. ಪ್ರಸ್ತಾವನೆ

ಸಾಂಪ್ರದಾಯಿಕ ಅಭಿವೃದ್ಧಿ ಸಿದ್ಧಾಂತಗಳಲ್ಲಿ ಹಾಗೂ ಅಭಿವೃದ್ಧಿ ಕುರಿತ ನೀತಿ ನಿರೂಪಣೆಗಳಲ್ಲಿ ಸಾಕ್ಷರತೆಯನ್ನು ಸಾಧಿಸಿಕೊಳ್ಳುವ ಕ್ರಮಕ್ಕೆ ಹಾಗೂ ಶಿಕ್ಷಣ ಒದಗಿಸುವ ಬಗ್ಗೆ ಯಾವುದೇ ಸ್ಥಾನವಿರಲಿಲ್ಲ. ಅವುಗಳನ್ನು ಆನುಷಂಗಿಕ ಸಂಗತಿಗಳನ್ನಾಗಿ ಪರಿಭಾವಿಸಿಕೊಳ್ಳಲಾಗಿತ್ತು. ಈ ಬಗ್ಗೆ ೧೯೫೦, ೧೯೬೦ ಹಾಗೂ ೧೯೭೦ರ ದಶಕಗಳ ಅಭಿವೃದ್ಧಿ ಅರ್ಥಶಾಸ್ತ್ರದ ಪಠ್ಯಗಳನ್ನು ಪರಿಶೀಲಿಸಿದರೆ ಅಲ್ಲಿ ಸಾಕ್ಷರತೆ ಮತ್ತು ಪ್ರಾಥಮಿಕ ಶಿಕ್ಷಣದ ಬಗ್ಗೆ ಯಾವುದೇ ಚರ್ಚೆ ಇಲ್ಲದಿರುವುದನ್ನು ಗುರುತಿಸಬಹುದಾಗಿದೆ. ಅಭಿವೃದ್ಧಿಯೊಂದಿಗೆ ಅವು ತನ್ನಷ್ಟಕ್ಕೆ ತಾವೇ ಸ್ವಯಂ ಪ್ರಾಪ್ತವಾಗುವ ಸಂಗತಿಗಳೆಂದು ತಿಳಿಯಲಾಗಿತ್ತು.ಸಾಂಪ್ರದಾಯಿಕ ಅಭಿವೃದ್ಧಿ ಸಿದ್ಧಾಂತ ಕುರಿತ ಪಠ್ಯಗಳಲ್ಲಿ ಸಾಕ್ಷರತೆ ಶಿಕ್ಷಣಗಳಿಗೆ ಅವಕಾಶವನ್ನೇ ನೀಡಿರಲಿಲ್ಲ.ಈ ಮಧ್ಯೆ ಒಂದು ಹಂತದಲ್ಲಿ ಸಾಕ್ಷರತೆ ಶಿಕ್ಷಣಗಳನ್ನು ಒಳಗೊಂಡ ಮಾನವ ಬಂಡವಾಳವೆಂಬ ಪರಿಭಾವನೆಯನ್ನು ಅಭಿವೃದ್ಧಿ ಕುರಿತ ಚರ್ಚೆಗಳಲ್ಲಿ ಬಳಸಲಾಗುತ್ತಿತ್ತು. ಕುಶಲತೆ, ಜ್ಞಾನ, ಆರೋಗ್ಯ, ವಿದ್ವತ್ತು, ಬೌದ್ಧಿಕ ಜಾಣ್ಮೆ ಮುಂತಾದವುಗಳ ಮೊತ್ತವನ್ನೇ ಮಾನವ ಬಂಡವಾಳವೆಂಬ ಪರಿಭಾವನೆಯನ್ನು ರೂಪಿಸಲಾಯಿತು. ಅಭಿವೃದ್ಧಿಯಲ್ಲಿ ಅದರ ಪಾತ್ರ ಕುರಿತಂತೆ ಚರ್ಚೆಗಳು ನಡೆದಿದ್ದಾವೆ. ಆದರೆ ಮಾನವ ಬಂಡವಾಳವೆಂಬುದು ಕೇವಲ ಉನ್ನತ ಶಿಕ್ಷಣ, ಸಂಶೋಧನೆ, ವಿಜ್ಞಾನ, ತಂತ್ರಜ್ಞಾನಗಳನ್ನು ಮಾತ್ರ ಒಳಗೊಳ್ಳುವ ಪರಿಭಾವನೆಯಾಗಿದೆ. ಉದಾಹರಣೆಗೆ ಇತ್ತೀಚೆಗೆ ಪ್ರಕಟವಾಗಿರುವ ಕರ್ನಾಟಕ ಅಭಿವೃದ್ಧಿ ವರತಿ (೨೦೦೭) ಯಲ್ಲಿ ಮಾನವ ಬಂಡವಾಳವನ್ನು ಕೇವಲ ಪ್ರೌಢಶಾಲೆ ಮೆಟ್ರಿಕ್ ಹಾಗೂ ಅದಕ್ಕಿಂತ ಉನ್ನತವಾದ ಶಿಕ್ಷಣವನ್ನು ಮಾತ್ರ ಒಳಗೊಂಡ ಸಂಗತಿಯನ್ನಾಗಿ ಪರಿಗಣಿಸಲಾಗಿದೆ (ಪು. ೧೭೬) ಮಾನವ ಬಂಡವಾಳವನ್ನು ಮಾನವ ಸಂಪನ್ಮೂಲಕ್ಕೆ ಸಂವಾದಿಯಾಗಿ ಬಳಸಲಾಗುತ್ತದೆ. ಜನರನ್ನು ಹೀಗೆ ಸಂಪನ್ಮೂಲವನ್ನಾಗಿ ಬಂಡವಾಳವನ್ನಾಗಿ ಮಾತ್ರ ನೋಡುವ ಕ್ರಮವನ್ನು ಇಂದು ಟೀಕಿಸಲಾಗುತ್ತಿದೆ (ವಿವರಗಳಿಗೆ ನೋಡಿ : ಜೀನ್‌ಡೀಜ್ ಮತ್ತು ಅಮರ್ತ್ಯಸೆನ್, ೨೦೦೨-೦೭)

ಇಂದು ಅಭಿವೃದ್ಧಿ ಕುರಿತ ಚರ್ಚೆಗಳಲ್ಲಿ ಸಾಕ್ಷರತೆ-ಶಿಕ್ಷಣಗಳನ್ನು ಪರಿಭಾವಿಸಿಕೊಳ್ಳುವ ಪರಿಯು ಬದಲಾಗಿದೆ. ಅಮರ್ತ್ಯಸೆನ್, ಮೆಹಬೂಬ್‌ಉಲ್‌ಹಕ್, ಜೀನ್‌ಡ್ರೀಜ್, ಮಾರ್ಥ ನುಸ್‌ಬಾಮ್ ಮುತಾದವರ ಸಂಶೋಧನೆ ಹಾಗೂ ಬರವಣಿಗೆಗಳಿಂದಾಗಿ ಹಾಗೂ ಯುಎನ್‌ಡಿಪಿನಂತಹ ಸಂಸ್ಥೆಗಳ ಪ್ರಯತ್ನ ಹಾಗೂ ಪ್ರಕಟಣೆಗಳಿಂದಾಗಿ ಇಂದು ಸಾಕ್ಷರತೆ ಶಿಕ್ಷಣಗಳನ್ನು ಅಭಿವೃದ್ಧಿಯ ಸಾಧನವೆಂದೂ ಹಾಗೂ ಅದರ ಸಾಧ್ಯವೆಂದೂ ಪರಿಗಣಿಸುವ ಕ್ರಮವೂ ರೂಢಿಗೆ ಬಂದಿದೆ. ಇಂದು ಸಾಕ್ಷರತೆ ಶಿಕ್ಷಣಗಳನ್ನು ಜನರ ಧಾರಣ ಸಾಮರ್ಥ್ಯವನ್ನು ನಿರ್ಧರಿಸುವ ಸಂಗತಿಗಳನ್ನಾಗಿ, ಅಭಿವೃದ್ಧಿಯ ಅಂತರ್ಗತ ಭಾಗವನ್ನಾಗಿ ಪರಿಗಣಿಸಲಾಗುತ್ತಿದೆ.ಜೀನ್‌ಡ್ರೀಜ್ ಮತ್ತು ಅಮರ್ತ್ಯಸೆನ್ ವಾದಿಸುವಂತೆ (೨೦೦೨: ೩೫) ಇಂದು ಅಭಿವೃದ್ಧಿಯನ್ನು ಜನರನ್ನು ಒಳಗೊಳ್ಳುವ ಪ್ರಕ್ರಿಯೆಯಾಗಿ ನೋಡುವ ಸೈದ್ಧಾಂತಿಕ ನೆಲೆಗೆ ಹೆಚ್ಚಿನ ಮನ್ನಣೆ ದೊರೆಯುತ್ತಿದೆ. ವಾಸ್ತವವವಾಗಿ ಇಂದು ಜನರ ಧಾರಣಾ ಸಾಮರ್ಥ್ಯದ ವರ್ಧನೆಯನ್ನು ಅಭಿವೃದ್ಧಿಯೆಂದು ನಿರ್ವಚಿಸಲಾಗುತ್ತಿದೆ. ಜನರ ಧಾರಣಾ ಸಾಮರ್ಥ್ಯವನ್ನು ನಿರ್ಧರಿಸುವ ಹಾಗೂ ಪೋಷಿಸುವ ಬಹುಮುಖ್ಯ ಸಂಗತಿಗಳೆಂದರೆ ಸಾಕ್ಷರತೆ ಮತ್ತು ಶಿಕ್ಷಣ. ಅವು ವಾಸ್ತವವಾಗಿ ಅಭಿವೃದ್ಧಿಯ ಮೌಲ್ಯಮಾಪನ ಮಾನದಂಡಗಳು.

