. ಪ್ರಸ್ತಾವನೆ

ಮಾನವ ಅಭಿವೃದ್ಧಿ ವಿಚಾರ ಪ್ರಣಾಳಿಕೆಯ ಅಂತರ್ಗತ ಮತ್ತು ಅವಿಭಾಜ್ಯ ಅಂಶವೆಂದರೆ ಲಿಂಗಸಂಬಂಧಿ ಅಭಿವೃದ್ಧಿ. ಈಗಾಗಲೆ ಚರ್ಚಿಸಿರುವಂತೆ ಸಾಂಪ್ರದಾಯಿಕ ಅಭಿವೃದ್ಧಿ ಸಿದ್ಧಾಂತಗಳು ಲಿಂಗ ನಿರಪೇಕ್ಷವಾಗಿದ್ದಾವೆ (ಕರ್ನಾಟಕ ಸರ್ಕಾರ ೧೯೯೯) ಅಲ್ಲಿ ಮಹಿಳೆಯರು ಕೇವಲ ಜನಸಂಖ್ಯಾ ಘಟಕ. ಈ ಬಗ್ಗೆ ಅಮತ್ಯ೪ಸೆನ್ ತನ್ನ ಒಂದು ಪ್ರಸಿದ್ಧ ಪ್ರಬಂಧ ‘ಜೆಂಡರ್ ಅಂಡ್ ಕೋ-ಆಪರೇಟಿವ್ ಕಾನ್‌ಪ್ಲಿಕ್ಷ್’ (೧೯೯೦) ಅನ್ನು ಹೀಗೆ ಆರಂಭಿಸುತ್ತಾನೆ.

‘ಆರ್ಥಿಕ ಅಭಿವೃದ್ಧಿಯನ್ನು ಕುರಿತ ಅಧಿಕೃತವೆನ್ನಬಹುದಾದ ಸಿದ್ಧಾಂತಗಳಲ್ಲಿ ಮಹಿಳೆಯ ಸ್ಥಾನವನ್ನು ಒಂದು ಮಹತ್ವ ಸಂಗತಿಯೆಂದು ಅದನ್ನು ಪ್ರತ್ಯೇಕವಾಗಿ ಪರಿಗಣಿಸುವುದರ ಬಗ್ಗೆ ಹಿಂಜರಿಕೆಯಿದೆ’(ಪು.೧೨೩) ಮುಂದುವರಿದು ‘ಲಿಂಗಸಂಬಂಧಿ ವಿಶ್ಲೇಷಣೆಯೆಂಬುದನ್ನು ಅನವಶ್ಯಕ ಒಡಕ್ಕುಂಟು ಮಾಡುವ ಸಂಗತಿಯನ್ನಾಗಿ ನೋಡಲಾಗುತ್ತಿದೆ.’

ಮಾನವ ಅಭಿವೃದ್ಧಿ ವಿಚಾರ ಪ್ರಣಾಳಿಕೆಯು ಇಂತಹ ಲಿಂಗ ನಿರಪೇಕ್ಷತೆಯನ್ನು ತಿರಸ್ಕರಿಸುತ್ತದೆ. ಮಹಿಳೆಯರನ್ನು ಸಾಮಾಜಿಕ ಘಟಕವನ್ನಾಗಿ ಇಲ್ಲಿ ಪರಿಭಾವಿಸಿಕೊಳ್ಳಲಾಗುತ್ತದೆ. ನೈಲಾ ಕಬೀರ್ ತನ್ನ ಪ್ರಸಿದ್ಧ ಕೃತಿ ರಿವರ್ಸಡ್ ರಿಯಾಲಿಟೀಸ್‌ನಲ್ಲಿ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಮಹಿಳೆಯರು ಒಂದು ಘಟಕವಾಗಿ ಒಡಮೂಡಿದ್ದನ್ನು ಚಾರಿತ್ರಿಕವಾಗಿ ಗುರುತಿಸುತ್ತಾಳೆ. ವಿಶ್ವಸಂಸ್ಥೆಯು ಘೋಷಿಸುತ್ತಿದ್ದ ಅಭಿವೃದ್ಧಿ ದಶಕಗಳು. ಅಭಿವೃದ್ಧಿಯಲ್ಲಿ ಮಹಿಳೆಯರು ಒಳಗೊಳ್ಳುವಂತೆ ಮಾಡುವ ಪ್ರಕ್ರಿಯೆ ಆರಂಭಗೊಂಡಿದ್ದು, ಬೋಸರಪ್‌ಳ ೧೯೭೦ರ ರೋಲ್ ಆಫ್ ವುಮೆನ್ ಇನ್ ಎಕಾನಾಮಿಕ್ ಡೆವಲಪ್‌ಮೆಂಟ್ ಕೃತಿಯ ಪ್ರಕಟಣೆ, ವಿಶ್ವಸಂಸ್ಥೆಯು ನೇಮಿಸಿದ್ದ ಅನೇಕ ಮಹಿಳಿ ಸಂಬಂಧಿ ಸಮಿತಿಗಳು ನೀಡುತ್ತಿದ್ದ ವರದಿಗಳು, ೧೯೭೪ರಲ್ಲಿ ಭಾರತದಲ್ಲಿ ಪ್ರಕಟವಾದ ‘ಭಾರತದಲ್ಲಿ ಮಹಿಳೆಯರ ಸ್ಥಿತಿಗತಿ’ ವರದಿ ಮತ್ತು ೧೯೭೦ರ ದಶಕದಲ್ಲಿನ ಮಹಿಳಾ ಚಳುವಳಿಗಳು ಮುಂತಾದವುಗಳ ಪರಿಣಾಮವಾಗಿ ಅಭಿವೃದ್ಧಿಯಲ್ಲಿ ಸಂಯೋಜಿಸಿಕೊಳ್ಳದಿದ್ದರೆ ಅದು ಅಭಿವೃದ್ಧಿಗೆ ಅಪಾಯಕಾರಿಯಾಗುತ್ತದೆ’ ಎಂದು ಎಚ್ಚರಿಕೆ ನೀಡಲಾಗಿದೆ.

‘ಕರ್ನಾಟಕಕ್ಕೆ ಮಾನವ ಅಭಿವೃದ್ಧಿ ವರದಿ: ೨೦೦೫’ರಲ್ಲಿ ಲಿಂಗಸಂಬಂಧಿ ವಿಶ್ಲೇಷಣೆಯೆಂಬುದನ್ನು ಹೀಗೆ ಗುರುತಿಸಲಾಗಿದೆ (ಪು. ೧೮೭)

ಲಿಂಗವೆನ್ನುವುದು ಮಹಿಳೆಯರು ಮತ್ತು ಪುರುಷರ ನಡುವಿನ ವ್ಯತ್ಯಾಸಗಳನ್ನು ಜೈವಿಕ ನೆಲೆಯಲ್ಲಿ ಗುರುತಿಸುತ್ತದೆ. ಲಿಂಗ ಸಂಬಂಧಗಳು ಎಂಬುದು ಮಹಿಳೆಯರು ಮತ್ತು ಪುರುಷರ ವರ್ತನೆಯನ್ನು ಮತ್ತು ಅವರ ನಡುವಣ ಸಂಬಂಧಗಳನ್ನು ಗುರುತಿಸುವಂತಹ ಸಾಂಸ್ಕೃತಿಕ ಪರಿಬಾವನೆಯಾಗಿದೆ. ಲಿಂಗ ಸಂಬಂಧವೆನ್ನುವುದು ಕೇವಲ ಜನಸಂಖ್ಯೆಯಲ್ಲಿನ ಮಹಿಳೆಯರು ಮತ್ತು ಪುರುಷರು ಎಂಬ ಸೀಮಿತ ಅರ್ಥಕ್ಕೆ ಮೀಸಲಾದ ಸಂಗತಿಯಲ್ಲ. ಅದು ಅವರ ನಡುವಣ ಸಂಬಂಧಗಳಿಗೂ ಮತ್ತು ಅವು ಸಾಮಾಜಿಕವಾಗಿ ರೂಪುಗೊಂಡಿರುವ ಪ್ರಕ್ರಿಯೆಗೂ ಅನ್ವಯಿಸುವ ಸಂಗತಿಯಾಗಿದೆ. ಇದು ಸಂಬಂಧ ಸೂಚಕ ನುಡಿಯಾಗಿರುವುದರಿಂದ ಅದು ಮಹಿಳೆಯರು ಮತ್ತು ಪುರುಷರ ನಡುವಿನ ಸಂಬಂಧ ಹಾಗೂ ಅಂತಹ ಸಂಬಂಧವನ್ನು ರೂಪಿಸುವ ಸಾಮಾಜಿಕ ಪ್ರಕ್ರಿಯೆಯನ್ನು ಅದು ಸೂಚಿಸುತ್ತದೆ. ವಗ, ಜನಾಂಗ, ಕುಲಗಳಂತೆ ಲಿಂಗಸಂಬಂಧವೆನ್ನುವುದು ಸಾಮಾಜಿಕ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಬಳಸುವ ಒಂದು ವಿಶ್ಲೇಷಣಾತ್ಮಕ ಪರಿಭಾವನೆಯಾಗಿದೆ.

ಮಹಿಳೆಯರು ಮತ್ತು ಪುರುಷರನ್ನು ಕುರಿತಂತೆ ರೂಪಿಸುವ ಅಥವಾ ಹಾಲಿ ಅಸ್ತಿತ್ವದಲ್ಲಿರುವ ನೀತಿಗಳು ಕಾರ್ಯಕ್ರಮಗಳು ಕಾನೂನೂ ಕಾರ್ಯಯೋಜನೆಗಳು ಮುಂತಾದವುಗಳ ತಾರತಮ್ಯವಾದಿ ಪರಿಣಾಮಗಳನ್ನು ಮೌಲ್ಯಮಾಪನ ಮಾಡುವ ಒಂದು ಪ್ರಕ್ರಿಯೆಯೇ ಲಿಂಗಸಂಬಂಧಗಳು. ಈ ವಿಶ್ಲೇಷಣೆಯು ನೀತಿ ನಿರೂಪಣೆಗಳಿಗೆ ಸಂಬಂಧಿಸಿದಂತೆ ಮಹಿಳೆಯರು ಮತ್ತು ಪುರುಷರು ಹೇಗೆ ಮತ್ತು ಏಕೆ ತೊಂದರೆಗೊಳಗಾಗುತ್ತಾರೆ ಎಂಬುದನ್ನು ತುಲನೆ ಮಾಡಿ ನೋಡುವ ಒಂದು ತಂತ್ರವಾಗಿದೆ. ಅಭಿವೃದ್ಧಿಗೆ ಸಂಬಂಧಿಸಿದ ನೀತಿ ನಿರೂಪಣೆಗಳು, ಕಾರ್ಯಕ್ರಮಗಳು, ಕಾರ್ಯಯೋಜನೆಗಳು ಮತ್ತು ಕಾನೂನುಗಳು ಮಹಿಳೆಯರಿಗಾಗಲಿ ಅಥವಾ ಪುರುಷರಿಗಾಗಲಿ ಎಲ್ಲರ ಮೇಲೆ ಸಮಾನವಾದ ಪರಿಣಾಮ ಬೀರುತ್ತವೆ ಎಂಬ ಅರ್ಥ ಕೊಡುವ ಲಿಂಗ ನಿರಪೇಕ್ಷ ನೀತಿಯನ್ನು ಲಿಂಗಸಂಬಂಧಿ ವಿಶ್ಲೇಷಣೆಯು ಪ್ರಶ್ನಿಸುತ್ತದೆ.

ಭಾರತದ ಅಭಿವೃದ್ಧಿ ಕುರಿತಂತೆ ಪ್ರಕಟಿಸಿರುವ ಪ್ರಸಿದ್ಧ ಕೃತಿಯಲ್ಲಿ (೨೦೦೨) ಜೀನ್‌ಡ್ರೀಜ್ ಮತ್ತು ಅಮರ್ತ್ಯಸೆನ್ ಲಿಂಗಸಂಬಂಧಗಳು ಮತ್ತು ಅಭಿವೃದ್ಧಿಗಳ ಸಂಬಂಧ ಕುರಿತಂತೆ ಪ್ರಮೇಯವೊಂದನ್ನು ರೂಪಿಸಿದ್ದಾರೆ. ಅವರ ಪ್ರಕಾರ ಯಾವ ಪ್ರದೇಶಗಳು ಆರ್ಥಿಕವಾಗಿ ಹಿಂದುಳಿದಿರುತ್ತವೋ ಅಲ್ಲಿ ಲಿಂಗ ಸಂಬಂಧಗಳು ತೀವ್ರ ಅಸಮಾನತೆಯಿಂದ ಕೂಡಿರುತ್ತವೆ. ಎಂಬುದು ಅವರ ಪ್ರಮೇಯವಾಗಿದೆ. ಈ ಕುರಿತಂತೆ ಕರ್ನಾಟಕ ಮಾನವ ಅಭಿವೃದ್ಧಿ ವರದಿ : ೨೦೦೫ರಲ್ಲಿ ಲಿಂಗಸಂಬಂಧಗಳನ್ನು ಕುರಿತಂತೆ ಹೀಗೆ ಹೇಳಲಾಗಿದೆ.

