. ಪ್ರಸ್ತಾವನೆ

ನಮ್ಮ ಸಮಾಜದ ಸಂದರ್ಭದಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಅಂಚಿನಲ್ಲಿರುವವರು, ವಂಚಿತರು ಹಾಗೂ ಸಾಮಾಜಿಕ ತಾರತಮ್ಯ – ಶೋಷಣೆಗಳಿಗೆ ಒಳಗಾದವರು ಎಂದರೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಸಮೂಹ. ಪರಿಶಿಷ್ಟಜಾತಿ (ಪ.ಜಾ) ಜನಸಮೂಹವು ಸಮಾಜದಲ್ಲಿ ಅನೂಚಾನವಾಗಿ ಹರಿದುಕೊಂಡು ಬರುತ್ತಿದ್ದ ಅಸ್ಪೃಶ್ಯತೆಯ ಅನಿಷ್ಟಕ್ಕೆ ಗುರಿಯಾಗಿದ್ದರು. ಪರಿಶಿಷ್ಟ ಪಂಗಡ (ಪ.ಪಂ.)ದ ಜನಸಮೂಹವು ಒಟ್ಟು ಜನಸಮೂಹದಿಂದ ದೂರದಲ್ಲಿ ಬದುಕು ನಡೆಸುತ್ತಿದ್ದವರು. ಇವರೆಡೂ ಜನ ಸಮೂಹಗಳು ಇಂದಿಗೂ ಸಮಾಜದಲ್ಲಿ ದುಸ್ಥಿತಿ ಅನುಭವಿಸುತ್ತಿದ್ದಾರೆ. ಇದಕ್ಕೆ ಚಾರಿತ್ರಿಕ ಸಾಮಾಜಿಕ ಹಿನ್ನೆಲೆಯಿರುವುದನ್ನು ನಾವು ಮರೆಯಬಾರದು.

ಕರ್ನಾಠಕದ ಅದರಂತೆ ವಿಜಾಪುರ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಪ.ಜಾ. ಜನಸಮೂಹದ್ದು ದೊಡ್ಡ ಪಾಲು. ವಿಜಾಪುರ ಜಿಲ್ಲೆಯಲ್ಲಿ ಪ.ಪಂ. ದ ಪ್ರಮಾಣವು ರಾಜ್ಯಮಟ್ಟದಲ್ಲಿನ ಪ್ರಮಾಣಕ್ಕಿಂತ ಕಡಿಮೆಯಿದೆ. ಅಕ್ಷರಶಃ ನೂರಾರು ಜಾತಿ ಉಪ ಜಾತಿಗಳಿಂದಕೂಡಿರುವ ಜನಸಮೂಹಗಳು ಇವಾಗಿವೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ಪ.ಜಾ. ಮತ್ತು ಪ.ಪಂ. ಜನಸಮೂಹಗಳು ಅಭಿವೃದ್ಧಿಯ ಯಾವುದೇ ಮಾನದಂಡ ಅಥಾ ಸೂಚಿಗಳನ್ನು ತೆಗೆದುಕೊಂಡರೂ ಸಮಾಜದ ಇತರೆ ಜನಸಮೂಹಕ್ಕಿಂತ ಇವರು ಬದುಕು ಹೆಚ್ಚು ದುಸ್ಥಿತಿಯಲ್ಲಿರುವುದು ಬಂದರೆ ಇವರು ಅದರಿಂದ ತೀವ್ರ ವಂಚಿತರಾಗಿದ್ದಾರೆ. ಬಡತನದ ತೀವ್ರತೆ ಇವರಲ್ಲಿ ಅತಿಹೆಚ್ಚು. ಸಾಮಾಜಿಕವಾಗಿ ತಾರತಮ್ಯಗಳಿಗೆ ಒಳಗಾಗಿದ್ದಾರೆ. ಆರ್ಥಿಕವಾಗಿ ದುರ್ಬಲರಾಗಿದ್ದಾರ ರಾಜಕೀಯವಾಗಿ ಅಬಲರಾಗಿದ್ದಾರೆ.

ಇವೆರಡೂ ಜನಸಮೂಹಗಳು ಆರ್ಥಿಕ ಅಭಿವೃದ್ಧಿ ಹಾಗೂ ಮಾನವ ಅಭಿವೃದ್ಧಿ ಎರಡರಲ್ಲೂ ಉಳಿದ ಜನಸಮೂಹಕ್ಕಿಂತ ಹಿಂದುಳಿದವೆ. ಈ ಜನಸಮೂಹಗಳ ಬದುಕನ್ನು ಉತ್ತಮಪಡಿಸುವ ದಿಶೆಯಲ್ಲಿ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಾ ಬಂದಿದೆ. ಆದರೆ ಅವು ಇವರ ಬದುಕನ್ನು ಉತ್ತಮಗೊಳಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಇತ್ತೀಚಿಗಿನ ಸಂಶೋಧನೆಗಳು ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಜಾತಿಗಳು ತಮ್ಮ ಶ್ರೇಣೀಕರಣದ ಸ್ವರೂಪವನ್ನು ಕಳೆದುಕೊಳ್ಳುತ್ತಿವೆಯೆಂದೂ ಮತ್ತು ಅವು ಇಂದು ಕೇವಲ ಭಿನ್ನತೆಯ ಅನನ್ಯತೆಯ ಆಕರಗಳಾಗಿವೆಯೆಂದೂ ಪ್ರತಿಪಾದಿಸುತ್ತಿವೆ (ಜೇಮ್ಸ್ ಮೇನರ್, ೨೦೦೭, ಎಂ.ಎನ್. ಶ್ರೀನಿವಾಸ್ ೨೦೦೫)

ಒಟ್ಟು ಜನಸಂಖ್ಯೆಯಲ್ಲಿ .ಜಾ. ಮತ್ತು .ಪಂ.ಗಳ ಪ್ರಮಾಣ೧೯೯೧ ಮತ್ತು ೨೦೦೧

ಕೋಷ್ಠಕ.

ವಿವರ

೧೯೯೧

೨೦೦೧

ಕರ್ನಾಟಕ ರಾಜ್ಯ

ವಿಜಾಪುರ ಜಿಲ್ಲೆ

ಕರ್ನಾಟಕ ರಾಜ್ಯ

ವಿಜಾಪುರ ಜಿಲ್ಲೆ

ಒಟ್ಟು ಜನಸಂಖ್ಯೆಯಲ್ಲಿ ಪ.ಜಾ. ಜನಸಂಖ್ಯೆಯ ಪ್ರಮಾಣ ಶೇ. ೧೬.೩೮ ಶೇ.೧೮.೯೫ ಶೇ.೧೬.೨೦ ಶೇ.೧೮.೪೯
ಒಟ್ಟು ಜನಸಂಖ್ಯೆಯಲ್ಲಿ ಪ.ಪಂ. ಜನಸಂಖ್ಯೆಯ ಪ್ರಮಾಣ ಶೇ.೪.೨೬ ಶೇ.೧.೧೩ ಶೇ.೬೫೫ ಶೇ.೧.೬೬

ಮೂಲ : ಸೆನ್ಸಸ್ ಆಫ್ ಇಂಡಿಯಾ, ೧೯೯೧, ಸಿರೀಸ್ ೧೧, ಡಿಸ್ಟ್ರಿಕ್ಟ್ ಸೆನ್ಸ್ಸ್ ಹ್ಯಾಂಡ್ ಬುಕ್ವಿಜಾಪುರ, ಡೈರೆಕ್ಟರೇಟ್ ಆಫ್ ಸೆನ್ಸ್ಸ್ ಆಫರೇಶನ್ಸ್, ಕರ್ನಾಟಕ,

೨. ಸೆನ್ಸಸ್ ಆಫ್ ಇಂಡಿಯಾ – ೨೦೦೧, ಸೀರಿಸಾ -೩೦ ಪ್ರೈಮರಿ ಸೆನ್ಸ್‌ಸ್ ಅಬ್‌ಸ್ಟ್ರಕ್ಟ್, ಡೈರೆಕ್ಟರೇಟ್ ಆಫ್ ಸೆನ್ಸ್‌ಸ್ ಆಫರೇಶನ್ಸ್, ಕರ್ನಾಟಕ.