ದುರದೃಷ್ಟದ ಸಂಗತಿಯೆಂದರೆ ಕಳೆದ ನಾಲ್ಕಾರು ದಶಕಗಳಿಂದ ಅಭಿವೃದ್ಧಿ ಪ್ರಕ್ರಿಯೆಯನ್ನು ಕೇವಲ ವರಮಾನ ವರ್ಧನೆಯ ಪ್ರಕ್ರಿಯೆಯನ್ನಾಗಿ ಪರಿಭಾವಿಸಿಕೊಂಡು ಬರಲಾಗಿತ್ತು. ಅಂದರೆ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಿಕೊಳ್ಳಲು ಒತ್ತು ನೀಡುತ್ತಾ ಬರಲಾಯಿತು. ಈ ಕುರಿತು ವಿವರವಾಗಿ ಚರ್ಚೆ ಮಾಡಿರುವ ದೀಪಕ್ ನಯ್ಯರ್ ತಮ್ಮ ಇತ್ತೀಚಿನ ಒಂದು ಪ್ರಬಂಧದಲ್ಲಿ ಸ್ವಾತಂತ್ರ್ಯಾ ನಂತರದ ಕಾಲಾವಧಿಗೆ ಸಂಬಂಧಿಸಿದಂತೆ ವರಮಾನ ವರ್ಧನೆಯು ಜನರನ್ನು ಒಳಗೊಳ್ಳುವ ಅಭಿವೃದ್ದಿಯನ್ನಾಗಿ ಪರಿವರ್ತನೆ ಮಾಡಲು ವಿಫಲವಾಗಿರುವುದೆ ಭಾರತದ ನಿಜವಾದ ವೈಫಲ್ಯವೆಂದು ಪ್ರತಿಪಾದಿಸಿದ್ದಾರೆ (೨೦೦೬)

ಈ ವರಮಾನ ವರ್ಧನೆಯು ಜನರನ್ನು ಒಳಗೊಳ್ಳುವ ಅಭಿವೃದ್ಧಿಯನ್ನಾಗಿ ಪರಿವರ್ತಿಸುವ ದಿಶೆಯಲ್ಲಿ ಮಹತ್ವದ ಪಾತ್ರವಹಿಸುವ ಸಂಗತಿಗಳೆಂದರೆ ಸಾಕ್ಷರತೆ ಮತ್ತು ಶಿಕ್ಷಣ (ಮೆಹಬೂಬ್ ಉಲ್ ಹಕ್ ೧೯೯೬-೨೧) ಶಿಕ್ಷಣದ ಮೇಲಿನ ಬಂಡವಾಳ ಹೂಡಿಕೆಯ ಪಾತ್ರವು ಇಲ್ಲಿ ಬಹಳ ನಿರ್ಣಾಯಕವಾದುದಾಗಿದೆ. ನಮ್ಮ ದೇಶದ ಹನ್ನೊಂದನೆಯ (೨೦೦೭-೨೦೦೨) ಯೋಜನೆಯ ಧೋರಣಾ ಪತ್ರದಲ್ಲಿ ಜನರನ್ನು ಒಳಗೊಳ್ಳುವ ಅಭಿವೃದ್ಧಿಯ ಬಗ್ಗೆ ಮಾತನಾಡಲಾಗಿದೆ. ಅಲ್ಲಿ ಅತ್ಯಂತ ಅಗತ್ಯ ಸೇವೆಗಳಾದ ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಮುಂತಾದ ಸಂಗತಿಗಳನ್ನು ಜನರಿಗೆ ಒದಗಿಸುವ ಬಗ್ಗೆ ಒತ್ತು ನೀಡಲಾಗಿದೆ (ಯೋಜನಾ ಆಯೋಗ, ಭಾರತ ಸರ್ಕಾರ, ೨೦೦೬)

. ಸಾಧನವೋಸಾಧ್ಯವೋ?

ಸಾಕ್ಷರತೆ ಶಿಕ್ಷಣವನ್ನು ಅಭಿವೃದ್ಧಿಯ ಸಾಧನವನ್ನಾಗಿ ಪರಿಭಾವಿಸಿಕೊಳ್ಳುವ ಕ್ರಮ ಗಟ್ಟಿಯಾಗಿ ನೆಲೆಯೂರಿದೆ. ಕಾರ್ಮಿಕರ ಕಾರ್ಯಕ್ಷಮತೆಯು ಶಿಕ್ಷಣದಿಂದ ಉತ್ತಮವಾಗುತ್ತದೆ. ಅಕ್ಷರ ಜ್ಞಾನವುಳ್ಳ ತಾಯಿಯು ಮಗುವನ್ನು ಚೆನ್ನಾಗಿ ಸಾಕುತ್ತಾಳೆ. ತಾಂತ್ರಿಕ ಜ್ಞಾನದಿಂದ ಕೃಷಿಯನ್ನು ಉತ್ತಮಪಡಿಸಬಹುದು ಎಂಬ ನಂಬಿಕೆಗಳು ಸಾಮಜದಲ್ಲಿ ಬೇರುಬಿಟ್ಟಿವೆ. ಇಲ್ಲಿ ಶಿಕ್ಷಣವನ್ನು ಕೇವಲ ಸಾಧನವನ್ನಾಗಿ ಮಾತ್ರ ನೋಡಲಾಗುತ್ತಿದೆ. ಮೆಹಬೂಬ್ ಉಲ್ ಹಕ್, ಅಮರ್ತ್ಯಸೆನ್, ನುಸುಬಾಮ್ ಮುಂತಾದವರ ಪ್ರತಿಪಾದನೆಯೆಂದರೆ ಸಾಕ್ಷರತೆ ಶಿಕ್ಷಣ ತಮ್ಮಷ್ಟಕ್ಕೆ ತಾವು ಮಹತ್ವ ಪಡೆದುಕೊಂಡಿವೆ ಎಂಬುದಾಗಿದೆ. ಸಮಾಜದಲ್ಲಿ ಲಭ್ಯವಿರುವ ಅವಕಾಶಗಳಲ್ಲಿ ಅಗತ್ಯವಾದುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಹಾಗೂ ಸಾಮರ್ಥ್ಯವನ್ನು ಜನರಿಗೆ ಶಿಕ್ಷಣವು ಒದಗಿಯುತ್ತದೆ. ಸಾಕ್ಷರತೆ ಶಿಕ್ಷಣಗಳು ಅಭಿವೃದ್ಧಿಯ ಅಂತರ್ಗತ ಭಾಗಗಳು. ಅವುಗಳಿಲ್ಲದೆ ಅಭಿವೃದ್ಧಿ ಅಪೂರ್ಣ. ಅಭಿವೃದ್ಧಿಯು ಜನರನ್ನು ಒಳಗೊಳ್ಳಬೇಕಾದರೆ ಜನರಿಗೆ ಅಕ್ಷರ ಜ್ಞಾನದ ಅಗತ್ಯವಿದೆ ಹಾಗೂ ಶಿಕ್ಷಣದ ಅಗತ್ಯವಿದೆ. ಸಾಕ್ಷರತೆ ಶಿಕ್ಷಣಗಳಿಗೆ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಎರಡು ಪಾತ್ರಗಳಿವೆ ಎಂಬುದನ್ನು ಇಂದು ಗುರುತಿಸಲಾಗಿದೆ.ಅದು ಅಭಿವೃದ್ಧಿಯ ಸಾಧನವೂ ಹೌದು. ಇದಕ್ಕಿಂತ ಮುಖ್ಯವಾಗಿ ಅದು ಅಭಿವೃದ್ಧಿಯ ಸಾಧ್ಯವೂ ಹೌದು. ಅದು ಅಭಿವೃದ್ಧಿಯ ಅಂತರ್ಗತ ಭಾಗವಾಗಿದೆ. ಬಡತನವನ್ನು ವರಮಾನದ ಕೊರತೆಯ ನೆಲೆಯಿಂದ ನೋಡುವುದು ಒಂದು ಬಗೆ. ಅನಕ್ಷರತೆ ಶಿಕ್ಷಣ ಸೌಲಭ್ಯದಿಂದ ವಂಚಿತರಾದವರ ನೆಲೆಯಿಂದ ಬಡತನವನ್ನು ನೋಡುವುದು ಇನ್ನೊಂದು ಬಗೆ. ವರಮಾನದ ಕೊರತೆಯು ಬಡತನದ ಸೂಚಿ ಮಾತ್ರ ಆಗಿದೆ. ಆದರೆ ಅನಕ್ಷರತೆ ಹಾಗೂ ಶಿಕ್ಷಣ ಸೌಲಭ್ಯದಿಂದ ವಂಚಿತರಾಗುವುದು ಬಡತನದ ಸೂಚಿಯೂ ಹೌದೂ ಹಾಗೂ ಬಡತನದ ಕಾರಣವೂ ಹೌದು. ಜೀನ್‌ಡ್ರೀಜ್ ಮತ್ತು ಅಮರ್ತ್ಯಸೆನ್ ತಮ್ಮ ಭಾರತವನ್ನು ಕುರಿತ ಪ್ರಿದ್ಧ ಕೃತಿಯಲ್ಲಿ ಶಿಕ್ಷಣದ ಐದು ಬಗೆಯ ಪಾತ್ರಗಳನ್ನು ಗುರುತಿಸಿದ್ದಾರೆ. ಅವುಗಳು ಹೀಗಿವೆ:

. ಅಂತಸ್ಥವಾದಿ ಮಹತ್ವ

ಶಿಕ್ಷಣವು ಜನರ ಜ್ಞಾನದ ದಾಹವನ್ನು ತಣಿಸುತ್ತದೆ.ಸಮಾದದಲ್ಲಿ ಜನರಿಗೆ ಉತ್ತಮವಾದ ಉನ್ನತವಾದ ಸ್ಥಾನವನ್ನು ಅದು ಒದಗಿಸುತ್ತದೆ. ಮನುಷ್ಯನಾಗಲು ಶಿಕ್ಷಣ ಅಗತ್ಯ. ಶಿಕ್ಷಣವಿಲ್ಲದೆಯೂ ಮನುಷ್ಯ ಬದುಕಬಹುದು. ಆದರೆ ಸಾಕ್ಷರತೆಯ ಮತ್ತು ಶಿಕ್ಷಣಗಳು ಮನುಷ್ಯರಿಗೆ ಘನತೆಯನ್ನು ತಂದುಕೊಡುತ್ತವೆ.