‘ಕೆಳಮಟ್ಟದಲ್ಲಿರುವ ಮಾನವ ಅಭಿವೃದ್ದಿ ಸೂಚಿಗಳು ಮತ್ತು ಲಿಂಗ ಅಸಮಾನತೆಗಳ (ತಾರತಮ್ಯ) ನಡುವೆ ಪರಸ್ಪರ ಬಲವಾದ ಸಂಬಂಧವಿದೆ (ಪು. ೧೮೮)

ಆರ್ಥಿಕತೆಯಲ್ಲಿರುವ ಲಿಂಗ ಅಸಮಾನತೆ ಹಾಗೂ ಮಹಿಳೆಯರ ದುಸ್ಥಿತಿಯನ್ನು ಸಾಮಾಜಿಕ ವೈಫಲ್ಯವೆಂದು ಗುರುತಿಸಲಾಗಿದೆ (ಜೀನ್‌ಡ್ರೀಜ್, ಅಮರ್ತ್ಯಸೆನ್, ೨೦೦೨, ೨೭೩). ನಾವು ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ ಅದು ಆರ್ಥಿಕ ಅಭಿವೃದ್ಧಿಯಾಗಲಿ (ವರಮಾನ ವರ್ಧನೆ) ಅಥವಾ ಮಾನವ ಅಭಿವೃದ್ಧಿಯಾಗಲಿ (ಧಾರಣಾ ಸಾಮರ್ಥ್ಯದ ವರ್ಧನೆ) ಅಲ್ಲಿ ತನ್ನಷ್ಟಕ್ಕೆ ತಾನೆ ಸಹಜವಾಗಿ ಲಿಂಗ ಸಮಾನತೆಯೆಂಬುದು ಉಂಟಾಗುವುದಿಲ್ಲ. ಅದಕ್ಕಾಗಿ ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಬೇಕಾಗುತ್ತದೆ. ಸಾಂಪ್ರದಾಯಿಕ ಅಭಿವೃದ್ಧಿ ಸಿದ್ಧಾಂತಗಳು ಇಂತಹ ಸಹಜ ತನ್ನಷ್ಟಕ್ಕೆ ತಾನೆ ಎಂಬ ಪ್ರಕ್ರಿಯೆಯಲ್ಲಿ ನಂಬಿಕೆಯಿಟ್ಟಿದ್ದರಿಂದಲೇ ಲಿಂಗಸಂಬಂಧಿ ಅಭಿವೃದ್ಧಿ ಸೂಚ್ಯಂಕವು ಎಲ್ಲ ದೇಶಗಳಲ್ಲೂ ಮಾನವ ಅಭಿವೃದ್ಧಿ ಸೂಚ್ಯಂಕಕ್ಕಿಂತ ಕೆಳಮಟ್ಟದಲ್ಲಿರುವಂತಾಗಿದೆ.’

. ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕ

ಈಗಾಗಲೆ ನಮಗೆ ತಿಳಿದಿರುವಂತೆ ಯುಎನ್‌ಡಿಪಿಯು ೧೯೯೦ರಿಂದ ಜಾಗತಿಕ ಮಟ್ಟದಲ್ಲಿ ಮಾನವ ಅಭಿವೃದ್ಧಿ ವರದಿಗಳನ್ನು ಪ್ರಕಟಿಸುತ್ತಿದೆ. ಅದರಲ್ಲಿ ವಿಶ್ವದ ದೇಶಗಳ ಅಭಿವೃದ್ಧಿಯನ್ನು ಮಾನವ ಅಭಿವೃದ್ಧಿ ಸೂಚ್ಯಂಕದ ಆಧಾರದ ಮೇಲೆ ಮಾಪನ ಮಾಡುವ ಕ್ರಮವನ್ನು ಅನುಸರಿಸುತ್ತಿದೆ. ಮಾನವ ಅಭಿವೃದ್ದಿ ಸೂಚ್ಯಂಕವು ದೇಶದ ಜನರ ಒಟ್ಟಾರೆ ಅಭಿವೃದ್ಧಿಯನ್ನು ಮಾಪನ ಮಾಡುವ ಮಾನದಂಡವಾಗಿದೆ. ಅಲ್ಲಿ ಮಹಿಳೆಯರ ಅಭಿವೃದ್ಧಿಯನ್ನು ಮಾಪನ ಮಾಡುವ ಮಾನದಂಡವಾಗಿದೆ. ಅಲ್ಲಿ ಮಹಿಳೆಯರ ಅಭಿವೃದ್ಧಿಯನ್ನು ಪ್ರತ್ಯೇಕವಾಗಿ ಮಾಪನ ಮಾಡಲು ಅವಕಾಶವಿಲ್ಲ ಇದನ್ನು ಗಮನಿಸಿದ ಯುಎನ್‌ಡಿಪಿಯು ತನ್ನ ೧೯೯೫ರ ವರದಿಯಲ್ಲಿ ಮಹಿಳೆಯರ ಅಭಿವೃದ್ಧಿಯನ್ನು ಪುರುಷರಿಗೆ ಎದುರಾಗಿ ಮಾಪನ ಮಾಡುವ ಮಾನದಂಡವನ್ನು ರೂಪಿಸಿತು. ಅದನ್ನು ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕವೆಂದು ಕರೆಯಲಾಗಿದೆ. ಈ ಸೂಚ್ಯಂಕದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಉಪಯೋಗಿಸುವ ಸೂಚಿಗಳನ್ನೇ ಬಳಸಲಾಗುತ್ತದೆ. ಆದರೆ ಇಲ್ಲಿ ಲಿಂಗ ಸಂಬಂಧಿ ಸಂಗತಿಗಳ ನೆಲೆಯಿಂದ ಲಿಂಗ ಸಂಬಂಧಿ ಅಸಮಾನತೆಯನ್ನು ಗಮನಿಸಿ ಅಭಿವೃದ್ಧಿಯನ್ನು ಮಾಪನ ಮಾಡಲಾಗುತ್ತದೆ. ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕವು ಒಲಗೊಳ್ಲುವ ಸೂಚಿಗಳೆಂದರೆ

೧. ಜೀವನಾಯುಷ್ಯದ ಆಧಾರದ ಮೇಲೆ ಲೆಕ್ಕ ಹಾಕುವ ಮಹಿಳೆಯರು ಮತ್ತು ಪುರುಷಕರ ಆರೋಗ್ಯ ಸೂಚ್ಯಂಕ

೨. ಸಾಕ್ಷರತೆ ಮತ್ತು ದಾಖಲಾತಿ ಆಧರಿಸಿ ಲೆಕ್ಕ ಹಾಕುವ ಮಹಿಳೆಯರು ಮತ್ತು ಪುರುಷಕರ ಶೈಕ್ಷಣಿಕ ಸಾಧನೆ ಸೂಚ್ಯಂಕ

೩. ಡಾಲರಿನಕೊಳ್ಳು ಶಕ್ತಿಯ ಸಮಾನ ಸಾಮರ್ಥ್ಯವನ್ನು ಒಳಗೊಂಡ ಮಹಿಳೆಯರು ಮತ್ತು ಪುರುಷರ ಒಟ್ಟು ಆಂತರಿಕ ತಲಾ ಉತ್ಪನ್ನ.

ಈ ಮೂರು ಸೂಚಿಗಳ ಸರಾಸರಿ ಮೌಲ್ಯವೇ ಲಿಂಗ ಸಂಬಂಧಿ ಅಭಿವೃದ್ದಿ ಸೂಚ್ಯಂಕ. ಈಗಾಗಲೇ ಗಮನಿಸಿರುವಂತೆ ಹಾಗೂ ಚರ್ಚಿಸಿರುವಂತೆ ವಿಜಾಪುರ ಜಿಲ್ಲೆಯು ಆರ್ಥಿಕ ಅಭಿವೃದ್ಧಿ ಹಾಗೂ ಮಾನವ ಅಭಿವೃದ್ಧಿ ಹೀಗೆ ಎರಡೂ ನೆಲಗಳಲ್ಲಿ ಹಿಂದುಳಿದಿದೆ. ಇದನ್ನು ಅನೇಕ ಸೂಚಿ ಸೂಚ್ಯಂಕಗಳಿಂದ ತೋರಿಸಬಹುದಾಗಿದೆ.

ಕೋಷ್ಟಕ ೬.೧ರಲ್ಲಿ ವಿಜಾಪುರ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯಗಳ ನಡುವಣ ಲಿಂಗ ಸಂಬಂಧಿಸಿದ ವಿವರಗಳನ್ನು ತೋರಿಸಲಾಗಿದೆ. ಅದನ್ನು ೧೯೯೧, ೨೦೦೧ ಮತ್ತು ೨೦೦೬ ಮೂರು ಕಾಲಘಟ್ಟಗಳಿಗೆ ಸಂಬಂಧಿಸಿದಂತೆ ವಿವರ ನೀಡಲಾಗಿದೆ. ರಾಜ್ಯಮಟ್ಟದ ಜಿಡಿಐನಲ್ಲಿ ವಿಜಾಪುರ ಜಿಲ್ಲೆಯ ಜಿಡಿಐನ

ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕದ ಒಳರಚನೆ ೧೯೯೧, ೨೦೦೧ ಮತ್ತು ೨೦೦೬

ಕೋಷ್ಟಕ .

 

ವಿವರಗಳು

ಜೀವನಾಯುಷ್ಯ ಆಧಾರಿತ ಆರೋಗ್ಯ ಸೂಚ್ಯಂಕ

ಸಾಕ್ಷರತೆ ಮತ್ತು ದಾಖಲಾತಿ ಆಧಾರಿತ ಶೈಕ್ಷಣಿಕ ಸಾಧನೆ ಸೂಚ್ಯಂಕ

ನೈಜ ತಲಾ ವರಮಾನ ಸೂಚ್ಯಂಕ

ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕ

ವಿಜಾಪುರ ಜಿಲ್ಲೆ
೧೯೯೧

೦.೫೬೯

೦.೫೪೦

೦.೩೫೧

೦.೪೮೬

೨೦೦೧

೦.೬೨೬

೦.೬೨೭

೦.೪೬೪

೦.೫೭೩

೨೦೦೬

೦.೬೮೧

೦.೬೯೨

೦.೪೮೫

೦.೬೧೯

ಕರ್ನಾಟಕ ರಾಜ್ಯ
೧೯೯೧

೦.೬೧೮

೦.೫೮೭

೦.೩೭೧

೦.೫೨೫

೨೦೦೧

೦.೬೭೯

೦.೭೦೪

೦.೫೨೬೧

೦.೬೩೭

೨೦೦೬

೦.೭೪೦

೦.೪೯೪

೦.೭೦೭

೦.೬೪೭

ಮೂಲ : ಕರ್ನಾಟಕ ಸರ್ಕಾರ ೨೦೦೬ ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ ವರತಿ ೨೦೦೫

ಭಾರತ ಸರ್ಕಾರ ೨೦೦೮. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮಾನವ ಅಭಿವೃದ್ಧಿ ವರದಿ ೧೯೯೬ ಮತ್ತು ೨೦೦೬.

ಪ್ರಮಾಣ ೧೯೯೧ರಲ್ಲಿ ಶೇ. ೯೨.೫೭ ರಷ್ಟಿದ್ದುದು ೨೦೦೧ರಲ್ಲಿ ಅದು ಶೇ. ೮೯.೯೫ರಷ್ಟಕ್ಕೆ ಇಳಿದಿದೆ. ಅದು ೨೦೦೬ರಲ್ಲಿ ಶೇ. ೯೫.೬೭ರಷ್ಟಾಗಿದೆ. ರಾಜ್ಯಮಟ್ಟದಲ್ಲಿ ಜಿಡಿಐ ಸಂಬಂದಿಸಿದಂತೆ ೧೯೯೧ ರಿಂದ ೨೦೦೬ರ ಅವಧಿಯಲ್ಲಿ ಅದು ಶೇ. ೨೩.೨೪ರಷ್ಟು ಏರಿಕೆಯಾಗಿದ್ದರೆ ವಿಜಾಪುರ ಜಿಲ್ಲೆಯಲ್ಲಿ ಅದರ ಏರಿಕೆ ಪ್ರಮಾಣ ಕೇವಲ ಶೇ. ೨೭.೩೬.

ಈ ಕೋಷ್ಟಕದಿಂದ ತಿಳಿದು ಬರುವ ಸಂಗತಿಯೇನೆಂದರೆ ಲಿಂಗ ಸಂಬಂಧಿ ಅಸಮಾನತೆಯ ಮಟ್ಟ ವಿಜಾಪುರ ಮತ್ತು ರಾಜ್ಯಮಟ್ಟದಲ್ಲಿ ಬಹಳ ಭಿನ್ನತೆಯೆನಿಲ್ಲ. ಜಿಲ್ಲೆಯ ಮಟ್ಟದಲ್ಲಾಗಲಿ ಅಥವಾ ರಾಜ್ಯಮಟ್ಟದಲ್ಲಾಗಲಿ ಲಿಂಗ ಸಂಬಂಧಿ ಅಭಿವೃದ್ದಿ ಸೂಚ್ಯಂಕ ಮತ್ತು ಮಾನವ ಅಭಿವೃದ್ದಿ ಸೂಚ್ಯಂಕಗಳ ನಡುವೆ ಬಹಳ ಅಸಮಾನತೆಯು ಕಂಡುಬರುವುದಿಲ್ಲ. ವಿಜಾಪುರ ಜಿಲ್ಲೆಯಲ್ಲಿ ೨೦೦೬ರ ಲಿಂಗ ಸಂಬಂಧಿ ಅಭಿವೃದ್ಧಿ

ವಿಜಾಪುರ ಜಿಲ್ಲೆ ಮತ್ತು ರಾಜ್ಯದಲ್ಲಿ ಮಹಿಳೆಯರ ವಂಚಿತ ಸ್ಥಿತಿಗತಿ : ೨೦೦೧

ಕೋಷ್ಟಕ.

