. ದಲಿತರು ಮತ್ತು ದಲಿತೇತರರ ನಡುವೆ ಸಾಕ್ಷರತೆ ಅಂತರ

ಸಾಮಾನ್ಯವಾಗಿ ಸಾಕ್ಷರತೆಗೆ ಸಂಬಂಧಿಸಿದ ಅಂತರಗಳನ್ನು ಲೆಕ್ಕ ಹಾಕಬೇಕಾದರೆ ಒಟ್ಟು ಜನಸಂಖ್ಯೆಯ ಸಾಕ್ಷರತೆಗೂ ಮತ್ತು ಪ.ಜಾ.ಯಲ್ಲಿನ ಸಾಕ್ಷರತಾ ಪ್ರಮಾಣಕ್ಕೂ ಇರುವ ಅಂತರವನ್ನು ಗಣನೆ ಮಾಡಲಾಗುತ್ತದೆ.ಹೀಗೆ ಪ.ಜಾ.ಯ ಸಾಕ್ಷರತೆಯನ್ನು ಒಟ್ಟು ಜನಸಂಖ್ಯೆಯ ಸಾಕ್ಷರತೆ ಜೊತೆ ತುಲನೆ ಮಾಡಿದಾಗ ಅಂತರವು ಕೆಳಮಟ್ಟದಲ್ಲಿರುವುದು ಕಂಡುಬರುತ್ತದೆ. ಇದರಿಂದ ಅಂತರದ ತೀವ್ರತೆಯನ್ನು ಗುರುತಿಸುವುದು ಅಲ್ಲಿ ಸಾಧ್ಯವಾಗುವುದಿಲ್ಲ. ಇದಕ್ಕೆ ಪ್ರತಿಯಾಗಿ ದಲಿತೇತರರ ಸಾಕ್ಷರತೆಯನ್ನು ದಲಿತರ ಸಾಕ್ಷರತೆ ಜೊತೆ ತುಲನೆ ಮಾಡಿದಾಗ ನಮಗೆ ಅಂತರದ ತೀವ್ರತೆ ಅರಿವಿಗೆ ಬರುತ್ತದೆ. ಇಲ್ಲಿನ ಕೋಷ್ಟಕದಲ್ಲಿ ದಲಿತೇತರರು ಮತ್ತು ದಲಿತರ ನಡುವಿನ ಸಾಕ್ಷರತೆ ಅಂತರವನ್ನು ಲೆಕ್ಕ ಹಾಕಿ ತುಲನೆ ಮಾಡಲಾಗಿದೆ.

ವಿಜಾಪುರ ಜಿಲ್ಲಾ ಸಾಕ್ಷರತಾ ಪ್ರಮಾಣದ ಸಾಮಾಜಿಕ ಅಂತರ೨೦೦೧

ಕೋಷ್ಟಕ .

ವಿವರ

ಒಟ್ಟು

ಪುರುಷರು

ಮಹಿಳೆಯರು

ಒಟ್ಟು ಜನಸಂಖ್ಯೆಯ ಸಾಕ್ಷರತಾ ಪ್ರಮಾಣ

೫೭.೦೧

೬೯.೯೪

೪೩.೪೭

ದಲಿತೇತರರ ಸಾಕ್ಷರತಾ ಪ್ರಮಾಣ

೫೯.೪೬

೭೨.೦೧

೪೬.೩೧

ದಲಿತರ ಸಾಕ್ಷರತಾ ಪ್ರಮಾಣ (ಪ.ಜಾ+ಪ.ಪಂ)

೪೭.೦೮

೬೧.೫೫

೩೧.೯೪

ಒಟ್ಟು ಜನಸಂಖ್ಯೆಯ ಸಾಕ್ಷರತೆ ಹಾಗೂ ದಲಿತರ ಸಾಕ್ಷರತೆ ನಡುವಿನ ಅಂತರ (೧-೩)

-೯.೯೩

-೮.೩೯

-೧೧.೫೩

ದಲಿತೇತರರ ಸಾಕ್ಷರತೆ ಹಾಗೂ ದಲಿತರ ಸಾಕ್ಷರತೆ ನಡುವೆ ಅಂತರ (೨-೩)

-೧೨.೩೮

-೧೦.೪೬

-೧೪.೩೭

ಮೂಲ : ಜನಗಣತಿ ವರದಿ೨೦೦೧

ಇದೊಂದು ಕುತೂಹಲಕಾರಿಯಾದ ಕೋಷ್ಟ. ಕ್ರಮಸಂಖ್ಯೆ ನಾಲ್ಕರಲ್ಲಿ ಒಟ್ಟು ಜನಸಂಖ್ಯೆಯ (ಪ.ಜಾ.+ ಪ.ಪಂ.ಗಳನ್ನು ಒಳಗೊಂಡಂತೆ) ಸಾಕ್ಷರತಾ ಪ್ರಮಾಣ ಮತ್ತು ದಲಿತರ ಸಾಕ್ಷರತಾ ಪ್ರಮಾಣಗಳ ನಡುವಣ ಅಂತರವನ್ನು ತೋರಿಸಿದೆ. ಇಲ್ಲಿ ಅಂತರವು ತಳಮಟ್ಟದಲ್ಲಿದೆ. ಆದರೆ ಕ್ರಮಸಂಖ್ಯೆ ಐದರಲ್ಲಿ ದಲಿತೇತರರ (ಪ.ಜಾ. +ಪ.ಪಂ.ದ ಜನಸಂಖ್ಯೆ ಬಿಟ್ಟು ಇತರರು) ಸಾಕ್ಷರತೆ ಹಾಗೂ ದಲಿತರ ಸಾಕ್ಷರತೆ ನಡುವಣ ಸಾಕ್ಷರತಾ ಅಂತರವನ್ನು ತೋರಿಸಿದೆ. ಕ್ರಮಸಂಖ್ಯೆ ನಾಲ್ಕರಲ್ಲಿನ ಸಾಕ್ಷರತಾ ಅಂತರಕ್ಕಿಂತ ಕ್ರಮಸಂಖ್ಯೆ ಐದರಲ್ಲಿನ ಅಂತರ ಅಧಿಕವಾಗಿದೆ. ಸಾಮಾನ್ಯವಾಗಿ ಭಾವಿಸಿಕೊಂಡಿರುವುದಕ್ಕಿಂತಲೂ ತೀವ್ರತರದ ತಾರತಮ್ಯವನ್ನು ಪ.ಜಾ. ಮತ್ತು ಪ.ಪಂ.ಗಳ ಜನರು ಅನುಭವಿಸುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಕ್ರಮಸಂಖ್ಯೆ ನಾಲ್ಕರ ಪ್ರಕಾರ ಸಾಕ್ಷರತೆಯ ಸಾಮಾಜಿಕ ಅಂತರ ಶೇ. ೯.೯೩. ಆದರೆ ಕ್ರಮಸಂಖ್ಯೆ ಐದರ ಪ್ರಕಾರ ಸಾಕ್ಷರತೆಯ ಸಾಮಾಜಿಕ ಅಂತರ ಶೇ. ೧೨.೩೮. ತಾರತಮ್ಯವನ್ನು ಮಾಪನ ಮಾಡುವಾಗ ಉಂಟಾಗುವ ಸಮಸ್ಯೆಗಳನ್ನು ಪರಿಗಣಿಸಬೇಕಾಗುತ್ತದೆ. ಈ ಬಗೆಯ ತಾರತಮ್ಯದ ನಿವಾರಣೆಗೆ ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ.

