. ಪ್ರಸ್ತಾವನೆ

ಈ ಅಧ್ಯಾಯದಲ್ಲಿ ವಿಜಾಪುರ ಜಿಲ್ಲೆಯ ವರಮಾನ ವರ್ಧನೆಯ ಪ್ರವೃತ್ತಿಯನ್ನು, ವರಮಾನದ ವಲಯವಾರು ಸಂರಚನೆಯನ್ನು, ದುಡಿಮೆಗಾರರ ರಾಚನಿಕ ಸ್ವರೂಪವನ್ನು ಎರಡು ದಶಖಗಳಿಗೆ ಸಂಬಂಧಿಸಿದಂತೆ ಚರ್ಚಿಸಲಾಗಿದೆ. ಅದೇ ರೀತಿಯಲ್ಲಿ ಮಾನವ ಅಭಿವೃದ್ಧಿಯಲ್ಲಿ ಜಿಲ್ಲೆಯು ಸಾಧಿಸಿಕೊಂಡಿರುವ ಸಾಧನೆಯನ್ನು ವಿಶ್ಲೇಷಿಸಲಾಗಿದೆ. ಈ ಎರಡೂ ನೆಲೆಗಳಲ್ಲಿಯೂ ಅದು ದುಸ್ಥಿತಿ ಅನುಭವಿಸುತ್ತಿರುವ ಪರಿಯನ್ನು ಇಲ್ಲಿ ತೋರಿಸಲಾಗಿದೆ. ನೀಜ, ಈ ಜಿಲ್ಲೆಯು ೧೯೯೭ರಲ್ಲಿ ಅಸ್ತಿತ್ವಕ್ಕೆ ಬಂದಿತು. ಆದರೆ ಈ ವಿಭಜಿತ ಜಿಲ್ಲೆಯ ವರಮಾನ ಮತ್ತು ಮಾನವ ಅಭಿವೃದ್ಧಿ ವಿವರಗಳು ೧೯೯೧ರಿಂದ ನಮಗೆ ದೊರೆಯುತ್ತವೆ. ಸಾಂಪ್ರದಾಯಿಕ ಅಭಿವೃದ್ಧಿ ಸಿದ್ಧಾಂತಗಳಲ್ಲಿ ಒಂದು ಆರ್ಥಿಕತೆಯ ವರಮಾನದ ಹರಿ ಮತ್ತು ದುಡಿಮೆಗಾರರು ಪ್ರಾಥಮಿಕ ವಲಯವನ್ನು ಅಧಿಕವಾಗಿ ಅವಲಂಬಿಸಿದ್ದರೆ ಅದನ್ನು ಹಿಂದುಳಿದ ಆರ್ಥಿಖತೆಯೆಂದು ವರ್ಗೀಕರಿಸಲಾಗುತ್ತದೆ. ಇದಕ್ಕೆ ಪ್ರತಿಯಾಗಿ ವರಮಾನದ ಹರಿ ಮತ್ತು ದುಡಿಮೆಗಾರರ ಅವಲಂಬನೆಯು ಪ್ರಾಥಮಿಕೇತರ ವಲಯಗಳ ಮೇಲೆ ಅಧಿಕವಾಗಿದ್ದರೆ ಅದನ್ನು ಅಭಿವೃದ್ಧಿಯ ಸೂಚಿಸಿಯನ್ನಾಗಿ ಬಳಸಲಾಗುತ್ತದೆ. ಈ ಬಗೆಯ ಅಭಿವೃದ್ಧಿ ಮಾದರಿಯನ್ನು ಮುಂದುವರಿದ ದೇಶಗಳ ಅನುಭವದ ಆಧಾರದ ಮೇಲೆ ರೂಪಿಸಲಾಗಿದೆ. ಈಗ ಅಭಿವೃದ್ಧಿ ಸಾಧಿಸಿಕೊಂಡಿರುವ ಆರ್ಥಿಕತೆಗಳ ಮಾದರಿಯಲ್ಲಿ ನಮ್ಮ ಆರ್ಥಿಕತೆಗಳಲ್ಲಿ ಅಭಿವೃದ್ಧಿಯು ಸಂಭವಿಸುತ್ತಿಲ್ಲ. ಆದರೆ ಅದರಂತೆ ಇಲ್ಲಿಯೂ ಸಂಭವಿಸಬೇಕೆಂದು ತಜ್ಞರು ಬಯಸುತ್ತಾರೆ.

ವರಮಾನದಲ್ಲಿನ ಬೆಳವಣಿಗೆಯು ಅಭಿವೃದ್ಧಿಯ ಸಾದನವೇ ವಿನಾ ಅದೇ ಅಭಿವೃದ್ಧಿಯ ಸೂಚಿಯಲ್ಲವೆಂಬುದು ಇಂದು ಸ್ಪಷ್ಟವಾಗಿದೆ. ಈ ಕೊರತೆಯನ್ನು ತುಂಬಲೆಂದೇ ಮಾನವ ಅಭಿವೃದ್ಧಿ ಪ್ರಣಾಳಿಕೆಯು ರೂಪುಗೊಂಡಿತು. ಈ ಪ್ರಣಾಳಿಕೆಯಲ್ಲಿ ಅಭಿವೃದ್ದಿಯನ್ನು ಅಳೆಯಲು ಮಾನವ ಅಭಿವೃದ್ಧಿ ಸೂಚ್ಯಂಕವೆಂಬ ಸಂಯುಕ್ತ ಮಾಪನವನ್ನು ಮೆಹಬೂಬ್ ಉಲ್ ಹಕ್ ರೂಪಿಸಿದರು. ಈ ಮಾಪನದಲ್ಲಿ ವಿಜಾಪುರ ಜಿಲ್ಲೆಯ ಸ್ಥಿತಿಯು ಹೇಗಿದೆ ಎಂಬುದನ್ನು ಇಲ್ಲಿ ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ. ಈ ಅಧ್ಯಾಯದ ಭಾಗ-೧ರಲ್ಲಿ ವರಮಾನಕ್ಕೆ ಸಂಬಂಧಿಸಿದ ಸಂಗತಿಗಳನ್ನು ಚರ್ಚಿಸಲಾಗಿದೆ. ಭಾಗ-೨ರಲ್ಲಿ ಮಾನವ ಅಭಿವೃದ್ದಿ ಪ್ರವೃತ್ತಿಗಳನ್ನು ವಿವರಿಸಲಾಗಿದೆ.

ಭಾಗ

. ವಿಜಾಪುರ ಜಿಲ್ಲೆಯಲ್ಲಿ ದುಡಿಮೆಗಾರರ ವರ್ಗೀಕರಣ ೨೦೦೧

ಈ ಹಿಂದೆ ವಿಜಾಪುರ ಜಿಲ್ಲೆಯು ಗ್ರಾಮೀಣ ಪ್ರಧಾನ ಜಿಲ್ಲೆಯಂದು ತೋರಿಸಲಾಗಿದೆ(ಕೋಷ್ಠಕ ೪.೩) ಇಲ್ಲಿ ಅದು ಕೃಷಿ ಪ್ರಾಧಾನ ಜಿಲ್ಲೆ ಎಂಬುದನ್ನು ತೋರಿಸಲು ಪ್ರಯತ್ನಿಸಲಾಗಿದೆ (ಕೋಷ್ಟಕ ೫.೧) ಈಗಾಗಲೆ ತೋರಿಸಿರುವಂತೆ ಜಿಲ್ಲೆಯಲ್ಲಿ ಗ್ರಾಮೀಣ ವಾಸಿಗಳ ಪ್ರಮಾಣ ಶೇ. ೭೮.೦೮. ಅದೇ ರೀತಿಯಲ್ಲಿ ಕೃಷಿ ಅವಲಂಬನೆಯ ಪ್ರಮಾಣ ಜಿಲ್ಲೆಯಲ್ಲಿ ಶೇ. ೭೦.೦೮ ಅದೇ ರೀತಿಯಲ್ಲಿ ಕೃಷಿ ಅವಲಂಬನೆಯ ಪ್ರಮಾಣ ಜಿಲ್ಲೆಯಲ್ಲಿ ಶೇ. ೭೦.೧೪ರಷ್ಟಿದೆ.ವ್ಸಾತವವಾಗಿ ಬ.ಬಾಗೇವಾಡಿ, ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳಲ್ಲಿ ಕೃಷಿ ಅವಲಂಬನೆಯು ಶೇ. ೭೫ಕ್ಕಿಂತ ಅಧಿಕವಿದೆ. ಆದರೆ ರಾಜ್ಯಮಟ್ಟದಲ್ಲಿ ಗ್ರಾಮೀಣವಾಸಿಗಳ ಪ್ರಮಾಣ ಶೇ. ೬೬.೦೬ ರಷ್ಟಿದ್ದರೆ ಕೃಷಿ ಅವಲಂಬನೆ ಕೇವಲ ಶೇ. ೫೫.೭೧. ಈ ಎರಡು ಸಂಗತಿಗಳು ನಮಗೆ ಜಿಲ್ಲೆಯ ದುಸ್ಥಿತಿಯ ಸ್ಪಷ್ಟ ಚಿತ್ರವನ್ನ ನೀಡುತ್ತದೆ. ವಿಜಾಪುರ ಜಿಲ್ಲೆಯ ಆರ್ಥಿಕತೆಯ ಚಿತ್ರವನ್ನು ನಾವು ಕೋಷ್ಟಕ ೫.೧ರ ಆಧಾರದ ಮಲೆ ಕಟ್ಟಿಕೊಳ್ಳಬಹುದಾಗಿದೆ.

