೧.       ಸಂತ ಜ್ಞಾನದೇವ
ಮ್ಹಣತೀ ಸಂಸಾರೀ ಜನ್ಮಿಜೇ | ಯಜ್ಞಾದೀ ಯಜನ ಕೀಜೆ |
ಮಗ ಸ್ವರ್ಗ ಸುಖ ಭೋಗಿಜೇ | ಮನೋಹರ ||
ಏಥ ಹೇ ವಾಚೂನೀ ಕಾಹೀ | ಆಣಿಕ ಸರ್ವಥಾ ಸುಲಭ ನಾಹೀ |
ಐಸೇ ಅರ್ಜುನಾ ಬೋಲತೀ ಪಾಹೀ | ದುರ್ಬುದ್ಧಿ ತೇ ||
ದೇಖೈ ಮನಾ ಅಭಿಭೂತ | ಹೋವೂನಿ ಕರ್ಮ ಆಚರತ |
ಕೇವಲ ಭೋಗೀ ಚಿತ್ತ | ದೇವುನಿಯಾ ||
ಕ್ರಿಯಾ ವಿಶೇಷೇ ಬಹುತೇ | ನ ಲೋಪೀತಿ ವಿಧಿತೇ |
ನಿಪುಣ ಹೋವುನೀ ಧರ್ಮಾತೇ | ಅನುಷ್ಠಿತೀ ||
ಪರಿ ಏಕ ಚಿ ಕೂಡ ಕರೀತಿ | ಜೇ ಸ್ವರ್ಗಾಕಾಮು ಮನೀ ಧರಿತೀ |
ಯಜ್ಞ ಪುರುಷ ಚೂಕತೀ | ಭೋಕ್ತಾ ಜೋ ||
ಜೈಸಾ ಕಾಪುರಚಾ ರಾಶೀ ಕೀಜೇ | ಮಗ ಅಗ್ನಿಲಾವುನಿ ಜಾಲೀಜೆ |
ಕಾ ಮಿಷ್ಟಾನ್ನೀ ಸಂಚರಿಜೇ | ಕಾಲಕೂಟ ||
ದೇಖೈ ಅಮೃತಕುಂಭ ಜೋಡಲಾ | ತೋ ಪಾಹೇ ಹಾಲೌನಿ ಉಲಂಡಿಲಾ |
ತೈಸಾ ನಾಶೀತಿ ಧರ್ಮ ನಿಫಲಾ ಹೇತುಕ ಪಣೇ
(ಜನಿಸೆ ಸಂಸಾರದೊಳು | ಮಾಡಬೇಕು ಯಜ್ಞಯಾಗಗಳ |
ಭೋಗಿಸು ಸ್ವರ್ಗವ ನಂತರ | ಮನೋಹರದೊಳು ||
ಇದನುಳಿದು ಇಲ್ಲ | ಮತ್ತಾವುದು ಸರ್ವಥಾ ಸುಲಭ |
ಇಂತು ನುಡಿದಿಹರ ನೋಡು ಅರ್ಜುನ | ದುರ್ಬುದ್ಧಿಯದು ||
ನಿಷ್ಠ ಮನದೊಳು | ಆಚರಿಸಿಹರು ಕರ್ಮಂಗಳನು |
ಭೋಗಕಷ್ಟೆ ಕೊಟ್ಟು | ಚಿತ್ತವನು ||
ವಿದಿತ ಕ್ರಿಯಾ ವಿಶೇಷಂಗಳ | ತಪ್ಪದೆ ಮಾಡುವರು |
ನಿಪುಣರಂತೆ ಧರ್ಮದೊಳೇ | ಅನುಸರಿಸಿಹರು ||
ಒಂದಹುದು ಭಿನ್ನ | ಸ್ವರ್ಗಕಾಮದ ಧರಿಸಿಹರ ಮನದಿ |
ಮರೆತಿಹರು ಯಜ್ಞ ಪುರುಷನ | ಭೋಕ್ತೃಗಳವರು ||
ಅದಹುದು ರಾಶಿಹಾಕಿ ಕರ್ಪುರ | ಅಗ್ನಿಯ ಕೊಟ್ಟಂತೆ ಮತ್ತೆ |
ಮಾಡಿ ಮಿಷ್ಟಾನ್ನಂಗಳ | ಬೆರೆಸಿದಂತೆ ವಿಷ ||
ಗಳಿಸಿ ಅಮೃತಕುಂಡ | ಒದೆದಂತೆ ಮತ್ತೆ ಕಾಲೊಳಗೆ |
ಅಂತು ಕೆಡಿಸಿಹರು ಧರ್ಮವನು | ಸ್ವಾರ್ಥದೊಳು ||