. ವೈಯಕ್ತಿಕ ನೆಲೆಯಲ್ಲಿ ಉಪಕರಣವಾದಿ ಪಾತ್ರ

ಅದು ಜನರಿಗೆ ಉದ್ಯೋಗದ ಅವಕಾಶಗಳನ್ನು ವಿಸ್ತೃತಗೊಳಿಸುತ್ತದೆ. ಲಭ್ಯವಿರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳುವ ಶಕ್ತಿಯನ್ನು ಅದು ಒದಗಿಸುತ್ತದೆ. ಪತ್ರಿಕೆ ಓದಬಹುದು, ಬಸ್‌ಗಳ ಬೋರ್ಡನ್ನು ಓದಬಹುದು, ಜಗತ್ತಿನ ವಿದ್ಯಮಾನಗಳನ್ನು ತಿಳಿದುಕೊಳ್ಳಬಹುದು.

. ಸಾಮಾಜಿಕ ನೆಲೆಯಲ್ಲಿ ಉಪಕರಣವಾದಿ ಪಾತ್ರ

ಸಾಮಾಜಿಕ ಸಂಗತಿಗಳನ್ನು ಕುರಿತಂತೆ ಚಿಂತಿಸುವ ಚರ್ಚಿಸುವ ಸಾಮರ್ಥ್ಯ ಹಾಗೂ ಅವಕಾಶವನ್ನು ಅವು ಒದಗಿಸುತ್ತವೆ. ಪ್ರಜಾಪ್ರಭುತ್ವಕ್ಕೆ ಅಗತ್ಯವಾದ ಪ್ರಶ್ನೆ ಮಾಡುವ ಗುಣವನ್ನು ಅದು ಬೆಳೆಸುತ್ತದೆ. ಪ್ರಜಾಪ್ರಭುತ್ವದ ಯಶಸ್ಸು ಸಾಕ್ಷರತೆಯನ್ನು ಅವಲಂಬಿಸಿದೆ.

. ಇತರೆ ಉಪಕರಣವಾದಿ ಪಾತ್ರ

ಬಾಲಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸಲು ಶಿಕ್ಷಣದ ಅಗತ್ಯವಿದೆ. ಸಾಮಾಜಿಕ ಸಂಬಂಧಗಳನ್ನು ಅದು ಸಾಧ್ಯವಾಗಿಸುತ್ತದೆ. ಜನರ ಅರಿವಿನ ಕ್ಷಿತಿಜವನ್ನು ವಿಸ್ತರಿಸುತ್ತದೆ.

. ಸಬಲೀಕರಣ ಹಾಗೂ ಬಂಚಿಕೆಯ ಪಾತ್ರ

ಶೋಷಣೆ, ಅಸಮಾನತೆ, ತಾರತಮ್ಯಗಳ ವಿರುದ್ಧ ಸಮಾಜದ ದುರ್ಬಲ ವರ್ಗಗಳು ಹೋರಾಟ ನಡೆಸಲು ಪ್ರೇರಣೆ ಶಿಕ್ಷಣದಿಂದ ದೊರೆಯುತ್ತದೆ.ಸಮಾಜದಲ್ಲಿ ತುಳಿತಕ್ಕೆ ಒಳಗಾದ ಸಮುದಾಯಗಳು, ದನಿ ಕಳೆದುಕೊಂಡಿದ್ದ ಸಮುದಾಯಗಳು ದನಿ ಪಡೆದುಕೊಳ್ಳಲು, ತುಳಿತದ ವಿರುದ್ಧ ಸೆಟೆದು ನಿಲ್ಲಲು ಶಿಕ್ಷಣದ ಅಗತ್ಯವಿದೆ.

ಮಾನವ ಅಭಿವೃದ್ಧಿಯನ್ನು ನಿರ್ಧರಿಸುವ ಬಹುಮುಖ್ಯ ಸೂಚಿಯಾದ ಸಾಕ್ಷರತೆ ಶಿಕ್ಷಣದ ಮಹತ್ವವನ್ನು ಇದುವರೆವಿಗೂ ಚರ್ಚಿಸಲಾಗಿದೆ. ವರಮಾನ ವರ್ಧನೆಯ ನೆಲೆಯಿಂದ ದೇಶ – ಪ್ರದೇಶವೊಂದರ ಅಭಿವೃದ್ಧಿಯನ್ನು ಅಳೆಯುವುದು ಅತ್ಯಂತ ಸಿಮೀತವಾದ ಕ್ರಮ. ನಿದರ್ಶನವಾಗಿ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಒಟ್ಟು ಆಂತರಿಕ ಉತ್ಪನ್ನದ (ವರಮಾನ) ದೃಷ್ಟಿಯಿಂದ ರಾಜ್ಯದ ೨೯ ಜಿಲ್ಲೆಗಳ ಪೈಕಿ ೨೦೦೭-೦೮ರಲ್ಲಿ ನಾಲ್ಕನೆಯ ಸ್ಥಾನ ಪಡೆದಿದೆ. ಒಟ್ಟು ಆಂತರಿಕ ತಲಾ ಉತ್ಪನ್ನದಲ್ಲಿ ಅದು ಐದನೆಯ ಸ್ಥಾನ ಪಡೆದಿದೆ. ಇದು ಅತ್ಯಂತ ಶ್ಲಾಘನೀಯವಾದ ಸಂಗತಿಯಾಗಿದೆ. ಆದರೆ ಅಭಿವೃದ್ಧಿಯ ಇತರೆ ಸೂಚಿಗಳಾದ ಸಾಕ್ಷರತೆ, ಪ್ರಾಥಮಿಕ ಶಿಕ್ಷಣ, ಆರೋಗ್ಯ, ಲಿಂಗ ಸಮಾನತೆ ಮುಂತಾದವುಗಳಲ್ಲಿ ಅದರ ಸಾಧನೆ ಅತ್ಯಂತ ಕೆಳಮಟ್ಟದ್ದಾಗಿದೆ. ರಾಜ್ಯದಲ್ಲಿ ಸಾಕ್ಷರತೆಯಲ್ಲಿ (೨೦೦೧) ೨೭ ಜಿಲ್ಲೆಗಳ ಪೈಕಿ ಅದರ ಸ್ಥಾನ ೧೮ನೆಯದು. ಈ ಜಿಲ್ಲೆಯ ತಲಾ ಆದಾಯವು ೨೦೦೭-೦೮ರಲ್ಲಿ ರಾಜ್ಯ ತಲಾ ಆದಾಯದ ಶೇ. ೧೧೩.೧೬ ರಷ್ಟಿದ್ದರೆ ಸಾಕ್ಷರತೆಯು (೨೦೦೧) ರಾಜ್ಯಮಟ್ಟದ ಸಾಕ್ಷರತೆಯ ಶೇ. ೮೬.೧೩ ರಷ್ಟಿದೆ. ಇವರೆಡರ ನಡುವಿನ ಅಂತರವು ಅದರ ಅಭಿವೃದ್ಧಿಯ ಪೊಳ್ಳುತನವನ್ನು ತೋರಿಸುತ್ತದೆ. ಇದಕ್ಕೆ ವಿರುದ್ಧವಾಗಿ ವರಮಾನದ ದೃಷ್ಟಿಯಿಂದ ರಾಜ್ಯದಲ್ಲಿ ಗದಗ ಜಿಲ್ಲೆಯ ಸ್ಥಾನ ೧೫. ಸಾಕ್ಷರತೆಯಲ್ಲಿ ಅದರ ಸ್ಥಾನ ೦೮.

ತಾತ್ಪರ್ಯವೆಂದರೆ ಆರ್ಥಿಕ ಅಭಿವೃದ್ಧಿಯೊಂದಿಗೆ, ಅಂದರೆ ವರಮಾನದ ವರ್ಧನೆಯೊಂದಿಗೆ ಸಾಕ್ಷರತೆ – ಶಿಕ್ಷಣಗಳು ತಮ್ಮಷ್ಟಕ್ಕೆ ತಾವೇ ಉತ್ತಮ ವಾಗುತ್ತವೆಯೆಂದು ಹೇಳಲು ಬರುವುದಿಲ್ಲ. ಆದ್ದರಿಂದ ಸಾಕ್ಷರತೆ ಶಿಕ್ಷಣಗಳನ್ನು ನೇರವಾಗಿ ಸರ್ಕಾರವು ನಿರ್ವಹಿಸಬೇಕಾಗುತ್ತದೆ. ಪ್ರಜ್ಞಾಪೂರ್ವಕ ಪ್ರಯತ್ನವಿಲ್ಲದೆ ಜನರನ್ನು ಅಕ್ಷರಸ್ಥರನ್ನಾಗಿ ಮಾಡುವುದು ಸಾಧ್ಯವಿಲ್ಲ ಯುಎನ್‌ಡಿಪಿಯು ೧೯೯೦ರಿಂದ ಪ್ರಕಟಿಸುತ್ತಿರುವ ಮಾನವ ಅಭಿವೃದ್ಧಿ ವರದಿಗಳು ಸಾಕ್ಷರತೆ ಹಾಗೂ ಪ್ರಾಥಮಿಕ ಶಿಕ್ಷಣದ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಭಾಗ

. ವಿಜಾಪುರ ಜಿಲ್ಲೆಯಲ್ಲಿ ಸಾಕ್ಷರತೆ

ಜನಗಣತಿಯಲ್ಲಿ ಸಾಕ್ಷರತೆಯನ್ನು ಏಳು ಮತ್ತು ಏಳು ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಜನಸಂಖ್ಯೆಯನ್ನು ಆಧರಿಸಿ ಗಣನೆ ಮಾಡಲಾಗುತ್ತದೆ. ಇದನ್ನು ಹತ್ತು ವರ್ಷಗಳಿಗೊಮ್ಮೆ ಜನಗಣತಿಯ ಸಂದರ್ಭದಲ್ಲಿ ಮಾಪ ಮಾಡಲಾಗುತ್ತದೆ. ಪ್ರಸ್ತುತ ಅಧ್ಯಾಯದ ಮೊದಲ ಭಾಗದಲ್ಲಿ ಸಾಕ್ಷರತೆಗೆ ಸಂಬಂಧಿಸಿದ ಸಂಗತಿಗಳನ್ನು ಹಾಗೂ ಎರಡನೆಯ ಭಾಗದಲ್ಲಿ ಪ್ರಾಥಮಿಕ (೧ ರಿಂದ ೧೦ನೆಯ ತರಗತಿಗಳು) ಶಿಕ್ಷಣಕ್ಕೆ ಸಂಬಂಧಿಸಿದ ವಿಜಾಪುರ ಜಿಲ್ಲೆಯ ಸಿದ್ಧಿ ಸಾಧನೆಗಳನ್ನು ಚರ್ಚಿಸಲಾಗಿದೆ. ಈ ದಿಶೆಯಲ್ಲಿ ವಿಜಾಪುರದ ಸಾಧನೆಯು ಅತ್ಯಂತ ಕಳವಳಕಾರಿಯಾಗಿದೆ ಎಂಬುದನ್ನು ಮೊದಲೆ ಸ್ಪಷ್ಟಪಡಿಸಬಹುದು.

ಕೋಷ್ಟಕ ೭೧.ರಲ್ಲಿ ವಿಜಾಪುರ ಜಿಲ್ಲೆಯ ತಾಲ್ಲೂಕುವಾರು ಸಾಕ್ಷರತಾ ಪ್ರಮಾಣವನ್ನು ಎರಡು ಕಾಲಘಟ್ಟಕ್ಕೆ ಸಂಬಂಧಿಸಿದಂತೆ ನೀಡಲಾಗಿದೆ. ಇದರ ಜೊತೆಗೆ ಕೋಷ್ಟಕ ೭.೨ರಲ್ಲಿ ಎರಡು ಕಾಲಘಟ್ಟಗಳ ನಡುವೆ ಸಾಕ್ಷರತೆಯಲ್ಲಿ ಉಂಟಾದ ಏರಿಕೆಯನ್ನು ತಾಲ್ಲೂಕುವಾರು ನೀಡಲಾಗಿದೆ. ವಿಜಾಪುರ ಜಿಲ್ಲೆಯ ಅಕ್ಷರಸ್ಥರ ಸಂಖ್ಯೆ ೧೯೯೧ರಲ್ಲಿ ೬.೧೭ ಲಕ್ಷ. ರಾಜ್ಯದ ಒಟ್ಟು ಅಕ್ಷರಸ್ಥರಲ್ಲಿ (೨೧೦.೧೩ ಲಕ್ಷ) ವಿಜಾಪುರ ಜಿಲ್ಲೆಯ ಐದು ತಾಲ್ಲೂಕುಗಳ ಅಕ್ಷರಸ್ಥರ ಪ್ರಮಾಣ ೧೯೯೧ರಲ್ಲಿ ಶೇ. ೨.೯೩. ವಿಜಾಪುರ ಜಿಲ್ಲೆಯ ಐದು ತಾಲ್ಲೂಕುಗಳ ಜನಸಂಖ್ಯೆಯು ೧೯೯೧ರಲ್ಲಿ ರಾಜ್ಯದ ಜನಸಂಖ್ಯೆಯ ಶೇ. ೩.೪೧ರಷ್ಟಿತ್ತು.

ಆದರೆ ೨೦೦೧ರಲ್ಲಿ ವಿಜಾಪುರ ಜಿಲ್ಲೆಯ ಅಕ್ಷರಸ್ಥರ ಸಂಖ್ಯೆ ೮.೬೭ ಲಕ್ಷ| ರಾಜ್ಯದ ಒಟ್ಟು ಅಕ್ಷರಸ್ಥರಲ್ಲಿ (೩೦೪.೩೫ ಲಕ್ಷ)ವಿಜಾಪುರ ಜಿಲ್ಲಾ ಅಕ್ಷರಸ್ಥರ ಪ್ರಮಾಣ ೨೦೦೧ರಲ್ಲಿ ಶೇ. ೨.೮೫ರಷ್ಟಾಗಿದೆ. ಆದರೆ ಜಿಲ್ಲೆಯು ಜನಸಂಖ್ಯೆಯು ೨೦೦೧ರಲ್ಲಿ ರಾಜ್ಯದ ಜನಸಂಖ್ಯೆಯ ಶೇ. ೩.೪೨ರಷ್ಟಿತ್ತು.

ಅಂದರೆ ಎರಡೂ ಕಾಲಘಟ್ಟಗಳಲ್ಲಿ (೧೯೯೧ ಮತ್ತು ೨೦೦೧) ವಿಜಾಪುರ ಜಿಲ್ಲೆಯ ಐದು ತಾಲ್ಲೂಕುಗಳ ಜನಸಂಖ್ಯೆಯ ಪ್ರಮಾಣವು ರಾಜ್ಯ ಜನಸಂಖ್ಯೆಗೆ ತುಲನಾತ್ಮಕವಾಗಿ ಸರಿಸುಮಾರು ಸಮವಾಗಿ (೧೯೯೧ರಲ್ಲಿ ಶೇ. ೩.೪೧ ಮತ್ತು ೨೦೦೧ ರಲ್ಲಿ ಶೇ. ೩.೪೨) ಮತ್ತು ಸ್ಥಿರವಾಗಿದೆ.

ರಾಜ್ಯದಲ್ಲಿ ಒಟ್ಟು ಅಕ್ಷರಸ್ಥರಲ್ಲಿ ವಿಜಾಪುರ ಜಿಲ್ಲೆಯ ಐದು ತಾಲ್ಲೂಕುಗಳ ಅಕ್ಷರಸ್ಥರ ಪ್ರಮಾಣವು ೧೯೯೧ ರಲ್ಲಿ ಶೇ. ೨.೯೩ರಷ್ಟಿದ್ದುದು ೨೦೦೧ರಲ್ಲಿ ಶೇ. ೨.೮೫ಕ್ಕೆ ಕುಸಿದಿದೆ.

ರಾಜ್ಯದಲ್ಲಿ ಒಟ್ಟು ಅಕ್ಷರಸ್ಥರಲ್ಲಿ ವಿಜಾಪುರ ಜಿಲ್ಲೆಯ ಐದು ತಾಲ್ಲೂಕುಗಳ ಅಕ್ಷರಸ್ಥರ ಪ್ರಮಾಣವು ೧೯೯೧ರಲ್ಲಿ ಶೇ. ೨.೯೩ರಷ್ಟಿದ್ದುದು ೨೦೦೧ರಲ್ಲಿ ಶೇ. ೨.೮೫ಕ್ಕೆ ಕುಸಿದಿದೆ.

ರಾಜ್ಯಕ್ಕೆ ಸಾಪೇಕ್ಷವಾಗಿ ವಿಜಾಪುರ ಜಿಲ್ಲೆಯ ಸಾಕ್ಷರತೆಗೆ ಸಂಬಂಧಿಸಿದ ಸ್ಥಾನವು ಕಡಿಮೆಯಾಗುತ್ತಾ ನಡೆದಿದೆ. ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ವಿಜಾಪುರ ಜಿಲ್ಲೆಯ ಶೈಕ್ಷಣಿಕ ಸಾಧನಾ ಸೂಚಿಯು ೧೯೯೧ರಲ್ಲಿ ೦.೬೦೨ ರಷ್ಟಿದ್ದುದು ೨೦೦೧ರಲ್ಲಿ ೦.೬೪೨ರಷ್ಟಾಗಿದೆ. ಇದರ ಏರಿಕೆ ಪ್ರಮಾಣ ಶೇ. ೧೪.೪೪. ಆದರೆ ಇದೇ ಅವಧಿಯಲ್ಲಿ ರಾಜ್ಯ ಮಟ್ಟದಲ್ಲಿ ಶಿಕ್ಷಣ ಸೂಚಿಯು ೦.೬೦೨ನಿಂದ ೦.೭೧೨ಗೆ ಏರಿಕೆಯಾಗಿದೆ. ಇಲ್ಲಿ ಏರಿಕೆ ಪ್ರಮಾಮ ಶೇ. ೧೮.೨೭. ರಾಜ್ಯದ ಶಿಕ್ಷಣ ಸೂಚಿಯಲ್ಲಿ ವಿಜಾಪುರ ಜಿಲ್ಲಯ ಶಿಕ್ಷಣ ಸೂಚಿಯು ೧೯೯೧ರಲ್ಲಿ ಶೇ. ೯೩.೧೯ ರಷ್ಟಿದ್ದರೆ ೨೦೦೧ ರಲ್ಲಿ ಅದು ಶೇ. ೯೦.೧೭ಕ್ಕೆ ಕುಸಿದಿದೆ.

ಕೋಷ್ಟಕ ೭.೧ರಲ್ಲಿ ತೋರಿಸಿರುವಂತೆ ೧೯೯೧ ರಿಂದ ೨೦೦೧ರ ಹತ್ತು ವರ್ಷಗಳ ಅವಧಿಯಲ್ಲಿ ಸಾಕ್ಷರತಾ ಪ್ರಮಾಣವು ವಿಜಾಪುರ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಹಾಗೂ ಜಿಲ್ಲಾಮಟ್ಟದಲ್ಲಿ ತೀವ್ರ ಏರಿಕೆಯನ್ನು ಕಂಡಿಲ್ಲ. ಇವೆರಡೂ ಕಾಲಘಟ್ಟಗಳ ನಡುವೆ ಸಾಕ್ಷರತೆಯಲ್ಲಿ ಉಂಟಾದ ಏರಿಕೆ ಅಥವಾ ಇಳಿಕೆಯನ್ನು ಕೋಷ್ಟಕ ೭.೨ರಲ್ಲಿ ತೋರಿಸಲಾಗಿದೆ.