ತಾಲ್ಲೂಕುವಾರು ದುಡಿಮೆಗಾರರ ವೃತ್ತಿ ಹಂಚಿಕೆ : ೨೦೦೧

ಕೋಷ್ಟಕ .

(ಪ್ರಧಾನ ಮತ್ತು ಉಪಪ್ರಧಾನ)

ತಾಲ್ಲೂಕುಗಳು

ಸಾಗುವಳಿ ದಾರರು

ಕೃಷಿ
ಕಾರ್ಮಿಕರು

ಕೌಟುಂಬಿಕ ಕೈಗಾರಿಕಾ ಕಾರ್ಮಿಕರು

ಇತರೆ
ಕೆಲಸಗಾರರು

ಒಟ್ಟು ಕೆಲಸಗಾರರು

ಬ.ಬಾಗೇವಾಡಿ

೪೦೨೫೧
(೩೦.೨೬)

೬೧೦೫೫
(೪೫.೮೯)

೫೧೧೭
(೩.೮೫)

೨೬೬೦೬
(೨೦.೦೦)

೧೩೩೦೨೯
(೧೦೦.೦೦)

ಬಿಜಾಪುರ

೫೨೩೯೮
(೨೫.೦೪)

೬೩೬೦೧
(೩೦.೪೦)

೫೭೯೭
(೨.೭೭)

೮೭೪೨೯
(೪೧.೭೯)

೨೦೯೨೨೫
(೧೦೦.೦೦)

ಇಂಡಿ

೫೨೭೨೭
(೩೬.೧೮)

೬೩೦೨೦
(೪೩.೨೫)

೩೫೩೩
(೨.೪೩)

೨೬೪೩೭
(೧೮.೧೪)

೨೬೪೩೭
(೧೦೦.೦೦)

ಮುದ್ದೇಬಿಹಾಳ

೨೭೦೭೩
(೨೭.೧೨)

೩೯೨೭೧
(೩೯.೩೩)

೩೨೬೭
(೩.೨೭)

೩೦೨೨೬
(೩೦.೨೮)

೯೯೮೩೭
(೧೦೦.೦೦)

ಸಿಂದಗಿ

೪೪೬೦೭
(೩೪೨೧)

೫೯೭೯೨
(೪೫.೮೫)

೩೪೨೩
(೨.೬೨)

೨೨೫೮೩
(೧೭.೩೨)

೧೩೦೪೦೫
(೧೦೦.೦೦)

ಜಿಲ್ಲೆ

೨೧೭೦೫೬ (೩೦.೨೨)

೨೮೬೭೩೯
(೩೯.೯೨)

೨೧೧೩೭
(೨.೯೪)

೧೯೩೨೮೧
(೨೬೯೨)

೭೧೮೨೧೩
(೧೦೦.೦೦)

ರಾಜ್ಯ

೬೮೮೩೮೫೬ (೨೯.೨೫)

೬೨೨೬೯೪೨
(೨೬.೪೬)

೯೫೯೬೬೫
(೪.೦೮)

೯೪೬೪೩೨೮
(೪೦.೨೧)

೩೫೩೪೭೯೧
(೧೦೦.೦೦)

ಮೂಲ : ಸೆನ್ಸ್ಸ್ ಆಫಿ ಇಂಡಿಯಾ, ೨೦೦೧, ಕರ್ನಾಟಕ ಸೀರೀಸ್ ೩೦, ಪ್ರೈಮರಿ ಸೆನ್ಸ್ಸ್ ಅಬ್ಸ್ಟ್ರಾಕ್ಟ್ ಡೈರೆಕ್ಟೊರೇಟ್ ಆಫ್ ಸೆನ್ಸ್ಸ್ ಆಫರೇಶನ್ಸ್, ಕರ್ನಾಟಕ

ಟಿಪ್ಪಣಿ : ಆವರಣದಲ್ಲಿನ ಅಂಕಿಗಳು ಒಟ್ಟು ಕೆಲಸಗಾರರಿಗೆ ಶೇಕಡ ಪ್ರಮಾಣವನ್ನು ತೋರಿಸುತ್ತವೆ.

ಈ ಕೋಷ್ಟಕದಲ್ಲಿ ಎರಡು ಸಂಗತಿಗಳು ಮುಖ್ಯ. ಮೊದಲನೆಯದಾಗಿ ವಿಜಾಪುರ ಜಿಲ್ಲೆಯಲ್ಲಿ ಕೃಷಿ ಅವಲಂಬನೆ ಸಾಪೇಕ್ಷವಾಗಿ ಅಧಿಕವಾಗಿದೆ. ಎರಡನೆಯದಾಗಿ ಅಲ್ಲಿನ ಕೃಷಿ ಅವಲಂಬಿತರಲ್ಲಿ ಭೂರಹಿತ ಕೂಲಿಕಾರರ ಪ್ರಮಾಣ ಸಾಪೇಕ್ಷವಾಗಿ ಅತ್ಯಧಿಕ. ರಾಜ್ಯಮಟ್ಟದಲ್ಲಿ ೨೦೦೧ರಲ್ಲಿ ಒಟ್ಟು ದುಡಿಮೆಗಾರರಲ್ಲಿ ಕೃಷಿ ಕೂಲಿಕಾರರ ಪ್ರಮಾಣ ಶೇ. ೨೬.೪೬ರಷ್ಟಿದ್ದರೆ ವಿಜಾಪುರ ಜಿಲ್ಲೆಯಲ್ಲಿ ಅವರ ಪ್ರಮಾಣ ಶೇ. ೩೯.೯೨ರಷ್ಟಿದೆ. ಇದನ್ನು ನಾವು ಸ್ಥೂಲವಾಗಿ ಬಡತನದ ಸೂಚಿಯಾಗಿ ಬಳಸಬಹುದಾಗಿದೆ. ಈ ಪ್ರಮಾಣದಲ್ಲಿ ಭೂರಹಿತ ಕೂಲಿಕಾರರಿರುವುದರಿಂದ ಅಲ್ಲಿನ ಆರ್ಥಿಕತೆಯನ್ನು ಹೊಟ್ಟೆ ಬಟ್ಟೆ ಆರ್ಥಿಕತೆಯೆಂದು ಕರೆಯಬಹುದಾಗಿದೆ. ಸಾಮಾನ್ಯವಾಗಿ ಭೂರಹಿತ ಕೂಲಿಕಾರರಲ್ಲಿ ಮಹಿಳೆಯರ ಪ್ರಮಾಣ ಅಧಿಕವಿರುತ್ತದೆ. ಇದೂ ಕೂಡ ಅಲ್ಲಿ ನೆಲೆಗೊಂಡಿರುವ ಬಡತನದ ತೀವ್ರತೆಯನ್ನು ಸೂಚಿಸುತ್ತದೆ. ರಾಜ್ಯಮಟ್ಟದಲ್ಲಿನ ಒಟ್ಟು ಭೂರಹಿತ ಕೂಲಿಕಾರರಲ್ಲಿ ಮಹಿಳೆಯರ ಪ್ರಮಾಣ ಶೇ. ೫೭.೯೧ರಷ್ಟಿದ್ದರೆ ವಿಜಾಪುರ ಜಿಲ್ಲೆಯಲ್ಲಿಯೂ ಅದು ಶೇ. ೫೭.೧೪ರಷ್ಟಿದೆ. ಇವೆಲ್ಲವೂ ವಿಜಾಪುರ ಜಿಲ್ಲೆಯಲ್ಲಿ ದುಸ್ಥಿತಿಯು ರಾಚನಿಕವಾದುದು ಎಂಬುದನ್ನು ದೃಢಪಡಿಸುತ್ತದೆ.

. ವಿಜಾಪುರ ಜಿಲ್ಲೆಯಲ್ಲಿ ವರಮಾನ ವರ್ಧನೆಯ ಪ್ರವೃತ್ತಿ ೧೯೯೧ ರಿಂದ ೨೦೦೮.