ಸಾಕ್ಷರತೆಯಲ್ಲಿ ಸಾಮಾಜಿಕ ಅಂತರಗಳು

ರಾಜ್ಯದ ಒಟ್ಟು ಜನಸಂಖ್ಯೆಯ ಸಾಕ್ಷರತೆ ಮಟ್ಟು ಹಾಗೂ ಪ.ಜಾ. ಮತ್ತು ಪ.ಪಂ. ಗಳ ಜನಸಮುದಾಯಗಳ ಸಾಕ್ಷರತೆ ಮಟ್ಟಗಳ ನಡುವೆ ತೀವ್ರ ಅಂತರಗಳಿವೆ. ಇದನ್ನು ಸಾಕ್ಷರತೆಯ ಸಾಮಾಜಿಕ ಅಂತರವೆಂದು ಕರೆಯಬಹುದು. ಈ ಅಂತರದ ಮಾಹಿತಿಯನ್ನು ೧೯೯೧ ಮತ್ತು ೨೦೦೧ಕ್ಕೆ ಸಂಬಂಧಿಸಿದಂತೆ ಕೋಷ್ಟಕ ೮.೧೦ರಲ್ಲಿ ತೋರಿಸಿದೆ.

ಸಾಮಾಜಿಕ ಗುಂಪುಗಳ ನಡುವೆ ಸಾಕ್ಷರತಾ ಅಂತರ : ೧೯೯೧ ಮತ್ತು ೨೦೦೧

ಕೋಷ್ಟಕ .೧೦

ವಿವರ

ವಿಜಾಪುರ

ಕರ್ನಾಟಕ ರಾಜ್ಯ

೧೯೯೧

೨೦೦೧

೧೯೯೧

೨೦೦೧

೧. ಒಟ್ಟು ಸಾಕ್ಷರತೆ

೫೬.೪೬

೫೭.೦೧

೫೬.೦೪

೬೬.೬೪

೨. ಒಟ್ಟು ಸಾಕ್ಷರತೆ (ಪ.ಜಾ)

೪೫.೯೪

೪೭.೧೬

೩೮.೧೦

೫೨.೮೭

೩. ಸಾಕ್ಷರತಾ ಅಂತರ (೧-೨)

೧೦.೫೨

೯.೮೫

೧೭.೯೪

೧೩.೭೭

೪. ಒಟ್ಟು ಸಾಕ್ಷರತೆ (ಪ.ಪಂ)

೪೪.೨೫

೪೯.೧೯

೩೬.೦೦

೪೮.೨೭

೫. ಸಾಕ್ಷರತಾ ಅಂತರ(೧-೪)

೧೨.೨೧

೭.೮೨

೨೦.೦೪

೧೮.೩೭

ಮೂಲ : ಸೆನ್ಸಸ್ ಆಫ್ ಇಂಡಿಯಾ, ೧೯೯೧, ಸಿರೀಸ್ ೧೧, ಡಿಸ್ಟ್ರಿಕ್ಟ್ ಸೆನ್ಸಸ್ ಹ್ಯಾಂಡ್ ಬುಕ್ : ವಿಜಾಪುರ, ಡೈರೆಕ್ಟರೇಟ್ ಆಫ್ ಸೆನ್ಸ್ಸ್ ಆಫರೇಶನ್ಸ್, ಕರ್ನಾಟಕ.

. ಸೆನ್ಸ್ಸ್ ಆಫ್ ಇಂಡಿಯಾ : ೨೦೦೧, ಸಿರೀಸ್ ೩೦, ಪ್ರೈಮರಿ ಸೆನ್ಸ್ಸ್ ಅಬ್ಸ್ಟ್ರಾಕ್ಟ್, ಡೈರೆಕ್ಟರೇಟ್ ಆಫ್ ಸೆನ್ಸ್ಸ್ ಆಫರೇಷನ್ಸ್, ಕರ್ನಾಠಕ

ಸಾಕ್ಷರತೆಗೆ ಸಂಬಂಧಿಸಿದಂತೆ ಒಟ್ಟು ಜನಸಂಖ್ಯೆ ಹಾಗೂ ಪ.ಜಾ. ನಡುವೆ ಅಂತರವು ಶೇ. ೯.೮೫ ರಷ್ಟಿದ್ದರೆ ಪ.ಪಂ.ಕ್ಕೆ ಸಂಬಂಧಿಸಿದಂತೆ ಅದು ಶೇ. ೭.೮೨ ಅಂಶಗಳಷ್ಟಿದೆ. ಒಂದು ಸಮಾಧಾನದ ಸಂಗತಿಯೆಂದರೆ ಸಾಕ್ಷರತೆಯ ಸಾಮಾಜಿಕ ಅಂತರವು ವಿಜಾಪುರ ಜಿಲ್ಲೆಯಲ್ಲಿ ರಾಜ್ಯ ಮಟ್ಟದಲ್ಲಿರುವುದಕ್ಕಿಂತ ಕಡಿಮೆಯಿದೆ. ವಿಜಾಪುರ ಜಿಲ್ಲೆ ಹಾಗೂ ಕಾರ್ನಾಟಕ ರಾಜ್ಯದಲ್ಲಿ ಸದರಿ ಅಂತರವು ಕಡಿಮೆಯಾಗುತ್ತಾ ನಡೆದಿದೆ.

ಕೋಷ್ಟಕ ೮.೧೦ರಲ್ಲಿ ವಿಜಾಪುರ ಜಿಲ್ಲೆ ಹಾಗೂ ಅದರ ಐದು ತಾಲ್ಲೂಕುಗಳ ಪ.ಜಾ. ಮತ್ತು ಪ.ಪಂ.ಗಳ ಸಾಕ್ಷರತೆಯನ್ನು ೨೦೦೧ ಮತ್ತು ೨೦೦೬ಕ್ಕೆ ನೀಡಿದೆ.

ಶಾಲಾ ದಾಖಲಾತಿಯಲ್ಲಿ ಅದ್ಭುತ ಸಾಧನೆ

ಪ.ಜಾ. ಮತ್ತು ಪ.ಪಂ. ಸಮುದಾಯಗಳ ಮಕ್ಕಳು ೧ ರಿಂದ ೧೦ನೆಯ ತರಗತಿಗಳ ದಾಖಲಾತಿಗೆ ಸಂಬಂಧಿಸಿದಂತೆ ಸಾಧಿಸಿಕೊಂಡಿರುವ ಸಾಧನೆ ಅಸಾಧಾರಣವಾದುದು. ರಾಜ್ಯ ಮಟ್ಟದಲ್ಲಿ ಈ ಸಮುದಾಯಗಳ ಮಕ್ಕಳ ದಾಖಲಾತಿ ಪ್ರಮಾಣವು ಒಟ್ಟು ಜನಸಂಖ್ಯೆಯಲ್ಲಿನ ಮಕ್ಕಳ ದಾಖಲಾತಿಗೆ ಹೋಲಿಸಬಹುದಾಗಿದೆ. ವಸ್ತುಸ್ಥಿತಿಯೇನಿದೆಯೆಂದರೆ ರಾಜ್ಯ ಮಟ್ಟದಲ್ಲಿ ಹಾಗೂ ವಿಜಾಪುರ ಮಟ್ಟದಲ್ಲಿ ಪ.ಜಾ. ಮತ್ತು ಪ.ಪಂ.ಗಳ ಮಕ್ಕಳ ದಾಖಲಾತಿ ಪ್ರಮಾಣವು ಅವರು ಜನಸಂಖ್ಯೆಯಲ್ಲಿ ಪಡೆದುಕೊಂಡಿರುವ ಪ್ರಮಾಣಕ್ಕಿಂತ ಅಧಿಕವಾಗಿದೆ. ಒಂದರಿಂದ ಹತ್ತನೆಯ ತರಗತಿವರೆಗಿನ ಪ.ಜಾ. ಮತ್ತು ಪ.ಪಂ.ಗಳ ಮಕ್ಕಳ ದಾಖಲಾತಿ ಪ್ರಮಾಣ ಒಟ್ಟು ದಾಖಲಾತಿಯಲ್ಲಿ ಶೇ. ೨೩.೬೯ ರಷ್ಟು ವಿಜಾಪುರ ಜಿಲ್ಲೆಯಲ್ಲಿ ೨೦೦೫-೦೬ನೆಯ ಸಾಲಿನಲ್ಲಿ ಕಂಡುಬಂದಿದೆ. ಜಿಲ್ಲೆಯು ಜನಸಂಖ್ಯೆಯಲ್ಲಿ ಇವರ ಪ್ರಮಾಣ ಶೇ. ೨೦.೧೫.

