ಬರುತ್ತವೆ : ಕ್ಲಾಸಲ್ಲಿ ಕೂತು ಕತ್ತು ಬಗ್ಗಿಸಿಕೊಂಡು
ಪಾಠ ಕೇಳುತ್ತವೆ.

ಯಾರಾದರೂ ನಾಲ್ಕು ಜನ ಬಂದು ಕಲ್ಲೆಸೆದು
ಜೈ ಎಂದು ಕೂಗಿದರೆ, ಪುಸ್ತಕಗಳನ್ನು ಬಗಲಿಗಿಟ್ಟು
ಹೊರಕ್ಕೆ ಪುರ್ರೆಂದು ಹಾರಿ ಹೋಗುತ್ತವೆ.
ಮರ ಮರದ ಕೆಳಗೆ ಕೂತು, ಕಣ್ಣಲ್ಲಿ ಕಣ್ಣಿಟ್ಟು
ಸಲ್ಲಾಪ ನಡೆಸುತ್ತವೆ.
ಮತ್ತಷ್ಟು ದಿನ ಗೂಡಿನಲ್ಲೇ ಕೂತು ಗುಟುಕರಿಸುತ್ತ
ಕಾಯುತ್ತವೆ.
ಯಥಾಸ್ಥಿತಿಗೆ ಹಿಂದಿರುಗಿದಾಗ, ಸದ್ದಿರದೆ ಬಂದು
ಕ್ಲಾಸಲ್ಲಿ ಕೂರುತ್ತವೆ ; ವಿಸ್ತ್ತಾರವಾದ ಗದ್ದೆಗಳ
ತೆನೆಗಳ ಮೇಲೆ ಕೂತು, ಕಾಳು ಹೆಕ್ಕುತ್ತವೆ.

ಸರಿ, ಮತ್ತೊಂದು ಸಲ ಯಾರಾದರೂ ಬಂದು
ಕಲ್ಲೆಸೆವತನಕ,
ಇಲ್ಲ ಇವಕ್ಕೆ ಏನೇನೂ ತವಕ.