ಈ ಬಗೆಯ ಅಧ್ಯಯನಗಳ ಮುಖ್ಯ ಸಮಸ್ಯೆಯೆಂದರೆ ಅವುಕರ್ನಾಟಕದ ಪ್ರಾದೇಶಿಕ ವಿಭಿನ್ನತೆಗಳನ್ನು ಪರಿಗಣಿಸುತ್ತಿಲ್ಲ. ಈ ಬಗೆಯ ಅಧ್ಯಯನಗಳು ಮುಖ್ಯವಾಗಿ ದಕ್ಷಿಣ ಕರ್ನಾಟಕ ಪ್ರದೇಶವನ್ನು, ಅಂದರೆ ಹಳೆಯ ಮೈಸೂರು ಸಂಸ್ಥಾನದ ಪ್ರದೇಶವನ್ನು ಮಾತ್ರ ಒಳಗೊಳ್ಳುತ್ತವೆ. ಈ ಅಧ್ಯಯನಗಳ ಮಾಹಿತಿಯು ಮುಖ್ಯವಾಗಿ ದಕ್ಷಿಣ ಕರ್ನಾಟಕ ಪ್ರದೇಶದಿಂದ ಬಂದಿದೆ. ಈ ಬಗೆಯ ಅಧ್ಯಯನಗಳ ತಥ್ಯಗಳನ್ನು ಸಾರಸಗಟಾಗಿ ಉತ್ತರ ಕರ್ನಾಟಕ ಪ್ರದೇಶಕ್ಕೆ, ಅದರಲ್ಲೂ ಮುಖ್ಯವಾಗಿ ರಾಜ್ಯದ ಹಿಂದುಳಿದಿರುವ ಜಿಲ್ಲೆಗಳಾದ ವಿಜಾಪುರ, ಬಾಗಲಕೋಟೆ, ಗುಲಬರ್ಗಾ, ರಾಯಚೂರು, ಕೊಪ್ಪಳ, ಬೀದರೆ ಮತ್ತು ಬಳ್ಳಾರಿಗಳಿಗೆ ಅನ್ವಯಿಸುವುದು ಸಾಧ್ಯವಿಲ್ಲ. ರಾಜ್ಯದ ಉತ್ತರ ಭಾಗದ ಜಿಲ್ಲೆಗಳಲ್ಲಿ ಊಳಿಗಮಾನ್ಯ ಜಮೀನುದಾರಿ ಸಂಬಂಧಗಳು ಇನ್ನೂ ಗಟ್ಟಿಯಾಗಿ ಉಳಿದುಕೊಂಡು ಬಂದಿರುವುದನ್ನು ನಾವು ಕಡೆಗಣಿಸುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ವಿಜಾಪುರದಂತಹ ಜಿಲ್ಲೆಯಲ್ಲಿ ಜಮೀನುದಾರಿಕೆಯ ಅಸ್ತಿತ್ವವನ್ನು ಚರ್ಚಿಸಬೇಕಾಗುತ್ತದೆ. ಮೇನರ್ ಮತ್ತು ಶ್ರೀನಿವಾಸ್ ಎಂ.ಎನ್. ವಾದಿಸುವಂತೆ ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಜಾತಿಗಳು ತಮ್ಮ ಶ್ರೇಣಿಕರಣದ ಸ್ವರೂಪವನ್ನು ಕಳೆದೂಕೊಂಡಿರಬಹುದು. ಕಳೆದ ಒಂದು ಶತಮಾನದ (ಏಕೀಕರಣದ ಪೂರ್ವದ ೫೦ ವರ್ಷ ಮತ್ತು ಏಕೀಕರಣದ ನಂತರದ ೫೦ ವರ್ಷ) ಅವಧಿಯಲ್ಲಿ ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ತೀವ್ರಗತಿಯ ಸಾಮಾಜಿಕ ಆರ್ಥಿಕ ಪರಿವರ್ತನೆಗಳಾಗಿವೆ. ಈ ಬಗೆಯ ಪರಿವರ್ತನೆಯ ಪರಿಣಾಮವಾಗಿ ಮೇನರ್ ತಿಳಿಸುವ ಬದಲಾವಣೆ ಅಲ್ಲಿ ಉಂಟಾಗಿರಬಹುದು.ಈ ಮಾತನ್ನು ಉತ್ತರ ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದಂತೆ ಹೇಳುವುದು ಸಾಧ್ಯವಿಲ್ಲ. ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಊಳಿಗಮಾನ್ಯ ವ್ಯವಸ್ಥೆಯು ಅಳಿದು ಬಂಡವಾಳಶಾಹಿ ವ್ಯವಸ್ಥೆಯ ೧೯೫೦ರ ನಂತರ ಬೆಳೆಯ ತೊಡಗಿತು. ಆದರೆ ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಅಲ್ಲಿನ ಹಿಂದುಳಿದ ಜಿಲ್ಲೆಗಳಲ್ಲಿ ಸಾಮಾಜಿಕ ಬದಲಾವಣೆಯ ಗತಿ ತುಂಬಾ ಮಂದವಾಗಿತ್ತು. ದಕ್ಷಿಣ ಕರ್ನಾಟಕ ಪ್ರದೇಶವು ಏಕೀಕರಣ ಪೂರ್ವದಲ್ಲೇ ತೀವ್ರ ಬದಲಾವಣೆಗಳನ್ನು ಅನುಭವಿಸಿತ್ತು. ಅದರಿಂದಾಗಿ ಅಲ್ಲಿ ಬಂಡವಾಳಶಾಹಿ ಬೇರು ಬಿಡುವುದು ಸಾಧ್ಯವಾಯಿತು. ಸ್ವಾತಂತ್ರ್ಯಾನಂತರ ಹಾಗೂ ಏಕೀಕರಣದ ನಂತರದಲ್ಲಿ ಬದಲಾವಣೆಯ ಗತಿ ತೀವ್ರವಾಯಿತು. ಉತ್ತರ ಕರ್ನಾಟಕ ಪ್ರದೇಶದಲ್ಲಿ ಬದಲಾವಣೆಯ ಗಾಳಿಯು ಏಕೀಕರಣದ ನಂತರ ಬೀಸತೊಡಗಿತು. ಆಧುನಿಕತೆಯೆಂಬುದು ತುಂಬಾ ತಡವಾಗಿ ಉತ್ತರ ಕರ್ನಾಟಕ ಪ್ರದೇಶವನ್ನು ಪ್ರವೇಶಿಸಿತು. ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಆಧುನಿಕೋತ್ತರ ಸಮಾಜದ ಬಗ್ಗೆ ಮಾತನಾಡಲಾಗುತ್ತಿದ್ದರೆ ಉತ್ತರ ಕರ್ನಾಟಕದ ಹಿಂದುಳಿದಿರುವ ಜಿಲ್ಲೆಗಳ ಸಂದರ್ಭದಲ್ಲಿ ಆಧುನಿಕತೆ ಕುರಿತಂತೆ ಚರ್ಚಿಸಬೇಕಾದ ಸ್ಥತಿಯಿದೆ. ಈ ಕಾರಣದಿಂದಾಗಿಯೆ ಅಲ್ಲಿ ಜಾತಿವ್ಯವಸ್ಥೆ ಇನ್ನೂ ಶ್ರೇಣೀಕರಣದ ಆಕರವಾಗಿ ಮುಂದುವರಿದಿದೆ. ಅದಕ್ಕೆ ಸಂಬಂಧಿಸಿದ ಇತರೆ ಅನಿಷ್ಟಗಳಾದ ತಾರತಮ್ಯ, ದಬ್ಬಾಳಿಕೆ, ಮೌಢ್ಯ ಅಲ್ಲಿ ಮುಂದುವರಿದಿವೆ.