ಕೋಷ್ಟಕ ೭.೨ರಲ್ಲಿ ತೋರಿಸಿರುವಂತೆ ಜಿಲ್ಲಾಮಟ್ಟದಲ್ಲಿ ಸಾಕ್ಷರತೆಯು ಶೇ. ೦.೫೫ ಅಂಶಗಳಷ್ಟು ಏರಿಕೆ ಕಂಡಿದೆ. ರಾಜ್ಯಮಟ್ಟದಲ್ಲಿ ಉಂಟಾಗಿರುವ ಏರಿಕೆಯು ಶೇ. ೧೦.೬೦ ಅಂಶಗಳಷ್ಟಾಗಿದೆ. ಕುತೂಹಲದ ಹಾಗೂ ಆತಂಕಕಾರಿಯಾದ ಸಂಗತಿಯೆಂದರೆ ೧೯೯೧ ರಿಂದ ೨೦೦೧ರ ಕಾಲಾವಧಿಯಲ್ಲಿ ವಿಜಾಪುರ ಜಿಲ್ಲೆಯ ಪುರುಷರ ಸಾಕ್ಷರತೆಯು ಶೇ. ೦.೪೯ ಅಂಶಗಳಷ್ಟು ಕಡಿಮೆಯಾಗಿದೆ. ಮಹಿಳೆಯರ ಸಾಕ್ಷರತೆಯು ಇದೇ ಅವಧಿಯಲ್ಲಿ ಶೇ. ೧೭೬ ಅಂಶಗಳಷ್ಟು ಏರಿಕೆಯಾಗಿದೆ. ಸಾಕ್ಷರತೆಗೆ ಸಂಬಂಧಿಸಿದಂತೆ ೧೯೯೧ರಲ್ಲಿ ವಿಜಾಪುರ ಜಿಲ್ಲೆಯ ಐದು ತಾಲ್ಲೂಕುಗಳ ಒಟ್ಟು ಸಾಕ್ಷರತಾ ಪ್ರಮಾಣವು ರಾಜ್ಯಮಟ್ಟದ ೧೯೯೧ರ ಸಾಕ್ಷರತಾ ಪ್ರಮಾಣಕಿಕಂತ ಶೇ. ೦.೪೨ ರಷ್ಟು ಅಧಿಕವಾಗಿತ್ತು. ಆದರೆ ೨೦೦೧ರಲ್ಲಿ ವಿಜಾಪುರ ಜಿಲ್ಲಾ ಸಾಕ್ಷರತಾ ಪ್ರಮಾಣವು ರಾಜ್ಯದ ಸಾಕ್ಷರತಾ ಪ್ರಮಾಣಕ್ಕಿಂತ ಶೇ. ೯.೬೩ ಅಂಶಗಳಷ್ಟು ಕಡಿಮೆಯಿದೆ.

ತಾಲ್ಲೂಕುವಾರು ಸಾಕ್ಷರತಾ ಪ್ರಮಾಣ: ೧೯೯೧ ರಿಂದ೨೦೦೧

ಕೋಷ್ಟಕ .

ತಾಲ್ಲೂಕುಗುಳ

ಸಾಕ್ಷರತಾ ಪ್ರಮಾಣ

೧೯೯೧

೨೦೦೧

ಒಟ್ಟು

ಪು

ಒಟ್ಟು

ಪು

ಬಸವನಬಾಗೇವಾಡಿ

೫೬.೧೭

೭೧.೨೫

೪೦.೬೪

೫೪.೪೩

೬೮.೪೬

೩೯.೯೦

ವಿಜಾಪುರ

೫೭.೬೧

೭೦.೨೫

೬೪.೧೬

೬೨.೯೨

೭೩.೫೫

೫೧.೭೨

ಇಂಡಿ

೬೦.೫೯

೭೨.೦೫

೪೮.೨೧

೫೩.೧೯

೬೫.೬೧

೩೯.೮೧

ಮುದ್ದೇಬಿಹಾಳ

೫೩.೩೮

೭೧.೭೯

೩೪.೭೯

೫೮.೧೮

೭೪.೧೧

೪೨.೦೬

ಸಿಂದಗಿ

೫೨.೬೭

೬೭.೧೬

೩೭.೧೬

೫೨.೧೫

೬೬.೪೧

೩೭.೨೬

ಜಿಲ್ಲೆ

೫೬.೪೬

೭೦.೪೩

೪೧.೭೧

೫೭.೦೧

೬೯.೯೪

೪೩.೪೭

ರಾಜ್ಯ

೫೬.೦೪

೬೭.೨೬

೪೪.೩೪

೬೬.೬೪

೭೬.೧೦

೫೬.೮೭

ಮೂಲ : ಸೆನ್ಸಸ್ ಆಫ್ ಇಂಡಿಯಾ, ೨೦೦೧, ಕರ್ನಾಟಕ ಸಿರೀಸ್ ೩೦, ಪ್ರೈಮರಿ ಸೆನ್ಸಸ್ ಅಬ್ಸ್ಟ್ರಾಕ್ಟ್, ಡೈರೆಕ್ಟರೋಟ್ ಆಫ್ ಸೆನ್ಸ್ಸ್ ಆಪರೇಶನ್ಸ್, ಕರ್ನಾಟಕ ಕರ್ನಾಟಕ ಸರ್ಕಾರ, ೨೦೦೬ ಕರ್ನಾಟಕ ಮಾನವ ಅಭಿವೃದ್ಧಿ ವರಿದಿ ೨೦೦೫

ಈ ಬಗೆಯ ಸಾಕ್ಷರತಾ ಪ್ರಮಾಣದಲ್ಲಿ ೧೯೯೧ರಿಂದ ೨೦೦೧ರ ಕಾಲಾವಧಿಯಲ್ಲಿನ ಬದಲಾವಣೆಗಳನ್ನು ಆತಂಕಕಾರಿಯೆಂದು ಕರೆದಿದ್ದೇವೆ. ಏಕೆಂದರೆ ಸಾಮಾನ್ಯವಾಗಿ ಸಾಕ್ಷರತಾ ಪ್ರಮಾಣವು ಉನ್ನತ ಮಟ್ಟವನ್ನು ತಲುಪಿದ ಮೇಲೆ ಅದರ ಏರಿಕೆ ಗತಿ ಮಂದವಾಗುತ್ತದೆ. ಉದಾಹರಣೆಗೆ ೧೯೯೧ ರಿಂದ ೨೦೦೧ರ ಅವಧಿಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸಾಕ್ಷರತೆ ಕ್ರಮವಾಗಿ ಶೇ. ೬.೭೮ ಮತ್ತು ಶೇ. ೬.೬೧ ಅಂಶಗಳಷ್ಟು ಏರಿಕೆ ಕಂಡಿವೆ. ಈ ಏರಿಕೆಯು ರಾಜ್ಯಮಟ್ಟದಲ್ಲಿನ ಏರಿಕೆಗಿಂತ (ಶೇ. ೧೪.೪೭ ರಷ್ಟು ಏರಿಕೆಯನ್ನು ಅನುಭವಿಸಿದೆ. ಇದು ಸಾಮಾನ್ಯವಾಗಿ ಕಂಡುಬರುವ ಸಂಗತಿ. ಆದರೆ ವಿಜಾಪುರ ಜಿಲ್ಲೆಯ ಸಂದರ್ಭದಲ್ಲಿ ಇಂತಹ ಬದಲಾವಣೆ ಕಂಡು ಬಂದಿಲ್ಲ.ಅದರ ಸಾಕ್ಷರತಾ ಪ್ರಮಾಣ ಕೆಳಮಟ್ಟದಲ್ಲಿದೆ. ಆದರೆ ಏರಿಕೆ ಗತಿ ತುಂಬಾ ಮಂದವಾಗಿದೆ. ಕರ್ನಾಟಕ ಮಾನವ ಅಭಿವೃದ್ಧಿ ವರದಿ ೨೦೦೫ರಲ್ಲಿ ವಿಜಾಪುರ ಜಿಲ್ಲೆಯ ಸಾಕ್ಷರತೆ ಕುರಿತಂತೆ ಒಂದು ಕುತೂಹಲ ಸಂಗತಿಯನ್ನು ಬೆಳಕಿಗೆ ತರಲಾಗಿದೆ. ಅದರ ಪ್ರಕಾರ (ಕರ್ನಾಟಕ ಸರ್ಕಾೞ, ೨೦೦೬, ೧೧೩)

ಸಾಕ್ಷರತೆಯಲ್ಲಿ ದಶಕವಾರು ಏರಿಕೆ : ೧೯೯೧ ರಿಂದ ೨೦೦೧

ಕೋಷ್ಟಕ : .