ಮೇಲೆ ವಿವರಿಸಿದ ಸಂಗತಿಗಳಿಗೆ ಪೂರಕವಾಗಿ ನಾವು ಜಿಲ್ಲೆಯ ವಲಯವಾರು ವರಮಾನದ ರಚನೆಯನ್ನು ಪರಿಶೀಲಿಸಬಹುದು. ಕೋಷ್ಟಕ ೫.೨ ಮತ್ತು ೫.೩ ರಲ್ಲಿ ಅದನ್ನು ನೀಡಲಾಗಿದೆ. ಇದು ಕುತೂಹಲಕಾರಿ ಮಾಹಿತಿಯನ್ನು ಒದಗಿಸುತ್ತದೆ. ಅಧ್ಯಯನದ ಅನುಕೂಲಕ್ಕೆ ಜಿಲ್ಲೆಯ ವಲಯವಾರು ವರಮಾನ ರಚನೆಯ ವಿವರಗಳನ್ನು ನೀಡುವುದರ ಜೊತೆಗೆ ರಾಜ್ಯದ ಆರ್ಥಿಕತೆಯ ವಲಯವಾರು ವರಮಾನದ ರಚನೆಯ ವಿವರಗಳನ್ನು ನೀಡಲಾಗಿದೆ. ಇದನ್ನು ಎರಡು ಕಾಲಘಟ್ಟಕ್ಕೆ ನೀಡಲಾಗಿದೆ. ಇದರಿಂದ ೧೯೯೯-೨೦೦೦ರಿಂದ ೨೦೦೭-೨೦೦೮ರ ಅವಧಿಯಲ್ಲಿ ವಿಜಾಪುರ ಮತ್ತುರಾಜ್ಯ ಮಟ್ಟದಲ್ಲಿ ಉಂಟಾದ ವರಮಾನದ ರಾಚನಿಕ ಬದಲಾವಣೆಯ ಗತಿಯನ್ನು ಗುರುತಿಸಬಹುದಾಗಿದೆ. ಕೋಷ್ಟಕ ೫.೨ ಮತ್ತು ೫.೩ರಲ್ಲಿ ವಿಜಾಪುರ ಜಿಲ್ಲೆಯ ಮತ್ತು ರಾಜ್ಯದ ವರಮಾನದ ವಲಯವಾರು ರಚನೆಯನ್ನು ನೀಡಲಾಗಿದೆ.

ವಿಜಾಪುರ ಜಿಲ್ಲೆಯ ಒಟ್ಟು ಆಂತರಿಕ ಉತ್ಪನ್ನದ ವಲಯವಾರು ರಚನೆ ೧೯೯೯೨೦೦೦

ಕೋಷ್ಟಕ .

                        (ಚಾಲ್ತಿ ಬೆಲೆಗಳಲ್ಲಿ)           (ರೂಪಾಯಿ ಕೋಟಿಗಳಲ್ಲಿ)

ವಿವರಗಳು

ಪ್ರಾಥಮಿಕ ವಲಯ

ದ್ವಿತೀಯ ವಲಯ

ತೃತೀಯ ವಲಯ

ಒಟ್ಟು ಆರ್ಥಿಕತೆ

ವಿಜಾಪುರ ೧೧೪೩.೧೬ ೩೮೭.೨೨ ೧೧೧೫.೨೫ ೨೬೪೫.೬೩
ಜಿಲ್ಲೆ (ಶೇ.೪೩೨೧) (ಶೇ.೧೪.೬೪) (ಶೇ. ೪೩.೧೫) (ಶೇ.೧೦೦.೦೦)
ಕರ್ನಾಟಕ ೨೮೯೧೮.೨೯ ೨೪೪೨೩.೧೨ ೪೨೮೩೭.೧೯ ೯೬೧೭೮.೬೦
ರಾಜ್ಯ (ಶೇ. ೩೦.೦೭) (ಶೇ. ೨೫.೩೯) (ಶೇ.೪೪.೫೪) (ಶೇ.೧೦೦.೦೦)

ಮೂಲ: ಕರ್ನಾಟಕ ಸರ್ಕಾರ ೨೦೧೦ ಆರ್ಥಿಕ ಸಮೀಕ್ ೨೦೦೯೧೦ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಪು. ೫೮

ಇದರಿಂದ ಸ್ಪಷ್ಟವಾಗುವ ಸಂಗತಿಯೆಂದರೆ ಎರಡೂ ಕಾಲಘಟ್ಟದಲ್ಲಿ ವರಮಾನದ ವಲಯವಾರು ರಾಚನಿಕ ಸ್ವರೂಪವು ರಾಜ್ಯಮಟ್ಟದಲ್ಲಿ ತೀವ್ರಗತಿಯಲ್ಲಿ ಬದಲಾಗುತ್ತಿದ್ದರೆ ವಿಜಾಪುರ ಜಿಲ್ಲೆಯ ಮಟ್ಟದಲ್ಲಿ ಅದು ಮಂದಗತಿಯಲ್ಲಿ ಬದಲಾಗುತ್ತಿದೆ. ಜಿಲ್ಲೆಯಲ್ಲಿ ೧೯೯೯-೨೦೦೦ದಲ್ಲಿಪ್ರಾಥಮಿಕ ವಲಯದಿಂದ ಬರುತ್ತಿದ್ದ ವರಮಾನದ ಪ್ರಮಾಣ ಶೇ. ೪೩.೨೧ ರಿಂದ ೨೦೦೭-೦೮ರಲ್ಲಿ ಶೇ. ೩೫.೯೩ಕ್ಕಿಳಿದಿದೆ. ಆದರೆ ರಾಜ್ಯಮಟ್ಟದಲ್ಲಿ ಅದು ಶೇ. ೩೦.೦೭ ರಿಂದ ಶೇ. ೧೭.೮೮ಕ್ಕಿಳಿದಿದೆ. ಆದರೆ ವರಮಾನಕ್ಕೆ ಪ್ರಾಥಮಿಕೇತರ ವಲಯಗಳ ಕಾಣಿಕ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ ಶೇ. ೫೬.೭೯ರಿಂದ ಶೇ. ೬೪.೦೭ಕ್ಕೇರಿದೆ. ರಾಜ್ಯದಲ್ಲ ಅದು ಇದೇ ಅವಧಿಯಲ್ಲಿ ಶೇ. ೬೯.೯೩ರಿಂದ ಶೇ. ೮೨.೨೨ಕ್ಕೇರಿದೆ.

ವಿಜಾಪುರ ಜಿಲ್ಲೆಯೂಟ್ಟು ಆಂತರಿಕೆ ಉತ್ಪನ್ನದ ವಲಯವಾರು ರಚನೆ ೨೦೦೭೦೮

ಕೋಷ್ಟಕ .

ವಿವರಗಳು

ಪ್ರಥಮಿಕ ವಲಯ

ದ್ವಿತೀಯ ವಲಯ

ತೃತೀಯ ವಲಯ

ಒಟ್ಟು ಆರ್ಥಿಕತೆ

ವಿಜಾಪುರ ೧೮೮೧.೫೦ ೧೦೪೧.೫೧ ೧೩೧೪.೫೭ ೫೨೩೬.೫೮
ಜಿಲ್ಲೆ (ಶೇ.೩೫.೯೩) (ಶೇ.೧೯.೮೭) (ಶೇ. ೪..೨೦) (ಶೇ.೧೦೦.೦೦)
ಕರ್ನಾಟಕ ೪೨೯೨೩೧೪ ೬೭೧೨೧.೪೩ ೧೩೦೦೧೭.೭೬ ೨೪೦೦೬೬.೩೩
ರಾಜ್ಯ (ಶೇ೧೭.೮೮) (ಶೇ.೨೭.೯೬) (ಶೇ.೫೪.೧೬) (ಶೇ.೧೦೦.೦೦)

ಮೂಲ : ಕರ್ನಾಟಕ ಸರ್ಕಾರ ೨೦೧೦ ಆರ್ಥಿಕ ಸಮೀಕ್ಷೆ ೨೦೦೯೧೦ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಪು. ಎ೫೮

ರಾಜ್ಯಪಟ್ಟದಲ್ಲಿ ವರಮಾನದಲ್ಲಿ ಪ್ರಾಥಮಿಕ ವಲಯದ ಪಾಲು ೧೯೯೯-೦೦ ದಿಂದ ೨೦೦೭-೦೮ರ ಅವಧಿಯಲ್ಲಿ ಶೇ. ೪೦.೫೪ರಷ್ಟು ಇಳಿದಿದ್ದರೆ ಜಿಲ್ಲಾ ಮಟ್ಟದಲ್ಲಿ ಅದು ಕೇವಲ ಶೇ. ೧೬.೮೪ರಷ್ಟು ಇಳಿದಿದೆ. ಆದರೆ ರಾಜ್ಯಮಟ್ಟದಲ್ಲಿ ಪ್ರಾಥಮಿಕೇತರ ವಲಯದಿಂದ ಪ್ರಾಪ್ತವಾಗುವ ವರಮಾನವು ೧೯೯೯-೦೦ ದಿಂದ ೨೦೦೭-೦೮ರ ಅವಧಿಯಲ್ಲಿ ಶೇ. ೧೭.೫೭ರಷ್ಟು ಏರಿಕೆಯಾಗಿದ್ದರೆ ಜಿಲ್ಲಾಮಟ್ಟದಲ್ಲಿ ಅದು ಕೇವಲ ಶೇ. ೧೨.೮೨ರಷ್ಟು ಏರಿಕೆಯಾಗಿದೆ. ಈ ರಾಚನಿಕ ವಿವರ ಬಹಳ ಮುಖ್ಯ. ಇದರ ಆಧಾರದ ಮೇಲೆ ಜಿಲ್ಲೆಯ ದುಸ್ಥಿತಿಯ ನೆಲೆಗಳನ್ನು ಕಂಡುಕೊಳ್ಳಬಹುದಾಗಿದೆ. ವಿಜಾಪುರ ಜಿಲ್ಲೆಯ ಆರ್ಥಿಕತೆಯಲ್ಲಿ ರಾಚನಿಕ ಬದಲಾವಣೆಯು ಅತ್ಯಂತ ಮಂದಗತಿಯಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ನಾವು ಜಿಲ್ಲೆಯ ಅಭಿವೃದ್ಧಿಯನ್ನು ಅರ್ಥ ಮಾಡಿಕೊಳ್ಳೆಬೇಕಾಗಿದೆ.