ಪ್ರಸ್ತುತ ಅಧ್ಯಯನದಲ್ಲಿ ವಿಜಾಪುರ ಜಿಲ್ಲೆಯ ಪ.ಜಾ. ಮತ್ತು ಪ.ಪಂ.ಗಳ ಜನರ ಅಭಿವೃದ್ಧಿ ಸ್ಥಿತಿಗತಿಯನ್ನು ಕುರಿತಂತೆ ಚರ್ಚಿಸಲಾಗಿದೆ. ಕರ್ನಾಟಕ ಸರ್ಕಾರದ ಯೋಜನಾ ಇಲಾಖೆಯು ಸಿದ್ಧಪಡಿಸಿರುವ ‘ಕರ್ನಾಟಕ ಮಾನವ ಅಭಿವೃದ್ಧಿ ವರದಿ – ೨೦೦೫’ರಲ್ಲಿ ಪ್ರಥಮ ಬಾರಿಗೆ ಪ.ಜಾ. ಮತ್ತು ಪ.ಪಂ.ಗಳ ಧಾರಣಾ ಸಾಮರ್ಥ್ಯವನ್ನು ಅಳೆಯುವ ಒಂದು ಪ್ರಯತ್ನ ಮಾಡಲಾಗಿದೆ. ಸಾಮಾಜಿಕ ಗುಂಪುಗಳಿಗೆ ಮಾನವ ಅಭಿವೃದ್ದಿ ಸೂಚ್ಯಂಕವನ್ನು ಗಣನೆ ಮಾಡುವ ಅಗತ್ಯವಿದೆ. ಇಲ್ಲಿ ಕೋಷ್ಟಕ ೮.೨ ರಲ್ಲಿ ಕರ್ನಾಟಕ ರಾಜ್ಯದ ಒಟ್ಟು ಜನಸಂಖ್ಯೆ ಪ.ಜಾ. ಹಾಗೂ ಪ.ಪಂ. ಜನಸಂಖ್ಯೆಗಳಿಗೆ ಸಂಬಂಧಿಸಿದ ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನು ತೋರಿಸಲಾಗಿದೆ.

ಮಾನವ ಅಭಿವೃದ್ಧಿಸೂಚ್ಯಂಕ೨೦೦೧

ಕೋಷ್ಟಕ .

ಕ್ರ.ಸಂ.

ವಿವರ

ಎಚ್.ಡಿ..

ಜಿ.ಡಿ.

೧. ಒಟ್ಟು ಜನಸಂಖ್ಯೆ (೨೦೦೧)

೦.೬೫೦

೦.೬೩೭

೨. ಪ.ಜಾ. (೨೦೦೪)

೦.೫೭೫

೦.೫೬೪

೩. ಪ.ಪಂ. (೨೦೦೪)

೦.೫೩೯

೦.೫೨೭

ಮೂಲ: ಕರ್ನಾಟಕ ಸರ್ಕಾರ, ೨೦೦೬ ಕರ್ನಾಟಕ ಮಾನವ ಅಭಿವೃದ್ಧಿ ವರದಿ : ೨೦೦೫

ಕೋಷ್ಟಕ-೮.೨ರಲ್ಲಿ ತೋರಿಸಿರುವಂತೆ ಮಾನವ ಅಭಿವೃದ್ಧಿ ಸೂಚ್ಯಂಕಕ್ಕೆ ಸಂಬಂಧಿಸಿದಂತೆ ಒಟ್ಟು ಜನಸಂಖ್ಯೆ ಹಾಗೂ ಪ.ಜಾ ಮತ್ತು ಪ.ಪಂ.ಗಳ ಸೂಚ್ಯಂಕಗಳ ನಡುವೆ ಅಂತರವಿರುವುದು ಕಂಡುಬರುತ್ತದೆ. ಪ.ಜಾ.ಯ ಮಾನವ ಅಭಿವೃದ್ಧಿ ಸೂಚ್ಯಂಕವು ಒಟ್ಟು ಜನಸಂಖ್ಯೆಯ ಮಾನವ ಅಭಿವೃದ್ಧಿ ಸೂಚ್ಯಂಕಕ್ಕಿಂತ ೦.೦೭೫ ಅಂಶಗಳಷ್ಟು ಕಡಿಮೆಯಿದೆ. ಪ.ಪಂ.ಕ್ಕೆ ಸಂಬಂಧಿಸಿದಂತೆ ಸೂಚ್ಯಂಕವು ೦.೧೧೧ ಅಂಶಗಳಷ್ಟು ಕಡಿಮೆಯಿಂದೆ. ಅಂದರೆ ಪ.ಜಾ.ಯ ಮಾನವ ಅಭಿವೃದ್ಧಿ ಸೂಚ್ಯಂಕವು ಒಟ್ಟು ಜನಸಂಖ್ಯೆಯ ಸೂಚ್ಯಂಕದ ಶೇ. ೮೮.೪೬ರಷ್ಟಿದೆ. ಪ.ಪಂ.ದ ಸೂಚ್ಯಂಕವು ಒಟ್ಟು ಜನಸಂಖ್ಯೆಯ ಸೂಚ್ಯಂಕದ ಶೇ. ೮೨.೯೨ ರಷ್ಟಿದೆ.

ಲಿಂಗಸಂಬಂಧಿ ಅಭಿವೃದ್ಧಿ ಸೂಚ್ಯಂಕಕ್ಕೆ ಸಂಬಂಧಿಸಿದಂತೆಯೂ ಪ.ಜಾ.ಯ ಸೂಚ್ಯಂಕವು ಒಟ್ಟು ಜನಸಂಖ್ಯೆಯ ಸೂಚ್ಯಂಕದ ಶೇ. ೮೮.೫೪ ರಷ್ಟಿದ್ದರೆ ಸೂಚ್ಯಂಕವು ಒಟ್ಟು ಜನಸಂಖ್ಯೆಯ ಸೂಚ್ಯಂಕದ ಶೇ. ೮೯೨.೭೩ರಷ್ಟಿದೆ. ಒಟ್ಟಾರೆ ಪ.ಜಾ. ಮತ್ತು ಪ.ಪಂ.ಗಳ ಜನಸಮೂಹದ ಅಭಿವೃದ್ಧಿ ಸ್ಥಿತಿಗತಿಯು ಉಳಿದ ಜನಸಮೂಹದ ಅಭಿವೃದ್ಧಿ ಸ್ಥಿತಿಗತಿಗಿಂತ ಕೆಳಮಟ್ಟದಲ್ಲಿದೆ.

ಈ ಅಧ್ಯಾಯದಲ್ಲಿ ವಿಜಾಪುರ ಜಿಲ್ಲೆ ಹಾಗೂ ಅದರ ತಾಲ್ಲೂಕುಗಳಲ್ಲಿನ ಪರಿಶಿಷ್ಟ ಜಾತಿ (ಪ.ಜಾ.) ಹಾಗೂ ಪರಿಶಿಷ್ಟ ಪಂಗಡ (ಪ.ಪಂ.)ಗಳ ಜನಸಮೂಹದ ಅಭಿವೃದ್ಧಿ ಸ್ಥಿತಿಗತಿಗಳನ್ನು ಕುರಿತಂತೆ ಚರ್ಚಿಸಲಾಗಿದೆ. ಈ ಸಮೂಹದ ಜನಸಂಖ್ಯೆ, ಲಿಂಗ ಅನುಪಾತ, ಗ್ರಾಮೀಣ ನಗರ ಅಂತರ, ಸಾಕ್ಷರತೆ, ಶಿಕ್ಷಣ ಉನ್ನತ ಶಿಕ್ಷಣ, ಆರೋಗ್ಯ ದುಡಿಮೆ, ಕೃಷಿ ಅವಲಂಬನೆ ಮುಂತಾದ ಸಂಗತಿಗಳನ್ನು ಇಲ್ಲಿ ದಾಖಲಿಸಲಾಗಿದೆ ಹಾಗೂ ತುಲನಾತ್ಮಕವಾಗಿ ವಿಶ್ಲೇಷಿಸಲಾಗಿದೆ.