೨.       ಸಂತ ನಾಮದೇವ
ಧನ್ಯ ತೋಚಿ ದೇಶ ಜೇಥೆ ಸಂತವಾಸ | ತಾಪತ್ರಯ ದೋಷ ಜಾತೀ ಸತ್ಯ ||
ಧನ್ಯ ಮಾತಾಪಿತಾ ಉಭಯಕುಳ ಶುದ್ಧತಾ | ತೋಚಿ ಭಜೇ ಸಂತಾ ನಿರ್ಧಾರೇಂಸಿ ||
ತೀರ್ಥರೂಪೀ ಜಳ ವಿಲಂಬೇ ಕರೀ ನಿರ್ಮಳ | ಸಂತದರ್ಶನ ತತ್ಕಾಳ ಶುದ್ಧ ಹೋತೀ ||
ಧಾತುಮಯ ಮೂರ್ತಿ ಚಿರಕಾಳೇ ಫಳತೀ | ಸಂತಾಂಚೇ ಸಂಗತಿ ನಿಜ ಸ್ವಾರ್ಥ ||
ನಾಮ ಮ್ಹಣೇ ಮುಕ್ತಿ ಜೆ ನರ ಇಚ್ಛತೀ | ಸಂತಾಂಚೇ ಸಂಗತಿ ಧರತೀ ಭಾವ ||

(ಧನ್ಯವಹುದಾ ದೇಶ ಎಲ್ಲಹುದು ಸಂತವಾಸ | ತಾಪತ್ರಯ ದೋಷಂಗಳು ಕಳೆವುದು ಸತ್ಯ ||
ಧನ್ಯವಹುದು ಮಾತಾಪಿತಾ ಉಭಯಕುಲ ಶುದ್ಧತೆ | ಭಜಿಸಿರೆ ಅದನೆ ನಿರ್ಧರಿಸಿ ಸಂತ ||
ತೀರ್ಥರೂಪಿ ಜಲದಿ ವಿಳಂಬವೊ ನಿರ್ಮಲ | ಸಂತದರ್ಶನದಿ ಶುದ್ಧಿಯೋ ತತ್ಕಾಲದೊಳೆ ||
ಧಾತುಮಯ ಮೂರುತಿ ಚಿರಕಾಲ ಮುಚ್ಚುವುದು | ಸಂತರ ಸಂಗದೊಳೆ ನಿಜದರ್ಥವಿಹುದು ||
ನಾಮನು ಹೇಳಿಹನು ಮುಕ್ತಿಯನಿಚ್ಛಿಪ ನರರೆ | ಸಂತರ ಸಂಗದೊಳು ಬರುವುದೀ ಭಾವ ||)

೩.       ಸಂತ ಜನಾಬಾಯಿ
ಡೋಈಚಾ ಪದರಾ ಆಲಾ ಖಾಂದ್ಯಾವರೀ |
ಭರಲ್ಯಾ ಬಾಜಾರೀ ಜಾಈನ ಮೀ ||
ಹಾತೀ ಘೇ ಈನ ಟಾಳ, ಖಾಂದ್ಯಾವರೀ ವೀಣಾ |
ಆತಾ ಮಜ ಮನ ಕೋಣ ಕರೀ ||
ಪಂಢರೀಚ್ಯಾ ಪೇಠೇ ಮಾಂಡಿಯೇಲೇ ಪಾಲ |
ಮನಗಟಾವರ ತೇಲ ಘಾಲಾ ತುಮ್ಹೀ ||
ಜನೀ ಮ್ಹಣೇ ದೇವ ಮೀ ಝಾಲೇ ಯೇಸವಾ |
ರಿಘಾಲೇ ಕೇಶವಾ ಘರ ತುಝೇ ||

(ತಲೆಯ ಸೆರಗು ಬಂತು ಹೆಗಲ ಮೇಲೆ |
ಹೋಗುವೆನು ನಾ ನೆರೆದಿಹ ಬಜಾರಿನಲಿ ||
ಹಿಡಿವೆ ಕೈಯಲಿ ತಾಳ, ಹೆಗಲಲಿ ವೀಣೆ |
ಆರು ತಡೆವರು ನನ್ನನು ಇನ್ನು ||
ಪಂಢರಿಯ ಪೇಟೆಯೊಳು ಹಾಕುವೆ ಗುಡಾರ |
ಮನಬಂಧದಿ ನೀವು ತೈಲವನು ಎರೆಯಿರಿ ||
ಜನೀ ಹೇಳುತಿಹಳು ದೇವಾ ನಾನಾಗಿಹೆನು ಮುಕ್ತೆ |
ಹೊಕ್ಕಿರುವೆ ಕೇಶವ ನಿನ್ನ ಮನೆಯೊಳಗೆ ||)