ಈ ಜಾತಿ-ವರ್ಗಗಳ ದಾಖಲಾತಿಯಲ್ಲಿ ಲಿಂಗ ಅಸಮಾನತೆಯು ಕಡಿಮೆಯಾಗುತ್ತಾ ನಡೆದಿರುವುದು ಸ್ವಾಗತಾರ್ಹ. ಆದರೆ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಈ ಜಾತಿ ವರ್ಗಗಳಲ್ಲಿ ಲಿಂಗ ಅಸಮಾನತೆಯ ಪ್ರಮಾಣದ ಇಳಿಕೆ ಗತಿ ಮಂದವಾಗಿದೆ.

ಮುಖ್ಯ ಸಂಗತಿಗಳು

೧. ಪ.ಜಾ. ಸಾಕ್ಷರತೆಯು ಒಟ್ಟು ಜನಸಂಖ್ಯೆಯ ಸಾಕ್ಷರತೆಗಿಂತ ಕೆಳಮಟ್ಟದಲ್ಲಿದೆ.

೨. ಸಾಕ್ಷರತೆಗೆ ಸಂಬಂಧಿಸಿದ ಸಾಮಾಜಿಕ ಅಂತರವು ರಾಜ್ಯ ಮಟ್ಟದಲ್ಲಿರುವುದಕ್ಕಿಂತ ವಿಜಾಪುರ ಜಿಲ್ಲೆಯಲ್ಲಿ ಕಡಿಮೆಯಿದೆ.

೩. ಅಕ್ಷರಸ್ಥರಲ್ಲಿ ಪ.ಜಾ.ಯ ಪ್ರಮಾಣವು ರಾಜ್ಯ ಮಟ್ಟದಲ್ಲಿರುವುದಕ್ಕಿಂತ ವಿಜಾಪುರ ಜಿಲ್ಲಾ ಮಟ್ಟದಲ್ಲಿ ಅಧಿಕವಿದೆ.

೪. ಆದರೆ ಲಿಂಗ ಸಂಬಂಧಿ ಸಾಕ್ಷರತಾ ಅಂತರವು ರಾಜ್ಯ ಮಟ್ಟದಲ್ಲಿರುವುದಕ್ಕಿಂತ ವಿಜಾಪುರ ಜಿಲ್ಲೆಯಲ್ಲಿ ಅಧಿಕವಾಗಿದೆ.

.ಜಾ. ಮತ್ತು .ಪಂ. ಮಕ್ಕಳ ಶಾಲಾ ದಾಖಲಾತಿ : ೨೦೦೫೦೬

ಕೋಷ್ಟಕ : .೧೨

ವಿವರಗಳು

ಶಾಲಾ ದಾಖಲಾತಿ

ಒಂದನೆಯ ತರಗತಿ

ಏಳನೆಯ ತರಗತಿ

ಹತ್ತನೆಯ ತರಗತಿ

ಒಟ್ಟು ರಿಂದ ೧೦ನೆಯ ತರಗತಿ

ವಿಜಾಪುರ ಜಿಲ್ಲೆ ಒಟ್ಟು ದಾಖಲಾತಿ ೬೨೧೯೫ ೪೦೯೩೩ ೨೨೨೧೨ ೪೫೮೯೭೫
ಪ.ಜಾ. ಮತ್ತು ಪ.ಪಂ. ದಾಖಲಾತಿ ೧೫೩೬೨
(೨೪.೯೦)
೮೯೨೮
(೨೧.೮೧)
೪೬೨೨
(೨೦.೮೦)
೧೦೮೭೩೬
(೨೩.೬೯)
ಕರ್ನಾಟಕ ರಾಜ್ಯ ಒಟ್ಟು ದಾಖಲಾತಿ ೧೨೧೯೬೫೨ ೯೯೫೮೩೦ ೬೧೫೬೫೫ ೯೯೫೯೯೪೪
ಪ.ಜಾ. ಮತ್ತು ಪ.ಪಂ. ದಾಖಲಾತಿ ೩೫೨೨೮೭
(೨೮.೮೮)
೨೫೫೫೭೨
(೨೫.೬೬)
೧೩೬೭೧೮
(೨೨.೨೧)
೨೬೭೭೯೭೧
(೨೬.೮೯)

ಮೂಲ: ಕರ್ನಾಟಕ ಸರ್ಕಾರ : ೨೦೦೬, ತಾಲ್ಲೂಕುವಾರು ಶೈಕ್ಷಣಿಕ ಮಾಹಿತಿ: ೨೦೦೬, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು.

ರಾಜ್ಯ ಮಟ್ಟದಲ್ಲಿ ಪ.ಜಾ. ಮತ್ತು ಪ.ಪಂ.ಗಳು ಜನಸಂಖ್ಯೆಯಲ್ಲಿ ಶೇ.೨೨.೭೫ ಪಾಲು ಪಡೆದಿದ್ದರೆ ಶಾಲಾ ದಾಖಲಾತಿಯಲ್ಲಿ ಶೇ. ೨೬.೮೯ ಪಾಲು ಪಡೆದುಕೊಂಡಿದೆ. ಪದವಿ ಪೂರ್ವ ತರಗತಿಯಲ್ಲಿ ವಿಜಾಪುರದಲ್ಲಿ ಪಜಾ. ವಿದ್ಯಾರ್ಥಿಗಳ ಪ್ರಮಾಣ ಶೇ. ೨೦.೯೧ ಆದರೆ ಒಂದನೆಯ ತರಗತಿಯಲ್ಲಿ ಪರಿಶಿಷ್ಟರ ಪ್ರಮಾಣ ಅಧಿಕವಾಗಿರುತ್ತದೆ. ಆದರೆ ಏಳನೆಯ ಮತ್ತು ಹತ್ತನೆಯ ತರಗತಿ ತೆಗೆದುಕೊಂಡರೆ ಅವರ ಪ್ರಮಾಣ ಕಡಿಮೆ.

ಶೈಕ್ಷಣಿಕ ಪರಿವರ್ತನಾ ಸೂಚ್ಯಂಕ

ಕೋಷ್ಟಕ ೮.೧೩ ರಲ್ಲಿ ಶೈಕ್ಷಣಿಕ ಪರಿವರ್ತನಾ ಸೂಚ್ಯಂಕವನ್ನು ಪ.ಜಾ. ಮತ್ತು ಪ.ಪಂ. ವಿದ್ಯಾರ್ಥಿಗಳಿಗೆ ಲೆಕ್ಕ ಹಾಕಿ ನೀಡಲಾಗಿದೆ.

ಶೈಕ್ಷಣಿಕ ಪರಿವರ್ತನಾ ಸೂಚ್ಯಂಕ : .ಜಾ. ಮತ್ತು .ಪಂ. ೨೦೦೬೦೭

ಕೋಷ್ಟಕ.೧೩

ವಿವರಗಳು

೭ನೆಯ ತರಗತಿ ದಾಖಲಾತಿ ೨೦೦೪೦೫

೮ನೆಯ ತರಗತಿ ದಾಖಲಾತಿ ೨೦೦೫೦೬

ಶೈಕ್ಷಣಿಕ ಪರಿವರ್ತನಾ ಸೂಚ್ಯಂಕ ೨೦೦೫೦೬

ಪ.ಜಾ.

ಪ.ಪಂ.

ಪ.ಜಾ.

ಪ.ಪಂ

ಪ.ಜಾ.

ಪ.ಪಂ.