ವಿವರ

ಜಿಲ್ಲೆ

ರಾಜ್ಯ

೧. ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ೪೮.೭೨ ೪೯.೧೦
೨. ಒಟ್ಟು ದುಡಿಮೆಗಾರರಲ್ಲಿ ಮಹಿಳೆಯರ ಪ್ರಮಾಣ ೩೪.೮೮ ೩೫.೨೬
೩. ಒಟ್ಟು ಕೃಷಿ ಅವಲಂಬಿತರಲ್ಲಿ ಮಹಿಳೆಯರ ಪ್ರಮಾಣ ೪೧.೫೯ ೩೪.೯೨
೪. ಒಟ್ಟು ಕೃಷಿಕೂಲಿಕಾರರಲ್ಲಿ ಮಹಿಳೆಯರ ಪ್ರಮಾಣ ೫೭.೫೬ ೫೭.೯೧
೫. ಮಹಿಳೆಯರ ದುಡಿಮೆ ಸಹಭಾಗಿತ್ವ ಪ್ರಮಾಣ ೨೮.೪೫ ೩೧.೯೮

ಮೂಲ : ಸೆನ್ಸ್ಸ್ ಆಫ್ ಇಂಡಿಯಾ೨೦೦೧ ಸಿರೀಸ್ ೩೦, ಪ್ರೈಮರಿ ಸೆನ್ಸಸ್ ಅಬ್ಸ್ಟ್ರಾಕ್ಟ್ ಡೈರೆಕ್ಟರೇಟ್ ಆಫ್ ಸೆನ್ಸಸ್ ಆಫರೇಸನ್ಸ್, ಕರ್ನಾಟಕ

ಸೂಚ್ಯಂಕವು ೨೦೦೬ರ ಮಾನವ ಅಭಿವೃದ್ಧಿ ಸೂಚ್ಯಂಕದ ಶೇ. ೯೮.೨೫ ರಷ್ಟಿದೆ ರಾಜ್ಯಮಟ್ಟದಲ್ಲಿಯೂ ೨೦೦೬ರ ಲಿಂಗ ಸಂಬಂಧಿ ಅಭಿವೃದ್ಧ ಸೂಚ್ಯಂಕವು ಅದರ ೨೦೦೬ರ ಮನವ ಅಭಿವೃದ್ಧಿ ಸೂಚ್ಯಂಕದ ಶೇ. ೯೮.೩೩ರಷ್ಟಿದೆ.

ಕೃಷಿ ಕೂಲಿಕಾರರ ಮಾರುಕಟ್ಟೆಯು ಅಸಂಘಟಿತವೂ, ಋತುಮಾನ ಅವಲಂಬಿತವೂ ಹಾಗೂ ಅನಿಶ್ಚಿತತೆಯಿಂದ ಕೂಡಿದೆ. ಸಮಾಜದಲ್ಲಿ ಅತ್ಯಂತ ಕಡಿಮೆ ಕೂಲಿ ಪಡೆಯುವ ವರ್ಗವೆಂದರೆ ಕೃಷಿ ದಿನಗೂಲಿಗಳು. ಅದರಲ್ಲಿ ಅತ್ಯಂತ ಕಡಿಮೆ ಕೂಲಿ ಪಡೆಯುವವರೆಂದರೆ ಮಹಿಳಾ ದಿನಗೂಲಿ ದುಡಿಮೆಗಾರರು. ವಿಜಾಪುರ ಜಿಲ್ಲೆಯಲ್ಲಿನ ಒಟ್ಟು ಮಹಿಳಾ ದುಡಿಮೆಗಾರರ ಸಂಖ್ಯೆ ೨.೧೫ ಲಕ್ಷ. ಇವರಲ್ಲಿ ಕೃಷಿ ದಿನಗೂಲಿಗಳ ಸಂಕ್ಯೆ ೧.೬೭ಲಕ್ಷ. ಅಂದರೆ ಒಟ್ಟು ದುಡಿಮೆಗಾರರಲ್ಲಿ ಕೃಷಿ ದಿನಗೂಲಿ ಮಹಿಳೆಯರ ಪ್ರಮಾಣ ಶೇ. ೬೬.೫೩. ಆದರೆ ರಾಜ್ಯದಲ್ಲಿ ಒಟ್ಟು ಮಹಿಳಾ ದುಡಿಮೆಗಾರರ ಸಂಖ್ಯೆ ೮೨.೯೯ ಲಕ್ಷ. ಇವರಲ್ಲಿ ಕೃಷಿ ದಿನಗೂಲಿ ಮಹಿಳೆಯರ ಸಂಖ್ಯೆ ೩೬.೦೬ಲಕ್ಷ ಅಂದರೆ ರಾಜ್ಯಮಟ್ಟದಲ್ಲಿ ಇವರ ಪ್ರಮಾಣ ಶೇ. ೪೩.೪೫. ರಾಜ್ಯದ ಒಟ್ಟು ಕೃಷಿ ದಿನಗೂಲಿಗಳಲ್ಲಿ ವಿಜಾಪುರ ಜಿಲ್ಲೆಯ ಕೃಷಿಕೂಲಿಕಾರರ ಪ್ರಮಾಣ ಶೇ. ೪.೬೩.

ಮಹಿಳೆಯರ ದುಡಿಮೆ ಸಹಭಾಗಿತ್ವ ಪ್ರಮಾಣ ವಿಜಾಪುರ ಜಿಲ್ಲೆಯಲ್ಲಿ ಶೇ. ೨೮.೪೫ ರಷ್ಟಿದ್ದರೆ ರಾಜ್ಯಮಟ್ಟದಲ್ಲಿ ಅದು ಶೇ. ೩೧.೯೮ರಷ್ಟಿದೆ. ರಾಜ್ಯಮಟ್ಟದಲ್ಲಿರುವುದಕ್ಕಿಂತ ವಿಜಾಪುರ ಜಿಲ್ಲೆಯಲ್ಲಿ ಮಹಿಳೆಯರ ದುಡಿಮೆ ಸಹಭಾಗಿತ್ವ ಪ್ರಮಾಣ ಕಡಿಮೆಯಿದೆ. ಇದರ ಆಧಾರದ ಮೇಲೆ ಅಲ್ಲಿ ಮಹಿಳೆಯರು ದುಡಿಮೆ ಮಾಡುತ್ತಿಲ್ಲವೆಂದು ತಿಳಿಯಬಾರದು. ಆದರೆ ಅದನ್ನು ದಾಖಲಿಸುವುದು ನಮಗೆ ಸಾಧ್ಯವಾಗಿಲ್ಲ. ದುಡಿಮೆಯ ವ್ಯಾಖ್ಯೆಯ ಬಗ್ಗೆ ಸಮಸ್ಯೆಗಳಿವೆ. ದುಡಿಮೆಯ ಮಾಪನದ ಸಮಸ್ಯೆಗಳಿವೆ. ಮಹಿಳೆಯರ ದುಡಿಮೆಯನ್ನು ಮಾಪನ ಮಾಡಲು ಕಾಲ ಬಳಕೆ ಅಧ್ಯಯನವೆಂಬ ವಿಧಾನವನ್ನು ರೂಪಿಸಲಾಗಿದೆ. ಆದರೂ೫ ಅವರ ದುಡಿಮೆ ಪ್ರಮಾಣ ಕಡಿಮೆಯಿದೆ.

. ಪ್ರಧಾನ ಮತ್ತು ಉಪಪ್ರಧಾನ ದುಡಿಮೆಗಾರರು

ಜನಗಣತಿಯಲ್ಲಿ ದುಡಿಮೆಗಾರರನ್ನು ಪ್ರಧಾನ ಮತ್ತು ಉಪಪ್ರಧಾನ ಎಂಬ ವರ್ಗೀಕರಣ ಮಾಡಲಾಗುತ್ತದೆ. ಯಾರು ವರ್ಷದಲ್ಲಿ ೧೮೦ ದಿನಗಳು ದುಡಿಮೆಯಲ್ಲಿ ನಿರತರಾಗಿರುತ್ತಾರೋ ಅವರನ್ನು ಪ್ರಧಾನ ದುಡಿಮೆಗಾರರೆಂದು ಮತ್ತು ಅದಕ್ಕಿಂತ ಕಡಿಮೆ ದಿನಗಳು ದುಡಿಮೆ ಮಾಡುವವರನ್ನು ಉಪಪ್ರಧಾನ ದುಡಿಮೆಗಾರರೆಂದು ಕರೆಯಲಾಗಿದೆ. ಅಭಿವೃದ್ಧಿಯ ಲಿಂಗ ಸಂಬಂಧಿ ನೆಲೆಗಳ ದೃಷ್ಟಿಯಿಂದ ಈ ವರ್ಗೀ ಕರಣವು ತುಂಬಾ ಮುಖ್ಯವಾದುದಾಗಿದೆ.

ಪ್ರಧಾನ ಮತ್ತು ಉಪಪ್ರಧಾನ ದುಡಿಮೆಗಾರರಲ್ಲಿ ಮಹಿಳೆಯರ ಪ್ರಮಾಣ ೨೦೦೧

ಕೋಷ್ಟಕ .

ವಿವರಗಳು

ವಿಜಾಪುರ ಜಿಲ್ಲ

ಕರ್ನಾಟಕ ರಾಜ್ಯ

ಒಟ್ಟು

ಪು

ಒಟ್ಟು

ಪು

೧. ಒಟ್ಟು ದುಡಿಮೆಗಾರರ

೭೧೮

೪.೬೮

೨.೫೦
(೩೪.೮೨)

೨೩೫೩೪
(೩೫.೨೬)

೧೫೨.೩೫

೮೨.೯೯

೨. ಪ್ರಧಾನ ದುಡಿಮೆಗಾರರು

೫೫೨

೪.೧೪

೧.೩೮
(೨೫.೦೦)

೧೯೩.೬೫
(೨೮.೨೪)

೧೩೮.೯೭

೫೪.೬೮

೩. ಉಪಪ್ರಧಾನ ದುಡಿಮೆಗಾರರು

೧.೬೬

೦೫೪

೧.೨
(೬೭.೪೭)

೪೧.೭೦
(೬೭.೮೯)

೧೩೩೯

೨೮.೩೧

ಮೂಲ : ಸೆನ್ಸಸ್ ಆಫಿ ಇಂಡಿಯಾ ೨೦೦೧, ಸಿರೀಸ್ ೩೦ ಪ್ರೈಮರಿ ಸೆನ್ಸ್ಸ್ ಅಬ್ಸ್ಟ್ರಾಕ್ಟ್, ಡೈರೆಕ್ಟರೇಟ್ ಆಫ್ ಸೆನ್ಸ್ಸ್ ಆಫರೇಶನ್ಸ್, ಕಾರ್ನಾಟಕ.

ಟಿಪ್ಪಣಿ : ಆಚರಣದಲ್ಲಿನ ಅಂಕಿಗಳು ಒಟ್ಟು ಮೊತ್ತದಲ್ಲಿ ಮಹಿಳೆಯರ ಶೇಕಡ ಪ್ರಮಾಣವನ್ನು ತೋರಿಸತ್ತದೆ.

ಏಕೆಂದರೆ ಪ್ರಧಾನ ದುಡಿಮೆಗಾರರಲ್ಲಿ ಮಹಿಳೆಯರ ಪ್ರಮಾಣ ಕಡಿಮೆಯಿರುತ್ತದೆ. ಆದರೆ ಉಪಪ್ರಧಾನ ದುಡಿಮೆಗಾರರಲ್ಲಿ ಮಹಿಳೆಯರ ಪ್ರಮಾಣ ಅಧಿಕವಾಗಿರುತ್ತದೆ. ಇದು ಮಹಿಳೆಯರು ಹೆಚ್ಚು ಹೆಚ್ಚು ಸಂಭಾವನಾ ರಹಿತ ದುಡಿಮೆ (ಅನ್ ಫೈಡ್ ಲೇಬರ್) ಮಾಡುತ್ತಿದ್ದಾರೆಂಬುದು ಇದರಿಂದ ತಿಳಿಯುತ್ತದೆ. ಕರ್ನಾಟಕದಲ್ಲಿ ಒಟ್ಟು ದುಡಿಮೆಗಾರರಲ್ಲಿ ೨೦೦೧ರಲ್ಲಿ ಮಹಿಳೆಯರು ಪ್ರಮಾಣ ಶೇ. ೩೫.೨೬ರಷ್ಟಾದರೆ ಉಪಪ್ರಧಾನ ದುಡಿಮೆಗಾರರಲ್ಲಿ ಅವರ ಪ್ರಮಾಣ ಶೇ. ೬೭.೮೯. ಮಹಿಳೆಯರ ದುಡಿಮೆಯನ್ನು ನಿರ್ವಚಿಸುವ ಕ್ರಮವೇ ಅನೇಕ ಸಮಸ್ಯೆಗಳಿಂದ ಕೂಡಿದೆ. ಇದರಿಂದಾಗಿ ಅವರು ದುಡಿಮೆಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರೂ ಅವರ ಪ್ರಮಾಣ ಪ್ರಧಾರನ ದುಡಿಮೆಗಾರರಲ್ಲಿ ಅತ್ಯಂತ ಕಡಿಮೆ. ಮಹಿಳೆಯರು ದುಡಿಮೆ ಮಾಡುತ್ತಿಲ್ಲವೆಂದು ಇದರಿಂದ ಭಾವಿಸಬರಾದು ಇಲ್ಲಿನ ಸಮಸ್ಯೆಯೆಂದರೆ ದುಡಿಮೆಯ ನಿರ್ವಚನ (ನೋಡಿ ಕೋಷ್ಟಕ ೬.೩)