ವಿಜಾಪುರ ಜಿಲ್ಲೆಯ ಒಟ್ಟು ಆಂತರಿಕ ಉತ್ಪನ್ನ ಮತ್ತು ಒಟ್ಟು ಆಂತರಿಕ ತಲಾ ಉತ್ಪನ್ನ ೧೯೯೧೦೮

ಒಂದು ದೇಶದ ಅಥವಾ ಪ್ರದೇಶದ ಅಭಿವೃದ್ಧಿಯನ್ನು ಅದರ ಒಟ್ಟು ಆಂತರಿಕೆ ಉತ್ಪನ್ನದ ವರ್ಧನೆಯ ಆಧಾರದ ಮೇಲೆ ಮತ್ತು ಜನರ ತಲಾ ಆಂತರಿಕ ಉತ್ಪನ್ನದ ವರ್ಧನೆಯ ಆಧಾರದ ಮೇಲೆ ಅಳೆಯುವುದು ರೂಢಿಯಲ್ಲಿದೆ. ಈ ಅಧ್ಯಾಯದ ಭಾಗ ೧ರಲ್ಲಿ ವಿಜಾಪುರ ಜಿಲ್ಲೆಯ ದುಡಿಮೆಗಾರರ ರಚನೆ, ಕೃಷಿಯಾಧಾರ ಮತ್ತು ಕೃಷಿಯೇತರ ದುಡಿಮೆಯ ಅವಕಾಶಗಳ ಲಭ್ಯತೆ ಅಸಲಭ್ಯತೆ ಹಾಗೂ ಜಿಲ್ಲೆಯ ವರಮಾನದ ವಲಯವಾರು ಸಂರಚನೆಯ ಸ್ವರೂಪವನ್ನು ವಿವರಿಸಲಾಗಿದೆ. ಪ್ರಸ್ತುತ ಕಂಡಿಕೆಯಲ್ಲಿ ಜಿಲ್ಲೆಯ ವರಮಾನದ ವಾರ್ಷಿಕ ಬೆಳವಣಿಗೆ ಪರಿಯನ್ನು ಮತ್ತು ರಾಜ್ಯದ ವರಮಾನಕ್ಕೆ ಎದುರಾಗಿ ಜಿಲ್ಲೆಯ ಸ್ಥಾನ ಏನು ಎಂಬುದನ್ನು ವಿವರಿಸಲಾಗಿದೆ. ಇದೊಂದು ತುಲನಾತ್ಮಕ ಅಧ್ಯಯನವಾಗಿದೆ.

ಕೋಷ್ಟಕ ೫.೪ರಲ್ಲಿ ತೋರಿಸಿರುವಂತೆ ವಿಜಾಪುರ ಜಿಲ್ಲಾ ಆರ್ಥಿಕತೆಯು ಬೆಳೆಯುತ್ತಿದೆ. ಅದರ ಒಟ್ಟು ಆಂತರಿಕ ಉತ್ಪನ್ನವು ೧೯೯೦-೯೧ರಲ್ಲಿ ರೂ. ೭೩೫.೩೪ ಕೋಟಿಯಷ್ಟಿದ್ದುದು ೧೯೯೯-೦೦ರಲ್ಲಿ ಅದು ರೂ. ೨೬೪೫.೬೩ ಕ್ಕೇರಿತು.ಅದು ಮತ್ತೆ ೨೦೦೩-೦೪ ರಲ್ಲಿ ರೂ. ೨೬೩೪.೪೫ ಕೋಟಿಗೇರಿದೆ. ಇದು ೨೦೦೭-೦೮ರಲ್ಲಿ ರೂ. ೫೨೩೬.೫೮ ಕೋಟಿ ಯಷ್ಟಾಗಿದೆ. ಒಟ್ಟಾರೆ ವಿಜಾಪುರ ಜಿಲ್ಲೆಯ ಆರ್ಥಿಕತೆಯು ಸ್ಥಗಿತವಾದುದಲ್ಲ.

ವಿಜಾಪುರ ಜಿಲ್ಲೆಯ ವರಮಾನದ ಬೆಳವಣಿಗೆ ಪ್ರಮಾಣ ೧೯೯೧೨೦೦೮

ಕೋಷ್ಟಕ .

ವಿಜಾಪುರ           ಕರ್ನಾಟಕ

ಕ್ರ.ಸಂ

ವರ್ಷಗಳು

ಒಟ್ಟುಜಿಲ್ಲಾ ಆಂತರಿಕ ಉತ್ಪನ್ನ

ಒಟ್ಟು ಆಂತರಿಕ ಜಿಲ್ಲಾ ತಲಾ ಉತ್ಪನ್ನ

ಒಟ್ಯು ರಾಜ್ಯ ಆಂತರಿಕ ಉತ್ಪನ್ನ

ಒಟ್ಟು ಆಂತರಿಕ ರಾಜ್ಯ ತಲಾ ಉತ್ಪನ್ನ

೧. ೧೯೯೦-೯೧ ೭೩೫.೩೪ ೪೮೦೧ ೨೫೦೨೯.೭೦ ೫೬೦೬
೨. ೧೯೯೯-೦೦ ೨೬೪೫.೬೩ ೧೪೮೮೫ ೯೬೧೭೮.೬೦ ೧೮೫೬೧
೩. ೨೦೦೩-೦೪ ೨೮೧೩.೦೨ ೧೫೦೩೬ ೧೩೦೧೨೬.೬೧ ೨೩೮೫೯
೪. ೨೦೦೭-೦೮ ೫೨೩೬.೫೮ ೨೬೭೩೫ ೨೪೦೦೬೨.೩೩ ೪೧೯೦೨

ಮೂಲ. ಕರ್ನಾಟಕ ಸರ್ಕಾರ ೨೦೦೬. ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ ವರದಿ೨೦೦೫

೨. ಕರ್ನಾಟಕ ಸರ್ಕಾರ ೨೦೦೨. ಸ್ಟೇಟ್ ಡೊಮೆಸ್ಟಿಕ್ ಪ್ರಾಡಕ್ಟ್ ೧೯೯೩-೯೪ ನಿಂದ ೨೦೦೦-೨೦೦೧. ಡೈರೆಕ್ಟರೇಟ್ ಆಫ್ ಎಕಾನಾಮಿಕ್ಸ್ ಅಂಡ್ ಸ್ಟಾಟಿಟಿಕ್ಸ್, ಬೆಂಗಳೂರು.

೩. ಕರ್ನಾಟಕ ಸರ್ಕಾರ ೨೦೧೦ ಆರ್ಥಿಕ ಸಮೀಕ್ಷೆ ೨೦೦೯-೧೦ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಬೆಂಗಳೂರು.

ಅದೊಂದು ಚಲನಶೀಲ ಆರ್ಥಿಕತೆಯಾಗಿದೆ. ಅದರ ಒಟ್ಟು ಆಂತರಿಕೆ ಉತ್ಪನ್ನ ಹಾಗೂ ಒಟ್ಟು ಆಂತರಿರ ತಲಾ ಉತ್ಪನ್ನವು ನಿರಂತರವಾಗಿ ಏರಿಕೆಯಾಗುತ್ತಾ ನಡೆದಿವೆ. ಒಟ್ಟು ಆಂತರಿಕ ಉತ್ಪನ್ನವು ೧೯೯೦-೯೧ ರಿಂದ ೧೯೯೯-೦೦ ಅವಧಿಯಲ್ಲಿ ಚಾಲ್ತಿ ಬೆಲೆಗಳಲ್ಲಿ ವಾರ್ಷಿಕ ಶೇ. ೨೫.೯೭ರಷ್ಟು ಬೆಳವಣಿಗೆ ಸಾಧಿಸಿಕೊಂಡಿದೆ. ತದನಂತರ ೧೯೯೯-೦೦ ರಿಂದ ೨೦೦೩-೦೪ರ ಅವಧಿಯಲ್ಲಿ ಅದರ ಬೆಳವಣಿಗೆ ಪ್ರಮಾಣ ವಾರ್ಷಿಕ ಶೇ. ೬.೩೩ ಮುಂದೆ ೨೦೦೩-೦೪ ರಿಂದ ೨೦೦೭-೦೮ರಲ್ಲಿ ಅದರ ಬೆಳವಣಿಗೆ ಪ್ರಮಾಣ ಶೇ. ೧೭.೨೩. ಒಟ್ಟು ಆಂತರಿಕ ಉತ್ಪನ್ನವು ೧೯೯೦೯೧ರಿಂದ ೨೦೦೭-೦೮ರ ಅವಧಿಯಲ್ಲಿ (ಹದಿನೆಂಟು ವರ್ಷಗಳು) ಸಾಧಿಸಿಕೊಂಡ ಬೆಳವಣಇಗೆ ಪ್ರಮಾಣ ವಾರ್ಷಿಕ ಶೇ. ೩೪.೦೧