ವಿಜಾಪುರ ಜಿಲ್ಲೆ

೭೭೯೦

೭೧೭

೬೨೨೮

೭೪೬

೦.೭೯೯

೧.೦೪

ಕರ್ನಾಟಕರಾಜ್ಯ

೧೮೧೯೩೨

೭೧೭೫೯

೧೪೯೫೦೦

೫೬೬೭೬

೦.೮೨೨

೦.೭೯೦

ಮೂಲ : . ಕರ್ನಾಟಕ ಸರ್ಕಾರ : ೨೦೦೫, ತಾಲ್ಲೂಕುವಾರು ಶೈಕ್ಷಣಿಕ ಅಂಕಿ ಅಂಶ : ೨೦೦೫, ಸರ್ವಶಿಕ್ಷಾ ಅಭಿಯಾನ, ಬೆಂಗಳೂರು
. ಕರ್ನಾಟಕ ಸರ್ಕಾರ : ೨೦೦೬, ಸಮಗ್ರ ಶೈಕ್ಷಣಿಕ ಮಾಹಿತಿ ಕೋಶ: ೨೦೦೬, ಸರ್ವಶಿಕ್ಷಾ ಅಭಿಯಾನ, ಬೆಂಗಳೂರು.

ವಿಜಾಪುರ ಜಿಲ್ಲೆಯಲ್ಲಿ ಒಟ್ಟು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಶೈಕ್ಷಣಿಕ ಪರಿವರ್ತನಾ ಸೂಚ್ಯಂಕವು ೨೦೦೫-೦೬ ರಲ್ಲಿ ೦.೮೩೦ ರಷ್ಟಿತ್ತು. ಕರ್ನಾಟಕ ರಾಜ್ಯದಲ್ಲಿ ಅದರ ಮೌಲ್ಯ ೦.೮೨೯. ಅಂದರೆ ಪರಸ್ಪರ ಅವು ಸಮವಾಗಿದ್ದವು. ಆದರೆ ಪ.ಜಾ.ಗೆ ಸಂಬಂಧಿಸಿದಂತೆ ವಿಜಾಪುರ ಜಿಲ್ಲೆಯಲ್ಲಿ ಅದು ೦.೭೯೯ ರಷ್ಟಿದ್ದರೆ ರಾಜ್ಯ ಮಟ್ಟದಲ್ಲಿ ಅದು ೦.೮೨೨ ರಷ್ಟಿದೆ. ಒಟ್ಟು ವಿದ್ಯಾರ್ಥಿಗಳು ಮತ್ತು ಪ.ಜಾ. ವಿದ್ಯಾರ್ಥಿ ಸೂಚ್ಯಂಕಗಳ ನಡುವೆ ತೀವ್ರ ಅಂತರವಿದೆ. ಆದರೆ ಪ.ಪಂ. ವಿದ್ಯಾರ್ಥಿಗಳ ಸೂಚ್ಯಂಕ ೧.೦೪ ರಲ್ಲಿ ಅಧಿಕ ಮಟ್ಟದಲ್ಲಿದೆ.

. ದುಡಿಮೆ ಮತ್ತು ಉದ್ಯೋಗ

ಒಂದು ಆರ್ಥಿಕತೆಯಲ್ಲಿ ಜನರ ಜೀವನ ಮಟ್ಟವನ್ನು ಸೂಚಿಸುವ ಬಹುಮುಖ್ಯ ಸಂಗತಿಯೆಂದರೆ ದುಡಿಮೆಗಾರರ ವೃತ್ತಿವಾರು ವರ್ಗೀಕರಣ. ಪ್ರಸ್ತುತ ಭಾಗದಲ್ಲಿ ಪ.ಜಾ. ಮತ್ತು ಪ.ಪಂ.ಗಳ ಜನಸಮೂಹಕ್ಕೆ ಸಂಬಂಧಿಸಿದಂತೆ ಕೃಷಿ ಅವಲಂಬನೆ, ಕೃಷಿ ಕಾರ್ಮಿಕರ ಪ್ರಮಾಣ, ದುಡಿಮೆ ಸಹಭಾಗಿತ್ವ ಮುಂತಾದ ಸಂಗತಿಗಳನ್ನು ಚರ್ಚಿಸಲಾಗಿದೆ. ಕೃಷಿ ಅವಲಂಬನೆ ಲಾಗಾಯ್ತಿನಿಂದಲೂ ಅರ್ಥಶಾಸ್ತದಲ್ಲಿ ಕೃಷಿಯ ಅವಲಂಬನೆ ಯಾವ ಆರ್ಥಿಕತೆಯಲ್ಲಿ ಅಧಿಕವಾಗಿರುತ್ತದೋ ಅದನ್ನು ಹಿಂದುಳಿದ ಆರ್ಥಿಕತೆಯೆಂದು ಗುರುತಿಸಿಕೊಂಡು ಬರಲಾಗಿದೆ. ಈ ಪ್ರಮೇಯದ ಆಧಾರದ ಮೇಲೆ ಆರ್ಥಿಕತೆಯೊಂದರ ಜನರ ಬದುಕಿನ ಸ್ಥಿತಿಗತಿಯನ್ನು ಅವರ ಕೃಷಿ ಅವಲಂಬನೆ ಪ್ರಮಾಣದಿಂದ ತೋರಿಸಬಹುದಾಗಿದೆ. ಆರ್ಥಿಕ ಸಿದ್ಧಾಂತದ ಪ್ರಕಾರ ಆರ್ಥಿಕತೆಯ ಅಭಿವೃದ್ಧಿಯ ಮಟ್ಟ ಹಾಗೂ ಗತಿ ಉನ್ನತ ಹಂತ ತಲುಪಿದಂತೆ ಅಲ್ಲಿ ಕೃಷಿಯನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರರ ಪ್ರಮಾಣವು ಕಡಿಮೆಯಾಗಿ ಕೃಷಿಯೇತರ ಚಟುವಟಿಕೆಗಳನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರರ ಪ್ರಮಾಣವು ಅಧಿಕವಾಗುತ್ತದೆ. ಇದನ್ನು ವೃತ್ತಿ ರಚನಾ ಪರಿವರ್ತನಾ ಸಿದ್ಧಾಂತವೆಂದು ಕರೆಯಲಾಗಿದೆ. ಕೊಲನ್ ಕ್ಲಾರ್ಕ್, ಸೈಮನ್ ಕುಜ್ನೆಟ್ಸ್ ಮುಂತಾದವರು ಇದನ್ನು ಪ್ರತಿಪಾದಿಸಿದ್ದಾರೆ.

ದುಡಿಮೆ ಅಪಾರ : ಪಾಲು ಕಡಿಮೆ

ಈ ಕೋಷ್ಟಕದಲ್ಲಿ ಒಂದು ವಿಚಿತ್ರ ಸಂಗತಿಯು ನಮಗೆ ಕಂಡುಬರುತ್ತದೆ. ಜಿಲ್ಲೆಯಲ್ಲಿನ ದುಡಿಮೆಯಲ್ಲಿ ಇವರ ಪಾಲು ಅಪಾರ. ಉದಾಹರಣೆಗೆ ಜಿಲ್ಲೆಯ ಒಟ್ಟು ಕೃಷಿ ಕಾರ್ಮಿಕರಲ್ಲಿ ಪ.ಜಾ. ಕಾರ್ಮಿಕರ ಪ್ರಮಾಣ ಶೇ. ೨೬.೧೨ ಜನಸಂಖ್ಯೆಯಲ್ಲಿ ಇವರ ಪ್ರಮಾಣ ಎಷ್ಟಿದೆಯೋ (ಶೇ. ೧೮.೪೯) ಅದಕ್ಕಿಂತಲೂ ಕೃಷಿ ಕಾರ್ಮಿಕರಲ್ಲಿ ಇವರ ಪಾಲು ಅಧಿಕ.