ತಾಲ್ಲೂಕುಗಳು

ಒಟ್ಟು

ಪುರುಷರು

ಮಹಿಳೆಯರು

ಬಸವನಬಾಗೇವಾಡಿ

 – ೧.೭೪

– ೨.೭೯

– ೦.೭೪

ವಿಜಾಪುರ

೫.೩೧

೩.೩

೭.೫೬

ಇಂಡಿ

– ೭.೪

-೬.೪೪

-೮.೪

ಮುದ್ದೇಬಿಹಾಳ

೪.೮

೨.೩೩

೭.೨೭

ಸಿಂದಗಿ

೦.೫೫

-೦.೪೯

೧.೭೬

ಜಿಲ್ಲೆ

೦.೫೫

-೦.೪೯

೧.೭೬

ರಾಜ್ಯ

೧೦.೬೦

೮.೮೪

೧೨.೫೩

ಮೂಲ : ಸೆನ್ಸಸ್ ಆಫ್ ಇಂಡಿಯಾ, ೨೦೦೧, ಕರ್ನಾಟಕ ಸಿರೀಸ್ ೩೦, ಪ್ರೈಮರಿ ಸೆನ್ಸಸ್ ಅಬ್ಸ್ಟ್ರಾಕ್ಟ್, ಡೈರೆಕ್ಟರೋಟ್ ಆಫ್ ಸೆನ್ಸ್ಸ್ ಆಪರೇಶನ್ಸ್, ಕರ್ನಾಟಕ ಕರ್ನಾಟಕ ಸರ್ಕಾರ, ೨೦೦೬ ಕರ್ನಾಟಕ ಮಾನವ ಅಭಿವೃದ್ಧಿ ವರಿದಿ ೨೦೦೫

ರಾಷ್ಟ್ರೀಯ ಸಾಕ್ಷರತಾ ಮಿಷನ್‌ನ ಕಾರ್ಯಕ್ರಮಕ್ಕಾಗಿ ಆಯ್ಕೆಯಾದ ರಾಜ್ಯದ ಮೊದಲ ಎರಡು ಜಿಲ್ಲೆಗಳೆಂದರೆ ದಕ್ಷಿಣ ಕನ್ನಡ ಮತ್ತು ವಿಜಾಪುರ, ಇವೆರಡೂ ಜಿಲ್ಲೆಗಳ ಪ್ರಗತಿಯನ್ನು ಕೋಷ್ಟಕ ೭.೩ರಲ್ಲಿ ತೋರಿಸಿದೆ. ಈ ಬಗ್ಗೆ ಕರ್ನಾಟಕ ಮಾನವ ಅಭಿವೃದ್ಧಿ ವರದಿಯ ಟೀಕೆ ಹೀಗಿದೆ:

“ರಾಷ್ಟ್ರೀಯ ಸಾಕ್ಷರತಾ ಮಿಷನ್‌ನ ಗುರಿಯಂತೆ ವಿಜಾಪುರ ಜಿಲ್ಲೆಯಲ್ಲಿ ಅನಕ್ಷರತೆಯನ್ನು ನಿರ್ಮೂಲನ ಮಾಡಲಾಗಲಿಲ್ಲ ಹಾಗೂ ಅದು ಯಾವುದೇ ರೀತಿಯ ಸ್ಪಷ್ಟವಾದ ಪರಿಣಾಮ ವನ್ನೇ ಬೀರಿಲ್ಲ ಎಂಬುದು ಈಗ ಮನವರಿಕೆಯಾಗಿದೆ’’ (ಪು.೧೧೨)

ಸಾಕ್ಷರತೆಯಲ್ಲಿ ದಶಕವಾರು ಬೆಳವಣಿಗೆ : ವಿಜಾಪುರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ೧೯೯೧ ಮತ್ತು ೨೦೦೧

ಕೋಷ್ಟಕ : .

ಜಿಲ್ಲೆಗಳು

ಸಾಕ್ಷರತಾ ಪ್ರಮಾಣ

೧೯೯೧

೨೦೦೧

ದಶಕವಾರು ಬೆಳವಣಿಗೆ ಪ್ರಮಾಣ

ಒಟ್ಟು

ಪು

ಒಟ್ಟು

ಪು

ಒಟ್ಟು

ಪು

ವಿಜಾಪುರ

೫೬.೫೫

೭೦.೫೦

೪೧.೮೧

೫೭.೦೧

೬೯.೯೪

೪೩.೪೭

೦.೮೧

-೦.೭೯

೩.೯೭

ದ.ಕನ್ನಡ

೭೬.೭೪

೮೪.೮೮

೬೮.೮೪

೮೩.೫೫

೮೯.೭೦

೭೭.೨೧

೮.೮೭

೫.೬೮

೧೨.೧೬

ಮೂಲ: ಕರ್ನಾಟಕ ಮಾನವ ಅಭಿವೃದ್ಧಿ ವರದಿ : ೨೦೦೫, ಪು. ೧೧೩

ಟಿಪ್ಪಣಿ : ೧೯೯೧ರಲ್ಲಿ ದಕ್ಷಿಣ ಕನ್ನಡವು ಉಡುಪಿಯನ್ನು ವಿಜಾಪುರವು ಬಾಗಲಕೋಟೆಯನ್ನು ಒಳಗೊಂಡಿರುತ್ತದೆ.

ಕೋಷ್ಟಕ ೭.೩ ತೋರಿಸಿರುವಂತೆ ೧೯೯೧ ರಿಂದ ೨೦೦೧ರ ಅವಧಿಯಲ್ಲಿ ಸಾಕ್ಷರತೆಗೆ ಸಂಬಂಧಿಸಿದಂತೆ ವಿಜಾಪುರ ಜಿಲ್ಲೆಯ ಸಾಧನೆಯು ದಕ್ಷಿಣ ಕನ್ನಡ ಜಿಲ್ಲೆಗೆ ಹೋಲಿಸಿದರೆ ಅತ್ಯಂತ ಅತೃಪ್ತಿಕರವಾಗಿದೆ. ಕರ್ನಾಟಕ ಮಾನವ ಅಭಿವೃದ್ಧಿ ವರದಿ ೨೦೦೫ರಲ್ಲಿ ವಿಜಾಪುರ ಜಿಲ್ಲೆಯ ಸಾಕ್ಷರತಾ ಪ್ರಮಾಣವು ೧೯೯೧ ರಿಂದ ೨೦೦೧ರ ದಶಖದಲ್ಲಿ ತೀವ್ರ ಏರಿಕೆಯಾಗಿಲ್ಲವೆಂಬುದನ್ನು ಗುರುತಿಸಿದೆ. ಅದೇ ರೀತಿ ಯೋಜನಾ ಆಯೋಗ ಪ್ರಕಟಿಸಿರುವ ಕರ್ನಾಟಕ ಅಭಿವೃದ್ಧಿ ವರದಿ (೨೦೦೬) ಯಲ್ಲೂ ಇದನ್ನು ದಾಖಲಿಸಲಾಗಿದೆ. ಆದರೆ ಅಲ್ಲಿ ವಿಜಾಪುರ ಜಿಲ್ಲೆಯ ಸಾಕ್ಷರತೆ ೧೯೯೧-೨೦೦೧ರ ಅವಧಿಯಲ್ಲಿ ಯಾಕೆ ಏರಿಕೆಯಾಗಿಲ್ಲವೆಂಬುದನ್ನು ವಿವರವಾಗಿ ವಿಶ್ಲೇಷಿಸಿಲ್ಲ. ಎರಡೂ ವರದಿಗಳು ಇದರ ಬಗ್ಗೆ ಮೌನವಹಿಸಿದೆ.

. ವಿಜಾಪುರ ಜಿಲ್ಲೆಯಲ್ಲಿ ವಯಸ್ಕರ ಸಾಕ್ಷರತಾ ಪ್ರಮಾಣ

ಈ ಅಧ್ಯಯನಕ್ಕಾಗಿ ವಿಜಾಪುರ ಜಿಲ್ಲೆಯ ವಯಸ್ಕರ ಸಾಕ್ಷರತಾ ಪ್ರಮಾಣವನ್ನು ಲೆಕ್ಕ ಹಾಕಲಾಗಿದೆ. ಒಟ್ಟು ಸಾಕ್ಷರತಾ ಪ್ರಮಾಣಕ್ಕಿಂತ ವಯಸ್ಕರ ಸಾಕ್ಷರತಾ ಪ್ರಮಾಣವು ಅನೇಕ ದೃಷ್ಟಿಯಿಂದ ಉಪಯುಕ್ತ ಸೂಚಿಯಾಗಿದೆ. ಒಟ್ಟು ಅಕ್ಷರಸ್ಥರಲ್ಲಿ +೭ ರಿಂದ ೧೪ನೆಯ ವಯೋಮಾನದ ಮಕ್ಕುಳು ಸೇರಿಸುತ್ತಾರೆ. ಈ ಕಾರಣದಿಂದಾಗಿ ಸಾಕ್ಷರತೆಯ ಪ್ರಮಾಣ ಸ್ವಲ್ಪ ಮೇಲ್ಮಟ್ಟದಲ್ಲಿರುತ್ತದೆ. ವಾಸ್ತವವಾಗಿ ಅದು ನಮ್ಮನ್ನು ದಾರಿ ತಪ್ಪಿಸುತ್ತಿರುತ್ತದೆ. ಸಾಕ್ಷರತೆ ಉತ್ತಮವಾಗಿದೆಯೆಂಬ ಭಾವನೆಯನ್ನು ಅದು ಮೂಡಿಸಿಬಿಡುತ್ತದೆ. ಉದಾಹರಣೆಗೆ ೨೦೦೧ರಲ್ಲಿ ವಿಜಾಪುರದ ಒಟ್ಟು ಸಾಕ್ಷರತಾ ಪ್ರಮಾಣವು ಶೇ. ೫೭.೦೧ ರಷ್ಟಿದ್ದರೆ ವಯಸ್ಕರ ಸಾಕ್ಷರತಾ ಪ್ರಮಾಣವು ಶೇ. ೪೨.೫೩ರಷ್ಟಿದೆ. ಇಲ್ಲಿನ ಅಂತರ ಶೇ. ೧೪.೪೮ ಅಂಶಗಳಷ್ಟಿದೆ. ಆದರೆ ರಾಜ್ಯಮಟ್ಟದಲ್ಲಿ ಒಟ್ಟು ಸಾಕ್ಷರತಾ ಪ್ರಮಾಣ ಶೇ. ೬೬.೬೪ರಷ್ಟಿದ್ದರೆ ವಯಸ್ಕರ ಸಾಕ್ಷರತಾ ಪ್ರಮಾಣ ಶೇ. ೫೭.೬೯ರಷ್ಟಿದ್ದರೆ ರಾಜ್ಯಮಟ್ಟದಲ್ಲಿ ಅವರ ಪ್ರಮಾಣ ಕೇವಲ ಶೇ. ೩೧.೫೭. ಇದು ಏನನ್ನು ತೋರಿಸುತ್ತದೆ? ಇದು ಚಾರಿತ್ರಿಕವಾಗಿ ವಿಜಾಪುರ ಜಿಲ್ಲೆಯು ಕೆಳಮಟ್ಟದ ಸಾಕ್ಷರತಾ ಜಿಲ್ಲೆಯಾಗಿದೆ ಎಂಬುದನ್ನು ತೋರಿಸುತ್ತದೆ.

