ಪಲ್ಲವಿ : ವಿಧ ವಿಧ ಬೊಂಬೆಯ ಮಾಡಿದ ಬ್ರಹ್ಮನು
ಅರಿಷಡ್ವರ್ಗವ ಮನದಲಿ ತುಂಬಿ

ಚರಣ :  ಸೂತ್ರಧಾರಿ ಹರಿ ಆಡಿಸಿ ಕುಣಿಸಿದ
ಕೆಟ್ಟುಹೋದ ಬೊಂಬೆಗಳ ಕರ್ಮವು ಅಂದ

ಬಗೆ ಬಗೆ ಕಥೆಗಳ ನಾಟಕ ರಂಗ
ಪಾತ್ರಧಾರಿಗಳ ಪ್ರೇಕ್ಷಕರೆಲ್ಲಾ

ಸುಖದುಃಖಗಳ ಬಣ್ಣದ ತೆರೆಯು
ಬಯಲಾಟವಿದು ಮುಗಿಯದ ಕಥೆಯು

ಕೊನೆಮೊದಲಿಲ್ಲ ಅರ್ಥವಾಗದು
ಸಚ್ಚಿದಾನಂದನೆ ಸಾಕ್ಷಿಭೂತನು