ಆಧರೆ ಅಭಿವೃದ್ಧಿಯ ಒಂದು ಫಲವಾದ ಅಕ್ಷರ ಸಂಸ್ಕೃತಿಯಲ್ಲಿ ಇವರ ಪಾಲು ಕಡಿಮೆ. ರಾಜ್ಯದ ಒಟ್ಟು ಅಕ್ಷರಸ್ಥರಲ್ಲಿ ಪ.ಜಾ. ಅಕ್ಷರಸ್ಥರ ಪಾಲು ಕೇವಲ ಶೇ. ೧೫.೦೪.

ಇದರ ಆಧಾರದ ಮೇಲೆ ಪ.ಜಾ. ಜನ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಕಾಣಿಕೆ ನೀಡುತ್ತಿದ್ದಾರೆ. ಆದರೆ ದುಡಿಮೆಗೆ ತಕ್ಕ ಪ್ರತಿಫಲ ಅವರಿಗೆ ದೊರಕುತ್ತಿಲ್ಲವೆಂಬುದಕ್ಕೆ ಇದೊಂದು ನಿದರ್ಶನವಾಗಿದೆ.

ಅಭಿವೃದ್ಧಿಯಲ್ಲಿ ಪರಿಶಿಷ್ಟರ ಪಾಲು

ಕೋಷ್ಟಕ .೧೪

ತಾಲ್ಲೂಕುಗಳು

ಜಿಲ್ಲೆಯ ಜನಸಂಖ್ಯೆಯಲ್ಲಿ .ಜಾ. ಜನಸಂಖ್ಯೆ ಪ್ರಮಾಣ

ಜಿಲ್ಲೆಯ ಒಟ್ಟು ಅಕ್ಷರಸ್ಥರಲ್ಲಿ .ಜಾ. ಅಕ್ಷರಸ್ಥರ ಪ್ರಮಾಣ

ಜಿಲ್ಲೆಯ ಒಟ್ಟು ಕೃಷಿಕೂಪಿಕಾರರಲ್ಲಿ .ಜಾ. ಕೃಷಿಕೂಲಿಕಾರರ ಪ್ರಮಾಣ

ಬ.ಬಾಗೇವಾಡಿ ೧೯.೧೩ ೧೪.೪೧ ೨೫.೧೫
ವಿಜಾಪುರ ೧೮.೫೬ ೭.೯೩ ೨೯.೧೩
ಇಂಡಿ ೧೯.೧೮ ೧೭.೦೬ ೨೭.೦೨
ಮುದ್ದೇಬಿಹಾಳ ೧೭.೫೧ ೧೩.೬೯ ೨೪.೨೮
ಸಿಂದಗಿ ೧೭.೮೩ ೧೪.೯೯ ೨೪.೬೪
ಜಿಲ್ಲೆ ೧೮.೪೯ ೧೫.೦೪ ೨೬.೧೨
ರಾಜ್ಯ ೧೬.೨೦ ೧೨.೬೧ ೨೭.೯೦

ಮೂಲ : ಜನಗಣತಿ ವರದಿ ೨೦೦೧

ಕೋಷ್ಟಕ-೮.೧೪ ರಲ್ಲಿ ಒಟ್ಟು ಜನಸಂಖ್ಯೆಗೆ ಸಂಬಂಧಿಸಿದಂತೆ ಹಾಗೂ ಪ.ಜಾ.ಗೆ ಸಂಬಂಧಿಸಿದಂತೆ ೨೦೦೧ರ ವೃತ್ತಿವಾರು ರಚನೆಯನ್ನು ವಿಜಾಪುರ ಜಿಲ್ಲೆ ಹಾಗೂ ಕರ್ನಾಟಕಕ್ಕೆ ಸಂಬಂಧಿಸಿದಂತೆ ನೀಡಲಾಗಿದೆ.

ದುಡಿಮೆಗಾರರ ವೃತ್ತಿವಾರು ರಚನೆ೨೦೦೧

ಕೋಷ್ಟಕ.೧೫

(ಪ್ರಧಾನ ಮತ್ತು ಉಪಪ್ರಧಾನ ದುಡಿಮೆಗಾರರು)

ವಿವರ

 

ವಿಜಾಪುರ ಜಿಲ್ಲೆ

ಕರ್ನಾಟಕ ರಾಜ್ಯ

ಒಟ್ಟು ಜನಸಂಖ್ಯೆ

.ಜಾ. ಜನಸಂಖ್ಯೆ

ಒಟ್ಟು ಜನಸಂಖ್ಯೆ

.ಜಾ. ಜನಸಂಖ್ಯೆ

ಸಾಗುವಳಿದಾರರು ಒಟ್ಟು ೨೧೭೦೫೬ ೨೬೭೫೩ ೬೮೮೩೮೫೬ ೮೧೪೭೮೮
ಪುರುಷ ೧೭೦೬೧೨ ೨೦೪೦೬ ೪೮೩೨೮೪೦ ೫೭೨೫೬೮
ಮಹಿಳೆ ೪೬೪೪೪ ೬೩೪೭ ೨೦೫೧೦೧೬ ೨೪೨೨೨೦
ಕೃಷಿಕಾರ್ಮಿಕರು ಒಟ್ಟು ೨೮೬೭೩೯ ೭೪೮೯೨ ೬೨೨೬೯೪೨ ೧೭೩೭೧೪೮
ಪುರುಷ ೧೨೨೮೯೨ ೩೪೪೯೬ ೨೬೨೦೯೨೭ ೭೮೯೮೮೯
ಮಹಿಳೆ ೧೬೩೮೪೭ ೪೦೩೯೬ ೩೬೦೬೦೧೫ ೯೪೭೨೯೫
ಕೌಟುಂಬಿಕ ಒಟ್ಟು ೨೧೧೩೭ ೩೨೬೬ ೯೫೯೬೬೫ ೧೦೦೪೪೭
ಕೈಗಾರಿಕಾ ಪುರುಷ ೧೪೪೨೩ ೨೦೭೦ ೪೦೫೦೯೧ ೪೨೬೧೬
ಕಾರ್ಮಿಕರು ಮಹಿಳೆ ೬೭೧೪ ೧೧೯೬ ೫೫೪೫೭೪ ೫೭೮೩೧
ಇತರೆ ಕಾರ್ಮಿಕರು ಒಟ್ಟು ೧೯೩೨೮೧ ೨೯೭೭೮ ೯೪೬೪೩೨೮ ೯೪೦೬೨
ಪರುಷ ೧೫೯೭೩೯ ೨೨೮೨೬ ೭೩೭೬೪೯೭ ೯೪೦೩೭೮
ಮಹಿಳೆ ೩೩೫೪೨ ೬೯೯೨ ೨೦೮೭೮೩೧ ೩೭೩೬೮೪
ದುಡಿಮೆಗಾರರು ಒಟ್ಟು ೭೧೮೨೧೩ ೧೩೪೬೮೯ ೨೫೫೪೭೯೧ ೩೯೬೬೪೪೫
ಪುರುಷ ೪೬೭೬೬೬ ೭೯೭೯೮ ೧೫೨೩೫೫೫ ೨೩೪೫೪೫೧
ಮಹಿಳೆ ೨೫೦೫೪೭ ೫೪೮೯೧ ೮೨೯೯೩೪೬ ೧೬೨೦೯೯೪