ನೀತಿ ನಿರ್ದೇಶನ ಪರಿಣಾಮ

ವಯಸ್ಕರ ಸಾಕ್ಷರತೆಯನ್ನು ಕುರಿತ ವಿಶ್ಲೇಷಣೆಯು ನೀತಿ ನಿರ್ದೇಶನ ಪರಿಮಾಣವನ್ನು ಹೊಂದಿದೆ. ಈಗಾಗಲೆ ತಿಳಿಸಿರುವಂತೆ ವಿಜಾಪುರ ಜಿಲ್ಲೆಯಲ್ಲಿನ ಅಕ್ಷರಸ್ಥರಲ್ಲಿ +೭ ರಿಂದ ೧೪ ವಯೋಮಾನದವರ ಪ್ರಮಾಣ ಶೇ. ೪೩.೬೬ರಷ್ಟಿದೆ. ಈ ವಯೋಮಾನದ ಮಕ್ಕಳೆಲ್ಲ ಶಾಲೆಯಲ್ಲಿ ದಾಖಲಾಗಿದ್ದಾರೆಂದು ಭಾವಿಸಬಹುದಾಗಿದೆ +೧೫ ವರ್ಷಕ್ಕಿಂತ ಮೇಲ್ಪಟ್ಟ ಜನರ ಸಾಕ್ಷರತಾ ಪ್ರಮಾಣ ತೀವ್ರ ಹೆಚ್ಚಾಗುವುದಿಲ್ಲ.ಅದು ಏನಿದ್ದರೂ +೭ ರಿಂದ ೧೪ ವಯೋಮಾನದ ಗುಂಪಿನಲ್ಲಿ ನಡೆಯಬೇಕು. ಈ ಜಿಲ್ಲೆಯಲ್ಲಿ ಸಾಕ್ಷರತೆಯನ್ನು ಉತ್ತಮ ಪಡಿಸಬೇಕಾದರೆ ಅಲ್ಲಿ ಗಮನ ಶಾಲಾ ದಾಖಲಾತಿಯ ಕಡೆಗಿರಬೇಗು. ವಿಜಾಪುರ ಜಿಲ್ಲೆಯು ಸಾಕ್ಷರತೆಗೆ ಸಂಬಂಧಿಸಿದಂತೆ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದೆ. ಆದ್ದರಿಂದ ಅದು ತನ್ನ ಪ್ರಾಥಮಿಕ ಶಾಲೆಯಲ್ಲಿನ ದಾಖಲಾತಿ ಮತ್ತು ಹಾಜರಾತಿಯ ಕಡೆಗೆ ಗಮನ ನೀಡಬೇಕು. ಆಗ ಮಾತ್ರ ಇಲ್ಲಿನ ಸಾಕ್ಷರತೆಯ ಮಟ್ಟವನ್ನು ಉತ್ತಮ ಪಡಿಸಬಹುದು. ಅದು ೧೯೯೧-೨೦೦೧ರ ದಶಕದಲ್ಲಿ ಏರಿಕೆಯನ್ನು ಅನುಭವಿಸಲಿಲ್ಲ. ಇದನ್ನು ಬಗೆಹರಿಸಿಕೊಳ್ಳಬೇಗಾದರೆ ಜಿಲ್ಲೆಯಲ್ಲಿನ ಪ್ರಾಥಮಿಕ ಶಾಲಾ ವ್ಯವಸ್ಥೆಯನ್ನು ಉತ್ತಮವಾಗಿಟ್ಟುಕೊಳ್ಳಬೇಕು.

ವಯಸ್ಕ ಮಹಿಳಾ ಸಾಕ್ಷರತೆ ೨೦೦೧

ಈಗಾಗಲೇ ನೋಡಿರುವಂತೆ ಸಾಕ್ಷರತಾ ಪ್ರಮಾಣ ಎಲ್ಲಿ ಕೆಳಮಟ್ಟದಲ್ಲಿರುತ್ತದೆಯೋ ಅಲ್ಲಿ ಅದರ ಲಿಂಗ ಸಂಬಂಧಿ ಅಂತರವು ಅಧಿಕವಾಗಿರುತ್ತದೆ. ವಿಜಾಪುರ ಜಿಲ್ಲೆಯಲ್ಲಿ ಒಟ್ಟು ಸಾಕ್ಷರತೆಗೆ ಸಂಬಂಧಿಸಿದಂತೆ ಲಿಂಗ ಸಂಬಂಧಿ ಅಂತರ ಶೇ. ೨೬.೪೭ರಷ್ಟಿದ್ದರೆ ವಯಸ್ಕರ ಸಾಕ್ಷರತೆಗೆ ಸಂಬಂಧಿಸಿದಂತೆ ಅದು ಶೇ. ೩೫.೧೪ರಷ್ಟಿದೆ. ಇದು ಅತ್ಯಂತ ಕಳವಳಕಾರಿಯಾದ ಸಂಗತಿಯಾಗಿದೆ. ರಾಜ್ಯಮಟ್ಟದಲ್ಲಿ ಒಟ್ಟು ಸಾಕ್ಷರತೆಗೆ ಸಂಬಂಧಿಸಿದಂತೆ ಲಿಂಗ ಸಂಬಂಧಿ ಸಾಕ್ಷರತಾ ಅಂತರ ಶೇ. ೧೯.೨೩ರಷ್ಟಿದ್ದರೆ ವಯಸ್ಕರ ಸಾಕ್ಷರತೆಗೆ ಸಂಬಂಧಿಸಿದಂತೆ ಅಂತರ ಶೇ. ೨೪.೬೦ರಷ್ಟಿದೆ. ಇದರಿಂದ ನಾವು ಅನೇಕ ಪಾಠ ಕಲಿಯಬಹುದಾಗಿದೆ. ವಿಜಾಪುರ ಜಿಲ್ಲೆಯಲ್ಲಿ ಸಾಕ್ಷರತೆಯಲ್ಲಿ ಸರಿಸುಮಾರು ಅರ್ಧದಷ್ಟು +೭ ರಿಂದ ೧೪ ವಯೋಮಾನದ ಮಕ್ಕಳ ಪಾಲಿದೆ. ಈ ವಯೋಮಾನದ ಮಕ್ಕಳೆಲ್ಲ ಶಾಲೆಯಲ್ಲಿ ಇರುತ್ತಾರೆಂದು ಭಾವಿಸಿಕೊಂಡರೆ ಮುಂದೆ ಸಾಕ್ಷರತೆಯು ಅಧಿಕಗೊಳ್ಳಬೇಕಾದರೆ ನಾವು ಮುಖ್ಯವಾಗಿ ಶಾಲಾ ದಾಖಲಾತಿಯನ್ನು ಉತ್ತಮ ಮಟ್ಟದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ +೭ ರಿಂದ ೧೪ ವಯೋಮಾನದ ಒಟ್ಟು ಮಕ್ಕಳಲ್ಲಿ ಹೆಣ್ಣುಮಕ್ಕಳ ಪ್ರಮಾಣ ಶೇ. ೪೮ಕ್ಕಿಂತ ಅಧಿಕವಿದೆ. ಇದು ಸ್ವಾಗತಾರ್ಹ ಸಂಗತಿಯಾಗಿದೆ.

ವಿಜಾಪುರ ಜಿಲ್ಲೆಯಲ್ಲಿ ವಯಸ್ಕರ (+೧೫) ಸಾಕ್ಷರತೆ : ೨೦೦೧

ಕೋಷ್ಟಕ .

ಕ್ರ.ಸಂ.

ವಿವರಗಳು

ಒಟ್ಟು

ಪುರುಷರು

ಮಹಿಳೆಯರು

೧. ಒಟ್ಟು ಜನಸಂಖ್ಯೆ ೧,೮೦೬,೯೧೮ ೯೨೬,೪೨೪ ೮೮೦.೪೯೪
೨. ೦.೧೪ ವಯೋಮಾನದ ಜನಸಂಖ್ಯೆ ೬೬೫,೧೮೪ ೩೪೪,೧೩೬ ೩೨೧,೦೪೮
೩. ೦-೬ ವಯೋಮಾನದ ೨೮೬,೮೩೧ ೧೪೮,೭೫೦ ೧೩೮,೦೮೧
೪. +೭ ರಿಂದ ೧೭ ವಯೋಮಾನದ ಜನಸಂಖ್ಯೆ (೨-೩) ೩೭೮,೩೫೩ ೧೯೫,೩೮೬ ೧೮೨,೯೬೭
೫. +೧೫ ವಯೋಮಾನದ ಜನಸಂಖ್ಯೆ (೧-೨) ೧,೧೪೭,೭೩೪ ೫೮೨,೨೮೮ ೫೬೫,೪೪೬
೬. ಅಕ್ಷರಸ್ಥರ ಸಂಖ್ಯೆ ೮೬೬,೫೬೧ ೫೪೩,೮೬೯ ೩೨೨,೬೯೨
೭. +೧೫ ವಯೋಮಾನದ ಅಕ್ಷರಸ್ಥರ ಸಂಖ್ಯೆ (೬-೪) ೪೮೮,೨೦೮ ೩೪೮,೪೮೩ ೧೩೯,೭೨೫
೮. ವಯಸ್ಕರ ಸಾಕ್ಷರತಾ ಪ್ರಮಾಣ (೭/೫) ಶೇ. ೪೨.೫೩ ಶೇ.೫೯.೮೫ ಶೇ.೨೪.೭೧
೯. ಒಟ್ಟು ಸಾಕ್ಷರತಾ ಪ್ರಮಾಣ ಶಂ. ೫೭.೦೧ ಶೇ. ೬೯.೯೫ ಶೇ.೪೩.೪೭

ಮೂಲ : ಸೆನ್ಸಸ್ ಆಫ್ ಇಂಡಿಯಾ ೨೦೦೧.