. ಲಿಂಗ ಅನುಪಾತ ಲಿಂಗ ತಾರತಮ್ಯದ ಸೂಚಿಯಾಗಿ

ಲಿಂಗ ಅನುಪಾದವು ಕರ್ನಾಟಕದಲ್ಲಿ ಮಹಿಳೆಯರಿಗೆ ವಿರುದ್ಧವಾಗಿರುವ ಸಂಗತಿಯನ್ನು ನಾವು ಗಮನಿಸಬೇಕಾಗಿದೆ. ವಿಜಾಪುರ ಜಿಲ್ಲೆಯಲ್ಲಿ ಲಿಂಗ ಅನುಪಾತವು ರಾಜ್ಯ ಮಟ್ಟದಲ್ಲಿರುವುದಕ್ಕಿಂತ ಕಡಿಮೆಯಿರುವುದು ಆತಂಕಕಕ್ಕೆ ಕಾರಣವಾಗಿದೆ. ಲಿಂಗ ಅನುಪಾತಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಭಿನ್ನತೆಯನ್ನು ನಾವು ಗುರುತಿಸಬೇಕಾಗುತ್ತದೆ. ನಿಜ. ಅದು ಜಿಲ್ಲಾಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಏರಿಕೆಯಾಗಿದೆ. ಆದರೆ ಅವುಗಳ ಗತಿ ಏಕಗತಿಯಲಿಲ್ಲ. ಇಲ್ಲಿ ೧೯೯೧ರಿಂದ ೨೦೦೧ರ ವರೆಗಿನ ಅವಧಿಯಲ್ಲಿ ರಾಜ್ಯಮಟ್ಟದಲ್ಲಿ ಲಿಂಗ ಅನುಪಾತವು ಶೇ. ೦.೫೨ ರಷ್ಟು ಏರಿಕೆಯಾಗಿದ್ದರೆ ವಿಜಾಪುರ ಜಿಲ್ಲೆಯಲ್ಲಿ ಅದರ ಏರಿಕೆ ಪ್ರಮಾಣ ಕೇವಲ ಶೇ. ೦.೨೧.

ಮಕ್ಕಳ ( ವಯೋಮಾನ) ಲಿಂಗ ಅನುಪಾತ

ಅನೇಕ ಜನಸಂಖ್ಯಾ ತಜ್ಞರು ಮತ್ತು ಅಭಿವೃದ್ಧಿ ವಿದ್ವಾಂಸರು ಗುರುತಿಸುವಂತೆ ೨೦೦೧ರ ಜನಗಣತಿಯಲ್ಲಿ ಕಂಡುಬಂದ ಒಂದು ಆತಂಕಕಾರಿ ಸಂಗತಿಯೆಂದರೆ ಜನಸಂಖ್ಯೆಯಲ್ಲಿನ ೦-೬ ವಯೋಮಾನದ ಮಕ್ಕಳ ಲಿಂಗ ಅನುಪಾವು ತೀವ್ರ ಕುಸಿದಿರುವುದು. ಅದು ವಿಜಾಪುರ ಜಿಲ್ಲೆಯಲ್ಲಿ ೧೯೯೧ರಲ್ಲಿ ೯೫೨ರಷ್ಟಿದ್ದುದು೨೦೦೧ ರಲ್ಲಿ ೯೨೮ಕ್ಕೆ ಕುಸಿದಿದೆ. ಬಾಲ್ಯಮಟ್ಟದಲ್ಲಿನ ಕುಸಿತದ ಪ್ರಮಾಣ ಶೇ. ೧.೪೬ರಷ್ಟಾಗಿದ್ದರೆ ವಿಜಾಪುರ ಜಿಲ್ಲೆಯಲ್ಲಿ ಅದು ಶೇ. ೨.೫೨ರಷ್ಟು ಇಳಿದಿದೆ. ಈ ವಯೋಮಾನದಲ್ಲಿ ಕಾಣೆಯಾದ ಹೆಣ್ಣು ಮಕ್ಕಳ ಸಂಖ್ಯೆ ೧೯೯೧ರಲ್ಲಿ ೭೨೪೯ರಷ್ಟಾದರೆ ೨೦೦೧ರಲ್ಲಿ ಅದು ೧೦೬೬೯ರಷ್ಟಾಗಿದೆ. ಅಂದರೆ ಕಾಣೆಯಾದ ೦-೬ ವಯೋಮಾನದ ಮಕ್ಕಳ ಸಂಖ್ಯೆಯು ಅಧಿಕವಾಗಿದೆ.

. ಕಾಣೆಯಾದ ಮಹಿಳೆಯರು

ಕೋಷ್ಟಕ ೬.೪ರಲ್ಲಿ ವಿಜಾಪುರ ಜಿಲ್ಲೆಯಲ್ಲಿ ಕಾಣೆಯಾದ ಮಹಿಳೆಯರ ಸಂಖ್ಯೆಯನ್ನು ತಾಲ್ಲೂಕುವಾರ ನೀಡಲಾಗಿದೆ. ಸಮಾಜದಲ್ಲಿ ಸಮಾನ ಅವಕಾಶಗಲು ಮಹಿಳೆಯರು ಮತ್ತು ಪುರುಷರ ನಡುವೆ ಇದ್ದ ಪಕ್ಷದಲ್ಲಿ ಲಂಗ ಅನುಪಾವು ಪ್ರತಿ ಸಾವಿರ ಪುರುಷರ ಎದುರಾಗಿ ಸಾವಿರ ಮಹಿಳೆಯರಿರಬೇಕು. ಅಂದರೆ ಸಾವಿರ ಪುರುಷರಿಗೆ ಸಾವಿರ ಮಹಿಳೆಯರಿರಬೇಕಾಗುತ್ತದೆ.

ಇದು ವೈದ್ಯಕೀಯ ಶಾಸ್ತ್ರದ್‌ರಕಾರವೂ ಇರಬೇಕಾದ ಸ್ಥಿತಿ. ಆದರೆ ಕರ್ನಾಟಕದಲ್ಲಿ ವಿಜಾಪುರ ಜಿಲ್ಲೆಯಲ್ಲಿ ಲಿಂಗ ಅನುಪಾತವು ಕಡಿಮೆಯಿದೆ. ಅಂದರೆ ಅಲ್ಲಿ ಲಿಂಗ ಸಮಾನತೆಯಿಲ್ಲವೆಂದು ತಿಳಿಯಬಹುದು. ಲಿಂಗ ಅನುಪಾತವನ್ನು ಹೀಗೆ ಮಹಿಳೆಯರ ವಿರುದ್ಧದ ತಾರತಮ್ಯದ ಸೂಚಿಯಾಗಿ ಬಳಸಬಹುದಾಗಿದೆ. ಒಟ್ಟಾರೆ ವಿಜಾಪುರ ಜಿಲ್ಲೆಯಲ್ಲಿ ಒಟ್ಟು ಕಾಣೆಯಾದ ಮಹಿಳೆಯರ ಸಂಖ್ಯೆ ೪೫೯೩೦. ಇದು ೧೯೯೧ರಲ್ಲಿ ೪೩೪೭೬ರಷ್ಟಿತ್ತು.

ಕಾಣೆಯಾದ ಮಹಿಳೆಯರ ಸಂಖ್ಯೆ ೧೯೯೧ರಿಂದ ೨೦೦೧ರ ಅವಧಿಯಲ್ಲಿ ಬಬಾಗೇವಾಡಿ, ಇಂಡಿ ಹಾಗೂ ಸಿಂದಗಿ ತಾಲ್ಲೂಕುಗಳಲ್ಲಿ ಅಧಿಕಗೊಂಡಿದೆ. ರಾಜ್ಯ ಮಟ್ಟದಲ್ಲೂ ಅದು ಶೇ. ೨.೨೩ ರಷ್ಟು ಅಧಿಕಗೊಂಡಿದೆ. ವಿಜಾಪುರ ಜಿಲ್ಲಾ ಮಟ್ಟದಲ್ಲಿ ಅದು ಶೇ. ೫.೬೪ರಷ್ಟು ಅಧಿಕಗೊಂಡಿದೆ. ಇದೊಂದು ಲಿಂಗ ತಾರತಮ್ಯದ ಮಾಪನವಾಗಿದೆ. ಈ ಪರಿಭಾವನೆಯನ್ನು ರೂಪಿಸಿದ ಅಮರ್ತ್ಯಸೆನ್ ಇದನ್ನು ಲಿಂಗ ತಾರತಮ್ಯದ ಮಾಪನವಾಗಿ ಬಳಸುತ್ತಾರೆ.

ತಾಲ್ಲೂಕುವಾರು ಕಾಣೆಯಾದ ಮಹಿಳೆಯರು ೧೯೯೧ ಮತ್ತು ೨೦೦೧

ಕೋಷ್ಟಕ.

ತಾಲ್ಲೂಕುಗಳು

ಕಾಣೆಯಾದ ಮಹಿಳೆಯರು

೧೯೯೧

೨೦೦೧

ವ್ಯತ್ಯಾಸ (ಶೇ)

೧. ಬಸವನಬಾಗೇವಾಡಿ

೪೪೨೧

೬೨೪೨

+೪೧.೧೯

೨. ವಿಜಾಪುರ

೧೭೧೩೩

೧೬೦೨೬

– ೬.೪೬

೩. ಇಂಡಿ

೧೦೪೫೫

೧೩೨೪೩

+೨೬.೬೭

೪. ಮುದ್ದೇಬಿಹಾಳ

೪೧೩೨

೨೪೮೪

-೩೯.೮೮

೫. ಸಿಂದಗಿ

೭೩೩೫

೭೯೩೫

+೮.೧೮

೬. ಜಿಲ್ಲೆ

೪೩೪೭೬

೪೫೯೩೦

+೫.೬೪

೭. ರಾಜ್ಯ

೯೨೬೬೩೩

೯೪೭೨೭೪

+೨.೨೩

ಮೂಲ : ಸೆನ್ಸಸ್ ಆಫ್ ಇಂಡಿಯಾ೧೯೯೧, ಸಿರೀಸ್ ೧೧, ಡಿಸ್ಟ್ರಿಕ್ಟ್ ಸೆನ್ಸ್ಸ್ ಹ್ಯಾಂಡ್ ಬುಕ್ವಿಜಾಪುರ, ಡೈರೆಕ್ಟರೇಟ್ ಆಫ್ ಸೆನ್ಸಸ್ ಆಫರೇಶನ್ಸ್, ಕರ್ನಾಟಕ

೨. ಸೆನ್ಸ್‌ಸ್ ಆಫ್ ಇಂಡಿಯಾ – ೨೦೦೧, ಸಿರೀಸ್ ೩೦, ಪ್ರೈಮರಿ ಸೆನ್ಸ್‌ಸ್ ಅಬ್‌ಸ್ಟಾಕ್ಟ, ಡೈರೆಕ್ಟರೇಟ್ ಆಫ್ ಸೆನ್ಸ್‌ಸ್ ಆಫರೇಶನ್ಸ್, ಕರ್ನಾಟಕ.

ಇಲ್ಲಿ ಕಾಣೆಯಾದ ಮಹಿಳೆಯರನ್ನು ಜನಸಂಖ್ಯೆಯಲ್ಲಿನ ಪುರುಷರ ಸಂಖ್ಯೆಯಿಂದ ಮಹಿಳೆಯರ ಸಂಖ್ಯೆಯನ್ನು ಕಳೆದು ಲೆಕ್ಕ ಹಾಕಲಾಗಿದೆ. ಅಂದರೆ ವಿಜಾಪುರ ಜಿಲ್ಲೆಯಲ್ಲಿ ಪುರುಷರ ಸಂಖ್ಯೆ ೯೨೬೪೨೪. ಮಹಿಳೆಯರ ಸಂಖ್ಯೆಯೂ ೯೨೬೪೨೪ ದಷ್ಟ್ರಿರಬೇಕಿತ್ತು. ಆದರೆ ಇಲ್ಲಿ ಅವರ ಸಂಖ್ಯೆ ೮೮೦೪೯೪. ಆದ್ದರಿಂದ ಕಾಣೆಯಾದ ಮಹಿಳೆಯರು ೪೫೯೩೦. ಇದು ಜಿಲ್ಲೆಯ ಒಟ್ಟು ಮಹಿಳೆಯರ ಸಂಖ್ಯೆಯ ಶೇ. ೫.೨೩ರಷ್ಟಾಗುತ್ತದೆ.