ಆದರೆ ರಾಜ್ಯಮಟ್ಟದಲ್ಲಿ ಒಟ್ಟು ರಾಜ್ಯ ಆಂತರಿಕ ಉತ್ಪನ್ನದ ಬೆಳವಣಿಗೆಗೆ ಪ್ರಮಾಣ ೧೯೯೦-೯೧ ರಿಂದ ೨೦೦೭-೦೮ರ ಅವಧಿಯಲ್ಲಿ ವಾರ್ಷಿಕ ಶೇ. ೪೭.೭೩ ರಷ್ಟಾಗಿದೆ. ಒಟ್ಟಾರೆ ಜಿಲ್ಲಾ ಮಟ್ಟದಲ್ಲಿ ಒಟ್ಟು ಜಿಲ್ಲಾ ಆಂತರಿಕ ಉತ್ಪನ್ನ ದ ಬೆಳವಣಿಗೆ ಪ್ರಮಾಣವು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಬೆಳವಣಿಗೆ ಪ್ರಮಾಣಕ್ಕಿಂತ ಕೆಳಮಟ್ಟದಲ್ಲಿದೆ. ಈ ಜಿಲ್ಲೆಯ ಒಟ್ಟು ಜಿಲ್ಲಾ ಆಂತರಿಕ ಉತ್ಪನ್ನವು ೧೯೯೦೯೧ರಲ್ಲಿ ರಾಜ್ಯದ ಉತ್ಪನ್ನದ ಶೇ. ೨.೯೪ರಷ್ಟಿದ್ದುದು ೨೦೦೭-೦೮ರಲ್ಲಿ ಶೇ. ೨.೧೮ರಷ್ಟಾಗಿದೆ. ಇದು ಆತಂಕಕಾರಿ ಸಂಗತಿಯಾಗಿದೆ. ರಾಜ್ಯಮಟ್ಟದಲ್ಲಿ ಜಿಲ್ಲೆಯ ಸ್ಥಾನವು ಕುಸಿಯುತ್ತಿದೆ. ಅದೇ ರೀತಿಯಲ್ಲಿ ಜಿಲ್ಲೆಯ ತಲಾ ವರಮಾನವು ೧೯೯೦-೯೧ರಲ್ಲಿರಾಜ್ಯ ತಲಾ ವರಮಾನದ ಶೇ. ೮೫.೬೪ರಷ್ಟಿದ್ದುದು ೨೦೦೭-೦೮ರಲ್ಲಿ ಅದು ಶೇ. ೬೩.೮೦ಕ್ಕಿಳಿದಿದೆ. ಇದು ಮತ್ತೊಂದು ಆತಂಕಕಾರಿ ಸಂಗತಿ. ಇದರಿಂದ ೧೯೯೧ರ ನಂತರ ವಿಜಾಪುರ ಜಿಲ್ಲೆಯ ಸ್ಥಾನವು ರಾಜ್ಯ ಮಟ್ಟದಲ್ಲಿ ಕುಸಿತಕ್ಕೊಳಗಾಗಿದೆ.

ಭಾಗ

. ಆರ್ಥಿಕ ಅಭಿವೃದ್ಧಿ (ವರಮಾನ) ಮತ್ತು ಮಾನವ ಅಭಿವೃದ್ಧಿಗಳ ನಡುವಿನ ಸಂಬಂಧಗಳು

ಆರ್ಥಿಕ ಅಭಿವೃದ್ಧಿ ಮತ್ತು ಮಾನವ ಅಭಿವೃದ್ಧಿಗಳ ನಡುವಣ ಸಂಬಂಧವನ್ನು ಕೂಲಂಕಷವಾಗಿ ಪರಿಶೀಲಿಸುವ ಅಗತ್ಯವಿದೆ. ಏಕೆಂದರೆ ಆರ್ಥಿಕ ಅಭಿವೃದ್ಧಿಯೆಂಬುದು ತನ್ನಷ್ಟಕ್ಕೆ ತಾನೆ ಮಾನವ ಅಭಿವೃದ್ಧಿಯಾಗಿ ಪರಿವರ್ತನೆಗೊಳ್ಳುವುದಿಲ್ಲ. ಆರ್ಥಿಕ ಅಭಿವೃದ್ಧಿ ಉನ್ನತ ಮಟ್ಟ ತಲುಪಿದರೂ ಜನರ ಜೀವನ ಮಟ್ಟವು ತೀವ್ರ ಸಂಕಷ್ಟದಲ್ಲೇ ಇರಬಹುದು. ಒಂದು ಪ್ರಸಿದ್ಧ ಪ್ರಬಂಧದಲ್ಲಿ ಖ್ಯಾತ ಅರ್ಥ ವಿಜ್ಞಾನಿ ದೀಪಕ್ ನಯ್ಯರ್ (೨೦೦೬) ಸ್ವಾತಂತ್ರ್ಯಾ ನಂತರದ ಕಾಲಾವಧಿಯಲ್ಲಿ ವರಮಾನ ವರ್ಧನೆಯನ್ನು ಅಭಿವೃದ್ಧಿಯನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ಸೋತಿರುವುದೇ ಭಾರತದ ಅಥಿಮುಖ್ಯ ವೈಫಲ್ಯವೆಂದು ಗುರುತಿಸಿದ್ದಾರೆ ಆರ್ಥಿಕ ಅಭಿವೃದ್ಧಿಯು ಮಾನವ ಅಭಿವೃದ್ಧಿಯಾಗಿ ಪರಿವರ್ತನೆಯಾಗದಿರುವ ಸಂಗತಿಯನ್ನೇ ಅವರು ಇಲ್ಲಿ ಹೇಳುತ್ತಿದ್ದಾರೆ. ಹನ್ನೊಂದನೆಯ ಯೋಜನೆಯ ಆಶಯ ಪತ್ರಿಕೆಯಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಜನರನ್ನು ಒಳಗೊಳ್ಳುವ ಪ್ರಕ್ರಿಯೆಯನ್ನಾಗಿ ಪರಿವರ್ತಿಸುವ ಅಗತ್ಯದ ಬಗ್ಗೆ ಒತ್ತಿ ಹೇಳಲಾಗಿದೆ. (ಭಾರತ ಸರ್ಕಾರ – ೨೦೦೬). ಜನರನ್ನು ಒಳಗೊಳ್ಳುವ ಅಭಿವೃದ್ಧಿಯೆಂದರೆ ಜನರ ಧಾರಣ ಶಕ್ತಿಯನ್ನು ಸಂವರ್ಧಿಸುವ ಅಭಿವೃದ್ಧಿಯೇ ಆಗಿದೆ. ಆರ್ಥಿಕ ಅಭಿವೃದ್ಧಿ ಮತ್ತು ಮಾನವ ಅಭಿವೃದ್ಧಿಗಳ ನಡುವಣ ಸಂಬಂಧವನ್ನು ಕೆಳಗಿನ ಕೋಷ್ಟಕ ೫.೫ರಲ್ಲಿ ತೋರಿಸಿದೆ.

ಕರ್ನಾಟಕದ ಜಿಲ್ಲೆಗಳನ್ನು ವರಮಾನ ಸಂಬಂಧಿ ಸ್ಥಾನ ಹಾಗೂ ಮಾನವನ ಅಭಿವೃದ್ಧಿ ಸ್ಥಾನವನ್ನು ಆಧಾರವಾಗಿಟ್ಟುಕೊಂಡು ನಾಲ್ಕು ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಮೊದಲ ಗುಂಪಿನ ಎಂಟು ಜಿಲ್ಲೆಗಳು ವರಮಾನ ವರ್ಧನೆಯಲ್ಲಿ ಉನ್ನತ ಮಟ್ಟವನ್ನು ಸಾಧಿಸಿಕೊಂಡಿವೆ. ಆದರೆ ಆರೋಗ್ಯ ಮತ್ತು ಶೈಕ್ಷಣಿಕ ಸಾಧನೆಗಳಿಗೆ ಸಂಬಂಧಿಸಿದಂತೆ. ಅಂದರೆ, ಮಾನವ ಧಾರಣಾ ಸಾಮರ್ಥ್ಯದಲ್ಲಿ ಅವು ವರಮಾನಕ್ಕೆ ಸಮನಾದ ಮಟ್ಟವನ್ನು ಸಾಧಿಸಿಕೊಂಡಿಲ್ಲ. ಈ ಜಿಲ್ಲೆಗಳು ವರ್ಧನೆಯಾದ ವರಮಾನವನ್ನು, ಜನರ ಬದುಕನ್ನಾಗಿ ಮತ್ತು ಜನರನ್ನು ಒಳಗೊಳ್ಳುವಂತೆ ಪರಿವರ್ತನೆ ಮಾಡಿಕೊಳ್ಳಬೇಕಾಗಿದೆ. ಕುತೂಹಲದ ಸಂಗತಿಯೆಂದರೆ ಈ ಗುಂಪಿನ ಬಬುತೇಕ ಜಿಲ್ಲೆಗಳು ಮಧ್ಯಮ ಮಟ್ಟದ ಹಿಂದುಳಿದ ಗುಂಪಿಗೆ ಸೇರುತ್ತದೆ.