ಮೂಲ: ಜನಗಣತಿ ವರದಿ೨೦೦೧

ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ ಕೃಷಿಯ ಅವಲಂಬನೆಯು ಪ.ಜಾ. ದುಡಿಮೆಗಾರರಲ್ಲಿ ಒಟ್ಟು ಜನಸಂಖ್ಯೆಯಲ್ಲಿರುವುದಕ್ಕಿಂತ ಅಧಿಕವಾಗಿದೆ. ಒಟ್ಟು ಜನಸಂಖ್ಯೆಗೆ ಸಂಬಂಧಿಸಿದಂತೆ ವಿಜಾಪುರ ಜಿಲ್ಲೆಯಲ್ಲಿ ಕೃಷಿ ಅವಲಂಬನೆ ಶೇ. ೭೦.೧೪ ರಷ್ಟಿದ್ದರೆ ಪ.ಜಾ.ಯಲ್ಲಿ ಅದರ ಪ್ರಮಾಣ ಶೇ. ೭೫.೪೭ ಮತ್ತೊಂದು ಸಂಗತಿಯೆಂದರೆ ಕೃಷಿ ಅವಲಂಬಿತರಲ್ಲಿ ಕೃಷಿ ಕಾರ್ಮಿಕರ ಪ್ರಮಾಣವು ಒಟ್ಟು ಜನಸಂಖ್ಯೆಯಲ್ಲಿರುವುದಕ್ಕಿಂತ ಪ.ಜಾ.ಯಲ್ಲಿ ಅಧಿಕವಾಗಿದೆ. ಒಟ್ಟು ಜನಸಂಖ್ಯೆಯಲ್ಲಿನ ಕೃಷಿ ಅವಲಂಬಿತರಲ್ಲಿ ಕೃಷಿ ಕಾರ್ಮಿಕರ ಪ್ರಮಾಣವು ಶೇ. ೫೬೯೯ರಷ್ಟಿದ್ದರೆ ಪ.ಜಾ.ಯಲ್ಲಿ ಅವರ ಪ್ರಮಾಣ ಶೇ. ೭೩.೬೮. ಭೂರಹಿತರ ಪ್ರಮಾಣವು ಒಟ್ಟು ಜನಸಂಖ್ಯೆಗಿಂತ ಪ.ಜಾ.ಯಲ್ಲಿ ಅಧಿಕವೆಂಬುದು ಇದರಿಂದ ತಿಳಿಯುತ್ತದೆ.

ಒಟ್ಟು ಜನಸಂಖ್ಯೆಯಲ್ಲಿ ಕೃಷಿಯೇತರ ಚಟುವಟಿಕೆಗಳ ಪ್ರಮಾಣ ಶೇ. ೨೯.೮೬ರಷ್ಟಿದ್ದರೆ ಪ.ಜಾ.ಗೆ ಸಂಬಂಧಿಸಿದಂತೆ ಅವುಗಳ ಪ್ರಮಾಣ ಕೇವಲ ಶೇ. ೨೪.೫೩.

ಮತ್ತೊಂದು ಕುತೂಹಲದ ಸಂಗತಿಯೆಂದರೆ ಕೃಷಿ ಕಾರ್ಮಿಕರಲ್ಲಿ ಮಹಿಳೆಯರ ಪ್ರಮಾಣವು ಅಧಿಕವಾಗಿದೆ. ಆದರೆ ಒಟ್ಟು ಜನಸಂಖ್ಯೆಗೆ ಸಂಬಂದಿಸಿದಂತೆ ಕೃಷಿ ಕಾರ್ಮಿಕರಲ್ಲಿ ಮಹಿಳೆಯರ ಪ್ರಮಾಣ ಶೇ. ೫೭.೧೪ರಷ್ಟಿದ್ದರೆ ಪ.ಜಾ.ಯಲಿ ಅವರ ಪ್ರಮಾಣ ಶೇ. ೫೩.೯೩.

ದುಡಿಮೆ ಸಹಭಾಗಿತ್ವ ಪ್ರಮಾಣವು ಒಟ್ಟು ಜನಸಂಖ್ಯೆಗೆ ಸಂಬಂಧಿಸಿದಂತೆ ಶೇ. ೩೯.೭೪ ರಷ್ಟಿದ್ದರೆ ಪ.ಜಾ.ಯಲ್ಲಿ ಅದರ ಪ್ರಮಾಣ ಶೇ. ೪೦.೨೯ರಷ್ಟಿದೆ.

ಒಟ್ಟಾರೆ ಪ.ಜಾ. ದುಡಿಮೆಗಾರರ ಬದುಕಿನ ಸ್ಥಿತಿಯು ಒಟ್ಟು ಜನಸಂಖ್ಯೆಯ ಸ್ಥಿತಿಗಿಂತ ತುಂಬಾ ಸಂಕಷ್ಟದಲ್ಲಿದೆ. ಏಕೆಂದರೆ ಇಲ್ಲಿ ಕೃಷಿ ಅವಲಂಬನೆಯು ಅಧಿಕ. ಅದರಲ್ಲಿ ಕೃಷಿ ಕಾರ್ಮಿಕರ ಪ್ರಮಾಣವು ಅಧಿಕ. ಪ.ಜಾ. ಜನಸಮೂಹವು ಸಮಾಜದಲ್ಲಿ ಅನುಭವಿಸುತ್ತಿರುವ ತಾರತಮ್ಯ ಹಾಗೂ ಶೋಷಣೆಯನ್ನು ಮೇಲಿನ ಸಂಗತಿಗಳು ಸ್ಪಷ್ಟವಾಗಿ ತೋರಿಸುತ್ತವೆ.

ಮಾಸಿಕ ತಲಾ ವರಮಾನ : .ಜಾ. ಮತ್ತು .ಪಂ. ೨೦೦೬

ಕೋಷ್ಟಕ .೧೫

ತಾಲ್ಲೂಕುಗಳು

ಪ.ಜಾ.

ಪ.ಪಂ

ರೂ.೫೦೦

ರೂ.೫೦೦
ರೂ.೧೦೦೦

ರೂ.೧೦೦೦ ರಿಂದ ಮತ್ತು ಅಧಿಕ

ಒಟ್ಟು ಕುಟುಂಬಗಳ ಘಟಕ

ರೂ.೫೦೦

ರೂ.೫೦೦
ರೂ.೧೦೦೦

ರೂ.೧೦೦೦ ರಿಂದ ಮತ್ತು ಅಧಿಕ

ಒಟ್ಟು ಕುಟುಂಬಗಳ ಘಟಕ

ಬ.ಬಾಗೇವಾಡಿ

೫೮೦೪ (೪೮.೧೦)

೬೧೮೪
(೫೧.೨೫)

೭೯
(೦.೬೫)

೧೨೦೬೭
(೧೦೦.೦೦)

೨೪೨
(೨೧.೦೬)

೯೦೪
(೭೮.೬೮)

೦೩
(೦.೨೬)

೧೧೪೯
(೧೦೦.೦೦)

ವಿಜಾಪುರ

೧೩೮೯
(೬.೨೧)

೧೪೨೫೮ (೭೩.೯೯)

೩೬೨೪
(೧೮.೮೦)

೧೯೨೭೧
(೧೦೦.೦೦)

೧೧೧
(೯.೧೮)

೨೫೮
(೨೧.೩೪)

೮೪೦
(೬೯.೪೮)

೧೨೦೯
(೧೦೦.೦೦)

ಇಂಡಿ

೨೮೩
(೨.೧೬)

೧೧೬೯೨ (೮೯.೩೩)

೧೧೧೩
(೮.೫೧)

೧೩೦೮೮
(೧೦೦.೦೦)

೧೫೪೦
(೯೯.೫೫)

೦೭
(೦.೪೫)

೧೫೪೭
(೧೦೦.೦೦)

ಮುದ್ದೇಬಿಹಾಳ

೫೨೬೧ (೫೯.೪೯)

೨೦೨೬ (೨೨.೯೧)

೧೫೫೭
(೧೭.೬೦)

೮೮೪೪
(೧೦೦.೦೦)

೧೨೨೪
(೮೫.೫೮)

೧೪೫
(೧೦.೧೩)

೬೨
(೪.೩೩)

೧೪೩೧
(೧೦೦.೦೦)

ಸಿಂದಗಿ

೫೧೯೦ (೪೯.೩೦)

೪೫೮೯ (೪೩.೫೯)

೭೪೮
(೭.೧೧)

೧೦೫೨೭
(೧೦೦.೦೦)

೩೦
(೨.೭೨)

೧೦೭೩
(೯೭.೨೮)

೧೧೦೩
(೧೦೦.೦೦)

ಜಿಲ್ಲೆ

೧೭೯೨೭ (೨೮.೧೦)