ಬದುಕುಳಿಯುವ ಅವಕಾಶಕ್ಕೆ ಸಂಬಂಧಿಸಿದಂತೆ ಮಹಿಳೆಯರು ಅನುಭವಿಸುತ್ತಿರುವ ತಾರತಮ್ಯವನ್ನು ಅಳೆಯಲು ಅಮರ್ತ್ಯಸೆನ್ ಟಂಕಿಸಿದ ಕಾಣೆಯಾದ ಮಹಿಳೆಯರು ಎಂಬ ನುಡಿಗಟ್ಟನ್ನು ಬಹಳಸಬಹುದಾಗಿದೆ. ಸಹರಾ ಪ್ರದೇಶದ ಲಿಂಗ ಅನುಪಾತವನ್ನು ಮಾನದಂಡವನ್ನಾಗಿ ಮಾಡಿಕೊಂಡು ಲೆಕ್ಕ ಹಾಕಿದಾಗ ೧೯೮೬ರಲ್ಲಿ ಭಾರತದಲ್ಲಿ ಕಾಣೆಯಾದ ಮಹಿಳೆಯರ ಸಂಖ್ಯೆ ೩೭೦ಲಕ್ಷವೆಂದು ತಿಳಿದು ಬಂದಿದೆ. ಈ ಆತಂಕಕಾರಿ ಸ್ಥಿತಿಗೆ ಬದುಕುಳಿಯುವ ಅವಕಾಶಕ್ಕೆ ಸಂಬಂಧಿಸಿದಂತೆ ಮಹಿಳಿಯೆರು ಅನುಭವಿಸುತ್ತಿರುವ ತಾರತಮ್ಯವನ್ನು ಭಾರತವು ತೊಡೆದು ಹಾಕದಿರುವುದೇ ಕಾರಣವೆಂದು ಜೀನ್‌ಡ್ರೀಜ್ ಮತ್ತು ಅಮರ್ತ್ಯಸೆನ್ ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ (೨೦೦೦-೨೩೮) ಭಾರತದಲ್ಲಿ ಲಿಂಗ ಅನುಪಾತ ಕೆಳಮಟ್ಟದಲ್ಲಿರಲು ಮಹಿಳೆಯರು ಅನುಭವಿಸುತ್ತಿರುವ ಬದುಕುಳಿಯುವ ಅವಕಾಶಗಳಲ್ಲಿನ ತಾರತಮ್ಯವು ಒಂದು ಪ್ರಮುಖ ಕಾರಣವೆಂದು ಅವರು ಹೇಳಿದ್ದಾರೆ.

ರಾಜ್ಯ ಮಟ್ಟದಲ್ಲಿ ಕಾಣೆಯಾದ ಮಹಿಳೆಯರ ಸಂಖ್ಯೆ ೯೪೭, ೨೭೪. ರಾಜ್ಯದ ಮಹಿಳೆಯರ ಒಟ್ಟು ಸಂಖ್ಯೆಯಲ್ಲಿ ಕಾಣೆಯಾದ ಮಹಿಳೆಯರ ಪ್ರಮಾಣ ಶೇ. ೩.೬೫ ಬೆಂಗಳೂರು ನಗರ ಜಿಲ್ಲೆಯನ್ನು ಬಿಟ್ಟರೆ ಉಳಿದಂತೆ ಮಹಿಳೆಯರ ಒಟ್ಟು ಜನಸಂಖ್ಯೆಯಲ್ಲಿ ಕಾಣೆಯಾದ ಮಹಿಳೆಯರ ಪ್ರಮಾಣ ಅತಿಹೆಚ್ಚು ಶೇ. ೫.೨೩ರಷ್ಟಿರುವುದು ವಿಜಾಪುರ ಜಿಲ್ಲೆಯಲ್ಲಿ ಎಂಬುದು ಆತಂಕಕ್ಕೆ ಕಾರಣವಾದ ಸಂಗತಿಯಾಗಿದೆ. (ಇದೇ ಬಗೆಯ ವಿಶ್ಲೇಷಣೆಗೆ ನೋಡಿ – ಮಾರ್ತ ಸಿ. ನುಸ್ ಬಾಮ್ ೨೦೦೦-೪)

. ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ

ವಿಜಾಪುರ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣವು ೧೯೯೧ ರಲ್ಲಿ ಶೇ. ೪೮.೪೮ರಷ್ಟಿದ್ದುದು ೨೦೦೧ರಲ್ಲಿ ಶೇ. ೪೮.೭೨ಕ್ಕೆ ಏರಿಕೆಯಾಗಿದೆ. ಇದು ರಾಜ್ಯಮಟ್ಟದಲ್ಲಿ ಶೇ. ೪೮.೯೬ರಿಂದ ಶೇ. ೪೯.೧೦ಕ್ಕೆ ಏರಿಕೆಯಾಗಿದೆ. ಜಿಲ್ಲಾ ಮಟ್ಟದಲ್ಲಿ ಇದರ ಏರಿಕೆ ಪ್ರಮಾಣ ಶೇ. ೦.೪೯ ರಷ್ಟಿದ್ದರೆ ರಾಜ್ಯ ಮಟ್ಟದಲ್ಲಿ ಅದು ಶೇ. ೦.೨೮ರಷ್ಟು ಏರಿಕೆಯಾಗಿದೆ. ಆದರೆ ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣವನ್ನು ತೆಗೆದುಕೊಂಡರೆ ಅದು ವಿಜಾಪುರ ಜಿಲ್ಲೆಗಿಂತ ರಾಜ್ಯಮಟ್ಟದಲ್ಲಿ ಅಧಿಕಾವಗಿದೆ.

ಅತ್ಯಂತ ಆತಂಕಕಾರಿ ಸಂಗತಿಯೆಂದರೆ ೨೦೦೧ರ ಜನಗಣತಿಯಲ್ಲಿ ಕಂಡುಬಂದಿರುವಂತೆ ಜನಸಂಖ್ಯೆಯ ೦-೬ವಯೋಮಾನದ ಮಕ್ಕಳಿಗೆ ಸಂಬಂಧಿಸಿದಂತೆ ಲಿಂಗ ಅನುಪಾತದಲ್ಲಿನ ತೀವ್ರ ಕುಸಿತ. ವಿಜಾಪುರ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಬಾಲಕರ ಸಂಖ್ಯೆಗೆ ಎದುರಾಗಿ ಬಾಲಕಿಯ ಪ್ರಮಾಣವು ಕಡಿಮೆಯಾಗಿದೆ. ಇಂಡಿ ತಾಲ್ಲೂಕಿನಲ್ಲಿ ಇದರ ಇಳಿಕೆ ಪ್ರಮಾಣ ಅತಿ ಹೆಚ್ಚು ಶೇ. ೧.೨೩ ಅಂಶಗಳಷ್ಟಾಗಿದೆ.

ಶಿಸುವಿನ ಲಿಂಗವನ್ನು ಭ್ರೂಣದ ಹಂತದಲ್ಲೇ ಪತ್ತೆ ಮಾಡುವ ವೈದ್ಯಕೀಯ ತಂತ್ರದ ಆಗಮನದೊಂದಿಗೆ ಹೆಣ್ಣು ಶಿಶು ಭ್ರೂಣದ ಹತ್ಯೆಯ ಸಮಸ್ಯೆ ಉದ್ಭವವಾಗಿದೆ. ಈ ಬಗೆಯ ಹೆಣ್ಣು ಭ್ರೂಣವನ್ನು ಪತ್ತೆ ಮಾಡಿ ಅದನ್ನು ನಾಶ ಮಾಡುವ ಕ್ರಮವು ಇಂದು ಒಂದು ಪೀಡೆಯಾಗಿ ಹಬ್ಬುತ್ತಿದೆ. ಈ ಕಾರಣದಿಂದಾಗಿ ೦-೬ ವಯೋಮಾನದ ಮಕ್ಕಳ ಲಿಂಗ ನುಪಾತವು ೧೯೯೧-೨೦೦೧ರ ಅವಧಿಯಲ್ಲಿ ತೀವ್ರ ಕುಸಿದಿದೆ.

ಮಹಿಳಾ ಆರೋಗ್ಯ ಸೂಚಿಯಾಗಿ ಲಿಂಗ ಆನುಪಾತ

ಈಗಾಗಲೆ ಸ್ಪಷ್ಟಪಡಿಸಿರುವಂತೆ ಲಿಂಗ ಅನುಪಾತವು ಕರ್ನಾಟಕದಲ್ಲಿ – ವಿಜಾಪುರದಲ್ಲಿ ಮಹಿಳೆಯರಿಗೆ ಪ್ರತಿಕೂಲವಾಗಿದೆ. ಹಾಗೂ ೨೦೦೧ ರಲ್ಲಿ ೦-೬ವಯೋಮಾನದ ಮಕ್ಕಳ ಲಿಂಗ ಅನುಪಾವು ತೀವ್ರ ಕುಸಿದಿದೆ. ಇದಕ್ಕೆ ಬಹುಮುಖ್ಯ ಕಾರಣವೆಂದರೆ ೩೫ ರಿಂದ ೪೦ ನೆಯ ವಯಸ್ಸಿನವರೆಗೆ ನಮ್ಮ ಸಮಾಜದ ಸಂದರ್ಭದಲ್ಲಿ ಮಹಿಳೆಯರ ಮರಣದ ಪ್ರಮಾಣವು ಪುರುಷರ ಮರಣ ಪ್ರಮಾಣಕ್ಕಿಂತ ಅಧಿಕವಿದೆ. ಅವರು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಸಾಮಾಜಿಕ ತಾರತಮ್ಯಕ್ಕೆ ಅವರು ಒಳಗಾಗುತ್ತಾರೆ. ಈ ಕಾರಣದಿಂದಾಗಿ ೩೫-೪೦ಕ್ಕಿಂತಲೂ ಕಡಿಮೆ ವಯೋಮಾನದಲ್ಲಿ ಲಿಂಗ ಅನುಪಾತವು ಕೆಳಮಟ್ಟದಲ್ಲಿರುತ್ತದೆ.

ಅನೇಕ ಅಧ್ಯಯನಗಳು ಸ್ಪಷ್ಟಪಡಿಸಿರುವಂತೆ ಎಂತಹ ಪ್ರತಿಕೂಲ ಸಂದರ್ಭದಲ್ಲೂ ಮಹಿಳೆಯರಿಗೆ ಬದುಕುಳಿಯುವ ಸಾಮರ್ಥ್ಯ ಅಧಿಕವಾಗಿರುತ್ತದೆ. ಈ ಕಾರಣಕ್ಕೆ ಅವರ ಜೀವನಾಯುಷ್ಯವು ಪುರುಷರ ಜೀವನಾಯುಷ್ಯಕ್ಕಿಂತ ಅಧಿಕವಾಗಿರುತ್ತದೆ. ಅದಕ್ಕಾಗಿ ಲಿಂಗ ಅನುಪಾತವು ಸಾವಿರಕ್ಕಿಂತ ಅಧಿಕವಾಗಿರಬೇಕು. ಆದರೆ ಆ ಸ್ಥಿತಿಯಿಲ್ಲ. ಕೋಷ್ಟಕ ೬೫ರಲ್ಲಿ ವಿಜಾಪುರ ಜಿಲ್ಲೆಯ ವಿವಿಧ ವಯೋಮಾನ ಗುಂಪಿನಲ್ಲಿನ ಲಿಂಗ ಅನುಪಾತವನ್ನು ನೀಡಲಾಗಿದೆ. ಅತ್ಯಂತ ವಿಶಿಷ್ಟವಾದ ಸಂಗತಿಯೆಂದರೆ ಜನಸಂಖ್ಯೆಯಲ್ಲಿ ಶೇ. ೫೫ರಷ್ಟು ೧೫ ರಿಂದ ೫೯ ವಯೋಮಾನದ ಗುಂಪಿನಲ್ಲಿದ್ದಾರೆ. ದುಡಿಮೆಗಾರ ವರ್ಗದ ಪ್ರಮಾಣವು ಅಧಿಕವಾಗಿದೆ. ಇದಕ್ಕಿಂತ ಮುಖ್ಯವಾಗಿ ನಾವು ಗಮನಿಸಬೇಕಾದ ಸಂಗತಿಯೆಂದರೆ ಲಿಂಗ ಅನುಪಾತವು ೦-೪ ವಯೋಮಾನದಿಂದ ೬೦+ ವಯೋಮಾನದವರೆಗೆ ಅಧಿಕವಾಗುತ್ತಾ ನಡೆದಿದೆ.

ಕೋಷ್ಟಕದಲ್ಲಿ ತೋರಿಸಿರುವಂತೆ ೦-೪ ವಯೋಮಾನದಲ್ಲಿ ಲಿಂಗ ಅನುಪಾತ ೯೩೩. ಇದು ಜಿಲ್ಲೆಯ ಒಟ್ಟು ಜನಸಂಖ್ಯೆಯ ಲಿಂಗ ಅನುಪಾತಕ್ಕಿಂತ ಬಹಳ ಕಡಿಮೆಯಿಂದೆ. ಮುಂದೆ ೫-೧೪ ವಯೋಮಾನದಲ್ಲಿ ಲಿಂಗ ಅನುಪಾತವು ೯೩೨ರಷ್ಟಾಗಿದೆ. ಅದರಂತೆ ೧೫ ರಿಂದ ೫೯ ವಯೋಮಾನದಲ್ಲಿ ಲಿಂಗ ಅನುಪಾತವು ೯೩೯ ಕ್ಕೇರಿದೆ. ಕೊನೆಯ ೬೦+ ವಯೋಮಾನದಲ್ಲಿ ಲಿಂಗ ಅನುಪಾತ ೧೧೨೨. ಇಲ್ಲಿ ಮಹಿಳೆಯರು ತಾಯಿಯ ಗರ್ಭ ಸೇರಿದಂದಿನಿಂದ ಜೀವಮಾನದ ಕೊನೆಯಲ್ಲಿ ಮಣ್ಣಿನ ಗರ್ಭ ಸೇರಿವ ತನಕ ತಾರತಮ್ಯವನ್ನು ಎದುರಿಸುತ್ತಿರುತ್ತಾರೆ. ಈ ಕಾರಣಕ್ಕೆ ಲಿಂಗ ಅನುಪಾತವು ಸಾವಿರಕ್ಕಿಂತ ಕಡಿಮೆಯಿದೆ ಮತ್ತು ಮಕ್ಕಳ ಲಿಂಗ ಅನುಪಾತವು ೧೯೯೧ರಿಂದ ೨೦೦೧ರ ಅವಧಿಯಲ್ಲಿ ಕುಸಿದಿದೆ. ಅಮರ್ತ್ಯಸೆನ್ (೧೯೯೯) ಲಿಂಗ ಸಂಬಂಧಿ ಅಸಮಾನತೆಗೆ ಸಂಬಂಧಿಸಿದಂತೆ ಏಳು ಬಗೆಯ ಅಸಮಾನತೆಗಳನ್ನು ಗುರುತಿಸುತ್ತಾರೆ ಅವುಗಳಾವುವುವೆಂದರೆ;