. ಜನಸಂಖ್ಯೆಯ ಒಲವುಗಳು

ವಿಜಾಪುರ ಜಿಲ್ಲೆಯಲ್ಲಿ ಪ.ಜಾ. ಜನಸಂಖ್ಯೆಯ ೧೯೯೧ರಲ್ಲಿ ೨.೯೧ ಲಕ್ಷವಿದ್ದುದು ೨೦೦೧ರಲ್ಲಿ ೩.೩೪ ಲಕ್ಷಕ್ಕೇರಿದೆ. ಈ ದಶಕದಲ್ಲಿ ಅದರ ಬೆಳವಣಿಗೆ ಪ್ರಮಾಣ ಶೇ. ೧೪.೬೬ ಇದು ರಾಜ್ಯದ ಒಟ್ಟು ಪ.ಜಾ. ಜನಸಂಖ್ಯೆಯ ಬೆಳವಣಿಗೆ ಪ್ರಮಾಣವಾದ ಶೇ. ೧೬.೨೧ ಕ್ಕಿಂತ ಕಡಿಮೆಯಿಂದೆ. ಈ ಜಿಲ್ಲೆಯಲ್ಲಿ ಒಟ್ಟು ಜನಸಂಖ್ಯೆಗೆ ಸಾಪೇಕ್ಷವಾಗಿ ಪ.ಜಾ. ಜನಸಂಖ್ಯೆ ೧೯೯೧ರಲ್ಲಿ ಶೇ. ೧೮.೯೫ರಷ್ಟಿದ್ದುದು ೨೦೦೧ರಲ್ಲಿ ಶೇ. ೧೮.೪೯ಕ್ಕೆ ಇಳಿದಿದೆ. ಸ್ಥೂಲವಾಗಿ ಅದರ ಪ್ರಮಾಣವು ಕಳೆದ ದಶಕದಲ್ಲಿ ಸ್ಥಿರವಾಗಿದೆ. ರಾಜ್ಯ ಮಟ್ಟದಲ್ಲೂ ಅದು ಹೆಚ್ಚು ಕಡಿಮೆ ಶೇ. ೧೬ರ ಅಸುಪಾಸಿನಲ್ಲಿ ಸ್ಥಿರವಾಗಿದೆ. ರಾಜ್ಯ ಮಟ್ಟದಲ್ಲಿ ಒಟ್ಟು ಜನಸಂಖ್ಯೆಗೆ ಸಾಪೇಕ್ಷವಾಗಿ ಪ.ಜಾ. ಪ್ರಮಾಣವು ೨೦೦೧ ರಲ್ಲಿ ಶೇ. ೧೬.೨೦ ರಷ್ಟಿದ್ದು, ವಿಜಾಪುರ ಜಿಲ್ಲೆಯಲ್ಲಿ ಅವರ ಪ್ರಮಾಣವು ಶೇ. ೧೮.೪೯ ವಿಜಾಪುರಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಪ.ಜಾ. ಪ್ರಮಾಣವು ಜಿಲ್ಲಾ ಸರಾಸರಿಗಿಂತ ಅಧಿಕವಾಗಿದೆ. ಬಹಳ ವಿಶಿಷ್ಟವಾದ ಸಂಗತಿಯೆಂದರೆ ಜಿಲ್ಲೆಯ ಒಟ್ಟು ಪ.ಜಾ. ಜನ ಸಮೂಹದಲ್ಲಿ ಶೇ. ೩೧.೬೨ ರಷ್ಟು ಜಿಲ್ಲಾ ಕೇಂದ್ರವುಳ್ಳ ವಿಜಾಪುರ ತಾಲ್ಲೂಕಿನಲ್ಲಿ ನೆಲೆಗೊಂಡಿದ್ದಾರೆ. ಪ.ಜಾ. ಜನಸಮೂಹದ ತಾಲ್ಲೂಕುವಾರು ಪ್ರಮಾಣವು ೧೯೯೧ರಿಂದ ೨೦೦೧ರ ಅವಧಿಯಲ್ಲಿ ತೀವ್ರ ಬದಲಾವಣೆಯಾಗಿಲ್ಲ.

ಈ ಜಿಲ್ಲೆಯಲ್ಲಿರುವ ಪ.ಪಂ.ದ ಜನಸಮೂಹದ ಪ್ರಮಾಣವು ಅತ್ಯಂತ ಕಡಿಮೆಯಾಗಿದೆ. ಜಿಲ್ಲೆಯ ಪ.ಪಂ.ದ ಜನಸಂಖ್ಯೆಯು ೧೯೯೧ರಲ್ಲಿ ೧೭೩೬೦ ರಷ್ಟಿದ್ದುದು ೨೦೦೭ರಲ್ಲಿ ೩೦೦೫೧ಕ್ಕೆ ಏರಿದೆ. ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಪ.ಪಂ.ದ ಪ್ರಮಾಣ ೧೯೯೧ರಲ್ಲಿ ಶೇ. ೧.೧೩ರಷ್ಟಿದ್ದುದು ೨೦೦೧ರಲ್ಲಿ ಅದು ಶೇ. ೧.೬೬ರಷ್ಟಾಗಿದೆ.

ಪ.ಪಂ. ದ ಜನಸಂಖ್ಯೆಯ ಬೆಳವಣಿಗೆ ಪ್ರಮಾಣವು ಅತ್ಯಧಿಕ ಮಟ್ಟದಲ್ಲಿದೆ. ರಾಜ್ಯಮಟ್ಟದಲ್ಲಿ ಅದರ ಬೆಳವಣಿಗೆ ಪ್ರಮಾಣ ೧೯೯೧-೨೦೦೧ರ ದಶಕದಲ್ಲಿ ಶೇ. ೮೦.೮೨ರಷ್ಟಿದ್ದರೆ ವಿಜಾಪುರ ಜಿಲ್ಲೆಯಲ್ಲಿ ಅವರ ಬೆಳವಣಿಗೆ ಪ್ರಮಾಣ ಶೇ. ೭೩.೧೦ ರಷ್ಟಿದೆ. ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಅವರ ಬೆಳವಣಿಗೆ ಪ್ರಮಾಣ ಶೇ. ೪೦೨.೯೦ ರಷ್ಟಾಗಿದೆ. ಈ ಪ್ರಮಾಣದ ಏರಿಕೆಯು ಸಂತಾನದ ಪ್ರಮಾಣದಿಂದ ಸಾಧ್ಯವಿಲ್ಲ. ಪ.ಪಂ.ಕ್ಕೆ ಹೊಸದಾಗಿ ಸಮುದಾಯಗಳನ್ನು ಸೇರಿಸಿದ ಪರಿಣಾಮವಾಗಿ ಅವರ ಸಂಖ್ಯೆಯು ವಿಪರೀತ ಏರಿಕೆಯಾಗಿದೆ.ರಾಜ್ಯದಲ್ಲಿನ ಪ.ಪಂ.ದ ಜನಸಂಖ್ಯೆ ೨೦೦೧ರಲ್ಲಿ ೩೪.೬೪ ಲಕ್ಷ. ರಾಜ್ಯದಪ.ಪಂ. ಜನಸಂಖ್ಯೆಯಲ್ಲಿ ವಿಜಾಪುರ ಜಿಲ್ಲೆಯ ಪ.ಪಂ. ಜನಸಂಖ್ಯೆಯ ಪ್ರಮಾಣ ಶೇ. ೦.೬೮.

ಪ್ರಸ್ತುತ ಅಧ್ಯಯನಕ್ಕಾಗಿ ಕರ್ನಾಟಕ ಸರ್ಕಾರದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನನಾಲಯವು ವಿಜಾಪುರ ಜಿಲ್ಲೆಯ ಪ.ಜಾ. ಮತ್ತು ಪ.ಪಂ.ದ ಜನರ ಆರ್ಥಿಕ ಸ್ಥಿತಿಗತಿ ಕುರಿತಂತೆ ಸಮೀಕ್ಷೆಯೊಂದನ್ನು ನಡೆಸಿಕೊಟ್ಟಿದೆ. ಅದರಲ್ಲಿ ಕಂಡುಬಂದ ಒಂದು ಸಂಗತಿಯೆಂದರೆ ಪ.ಜಾ. ಮತ್ತು ಪ.ಪಂ. ಜನಸಮುದಾಯಕ್ಕೆ ಕುಟುಂಬ ಯೋಜನೆ ಬಗ್ಗೆ ತಿಳುವಳಿಕೆಯಿಂದ.ಆದರೆ ಅದನ್ನು ಅನುಸರಿಸುವವರ ಪ್ರಮಾಣ ಅತ್ಯಂತ ಕಡಿಮೆಯಿದೆ.