ಟಿಪ್ಪಣಿ : ಜನಗಣತಿಯಲ್ಲಿ ಮೂಲ ಜನಸಂಖ್ಯಾ ಅಂಕಿಗಳನ್ನು ಬಳಸಿಕೊಂಡು ವಯಸ್ಕರ ಸಾಕ್ಷರತೆಯನ್ನು ಪ್ರಸ್ತುತ ಅಧ್ಯಯನಕ್ಕಾಗಿ ಪ್ರತ್ಯೇಕವಾಗಿ ಲೆಕ್ಕ ಹಾಕಲಾಗಿದೆ.

. ಸಾಕ್ಷರತಾ ಅಂತರಗಳು

ಸಾಕ್ಷರತೆಯೆನ್ನುವುದು ಅಖಂಡವಾದ ಸಂಗತಿಯೇನಲ್ಲ. ಅದನ್ನು ನಾವು ಬಿಡಿಬಿಡಿಯಾಗಿ ನೋಡಬೇಕಾಗುತ್ತದೆ. ಸಾಕ್ಷರತಾ ಪ್ರಮಾಣವು ಗ್ರಾಮೀಣ ಮತ್ತು ನಗರಗಳ ನಡುವೆ ಸಮನಾಗಿರುವುದಿಲ್ಲ. ಅದು ಮಹಿಳೆಯರು ಮತ್ತು ಪುರುಷರ ನಡುವೆ ಸಮನಾಗಿರುವುದಿಲ್ಲ. ಅದೇ ರೀತಿಯಲ್ಲಿ ಅದು ಪರಿಶಿಷ್ಟರು ಮತ್ತು ಶಿಷ್ಟರ ನಡುವೆ ಸಮನಾಗಿರುವುದಿಲ್ಲ.

ಸಾಕ್ಷರತೆಯಲ್ಲಿ ಗ್ರಾಮೀಣನಗರ ಅಂತರ : ೧೯೯೧ ರಿಂದ ೨೦೦೧

ಕೋಷ್ಟಕ.

ಜಿಲ್ಲೆ ರಾಜ್ಯ

ಸಾಕ್ಷರತಾ ಪ್ರಮಾಣ

೧೯೯೧

೨೦೦೧

ಅಂತರ

 

ಗ್ರಾಮೀಣ

ನಗರ

ಗ್ರಾಮೀಣ

ನಗರ

೧೯೯೧

೨೦೦೧

ವಿಜಾಪುರ ೫೩.೦೮ ೭೧.೭೨ ೫೧.೯೭ ೭೪.೫೮ ೧೮.೬೪ -೨೨.೬೧
ಕರ್ನಾಟಕ ರಾಜ್ಯ ೪೭.೬೯ ೭೪.೨೦ ೫೯.೩೩ ೮೦.೫೮ -೨೬.೫೧ -೨೧.೨೫

ಮೂಲ : . ಸೆನ್ಸ್ಸ್ ಆಫ್ ಇಂಡಿಯಾ ೧೯೯೧, ಕರ್ನಾಟಕ ಸಿರೀಸ್ ೧೧

೨. ಸೆನ್ಸ್‌ಸ್ ಆಫ್ ಇಂಡಿಯಾ ೨೦೦೧, ಕರ್ನಾಟಕ ಸಿರೀಸ್ ೩೦

ಈ ಅಧ್ಯಯಾದಲ್ಲಿ ಕೇವಲ ಗ್ರಾಮೀಣ ಮತ್ತು ನಗರಗಳ ನಡುವಿನ ಅಂತರವನ್ನು ಗಮನಿಸಲಾಗಿದೆ. ಅತ್ಯಂತ ಕುತೂಹಲದದ ಸಂಗತಿಯೆಂದರೆ ಗ್ರಮೀಣ ನಗರಗಳ ನಡುವಣ ಸಾಕ್ಷರತಾ ಅಂತರವು ವಿಜಾಪುರ ಜಿಲ್ಲೆಯಲ್ಲಿ ೧೯೯೧ರಲ್ಲಿ ಶೇ. ೧೮.೬೪ ರಷ್ಟಿದ್ದುದು ೨೦೦೧ರಲ್ಲಿ ಅದು ಶೇ. ೨೨.೬೧ಕ್ಕೆರಿದೆ. ಗ್ರಾಮೀಣ ನಗರಗಳ ನಡುವಣ ಸಾಕ್ಷರತಾ ಅಂತರವು ಅಧಿಕಗೊಳ್ಳುತ್ತಿದೆ. ಆದರೆ ರಾಜ್ಯಮಟ್ಟದಲ್ಲಿ ಗ್ರಾಮೀಣ ನಗರಗಳ ನಡುವಿನ ಸಾಕ್ಷರತಾ ಅಂತರವು ೧೯೯೧ರಲ್ಲಿ ಶೇ. ೨೬.೫೧ ಅಂಶಗಳಷ್ಟಿದ್ದುದು ೨೦೦೧ರಲ್ಲಿ ಶೇ. ೨೧.೨೫ಕ್ಕಿಳಿದಿದೆ. ರಾಜ್ಯಮಟ್ಟದಲ್ಲಿ ಅಂತರವು ಕಡಿಮೆಯಾಗುತ್ತಿದ್ದರೆ ವಿಜಾಪುರ ಜಿಲ್ಲೆಯಲ್ಲಿ ಅಂತರವು ಅಧಿಕವಾಗುತ್ತ ನಡೆದಿದೆ. ನಮ್ಮ ಗ್ರಾಮೀಣವು ಜಿಲ್ಲಾ ಮಟ್ಟದಲ್ಲಿ ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಇದರಿಂದ ತಿಳಿಯುತ್ತದೆ. ವಿಜಾಪುರ ಜಿಲ್ಲೆಯು ಪ್ರಧಾನವಾಗಿ ಕೃಷಿ ಆಧಾರಿತ (ಶೇ. ೭೦.೧೪) ಹಾಗೂ ಗ್ರಾಮೀಣವಾಸಿಗಳ (ಶೇ. ೭೮.೦೮) ಜಿಲ್ಲೆಯಾಗಿದೆ. ಈ ಹಿನ್ನೆಲೆಯಲ್ಲಿ ನಾವು ಗ್ರಾಮೀಣ ನಗರ ಅಂತರವನ್ನು ಪರಿಭಾವಿಸಿಕೊಳ್ಳಬೇಕಾಗುತ್ತದೆ. ವಿಜಾಪುರ ಜಿಲ್ಲೆಯಲ್ಲಿನ ಗ್ರಾಮೀಣ ನಗರಗಳ ನಡುವಣ ಸಾಕ್ಷರತಾ ಅಂತರವು ೧೯೯೧ರ ರಾಜ್ಯಮಟ್ಟದಲ್ಲಿನ ಅಂತರಕ್ಕಿಂತ ಕಡಿಮೆಯಿತ್ತು.ಆದರೆ ೨೦೦೧ರಲ್ಲಿ ವಿಜಾಪುರ ಜಿಲ್ಲಾ ಗ್ರಾಮೀಣ – ನಗರ ಸಾಕ್ಷರತಾ ಅಂತರವು ರಾಜ್ಯಮಟ್ಟದ ಅಂತರಕ್ಕಿಂತ ಅಧಿಕವಾಗಿದೆ. ಈ ಬಗೆಯ ಅಂತರವನ್ನು ಕಡಿಮೆ ಮಾಡಲು ಏನು ಮಾಡಲಾಗಿದೆ? ವಾಸ್ತವವಾಗಿ ವಿಜಾಪುರ ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು ಸಾಕ್ಷರತೆಯನ್ನು ಪರಿಗಣಿಸುವುದು ಸೂಕ್ತವ್ಲಲ. ಅಲ್ಲಿ ನಾವು ಗ್ರಾಮೀಣ ಸಾಕ್ಷರತೆಯನ್ನು ಪರಿಗಣಿಸಬೇಕು. ಗ್ರಾಮೀಣ ಸಾಕ್ಷರತೆಯು ಜಿಲ್ಲೆಯಲ್ಲಿ ೧೯೯೧ ಮತ್ತು ೨೦೦೧ರ ನಡುವೆ ಕಡಿಮೆಯಾಗಿದೆ. ಇದಕ್ಕಿಂತ ಮುಖ್ಯವಾಗಿ ೧೯೯೧ರಲ್ಲಿ ವಿಜಾಪುರ ಜಿಲ್ಲೆಯ ಗ್ರಾಮೀಣ ಸಾಕ್ಷರತೆಯು ರಾಜ್ಯಮಟ್ಟದ ಗ್ರಾಮೀಣ ಸಾಕ್ಷರತಾ ಪ್ರಮಾಣಕ್ಕಿಂತ ಅಧಿಕವಾಗಿತ್ತು. ಆದರೆ ೨೦೦೧ರಲ್ಲಿ ಅದರ ಗ್ರಾಮೀಣ ಸಾಕ್ಷರತಾ ಪ್ರಮಾಣವು ರಾಜ್ಯಮಟ್ಟದ ಗ್ರಾಮೀಣ ಸಾಕ್ಷರತಾ ಪ್ರಮಾಣಕ್ಕಿಂತ ಕಡಿಮೆಯಾಗಿದೆ. ಈ ಬದಲಾವಣೆಗೆ ಕಾರಣವೇನು? ಇದನ್ನು ಸರಿಪಡಿಸುವುದು ಹೇಗೆ? ಈ ಕುರಿತಂತೆ ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ.