆದು ಮೊದಲನೆಯ ಸ್ಥಾನದಲ್ಲಿದ್ದರೆ ವಿಜಾಪುರ ಜಿಲ್ಲೆಯು ೬೨.೮೬ ಮೌಲ್ಯ ಪಡೆದು ರಾಜ್ಯದಲ್ಲಿ ಇಪ್ಪತ್ತೆರಡನೆಯ ಸ್ಥಾನದಲ್ಲಿದೆ. ನiಗೆಲ್ಲ ತಿಳಿದಿರುವಂತೆ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರು ಮತ್ತು ೦-೬ ವಯೋಮಾನದ ಮಕ್ಕಳನ್ನು ಸೇರಿಸಿಕೊಂಡು ಶೇ. ೬೫ರಷ್ಟಿದ್ದಾರೆ.

ಕೋಷ್ಟಕ ೯.೧ರಲ್ಲಿ ಅನೇಕ ದೃಷ್ಟಿಯಿಂದ ಮಹತ್ವದ್ದಾಗಿದೆ. ಅದು ವಿಜಾಪುರ ಜಿಲ್ಲೆಯು ಆರೋಗ್ಯ, ಲಿಂಗ ಸಮಾನತೆ, ವೈದ್ಯಕೀಯ ಸೌಲಭ್ಯ, ಜನಸಂಖ್ಯಾ ಸೂಚಿ ಮುಂತಾದವುಗಳಿಗೆ ಸಂಬಂಧಿಸಿದಂತೆ ಎಷ್ಟು ಹಿಂದುಳಿದಿದೆ ಎಂಬುದನ್ನು ತೋರಿಸುತ್ತದೆ. ಎರಡನೆಯದಾಗಿ ಅದು ಆರ್ಥಿಕ ಅಭಿವೃದ್ಧಿ ಮತ್ತು ಮಾನವ ಅಭಿವೃದ್ಧಿಗಳ ನಡುವಣ ಸಂಬಂಧಗಳ ವೈರುಧ್ಯವನ್ನು ಅನಾವರಣ ಮಾಡುತ್ತದೆ ಇವೆರಡಕ್ಕಿಂತ ಹೆಚ್ಚಾಗಿ ಕೋಷ್ಟಕವು ಕರ್ನಾಟಕದಲ್ಲಿ ಪ್ರಾದೇಶಿಕ ಅಸಮಾನತೆ ಬಗ್ಗೆ ಮರುಚಿಂತಿಸುವಂತೆ ಮಾಡುತ್ತದೆ. ಪ್ರಾದೇಶಿಕ ಅಸಮಾನತೆಯನ್ನು ಸರಿಪಡಿಸುವುದು ಹೇಗೆ ಎಂಬುದಕ್ಕೆ ಸೂಕ್ತವಾದ ನೀತಿ ನಿರ್ದೇಶನವು ಕೋಷ್ಟಕದಿಂದ ದೊರೆಯುತ್ತದೆ. ಅಮರ್ತ್ಯಸೆನ್ ಒಂದು ಕಡೆ ಮಾನವ ಅಭಿವೃದ್ಧಿಯ ಮಹತ್ವವನ್ನು ಕುರಿತ ಮಾತನಾಡ ಬೇಕಾದರೆ ನಾವು ಆರ್ಥಿಕತೆಯ ಶ್ರೀಮಂತಿಕೆಯನ್ನು ನೋಡುವುದಕ್ಕೆ ಪ್ರತಿಯಾಗಿ ಜನರ ಬದುಕು ಎಷ್ಟು ಸಮೃದ್ಧವಾಗಿದೆ ಎಂಬುದನ್ನು ಪರಿಗಣಿಸಬೇಕು ಎಂದು ಹೇಳಿದ್ದಾರೆ. ಈ ನೆಲೆಯಿಂದ ಕೋಷ್ಟಕ ೯೧.ನ್ನು ವಿಶ್ಲೇಷಿಸಿದರೆ ವರಮಾನದಲ್ಲಿ ಶ್ರೀಮಂತವಾಗಿರುವ ಬಿಜಾಪುರದಲ್ಲಿ ಜನರ ಬದುಕು ದುಸ್ಥಿತಿಯಿಂದ ಕೂಡಿರುವುದು: ವರಮಾನದಲ್ಲಿ ಕೆಳಮಟ್ಟದಲ್ಲಿದ್ದವರು ಹಾಸನ ಜಿಲ್ಲೆಯಲ್ಲಿಜನರ ಬದುಕು ಸಮೃದ್ಧವಾಗಿರುವುದು ಕಂಡುಬರುತ್ತದೆ. ಬಿಜಾಪುರ ಜಿಲ್ಲೆಯ ಅಭಿವೃದ್ದಿ ಬಗ್ಗೆ, ಅಲ್ಲಿನ ಆರೋಗ್ಯ ವ್ಯವಸ್ಥೆಯ ಸುಧಾರಣೆ ಬಗ್ಗೆ ಯೋಚಿಸುವಾಗ ನಾವು ಪ್ರಧಾನವಾಗಿ ಜನರನ್ನು ಕೇಂದ್ರ ಧಾತುವನ್ನಾಗಿ ನೋಡಿಕೊಳ್ಳಬೇಕಾದ ಅಗತ್ಯ ಸ್ಪಷ್ಟವಾಗುತ್ತದೆ. ಹಿಂದುಳಿದ ಜಿಲ್ಲೆಗಳಿಗೆ ಉದ್ದಿಮೆಗಳು ಬೇಕು. ಬಂಡವಾಳ ಹೂಡಿಕೆ ಬೇಕು. ಮೂಲ ಸೌಕರ್ಯಗಳು ಬೇಕು. ವಿಮಾನ ನಿಲ್ದಾಣವೂ ಬೇಕು. ಆದರೆ ಇವೆಲ್ಲಕ್ಕಿಂತಲೂ ಮೊದಲು ಜನರು ಬದುಕು, ದುಡಿಮೆಗಾರರ ಜೀವನಮಟ್ಟ, ಮಹಿಳೆಯರ ಸ್ಥಿತಿಗತಿಯನ್ನು ಹೇಗೆ ಉತ್ತಮಪಡಿಸಬೇಕು ಎಂಬುದ ಆದ್ಯತೆಯ ಸಂಗತಿಯಾಗಬೇಕು. ಈ ಸಂಗತಿಯು ಪ್ರಸ್ತುತ ಅಧ್ಯಯನದಿಂದ ಹೊರಬಂದ ಬಹುಮುಖ್ಯ ಸಂಗತಿಯಾಗಿದೆ.