ಕೂತುಹೂಲದ ಸಂಗತಿಯೆಂದರೆ ಪ.ಪಂ.ದ ಮಹಿಳೆಯರಲ್ಲಿ ಕುಟುಂಬ ಯೋಜನೆ ಅನುಸರಣೆ ಅಧಿಕವಾಗಿದೆ. ಪ.ಜಾ. ಮಹಿಳೆಯರಲ್ಲಿ ಅದು ಅತಿ ಕಡಿಮೆ. ಈ ಕಡೆಗೆ ಜಿಲ್ಲಾ ಪಂಚಾಯತಿ ಹಾಗೂ ಆರೋಗ್ಯ ಇಲಾಖೆ ಗಮನ ನೀಡಬೇಕು.

ಈ ಜಿಲ್ಲೆಯಲ್ಲಿ ಸಂಖ್ಯೆಯ ದೃಷ್ಟಿಯಿಂದ ಪ.ಜಾ. ಪ್ರಮಾಣವು ಅಧಿಕವಾಗಿದೆ. ಆದ್ದರಿಂದ ಇಲ್ಲಿ ಚರ್ಚೆಯನ್ನು ಅಧಿಕವಾಗಿ ಪ.ಜಾ. ಜನಸಮೂಹಕ್ಕೆ ಸಂಬಂಧಿಸಿದಂತೆ ನಡೆಸಲಾಗಿದೆ.

ಲಿಂಗ ಅನುಪಾತ

ಕೋಷ್ಟಕ ೮.೪ರಲ್ಲಿ ಲಿಂಗ ಅನುಪಾತದ ವಿವರಗಳನ್ನು ತಾಲ್ಲೂಕುವಾರು ನೀಡಲಾಗಿದೆ.

ಲಿಂಗ ಅನುಪಾತ: ೧೯೯೧ ಮತ್ತು ೨೦೦೧

ಕೋಷ್ಟಕ.

ತಾಲ್ಲೂಕುಗಳು

ಲಿಂಗ ಅನುಪಾತ

೧೯೯೧

೨೦೦೧

ಒಟ್ಟು ಜನಸಂಖ್ಯೆ

.ಜಾ

.ಪಂ

ಒಟ್ಟು ಜನಸಂಖ್ಯೆ

.ಜಾ.

.ಪಂ

ಬ.ಬಾಗೇವಾಡಿ

೯೬೭

೯೬೮

೯೩೨

೯೬೦

೯೭೩

೯೧೬

ವಿಜಾಪುರ

೯೩೦

೯೨೯

೯೨೮

೯೪೫

೯೪೫

೯೧೫

ಇಂಡಿ

೯೩೩

೯೩೨

೯೧೦

೯೨೮

೯೨೮

೯೫೫

ಮುದ್ದೇಬಿಹಾಳ

೯೮೭

೯೯೮

೯೮೭

೯೮೫

೧೦೦೧

೯೭೬

ಸಿಂದಗಿ

೯೪೬

೯೩೩

೯೩೭

೯೫೫

೯೪೪

೯೫೨

ಜಿಲ್ಲೆ

೯೪೮

೯೪೬

೯೩೦

೯೫೦

೯೫೩

೯೪೩

ರಾಜ್ಯ

೯೬೦

೯೬೨

೯೬೧

೯೬೫

೯೭೩

೯೭೨

ಮೂಲ : ಜನಗಣತಿ ವರದಿಗಳು : ೧೯೯೧ ಮತ್ತು ೨೦೦೧

ಲಿಂಗ ಅನುಪಾತವನ್ನು ಇಂದು ಲಿಂಗಸಂಬಂಧಿ ಸಮಾನತೆಯ ಸೂಚಿಯಾಗಿ ಬಳಸಲಾಗುತ್ತಿದೆ. ಲಿಂಗ ಅನುಪಾತವು ಸಾವಿರಕ್ಕಿಂತ ಕಡಿಮೆಯಿದ್ದರೆ ಅದನ್ನು ತಾರತಮ್ಯದ ಪ್ರಮಾಣವನ್ನಾಗಿ ಗುರುತಿಸಲಾಗುತ್ತಿದೆ.

ಮೊಟ್ಟಮೊದಲನೆಯದಾಗಿ ಹೇಳಬೇಕಾದ ಸಂಗತಿಯೆಂದರೆ ಎಲ್ಲ ಜನಸಮೂಹದ ಲಿಂಗ ಅನುಪಾತವು ಜಿಲ್ಲಾಮಟ್ಟದಲ್ಲಿ ಕಡಿಮೆಯಿಂದಎರಡೂ ಕಾಲಘಟ್ಟಗಳಲ್ಲಿ ಜಿಲ್ಲಾಮಟ್ಟದ ಲಿಂಗ ಅನುಪಾತವು ಮೂರು ಜನವರ್ಗಗಳಿಗೆ ಸಂಬಂಧಿಸಿದಂತೆ ರಾಜ್ಯಮಟ್ಟದ ಲಿಂಗ ಅನುಪತಕ್ಕಿಂತ ಕಡಿಮೆಯಿದೆ. ಕಳೆದ ದಶಕದಲ್ಲಿ ಇಂಡಿ ತಾಲ್ಲೂಕೊಂದನ್ನು ಬಿಟ್ಟರೆ ಉಳಿದಂತೆ ಪ.ಜಾ. ಲಿಂಗ ಅನುಪಾತವು ವಿಜಾಪುರ ಮತ್ತು ಸಿಂದಗಿ ತಾಲ್ಲೂಕುಗಳಲ್ಲಿ ಮಾತ್ರ ಏರಿಕೆಯಾಗಿದೆ. ಬಸವನಬಾಗೇವಾಡಿ, ಇಂಡಿ ಹಾಗೂ ಮುದ್ದೇಬಿಹಾಳ ತಾಲ್ಲೂಕುಗಳಲ್ಲಿ ಒಟ್ಟು ಜನಸಂಖ್ಯೆಯ ಲಿಂಗ ಅನುಪಾತವು ಕಡಿಮೆಯಾಗಿದೆ. ಇದು ರಾಜ್ಯಮಟ್ಟದ ಒಲವಿಗಿಂತ ಭಿನ್ನವಾಗಿದೆ.

ಕೋಷ್ಟಕ ೮.೫ರಲ್ಲಿ ೦-೬ ವಯೋಮಾನದ ಮಕ್ಕಳ ಲಿಂಗ ಅನುಪಾತವನ್ನು ತೋರಿಸಲಾಗಿದೆ.

ಲಿಂಗ ಅನುಪಾತ : ವಯೋಮಾನದ ಮಕ್ಕಳು: ೧೯೯೧ ಮತ್ತು ೨೦೦೧

ಕೋಷ್ಟಕ : .

ಲಿಂಗ ಅನುಪಾತ ( ವಯೋಮಾನ)

ತಾಲ್ಲೂಕುಗಳು

೧೯೯೧

೨೦೦೧

ಒಟ್ಟು ಜನಸಂಖ್ಯೆ

.ಜಾ

.ಪಂ.

ಒಟ್ಟು ಜನಸಂಖ್ಯೆ

.ಜಾ

.ಪಂ.

