ಶ್ರೀವೀರ ಬ್ರಹ್ಮಾನಂದ ಕಾರಣ ಗುರುವರಧೀರ
ಚಿನ್ಮಯ ರೂಪ ಕಾರುಣನಿಧಿಯೇ
ಕರುಣಿಸೈ ಕೃಪೆಯಿಂದ ಜನ್ಮಹೆ | ಮರಳಿ
ಬಾರದ ಜನ್ಮವನ್ನು ಅರಿವು ಕೋರಿದನಾದ
ಗೋಪೈದೋಳು ಬೆರೆತ ಪರತರ ವಸ್ತುವೆ || ಶ್ರೀವೀರ ||

ಸ್ಮರಿಸಿ ಬೇಡುತ ಬಂದೆ ಪರಮ ಪಾವನ ತಂದೆ
ಬೆರೆತ ಮುಗ್ರವನ್ನು ಕರುಣಿಸು ಮುಂದೆ ||
ನಿರುತದೊಳಗೆನ್ನ ಬೆರಸೈ
ದುರಿತ ದೂರನೆ ನಿನ್ನ ನಂಬಿದೆ
ಪರಿ ಪರಿಯ ದುಃಖಗಳ ಹರಿಸೈ

ಬೆಟ್ಟದ ಪರಿಯೊಳು ಹುಟ್ಟಿದ ಭವದೊಳು
ಸುಟ್ಟು ಮುಕ್ತಿಯನಿಟ್ಟು ಹುಟ್ಟು ನಾಶವ ಮಾಡಯ್ಯ
ಅಷ್ಟಮದಗಳ ತರಿದು ಕಾಡುವ
ದುಷ್ಟರೈವರ ತುಳಿದು ಅನುಗ್ರಹ
ಕೊಟ್ಟು ರಕ್ಷಿಸು ಬೇಗ ಎನ್ನೊಳು
ಇಷ್ಟ ಲಿಂಗದ ಶ್ರೇಷ್ಠಗುರುವರ || ಶ್ರೀವೀರ ||

ಈ ಶಣುತ್ರಯದೊಳು ಆಶಾಪಾಶದಿ ಸಿಲುಕಿ
ಘಾಸಿಯ ಪಡಲಾರೆ ದೋಷರಹಿತನೆ
ಹೇಸಿಗೆಯ ಭವ ಸಾಗರದಿ ಮುಳುಗಿ
ಲೇಸು ಕಾಣೆಯ ಜನನ ಮರಣ
ಮೋಸ ಹೋದಿತು ತೆರದ ಕೃಪೆಯೊಳು
ಸಲಹೋ ನೀ ಪರಮಾತ್ಮ ಬೇಡುವೆ || ಶ್ರೀವೀರ ||

ಜೀವನ ಪರಮನೊಳ್ ಐಕ್ಯವೆಂಬುವರಿ
ಭಾವವ ತಿಳಿ ಎನ್ನೊಳು ಪಾವನ ಮೂರ್ತಿ ||
ಯಾವುದನು ಉಪದೇಶಗೊಳಿಸದೆ
ಈ ವಿಧದಿ ಬಳಲಿಪುದು ತರವೇ ||
ಕಾಯ್ವರಾಶಿ ನೀನು ಮುನಿದೊಡೆ
ದೇವ ಪ್ರಸನ್ನದಿ ಕಾಯೋ ಬೇಡುವೆ || ಶ್ರೀವೀರ ||

ಧಾರುಣಿಯೊಳು ಪೂಕಲೂರು ಪರಮಗುರು
ವೀರ ಬ್ರಹ್ಮೇಂದ್ರನೆ ಭೂರಿ ಮಹಿಮೆಯ ಕೊಡುವಂತೆ |
ದಾರಿ ತಪ್ಪಿದೆನಯ್ಯ ಪಾವನರಾದವರಿಗೆ ಇನ್ನಾರು ಗತಿಯಯ್ಯ
ಸೇರಿದೆನು ನಿನ್ನ ಲಿಂಗ ಕಮಲದ
ಭೂರಿ ಸಿದ್ದನೊಳು ಬೆರಸೈ || ವೀರ ||