ಎರಡನೆಯ ಗುಂಪಿನ ೧೨ ಜಿಲ್ಲೆಗಳು ಮಾನವ ಧಾರಣಾ ಸಾಮರ್ಥ್ಯದ ವರ್ಧನೆಯಲ್ಲಿ ಉನ್ನತ ಮಟ್ಟವನ್ನು ಸಾಧಿಸಿಕೊಂಡಿವೆ. ಮಾನವ ಅಭಿವೃದ್ಧಿಯಲ್ಲಿ ಅವು ಸಾಧಿಸಿಕೊಂಡಿರುವ ಮಟ್ಟವು ವರಮಾನದಲ್ಲಿಸಾಧಿಸಿಕೊಡಿರುವ ಮಟ್ಟಕ್ಕಿಂತ ಉತ್ತಮವಾಗಿದೆ. ಈ ಗುಂಪಿನಲ್ಲಿ ಅಭಿವೃದ್ಧಿ ಹೊಂದಿದ ಮತ್ತುಸಾಧಾರಣ ಅಭಿವೃದ್ಧಿ ಹೊಂದಿದ ಜಿಲ್ಲೆಗಳಿವೆ. ಈ ಜಿಲ್ಲೆಗಳು ವರಮಾನ ಅಭಿವೃದ್ಧಿಯ ಕಡೆಗೆ ಗಮನ ನೀಡುವ ಅಗತ್ಯವಿದೆ.

ಮೂರನೆಯ ಗುಂಪಿನಲ್ಲಿ ರಾಜ್ಯದಲ್ಲಿ ಅತ್ಯಂತ ಮುಂದುವರಿದ ಮೂರು ಜಿಲ್ಲೆಗಳು ಸೇರುತ್ತವೆ.ಇವು ವರಮಾನದ ದೃಷ್ಟಿಯಿಂದ ಮುಂದುವರಿದಿವೆ ಮತ್ತು ಮಾನವ ಅಭಿವೃದ್ಧಿಯಲ್ಲೂ ಉನ್ನತ ಸ್ಥಾನವನ್ನು ಸ್ಥಾಧಿಸಿಕೊಂಡಿವೆ. ಒಂದು ರೀತಿಯಲ್ಲಿ ಇವು ಆದರ್ಶ ಸ್ಥಾನದಲ್ಲಿವೆ. ಈ ವರ್ಗೀಕರಣವು ನೀತಿ ನಿರೂಪಣೆ ದೃಷ್ಟಿಯಿಂದ ಮಹತ್ವದ್ದಾಗಿದೆ.

ಅತ್ಯಂತ ಕುತೂಹಲಕಾರಿ ಹಾಗೂ ಸಂಕೀರ್ಣವಾದ ನಾಲ್ಕನೆಯ ಗುಂಪಿನಲ್ಲಿ ನಾಲ್ಕು ಜಿಲ್ಲೆಗಳಿವ. ಈ ಗುಂಪು ಮಂಡ್ಯ, ಬಿಜಾಪುರ, ರಾಯಚೂರು ಮತ್ತು ಗುಲಬರ್ಗಾ ಜಿಲ್ಲೆಗಳನ್ನು ಒಳಗೊಂಡಿದೆ. ಈ ಗುಂಪಿನ ಜಿಲ್ಲೆಗಳು ವರಮಾನ ಅಭಿವೃದ್ಧಿ ಮತ್ತು ಮಾನವ ಅಭಿವೃದ್ಧಿ ಎರಡರಲ್ಲೂ ಹಿಂದುಳಿದಿವೆ. ಅವು ಇವೆರಡರಲ್ಲೂ ಕೆಳಮಟ್ಟದಲ್ಲಿ ಸಮಾನತೆ ಸಾಧಿಸಿಕೊಂಡಿವೆ. ರಾಜ್ಯದಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಈ ನಾಲ್ಕು ಜಿಲ್ಲೆಗಳು ಸಂಕೀರ್ಣ ಸವಾಲು ಎದುರಿಸುತ್ತಿವೆ.

ಮಾನವ ಅಭಿವೃದ್ಧಿ ಮತ್ತು ಆರ್ಥಿಕ ಅಭಿವೃದ್ಧಿ ಆಧರಿಸಿದ ಜಿಲ್ಲೆಗಳ ವರ್ಗೀಕರಣ

ಕೋಷ್ಟಕ .

ಕ್ರಸಂ

ವರ್ಗೀಕರಣದ ಮಾನದಂಡ

ವರ್ಗೀಕೃತ ಜಿಲ್ಲೆಗಳು

೧. ಆರ್ಥಿಕ ಅಭಿವೃದ್ಧಿ ಉತ್ತಮವಾಗಿದ್ದು ಮಾನವ ಅಭಿವೃದ್ಧಿ ಕೆಳಮಟ್ಟ ದಲ್ಲಿರುವ ಜಿಲ್ಲೆಗಳು ಬಳ್ಳಾರಿ, ಚಾಮರಾಜನಗರ, ಬಾಗಲಕೋಟೆ, ಚಿಕ್ಕಮಗಳೂರು, ಧಾರವಾಡ, ಕೊಪ್ಪಳ, ಬೆಂಗಳೂರು (ಗ್ರಾ) ಮತ್ತು ಮೈಸೂರು (೮)
೨. ಆರ್ಥಿಕ ಅಭಿವೃದ್ಧಿ ಕೆಳಮಟ್ಟದಲ್ಲಿದ್ದು ಮಾನವ ಅಭಿವೃದ್ಧಿ ಉತ್ತಮವಾಗಿರುವ ಜಿಲ್ಲೆಗಳು ಬೆಳಗಾವಿ, ಬೀದರ್, ಚಿತ್ರದುರ್ಗ, ದಾವಣಗೆರೆ, ಗದಗ, ಹಾವೇರಿ, ಹಾಸನ, ಕೋಲಾರ, ಶಿವಮೊಗ್ಗ, ತುಮಕೂರು, ಉಡುಪಿ ಮತ್ತು ಉತ್ತರ ಕನ್ನಡ (೧೨)
೩. ಆರ್ಥಿಕ ಅಭಿವೃದ್ಧಿ ಹಾಗೂ ಮಾನವ ಅಭಿವೃದ್ಧಿ ಎರಡರಲ್ಲೂ ಉನ್ನತ ಸ್ಥಾನ ಪಡೆದ ಜಿಲ್ಲೆಗಳು ಬೆಂಗಳೂರು (ನ) ದಕ್ಷಿಣ ಕನ್ನಡ, ಮತ್ತು ಕೊಡಗು (೦೩)
೪. ಆರ್ಥಿಕ ಅಭಿವೃದ್ಧಿ ಹಾಗೂ ಮಾನವ ಅಭಿವೃದ್ಧಿ ಎರಡರಲ್ಲೂ ಕೆಳಸ್ಥಾನ ಪಡೆದ ಜಿಲ್ಲೆಗಳು ರಾಯಚೂರು, ಗುಲಬರ್ಗಾ ಮತ್ತು ವಿಜಾಪುರ ಮತ್ತು ಮಂಡ್ಯ (೦೪)

ಮೂಲ: ಕರ್ನಾಟಕ ಸರ್ಕಾರ ೨೦೦೬ ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ ವರದಿ೨೦೦೫ಪು.

ಈ ಕೋಷ್ಟಗಳಲ್ಲಿ (೫.೪ ಮತ್ತು ೫.೫) ಸ್ಪಷ್ಟವಾಗಿರುವಂತೆ ಮೊದಲನೆಯ ಗುಂಪಿನಲ್ಲಿರುವ ಜಿಲ್ಲೆಗಳಲ್ಲಿ ವರಮಾನದ ಮಟ್ಟು ಉತ್ತಮವಾಗಿದೆ. ಇಲ್ಲಿ ಏರಿಕೆಯಾಗಿರುವ ವರಮಾನವನ್ನು ಜನರ ಬದುಕನ್ನಾಗಿ ಪರಿವರ್ತಿಸುವ ನೀತಿಗಳನ್ನು ಅಳವಡಿಸಿಕೊಳ್ಳಬೇಕು. ಎರಡನೆಯ ಗುಂಪಿನಲ್ಲಿರುವ ಜಿಲ್ಲೆಗಳು ವರಮಾನದ ವರ್ಧನೆಯನ್ನು ನಿರ್ಲಕ್ಷಿಸಬಾಹದು. ಅವು ವರಮಾನ, ಉತ್ಪಾದನೆ, ಬಂಡವಾಳ ಹೂಡಿಕೆಗಳನ್ನು ಹೆಚ್ಚಿಸುವ ಕ್ರಮಗಳಿಗೆ ಆದ್ಯತೆಯನ್ನು ನೀಡಬೇಕು. ಆದರೆ ಮೂರನೆಯ ಗುಂಪಿನ ಜಿಲ್ಲೆಗಳು ತಾವು ಸಾಧಿಸಿಕೊಂಡಿರುವ ಅಭಿವೃದ್ಧಿಯ ಮಟ್ಟವನ್ನು ಕಾಯ್ದುಕೊಳ್ಳುವ ನೀತಿಗೆ ಹೆಚ್ಚಿನ ಮಗನ ನೀಡಬೇಕು. ನಾಲ್ಕನೆಯ ಗುಂಪಿನಲ್ಲಿನ ಜಿಲ್ಲೆಗಳಲ್ಲಿ ಅಭಿವೃದ್ಧಿಗಾಗಿ ವಿಶೇಷ ಪ್ರಯತ್ನ ನಡೆಯಬೇಕು. ಈ ಸತಿಯನ್ನು ಎತ್ತಿತೋರಿಸುವುದು ಪ್ರಕೃತ ಅಧ್ಯಯನದ ಒಂದು ಉದ್ದೇಶವಾಗಿದೆ. ಈ ಅಧ್ಯಯನವು ನೇರವಾಗಿ ಅಭಿವೃದ್ಧಿ ನೀತಿಗೆ ಸಂಬಂಧಿಸಿದಂತೆ ಅನೇಕ ಸೂಚನೆಗಳನ್ನು ನೀಡುತ್ತದೆ.