ಬ.ಬಾಗೇವಾಡಿ

೯೫೪

೯೭೩

೯೫೩

೯೩೧

೯೬೧

೧೦೨೮

ವಿಜಾಪುರ

೯೩೮

೯೪೫

೧೦೦೩

೯೨೬

೯೩೬

೧೦೨೧

ಇಂಡಿ

೯೬೬

೯೨೮

೯೨೪

೯೨೦

೯೧೧

೯೭೫

ಮುದ್ದೇಬಿಹಾಳ

೯೭೪

೧೦೦೧

೧೦೯೪

೯೩೯

೯೫೭

೮೯೩

ಸಿಂದಗಿ

೯೩೯

೯೪೪

೯೧೭

೯೩೦

೯೨೪

೮೯೦

ಜಿಲ್ಲೆ

೯೫೩

೯೭೩

೯೬೦

೯೨೮

೯೩೬

೯೫೬

ರಾಜ್ಯ

೯೬೦

೯೭೩

೯೭೦

೯೪೬

೯೬೦

೯೬೧

ಮೂಲ : ಜನಗಣತಿ ವರದಿಗಳು : ೧೯೯೧ ಮತ್ತು ೨೦೦೧

ಅತ್ಯಂತ ಕುತೂಹಲಕಾರಿಯಾದ ಸಂಗತಿಯೆಂದರೆ ೦-೬ ವಯೋಮಾನದ ಮಕ್ಕಳ ಲಿಂಗ ಅನುಪಾತವು ೧೯೯೧ ರಿಂದ ೨೦೦೧ರ ದಶಕದಲ್ಲಿ ತೀವ್ರ ಕುಸಿತ ಕಂಡಿದೆ. ಒಟ್ಟು ಜನಸಂಖ್ಯೆಗೆ ಸಂಬಂಧಿಸಿದಂತೆ ಇಲ್ಲಿಯೂ ಸಹ ರಾಜ್ಯದಮಟ್ಟದ ಲಿಂಗ ಅನುಪಾತಕ್ಕಿಂತ ಜಿಲ್ಲಾಮಟ್ಟದ ಲಿಂಗ ಅನುಪಾತವು ತೀವ್ರ ಕೆಳಮಟ್ಟದಲ್ಲಿದೆ ಇದು ಎಲ್ಲ ಮೂರು ಜನವರ್ಗಗಳಿಗೆ ಸಂಬಂಧಿಸಿದಂತೆ ಕಂಡುಬಂದಿದೆ.

ಪ.ಪಂ. ಗಳ ೦-೬ ವಯೋಮಾನದ ಮಕ್ಕಳ ಲಿಂಗ ಅನುಪಾತವು ೨೦೦೧ರಲ್ಲಿ ತೀವ್ರ ಏರಿಕೆಯಾಗಿರುವುದು ಬ.ಬಾಗೇವಾಡಿ ಹಾಗೂ ವಿಜಾಪುರ ತಾಲ್ಲೂಕುಗಳಲ್ಲಿ ಕಂಡುಬಂದಿದೆ. ಇಡೀ ಜಿಲ್ಲೆ ಹಾಗೂ ರಾಜ್ಯವನ್ನು ಪರಿಗಣಿಸಿದಾಗ ಪ.ಪಂ.ಗಳ ಮಕ್ಕಳ ಲಿಂಗ ಅನುಪಾತವು ೧೯೯೧-೨೦೦೧ರ ಅವಧಿಯಲ್ಲಿ ಕಡಿಮೆಯಾಗಿದೆ.

. ಗ್ರಾಮೀಣ ನಗರ ಹಂಚಿಕೆ

ಪ.ಜಾ. ಜನರು ಅಧಿಕವಾಗಿ ಗ್ರಾಮೀಣವಾಸಿಗಳಾಗಿದ್ದಾರೆ. ರಾಜ್ಯಮಟ್ಟದಲ್ಲಿ ಗ್ರಾಮೀಣವಾಸಿಗಳ ಪ್ರಮಾಣ ಒಟ್ಟು ಜನಸಂಖ್ಯೆಯಲ್ಲಿ ಶೇ. ೬೬.೦೧ರಷ್ಟಿದ್ದರೆ ಪ.ಜಾತಿಯಲ್ಲಿ ಗ್ರಾಮೀಣವಾಸಿಗಳ ಪ್ರಮಾಣ ಶೇ. ೭೪.೯೩ ರಷ್ಟಿದೆ. ಜಿಲ್ಲಾಮಟ್ಟದಲ್ಲಿ ಒಟ್ಟು ಜನಸಂಖ್ಯೆಯ ಗ್ರಾಮೀಣ ಪ್ರಮಾಣ ಶೇ. ೭೮.೦೮ರಷ್ಟಿದ್ದರೆ ಪ.ಜಾತಿಯದ್ದು ಶೇ. ೮೩.೫೫. ಒಟ್ಟು ಜನಸಂಖ್ಯೆಗಿಂತ ಪ.ಜಾತಿಯಲ್ಲಿ ಗ್ರಾಮೀಣ ಪ್ರಮಾಣ ಅಧಿಕವಾಗಿದೆ. ರಾಜ್ಯ ಮಟ್ಟದಲ್ಲಿರುವುದಕಿಕಂತ ಜಿಲ್ಲಾ ಮಟ್ಟದಲ್ಲಿ ಗ್ರಾಮೀಣವಾಸಿಗಳ ಪ್ರಮಾಣ ಅಧಿಕವಾಗಿದೆ. ವಿಜಾಪುರಜಿಲ್ಲೆಯ ನಗರಗಳಲ್ಲಿ ವಾಸಿಸುವ ಪ.ಜಾ. ಜನರ ಪ್ರಮಾಣವು ರಾಜ್ಯಮಟ್ಟದಲ್ಲಿರುವುದಕ್ಕಿಂತ ಕಡಿಮೆಯಿದೆ. ನಗರ ಪ್ರದೇಶದ ಪ.ಜಾ. ಜನರ ಪ್ರಮಾಣ ಕೇವಲ ಶೇ. ೧೬.೪೫.ಸಿಂದಗಿ ತಾಲ್ಲೂಕಿನಲ್ಲಿ ಅವರ ಪ್ರಮಾಣ ಶೇ. ೬.೭೮. ಈ ಸಂಗತಿಯು ಪ.ಜಾ. ಜನರ ಅಭಿವೃದ್ಧಿ ಕೆಳಮಟ್ಟದಲ್ಲಿರುವುದನ್ನು ಸೂಚಿಸುತ್ತದೆ.

. ಸಾಕ್ಷರತೆ ಮತ್ತು ಶಿಕ್ಷಣ

ಸಾಕ್ಷರತೆಗೆ ಸಂಬಂಧಿಸಿದಂತೆ ಒಟ್ಟು ಜನಸಂಖ್ಯೆಗೆ ಅನ್ವಯವಾಗುವ ಸಾಕ್ಷರತಾ ಪ್ರಮಾಣವು ೧೯೯೧-೨೦೦೧ರ ದಶಕದಲ್ಲಿ ಏರಿಕೆಯಾಗಿಲ್ಲವೆಂಬ ವಿಚಿತ್ರ ಸಂಗತಿಯನ್ನು ಈಗಾಗಲೆ ಗುರುತಿಸಲಾಗಿದೆ. ಈ ಅವಧಿಯಲ್ಲಿ ಒಟ್ಟು ಸಾಕ್ಷರತೆಯಲ್ಲಿ ಉಂಟಾದ ಏರಿಕೆ ಕೇವಲ ಶೇ. ೦.೫೫ ಅಂಶಗಳಷ್ಟಾಗಿದೆ. ಅದೇ ರೀತಿ ಪ.ಜಾ. ಜನಸಮೂಹದ ಸಾಕ್ಷರತಾ ಪ್ರಮಾಣವು ೧೯೯೧ರಲ್ಲಿ ವಿಜಾಪುರ ಜಿಲ್ಲೆಯಲ್ಲಿ ಶೇ. ೪೫.೯೪ರಷ್ಟಿದ್ದುದು ೨೦೦೧ರಲ್ಲಿ ಅದು ಶೇ. ೪೭.೧೬ರಷ್ಟಾಗಿದೆ. ಇಲ್ಲಿನ ಏರಿಕೆ ಪ್ರಮಾಣ ಕೇವಲ ಶೇ. ೧.೨೨ ಅಂಶಗಳಷ್ಟಾಗಿದೆ. ಆದರೆ ರಾಜ್ಯಮಟ್ಟದಲ್ಲಿ ಪ.ಜಾ. ಸಾಕ್ಷರತೆಯು ೧೯೯೧-೨೦೦೧ರ ದಶಕದಲ್ಲಿ ಶೇ. ೩೮.೧೦ ರಿಂದ ಶೇ. ೫೨.೮೭ಕ್ಕೆರಿದೆ. ಅಂದರೆ ಇಲ್ಲಿ ಏರಿಕೆ ಶೇ. ೧೪.೭೭ ಅಂಶಗಳಷ್ಟಾಗಿದೆ. ದಲಿತರು ಮತ್ತು ದಲಿತೇತರರ ನಡುವಿನ ಸಾಕ್ಷರತೆ ಸಂಬಂಧಿ ಅಸಮಾನತೆಯನ್ನು ಮಗೆ ಪೂರ್ಣವಾಗಿ ತೊಡೆದು ಹಾಕುವುದು ಸಾಧ್ಯವಾಗಿಲ್ಲ. ಇದೊಂದು ಸ್ವಾತಂತ್ರ್ಯೋತ್ತರ ಭಾರತದ ಬಹುದೊಡ್ಡ ಸಾಮಾಜಿಕ ವೈಫಲ್ಯವಾಗಿದೆ. ಅನಕ್ಷರತೆಯೆಂಬುದು ವ್ಯಾಪಕವಾಗಿ ಪ.ಜಾ. ಮತ್ತು ಪ.ಪಂ. ಗಳಲ್ಲಿ ಮಡುಗಟ್ಟಿಕೊಂಡಿದೆ. ಅದರ ನಿವಾರಣೆಯ ಗಮನ ಈ ಜನಸಮುದಾಯಗಳ ಕಡೆಗಿರಬೇಕು.