೩೮೭೪೯ (೬೦.೭೪)

೭೧೨೧
(೧೧.೧೬)

೬೩೭೯೭
(೧೦೦.೦೦)

೧೬೦೭
(೨೪.೯೬)

೩೯೨೦
(೬೦.೮೮)

೯೧೨
(೧೪.೧೬)

೬೪೩೯
(೧೦೦.೦೦)

 

ಮೂಲಡೈರಕ್ಟರೇಟ್ ಆಫ್ ಎಕಾನಾಮಿಕ್ಸ್ ಅಂಡ್ ಸ್ಟಾಟಿಟ್ಸಿಕ್ಸ್ : .ಜಾ. .ಪಂ. ಸಮೀಕ್ಷೆ ವರದಿ. ೨೦೦೫

ಈ ಹಿಂದೆ ಚರ್ಚಿಸಿರುವಂತ ವಿಜಾಪುರ ಜಿಲ್ಲೆಯಲ್ಲಿನ ಒಟ್ಟು ಅಕ್ಷರಸ್ಥರಲ್ಲಿ ಪ.ಜಾ. ಪ್ರಮಾಣ ಶೇ. ೧೫.೦೪. ಆದರೆ ಕೃಷಿ ಕಾರ್ಮಿಕರಿಗೆ ಸಂಬಂಧಿಸಿದಂತೆ ಅವರ ಪ್ರಮಾಣವು ಶೇ. ೨೬.೧೨. ದುಡಿಮೆಗೆ ಬಂದರೆ ಪ.ಜಾ. ಪಾಲು ಅಧಿಕ. ಆದರೆ ಅಭಿವೃದ್ಧಿಯ ಫಲಗಳಿಗೆ ಬಂದರೆ ಪ.ಜಾ. ಪಾಲು ಕಡಿಮೆ.

. ವರಮಾನ ಮತ್ತು ಬಡತನ

ಜನರ ಜೀವನಮಟ್ಟವನ್ನು ಅಪಾರವಾಗಿ ನಿರ್ಧರಿಸುವ ಎರಡು ಸಂಗತಿಗಳೆಂದರೆ ಮೊದಲನೆಯದು ಉದ್ಯೋಗದ ರಚನೆ ಮತ್ತು ಎರಡನೆಯದು ಆದಾಯದ ಮಟ್ಟ ಈ ಹಿಂದಿನ ಭಾಗದಲ್ಲಿ ವಿಜಾಪುರ ಜಿಲ್ಲೆ ಮತ್ತು ಅದರ ಐದು ತಾಲ್ಲೂಕುಗಳಲ್ಲಿನ ಪ.ಜಾ. ಮತ್ತು ಪ.ಪಂ.ಗಳ ದುಡಿಮೆಗಾರರ ಉದ್ಯೋಗದ ರಚನೆಯ ವಿವರವನ್ನು ತಿಳಿಸಲಾಗಿದೆ. ಪ.ಜಾ. ಮತ್ತು ಪಂ.ಪಂ.ಗಳಿಗೆ ಸಂಬಂಧಿಸಿದಂತೆ ತಲಾ ವರಮಾನದ ವಿವರ ದೊರೆಯುವುದಿಲ್ಲ. ಆದರೆ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯವು ವಿಜಾಪುರದಲ್ಲಿ ನಡೆಸಿದ ಪ.ಜಾ. ಮತ್ತು ಪ.ಪಂ.ಗಳ ಜೀವನಮಟ್ಟ ಕುರಿತ ಸಮೀಕ್ಷೆಯಲ್ಲಿ ಅವರ ಮಾಸಿಕ ತಲಾ ವೆಚ್ಚದ ವಿವರ ದೊರೆಯುತ್ತದೆ. ಇದನ್ನು ಕೋಷ್ಟಕ ೮.೧೫ರಲ್ಲಿ ತೋರಿಸಿದೆ.

ಬಹಳ ವಿಷಾದನೀಯ ಸಂಗತಿಯೆಂದರೆ ವಿಜಾಪುರ ಜಿಲ್ಲೆಯ ಸರಿಸುಮಾರು ಶೇ. ೯೦ರಷ್ಟು ಪ.ಜಾ. ಮತ್ತು ಪ.ಪಂ. ಕುಟುಂಬಗಳೂ ರು. ೧೦೦೦ಕ್ಕಿಂತ ಕಡಿಮೆ ಮಾಸಿಕ ತಲಾ ವರಮಾನದ ಗುಂಪಿಗೆ ಸೇರುತ್ತವೆ. ಅಂದರೆ ಈ ಜಿಲ್ಲೆಯಲ್ಲಿ ಶೇ. ೮೦ರಿಂದ ೯೦ರಷ್ಟು ಕುಟುಂಬಗಳು ಬಡತನ ರೇಖೆಯ ಕೆಳಗೆ ಜೀವಿಸುತ್ತಿರುವುದು ಕಂಡುಬರುತ್ತದೆ. ಬಡನತದ ತೀವ್ರತೆಯು ಪ.ಜಾ. ಮತ್ತು ಪ.ಪಂ.ಗಳ ಜನಸಮುದಾಯದಲ್ಲಿ ಅಧಿಕವಾಗಿದೆ. ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ರಾಜ್ಯಾದ್ಯಂತ ನಡೆಸಿದ ಪ.ಜಾ. ಮತ್ತು ಪ.ಪಂ.ಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಮಾಹಿತಿಯನ್ನು ವಿಶ್ಲೇಷಣೆ ಮಾಡುತ್ತಾ ಮನೋಹರ್‌ಯಾದವ್ ಅವರು ೧೯೯೬ರಲ್ಲಿ ಪ.ಜಾ.ಯಲ್ಲಿ ಶೇ. ೯೨.೦೬ ಮತ್ತು ಪ.ಪಂ. ದಲ್ಲಿ ಶೇ. ೯೩.೧೦ರಷ್ಟು ಕುಟುಂಬಗಳು ಬಡನತದ ರೇಖೆ ಕೆಳಗೆ ಜೀವಿಸುತ್ತಿದ್ದಾರೆ. ಎಂಬುದನ್ನು ದಾಖಲಿಸಿದ್ದಾರೆ (ಎಂ. ಯಾದವ್ ೨೦೦೩: ೫೨). ಕಳೆದ ಹತ್ತು ವರ್ಷಗಳಲ್ಲಿ ಅವರ ಜೀವನ ತೀವ್ರವಾಗಿ ಬದಲಾಗಿದೆಯೆಂದು ನಂಬುವುದಕ್ಕೆ ಯಾವುದೇ ಆಧಾರಗಳಿಲ್ಲ.

ಬಡತನವನ್ನು ಇಲ್ಲಿ ಕೇವಲ ವರಮಾನ ಕೊರತೆಯನ್ನು ಮಾತ್ರ ಗಣನೆ ಮಾಡಲಾಗಿದೆ. ಆದರೆ ಈ ಜಿಲ್ಲೆಯಲ್ಲಿ ಜನರು ತೀವ್ರ ಬಡತನದಿಂದ ನರಳುತ್ತಿದ್ದಾರೆ.. ಅವರು ವರಮಾನ ಕೊರತೆಯ ಬಡತನವನ್ನು ಅನುಭವಿಸುತ್ತಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಅಲ್ಲಿ ಜನರು ಮಾನವ ಧಾರಣಾ ಸಾಮರ್ಥ್ಯ ದುಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಮೂರನೆಯದಾಗಿ ಜನರು ಅನೇಕ ಬಗೆಯ ಸಾಮಾಜಿಕ ಹೊರಗಣತನವನ್ನು ಅನುಭವಿಸುತ್ತಿದ್ದಾರೆ. ಅರ್ಜುನ್ ಸೆನ್ ಗುಪ್ತ ಈ ಬಗೆಯ ಮೂರು ಸಂಗತಿಗಳಿಂದ ಮುಪ್ಪುರಿಗೊಂಡ ದುಸ್ಥಿತಿಯನ್ನು ಕಡು ಬಡತನ ಎಂದು ಕರೆದಿದ್ದಾನೆ. ಈ ಜಿಲ್ಲೆಯಲ್ಲಿ ತೀವ್ರ ಬಡತನದಿಂದ ನರಳುತ್ತಿರುವ ಜನರಿದ್ದಾರೆ. ಉದಾಹರಣೆಗೆ ಜಿಲ್ಲೆಯ

ಸಾರಸಂಗ್ರಹ

ಈ ಅಧ್ಯಾಯದಲ್ಲಿ ವಿಜಾಪುರ ಜಿಲ್ಲೆ ಹಾಗೂ ಅದರ ತಾಲ್ಲೂಕುಗಳಲ್ಲಿ ಪ.ಜಾ. ಮತ್ತು ಪ.ಪಂ.ಗಳ ಸ್ಥಿತಿಗತಿಯನ್ನು ವಿವಿಧ ಮಾಹಿತಿ ಸೂಚಿಗಳನ್ನು ಆಧರಿಸಿ ಚರ್ಚಿಸಲಾಗಿದೆ.