೧. ಜನನ ಪ್ರಮಾಣದಲ್ಲಿ ಲಿಂಗ ಸಂಬಂಧಿ ಅಸಮಾನತೆ

೨. ಮರಣ ಪ್ರಮಾಣದಲ್ಲಿ ಲಿಂಗ ಸಂಬಂಧಿ ಅಸಮಾನತೆ

೩. ಮೂಲಸೌಲಭ್ಯದಲ್ಲಿ ಲಿಂಗ ಸಂಬಂಧಿ ಅಸಮಾನತೆ

೪. ವಿಶೇಷ ಅವಕಾಶದಲ್ಲಿ ಲಿಂಗ ಸಂಬಂಧಿ ಅಸಮಾನತೆ

೫. ವೃತ್ತಿ ಮಾರುಕಟ್ಟೆಯಲ್ಲಿ ಲಿಂಗ ಸಂಬಂಧಿ ಅಸಮಾನತೆ

೬. ಆಸ್ತಿಯ ಹಕ್ಕುಗಳನ್ನು ಲಿಂಗ ಸಂಬಂಧಿ ಅಸಮಾನತೆ

೭. ಕುಟುಂಬದೊಳಗೆ ಲಿಂಗ ಸಂಬಂಧಿ ಅಸಮಾನತೆ

ಈ ಕಾರಣಗಳಿಂದಾಗಿ ನಮ್ಮಲ್ಲಿ ಲಿಂಗ ಅನುಪಾತವು ಸಾವಿರಕ್ಕಿಂತ ಕಡಿಮೆಯಿದೆ. ಇದು ಸಾಮಾಜಿಕವಾದ ಸಮಸ್ಯೆ. ಇದನ್ನು ಕೇವಲ ಜೈವಿಕ ನೆಲೆಯಲ್ಲಿ ಪರಿಭಾವಿಸಿಕೊಂಡರೆ ಸಮಸ್ಯೆಯು ಬಗೆಹರಿಯುವುದಿಲ್ಲ. ಅರವತ್ತು ಮತ್ತು ಅರವತ್ತಕ್ಕೆ ಮೇಲ್ಪಟ್ಟ ವಯೋಮಾನದಲ್ಲಿ ಲಿಂಗ ಅನುಪಾತವು ಮಹಿಳೆಯರಿಗೆ ಅನುಕೂಲಕರವಾಗಿದೆ. ಇದು ಹೇಗೆ ಸಾಧ್ಯವಾಯಿತು? ಶೈಶಾವಸ್ಥೆಯಲ್ಲಿ, ಬಾಲ್ಯದಲ್ಲಿ ಹಾಗೂ ತಾರುಣ್ಯದಲ್ಲಿ ಸಾಧ್ಯವಾಗದಂತಹ ಉನ್ನತ ಲಿಂಗ ಅನುಪಾತ ಇಲ್ಲಿ ಹೇಗೆ ಉಂಟಾಯಿತು? ಅಂದರೆ ಮಹಿಳೆಯರ ಆರೋಗ್ಯ, ಪೌಷ್ಟಿಕತೆ, ಪೋಷಣೆಗಳು ಶೈಶಾವಸ್ಥೆ ಹಾಗೂ ಬಾಲ್ಯದಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ಇದರಿಂದಾಗಿ ಆ ವಯೋಮಾನದಲ್ಲಿ ಮಹಿಳೆಯರ ಮರಣ ಪ್ರಮಾಣವು ಅಧಿಕವಾಗಿರುತ್ತದೆ.

ವಿಜಾಪುರ ಜಿಲ್ಲೆಯ ವಯೋಮಾನವಾರು ಲಿಂಗ ಅನುಪಾತ : ೨೦೦೧

ಕೋಷ್ಟಕ .

ವಯೋಮಾನ ಗುಂಪು

ಒಟ್ಟು

ಪುರುಷರು

ಮಹಿಳೆಯರು

ಅನುಪಾತ

೦-೪ ವರ್ಷ

೧೯೮೭೮೫

೧೦೨೭೯೯
(೧೧.೦೦)

೯೫೯೮೬
(೧೧.೧೦)

೯೩೩
(೧೦.೯೦)

೫-೧೪ ವರ್ಷ

೪೬೮೬೫೨

೨೪೨೫೪೧
(೨೫.೯೪)

೨೨೬೧೧೧
(೨೬.೧೮)

೯೩೨
(೨೫.೬೮)

೧೫-೫೯ ವರ್ಷ

೯೯೫೭೦೨

೫೧೩೩೫೫ (೫೫.೧೦)

೪೮೨೩೪೭
(೫೫.೪೧)

೯೩೯
(೫೪.೭೮)

೬೦+ ವರ್ಷ

೧೪೩೭೭೯

೬೭೭೨೯
(೭.೯೬)

೭೬೦೫೦
(೭೩೧)

೧೧೨೨
(೮.೬೪)

ಒಟ್ಟು

೧೮೦೬೯೯೧೮

೯೨೬೪೨೪

೮೮೦೪೯೪

೯೫೦

ಮೂಲ : ಸೆನ್ಸಸ್ ಆಫ್ ಇಂಡಿಯಾ೨೦೦೧, ಸಿ.ಡಿ. ಮಾಹಿತಿ, ಡೈರೆಕ್ಟರೇಟ್ ಆಫ್ ಸೆನ್ಸಸ್ ಆಫರೇಶನ್ಸ್, ಕರ್ನಾಟಕ

ಈ ಸಂಗತಿಯು ಸಮಾಜದಲ್ಲಿ ಲಿಂಗ ತಾರತಮ್ಯವು ಅಸ್ತಿತ್ವದಲ್ಲಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಮಹಿಳೆಯರ ಆರೋಗ್ಯವು ಶೈಶಾವಸ್ಥೆಯಲ್ಲಿ ಹಾಗೂ ಬಾಲ್ಯದಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾದರೆ ೫೦-೬೦ ವಯಸ್ಸಿನ ನಂತರ ಅವರಿಗೆ ಸಮಾಜದಲ್ಲಿ ಉನ್ನತ ಸ್ಥಾನ ಪ್ರಾಪ್ತವಾಗಿ ಬಿಡುತ್ತದೆ. ಮಹಿಳೆಯರ ಜೀವನಾಯುಷ್ಯವು ಪುರುಷರ ಜೀವನಾಯುಷ್ಯಕ್ಕಿಂತ ಅಧಿಕವಾಗಿರುತ್ತದೆ.ಈ ಕಾರಣದಿಂದಾಗಿಯೆ ಕೇವಲ ೬೦ ವರ್ಷಕ್ಕೆ ಮೇಲ್ಪಟ್ಟ ವಯೋಮಾನ ಗುಂಪಿಲ್ಲಿ ಮಹಿಳೆಯರ ಸಂಖ್ಯೆ (೭೬೦೫೦) ಪುರುಷರ ಸಂಖ್ಯೆ (೬೭೭೨೯)ಗಿಂತ ಅಧಿಕವಾಗಿದೆ. ಈ ಬಗೆಯ ಆರೋಗ್ಯಕ್ಕೆ ಸಂಬಂಧಿಸಿದ ಲಿಂಗ ತಾರತಮ್ಯವನ್ನು ಹೋಗಲಾಡಿಸಬೇಕಾಗುತ್ತದೆ.

. ಸಾಕ್ಷರತೆಯಲ್ಲಿ ತಾರತಮ್ಯ

ಮಹಿಳೆಯರಿಗೆ ಸಂಬಂಧಿಸಿದಂತೆ ಲಿಂಗ ತಾರತಮ್ಯವು ಎಲ್ಲ ಕ್ಷೇತ್ರಗಳಲ್ಲೂ ಕಂಡುಬರುತ್ತದೆ. ಜನಸಂಖ್ಯೆಯಲ್ಲಿ ಅವರ ಪ್ರಮಾಣ ಎಷ್ಟು ಇರಬೇಕಾಗಿತ್ತೋ ಅದಕ್ಕಿಂತ ಕಡಿಮೆಯಿದೆ. ಅದರ ಮುಂದುವರಿದ ಭಾಗವಾಗಿ ಅಕ್ಷರಸ್ಥರಲ್ಲಿ ಮಹಿಳೆಯರ ಪ್ರಮಾಣವು ತೀವ್ರ ಕಡಿಮೆಯಿರುವುದು ಕಂಡುಬರುತ್ತದೆ. ರಾಜ್ಯಮಟ್ಟದಲ್ಲಿ ಮಹಿಳೆಯರ ಸಾಕ್ಷರತೆಯು ಪುರುಷಕರ ಸಾಕ್ಷರತೆಯ ಶೇ. ೭೫ರಷ್ಟಿದ್ದರೆ ವಿಜಾಪುರ ಜಿಲ್ಲೆಯಲ್ಲಿ ಅದು ಶೇ. ೬೨ರಷ್ಟಿದೆ. ಬಸವನಬಾಗೇವಾಡಿ, ಮುದ್ದೇಬಿಹಾಳ ಮತ್ತು ಸಿಂದಗಿ ತಾಲ್ಲೂಕುಗಳಲ್ಲಿ ಅವರ ಪ್ರಮಾಣ ಶೇ. ೬೦ಕ್ಕಿಂತ ಕಡಿಮೆಯಿದೆ. ಇಡೀ ರಾಜ್ಯದಲ್ಲಿ ಶೇ. ೫೦ಕ್ಕಿಂತ ಕಡಿಮೆ ಮಹಿಳಾ ಸಾಕ್ಷರತೆ ಇರುವ ೮ ಜಿಲ್ಲೆಗಳ ಪೈಕಿ ವಿಜಾಪುರವೂ ಒಂದಾಗಿದೆ.

ಕೋಷ್ಟಕ ೬೬ರಲ್ಲಿ ತೋರಿಸಿರುವಂತೆ ೨೦೦೧ರಲ್ಲಿ ವಿಜಾಪುರ ಜಿಲ್ಲೆಯ ತಾಲ್ಲೂಕುಗಳಲ್ಲಿ ಮಹಿಳೆಯರ ಸಾಕ್ಷರತೆಯು ಪುರುಷಕರ ಸಾಕ್ಷರತೆಯ ಶೇ. ೬೩ ದಾಟಿಲ್ಲ. ಇದಕ್ಕೆ ಅಪವಾದವೆಂದರೆ ವಿಜಾಪುರ ತಾಲ್ಲೂಕು. ರಾಜ್ಯಮಟ್ಟದಲ್ಲೂ ಮಹಿಳೆಯರ ಸಾಕ್ಷರತೆಯು ಪುರುಷರ ಸಾಕ್ಷರತೆಯ ಶೇ. ೭೫ ದಾಟಿಲ್ಲ.

ಪುರುಷರ ಸಾಕ್ಷರತೆಗೆ ಸಾಪೇಕ್ಷವಾಗಿ ಮಹಿಳೆಯರ ಸಾಕ್ಷರತೆ೧೯೯೧ ಮತ್ತು ೨೦೦೧

ಕೋಷ್ಟಕ .೬ –

           

ತಾಲ್ಲೂಕುಗಳು

ಪುರುಷರ ಸಾಕ್ಷರತೆಯ ಶೇಕಡ ಪ್ರಮಾಣವಾಗಿ ಮಹಿಳೆಯರ ಸಾಕ್ಷರತೆ

೧೯೯೧

೨೦೦೧

೧. ಬಸವನಬಾಗೇವಾಡಿ ೫೭.೦೪ ೫೮.೨೮
೨. ವಿಜಾಪುರ ೬೨.೮೬ ೭೮.೪೭
೩. ಇಂಡಿ ೬೬.೮೯ ೬೦.೬೫
೪. ಮುದ್ದೇಬಿಹಾಳ ೪೮.೪೬ ೫೬.೭೫
೫. ಸಿಂದಗಿ ೫೫.೩೩ ೫೬.೧೧
೬. ಜಿಲ್ಲೆ ೫೯.೨೨ ೬೨.೧೫
೭. ರಾಜ್ಯ ೬೫.೯೨ ೭೪.೭೩

ಮೂಲ : . ಸೆನ್ಸಸ್ ಆಫ್ ಇಂಡಿಯಾ೧೯೯೧, ಸಿರೀಸ್ ೧೧, ಡಿಸ್ಟ್ರಿಕ್ಟ್ ಸೆನ್ಸಸ್ ಹ್ಯಾಂಡ್ ಬುಕ್ ವಿಜಾಪುರ, ಡೈರೆಕ್ಟರೇಟ್ ಆಫ್ ಸೆನ್ಸಸ್ ಆಫರೇಶನ್ಸ್ ಕರ್ನಾಟಕ.

೨. ಸೆನ್ಸಸ್ ಆಫ್ ಇಂಡಿಯಾ – ೨೦೦೧, ಸಿರೀಸ್ ೩೦, ಪ್ರೈಮರಿ ಸೆನ್ಸಸ್ ಅಬ್‌ಸ್ಟ್ರಾಕ್ಟ್, ಡೈರೆಕ್ಟರೇಟ್ ಆಫ್ ಸೆನ್ಸಸ್ ಆಫರೇಶನ್ಸ್, ಕರ್ನಾಟಕ.