ಒಟ್ಟು ಜನಸಂಖ್ಯೆಯ ಒಟ್ಟು ಸಾಕ್ಷರತಾ ಪ್ರಮಾಣಕ್ಕಿಂತ ಪ.ಜಾ. ಸಾಕ್ಷರತಾ ಪ್ರಮಾಣವು ಕೆಳಮಟ್ಟದಲ್ಲಿದೆ. ಈ ಅಂತರವು ೧೯೯೧ರಲ್ಲಿ ಶೇ. ೧೦.೫೨ರಷ್ಟಿದ್ದುದು ೨೦೦೧ರಲ್ಲಿ ಶೇ. ೯.೮೫ ರಷ್ಟಾಗಿದೆ. ರಾಜ್ಯಮಟ್ಟದಲ್ಲಿ ಈ ಅಂತರವು ಶೇ. ೧೭೯೪ರಷ್ಟಿದ್ದುದು ೨೦೦೧ರಲ್ಲಿ ಅದು ಶೇ. ೧೩.೭೭ರಷ್ಟಾಗಿದೆ. ಇದೊಂದು ವಿಶಿಷ್ಟವಾದ ಸಂಗತಿಯಾಗಿದೆ. ಒಟ್ಟು ಜನಸಂಖ್ಯೆ ಹಾಗೂ ಪ.ಜಾ.ಗಳ ನಡುವಿನ ಸಾಕ್ಷರತಾ ಅಂತರವು ವಿಜಾಪುರ ಜಿಲ್ಲಾಮಟ್ಟದಲ್ಲಿ ರಾಜ್ಯಮಟ್ಟದಲ್ಲಿರುವುದಕ್ಕಿಂತ ಕಡಿಮೆಯಿದೆ. ಆದರೆ ಈ ಅಂತರವು ರಾಜ್ಯಮಟ್ಟದಲ್ಲಿ ತೀವ್ರವಾಗಿ ಕಡಿಮೆಯಾಗುತ್ತಿದ್ದರೆ ವಿಜಾಪುರ ಜಿಲ್ಲಾಮಟ್ಟದಲ್ಲಿ ಅದು ಮಂದಗತಿಯಲ್ಲಿ ಕಡಿಮೆಯಾಗುತ್ತಿದೆ.

ವಿಜಾಪುರ ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ : .ಜಾ. ಮತ್ತು .ಪಂ. ೧೯೯೦ ಮತ್ತು ೨೦೦೧

ಕೋಷ್ಟಕ : .

ವಿವರ

 

ವಿಜಾಪುರ ಜಿಲ್ಲೆ

ಕರ್ನಾಟಕ ರಾಜ್ಯ

೧೯೯೧

೨೦೦೧

೧೯೯೧

೨೦೦೧

ಒಟ್ಟು ಜನಸಂಖ್ಯೆ ಸಾಕ್ಷರತೆ ಒಟ್ಟು ೫೬.೪೬ ೫೭.೦೧ ೫೬.೦೪ ೬೬.೪೬
ಪುರುಷ ೭೦.೪೩ ೬೯.೯೪ ೬೭.೨೬ ೭೬.೧೦
ಮಹಿಳೆ ೪೧.೭೧ ೪೩.೪೭ ೪೪.೩೪ ೫೬.೮೭
ಪ.ಜಾ. ಸಾಕ್ಷರತೆ ಒಟ್ಟು ೪೫.೯೪ ೪೭.೧೬ ೩೮.೧೦ ೫೨.೮೭
ಪುರುಷ ೬೦.೬೦ ೬೧.೭೨ ೪೯.೭೦ ೬೩.೭೫
ಮಹಿಳೆ ೩೦.೩೮ ೩೧.೯೫ ೨೬.೦೦ ೪೧.೭೨
ಪ.ಪಂ. ಸಾಕ್ಷರತೆ ಒಟ್ಟು ೪೪.೨೫ ೪೯.೧೯ ೩೬.೦೦ ೪೮.೨೭
ಪುರುಷ ೫೫.೮೧ ೫೯.೬೮ ೪೭.೯೦ ೫೯.೬೬
ಮಹಿಳೆ ೩೧.೭೦ ೩೧.೮೮ ೨೩.೬೦ ೩೬.೫೭

ಮೂಲ: ಜನಗಣತಿ ವರದಿಗಳು: ೧೯೯೧ ಮತ್ತು ೨೦೦೧

ಅಕ್ಷರಸ್ಥರಲ್ಲಿ ಪ.ಜಾ. ಅಕ್ಷರಸ್ಥರ ಪ್ರಮಾಣಕ್ಕೆ ಸಂಬಂಧಿಸಿದಂತೆ ಸ್ಥಿತಿಯು ರಾಜ್ಯ ಮಟ್ಟಕ್ಕಿಂತ ಜಿಲ್ಲಾಮಟ್ಟದಲ್ಲಿ ಉತ್ತಮವಾಗಿದೆ. ರಾಜ್ಯಮಟ್ಟದಲ್ಲಿನ ಒಟ್ಟು ಅಕ್ಷರಸ್ಥರಲ್ಲಿ ಪ.ಜಾ. ಅಕ್ಷರಸ್ಥರ ಪ್ರಮಾಣ ಶೇ. ೧೨.೬೧ರಷ್ಟಿದ್ದರೆ ವಿಜಾಪುರ ಜಿಲ್ಲಾಮಟ್ಟದಲ್ಲಿ ಅವರ ಪ್ರಮಾಣ ಶೇ. ೧೪.೯೯ರಷ್ಟಿದೆ.

ಈಗಾಗಲೇ ತಿಳಿಸಿರುವಂತೆ ವಿಜಾಪುರ ಜಿಲ್ಲೆಯಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆಯ ಪ್ರಮಾಣ ೨೦೦೧ರಲ್ಲಿ ಶೇ. ೧೮.೪೯ರಷ್ಟಿತ್ತು. ಆದರೆ ಜಿಲ್ಲೆಯ ಒಟ್ಟು ಅಕ್ಷರಸ್ಥರಲ್ಲಿ ಪ.ಜಾ. ಪ್ರಮಾಣ ಕೇವಲ ಶೇ. ೧೪.೯೯. ಅಂದರೆ ಒಟ್ಟು ಜನಸಂಖ್ಯೆಯಲ್ಲಿ ಅವರು ಎಷ್ಟು ಪಾಲುಪಡೆದಿದ್ದಾರೋ ಅದಕ್ಕಿಂತ ಕಡಿಮೆ ಪಾಲನ್ನು ಅಕ್ಷರಸ್ಥರಿಗೆ ಸಂಬಂಧಿಸಿದಂತೆ ಪಡೆದಿದ್ದಾರೆ.

ಪ.ಜಾ. ಸಾಕ್ಷರತೆಗೆ ಸಂಬಂಧಿಸಿದಂತೆ ವಿಜಾಪುರ ಜಿಲ್ಲೆಯ ಸ್ಥಿತಿಯು ರಾಜ್ಯಮಟ್ಟದ ಸ್ಥಿತಿಗಿಂತ ಅನೇಕ ವಿಷಯಗಳಲ್ಲಿ ಉತ್ತಮವಾಗಿದೆ. ಆದರೆ ಸಾಕ್ಷರತೆಯ ಲಿಂಗ ಸಂಬಂಧಿ ಅಂತರದ ಬಗ್ಗೆ ಅದೇ ಮಾತನ್ನು ಹೇಳಲು ಸಾಧ್ಯವಿಲ್ಲ.

