ಎಡದಿಂದ ಬಲಕ್ಕೆ

1) ಆಹಾರಕ್ಕೆ ರುಚಿನೀಡುವ ವಸ್ತು? (2)

2) ಭೂಮಿಯಲ್ಲಿ ಹೀಗಾದಾಗ ಎಲ್ಲವೂ ಅಸ್ತವ್ಯಸ್ತ (3)

4) ಇದೊಂದು ಭಾರವಾದ ಲೋಹ (2)

8) ದಾಹಕ್ಕೆ ಅಮೃತಧಾರೆಯಾದ ಇದು ಇಂದು ವಿಷಪೂರಿತವಾಗುತ್ತಿದೆ (2)

9) ಗಾಂಧೀಜಿಗೆ ಪ್ರಿಯವಾದ ಬಟ್ಟೆಯ ಮೂಲ ಇದು (2)

12) ಆರ್ಯಭಟನನ್ನು ಹೀಗೆಂದೂ ಗುರುತಿಸುವರು (4)

13) ಆಮ್ಲೀಯ ಎಂಬುದಕ್ಕೆ ಪ್ರತಿಯಾದುದು (4)

15) ತೂಕಕ್ಕೆ ಇನ್ನೊಂದು ಹೆಸರು (3)

17) ಇದು ಕಬ್ಬಿಣದ ಆಕ್ಸೈಡ್ (3)

20) ಇಂಗಾಲದ ಬಹುರೂಪಿಯಾದ ಇದು ಅತ್ಯಂತ ಕಠಿಣ (3)

21) ನೈಸರ್ಗಿಕ ನಾರಿನ ಮೂಲ (3)

22) ಹಲವಾರು ಔಷಧೀಯ ಗುಣವುಳ್ಳ ಮರ (2)

 

ಮೇಲಿನಿಂದ ಕೆಳಕ್ಕೆ

1) ಗಟ್ಟಿಯಾದ ಹಿಡಿತಕ್ಕೆ ಹೆಸರಾದ ಪ್ರಾಣಿ (3)

3) ವಸ್ತುಗಳ ಸ್ಥಾನದಲ್ಲಿ ಇದು ಆದರೆ ‘ಕೆಲಸ’ ಆದಂತೆ (4)

5) ಉತ್ತಮ ಬೆಳೆ ಬೆಳೆಯಲು ಮಣ್ಣಿನಲ್ಲಿರಬೇಕಾದುದು (3)

6) ಇಲಿಯ ವಾಸಸ್ಥಳ (2)

7) ಮೆಗ್ನೀಷಿಯಂ ಇದಕ್ಕೊಂದು ಉದಾಹರಣೆ (2)

10) ವಿಜ್ಞಾನಿಗಳ ಕಣ್ಣು ಈಗ ಈ ಆಕಾಶ ಕಾಯದ ಮೇಲೆ  (3)

11) ರೇಖಾಕೃತಿಗಳಲ್ಲಿ ಇದೂ ಒಂದು (3)

14) ಮೂಳೆಗಳ ವಿಷಯ ತಿಳಿಯಲು ಇದೊಂದು

ಉತ್ತಮ ಸಾಧನ  (4)

16) ವಿಲಿಯಂ ಹಾರ್ವೆ ಇದರ ಪರಿಚಲನೆ ಕಂಡು ಹಿಡಿದ (2)

17) ಲಿಪಿಡ್ ಇರುವ ಈ ಪದಾರ್ಥವನ್ನು ಸಾಲ  ಮಾಡಿಯಾದರೂ ತಿನ್ನಬೇಕು ಎನ್ನುವ ಗಾದೆಯಿದೆ (2)

18) ನಯನದ ಮುಖ್ಯವಾದ ಭಾಗ (3)

19) ಭಾರತ ಇದರ ತವರುಮನೆ (3)

 

ವಿಜ್ಞಾನ ಚಕ್ರಬಂಧ ರಚಿಸವವರಿಗೆ ಕೆಲವು ಸೂಚನೆಗಳು:

1) ಯಾವುದೇ ಖಾಲಿ ಮನೆಯಿಂದ ಹೊರಟು ಖಾಲಿ ಮನೆಗಳ ಮೂಲಕವೇ ಹಾದು ಬೇರೆ ಯಾವುದೇ ಖಾಲಿ ಮನೆಯನ್ನು ತಲಪುವಂತಿರಲಿ.

2) ಪದ ವೈಜ್ಞಾನಿಕವಲ್ಲದಿದ್ದರೆ ಅದರ ಬಗ್ಗೆ ನೀಡುವ ಸೂಚನೆಯಲ್ಲಾದರೂ ವೈಜ್ಞಾನಿಕ ಅಂಶವಿರಲಿ.

3) ‘ಎಡದಿಂದ ಬಲಕ್ಕೆ’, ‘ಕೆಳಗಿನಿಂದ ಮೇಲಕ್ಕೆಎಂಬ ಸೂಚನೆಗಳು ಬೇಡ