ಮಹಿಳೆಯರು ಸಮಾಜದಲ್ಲಿ ತೀವ್ರ ತಾರತಮ್ಯ ಎದುರಿಸುತ್ತಿದ್ದಾರೆ ಎಂಬುದನ್ನು ಇಲ್ಲಿ ಎರಡು ಸೂಚಿಗಳಿಂದ ತೋರಿಸಲಾಗಿದೆ. ಮೊದಲನೆಯದು ಲಿಂಗ ಅನುಪಾತ ಎರಡನೆಯದು ಸಾಕ್ಷರತೆಯಲ್ಲಿ ಮಹಿಳೆಯರ ಪ್ರಮಾಣ. ಇವೆರಡೂ ಸೂಚಿಗಳಲ್ಲಿ ವಿಜಾಪು ಜಿಲ್ಲೆಯ ಸ್ಥಿತಿಯು ರಾಜ್ಯ ಮಟ್ಟದಲ್ಲಿರುವುದಕ್ಕಿಂತ ಹೆಚ್ಚು ಕಳವಳಕಾರಿಯಾಗಿದೆ. ಈ ಹಿಂದೆ ಹೇಳಿದಂತೆ ಆರ್ಥಿಕವಾಗಿ ಹಿಂದುಳಿದಿರುವ ಜಿಲ್ಲೆ, ತಾಲ್ಲೂಕುಗಳು ತೀವ್ರ ಲಿಂಗ ಅಸಮಾನತೆಯಿಂದಲೂ ನರಳುತ್ತಿರುತ್ತವೆ ಎಂಬುದಕ್ಕೆ ವಿಜಾಪುರ ಜಿಲ್ಲೆಯು ಒಂದು ನಿದರ್ಶನವಾಗಿದೆ. ಲಿಂಗ ಸಮಾನತೆ ಸಾಧಿಸಿಕೊಳ್ಳಲು ರಾಜ್ಯ ಮಟ್ಟಕ್ಕಿಂತಲೂ ವಿಜಾಪುರ ಜಿಲ್ಲೆಯು ತೀವ್ರಗತಿಯಲ್ಲಿ ಮುಂದೆ ಸಾಗಬೇಕಾಗಿದೆ. ಮಟ್ಟಕ್ಕಿಂತಲೂ ವಿಜಾಪುರ ಜಿಲ್ಲೆಯು ತೀವ್ರಗತಿಯಲ್ಲಿ ಮುಂದೆ ಸಾಗಬೇಕಾಗಿದೆ.

ಕೋಷ್ಟಕ ೬.೭ ರಲ್ಲಿ ಒಟ್ಟು ಸಾಕ್ಷರತೆಗೆ ಸಂಬಂಧಿಸಿದಂತೆ ಪುರುಷರು ಹಾಗೂ ಮಹಿಳೆಯರ ಸಾಕ್ಷರತೆ ನಡುವಿನ ಅಂತರವನ್ನು ತಾಲ್ಲೂಕುವಾರು ಗುರುತಿಸಿದೆ. ಅತ್ಯಂತ ಸಮಾಧಾನಕರ ಸಂಗತಿಯೆಂದರೆ ಪುರುಷರು ಮತ್ತು ಮಹಿಳೆಯರು ನಡುವಣ ಲಿಂಗಸಂಬಂಧಿ ಸಾಕ್ಷರತಾ ಅಂತರವು ೧೯೯೧ ರಿಂದ ೨೦೦೧ರ ಅವದಿಯಲ್ಲಿ ಕಡಿಮೆಯಾಗಿದೆ. ಆದರೆ ವಿಜಾಪುರ ಜಿಲ್ಲೆಯ ಲಿಂಗ ಸಂಬಂಧಿ ಸಾಕ್ಷರತಾ ಅಂತರವು ರಾಜ್ಯಮಟ್ಟಕ್ಕಿಂತ ಅಧಿಕವಾಗಿದೆ. ಈ ಅಂತರವು ರಾಜ್ಯಮಟ್ಟದಲ್ಲಿ ೧೯೯೧ರಿಂದ ೨೦೦೧ರಲ್ಲಿ ಶೇ. ೧೬.೧೦ ರಷ್ಟು ಕಡಿಮೆಯಾಗಿದ್ದರೆ ವಿಜಾಪುರ ಜಿಲ್ಲೆಯಲ್ಲಿ ಅದು ಕೇವಲ ಶೇ. ೭೮೩ರಷ್ಟು ಕಡಿಮೆಯಾಗಿದೆ.

ಲಿಂಗ ಸಂಬಂಧಿ ಸಾಕ್ಷರತಾ ಅಂತರ ೧೯೯೧ ಮತ್ತು ೨೦೦೧

ಕೋಷ್ಟಕ .

ತಾಲ್ಲೂಕುಗಳು

ಲಿಂಗಸಂಬಂಧಿ ಸಾಕ್ಷರತಾ ಅಂತರ

೧೯೯೧

೨೦೦೧

ವ್ತ್ಯಾಸ (ಶೇ)

೧. ಬಸವನಬಾಗೇವಾಡಿ ೩೧.೧೧ ೨೮.೫೬ – ೮.೧೯
೨. ವಿಜಾಪುರ ೨೬.೦೯ ೨೧.೮೩ – ೧೬.೩೨
೩. ಇಂಡಿ ೨೩.೮೪ ೨೫.೮೨ – ೮.೩೧
೪. ಮುದ್ದೇಬಿಹಾಳ ೩೭.೦೦ ೩೨.೦೫ – ೧೩.೩೮
೫. ಸಿಂದಗಿ ೩೦.೦೦ ೨೯.೧೫ – ೨೮೩
೬. ಜಿಲ್ಲೆ ೨೮.೭೨ ೨೬.೪೭ – ೭.೮೩
೭. ರಾಜ್ಯ ೨೨.೯೨ ೧೯.೨೩ – ೧೬.೧೦

ಮೂಲ. ಸೆನ್ಸಸ್ ಆಫ್ ಇಂಡಿಯಾ೧೯೯೧, ಸಿರೀಸ್ ೧೧, ಡಿಸ್ಟ್ರಿಕ್ಟ್ ಸೆನ್ಸಸ್ ಹ್ಯಾಂಡ್ ಬುಕ್, ವಿಜಾಪುರ, ಡೈರೆಕ್ಟರೇಟ್ ಆಫ್ ಸೆನ್ಸಸ್ ಆಫರೇಶನ್ಸ್, ಕರ್ನಾಟಕ

೨. ಸೆನ್ಸಸ್ ಆಫ್ ಇಂಡಿಯಾ – ೨೦೦೧, ಸಿರೀಸ್ ೩೦ ಪ್ರೈಮರಿ ಸೆನ್ಸ್‌ಸ್ ಅಬ್‌ಸ್ಟ್ರಾಕ್ಟ್ ಡೈರೆಕ್ಟರೇಟ್ ಆಫ್ ಸೆನ್ಸಸ್ ಆಫರೇಶನ್ಸ್, ಕರ್ನಾಟಕ

ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಸಾಕ್ಷರತಾ ಅಂತರ ೨೦೦೧ರಲ್ಲಿ ಶೇ. ೩೨.೦೫ ಅಂಶಗಳಷ್ಟಿದ್ದರೆ ಅತಿಕಡಿಮೆ ಶೇ. ೨೧.೮೩ ಅಂಶಗಳು ವಿಜಾಪುರ ತಾಲ್ಲೂಕಿನಲ್ಲಿ ೧೯೯೧-೨೦೦೧ ಅವಧಿಯಲ್ಲಿ ಕಡಿಮೆಯಾಗಿದ್ದರೆ ಸಿಂದಗಿ ತಾಲ್ಲೂಕಿನಲ್ಲಿ ಅದು ಶೇ. ೨.೮೩ರಷ್ಟು ಕನಿಷ್ಠ ಪ್ರಮಾಣದಲ್ಲಿ ಇಳಿದಿದೆ. ರಾಜ್ಯಮಟ್ಟದಲ್ಲಿ ಲಿಂಗಸಂಬಂಧಿ ಸಾಕ್ಷರತಾ ಅಂತರವು ೧೯೯೧ರಿಂದ ೨೦೦೧ರ ಅವಧಿಯಲ್ಲಿ ಶೇ. ೧೬.೧೦ರಷ್ಟು ಕಡಿಮೆಯಾಗಿದ್ದರೆ ವಿಜಾಪುರ ಜಿಲ್ಲೆಯಲ್ಲಿ ಅದು ಕೇವಲ ಶೇ. ೭.೮೩ ರಷ್ಟು ಮಾತ್ರ ಕಡಿಮೆಯಾಗಿದೆ.

ಸಾಕ್ಷರತೆ ಮತ್ತು ದಾಖಲಾತಿಗಳಲ್ಲಿ ಲಿಂಗ ತಾರತಮ್ಯ ಕುರಿತಂತೆ ಅನೇಕ ಅಧ್ಯಯನಗಳು ನಡೆದಿವೆ. ಮಹಿಳೆಯರ ಶಿಕ್ಷಣದ ಮಹತ್ವದ ಬಗ್ಗೆ ಸಮಾಜದಲ್ಲಿ ತೀವ್ರ ಜಾಗೃತಿ ಉಂಟಾಗಿದ್ದರೂ ಮಹಿಳೆಯರು ಅತ್ಯಧಿಕ ಪ್ರಮಾಣದಲ್ಲಿ ಅನಕ್ಷರಸ್ಥರಾಗಿ ಉಳಿದಿದ್ದಾರೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಲಿಂಗ ತಾರತಮ್ಯವು ಮುಂದುವರಿಯಲು ಕಾರಣವೆಂದರೆ ಬಾಲಕಿಯರ ಶಿಕ್ಷಣದ ಮೇಲೆ ಅವರ ಪಾಲಕರು ತೊಡಗಿಸುವ ಬಂಡವಾಳಕ್ಕೆ ಅನುಗುಣವಾಗಿ ಫಲಗಳು ಪಾಲಕರಿಗೆ ದೊರೆಯುತ್ತಿಲ್ಲ. ಈ ಕಾರಣಕ್ಕೆ ಪಾಲಕರು ಗಂಡು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಇದರ ಜೊತೆಗೆ ಕುಟುಂಬದೊಳಗೆ ಆಹಾರ ಹಂಚಿಕೆಯಲ್ಲೂ ಬಾಲಕಿಯರು ತಾರತಮ್ಯ ಎದುರಿಸಬೇಕಾಗಿದೆ. ಪಾಲಕರ ಆಸ್ತಿಯ ಹಂಚಿಕೆಯಲ್ಲೂ ಮಹಿಳೆಯರಿಗೆ ಹಾನಿಯುಂಟಾಗುತ್ತಿದೆ. ಈ ಬಗೆಯ ವರ್ತನೆಯು ವಿವೇಚನಾಪೂರ್ವವಾದುದೆಂದು ಮತ್ತು ಅದು ತಾರತಮ್ಯ ವಾದಿಯಲ್ಲವೆಂದು ಹೇಳಲಾಗುತ್ತಿದೆ. ಆದ್ದರಿಂದ ಹಿಂದುಳಿದ ಜಿಲ್ಲೆಗಳಲ್ಲಿ ಮಹಿಳೆಯರ ಶಿಕ್ಷಣಕ್ಕೆ ಸರ್ಕಾರವು ಹೆಚ್ಚು ಬಂಡವಾಳ ತೊಡಗಿಸಬೇಕಾದ ಅಗತ್ಯವಿದೆ. ಕರ್ನಾಟಕದಲ್ಲಿ ೨೦೦೧ರಲ್ಲಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಲಿಂಗ ಸಂಬಂಧಿ ಸಾಕ್ಷರತಾ ಅಂತರ ಶ. ೨೫ ಅಂಶಕ್ಕಿಂತ ಅಧಿಕವಿದೆ. ಅವುಗಳಾವುವೆಂದರೆ ಬಾಗಲಕೋಟೆ (ಶೇ. ೨೭.೩೩), ವಿಜಾಪುರ (ಶೇ. ೨೬.೪೭), ಗದಗ (ಶೇ. ೨೬.೮೦) ಮತ್ತು ಕೊಪ್ಪಳ (ಶೇ. ೨೮.೮೧).ಲಿಂಗ ಸಂಬಂಧಿ ಸಾಕ್ಷರತಾ ಅಂತರವು ಅತಿ ಹೆಚ್ಚಿರುವ ನಾಲ್ಕು ಜಿಲ್ಲೆಗಳ ಪೈಕಿ ವಿಜಾಪುರವೂ ಒಂದಾಗಿದೆ. ಆದ್ದರಿಂದ ಅಲ್ಲಿ ಮಹಿಳಾ ಶಿಕ್ಷಣಕ್ಕೆ ಸರ್ಕಾರವು ಹೆಚ್ಚಿನ ಬಂಡವಾಳ ತೊಡಗಿಸಬೇಕು ಮತ್ತು ಹೆಚ್ಚಿನ ಆಸಕ್ತಿ ತಳೆಯಬೇಕು.