ಕೋಷ್ಟಕ – ೮.೮ರಲ್ಲಿ ಇದನ್ನು ತೋರಿಸಿದೆ. ಈ ಕೋಷ್ಟಕದಲ್ಲಿ ಲಿಂಗಸಂಬಂಧಿ ಸಾಕ್ಷರತಾ ಅಂತರವು ಒಟ್ಟು ಜನಸಂಖ್ಯೆಯಲ್ಲಿ ಎಷ್ಟಿದೆ ಮತ್ತು ಪ.ಜಾ.ಯಲ್ಲಿ ಎಷ್ಟಿದೆ ಎಂಬುದನ್ನು ತೋರಿಸಲಾಗಿದೆ. ಅದರ ಜೊತೆಗೆ ಲಿಂಗಸಂಬಂಧಿ ಸಾಕ್ಷರತಾ ಅಂತರವು ವಿಜಾಪುರ ಜಿಲ್ಲೆಯಲ್ಲಿ ಎಷ್ಟಿದೆ ಎಂಬುದರ ಜೊತೆಗೆ ಅದು ಕರ್ನಾಟಕ ರಾಜ್ಯ ಮಟ್ಟದಲ್ಲಿ ಎಷ್ಟಿದೆ ಎಂಬುದನ್ನು ಕೋಷ್ಟಕ ೮.೮ರಲ್ಲಿ ತೋರಿಸಲಾಗಿದೆ.

ಸಾಕ್ಷರತೆಯಲ್ಲಿ ಲಿಂಗಸಂಬಂಧಿ ಅಂತರಗಳು : ೨೦೦೧

ಕೋಷ್ಟಕ.

ವಿವರ

ಒಟ್ಟು ಜನಸಂಖ್ಯೆ ಸಾಕ್ಷರತೆ

.ಜಾ. ಜನಸಂಖ್ಯೆ ಸಾಕ್ಷರತೆ

ವಿಜಾಪುರ ಜಿಲ್ಲೆ ಪುರುಷ ಶೇ.೬೯.೯೪ ಶೇ. ೬೧.೭೨
ಮಹಿಳೆ ಶೇ.೪೩.೪೭ ಶೇ.೩೧.೯೫
ಲಿಂಗಸಂಬಂಧಿ ಸಾಕ್ಷರತಾ ಅಂತರ ಶೇ. ೨೬.೪೭ ಶೇ.೨೯.೭೭
ಕರ್ನಾಟಕ ರಾಜ್ಯ ಪುರುಷ ಶೇ.೭೬.೧೦ ಶೇ.೬೩.೭೫
ಮಹಿಳೆ ಶೇ. ೫೬.೮೭ ಶೇ.೪೧.೭೨
ಲಿಂಗಸಂಬಂಧಿ ಸಾಕ್ಷರತಾ ಅಂತರ ಶೇ. ೧೯.೨೩ ಶೇ.೨೨.೦೩

ಮೂಲ : ಜನಗಣತಿ ವರದಿ೨೦೦೧

ಕೋಷ್ಟಕ-೮.೮ರಲ್ಲಿ ತೋರಿಸಿರುವಂತೆ ಲಿಂಗಸಂಬಂಧಿ ಸಾಕ್ಷರತಾ ಅಂತರದ ಪ್ರಮಾಣವು ರಾಜ್ಯ ಮಟ್ಟದಲ್ಲಿರುವುದಕ್ಕಿಂತ ವಿಜಾಪುರ ಜಿಲ್ಲಾಮಟ್ಟದಲ್ಲಿ ಅಧಿಕವಾಗಿದೆ. ಇದು ಪ.ಜಾ. ಜನಸಂಖ್ಯೆ ಹಾಗೂ ಒಟ್ಟು ಜನಸಂಖ್ಯೆಗೂ ಅನ್ವಯವಾಗುತ್ತದೆ. ಒಟ್ಟು ಜನಸಂಖ್ಯೆಗೆ ಸಂಬಂಧಿಸಿದಂತೆ ಲಿಂಗಸಂಬಂಧಿ ಅಂತರವು ರಾಜ್ಯಮಟ್ಟದಲ್ಲಿ ಶೇ. ೧೯.೨೩ ಅಂಶಗಳಷ್ಟಿದ್ದರೆ ವಿಜಾಪುರ ಜಿಲ್ಲಾಮಟ್ಟದಲ್ಲಿ ಅದು ಶೇ. ೨೬.೪೭ರಷ್ಟಿದೆ. ಪ.ಜಾ.ಗೆ ಸಂಬಂಧಿಸಿದಂತೆ ರಾಜ್ಯಮಟ್ಟದಲ್ಲಿ ಅಂತರ ಶೇ. ೨೨.೦೩ ರಷ್ಟಿದ್ದರೆ ವಿಜಾಪುರ ಜಿಲ್ಲಾಮಟ್ಟದಲ್ಲಿ ಅದು ಶೇ. ೨೯.೭೭ರಷ್ಟಿದೆ.

ಕೋಷ್ಟಕ ೮.೮ರಲ್ಲಿ ಕಂಡುಬರುವಂತೆ ಸಾಕ್ಷರತೆಯಲ್ಲಿ ಪ.ಜಾ.ಯ ಸ್ಥಿತಿಯು ಒಟ್ಟು ಜನಸಂಖ್ಯೆಯ ಸಾಕ್ಷರತೆಗಿಂತ ಕೆಳಮಟ್ಟದಲ್ಲಿದೆ. ಆದರೆ ಲಿಂಗಸಂಬಂಧಿ ಸಾಕ್ಷರತಾ ಅಂತರದಲ್ಲಿ ಮಾತ್ರ ಪ.ಜಾ.ಯ ಸ್ಥಿತಿಯು ಒಟ್ಟು ಜನಸಂಖ್ಯೆಯ ಸ್ಥಿತಿಗಿಂತ ಅಧಿಕವಾಗಿದೆ. ಒಟ್ಟಾರೆಯಾಗಿ ಇಷ್ಟನ್ನು ಹೇಳಬಹುದು.

೧. ಪ.ಜಾ. ಜನಸಂಖ್ಯೆಯ ಸಾಕ್ಷರತಾ ಪ್ರಮಾಣವು ಒಟ್ಟು ಜನಸಂಖ್ಯೆಯ ಸಾಕ್ಷರತಾ ಪ್ರಮಾಣಕ್ಕಿಂತ ಕಡಿಮೆಯಿದೆ.

೨. ಒಟ್ಟು ಜನಸಂಖ್ಯೆ ಹಾಗೂ ಪ.ಜಾ. ಜನಸಂಖ್ಯೆಗಳ ನಡುವಿನ ಸಾಕ್ಷರತಾ ಅಂತರವು ರಾಜ್ಯಮಟ್ಟಕ್ಕಿಂತ ವಿಜಾಪುರ ಜಿಲ್ಲೆಯಲ್ಲಿ ಕೆಳಮಟ್ಟದಲ್ಲಿದೆ.

೩. ಒಟ್ಟು ಅಕ್ಷರಸ್ಥರಲ್ಲಿ ಪ.ಜಾ. ಅಕ್ಷರಸ್ಥರ ಪ್ರಮಾಣಕ್ಕೆ ಸಂಬಂಧಿಸಿದಂತೆಯೂ ವಿಜಾಪುರ ಜಿಲ್ಲೆಯ ಸ್ಥಾನವು ರಾಜ್ಯಮಟ್ಟಕ್ಕಿಂತ ಉತ್ತಮವಾಗಿದೆ.

೪. ಲಿಂಗಸಂಬಂಧಿ ಸಾಕ್ಷರತಾ ಅಂತರಕ್ಕೆ ಸಂಬಂಧಿಸಿದಂತೆ ವಿಜಾಪುರ ಜಿಲ್ಲೆಯಲ್ಲಿ ಸ್ಥಿತಿಯು ರಾಜ್ಯಮಟ್ಟದ ಸ್ಥಿತಿಗಿಂತ ಕೆಳಮಟ್ಟದಲ್ಲಿದೆ.