೪.       ಸಂತ ತುಕಾರಾಮ
ಚವದಾ ಭುವನೇ ಜ್ಯಾಚಿಯೇ ಪೋಟೀ |
ತೋಚಿ ಆಮ್ಹೀ ಕಂಠೀ ಸಾಂಠವಿಲಾ ||
ಕಾಯ್ ಏಕ ಉಣೇ ಆಮುಚಿಯೇ ಘರೀ |
ವೋಳಂಗತಿ ದ್ವಾರೀ ರಿದ್ಧಿಸಿದ್ಧಿ ||
ಅಸುರ ಜಯಾನೆ ಘಾತಲೀ ಕೋರಡೀ |
ತೋ ಆಮ್ಹಾಸೀ ಜೋಡೀ ಕರ ದೋನ್ಹೀ ||
ರೂಪ ನಾಹೀ ರೇಖಾ ಜಯಾಸೀ ಆಕಾರ |
ಆಮ್ಹೀ ತೋ ಸಾಕಾರ ಭಕ್ತಿ ಕೇಲಾ ||
ಅನಂತ ಬ್ರಹ್ಮಾಂಡೇ ಜಯಾಚಿಯೇ ಅಂಗೀ |
ಸಮಾನ ತೋ ಮುಂಗೀ ಆಮ್ಹಾಸಾಠೀ ||
ತುಕಾಮ್ಹಣೇ ಆಮ್ಹೀ ದೇವಾಹೂನೀ ಬಳೀ |
ಝೂಲೋ ಹೇ ನಿರಾಳೀ ಠೇವುನೀ ಆಶಾ ||

(ಈರೇಳು ಭುವನಂಗಳು ಇಹುದಾರ ಉದರದೊಳು |
ಸ್ತುತಿಸುವೆ ಅವನ ಕಂಠದೊಳು ||
ಏನಹುದು ಕೊರತೆ ಎಮ್ಮ ಮನೆಯೊಳಗೆ |
ಸಂಚರಿಸಿಹರು ರಿದ್ಧಿಸಿದ್ಧಿಯರು ದ್ವಾರದೊಳಗೆ ||
ಅಸುರರ ದಮನ ಮಾಡಿಹ ಅವನು |
ಎನ್ನೆದುರು ಜೋಡಿಸಿಹ ಕರಗಳನು ||
ಆವನಿಗಿಲ್ಲವೋ ರೂಪುರೇಖೆ ಆಕಾರ |
ನೀಡಿಹೆ ನಾನು ಭಕ್ತಿಯೊಳು ಸಾಕಾರ ||
ಆರ ಅಂಗದೊಳು ಅನಂತ ಬ್ರಹ್ಮಾಂಡ ಹುದುಗಿಹುದೊ |
ಸಮಾನನಹನು ಎಮಗೆ ಇರುವೆಯಂದದಿ ||
ತುಕಾ ಹೇಳಿಹನು ನಾನು ದೇವನಿಂ ಬಲನು |
ಆದೆನಿಂತು ಮುಕ್ತ ಬದಿಗಿಟ್ಟು ಆಶೆಗಳನು ||