ರಾಜ್ಯಮಟ್ಟದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಪ.ಜಾ. ಪ್ರಮಾಣ ಎಷ್ಟಿದೆಯೋ ಅದಕ್ಕಿಂತ ವಿಜಾಪುರ ಜಿಲ್ಲೆಯಲ್ಲಿ ಪ.ಜಾ. ಪ್ರಮಾಣ ಅಧಿಕವಾಗಿದೆ.

ಆದರೆ ರಾಜ್ಯಮಟ್ಟದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಪ.ಜಾ. ಪ್ರಮಾಣ ಎಷ್ಟಿದೆಯೋ ಅದಕ್ಕಿಂತ ವಿಜಾಪುರ ಜಿಲ್ಲೆಯಲ್ಲಿ ಪ.ಜಾ. ಪ್ರಮಾಣ ಅಧಿಕವಾಗಿದೆ.

ಆದರೆ ರಾಜ್ಯಮಟ್ಟಕ್ಕೆ ಸಾಪೇಕ್ಷವಾಗಿ ಜಿಲ್ಲೆಯಲ್ಲಿ ಪ.ಪಂ.ದ. ಪ್ರಮಾಣವು ತುಂಬಾ ಕಡಿಮೆಯಿದೆ.

ಜಾತಿ ಆಧಾರಿತ ಶ್ರೇಣೀಕರಣವು ದಕ್ಷಿಣ ಕರ್ನಾಟಕದಲ್ಲಿ ನಿಧಾನವಾಗಿ ಶಿಥಿಲಗೊಳ್ಳುತ್ತಿದ್ದರೆ ಅದು ಉತ್ತರ ಕರ್ನಾಟಕ ಪ್ರದೇಶದಲ್ಲಿ ಇನ್ನೂ ಗಟ್ಟಿಯಾಗಿ ಮುಂದುವರಿದಿದೆ.

ಅಭಿವೃದ್ಧಿಯ ಯಾವುದೇ ಸೂಚಿಯನ್ನು ತೆಗೆದುಕೊಂಡರೂ ಪರಿಶಿಷ್ಟರ ಬದುಕಿನ ಸ್ಥಿತಿಗತಿ ತುಂಬಾ ಕೆಳಮಟ್ಟದಲ್ಲಿರುವುದು ತಿಳಿದುಬರುತ್ತದೆ.

ಕೆಲವು ಮುಖ್ಯಸೂಚಿಗಳ ಸ್ಥಿತಿ ಹೀಗಿದೆ:

೧. ಪ.ಜಾ.ಯ ಮಾನವ ಅಭಿವೃದ್ಧಿ ಸೂಚ್ಯಂಕವು ರಾಜ್ಯದ ಒಟ್ಟು ಜನಸಂಖ್ಯೆಯ ಮಾನವ ಅಭಿವೃದ್ಧಿ ಸೂಚ್ಯಂಕದ ಶೇ. ೮೮.೪೬ ರಷ್ಟಿದೆ. ಪ.ಪಂ.ದ ಮಾನವ ಅಭಿವೃದ್ಧಿ ಸೂಚ್ಯಂಕವು ರಾಜ್ಯ ಮಟ್ಟದ ಒಟ್ಟು ಜನಸಂಖ್ಯೆಗೆ ಸಾಪೇಕ್ಷವಾಗಿ ಶೇ. ೮೨.೯೨ ರಷ್ಟಿದೆ (೨೦೦೪)

೨. ವಿಜಾಪುರ ಜಿಲ್ಲೆಯ ಪ.ಜಾ. ಸಾಕ್ಷರತೆಯ ಪ್ರಮಾಣವು ಜಿಲ್ಲೆಯ ಒಟ್ಟು ಜನಸಂಖ್ಯೆಯ ಸಾಕ್ಷರತೆಯ ಶೇ. ೮೨.೭೨ ರಷ್ಟಿದೆ. ಪ.ಪಂ.ದ ಸಾಕ್ಷರತೆಯು ಜಿಲ್ಲೆಯ ಒಟ್ಟು ಜನಸಂಖ್ಯೆಗೆ ಸಾಪೇಕ್ಷವಾಗಿ ಶೇ. ೮೬.೨೮ ರಷ್ಟಿದೆ.

೩. ಲಿಂಗ ಸಂಬಂಧಿ ಸಾಕ್ಷರತಾ ಅಂತರವು ವಿಜಾಪುರದ ಜಿಲ್ಲೆಯಲ್ಲಿ ರಾಜ್ಯ ಮಟ್ಟದಲ್ಲಿರುವುದಕ್ಕಿಂತ ಅದಿಕವಾಗಿದೆ. ರಾಜ್ಯಮಟ್ಟದಲ್ಲಿ ಅಂತರವು ಕಡಿಮೆಯಾಗುತ್ತಿದ್ದರೆ ವಿಜಾಪುರ ಜಿಲ್ಲೆಯಲ್ಲಿ ಅದು ಏರಿಕೆಯಾಗುತ್ತಿದೆ.

೪. ಶಾಲಾ ದಾಖಲಾತಿಯಲ್ಲಿ ಮಾತ್ರ ಪ.ಜಾ. ಮತ್ತುಪ.ಪಂ.ದ ಮಕ್ಕಳು ಅದ್ಭುತ ಸಾಧನೆ ಮಾಡಿದ್ದಾರೆ. ಇದು ಪದವಿ ಪೂರ್ವ ಕಾಲೇಜಿನವರೆಗೂ ನಡೆದಿದೆ.

೫. ಈ ಅಧ್ಯಯನದ ಒಂದು ಮುಖ್ಯ ತಥ್ಯವೆಂದರೆ ಜಿಲ್ಲೆಯ ದುಡಿಮೆಯಲ್ಲಿ ಪ.ಜಾ. ಮತ್ತು ಪ.ಪಂ.ದ ಕಾಣಿಕೆ ಅಪಾರ. ಆದರೆ ಅಭಿವೃದ್ದಿಯ ಫಲಗಳಲ್ಲಿ ಅವರ ಪಾಲು ತುಂಬಾ ಕಡಿಮೆ.

೬. ಕೃಷಿ ಅವಲಂಬನೆಯು ಒಟ್ಟು ಜನಸಂಖ್ಯೆಯಲ್ಲಿರುವುದಕ್ಕಿಂತ ಪ.ಜಾ.ಯಲ್ಲಿ ಅಧಿಕವಾಗಿದೆ. ಕೃಷಿ ಕಾರ್ಮಿಕರ ಪ್ರಮಾಣವು ಒಟ್ಟು ಜನಸಂಖ್ಯೆಯಲ್ಲಿರುವುದಕ್ಕಿಂತ ಪ.ಜಾ.ಯಲ್ಲಿ ಅಧಿಕವಾಗಿದೆ.