ಈಗಾಗಲೇ ಸ್ಪಷ್ಟವಾಗಿರುವಂತೆ ವಿಜಾಪುರವು ಗ್ರಾಮೀಣ ಪ್ರಧಾನ ಜಿಲ್ಲೆಯಾಗಿದೆ. ಆದ್ದರಿಂದ ನಾವು ಲಿಂಗ ಸಂಬಂಧಿ ಅಸಮಾನತೆಯನ್ನು ಗ್ರಾಮೀಣಕ್ಕೆ ಸಂಬಂಧಿಸಿದಂತೆ ಪರಿಶೀಲಿಸುವುದು ಸೂಕ್ತ. ಗ್ರಾಮೀಣವನ್ನು ಪರಿಗಣಿಸಿದರೆ ವಿಜಾಪುರ ಜಿಲ್ಲೆಯಲ್ಲಿ ಲಿಂಗ ಸಂಬಂಧಿ ಸಾಕ್ಷರತಾ ಅಂತರ ಶೇ. ೨೮.೬೩ರಷ್ಟಾಗುತ್ತದೆ. ಇದು ತುಂಬಾ ಆತಂಕಕಾರಿಯಾದ ಸಂಗತಿಯಾಗಿದೆ.ಈ ಬಗ್ಗೆ ನಾವು ಜಾಗೃತರಾಗಬೇಕಾದ್ದು ಅಗತ್ಯ.

. ಶಾಲಾ ದಾಖಲಾತಿ ಲಿಂಗ ಸಂಬಂಧಿ ಆಯಾಮಗಳು

ಕೋಷ್ಟಕ ೬.೮ ರಲ್ಲಿ ೧ ರಿಂದ ೧೦ನೆಯ ತರಗತಿಗಳಿಗೆ ಸಂಬಂದಿಸಿದಂತೆ ದಾಖಲಾತಿಯಲ್ಲಿ ಬಾಲಕಿಯರ ಪ್ರಮಾಣವನ್ನು ತೋರಿಸಲಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ರುವಂತೆ ಮತ್ತು ಎಲ್ಲ ಸೂಚಿಗಳೂ ತೋರಿಸುವಂತೆ ಇಲ್ಲೂ ಸಹ ಬಾಲಯಕಿಯರ ಪ್ರಮಾಣವು ಬಾಲಕರ ಪ್ರಮಾಣಕ್ಕಿಂತ ಕಡಿಮೆಯಿರುವುದು ಕಂಡುಬರುತ್ತದೆ. ಒಂದು ಪ್ರೋತ್ಸಾಹದಾಯಕವಾದ ಸಂಗತಿಯೆಂದರೆ ೨೦೦೦-೦೧ ರಿಂದ ೨೦೦೫-೦೬ರ ಅವಧಿಯ ದಾಖಲಾತಿಯಲ್ಲಿ ಬಾಲಕಿಯರ ಪ್ರಮಾಣವು ಸಾಕಷ್ಟು ಏರಿಕೆ ಕಂಡಿದೆ. ಅಂದರೆಲಿಂಗ ಅಸಮ್ನತೆಯು ಇಲ್ಲಿ ತೀವ್ರವಾಗಿ ಕಂಡುಬರುತ್ತದೆ.

ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಸಂಗತಿಯೆಂದರೆ ದಾಖಲಾತಿಯಲ್ಲಿ ಬಾಲಕಿಯರ ಪ್ರಮಾಣವು ೧ ರಿಂದ ೭ನೆಯ ತರಗತಿಯಲ್ಲಿರುವುದಕ್ಕಿಂತ ೮-೧೦ನೆಯ ತರಗತಿಯ ದಾಖಲಾತಿಯಲ್ಲಿ ಕಡಿಮೆಯಿದೆ. ಅಂದರೆ ಶಿಕ್ಷಣದ ಆರಂಬದ ಹಂತದಲ್ಲಿ ಬಾಲಕಿಯರ ಪ್ರಮಾಣವು ಅಧಿಕ ಮಟ್ಟದಲ್ಲಿದೆ. ಆದರೆ ಉನ್ನತ ಹಂತಕ್ಕೆ ಸಾಗಿದಂತೆ ಅವರ ಪ್ರಮಾಣವು ಕಡಿಮೆಯಾಗುತ್ತದೆ.

ಮತ್ತೊಂದು ಸಂಗತಿಯೆಂದರೆ ಕೋಷ್ಟಕ ೬ರಲ್ಲಿ ತೋರಿಸಿರುವಂತೆ ದಾಖಲಾತಿಯಲ್ಲಿ ಬಾಲಕಿಯರ ಪ್ರಮಾಣವು ರಾಜ್ಯ ಮಟ್ಟದಲ್ಲಿ ವಿಜಾಪುರ ಜಿಲ್ಲೆಯ ಮಟ್ಟಕ್ಕಿಂತ ಅಧಿಕವಾಗಿದೆ. ರಾಜ್ಯಮಟ್ಟದಲ್ಲಿ ೨೦೦೫-೦೬ರಲ್ಲಿ ದಾಖಲಾತಿಯಲ್ಲಿ ಬಾಲಕಿಯರ ಪ್ರಮಾಣವು ೧ ರಿಂದ ೭,೮ ರಿಂದ ೧೦ ಮತ್ತು ೧ ರಿಂದ ೧೦ನೆಯ ತರಗತಿಗಳಲ್ಲಿ ಸರಿಸುಮಾರು ಸಮಾನವಾಗಿದೆ. ಆದರೆ ವಿಜಾಪುರ ಜಿಲ್ಲೆಯ ಮಟ್ಟದಲ್ಲಿ ದಾಖಲಾತಿಯಲ್ಲಿ ಬಾಲಕಿಯರ ಪ್ರಮಾಣವು ೧ ರಿಂದ ೭ನೆಯ ತರಗತಿವರೆಗೆ ಅದಿಕವಾಗಿದೆ ಮತ್ತು ೮-೧೦ನೆಯ ತರಗತಿಯಲ್ಲಿ ಅದು ಕಡಿಮೆಯಾಗಿದೆ.

ಶಾಲಾ ದಾಖಲಾತಿಯಲ್ಲಿ ಬಾಲಕಿಯರ ಪ್ರಮಾಣ ೨೦೦೦೦೧ ಮತ್ತು ೨೦೦೫೦೬

ಕೋಷ್ಟಕ .

ತಾಲ್ಲೂಕುಗಳು

ದಾಖಲಾತಿಯಲ್ಲಿ ಬಾಲಕಿಯರ ಪ್ರಮಾಣ(ಶೇ)

೨೦೦೧-೦೧

೨೦೦೫-೦೬

ತರಗತಿಗಳು

೧-೭

೮-೧೦

೧-೧೦

೧-೭

೮-೧೦

೧-೧೦

ಬ.ಬಾಗೇವಾಡಿ

೪೫.೮೦

೨೪.೨೮

೪೨.೯೮

೪೬.೯೩

೪೨.೮೫

೪೬.೨೩

ವಿಜಾಪುರ

೪೬.೪೨

೩೮.೮೩

೪೫.೨೬

೪೭.೬೯

೪೩.೯೭

೪೭.೦೧

ಇಂಡಿ

೪೪.೭೬

೩೮.೭೬

೪೩.೮೨

೪೬.೮೩

೩೮.೬೧

೪೫.೪೧

ಮುದ್ದೇಬಿಹಾಳ

೪೪.೮೫

೩೯.೫೯

೪೪.೧೫

೪೮.೧೫

೪೧.೧೮

೪೬.೮೯

ಸಿಂದಗಿ

೪೫.೦೭

೩೨.೦೩

೪೩.೪೭

೪೬.೪೩

೩೮.೨೪

೪೫.೧೫

ಜಿಲ್ಲೆ

೪೫.೫೨

೩೫.೯೪

೪೪.೧೫

೪೭.೨೫

೪೧.೪೬

೪೬.೨೪

ರಾಜ್ಯ

೪೭.೫೮

೪೩.೨೨

೪೭.೦೭

೪೮.೪೫

೪೭.೧೫

೪೮.೧೬

ಮೂಲ : ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನವಿಜಾಪುರ

ಶಿಕ್ಷಣದ ಕೆಳಹಂತಗಳಲ್ಲಿ ಬಾಲಕಿಯರ ಪ್ರಮಾಣ ಅಧಿಕವಾಗಿದ್ದು ಅದು ಉನ್ನತ ಹಂತಗಳಳ್ಲಿ ಕಡಿಮೆಯಾಗುತ್ತಿರುವ ಸಂಗತಿಯನ್ನು ಕೋಷ್ಟಕದಲ್ಲಿ ಬಾಲಕಿಯರ ದಾಖಲಾತಿಯನ್ನು ಒಂದನೆಯ ತರಗತಿ, ಏಳನೆಯ ತರಗತಿ ಹಾಗೂ ೧೦ನೆಯ ತರಗತಿ ಹಾಗೂ ೧೨ನೆಯ ತರಗತಿಗೆ ಸಂಬಂಧಿಸಿದಂತೆ ತೋರಿಸಲಾಗಿದೆ. ಇದೊಂದು ವಿಶಿಷ್ಟವಾದ ಕೋಷ್ಟಕವಾಗಿದೆ. ಇಲ್ಲಿ ಮೂರು ಹಂತಗಳಲ್ಲಿ ಬಾಲಕಿಯರ ಪ್ರಮಾಣವನ್ನು ತೋರಿಸಲಾಗಿದೆ. ಇಲ್ಲಿ ಬಾಲಕಿಯರ ಪ್ರಮಾಣವು ವಿಜಾಪುರ ಜಿಲ್ಲೆಯಲ್ಲಿ ಅವರೋಹಣ ಕ್ರಮದಲ್ಲಿ ಕಡಿಮೆಯಾಗುತ್ತಿರುವುದನ್ನು ನೋಡಬಹುದು. ಜಿಲ್ಲಾಮಟ್ಟದಲ್ಲಿ ಅವರೋಹಣದ ಗತಿಯು ರಾಜ್ಯಮಟ್ಟದ ಅವರೋಹಣ ಗತಿಗಿಂತ ತೀವ್ರವಾಗಿದೆ. ಸಿಂದಗಿ ತಾಲ್ಲೂಕಿನಲ್ಲಿ ಲಿಂಗತಾರತಮ್ಯವು ಉಳಿದ ತಾಲ್ಲೂಕುಗಳಿಗಿಂತ ಅಧಿಕವಾಗಿದೆ. ತಾಲ್ಲೂಕು ವಾರು ಲಿಂಗ ತಾರತಮ್ಯದ ಭಿನ್ನತೆಯನ್ನು ಗಮನದಲ್ಲಿಟ್ಟುಕೊಂಡು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಈ ಹಿಂದೆ ಚರ್ಚಿಸಿರುವಂತೆ ಬಾಲಕಿಯರ ದಾಖಲಾತಿಯು ವಿಜಾಪುರ ಜಿಲ್ಲೆಯಲ್ಲಿ ಏಳನೆಯ ತರಗತಿವರೆಗೆ ಶೇ. ೪೦ಕ್ಕಿಂತ ಅಧಿಕವಾಗಿದೆ. ಆದರೆ ಏಳನೆಯ ತರಗತಿ ನಂತರ ಅದು ತೀವ್ರವಗತಿಯಲ್ಲಿ ಕುಸಿದಿದೆ. ರಾಜ್ಯಮಟ್ಟದಲ್ಲಿ ಬಾಲಕಿಯರ ದಾಖಲಾತಿಯ ಹತ್ತನೆಯ ತರಗತಿವರೆಗೆ ಉತ್ತಮವಾಗಿದೆ. ಆದರೆ ಹನ್ನರೆಡನೆಯ ತರಗತಿಯಲ್ಲಿ ರಾಜ್ಯಮಟ್ಟದಲ್ಲೂ ಬಾಲಕಿಯರ ಪ್ರಮಾಣವು ಕೇವಲ ಶೇ. ೪೨.೬೧. ವಿಜಾಪುರ ಜಿಲ್ಲಾ ಮಟ್ಟದಲ್ಲಿ ಅದು ಶೇ. ೩೩.೩೧ . ರಾಜ್ಯಮಟ್ಟದಲ್ಲಿ ಅದು ಶೇ. ೨೮.೬೫ರಷ್ಟು ಕುಸಿದಿದೆ. ಅತ್ಯಧಿ ಪ್ರಮಾಣದ ಕಡಿತ ಸಿಂದಗಿ ತಾಲ್ಲೂಕಿನಲ್ಲಿ ಉಂಟಾಗಿದೆ. ಅಲ್ಲಿ ಬಾಲಕಿಯರ ದಾಖಲಾತಿ ಪ್ರಮಾಣವು ಒಂದನೆಯ ತರಗತಿಯಿಂದ ಹನ್ನೆರಡನೆಯ ತರಗತಿವರೆಗೆ ಶೇ. ೪೫.೩೨ರಷ್ಟು ಇಳಿದಿದೆ. ಬಾಲಕಿಯರ ಶೈಕ್ಷಣಿಕ ಬೆಳವಣಿಗೆಯು ಪ್ರೌಢಶಾಲೆ ಹಂತದಲ್ಲಿ ಮಂದವಾಗುತ್ತದೆ ಮತ್ತು ಪದವಿಪೂರ್ವ ಹಂತದಲ್ಲಿ ಅದು ನಿಕೃಷ್ಟವಾಗಿ ಬಿಡುತ್ತದೆ. ಈ ಬಗೆಯ ತಾರತಮ್ಯವನ್ನು ಸರಿಪಡಿಸುವ ದಿಶೆಯಲ್ಲಿ ಪ್ರಯತ್ನಗಳು ನಡೆಯಬೇಕು. ವಿಜಾಪುರ ನಗರದಲ್ಲಿ ಸ್ಥಪನೆಯಾಗಿರುವ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯವು ಇಂತಹ ಲಿಂಗ ತಾರತಮ್ಯಗಳ ನಿವಾರಣೆಗೆ ಅಗತ್ಯವಾದ ಅಧ್ಯಯನಗಳನ್ನು ನಡೆಸುತ್ತದೆಯೆಂದು ನಂಬಬಹುದಾಗಿದೆ.