“ಚಿಣ್ಣರ ಜಿಲ್ಲಾ ದರ್ಶನ”
ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮ

ಪ್ರವಾಸದ ಪ್ರಾಮುಖ್ಯತೆ
ಅನುಭವಗಳ ಮೂಲಕ ಪಡೆದ ಶಿಕ್ಷಣವೇ ಶ್ರೇಷ್ಠಮಟ್ಟದ ಶಿಕ್ಷಣ. ಈ ಶೈಕ್ಷಣಿಕ ಪ್ರವಾಸದ ಉದ್ದೇಶಗಳು ಈ ಕೆಳಕಂಡಂತಿವೆ.
೧) ವಿದ್ಯಾರ್ಥಿಗಳಲ್ಲಿ ವೈವಿಧ್ಯಮಯ ಜನಜೀವನ, ಶಿಲ್ಪಕಲೆ, ಐತಿಹಾಸಿಕ ಕಟ್ಟಡಗಳ ಬಗ್ಗೆ ಧನಾತ್ಮಕ ಮನೋಭಾವನೆಗಳ ಸಂವರ್ಧನೆ.

೨) ಸ್ಥಳೀಯ ಸಂಸ್ಕೃತಿ ಹಾಗೂ ಪರಂಪರೆಗಳ ಪರಿಚಯ ಮತ್ತು ನಾಡುನುಡಿ ಕುರಿತಾಗಿ ಹೆಮ್ಮೆಯನ್ನು ಹಾಗೂ ಅಭಿಮಾನವನ್ನು ಬೆಳೆಸುವುದು.

೩) ಸಹಬಾಳ್ವೆ ಹಾಗೂ ಸಹಭಾಗಿತ್ವದ ಮಹತ್ವ ತಿಳಿಸುವುದು.

೪) ಇತರೆ ಧರ್ಮ, ಜಾತಿ ಹಾಗೂ ಪ್ರಾಂತ್ಯದ ಜನರೊಂದಿಗೆ ಸಂವೇದನೆ ಮತ್ತು ಸಹಕಾರ ಮನೋಭಾವ ಬೆಳೆಸುವುದು.

೫) ವೈಜ್ಞಾನಿಕ ಹಾಗೂ ತಾಂತ್ರಿಕ ಅಭಿವೃದ್ಧಿಯ ಬಗ್ಗೆ ಮಾಹಿತಿಯನ್ನು ಪಡೆಯುವುದು.

೬) ಮಕ್ಕಳಲ್ಲಿ ಸರ್ವತೋಮುಖ ವ್ಯಕ್ತಿತ್ವದ ವಿಕಾಸವನ್ನುಂಟು ಮಾಡುವುದು.

೭) ಪಠ್ಯಪುಸ್ತಕದಲ್ಲಿನ ಮಾಹಿತಿ ಹಾಗೂ ಹೊರ ಪ್ರಪಂಚದ ವಾಸ್ತವ್ಯದ ನಡುವೆ ಇರುವ ಅಂತರವನ್ನು ಅರ್ಥೈಸುವುದು.

೮) ಮಕ್ಕಳಲ್ಲಿ ಸೃಜನಾತ್ಮಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು.

೯) ಕಲಿಕೆಯನ್ನು ಶಾಶ್ವತಗೊಳಿಸುವುದು.

೧೦)ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವನೆ, ಸಮಾಜ ಸೇವೆ, ಭಾವೈಕ್ಯತೆ, ದೇಶಪ್ರೇಮ ಮುಂತಾದ ಸದ್ಗುಣಗಳನ್ನು ಬೆಳೆಸುವುದು.

೧೧) ಮಕ್ಕಳು ಶಿಕ್ಷಣದಲ್ಲಿ ಆಸಕ್ತಿ ಬೆಳೆಸಿಕೊಂಡು ಪಠ್ಯೇತರ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸುವಂತೆ ಪ್ರೆರೇಪಿಸುವುದು.

೧೨)ಮಕ್ಕಳು ಶಾಲೆಯತ್ತ ಹೆಚ್ಚು ಆಕರ್ಷಿತರಾಗಿ ಹಿರಿಯ ಪ್ರಾಥಮಿಕ ಹಂತದಲ್ಲಿ ಶಾಲೆ ಬಿಡುವ ಸಾಧ್ಯತೆಗಳನ್ನು ಕಡಿಮೆ ಮಾಡುವುದು.

ಸಮಸ್ಯೆ ಇದ್ದಲ್ಲಿ ಕೆಳಗಿನವರನ್ನು ಸಂಪರ್ಕಿಸಬಹುದು.

ಉಪನಿರ್ದೇಶಕರು (ಆಡಳಿತ) – ೯೪೪೮೯೯೯೩೪೩

ಉಪನಿರ್ದೇಶಕರು (ಅಭಿವೃದ್ಧಿ) – ೯೪೪೮೯೯೯೩೭೨

ಡಿ.ವೈ.ಪಿ.ಸಿ. – ೯೪೪೮೯೯೯೩೯೯

 

ಕ್ಷೇತ್ರ ಶಿಕ್ಷಣಾಧಿಕಾರಿಗಳುಕ್ಷೇತ್ರ ಸಮನ್ವಯಾಧಿಕಾರಿಗಳು

ಬ್ಯಾಡಗಿ ೯೪೮೦೬೯೫೨೪೬ ೯೪೮೦೬೯೫೨೫೩

ಹಾನಗಲ್ ೯೪೮೦೬೯೫೨೪೭ ೯೪೮೦೬೯೫೨೫೪

ಹಾವೇರಿ ೯೪೮೦೬೯೫೨೪೮ ೯೪೮೦೬೯೫೨೫೫

ಹಿರೇಕೆರೂರು ೯೪೮೦೬೯೫೨೪೯ ೯೪೮೦೬೯೫೨೫೬

ರಾಣೇಬೆನ್ನೂರು ೯೪೮೦೬೯೫೨೫೦ ೯೪೮೦೬೯೫೨೫೭

ಸವಣೂರು ೯೪೮೦೬೯೫೨೫೧ ೯೪೮೦೬೯೫೨೫೮

ಶಿಗ್ಗಾಂವ ೯೪೮೦೬೯೫೨೫೨ ೯೪೮೦೬೯೫೨೫೯