ವರಮಾನ ವರ್ಧನೆ ಮತ್ತು ಮಾನವ ಅಭಿವೃದ್ಧಿ ಆದರಿಸಿದ ಕರ್ನಾಟಕದ ಜಿಲ್ಲೆಗಳ ವರ್ಗೀಕರಣ

ಕೋಷ್ಟಕ .

ಜಿಲ್ಲೆಗಳ
ಹೆಸರು

ಆರ್ಥಿಕ
ಆಭಿವೃದ್ಧಿ

ಮಾನವ ಅಭಿವೃದ್ಧಿ ಸ್ಥಾನ (೨೦೦೧)

. ಆರ್ಥಿಕ ಅಭಿವೃದ್ಧಿ ಉತ್ತಮವಾಗಿದ್ದು ಮಾನವ ಅಭಿವೃದ್ಧಿಯು ಕೆಳಮಟ್ಟದಲ್ಲಿರುವ ಜಿಲ್ಲೆಗಳ ಗುಂಪು
೧. ಬಳ್ಳಾರಿ

೦೯ (೧೬೯೦೬)

೧೮(೦.೬೧೭)

೨. ಚಾಮರಾಜನಗರ

೧೭(೧೫೨೫೫)

೨೫ (-.೫೭೬)

೩. ಬಾಗಲಕೋಟೆ

೧೨(೧೭೩೨೦)

೨೨(೦.೫೯೧)

೪. ಚಿಕ್ಕಮಗಳೂರು

೦೬(೨೧೨೪೦)

೦೯(೦.೬೪೭)

೫. ಧಾರವಾಡ

೦೮(೧೯೦೬೪)

೧೦(೦.೬೪೨)

೬. ಕೊಪ್ಪಳ

೧೪(೧೭೨೫೯)

೨೪(೦.೫೮೨)

೭. ಮೈಸೂರು

೦೭(೨೦೪೫೯)

೧೪(೦.೬೩೧)

೮. ಬೆಂಗಳೂರು ಗ್ರಾಮೀಣ

೦೪(೨೫೭೬೨)

೦೬(೦.೬೫೩)

. ಆರ್ಥಿಕ ಅಭಿವೃದ್ಧಿ ಕೆಳಮಟ್ಟದಲ್ಲಿದ್ದು ಮಾನವ ಅಬಿವೃದ್ಧಿ ಉತ್ತಮವಾಗಿರುವ ಜಿಲ್ಲೆಗಳ ಗುಂಪು
೧. ಬೆಳಗಾವಿ

೧೩(೧೬೯೦೨)

೮(೦.೬೪೮)

೨. ಬೀದರ್

೨೬(೧೨೨೭೩)

೨೧(೦.೫೯೯)

೩. ಚಿತ್ರದುರ್ಗ

೧೮(೧೪೯೩೦)

೧೬(೦.೬೨೭)

೪. ದಾವಣಗೆರೆ

೧೯(೧೫೪೪೩)

೧೨(೦.೬೩೫)

೫. ಗದಗ

೧೫(೧೫೪೯೨)

೧೩(೦.೬೨೪)

೬. ಹಾಸನ

೧೬(೧೫೧೯೯)

೧೧(೦.೬೩೯)

೭. ಹಾವೇರಿ

೨೪(೧೩೪೦೭)

೨೦(೦.೬೩೦)

೮. ಕೋಲಾರ

೨೧(೧೫೧೦೭)

೧೭(೦.೬೨೫)

೯. ಶಿವಮೊಗ್ಗ

೧೦(೧೮೪೫೫)

೦೫(೦.೬೭೩)

೧೦. ತುಮಕೂರು

೨೨(೧೪೪೨೬)

೧೫(೦.೬೩೦)

೧೧. ಉಡುಪಿ

೦೫(೨೩೩೬೨)

೦೩(೦.೭೧೪)

೧೨. ಉತ್ತರ ಕನ್ನಡ

೧೧(೧೮೨೫೬)

೦೭(೦.೬೫೩)

. ಆರ್ಥಿಕ ಅಭಿವೃದ್ದಿ ಮತ್ತು ಮಾನವ ಅಭಿವೃದ್ಧಿ ಎರಡರಲ್ಲೂ ಉನ್ನತ ಮಟ್ಟದಲ್ಲಿರುವ ಜಿಲ್ಲೆಗಳು
೧. ಬೆಂಗಳೂರು ನಗರ

೦೧(೩೭೬೦೬)

೦೧(೦.೭೫೩)

೨. ದಕ್ಷಿಣ ಕನ್ನಡ

೦೨(೩೦೬೦೭)

೦೨(೦.೭೨೨)

೩. ಕೊಡಗು

೦೩(೨೬೨೮೫)

೦೪(೦.೬೯೭)

. ಆರ್ಥಿಕ ಅಭಿವೃದ್ಧಿ ಮತ್ತು ಮಾನವ ಅಭಿವೃದ್ಧಿ ಎರಡರಲ್ಲೂ ಕೆಳಮಟ್ಟದಲ್ಲಿರುವ ಜಿಲ್ಲೆಗಳು
೧. ಮಂಡ್ಯ

೨೦(೧೫೦೪೩)

೧೯(೦.೬೦೯)

೨. ಬಿಜಾಪುರ

೨೩(೧೪೪೦೮)

೨೩(೦.೫೮೯)

೩. ಗುಲಬರ್ಗಾ

೨೫(೧೩೩೪೬)

೨೬(೦.೫೬೪)

೪. ರಾಯಚೂರು

೨೭(೧೧೯೯೭)

೨೭(೦.೫೪೭)

ಮೂಲ: ಕರ್ನಾಟಕ ಸರ್ಕಾರ ೨೦೦೬ ಕರ್ನಾಠಕದಲ್ಲಿ ಮಾನವ ಅಭಿವೃದ್ಧಿ ವರದಿ ೨೦೦೫

ಟಿಪ್ಪಣಿ ; ಎರಡನೆಯ ಅಂಕಣದ ಆವರಣದಲ್ಲಿನ ಅಂಕಿಗಳಲ್ಲಿ ತಲಾ ವರಮಾನವನ್ನೂ, ಮೂರನೆಯ ಅಂಕಣದ ಆವರಣದಲ್ಲಿನ ಅಂಕಿಗಳು ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನು ತೋರಿಸುತ್ತದೆ.

ಕೋಷ್ಟಕ ೫.೫ ರಲ್ಲಿ ರಾಜ್ಯದ ೨೭ ಜಿಲ್ಲೆಗಳ ಅಭಿವೃದ್ಧಿಯನ್ನು ಆಧಾರವಾಗಿಟ್ಟುಕೊಂಡು ವರ್ಗೀಕರಣ ಮಾಡಲಾಗಿದೆ.ಸರ್ಕಾರದ ನೀತಿ ನಿರ್ದೇಶನದ ದೃಷ್ಟಿಯಿಂದ ಈ ಕೋಷ್ಟಕ ಮತ್ತು ವರ್ಗೀಕರಣ ಉಪಯುಕ್ತವಾಗಿದೆ. ಯಾವ ಜಿಲ್ಲೆಯಲ್ಲಿ ಯಾವ ಬಗೆಯ ಅಭಿವೃದ್ಧಿ ನೀತಿಗೆ ಒತ್ತು ನೀಡಬೇಕೆಂಬುದು ಈ ವರ್ಗೀಕರಣದಿಂದ ತಿಳಿಯುತ್ತದೆ. ಈ ಕೋಷ್ಟಕದ ನಾಲ್ಕನೆಯ ಗುಂಪಿನಲ್ಲಿ ವಿಜಾಪುರ, ಗುಲಬರ್ಗಾ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಅಭಿವೃದ್ಧಿಗಾಗಿ ವಿಶೇಷ ಪ್ರಯತ್ನ ನಡೆಸಬೇಕಾಗುತ್ತದೆ. ಏಕೆಂದರೆ ಇವು ವರಮಾನದಲ್ಲೂ ಕೆಳಮಟ್ಟದಲ್ಲಿವೆ ಮತ್ತು ಜನರ ಧಾರಣಾ ಸಾಮರ್ಥ್ಯದ ದೃಷ್ಟಿಯಿಂದಲೂ ಕೆಳಮಟ್ಟದಲ್ಲಿವೆ. ಇಲ್ಲಿ ವರಮಾನ ವರ್ಧನಾ ಅಭಿವೃದ್ಧಿ ನೀತಿಯನ್ನು ಅನುಸರಿಸಿದರೆ ಸಾಕಾಗುವುದಿಲ್ಲ. ಅದಕ್ಕೆ ಪ್ರತಿಯಾಗಿ ಇಲ್ಲಿ ಸರ್ಕಾರವು ನೇರ ಕಾರ್ಯಾಚರಣೆ ನಡೆಸಬೇಕಾಗುತ್ತದೆ.ಇದು ಒಂದು ದೊಡ್ಡ ಸವಾಲು. ಇದನ್ನು ರಾಜ್ಯ ಸರ್ಕಾರವು ವಿಶೇಷವೆಂದು ಪರಿಗಣಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಬಗೆಯ ನೀತಿಯನ್ನು ಒತ್ತಾಯಿಸುವುದು ಪ್ರಸ್ತುತ ಅಧ್ಯಯನದ ಒಂದು ಉದ್ದೇಶವಾಗಿದೆ.