೫.       ಸಂತ ಶೇಖ್‌ಮಹಮ್ಮದ್ (ಕ್ರಿ.ಶ. ೧೫೬೦-೧೬೫೦)
ವಿ-ಮ್ಹಣಜೆ ವಿಕಾಸಲಾ | ಠ-ಮ್ಹಣಜೆ ಠಸಾವಲಾ |
ಮ್ಹಣೋನಿ ವಿಠಲ ಬೋಲಾ | ಟೀಕಾ ಪ್ರಶ್ನೀಕ ||
ವಿಠ್ಠಲ ನವ್ಹೇ ಧೋಂಡ್ಯಾ ಸಾಯಕ | ಖಾಣಿ ವಾಣಿ ವ್ಯಾಪಕ |
ಜೈಸಾ ಜಳ ವಾಯೂ ಪಾವಕ | ಸರ್ವತ್ರ ಠಾಯೀ ||
ವಿರಹಿತ ಮಹೀ ವ್ಯೋಮಾ | ಠಕಠಕೀ ಶಮ-ದಮಾ |
ಲೌಕರೀ ಲಾಘೇ ಆಮ್ಹಾ | ಭಾವಿಕ ಭೋಳ್ಯಾ ||
ಭಾವಿಕ ಭೋಳ್ಯಾ ರಕ್ಷಣ | ಶ್ರೀಹರಿ ವ್ಯಾಪೂನ ನಿರ್ಗುಣ |
ಜೈಸಿ ಕರೀ ತೇ ಜತನ | ಜನನೀ ಬಾಳಕಾ ||
ಹೇ ಕಳೋ ಆಲೇ ಪುರತೇ | ಶೇಖ್ ಮಹ್ಮದಾ ಭಾತಿ |
ಕೃಪಾಕೇಲೀ ಜ್ಞಾನದೇವೇ | ಸದ್ಗುರುಭಕ್ತಿ |

(ವಿಕಸನದಿ ಮೂಡಿದನದಕೆ | ವಿಠ್ಠಲನೆನ್ನಿರಿ ||
ವಿಠ್ಠಲನಲ್ಲವೊ ಶಿಲೆಯ ಅಂಬು | ವ್ಯಾಪಿಸಿಹ ಮಾತಿನ ಗಣಿ ||
ಎಂತು ಜಲವಾಯುವಗ್ನಿ ಸರ್ವತ್ರ ||
ವಿರಹಿತನು ವ್ಯೋಮ | ಶಮದಮಕೆ ಟಕಟಕನೆ ||
ಬರುವನು ಭಾವಿಕ ಭೋಳೆ ಭಕ್ತರಿಗೆ | ನೀಡೆ ದರುಶನ ||
ಎಮಗಹನು ರಕ್ಷಕ | ಶ್ರೀಹರಿ ವ್ಯಾಪಿಸಿಹನು ನಿರ್ಗುಣ ||
ಪೊರೆದಿಹನೆಮ್ಮನು | ಜನನಿಯಂದದಿ ಬಾಲಕರನು ||
ತಿಳಿಯಿದಿಹನಿದನು ಶೇಖ್‌ಮಹಮ್ಮದನು |
ಜ್ಞಾನದೇವನಂಥ ಸದ್ಗುರ ಭಕ್ತಿಗೆ ||)

೬.       ಸಂತ ಚೋಖಾಮೇಳ
ಊಸ್ ಡೋಂಗಾ ಪರಿ ರಸ ನವ್ಹೇ ಡೋಂಗಾ | ಕಾಯ ಭುಲಲಾಸೀ ವರಲಿಯಾ ರಂಗಾ ||
ಕಮಾನ ಡೋಂಗಿ ಪರಿ ತೀರ್ ನವ್ಹೇ ಡೋಂಗಾ | ಕಾಯ ಭುಲಲಾಸೀ ವರಲಿಯೇ ರಂಗಾ ||
ನದೀ ಡೋಂಗೀ ಪರಿಜಳ ನವ್ಹೇ ಡೋಂಗೇ | ಕಾಯ ಭುಲಲಾಸೀ ವರಲಿಯೇ ರಂಗೇ ||
ಚೋಕಾ ಡೋಂಗಾ ಪರಿಭಾವ ನವ್ಹೇ ಡೋಂಗಾ | ಕಾಯ ಭುಲಲಾಸೀ ವರಲಿಯಾ ರಂಗಾ ||

(ಕಬ್ಬು ಡೊಂಕಹುದು ರಸವದು ಡೊಂಕೆ |
ಮರುಳಾದೆಯೆಂತು ಮೇಲಣ ಬಣ್ಣಕೆ ||
ಕಮಾನು ಡೊಂಕಹುದು ತೊಲೆಯದು ಡೊಂಕೆ |
ಮರುಳಾದೆಯೆಂತು ಮೇಲಣ ಬಣ್ಣಕೆ ||
ನದಿಯು ಡೊಂಕಹುದು ಜಲವದು ಡೊಂಕೆ |
ಮರುಳಾದೆಯೆಂತು ಮೇಲಣ ಬಣ್ಣಕೆ |
ಚೋಕಾನಹುದು ಡೊಂಕು ಭಾವವದು ಡೊಂಕೆ |
ಮರುಳಾದೆಯೆಂತು ಮೇಲಣ ಬಣ್ಣಕೆ ||)