ಮಾನವ ಅಭಿವೃದ್ಧಿಯ ಮೂರು ಸೂಚಿಗಳ ಸ್ಥತಿಗತಿ

ಈಗಾಗಲೇ ಹೇಳಿರುವಂತೆ ಮಾನವ ಅಭಿವೃದ್ಧಿ ಸೂಚ್ಯಂಕವು ಸಂಯುಕ್ತ ಸೂಚಿಯಾಗಿದೆ. ಜಿಡಿಪಿಯಲ್ಲಿ ಒಂದೇ ಒಂದು ಸೂಚಿಯನ್ನು ಬಳಸಿ ಅಭಿವೃದ್ಧಿಯನ್ನು ಅಳತೆ ಮಾಡಲಾಗುತ್ತದ. ಆದರೆ ಮಾನವ ಅಭಿವೃದ್ಧಿ ಸೂಚ್ಯಂಕವು ಶಿಕ್ಷಣ, ಆರೋಗ್ಯ ಮತ್ತು ವರಮಾನಗಳನ್ನು ಒಳಗೊಂಡ ಸಂಯುಕ್ತ ಮಾಪನವಾಗಿದೆ. ಈ ವಿಷಯದಲ್ಲಿ ವಿಜಾಪುರ ಜಿಲ್ಲೆಯ ಸ್ಥಾನವೇನಿದೆ ಎಂಬುದನ್ನು ಚರ್ಚಿಸೋಣ.

ವರಮಾನ ಸಂಬಂಧಿ ಅಭಿವೃದ್ಧಿಯು ನೀಡುವ ಚಿತ್ರಕ್ರಿಂತ ಭಿನ್ನವಾದ ಮತ್ತು ವಿಸ್ತೃತವಾದ ಚಿತ್ರವನ್ನು ಮಾನವ ಅಭಿವೃದ್ಧಿ ಸೂಚ್ಯಂಕವು ಅಭಿವೃದ್ಧಿಯ ಬಗ್ಗೆ ನೀಡುತ್ತದೆ. ಏಕೆಂದರೆ ಇದು ಮೂರು ಸೂಚಿಗಳ ಸಂಯುಕ್ತ ಸೂಚ್ಯಂಕವಾಗಿದೆ. ಕೋಷ್ಟಕ ೫.೭ರಲ್ಲಿ ವಿಜಾಪುರ ಜಿಲ್ಲೆಯ ಅಭಿವೃದ್ದಿಯ ವಿಸ್ತೃತ ಸ್ವರೂಪವನ್ನು ತೋರಿಸಲಾಗಿದೆ.

ಸಾಪೇಕ್ಷವಾಗಿ ೧೯೯೧ರಲ್ಲಿ ವಿಜಾಪುರ ಜಿಲ್ಲೆಯ ಮಾನವ ಅಭಿವೃದ್ಧಿ ಸೂಚ್ಯಂಕವು ರಾಜ್ಚದ ಮಾನವ ಅಭಿವೃದ್ಧಿ ಸೂಚ್ಯಂಕದ ಶೇ. ೯೩.೧೬ರಷ್ಟಿದ್ದುದು ೨೦೦೧ರಲ್ಲಿ ಅದು ಶೇ. ೯೦.೬೨ಕ್ಕಿಳಿಯಿತು. ಆದರೆ ಅದು ೨೦೦೬ರಲ್ಲಿ ಶೇ. ೯೫.೭೪ಕ್ಕೇರಿದೆ. ಈ ಮೂರು ಕಾಲಘಟ್ಟದಲ್ಲಿ ವಿಜಾಪುರದ ಮಾನವ ಅಭಿವೃದ್ಧಿ ಸ್ಥಿತಿಯು ರಾಜ್ಯದ ಮಾನವ ಅಭಿವೃದ್ಧಿ ಸ್ಥಿತಿಗಿಂತ ಕೆಳಮಟ್ಟದಲ್ಲಿರುವುದು ಕಂಡುಬರುತ್ತದೆ.

ಮಾನವ ಅಭಿವೃದ್ಧಿ ಸಚ್ಯಂಕದ ಒಳರಚನೆ ೨೦೦೧

ಕೋಷ್ಟಕ .

 

ವಿವರಗಳು

ಜೀವನಾಯುಷ್ಯ ಆಧಾರಿತ ಆರೋಗ್ಯ ಸೂಚಿ

ಸಾಕ್ಷರತೆ ಮತ್ತು ದಾಖಲಾತಿ ಆಧಾರಿತ ಶಿಕ್ಷಣ ಸೂಚಿ

ನೈಜ ತಲಾ ವರಮಾನ ಸೂಚಿ

ಮಾನವ ಅಭಿವೃದ್ಧಿ ಸೂಚ್ಯಂಕ

ವಿಜಾಪುರ ಜಿಲ್ಲೆ        
೧೯೯೧

೦.೫೭೯೦

೦.೫೬೧

೦.೩೮೧

೦.೫೦೪

೨೦೦೧

೦.೬೨೭

೦.೬೪೩

೦.೪೯೯

೦.೫೮೯

೨೦೦೬

೦.೬೬೯

೦.೭೦೨

೦.೫೨೦

೦.೬೩೦

ಕರ್ನಾಟಕ ರಾಜ್ಯ        
೧೯೯೧

೦.೬೧೮

೦.೬೦೨

೦.೪೦೨

೦.೫೪೧

೨೦೦೧

೦.೮೬೦

೦.೭೧೨

೦.೫೫೯

೦.೬೫೦

೨೦೦೬

೦.೭೪೧

೦.೫೦೪

೦.೭೩೦

೦.೬೫೮

ಮೂಲ : ಕರ್ನಾಟಕ ಸರ್ಕಾರ ೨೦೦೬ ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ ವರದಿ ೨೦೦೫.

ಭಾರತ ಸರ್ಕಾರ ೨೦೦೮. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಾನವ ಅಭಿವೃದ್ಧಿ ವರದಿ ೧೯೯೬ ಮತ್ತು ೨೦೦೬

ಸಾರಾಂಶ

ಒಪ್ಪಂದದಲ್ಲಿ ವಿಜಾಪುರ ಜಿಲ್ಲೆಯ ಅಭಿವೃದ್ಧಿಯು ವರಮಾನ ವರ್ಧನೆಯ ದೃಷ್ಟಿಯಿಂದ ಮತ್ತು ಮಾನವ ಅಭಿವೃದ್ಧಿ ದೃಷ್ಟಿಯಿಂದ ಕೆಳಮಟ್ಟದಲ್ಲಿರುವುದು ಪ್ರಸ್ತುತ ಅಧ್ಯಯನದಿಂದ ತಿಳಿಯುತ್ತದೆ. ಕಳೆದ ೫೦ ವರ್ಷಗಳಲ್ಲಿ ಜಿಲ್ಲೆಯಲ್ಲಿ ಕೃಷಿಯೇತರ ಚಟುವಟಿಕೆಗಳು ವಿಸ್ತೃತವಾಗಿ ಬೆಳೆಯಲಿಲ್ಲ. ಈ ಜಿಲ್ಲೆಯಲ್ಲಿ ಭೂರಹಿತ ಕೃಷಿ ಕೂಲಿಕಾರರ ಪ್ರಮಾಣ ಅಧಿಕವಾಗಿದೆ. ಈ ಜಿಲ್ಲೆಯ ಅಭಿವೃದ್ಧಿ ಸಮಸ್ಯೆಯು ರಾಚನಿಕವಾದುದು ಎಂಬುದು ಇಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಜನರ ಧಾರಣಾ ಸಾಮರ್ಥ್ಯವನ್ನು ಮಾಪನ ಮಾಡುವ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲೂ ಜಿಲ್ಲೆಯ ಸ್ಥಾನ ಕಳವಳಕಾರಿಯಾಗಿದೆ. ಈ ಕಾರಣದಿಂದಾಗಿಯೇ ಈ ಜಿಲ್ಲೆಯ ಅಭಿವೃದ್ಧಿ ಸವಾಲು ಅಗಾಧವಾದುದೆಂದು ಹೇಳಲಾಗುತ್ತದೆ.